ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ

January 29, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೊಳುಂಬುಮಾವನ ಗುರ್ತ ಇದ್ದನ್ನೆ, ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!!
ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು.
ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ.
ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..!
ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ!
ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು.
ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! 😉

ಬೇಂಕಿಲಿ ಪೈಸೆ ಎಣುಶುದರ ಒಟ್ಟೊಟ್ಟಿಂಗೇ ಅವಕ್ಕೆ ಕೆಲವೆಲ್ಲ ಒಯಿವಾಟುಗೊ ಇದ್ದು!
ಪಟತೆಗವದೋ, ಪದ್ಯಕಟ್ಟುದೋ, ಪದ್ಯ ಹಾಡುದೋ, ಕತೆಬರವದೋ, ಶುದ್ದಿ ಓದುದೋ, ಆಟ ನೋಡುದೋ, ಪಾಟಮಾಡುದೋ – ಇನ್ನೂ ಏನೇನೋ!

ಇವರ ಪಟತೆಗೆತ್ತ ಮರುಳು ಇದ್ದಲ್ದ, ಅದರ ಒಂದು ಮೆಚ್ಚೆಕ್ಕಾದ್ದೇ. ತುಂಬ ಚೆಂದಕೆ ತೆಗೆತ್ತವಡ – ಅಜ್ಜಕಾನ ಬಾವ ಹೇಳಿತ್ತಿದ್ದ!
ಎಲ್ಲಿಗೇ ಹೋಗಲಿ, ಪಟ ತೆಗದು, ಚೆಂದಲ್ಲಿ ಮಡಿಕ್ಕೊಂಗು. ಅವರ ಮನೆ ಗೋಡೆಲಿಡೀ ಅವು ತೆಗದ ಪಟಂಗಳೇ ಅಡ.
ಅತ್ತೆಗೆ ವಾರವಾರ ಉಡುಗುವಗ ಬಂಙ ಅಪ್ಪದಿದಾ!

ಮೊನ್ನೆ ಬೆಡಿರಿಪೆರಿಗೆ ಹೇಳಿಗೊಂಡು ಕೊಡೆಯಾಲಕ್ಕೆ ಹೋಗಿತ್ತಿದ್ದೆ.
ಬೊಳುಂಬುಮಾವ ಸಿಕ್ಕಿದವು, ಪಣಂಬೂರಿಂಗೆ ಹೆರಟವು. ಕೆಮರದ ಬೇಗು ಕಂಡಪ್ಪಗ ಪಕ್ಕನೆ ಕೇಳಿದೆ, ಈ ಪಟಂಗ ನಮ್ಮ ನೆರೆಕರೆಗುದೇ ಕಾಣಲಿಯೋ? ಹೇಳಿಗೊಂಡು!
‘ಅಕ್ಕಪ್ಪಾ, ಧಾರಾಳ!’ ಹೇಳಿದವು. ಅವು ತೆಗದ ಚೆಂದದ ಪಟಂಗಳ ಒಪ್ಪಣ್ಣನ ಬೈಲಿ ತೋರುಸುಲೆ ಕೊಶೀಲಿ ಒಪ್ಪಿದವು. ನೋಡುವ ಕೆಲಸ ನಮ್ಮದು!

ರಜರಜವೇ ಪಟ ಕಳುಸುತ್ತವಡ, ಕೆಮ್ಕಕ್ಕೆ ಅಡಕ್ಕೆ ಹಾಕಿದಾಂಗೆ.
ನಿಂಗೊಗುದೇ ರಜರಜವೇ ಕಾಂಗಷ್ಟೆ!
ಪಟನೋಡಿ, ಕೆಮರಕ್ಕೆ ಒಪ್ಪಕೊಡಿ!
~
ಒಪ್ಪಣ್ಣ

ಒಪ್ಪಣ್ಣ, ಒಪ್ಪಕ್ಕಂದ್ರಿಂಗೆ  ನಮಸ್ಕಾರ

ಪಟ ಕಳುಸಲೆ ಹೇಳಿದ್ದಕ್ಕೆ ಕೊಶೀ ಆತು.
ಇತ್ತೀಚೆಗೆ ಕೊಡೆಯಾಲ ಪಣಂಬೂರು ಬೀಚಿಲ್ಲಿ ನಡದ ಗಾಳಿಪಟ ಉತ್ಸವದ ಕೆಲವು ಪಟಂಗಳ ಕಳುಸುತ್ತೆ.
ಅದರಲ್ಲಿ ಒಂದು ಪಟ ಸಗಣದ ಉಂಡೆಯ ಉರುಳುಸುತ್ತ ಸಗಣಿಹುಳಂಗಳ ಹಾಂಗೆ ಕಾಣುತ್ತು!

ಎನ್ನ ಹತ್ರೆ ಪಟಂಗಳ ಸ್ಟೋಕು ತುಂಬಾ ಇದ್ದು. ಒಳ್ಳೆದು ನೋಡಿ ಅಂಬಗಂಬಗ ಕಳುಸುತ್ತೆ. ಕಳುಸಲೆ ಅಕ್ಕನ್ನೆ ?

~
ಬೊಳುಂಬು ಮಾವ
(gopalbolumbu@yahoo.co.in)

ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. Narayana Rao Sharma

  Patango bhari chanda baindovu. Gaalipata Utsavakke hogi bandange aathada!Adude Chargilladde!!!Thanks Oppannange!

  [Reply]

  VA:F [1.9.22_1171]
  Rating: 0 (from 0 votes)
 2. permukha ishwara bhat

  Gobbarada hulu manushyandalu ettara iddanne!!!!!! fine photography.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಶಾಂತತ್ತೆಪುಟ್ಟಬಾವ°ಉಡುಪುಮೂಲೆ ಅಪ್ಪಚ್ಚಿಶರ್ಮಪ್ಪಚ್ಚಿಚೂರಿಬೈಲು ದೀಪಕ್ಕದೊಡ್ಡಭಾವಹಳೆಮನೆ ಅಣ್ಣಡಾಗುಟ್ರಕ್ಕ°ವೆಂಕಟ್ ಕೋಟೂರುದೊಡ್ಡಮಾವ°ಡೈಮಂಡು ಭಾವಶ್ಯಾಮಣ್ಣಚೆನ್ನಬೆಟ್ಟಣ್ಣಪುಣಚ ಡಾಕ್ಟ್ರುಯೇನಂಕೂಡ್ಳು ಅಣ್ಣಒಪ್ಪಕ್ಕಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿಪೆಂಗಣ್ಣ°ದೇವಸ್ಯ ಮಾಣಿಮಂಗ್ಳೂರ ಮಾಣಿಅಕ್ಷರ°ಸಂಪಾದಕ°ನೆಗೆಗಾರ°ಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ