ಬೆಂಗ್ಳೂರಿಂದ ಪೆರ್ಲದಣ್ಣ…!

ಪೆರ್ಲದಣ್ಣನ ಆರಿಂಗೆ ಗೊಂತಿಲ್ಲೆ ಹೇಳಿ!
ಅಂದೇ ಬೆಂಗಿಳೂರಿಂಗೆ ಹೋಗಿ, ರಜ ಕಂಪ್ಯೂಟರು, ಇಂಟರ್ನೆಟ್ಟು ಎಲ್ಲ ಕಲ್ತು, ಇನ್ನೊಬ್ಬ ಕಲಿಶುವಷ್ಟು ಅರ್ತಮಾಡಿಗೊಂಡು, ಯೇವದೋ ಕಂಪೆನಿಲಿ ಕಂಪ್ಯೂಟರು ಒತ್ತುತ್ತ ಕೆಲಸ ಮಾಡಿಗೊಂಡು ನೆಮ್ಮದಿಲಿ ಇದ್ದವು.
ಊರು ಅಂದೇ ಬಿಟ್ರುದೇ, ನಮ್ಮ ಬೈಲಿನ ಸಂಪರ್ಕ ಬಿಟ್ಟಿದವಿಲ್ಲೆ. ಯೇವತ್ತುದೇ ಸಂಪರ್ಕಲ್ಲಿ ಇರ್ತವು. ತಿಂಗಳಿಂಗೆ ನಾಕು (ಕೆಲವು ಸರ್ತಿ ಐದು) ಸರ್ತಿ ಊರಿಂಗೆ ಬತ್ತವು, ಮದುವೆ ಆದ ಹೊಸತ್ತರಲ್ಲಿ ಮದುಮ್ಮಾಳುಕೂಚಕ್ಕ ಬಂದ ಹಾಂಗೆ.
ಗುಣಾಜೆಮಾಣಿಗೆ ಪ್ರತಿವಾರ ಮಾತಾಡ್ಳೆ ಸಿಕ್ಕುತ್ತವಡ. ಅದುದೇ ಗುಣಾಜೆಮಾಣಿ ಬ್ಯುಸಿ ಆದ ಕಾರಣ ಅಷ್ಟು ಕಮ್ಮಿ ಅಷ್ಟೆ, ಅಲ್ಲದ್ರೆ ದಿನಾಗುಳೂ ಸಿಕ್ಕುತಿತವೋ ಏನೋ!
ಆಚಕರೆ ಮಾಣಿಗೆ ಕಂಪ್ಲೀಟರಿನ ಎಂತಾರು ಸಂಶಯ ಬಂದರೆ ಸೀತ ಅವಕ್ಕೆ ಪೋನು ಮಾಡುದಡ. ಸಂಕೊಳಿಗೆ ಬಾಬಣ್ಣಂಗೆ ಚಿತ್ರಬಿಡುಸಲೆದೇ ಅವ್ವೇ ಕಂಪ್ಲೀಟರು ಹೇಳಿಕೊಟ್ಟದು ಹೇಳಿ ಒಂದು ಶುದ್ದಿ. (ಶುದ್ದಿ ಅಶ್ಟೆ, ಸರಿ ಗೊಂತಿಲ್ಲೆ.!) ಯೇನಂಕೂಡ್ಳಣ್ಣ ತೆಗದ ಪಟಂಗಳ ಕೆಮರಂದ ಕಂಪ್ಯೂಟರಿಂಗೆ ಹಾಕುದರ ಅವ್ವೇ ಹೇಳಿಕೊಟ್ಟದಡ. ಅದೊಂದು ದೊಡ್ಡ ಶುದ್ದಿ ಆಯಿದು ಎಂಗಳ ಬೈಲಿಲಿ. ಅವ ತೆಗದ ಕೆಲವು ಪಟಂಗಳ ಇವ ನೋಡಿದ್ದು, ಆ ಶುದ್ದಿ ಮತ್ತೆ ಊರಿಡೀಕ ಹಬ್ಬಿದ್ದು – ಇತ್ಯಾದಿ. ಒಪ್ಪಣ್ಣಂಗೂ ಕೆಲವೆಲ್ಲ ಹೊಸತ್ತರ ಹೇಳಿ ಕೊಡ್ತವು.

ಬೆಂಗ್ಳೂರಿನ ಕೆಲವು ಶುದ್ದಿಗಳ ನಮ್ಮ ಬೈಲಿಲಿ ಹೇಳೆಕ್ಕು ಪೆರ್ಲದಣ್ಣಾ ಹೇಳಿ ಕೇಳಿಗೊಂಡದಕ್ಕೆ ಸಂತೋಷಲ್ಲಿ ಒಪ್ಪಿ, ಈ ವಾರಂದಲೇ ಸುರು ಮಾಡಿದ್ದವು. ಎಲ್ಲೊರುದೇ ಓದಿಕ್ಕಿ, ಇವಕ್ಕುದೇ ಒಪ್ಪ ಕೊಡಿ..!
~
ಒಪ್ಪಣ್ಣ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಪ್ರೀತಿಯ ಒಪ್ಪಣ್ಣ,

ಆನು ಕ್ಷೇಮ. ನೀನು ಕ್ಷೇಮ ಹೇಳಿ ನಂಬುತ್ತೆ. ನೀನು ಕಳೆದವಾರ ಬರೆದ ಕಾಗದ ನಿನ್ನೆ ಸಿಕ್ಕಿತ್ತು. ತುಳು ಸಮ್ಮೇಳನಕ್ಕೆ ಹೋದ ವಿಶಯ ಎಲ್ಲ ಓದಿ ಆನೂ ಅಲ್ಲಿಗೆ ಬಂದ ಹಾಂಗೇ ಆತು.

ಇಲ್ಲಿ ಇಂದು ಚೂರು ಮಳೆ ಬಂತು. ಆದರೆ ಊರಿಲ್ಲಿ ಮಳೆ ಬಂದಪ್ಪಗ ಅಪ್ಪಷ್ಟು ಖುಷಿ ಮಾತ್ರ ಆಯ್ದಿಲ್ಲೆ. ಅಲ್ಲಿ ಬಪ್ಪ ಮಳೆ ನೋಡಿದವು ಇದರ ಮಳೆ ಹೇಳಿ ಹೇಳ.

ಬೆಂಗಳೂರಿಲ್ಲಿ ಇತ್ತೀಚಿಗೆ ಗಮನಿಸಿದ ಕೆಲವು ವಿಷಯಂಗೊ ನಿನ್ನತ್ತರೆ ಹಂಚಿಕೊಂಬ ಹೇಳಿ ಕಂಡತ್ತು. ಅದಕ್ಕೆ ಈ ಕಾಗದ.

“ಈ ಜಗತ್ತಿಲ್ಲಿ ಒಟ್ಟು 10 ರೀತಿಯ ಜನ ಇದ್ದವಡ. ಮೊದಲಾಣ ಗುಂಪು ಬೈನರಿ(ದ್ವಿಮಾನ) ಭಾಷೆ ಅರ್ಥ ಅಪ್ಪವು, ಇನ್ನೊಂದು ಗುಂಪು ಬೈನರಿ ಅರ್ಥ ಆಗದ್ದವು.” ಇದೊಂದು ಇತ್ತೀಚಗಣ ಆಡುಮಾತು.

ಮೊದಲಾಣ ಗೆರೆ ಓದಿದ ಕೂಡಲೇ ಅರಾರು ಒಳಿದ 8 ರೀತಿಯವು ಆರೆಲ್ಲ ಹೇಳಿ ಕೇಳಿದರೆ, ಅವು ಎರಡನೇ ಗುಂಪಿಂಗೆ ಸೇರಿದ್ದವು ಹೇಳಿ ಲೆಕ್ಕ. ಅದೆಂತಕೆ ಗೊಂತಾತ? ಬೈನರಿ ಭಾಷೆಲ್ಲಿ 10 ಹೇಳಿ ಬರೆದರೆ ಎರಡು ಹೇಳಿ ಅರ್ಥ. ಆನು ನಿನ್ನತ್ತರೆ ಹೇಳೆಕ್ಕು ಹಳಿ ಹೆರಟದು ಈ ಎರಡು ಗುಂಪುಗಳ ಮಧ್ಯೆ ಇಪ್ಪ ಅಂತರದ ಬಗ್ಗೆ. ಇದಕ್ಕೆ ಡಿಜಿಟಲ್ ಡಿವೈಡ್ ಹೇಳಿ ಹೇಳ್ತವು.

ಬೆಳ್ಳಾರೆ ಅಪ್ಪಚ್ಚಿ ಈಗ ಮೊಬೈಲು ತೆಗೆದು ಒಂದು ವರ್ಷ ಆತಲ್ಲದ? ಲೇಂಡು ಲೈನಿಂದಲೂ ಈಗ ಮೊಬೈಲು ಚೀಪಾವುತ್ತಡ ಹೇಳಿ ಅವು ಮೊಬೈಲು ತೆಗದ್ದು. ಒಂದು ವರ್ಷ ಆದರುದೇ ಆನು ಅವರ ಕಾಂಬದೇ ಅಪರೂಪ ಅಲ್ಲದ? ಎನಗೆ ಅವರ ನಂಬರು ಸಿಕ್ಕಿತ್ತಿದ್ದಿಲ್ಲೆ. ಮೊನ್ನೆ ಊರಿಂಗೆ ಬಂದಿಪ್ಪಗ ಸಿಕ್ಕಿದವು. “ಆನೀಗ ಮೊಬೈಲು ತಗದ್ದೆ, ನಂಬರು ತೆಕ್ಕೊ” ಹೇಳಿ ಕೊಟ್ಟವು. ಎನ್ನ ನಂಬರನ್ನೂ ಸೇವ್ ಮಾಡಿ ಹೇಳಿ ಆನುದೇ ಒಂದು ಮಿಸ್-ಕಾಲು ಕೊಟ್ಟೆ. “ಇದಾ ಮಗಾ, ಅಣ್ಣನ ನಂಬರು ಸ್ಟೋರು ಮಾಡು” ಹೇಳಿ ಮಗನತ್ತರೆ ಮೊಬೈಲು ಕೊಟ್ಟವು. “ಎನಗೆ ಅದೆಲ್ಲ ಗೊಂತಾವುತ್ತಿಲ್ಲೆ… ಫೋನ್ ಬಂದರೆ ಮಾತಾಡುಲೆ ಮಾತ್ರ ಅರಡಿವದು.” ಹೇಳುದು ಅವರ ಸಮಜಾಯಶಿ. ಏಳನೇ ಕ್ಲಾಸಿನ ಅವರ ಮಗಂಗೆ ಗೊಂತಾವುತ್ತು, ಆದರೆ ಡಿಗ್ರಿ ಓದಿದವಕ್ಕೆ ಏಕೆ ಕಲಿವಲೆಡಿತ್ತಿಲ್ಲೆ ಹೇಳಿ ಎನಗೆ ಆಶ್ಚರ್ಯ ಅಪ್ಪದು. ನಿಂಗಳ ಮೊಬೈಲಿಲ್ಲಿ ಬ್ಲೂ ಟೂತ್ ಇದ್ದ ಹೇಳಿ ಹೇಳಿದರುದೇ, ಇದ್ದ ಮಗ? ಹೇಳಿ ಅವು ಮಗನತ್ತರೆಂಗೇ ತಿರುಗುತ್ತವು.

ಪ್ರಾಯ ಇದಕ್ಕೆ ಕಾರಣವಂತೂ ಅಲ್ಲಲೇ ಅಲ್ಲ. ಏಕೆ ಹೇಳಿರೆ, ತುಂಬಾ ಏಜಾದ ಮತ್ತುದೇ ಮೊಬೈಲು, ಕಂಪ್ಯೂಟರ್ ಉಪಯೋಗಿಸುತ್ತವು ನಮ್ಮಲ್ಲಿ ತುಂಬಾ ಜೆನ ಇದ್ದವು.

ಇತ್ತೀಚೆಂಗೆ ಕಣಜ ಹೇಳ್ತ ವಿಕಿಪೀಡಿಯದ ಹಾಂಗಿಪ್ಪ (ಅವು ಹೇಳಿದ್ದು, ನಿಜವಾಗಿ ಹಾಂಗಿಲ್ಲೆ) ಒಂದು ತಾಣವ ಶುರುಮಾಡಿದ ಸುದ್ದಿಯೊಟ್ಟಿಂಗೆ ಐದು ವರ್ಷಂದ ನಡೆತ್ತಾ ಇಪ್ಪ ಕನ್ನಡ ವಿಕಿಪೀಡಿಯಾದ ಚಿತ್ರ ಹಾಕಿದ್ದು ನೋಡಿ: http://www.deccanherald.com/content/39640/kannada-wikipaedia-launched.html

ಇಂಟರ್ನೆಟ್ಟಿನ ಬಗ್ಗೆ ಚೂರಾದರೂ ಗೊಂತಿಪ್ಪವಕ್ಕೆ ಆರಾದರುದೇ ಈ ಸುದ್ದಿ ಗೊಂತಾದರೆ ಹೊಸ ಸೈಟು ಏವದು ಹೇಳಿ ಹುಡ್ಕುಗು.
ಕಾರ್ಯಕ್ರಮಲ್ಲಿ ಹೇಳಿದ ಎಡ್ರಸ್ಸಿನ ನೆನಪು ಮಡುಗುಗು ಅಥವಾ ಒಂದುವೇಳೆ ನೆನಪಿಲ್ಲದ್ದರೆ ಅದಕ್ಕೇ ಹೇಳಿಯೇ ಇಪ್ಪ ಗೂಗಲ್ಲ್ ಮತ್ತೆ ಸುಮಾರು ಸೇವೆಗಳ ಬಳಸುಲಕ್ಕು.
ಇಂಟರ್ನೆಟ್ಟಿಂಗೆ ಸಂಬಂಧಿಸಿದ ಸುದ್ದಿ ಬರೆವಲೆ ಕೂಪವಕ್ಕೂ ಅಷ್ಟೂ ಗೆಂತಿಲ್ಲದೇ ಇಪ್ಪದು ವಿಶೇಷ ಹೇಳಿ ಕಾಣ್ತಿಲ್ಲೆಯ?

ಕಂಪ್ಯೂಟರಿಲ್ಲಿ ಚಿತ್ರ ಬರೆವ ಭಾವಯ್ಯ° ಇದ್ದವಲ್ದ, ದೊಡ್ಡ ರಾಜಕಾರಣಿಗಳದ್ದೆಲ್ಲ ಕಂಪ್ಯೂಟರ್ ಕೆಲಸ ಅವೇ ಮಾಡುದಡ.
ಮೊನ್ನೆ ಏವದೋ ರಾಜಕಾರಣಿಗೆ ಒಂದು ಮ್ಯಾಪು ತಿದ್ದುಲೆ ಇತ್ತಡ. ಪ್ರತಿ ಸರ್ತಿ ತಿದ್ದಿದ ಮತ್ತುದೇ ಅದರ ತೋರ್ಸಿ ಸರಿ ಆಯ್ದಾ ಕೇಳುಲೆ ಬಣ್ಣದ ಪ್ರಿಂಟು ತೆಗೆದು ತೋರಿಸೆಕ್ಕಡ.
ಎಂತಕೆ ಗೊಂತಿದ್ದಾ? ಅವರ ಹತ್ತರೆ ಲೇಪುಟಾಪು ಕೊಂಡೋದರೆ, ಅದೆಲ್ಲಾ ಎನಗೆ ಅರ್ಥ ಆವ್ತಿಲ್ಲೆ. ಪ್ರಿಂಟು ತೆಗೆದು ತಾ ಹೇಳ್ತವಡ. ಲೇಪುಟೋಪಿಲ್ಲಿ ಚಿತ್ರ ತೋರ್ಸಿಪ್ಪಗ ನೋಡ್ಲೆ ಎಂತ ಅರ್ಥ ಆಯೆಕ್ಕು ಹೇಳಿ ಎನಗೆ ಗೊಂತಾವ್ತಿಲ್ಲೆ ಹೇಳಿ ಹೇಳ್ತಿತ್ತಿದ್ದ°.

ಆನೆಯ ಚಿತ್ರ ಬೇಕಾದವ° elephant ಸ್ಪೆಲ್ಲಿಂಗು ಗೊಂತಿಲ್ಲೆ ಹೇಳಿ forest ಹುಡುಕಿದ್ದು, ಬಿಜೆಪಿ ವೆಬ್ಸೈಟಿಲ್ಲಿ ’ಕನ್ನಡ ಇಲ್ಲೆ’ ಹೇಳಿ ಬರೆದವು  – “ಕನ್ನಡಲ್ಲಿದೇ ಇದ್ದಡ ಹೇಳುದರ ಬಿಜೆಪಿಯವು ತಿಳಿಸಿದವು” ಹೇಳಿ ಮರು ದಿನ ಬರೆದ್ದು ಹೀಂಗೆ ಇನ್ನೂ ಕೆಲವು ವಿಷಯ ಬರೆವಲಿದ್ದು. ಬರೆಯೆಕ್ಕಷ್ಟೆ.

ಆನು ಕನ್ನಡ ಮೀಡಿಯಂ/ ಎನಗೆ ಕಂಪ್ಯೂಟರ್ ಅರ್ಥ ಆಗ/ ಕಂಪ್ಯೂಟರ್ ಗೊಂತಾಯೆಕ್ಕಾರೆ ಕೋರ್ಸ್ ಮಾಡೆಕ್ಕು.. ಹೀಂಗೆ ತುಂಬಾ ಜನರ ಮನಸ್ಸಿಲ್ಲಿಪ್ಪ ಭಯ ಈ ಕಂಪ್ಯೂಟರ್ ಅನಕ್ಷರತೆಯ ಹಿಂದೆ ಕೆಲಸ ಮಾಡುತ್ತು ಹೇಳಿ ಎನ್ನ ಅಭಿಪ್ರಾಯ. ಕಂಪ್ಯೂಟರ್ ಉಪಯೋಗಿಸುಲೆ ಹೆರಟರೆ ಎಲ್ಲಾರೂ ವೈರಸ್ ಬಂದು ಕಂಪ್ಯೂಟರ್ ಹಾಳಾದರೆ ಹೇಳ್ತ ಹೆದರಿಕೆ ತುಂಬಾ ಜನಕ್ಕೆ ಇದ್ದು.

ಸಧ್ಯಕ್ಕೆ ಅಷ್ಟೆ. ಮತ್ತೆಂತ ನೆನಪಾವುತ್ತಿಲ್ಲೆ. ಕಾಂಬ ಆಗದೋ?

ಪೆರ್ಲದಣ್ಣ,

ಬೆಂಗಳೂರು

ಪೆರ್ಲದಣ್ಣ

   

You may also like...

1 Response

  1. sadashiva says:

    good

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *