ಬೆರಳುಗೊ(ಮುಂದುವರುದ್ದು)

July 11, 2012 ರ 10:10 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಳಿಕೆ ಸುಬ್ಬಣ್ಣಮಾವ ಕೈಬೆರಳುಗಳ ಬಗ್ಗೆ ಒಂದು ಕಂತಿನ ಶುದ್ದಿ ಹೇಳಿತ್ತಿದ್ದವು.
(ಸಂಕೊಲೆ: http://oppanna.com/lekhana/kai-beralugo)
ಅದೇ ಕೈ ಬೆರಳುಗಳ ಬಗ್ಗೆ, ಮುಂದುವರುದ ಭಾಗ ಇಲ್ಲಿದ್ದು.

ಕೈಬೆರಳುಗೊ (ಕಂತು 2)
ಮನುಷ್ಯಂಗೆ ಹೆಚ್ಚು ಉಪಯೋಗ ಅಪ್ಪ ಕೈ ಬೆರಳುಗಳ ಬಗ್ಗೆ ಎನಗೆ ಗೊಂತಿಪ್ಪ ಇನ್ನೂ ಕೆಲವು ವಿಶಯಂಗಳ ಹೇಳಿದರೆ ಬೇಜಾರಾಗ ಹೇಳಿ ಗ್ರೇಶಿಗೊಳ್ಳುತ್ತೆ.

ನಮ್ಮ ಪೂರ್ವಜರು ಅಪ್ಪ ಮಂಗಂಗೊಕ್ಕೆಕೈಲ್ಲಿ ಬೆರಳುಗೊ ಇದ್ದರೂ ನಮ್ಮ ಹಾಂಗೆ ಉಪಯೋಗ ಇರುತ್ತಿಲ್ಲೆ.
ಕೆಲವು ಕೈಲ್ಲಿಯೋ, ಕಾಲಿಲ್ಲಿಯೋ ಆರಾರು ಬೆರಳುಗಳೂ ಇಪ್ಪದಿದ್ದು. ಆರು ಬೆರಳುಗೊ ಒಳ್ಳೆ ಲಕ್ಷಣಡೊ.
ಚಂದ್ರಹಾಸಂಗೆ ಕಾಲ್ಲಿ ಆರು ಬೆರಳು ಇದ್ದತ್ತಡೊ. ಸಾಲದ್ದಕ್ಕೆ ಮೂಲಾ ನಕ್ಷತ್ರದ ಕೆಟ್ಟ ಅಂಶಲ್ಲಿ ಅವ ಹುಟ್ಟಿದ್ದಾದರೂ ರಾಜನೇ ಆಯಿದಡಾ. ಬೆರಳಿನ ಕಾರಣವೋ ಗೊಂತಿಲ್ಲೆ.

ಆದರೆ ಆರನೇ ಬೆರಳು ಉಪಯೋಗಕ್ಕೆ ಸಿಕ್ಕುತ್ತಿಲ್ಲೆ. ಲೆಕ್ಕಕ್ಕೆ ಮಾಂತ್ರ ಆರು ಬೆರಳು.
ನಮ್ಮಲ್ಲಿ ಕೆಲವು ಜನರ ಬಗ್ಗೆ ನಾವು ಹೇಳಿಗೊಂಬದು ಇದ್ದು ಅಲ್ಲದೋ “ಅವ ಲೆಕ್ಕಕ್ಕೆ ಮಾಂತ್ರ ಹೇಳಿ. ಆಟಲ್ಲಿ ಹೇಳುವ ಕ್ರಮ ಇದ್ದು ಲೆಕ್ಕ ಭರ್ತಿಗಾದರೂ ಬಂದು ಸೇರು” ಹೇಳಿ.
ಒಳುದ ಬೆರಳುಗೊಕ್ಕೂ ಆರನೆಯ ಬೆರಳಿಂಗೂ ಸಂಪರ್ಕವೇ ಇಲ್ಲೆ. ಹೆಬ್ಬಟೆ ಬೆರಳಿನ ಬುಡಂದ ಹೆರಟರೆಸಣ್ಣಕ್ಕೆ ಬೆರಳಿನ ಹಾಂಗೆ ಇಕ್ಕು.
ಏಳು ಬೆರಳಿನೋವೂ ಇದ್ದವಡೊ. ಬೆರಳಿನ ಲೆಕ್ಕಂದ ಹೆಚ್ಚು ಬೆರಳುಗಳ ಉಪಯೋಗದ ಬಗ್ಗೆ ತಿಳಿಯೆಕ್ಕಲ್ಲದೋ?

ಪ್ರತಿಯೊಂದು ಬೆರಳಿಂಗೂ  ಒಂದೊಂದು ಸಂಜ್ಞೆಗೊ ಇರುತ್ತು. ಕೈ ಭಾಷೆ ಹೇಳುತ್ತವನ್ನೆ!
ನಾವು ಕೆಲವು ಜನ ಒಟ್ಟಿಂಗೆ ಇಪ್ಪಗ ನಮಗೆ ಬೇಕಾದೋರಿಂಗೆ ಮಾತ್ರ ಅರ್ಥ ಅಪ್ಪ ಹಾಂಗೆ ಕೈ ಭಾಷೆ, ಕಣ್ಣು ಭಾಷೆ ಮಾಡುವದಿದ್ದಲ್ಲದೋ?
ಆದರೆ ಈ ಭಾಷೆಗೂ ಒಂದು ಅರ್ಥ ಇರುತ್ತು. ಹಾಂಗೆ ಕಿಂಕಿಣಿ ಬೆರಳಿನ ಮಾಂತ್ರ ಸರ್ತ ಮಾಡಿ ಒಳುದ್ದರ ಮಡುಸಿಗೊಂಡಿದ್ದರೆ, ನೆಂಪಾತನ್ನೆ!
ಮಾಷ್ಟ್ರಕ್ಕಳ ಮಂಕಾಡುಸಿ ಹೆರ ಹೋಯೆಕ್ಕಾರೆ ಮಕ್ಕೊಗಿಪ್ಪ ಒಂದು ಉಪಾಯವೇ….ಸಾರ್‍ ಒಂದಕ್ಕೆ! ಹೇಂಗಿಪ್ಪ ಸ್ಟ್ರಿಕ್ಟ್ ಮಾಷ್ಟ್ರನೂ ಸರಿ ಹೋಗು ಹೇಳೆಡದೋ?
ಕಳುಸದ್ದರೆ ಮತ್ತೆ ಮಾಷ್ಟ್ರನ ಕೊರಳಿಂಗೇ ಸುತ್ತುಗು ಕ್ಲೀನ್ ಮಾಡ್ತ ಕೆಲಸ.

ಒಟ್ಟಿಂಗೆ ಪವಿತ್ರ ಬೆರಳಿನ ಸೇರುಸಿ ಹಿಡುದರೆ, ಕೇಳೆಡ ಅವಂಗೆ ಹೊಟ್ಟೆ ಸರಿ ಮಾಡೆಕ್ಕು ಹೇಳಿಯೇ ಅರ್ಥ ಅಲ್ಲದೋ?

ಕೈಮುಷ್ಟಿ ಹಿಡುದು ಹೆಬ್ಬೆರಳಿನ ಮಾಂತ್ರ ನೆಗ್ಗಿ ಹಿಡಿದರೆ…ಒಂದರ್ಥ.
ಹೆಬ್ಬೆರಳಿನ  ಅಲ್ಲಿಗೇ ಆಡುಸಿಗೊಂಡು ಇಡೀ ಮುಷ್ಟಿಯ ಆಡುಸಿಗೊಡರೆ ತನ್ನನ್ನೂ ಎಂತ ಮಾಡುಲೆಡಿಯ ಹೇಳಿಯೂ ಆವುತ್ತು. ಮತ್ತೆ ಕೈಮುಷ್ಟಿ ಹಿಡುಕ್ಕೊಂಡು, ಎದಿರೆ ಇದ್ದೋರತ್ರೆ  ಎಂತ, ಏನು? ನೀನು ಆರು ಹಿಂಗೆಲ್ಲ ಅರ್ಥ ಮಾಡ್ಯೊಂಬಲಕ್ಕು.

ಕೈ ಮೊಗಚ್ಚಿ ಹಿಡುಕ್ಕೊಂಡು ಎಲ್ಲ ಬೆರಳುಗಳ ಸಹಾಯಂದ ಅಥವಾ ಎದುರಿಪ್ಪೋನ ತಾತ್ಸಾರ ಭಾವನೆಂದ ಕೋಲು ಬೆರಳು  ಮಾತ್ರ  ಉಪಯೋಗುಸಿ ಇಲ್ಲಿಂದ ಎದ್ದು ಹೋಗು ಹೇಳುತ್ತವನ್ನೆ.
ಎರಡು ಕೈದೂ ಕೋಲು ಬೆರಲುಗಳ ಜೋಡುಸ್ಯೋಂಡು ಹೇಳಿರೆ, ಅವು ಇಬ್ರೂ ರಾಝಿಲ್ಲಿದ್ದವು ಹೇಳಿಯೋ, ಒಟ್ಟಾಯೆಕ್ಕು ಹೇಳಿಯೋ,ಅವರ ಇಬ್ರನ್ನೂ ಒಟ್ಟು ಮಾಡಿ ಹೇಳಿಯೋ ಅರ್ಥ ಬತ್ತು.

ನೀನು ಏಳು, ನೀನು ಕೂರು ಹೇಳುವುದಕ್ಕೆ ಕೋಲು ಬೆರಳನ್ನೇ ಉಪಯೋಗುಸುತ್ತವು.
ಇಲ್ಲಿಂದ ಎದ್ದು ಹೋಗು ಹೇಳುವದೂ ಆ ಕೆಲಸ ಮಾಡೆಡ ಹೇಳುವದಕ್ಕೂ ಕೋಲು ಬೆರಳೇ ಬೇಕು. ಕೋಲು ಬೆರಳಿನ ಕುತ್ತ ಮಾಡ್ಯೊಂಡು ಕೈ ತಿರುಗಿಸ್ಯೊಂಡು ಮತ್ತೆ ಮುಷ್ಟಿ ಹಿಡುದು ಆಡುಸಿದರೆ ಈ ಊರಿಂಗೆಲ್ಲ ಆರು ಯಜಮಾನ, ಈ ಜಾಗ್ಗೆಲ್ಲ ಆರು ಯಜಮಾನ ಹೇಳಿ ಎಲ್ಲ ಅರ್ಥ ಬತ್ತನ್ನೆ?

ಮತ್ತೆ “ಕಿಂಕಿಣಿ ಬೆರಳು ಬೀಗಿದರೆ ಎಷ್ಟು ಬೀಗ್ಗು” ಹೇಳುವ ಮಾತು ಎದುರಾಣೋನ ಹಿಯಾಳುಸಿ ಹೇಳುವ ಮಾತು.

ಕೋಲು ಬೆರಳುಗಳ ಕೊಳಿಕ್ಕೆ ಹಾಕಿದ ಹಾಂಗೆ ಮಾಡಿದರೆ ಅವು ಇಬ್ರೂ ಕೋಪ, ವಿರೋಧಿಗೋ ಹೇಳಿ ಅರ್ಥ.
ಅವರ ಒಂದು ಮಾಡೆಕ್ಕು ಹೇಳುಲೆ ಪುನಃಕೋಲು ಬೆರಳುಗಳ ಜೋಡುಸಿ ಹೇಳುವದೆಲ್ಲ ಚಲಾವಣೆಲ್ಲಿಪ್ಪ ಕೋಡ್ ಸಂಜ್ಞೆಗೊ.

ನಡು ಬೆರಳಿಂಗೆ ಬಂದರೆ ಉದ್ದವೂ ತೋರವುದೆ ಇದ್ದಲ್ಲದೋ? ಅವು ಇಬ್ರೂ ಒಂದೇ ಹೇಳೆಕ್ಕಾರೂ, ಇಬ್ರು ಇದ್ದವು ಹೇಳುವಗಳೂ ಕೋಲುಬೆರಳು ನಡುಬೆರಳು ಸೇರುಸುತ್ತವು.
ಎನಗೆ ಎರಡು ಬೇಕು ಹೇಳುವಗಳೂ ಇದೆರಡು ಬೆರಳು ಜೋಡುಸಿ ಹೇಳುತ್ತು.

ಅದರ ಕತ್ತರುಸಿ ಹಾಕು ಹೇಳುವದು ಆ ಎರಡು ಬೆರಳುಗಳನ್ನೇ ಹತ್ತರೆ ದೂರ ಮಾಡ್ಯೊಂಡು.
ಇನ್ನು ಕೋಲು ಬೆರಳಿಂಗೆ ಮತ್ತೆ ನಡು ಬೆರಳಿಂಗೆ ತನ್ನ ಶ್ರೀಮಂತಿಕೆ ತೋರುಸಿಗೊಂಬಲೆ ಉಂಗಿಲು ಹಾಕಿಗೊಂಡು ಅದು ಎಲ್ಲೋರಿಂಗೂ ಕಾಂಬ ಹಾಂಗೆ ತೋರುಸ್ಯೊಂಡಿರುತ್ತವು.

ಉಂಗುರಬೆರಳು ಹೇಳುವದು ಪವಿತ್ರ ಬೆರಳು ಆದರೂ ನಾಲ್ಕು ಬೆರಂಗೂ ಉಂಗುರ ಹಾಕಿಗೊಂಡೋರು ಇದ್ದವನ್ನೆ.
ಎಂತಾರು ಕಾರ್ಯಕ್ರಮಕ್ಕೆ ಆರು ಮುಖ್ಯಸ್ಥ ಕೇಳುವಗ ಕೇಳುತ್ತವನ್ನೆ ಇದಕ್ಕೆ ಆರ ಕೈಗೆ ಉಂಗಿಲು ಹಾಕಿದ್ದು ಹೇಳಿ.

ಪಂಚ ಪಾಂಡವರಲ್ಲಿ, ಧರ್ಮರಾಯ ಧರ್ಮ ಧರ್ಮ ಹೇಳ್ಯೊಂಡು ಮುಂದೆ ಹೋಪೋನು.
ಅವನ ಬೆಂಬಲಕ್ಕೆ ಒಳುದ ನಾಲ್ಕು ಜನ ಅಲ್ಲದೋ? ಕೈಲಿ ಆರಿಂಗಾದರೂ ಬಡಿವಗ ಈ ನಾಲ್ಕು ಬೆರಳು ಮಾಂತ್ರ ನೆಗವದಡೋ.
ಹೆಬ್ಬೆರಳು ಒಟ್ಟಿಂಗೆ ಇದ್ದು ಹೇಳಿ ಅಲ್ಲದ್ದೆ ಅದಕ್ಕೆ ಕೆಲಸ ಇಲ್ಲೆ. ಅದರೆ  ಹೇಳುವದು ಮಾಂತ್ರ ಐದು ಬೆರಳೂ ನೆಗದ್ದು ಹೇಳಿ.ಹಾಂಗೆ  ಯುದ್ಧವ ಎಲ್ಲೋರು ಸೇರಿ ಗೆದ್ದವು ಹೇಳ್ತವನ್ನೆ!
ಈ ಐದು ಬೆರಳುಗಳನ್ನೂ ಜೋಡುಸ್ಯೊಂಡು ನೋಡುತ್ತವು ಕೆಲವು ಜನ. ಎಂತಕೆ? ಜೋಡುಸುವಗ ಎಡೆ ಕಾಂಬಲಾಗಡೊ. ಎಡೆಲ್ಲಿ ಜಾಗ ಇದ್ದರೆ ಅವನ ಕೈ ಯಾವಾಗಲೂ ಖಾಲಿಯಾಗಿಕ್ಕು. ಅವನ ಕೈಲ್ಲಿ ಪೈಸೆ ನಿಲ್ಲ ಹೇಳಿ ಹೇಳುತ್ತವು. ಇದು ಸಾಮುದ್ರಿಕದೋರ ಮಾತು.

ಭೀಮ ಜರಾಸಂಧನೊಟ್ಟಿಂಗೆ ಯುದ್ಧ ಮಾಡುವಗ ಆರೂ ಸೋಲುತ್ತವಿಲ್ಲೆ, ಆರೂ ಗೆದ್ದದೂ ಇಲ್ಲೆ.
ಭೀಮ ಜರಾಸಂಧನ ಶರೀರವ ಸಿಗುದು ಇಡುಕ್ಕಿದರೂ ಅದು ಮತ್ತೆ ಜೋಡ್ಯೊಂಡಿತ್ತಡೊ. ಭೀಮಂಗೆ ಬಚ್ಚಿತ್ತು. ಎಂತ ಮಾಡುವದು ಹೇಳಿ ತೋರದ್ದೆ ಅಲ್ಲಿ ಇಲ್ಲಿ ನೋಡ್ಯೊಂಡಿಪ್ಪದಿ ಕೃಷ್ಣಂಗೆ ಗೊಂತಾತು. ಅವ ಎಲೆ ತಿಂದೊಂಡಿತ್ತಿದ್ದಡೋ. ಆ ಎಲೆಯ ಹರುದು ಕಡೆ ಕೊಡಿ ತಿರುಗುಸಿ ಇಡುಕ್ಕಿದಡೊ!

ಭೀಮಂಗೆ ಗೊಂತಾತು ಕೃಷ್ಣನ ಸೂಚನೆ. ಕೂಡ್ಳೇ ಜರಾಸಂಧನ ಶರೀರವ ಸಿಗುದು ತಲೆ ಕಾಲು ತಿರುಗಿಸಿ ಇಡುಕ್ಕಿದಡೋ. ಮತ್ತೆ ಅವನ ದೇಹ ಜೋಡದ್ದೆ ಜರಾಸಂಧ ಸತ್ತೇ ಹೋದಡೊ.

ಇನ್ನು ಮೃದಂಗ,ಮದ್ದಳೆ ಬಡಿವಗ ಕೈಬೆರಳುಗಳ ಉಪಯೋಗವೇ ಬೇಕಾದ್ದಲ್ಲದೋ?
ಪೆಟ್ಟಿನ ಉರುಳಿಕೆ ಬೆರಳುಗಳ ಚಮತ್ಕಾರ!
ಬೇರೆ ಬೇರೆ ತಾಳಂಗೊಕ್ಕೆ ಬೇರೆ ಬೇರೆ ಬೆರಳುಗಳ ಉಪಯೋಗ ಅವುತ್ತು.
ಚೆಂಡೆ ಬಾರುಸುವಗಳೂ ಕೋಲು ಹಿಡಿಯೆಕ್ಕಾರೆ ಬೆರಳುಗಳ ಸಹಾಯ ಬೇಕು.
ಕೈಯ ಮೇಲಾಣ ಭಾಗವ ಹನುಸದ್ದೆ ಚೆಂಡೆ ಬಡಿತ್ತವನ್ನೆ. ತಾಳವಾದ್ಯಂಗಳ ಹಾಂಗೆ ಫಿಡ್ಳು, ಕೊಳಲು,ಹಾರ್ಮೋನಿಯಂ, ಗಂಜ್ರ, ನಾಗಸ್ವರ ಯಾವದೇ ಅಗಲಿ ಬೆರಳುಗಳ ಸಾಮರ್ಥ್ಯವೇ ಮುಖ್ಯ ಅಲ್ಲದೋ?
ಕೊಳಲಿಂಗೆ ಎರಡು ಕೈದೂ ಆರು ಬೆರಳಿನ ಸಹಾಯ ಬೇಕು.

ಕೈಯ ಮತ್ತೆ ಕಾಲಿನ ಬೆರಳುಗಳ ಕೊಡಿಲ್ಲಿ ಶಂಖ, ಚಕ್ರದ ಗುರುತುಗೊ ಇರುತ್ತು ಹೇಳುತ್ತವು.
ಹತ್ತು  ಬೆರಳುಗಲಲ್ಲಿಯೂ ಶಂಖವೇ ಇದ್ದದಾದರೆ ಅವ ಸನ್ಯಾಸಿ ಹೇಳುತ್ತವು  ಸಾಮುದ್ರಿಕ ಬಲ್ಲೋರು.
ಎರಡು ಚಕ್ರ ಆದರೆ ಅವ ಧನವಲ್ಲಭ ಅಡೊ.
ನಾಲ್ಕು ಚಕ್ರ ಇದ್ದರೆ ಮಹಾ ಪಂಡಿತ ಹೇಳಿ ಹೇಳುತ್ತವು ನಿಜವೊ ಲೊಟ್ಟೆಯೊ ಗೊಂತಿಲ್ಲೆ.

ಟೈಪ್ ಮಾಡೆಕ್ಕಾರೆ, ಕಂಪ್ಯೂಟರಿಲ್ಲಿ ಕೆಲಸ ಮಾಡೆಕ್ಕಾರೆ ಬೆತ್ರಳುಗಳ ಸಹಾಯ ಎಷ್ಟಿದ್ದು ಹೇಳುವದರ ಆನು ಹೇಳಿದರೆ ಸರಿ ಆವುತ್ತಿಲ್ಲೆ.
ಅದಲ್ಲಿ ಪಳಗಿದೋರು ಹೇಳೆಕ್ಕು.ಮತ್ತೆ ರೆಕೋರ್ಡ್ ರಿಜಿಸ್ತ್ರಿ ಆಯೆಕ್ಕಾರೆ ಚುಂಡೊಪ್ಪು ಬೇಕನ್ನೆ!.

ಅಮೇರಿಕಲ್ಲಿ ಎಲ್ಲ ಗ್ರೀನ್ ಕಾರ್ಡಿನ ಕೇಳುವಗ ಫಿಂಗರ್ ಪ್ರಿಂಟ್ ನೋಡುತ್ತವು. ನಮ್ಮಲ್ಲಿಯೂ ಬೇಕು.
ಮತ್ತೆ ಹೆಬ್ಬೆರಳಿನ ನಿಜವಾದ ಪ್ರಯೋಜನ ತಿಳುದಿದ್ದ ದ್ರೋಣ ಏಕಲವ್ಯ ಬೆರಳು ಕೇಳಿದ್ದು ಗೊಂತಿದ್ದನ್ನೆ.
ಅಂತೂ ಬೆರಳಿನ ಸಾಮರ್ಥ್ಯ ಕುಮಾರವ್ಯಾಸ ತಿಳುದೇ ಭಾರತ ಓದುವೋರಿಂಗೆ ಗೊಂತಪ್ಪ ಹಾಂಗೆ ಒಂದು ಸನ್ನಿವೇಶ ಹೇಳಿದ್ದ.

ಬಕಾಸುರಂಗೆ ತಿಂಬಲೆ ಹೇಳಿ ಗಾಡಿಲ್ಲಿ ಅನ್ನ ಕೋಂಡೋದ್ದು ಭೀಮ ಅಲ್ಲದೋ? ತುಂಬಾ ದಿನಂದ ಅರೆಹೊಟ್ಟೆ ಉಂಡುಗೊಂಡಿದ್ದೋನಿಂಗೆ ಕೊದಿ ತಡೆಯ.
ಗುಡ್ಡೆಗೆ ಎತ್ತುವಂದ ಮದಲೇ ಗಾಡಿಲ್ಲಿದ್ದ ಬಲಿ ಎಲ್ಲ ಖಾಲಿ ಆಗಿತ್ತು. ಬಕಾಸುರಂಗೆ ಹಶು ತಡೆತ್ತಿಲ್ಲೆ. ಕೋಪ ತಡೆಯದ್ದೆ ಭೀಮ ಇದ್ದಲ್ಲಿಂಗೆ ಬಂದು ಒಂದು ಗುದ್ದಿತ್ತಡೊ.
ಅಂಬಗ ಭೀಮ ಹೇಳಿದಡೊ.ನಿಲ್ಲು ಮಾರಾಯ. ಇನ್ನೂ ಪಾತ್ರೆಯ ತಳಲ್ಲಿ ರಜ ಹಿಡುಕ್ಕೊಂಡಿದ್ದು.ಅದರ ತಿಂದಿಕ್ಕಿ ನಿನ್ನ ಮಾತಾಡುಸುತ್ತೆ. ಅಷ್ಟರ ವರೆಗೆ ಸುಮ್ಮನೆ ಕೂರು ಹೇಳಿದಡ ಬೆರಳಿಲ್ಲಿ ಏಡಿಸುತ್ತ!

ಬೊಗಸೆ ತುಂಬುಸೆಕ್ಕಾರೆ ಬೆರಳುಗಳ ಜೋಡುಸೆಕ್ಕು. ಎರಡೂ ಕೈಗಳಲ್ಲಿ ಹಿಡುಕ್ಕೊಳ್ಳೆಕ್ಕಾರೆ ಬೆರಳುಗಳ ದೂರ ದೂರ ಮಾಡ್ಯೊಳ್ಳೆಕ್ಕು.ಎಲ್ಲಕ್ಕೂ ಬೇಕಪ್ಪದು ಕೈ ಬೆರಳುಗೊ.
ದೂರಲ್ಲಿಪ್ಪೋನ ದಿನಿಗೇಳೆಕ್ಕಾರೂ, ಅಲ್ಲೇ ನಿಲ್ಲು ಹೇಳುಲೂ ಕೈಭಾಷೆ ಮಾಡಿತ್ತವನ್ನೇ?
ಬೆರಳುಗಳೇ ಇಲ್ಲದ್ದೋರೂ ಎಲ್ಲೋರಿಂಗು ಇಪ್ಪ ಹಾಂಗೆ ಇಲ್ಲದೆ ನಾಲ್ಕೋ ಮೂರೋ ಬೆರಳು ಇಪ್ಪೋರೂ ಇದ್ದವು.
ಕಾಲಿನ ಬೆರಳುಗಳೂ ಕೈಬೆರಳೇ ಇಲ್ಲದ್ದೋರಿಂಗೆ ಉಪಯೋಗ ಆವುತ್ತಲ್ಲದೋ?
ಮತ್ತೆ ಕಾಲಿನ ಹೆಬ್ಬೆರಳಿಲ್ಲಿ ಪ್ರೇಮ ಸಂಕೇತ ನೆಲಲ್ಲಿ ಬರವದು ಇದ್ದನ್ನೇ!
ಬೆರಳಿನ ಭಾಷೆ ಬೇರೆಯೇ ಇದ್ದಲ್ಲದೋ?

~*~*~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  ಬಹಳ ಲಾಯಿಕಾಯಿದು. ಒಪ್ಪ೦ಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಒಂದು ವಿಷಯದ ಬಗ್ಗೆ ಇಪ್ಪ ಹಲವು ವಿಚಾರಂಗಳ ಹೇಳುವ ಬಾಳಿಕೆ ಮಾವನ ಶೈಲಿ ವಿಶೇಷ ರೀತಿಲ್ಲಿ ಆಕರ್ಷಕವಾಗಿದ್ದು.

  ಬೆರಳು ನಿಜವಾಗಿಯೂ ಅತ್ಯಂತ ಮಹತ್ವದ ಅಂಗ. ನಮ್ಮ ಶರೀರದ ಶಕ್ತಿ ಹೊರ ಪ್ರವಹಿಸುದು ಬೆರಳುಗಳ ಮೂಲಕ. ಆಶೀರ್ವಾದ ಪಡವಗ ಕಾಲ್ಬೆರಳುಗಳ ಮೂಲಕ ಹಿರಿಯರ ಚೈತನ್ಯ ನಮ್ಮ ತಲೆಗೆ ಪ್ರವೇಶಿಸಿರೆ… ಹಿರಿಯರು ನಮ್ಮ ತಲೆ ಸವರಿದರೆ ಕೈಬೆರಳುಗಳ ಮೂಲಕ ಪ್ರವೇಶಿಸಿತ್ತು.

  ಬೆರಳುಗಳ ಬಗೆಗಿನ ಲೇಖನ ಒಪ್ಪ ಆಯಿದು ಹೇಳಿ ಒಂದೊಪ್ಪ.

  [Reply]

  VA:F [1.9.22_1171]
  Rating: 0 (from 0 votes)
 3. ಸುಬ್ಬಣ್ಣ ಭಟ್ಟ, ಬಾಳಿಕೆ

  ಜಯಶ್ರೀ ನೀರಮೂಲೆ ಹೇಳಿದ್ದು ಸರಿ ಹೇಳಿ ಕಾಣುತ್ತು. ರೇಖಿ ಗೊಂತಿದ್ದೋರ ಲೆಕ್ಕಲ್ಲಿ ಬೆರಳುಗಳ ಮೂಲಕವೇ ನಮ್ಮ ದೇಹದ ಕರೆಂಟ್ ಇನ್ನೊಬ್ಬರ ದೇಹಕ್ಕೆ ಹೋಪದಡ. ಮನಶ್ಶಾಸ್ತ್ರಲ್ಲಿಯೂ ಹೆಡತಲೆಯ ತೊರುಸಿದರೆ ಬೇಗ ಒಂದು ವಿಷಯ ನೆಂಪಿಂಗೆ ಬತ್ತಾಡೊ. ಆಶೀರ್ವಾದಲ್ಲಿಯೂ ಹರಸುವೋರ ಕರೆಂಟ್ ಆಶೀರ್ವಾದ ಪಡಕ್ಕೊಂಬೋರ ತಲಗೆ ಹೋಯೆಕ್ಕನ್ನೆ

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ°

  ತಿಳಿಹಾಸ್ಯಯುಕ್ತವಾಗಿ ಸಣ್ಣವಿಷಯವಾಗಿ ನಗಣ್ಯವಾಗಿ ಕಾಂಬ ವಿಷಯಂಗಳ ಸೊಗಸಾಗಿ ಬರವ ಮಾವನ ಶೈಲಿಗೆ – ‘ಹರೇ ರಾಮ’

  [Reply]

  VA:F [1.9.22_1171]
  Rating: 0 (from 0 votes)
 5. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಯೇವಗಳೂ ಚಾಲ್ತಿಲಿದ್ದರೂ ಈ ಬೆರಳುಗಳ ವ್ಯವಹಾರಂಗಳ ಗಮನಿಸುತ್ತಿಲ್ಲೆ, ತಂನ್ನಿಂತಾನಾಗಿಯೇ ಅದು ಬತ್ತು, ಎಲ್ಲವನ್ನೂ ಪಟ್ಟಿಮಾಡಿದ ಮಾವನ ಲೇಖನ ಪಷ್ಟಾಯಿದು..ಓ ಹೀಂಗಪ್ಪನ್ನೆ ಹೇಳುವಾಂಗೆ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 6. ಸುಬ್ಬಣ್ಣ ಭಟ್ಟ, ಬಾಳಿಕೆ

  ಬೆರಳುಗಳ ಜೋಡುಸ್ಯೊಂಡು ಕೈ ಮೊಗಚ್ಚಿಯೋ ಕಮುಚ್ಚಿಯೋ ಹಿಡುದರೆ ಬೆರಳುಗೊ ಜೋಡ್ಯೊಂಡು ಇರೆಕ್ಕಡೊ. ಅವರ ಕೈಲ್ಲಿ ಪೈಸೆ ನಿಂಗಡೊ. ಎಡೆ ಕಂಡರೆ ಕೈಲ್ಲಿ ಪೈಸೆ ಒಳಿಯಡೊ.ತಿಂಬಗಳೂ ಎಲ್ಲ ಬೆರಳುಗಳನ್ನೂ ಉಪಯೋಗುಸೆಕ್ಕಡೊ. ಕೆಲವು ಜನ ಮೂರು ಬೆರಳೋ ನಾಲ್ಕು ಬೆರಳೋ ಉಪಯೋಗುಸುವದಿದ್ದು. ಅದು ಸರಿಯಲ್ಲ ಹೇಳುವದು ಕೇಳಿದ್ದೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುಶೇಡಿಗುಮ್ಮೆ ಪುಳ್ಳಿಬಟ್ಟಮಾವ°ಅಕ್ಷರ°ವಿದ್ವಾನಣ್ಣದೊಡ್ಡಭಾವಕೇಜಿಮಾವ°ಸರ್ಪಮಲೆ ಮಾವ°ಶ್ರೀಅಕ್ಕ°ಮುಳಿಯ ಭಾವಮಂಗ್ಳೂರ ಮಾಣಿಒಪ್ಪಕ್ಕವಿನಯ ಶಂಕರ, ಚೆಕ್ಕೆಮನೆಗಣೇಶ ಮಾವ°ಶಾಂತತ್ತೆಶುದ್ದಿಕ್ಕಾರ°ಬಂಡಾಡಿ ಅಜ್ಜಿಚೆನ್ನೈ ಬಾವ°ಎರುಂಬು ಅಪ್ಪಚ್ಚಿದೇವಸ್ಯ ಮಾಣಿಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆಕಾವಿನಮೂಲೆ ಮಾಣಿಶಾ...ರೀಪಟಿಕಲ್ಲಪ್ಪಚ್ಚಿವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ