Oppanna.com

ಬೆಂಗಳೂರಿನ “ಹಡಗು”

ಬರದೋರು :   ಬೆಟ್ಟುಕಜೆ ಮಾಣಿ    on   26/06/2012    11 ಒಪ್ಪಂಗೊ

“ಇದೆಂಥರ!? ಹಡಗು ಹೋಯೆಕ್ಕಾರೆ ಸಮುದ್ರ ಬೇಡದ – ಮತ್ತೆ ಬೆಂಗಳೂರಿಲಿ ಹೇಂಗೆ ಹಡಗು?
ಬೆಂಗಳೂರಿಲಿ ಕಡಲೇ ಇಲ್ಲೆ. ಮತ್ತೆ ಹಡಗಿನ ಕಥೆ? ಬೆಂಗಳೂರಿಲಿ ಇಪ್ಪ ಕೆರೆಲಿ ಎಂಥಾರು ಹಡಗೊ ಮತ್ತೊ ಇದ್ದೋ?”
ಎನಗೆ ಹೀಂಗೇ ಸಂಶಯ ಬಪ್ಪಲೆ ಕಾರಣ ಎನ್ನ ಜೋಸ್ತಿ ಕಿಟ್ಟನ ಮಾತು ಕೇಳಿದ ಮೇಲೆ.

ಅವ ಅಪರೂಪಕ್ಕೆ ಪರೀಕ್ಷೆ ಬರವಲೆ ಬಂದದ್ದು ಊರಿಂದ. ಬಂದವ ಪರೀಕ್ಷೆ ಬರವಲೆ ಹೋಗಿ ಬಂದಿಕ್ಕಿ “ಇದಾಗ ಭಾವ ನವಗೆ. ಬದುಕಿ ಬತ್ತೋ ಇಲ್ಯೋ ಹೇಳಿ ಸಂಶಯ ಆತು. ಅಬ್ಬಾ ಅದೆಂಥರ ಹಡಗೋ ಹೇಳಿ ಆತು” ಹೇಳಿ ಹೇಳ್ತ….
ಪಣಂಬೂರಿಲಿ ಹಡಗಿಲಿ ಹತ್ತಿಯಪ್ಪಗಳೂ ಕೂಡ ಹೀಂಗೆ ಆಗ್ತಿಲ್ಲೆಡ..
ಎನಗೆ ಸಂಶಯ ತಡೆಯ ಇದೆಂಥ ಕಥೆ ಹೇಳಿ ಅರಡಿಯ..
ಎಂತದೇ ಆದರೂ ಕಿಟ್ಟ ಹೇಳದ್ದೆ ಇರ. ಅವನ ಸುಮ್ಮನೆ ಬಿಟ್ಟಿಕ್ಕಿತ್ತಿಲ್ಲೆ ನಾವು..
ಇವನ ಈ ಹಡಗು ಎಂಥರ ಹೇಳ್ತದು ನವಗೆ ತಿಳಿವ ಕುತೂಹಲ..
ನಾವು ಪುನ ಒಕ್ಕುಲೆ ಸುರು ಮಾಡಿತ್ತು ಅವನ ಪರೀಕ್ಷೆಯ ಸುದ್ದಿಯ ಎಡಕ್ಕಿಲಿ.. “ಏ ಪುಣ್ಯಾತ್ಮ ನಿನ್ನ ಕಥೆ ಎಂಥರ ಹೇಳು” ಹೇಳಿ..
ಅದ ಕಿಟ್ಟನ ಕಥೆ ಸುರು ಆತು..

ಅವ ಇದ್ದನ್ನೆ ಈ ಬೆಂಗಳೂರಿಲಿ ಪರೀಕ್ಷೆ ಬರವಲೆ ಹೋದ್ದು ನಮ್ಮ ಬಿ.ಎಮ್.ಟಿ.ಸಿ ಬಸ್ಸಿಲಿ ಅಡ..
ನಾನಾ ನಮೂನೆಯ ಬಸ್ಸುಗ ಇದ್ದು ಹೇಳಿ. ಬಣ್ಣಲ್ಲಿಯೂ ನಮೂನೆಗ ಗುಣಲ್ಲಿಯೂ..ಮತ್ತೆ ಎಡೆಲಿ ಬಾಕಿ ಅಪ್ಪ ನಮೂನೆಯೂ ಇದ್ದು..
ಆನುದೆ ದಿನಾ ಆಫೀಸಿಂಗೆ ಹೋಪದು ಇದರಲ್ಲಿಯೇ..ಎಡೆಲಿ ಬಾಕಿ ಅಪ್ಪದರಲ್ಲಿ ಅಲ್ಲ.

ನಿಂಗೊಗೆ ಗೊಂತಿಕ್ಕು ರಾಷ್ಟ್ರಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಹೇಳಿ ಪ್ರಶಸ್ತಿ ಎಲ್ಲ ಸಿಕ್ಕಿದ್ದಪ್ಪ ನಮ್ಮ ಬಿ ಎಮ್ ಟಿ ಸಿ ಯವಕ್ಕೆ.
ಅದುದೆ ಕೇಳ್ತೀರ – ನಮ್ಮ ಅಶೋಕ ಮಂತ್ರಿ ಆದ ಮೇಲೆ ಹೇಳಿ ಪೇಪರಿನವು ದಿನಾ ಹೇಳ್ತವಪ್ಪ..ಎಂತದೇ ಇರಲಿ ನಾವು ನಮ್ಮ ಕಿಟ್ಟನ ಹಡಗಿಗೆ ಪುನ ಬಪ್ಪ.
ಅದ ಕಿಟ್ಟ ಸುರು ಮಾಡಿದ ರೈಲು ಬಿಡ್ಲೆ..ನವಗೆ ಇವಂಗೆ ನೆಂಪು ಮಾಡುದೇ ಆತು ನಿನ್ನ ರೈಲು ನಿಲ್ಸು ಹಡಗು ಬಿಡು ಹೇಳಿ.
ಅಂತೂ ಇಂತು ಸುಮಾರು ರೈಲಿನ ಎಡೆಕ್ಕಿಲಿ ಕಿಟ್ಟ ಹೇಳಿಕ್ಕಿದ ಹಡಗು ಹೇಳಿರೆ ಬಿ ಎಮ್ ಟಿ ಸಿ ಯ ಜಂಟಿ ವಾಹನ ಹೇಳಿ.

ಅದೆಂತಕೆ ಹೇಳಿ ಕೇಳಿರೆ ಅವ ಹೇಳುದು ಹಡಗು ನೀರಿಲಿ ಹಂದಾಡಿದ ಹಾಂಗೆ ಆಗ್ತಡ ಅದರಲ್ಲಿ ಹೋದರೆ, ಅದರಲ್ಲಿಯೂ ಹಿಂದಾಣ ಹೊಡೆಲಿ ಹತ್ತಿರೆ.
ಹೀಂಗೆ ಮತ್ತುದೆ ಕಥೆ ವಿವರವಾಗಿ ಮುಂದುವರುದತ್ತು..ಅದರ ಶಬ್ಧ, ಇವಂಗೆ ಆದ ಹೆದರಿಕೆ ಎಲ್ಲಾ ಇವ ಹೇಳಿದ.
ಎಲ್ಲ ಕಥೆ ಕೇಳಿದ ಮೇಲೆ ‘ಎಲಾ ಹೀಂಗೂ ಇದ್ದೋ ಹೇಳಿ ನವಗೆ ತೋರಿತ್ತು’..ಹಾಂಗೆ ನಮ್ಮ ಕಿಟ್ಟ ಊರಿಂದ ಬಂದಿಕ್ಕಿ ಜಂಟಿ ವಾಹನಕ್ಕೆ ಹಡಗು ಹೇಳಿ ನಾಮಕರಣ ಮಾಡಿಕ್ಕಿ ಅವ ಊರಿಂಗೆ ಹೋಯಿಕ್ಕಿದ.

ಹೀಂಗೆ ಕಿಟ್ಟನ ಹಡಗಿನ ಕಥೆ ನವಗೆ ದಿನಾಗಳುದೆ ಬಸ್ಸಿಲಿ ಹೋಪಗ ನೆಂಪಕ್ಕು.
ಆದರೆ ಎನ್ನ ಗ್ರಚಾರಕ್ಕೆ ಈ ಜಂಟಿ ವಾಹನ ಸಿಕ್ಕಿದ್ದೇ ಇಲ್ಲೆ ಒಂದರಿ ಹತ್ತಿಕ್ಕಿ ನೋಡ್ವ ಹೇಳಿರೆ..

ಅದಿರಲಿ ನಾವು ದಿನಾ ಬಸ್ಸಿಲೇ ಹೋಪದಿದ. ಹಾಂಗೆ ಒಂದು ದಿನ ಕೆಲಸ ಬೇಗ ಮುಗುದತ್ತು.
ಮಧ್ಯಾಹ್ನ ಮೇಲೆ ಬತ್ತೆ ಹೇಳಿದ ಒಂದು ಜನ ಬಪ್ಪಲಾಗ್ತಿಲ್ಲೆ ಹೇಳಿ ಹೇಳಿಯಪ್ಪದ್ದೆ ನಾವು ಕುಶಿಲಿ ಮನೆಗೆ ಉಂಬಲೆ ಹೋಪಲಕ್ಕನ್ನೆ ಹೇಳಿ ಬೇಗ ಬಸ್ಸಿಗೆ ಓಡಿಯೊಂಡು ಬಂದತ್ತು.
ಅದ ಏಸಿ ಬಸ್ಸೇ ಬರೆಕ್ಕಾ ಕೊಶಿಯೆ ರಜ್ಜ ಬೇಗ ಎತ್ತುಗನ್ನೆ..ಹತ್ತಿ ಬನಶಂಕರಿಗೆ ಬಂದತ್ತು..
ಈ ಪಾಪಿ ಹೋದಲ್ಲಿ ಮೊಣಕಾಲುದ್ದ ನೀರು ಹೇಳಿ ಹಿರಿಯರು ಹೇಳುವ ಗಾದೆ ಸರಿಯೇ ಹೇಳಿ ಅನಿಸಿತ್ತು ಅಂದು ಎನಗೆ. ಎಂತಕೆ ಹೇಳಿರೆ – ಬನಶಂಕರಿಂದ ಬಸ್ಸೇ ಇಲ್ಲೆ ಭಾವ!
ನವಗೆ ಕಾಮಕ್ಯದ ಹೊಡೆಗೆ ಬರೆಕ್ಕು.
ಬೆಂಗಳೂರು ರಜ್ಜವೇ ಗೊತ್ತಿಪ್ಪದು ನವಗೂ.
ಒಂದು ಹೊಡೆಂದ ಹಶು ಜೋರಾಗ್ತ ಇದ್ದು. ಕೈಲಿಪ್ಪ ನೀರಿನ ಕುಪ್ಪಿಯೂ ಖಾಲಿ. ಛೆ ಎಂಥ ಗ್ರಚಾರ ಹೇಳುದು..???

ಎಂಥದೇ ಆದರು ಮನೆಲೇ ಉಂಬದು ಹೇಳಿ ನಾವು ತೀರ್ಮಾನ ಮಾಡಿ ಆಯಿದು.
ಇನ್ನು ಬಪ್ಪ ಬಸ್ಸಿಲಿ ಹೋಪದೇ ಹೇಳಿ ಇಪ್ಪಗ ಬಂತದ ನಮ್ಮ ಕಿಟ್ಟನ ಹಡಗು.!
ನವಗೆ ಕೊಶಿಯೆ ಕಷ್ಟಕಾಲಲ್ಲಿ ಬಂದದ್ದು ಇದುವೇ..ಕಿಟ್ಟನ ನೆಂಪು ಮಾಡಿಂಡು ಬಸ್ಸಿಗೆ ಹತ್ತಿತ್ತು..ಹೇಂಗೊ ಕಷ್ಟಲ್ಲಿ ಹೊರಟತ್ತು ನಮ್ಮ ಹಡಗು..
ಕಿಟ್ಟ ಹೇಳಿದ್ದು ನಿಜವೇ ಎಂಥ ಶಬ್ಧ ಅಬ್ಬಾ. ಬರ ಬರ ಹೇಳ್ತು ರಜ್ಜ ತಿರುಗಾಸಿಲಿ ತಿರುಗುವಾಗ.

ಎನಗೆ ಸಂಶಯ ಎಂಥ ಹೇಳಿರೆ ಈ ವಿಮಾನ ಹಡಗು ರೈಲು ಬಿಡ್ಲೆ ಟ್ರೈನಿಂಗ್ ಇದ್ದಡ ಹಾಂಗೆ ಈ ಬಸ್ಸಿನ ಬಿಡ್ಲೆ ವಿಶೇಷ ಟ್ರೈನಿಂಗ್ ಮತ್ತೋ ಇದ್ದೋ ಗೊಡೆಗೆ.
ಡ್ರೈವೆರ್ ಎಷ್ಟು ತಿರುಗಿಸಿರು ತಿರುಗುತ್ತಿಲ್ಲೆ ಶಬ್ಧ ಮಾತ್ರ.
ರಾಮ ರಾಮ !!
ಹೇಂಗೋ ಮುಂದೆ ಬಂತು..ನವಗೆ ಹಶುವಿನ ಎಡೆಕ್ಕಿಲಿ ಹೆದರಿಕೆ ಕೂದತ್ತು..ಹಿಂದೆ ಹತ್ತಿ ಕೂದರೆ ದೋಣಿಲಿ ಕೂದ ಹಾಂಗೆ ಇದ..
ಯಾರು ತುಂಬ ದೂರ ಎಲ್ಲ ಇದರಲ್ಲಿ ಹತ್ತಿ ಹೋಗಡಿ ಹೇಳಿ ಎನ್ನ ಉಚಿತ ಸಲಹೆ..
ಈ ರೈಲಿಲಿ ಬೋಗಿ ಕೂಡಿಸಿದ ಹಾಂಗೆ ಇದನ್ನು ಕೂಡುಸಿ ಅದರ ಒಲಂದಲೆ ಹೋಪ ವ್ಯವಸ್ಥೆ ರೈಲಿಲಿ ನಾವು ಹೋಪ ಹಾಂಗೆ..
ಆದರೆ ರೈಲಿಲಿ ಕೂಡ ಇಷ್ಟು ಶಬ್ಧ ಎಲ್ಲ ಆಗ್ತಿಲ್ಲೆ ಅಪ್ಪ..ಕಿಟ್ಟ ಹೇಳಿದ್ದು ನಿಜವೇ..

ಅಂತು ನಾವು ಬಂದು ಮುಟ್ಟಿತ್ತಪ್ಪ..ನೆಮ್ಮದಿ ಆತು.
ಅಲ್ಲಿಂದ ಮತ್ತೆ ಕಿಟ್ಟ ಮಡಗಿದ ಹೆಸರು ಬಸ್ಸು ಕಾಂಬಗ ನೆಂಪಕ್ಕು.
ಅದೇ ದಿನ ಅವಂಗೆ ನಾವು ಫೋನ್ ಮಾಡಿ ಕಥೆಯೂ ಹೇಳಿದ್ದು.

ಹೀಂಗೆ ಎಂಗ ನೀರಿಲ್ಲದ್ದರು ಬೆಂಗಳೂರು ರೋಡಿಲಿ ಹಡಗು ಬಿಟ್ಟದ್ದು.
ನಿಂಗೊ ಪಣಂಬೂರಿಲಿ ಹತ್ತುಲೆ ಅವಕಾಶ ಸಿಕ್ಕದ್ರೆ ಬೆಂಗಳೂರಿಲಿ ಬಂದಿಪ್ಪಗ ಪ್ರಯತ್ನ ಮಾಡಿ.
ಜಾಗ್ರತೆ ಮಾತ್ರ..!!!

ಸೂ: ಇನ್ನು ಆನು ಹೇಳಿದ್ದೆ ಹೇಳಿ ಹತ್ತಿಕ್ಕಿ ಸುಮ್ಮನೆ ಕೂರಡಿ ಟಿಕೇಟ್ ಮಾಡಿಕ್ಕಿ. ಆತಾ?

11 thoughts on “ಬೆಂಗಳೂರಿನ “ಹಡಗು”

  1. ಲಾಯಿಕಾಯಿದು ಬರದ್ದದು.

  2. ಈಗ ಉದ್ದದ ಬಸ್ಸು ಬೈಂದಡ,ಅಲ್ಲಿ.ಅದರ ಬಗ್ಗೆಯೂ ಲೇಖನ ಬರಲಿ.
    ಲಾಯ್ಕ ಆಯಿದು.

  3. ಬೆಟ್ಟುಕಜೆ ಮಾಣಿ ಉದ್ದದ ಜೆನ ಅಡ.
    ಒಪ್ಪಣ್ಣ ಹೇಳಿದ ನೆಂಪು ನವಗೆ…
    ಹಾಂಗಾಗಿ ಅವ° ಸುರೂವಾಣ ಶುದ್ದಿ ಹೇಳುವಗ ಉದ್ದದ ಬಸ್ಸಿನದ್ದೇ ನೆಂಪು ಮಾಡಿಯೊಂಡ°. 🙂
    ಅಲ್ಲದೋ…
    ಶುದ್ದಿ ಲಾಯಕ ಆಯಿದು, ಆತೋ…

  4. ಏ ಭಾವಾ,
    ಈ ಹಡಗಿಲಿ ಹಿ೦ದೆ ಕೂದರ ಓಡ ಒಚ್ಚಿದ ಹಾ೦ಗಪ್ಪದು,ಮು೦ದೆ ಕೂದರೆ ಎತ್ತೆಕ್ಕಾದಲ್ಯ೦ಗೆ ಬೇಗ ಎತ್ತೊದು ಅಲ್ಲದೊ?

    1. ರಜ್ಜ ಮುಂದೆ ಎತ್ತುಗಸ್ಟೆ ಎದುರು ಕೂದರೆ..

  5. ಪಣಂಬೂರಿನ ಹಡಗಿಲ್ಲಿ ಕೂರದ್ದರೂ, ಬೆಂಗಳೂರಿನ ಹಡಗಿಲ್ಲಿ ಕೋಯಿದೆ. ಮಾಳಿಗೆ ಬಸ್ಸಿಲ್ಲಿ ಕೂಬ ಸಂದರ್ಭ ಸಿಕ್ಕಿದ್ದಿಲ್ಲೆ.
    ಈ ಹಡಗಿಲ್ಲಿ ಹಿಂದಂದ ಮುಂದಂಗೆ ದಾಂತುವಾಗ ರೈಲಿಲ್ಲಿ ಒಂದು ಕಂಪಾರ್ಟ್ಮೆಂಟಿಂದ ಇನ್ನೊಂದಕ್ಕೆ ಹೋದ ಅನುಭವ ಆವ್ತು.
    ಶುದ್ದಿ ಬರದ ಮಾಣಿಗೆ ಧನ್ಯವಾದಂಗೊ

  6. “ಮರುಭೂಮಿಯ ಹಡಗು” ಒಂಟೆ ಆಡ. ಇದೀಗ ಕಿಟ್ಟಣ್ಣನ ಪ್ರಕಾರ “ಬೆಂಗಳೂರಿನ ಹಡಗು” ಬಸ್ಸು ಆತಾನೆ. ಒಂದಾರಿ ಆದರೂ ಹೀಂಗಿಪ್ಪ ಹಡಗಿಲ್ಲಿ ಹೋಯೆಕದ. ಬಸ್ಸಿನ ಮೇಗೆ ಇನ್ನೊಂದು ಬಸ್ಸು ಮಡಗಿದ ಹಾಂಗಿಪ್ಪ ಮಾಳಿಗೆ ಬಸ್ಸುದೆ ಇದ್ದಾನೆ ಬೆಂಗಳೂರಿಲ್ಲಿ . ಕಿಟ್ಟಣ್ಣಂಗೆ ಹಾಂಗಿಪ್ಪದು ಕಂಡಿದಿಲ್ಲಿಯೋ ಹೇಳಿ. ಬೆಟ್ಟುಕಜೆ ಮಾಣಿಯ ಶುದ್ದಿ ಲಾಯಕಾತು.

    1. ಕಿಟ್ಟ ಇನ್ನೊಂದರಿ ಬಂದಪ್ಪಗ ಅದರ ತೋರ್ಸೆಕ್ಕು..

  7. ಎಂತಾರು ನಿಂಗಳ ಹಡಗು… ಹಡಗೇ. ಬೇಕಪ್ಪಾ ಬೇಕು ಸಾವಕಾಶ ಗಂಟಾನುಗಂಟ್ಳೆ ಆ ಟ್ರಾಫಿಕ್ಲಿ ಹೋಪಲೆ. ಹೇಳಿದಾಂಗೆ ಇದಕ್ಕೆ ಸೀಸನ್ ಟಿಕೇಟು ಹೇಳಿ ಏನಾರು ಇದ್ದೋ ಭಾವ!. ಅಲ್ಲ ಊಟಕ್ಷಿಣೆಲಿ ಹೋತಿಕ್ಕಲೆಡಿಗೋ!!

    1. ಏ ಭಾವಾ,
      ಸೀಸನ್ ಟಿಕೇಟಿಲಿಯೋ, ಊಟಕ್ಷಿಣೆಲಿಯೋ ಹೋವುತ್ತರೆ ಹೋತಿಕ್ಕುಲೆಡಿಗು, ಆದರೆ ಜಾಗ್ರತೆ ಬೇಕಾವುತ್ತು. ಜಿರಳೆಗೊ, ಸವಣೆಗೊ ಇರ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×