ಒಪ್ಪಕ್ಕ ತೆಗದ ಒಪ್ಪ-ಒಪ್ಪ ಪಟಂಗೊ…

ಒಪ್ಪಣ್ಣನ ತಂಗೆ ಒಪ್ಪಕ್ಕಂದೇ ಬೈಲಿಲಿ ಇದ್ದು, ಗೊಂತಿದ್ದನ್ನೇ?
ಒಪ್ಪಕ್ಕಂಗೂ ಪಟ ತೆಗವಲೆ ಅರಡಿತ್ತು.

ಓ ಮೊನ್ನೆ ಮಾಷ್ಟ್ರುಮಾವನ ಮಗ ಅಮೇರಿಕಲ್ಲಿಪ್ಪವ, ಬಪ್ಪಗ ಒಂದು ಕರಿಕೆಮರ ತಂದು ಕೊಟ್ಟಿದ.
ಕೊಟ್ಟದು ಮಾಂತ್ರ ಅಲ್ಲ, ಪಟ ತೆಗವದು ಹೇಂಗೆ ಹೇಳಿಯೂ ಹೇಳಿಕೊಟ್ಟಿದ.
ಅದರಿಂದ ಮತ್ತೆ ಎಂಗೊಗೆ ಒರಕ್ಕಿಲ್ಲೆ! ಕೂದರೆ, ನಿಂದರೆ, ಎದ್ದರೆ, ಮನುಗಿರೆ – ಪಟ ತೆಗವದು ಈ ಒಪ್ಪಕ್ಕ.

ಪಟ ತೆಗವಲೆ ಕಷ್ಟ ಏನಿಲ್ಲೆಪ್ಪ, ಸುಲಾಬ ಇದ್ದು. ಅಂದೊಂದರಿ ಕೆಮರದ ಶುದ್ದಿ ಮಾತಾಡಿದ್ದಲ್ಲದೋ – ಅದೇ ನಮುನೆ – ಬಹು ಸುಲಬ!
ಅರ್ದ ಗಳಿಗೆಲಿ ಒಪ್ಪಕ್ಕಂಗೆ ಪಟ ತೆಗವದು ಹೇಂಗೆ ಹೇಳಿ ಕಲ್ತಾಯಿದು – ಗಟ್ಟಿಗೆತ್ತಿ ಅದು.

ಎಲ್ಲ ತೆಗದಾದ ಮತ್ತೆ ತೆಕ್ಕೊಂಡೋಗಿ ಮಾಷ್ಟ್ರುಮನೆ ಕಂಪ್ಯೂಟರಿಂಗೆ ಹಾಕಿತ್ತು.
ತೆಗದ ಅರೆವಾಶಿ ಪಟಂಗಳಲ್ಲಿ ದನಗೊ, ಕಂಜಿಗೊ, ನಾಯಿ, ಪುಚ್ಚೆದು ಮಾಂತ್ರ ಇದ್ದದು.

ಓ ಮೊನ್ನೆ ಮಾಷ್ಟ್ರುಮಾವನ ಮನೆಗೆ ಹೋಗಿಪ್ಪಗ ನೋಡಿದೆ!
ತೆಗದ ಕಂಜಿದು, ನಾಯಿದು ಪಟ ಇತ್ತನ್ನೆ – ಬರೇ ಅಷ್ಟುಮಾಂತ್ರ ಅಲ್ಲ, – ಹೂಗುಗೊ, ತೋಟದ್ದು, ಎಲೆಮರಿಗೆ, ಅದು ಇದು – ಸುಮಾರೆಲ್ಲ ಪಟಂಗೊ ಇತ್ತು.
’ಬೈಲಿಂಗೆ ತೋರುಸುವನ ಒಪ್ಪಕ್ಕ ಇದರಾ?’ ಕೇಳಿದೆ. ಸುರೂವಿಂಗೆ ನಾಚಿಕೆ ಮಾಡಿರೂ ಮತ್ತೆ ಕೊಶೀಲಿ ಕೊಟ್ಟತ್ತು.
ಇದಾ, ಒಪ್ಪಕ್ಕ ತೆಗದ ಪಟಂಗೊ ಇಲ್ಲಿದ್ದು..
(ಅದು ತೆಗದ ಪೂರ ಪಟ ಹಾಕಿದ್ದಿಲ್ಲೆ. ಅದರತ್ರೆ ಇನ್ನುದೇ ಸುಮಾರಿದ್ದು, ಇನ್ನಾಣ ಸರ್ತಿ ಹಾಕುಗೋ ಏನೋ!)

ನೋಡಿ, ಹೇಂಗಾಯಿದು ಹೇಳಿ. ಆತೋ?
~
ಒಪ್ಪಣ್ಣ

ಇದು ಆನು ತೆಗದ ಪಟಂಗೊ:

ಒಪ್ಪಕ್ಕ

   

You may also like...

17 Responses

 1. ಗೋಪಾಲ ಮಾವ says:

  ಒಪ್ಪಕ್ಕ ತೆಗದ ಪಟಂಗ ಒಪ್ಪ ಇದ್ದು.

 2. ಆದರ್ಶ says:

  ಒಪ್ಪಕ್ಕ!! ನಿನ್ನ ಛಾಯಾಗ್ರಹಣ ಸೂಪರ್!! ಕಂಜಿಯ ಪಟ ನೋಡಿ ತುಂಬಾ ಚಂದ ಬಯಿಂದು.. 🙂

 3. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಒಪ್ಪಕ್ಕನ ಪಟಂಗ “ಸೂಪರ್” ಆಗಿ ಬಯಿಂದು. ಅದರಲ್ಲಿಯೂ “ಗದ್ದೆ ಹಸುರು ನೋಟ”, “ಬಿಳಿ ಕಂಜಿ” ಎರಡು ಗುಲಾಬಿ ಹೂಗುಗೊ, ಮತ್ತೆ “ಪ್ರೀತಿ” ಎನಗೆ ತುಂಬಾ ಹಿಡಿಸಿತ್ತು. ಮುಂದೆಯೂ ಇನ್ನಷ್ಟು ಲಾಯಿಕಿನ ಪಟಂಗಳ ನಿರೀಕ್ಷೆ ಇದ್ದು

  • ಗುರಿಕ್ಕಾರ° says:

   ಬೈಲಿನ ಮಾಹಿತಿಗಾಗಿ:
   ಒಪ್ಪಕ್ಕ ತೆಗದ ಕಂಜಿಗಳ “ಪ್ರೀತಿ”ಯ ಎರಡು ಮೂರು ಪಟಂಗೊ ಗುರುಗಳ ಸನ್ನಿಧಾನಕ್ಕೆ ಎತ್ತಿದ್ದು.
   ನಮ್ಮ ಗುರುಗೊಕ್ಕೆ ಆ ಪಟ ನೋಡಿ ತುಂಬಾ ಕೊಶಿ ಆಯಿದಡ, ಅವು ಆ ಪಟವ ತೆಗದು ಮಡಗಿದ್ದವಡ!
   ಗುರುಗಳೇ ಒಪ್ಪಕ್ಕನತ್ರೆ ಹೇಳಿದವಡ..
   ಹರೇರಾಮ..!

 4. ಕಳಾಯಿ ಗೀತತ್ತೆ says:

  chandrana pata bharee layka aydu tegaddu…….:)

 5. ಶ್ರೀದೇವಿ ವಿಶ್ವನಾಥ್ says:

  ಒಪ್ಪಕ್ಕಾ, ಪಟಂಗ ಭಾರೀ ಲಾಯಕ ಆಯಿದು ತೆಗದ್ದದು.. ಇನ್ನುದೆ ಚೆಂದ ಚೆಂದದ ಪಟಂಗಳ ತೆಗೆದು ಬೈಲಿಲಿ ಎಂಗೊಗೆ ನೋಡ್ಲೆ ಹಾಕುತ್ತಾ ಇರು ಆತಾ? ಮನೆಲಿ ಆರನ್ನೂ ಬಿಡೆಡಾ.. ಎಲ್ಲೋರ ಪಟ ತೆಗೆ.. .. ಒಪ್ಪಣ್ಣನದ್ದು ಅಂತೂ ಎಲ್ಲಾ ಪಟ ತೆಗೆ ಆತಾ? ಕೆಮರ ಒಪ್ಪಣ್ಣನ್ಗೆ ಸಿಕ್ಕದ್ದೇ…!! ಮತ್ತೆ ನಿನಗೆ ಸಿಕ್ಕ ನೋಡು ಕೆಮರ.. ಅವನೇ ಬೇರೆ ದಿಕ್ಕಾಣ ಚೆಂದದ ಪಟಂಗಳ ಹಾಕುಗು…

 6. ಸೂಪ್ಪರ್ ಒಪ್ಪಕ್ಕಾ… ಬಾರೀ ಚೆಂದ ಆಯಿದು ಎಲ್ಲ ಪಟಂಗೊ.
  ಆಟಿಕಳೆಂಜ ಈಗಳೂ ಬತ್ತಾ ನಿಂಗಳತ್ಲಾಗಿ..?

  • ಅಜ್ಜಕಾನ ಭಾವ says:

   ಎಂತ ಒಪ್ಪಣ್ಣಂಗೆ ವೇಷ ಹಾಕಿ ತೆಗೆದ ಫಟ ಹೇಳ್ತ ಹಾಂಗೆ ಕಾಣುತ್ತು….

   • ಏ ಅಜ್ಜಕಾನ ಭಾವ..
    ಎಂತ? ಏನಾರು ಬೆಶಿ ಬೇಕೋ ಹೇಂಗೆ? ಏ°?
    ಒಪ್ಪಣ್ಣ ನ ವೇಶ ಆಗಿದ್ದರೆ ಇನ್ನೂ ಹತ್ತರಂದ ತೆಗೆತ್ತಿತು, ಇಷ್ಟು ಹೆದರ್ತಿತಿಲ್ಲೆ! 😉

    ಹೊತ್ತಪ್ಪಗ ಸಿಕ್ಕುತ್ತೆ ಅಲ್ಲದೋ – ಬೆನ್ನಿಂಗೆ ಹಾಳೆಕಟ್ಟಿಗೊ, ಆತಾ?
    ಹಪ್ಪಾ…

 7. ಅಜ್ಜಕಾನ ಭಾವ says:

  ಪಟ ಲಾಯ್ಕ ಇದ್ದು ಆತಾ.. ಸುಮ್ಮನೆ ಹೇಳ್ಳೆ ಆಗಾ..

  ಒಪ್ಪಕ್ಕಂಗೆ ಓದುತ್ತದರ ಮಧ್ಯ ಪಟ ತೆಗವಲೆ ಪುರುಸೋತ್ತು ಎಲ್ಲಿ ಸಿಕ್ಕಿತ್ತು ಹೇಳಿ ಕೊಳಚಿಪ್ಪು ಭಾವಂಗೆ ಮಂಡೆ ಬೆಶಿ ಆಗಿ ಕೆ ಆರ್ ಎಸ್ ಗೆ ಹಾರುತ್ತ ಅಂದಾಜಿ ಅಡ.. ಮೊನ್ನೆ ಗಣಕಿಂಡಿ ಮಾವ ಸಿಕ್ಕಿ ಹೇಳಿದವು. ಅವು ಪಟ ತೆಗೆವದರ ಬಿಟ್ಟು ಕೊಳಚಿಪ್ಪು ಭಾವನ ಸಮಾಧಾನ ಮಾಡಿದವಡ…

  • ಸನತ್ says:

   ಕೊಳಚಿಪ್ಪು ಭಾವಂಗೆ ಆಪೀಸಿನ ಮಂಡೆಬೆಶಿ ಅಡ. ಒಪ್ಪಕ್ಕ ಓದದ್ದೇ ಇಪ್ಪ ಮಂಡೆ ಬೆಶಿ ಅಲ್ಲಡ.
   ಒಪ್ಪಕ್ಕ ಓದದ್ದೇ ಇಪ್ಪ ಮಂಡೆ ಬೆಶಿ ಈಗ ಬಂಡಾಡಿ ಆಜ್ಜಿಗೆ ಅಡ.ಎರಡು ಸರ್ತಿ ಕೇಳಿತ್ತಡ, ಈ ವರ್ಷ ಆದರೂ ೧೦ನೇ ಕ್ಲಾಸಿಲಿ ನೀನು ಪಾಸು ಆದಿಯೊ ಹೇಳಿ.

   ಒಪ್ಪಕ್ಕನೂ ಪಟ ತೆಗವಲೆ ಶುರು ಮಾಡಿದ್ದು ,ಇನ್ನು ಎನಗೆ ಮಾಷ್ಟ್ರು ಮಾವನ ಮನೆ ಜೆಂಬರದ ಪಟ ತೆಗವಲೆ chance ಸಿಕ್ಕ ಹೇಳಿ ಯೇನಂಕೂಡ್ಳಣ್ಣಂಗೆ ಮಂಡೆಬೆಶಿ ಆಯಿದಡ.

   • ಬಂಡಾಡಿ ಅಜ್ಜಿ says:

    ಏ°… ಆರು ಹೇಳಿದ್ದದು ಒಪ್ಪಕ್ಕ ಓದುತ್ತಿಲ್ಲೇಳಿ.. ಒಪ್ಪಣ್ಣನೋ…?
    ಅದು ಪಷ್ಟ್ಲಾಸು ಓದುತ್ತು. ಮಯಿಸೂರಿನ ಪುಳ್ಳಿಮಾಣಿಗೆ ಆದರೆ ಇಪ್ಪತ್ತೈದು ಸರ್ತಿ ಹೇಳೆಕಾಗಿಯೊಂಡಿದ್ದತ್ತಡ ಓದಲೆ. ಮತ್ತುದೇ ಓದುಲೆ ಕೂದಲ್ಲಿಯೇ ಒರಕ್ಕು ತೂಗುಗಡ. ಅಜ್ಜಕಾನ ಪುಳ್ಳಿ ಹೇಳುಗು.

    • ಸನತ್ says:

     ಅವ ಓದದ್ರೂ ಮಾರ್ಕು ಬತ್ತಡ.

     ಅಜ್ಜಕಾನ ಭಾವ ಕೊಳಚಿಪ್ಪು ಭಾವನ ಕಾಂಬಲೆ ಹೋಪಗ ಬೆನ್ನಿಂಗೆ ಹಾಳೆಕಟ್ಟಿಗೊ, ಆತಾ?

     • ಹಾಳೆ ಕಟ್ಟಿಗೊಂಬ ಹಾಂಗೆ ಇಲ್ಲೆ ಸನತಣ್ಣ.. ಅಜಕ್ಕಳ ಮಾಷ್ತ್ರಣ್ಣಂಗೂ ಬಂಡಾಡಿ ಅಜ್ಜಿಗೂ ಇಡಿಕ್ಕಾಯಿ ಉಪ್ಪಿನಕಾಯಿ ಮಜ್ಜಿಗೆ ಅಶನ ಉಂಬಲೆ ಹಾಳೆ ಇಲ್ಲೆ ಹೇಳಿ ಮಂಡೆಬೆಶಿ ಮಾಡಿಯೊಂಡಿದ್ದವು. ಕೊಳಚಿಪ್ಪು ಬಾವನತ್ರೆ ಹೋಪಗ ಕಂಬ್ಳಿಯೇ ಆಯೆಕ್ಕಷ್ಟೆ.. ಒಪ್ಪಣ್ಣನಲ್ಲಿಗೆ ರಟ್ಟು ಕಟ್ಟಿಗೊಂಡು ಹೋದ್ದಿದ.. ಅವ ಶ್ರೀ ಅಕ್ಕ ಕಳ್ಸಿದ ಹಲ್ವ ತಿಂದೊಂಡಿದ್ದ ಕಾರಣ ನೆನ್ಪೇ ಆಯಿದಿಲ್ಲೆ..

 8. shedigumme bhava says:

  ellora haange heenge helva ajjakana bhavange oodle udasina aagyondu ittada ajji,,,,,,,,,haangaagi avange baakippavara artha madyombadu sulabha aaddu athooooooooooooooooooooo

 9. Shankaranarayana Bhat adkathimar. says:

  ಈ ಒಪ್ಪಕ್ಕ ಮೋಸ ಇಲ್ಲೆ ಮಿನಿಯ….ಬಾರೀ ಲಾಯಿಕಲ್ಲಿ ಪಟ ತೆಗೆತ್ತು.ಆಚಕರೆ ಮಾಣಿ ಗೆ ಗೊಂತಾಯಿದಿಲ್ಲೆ ಕಾಣುತ್ತು….ಅಲ್ಲದ್ದ್ರೆ ಅವನ ಮದುವೆ ಪಟ ತೆಗವ ಕೆಲಸ ಒಪ್ಪಕ್ಕಂಗೆ ವಹಿಸುತ್ತಿತ್ತ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *