ಬೆಶಿಲಿಲಿ.. ಬೈಕಿಲಿ..!

April 6, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೆಲವು ಜನ ನಿಂಗೊಗೆ.. ಮರ್ಲು  ಹೇಳಿದವು.. ಮತ್ತೆ ಕೆಲವು ಜನ ಬೇಡ ಭಾವ ಈ ಬೆಶಿಲಿಂಗೆ ಹೇಳಿದವು.. ಆದ್ರೆ ನಾವು ಕೇಳಕ್ಕನ್ನೆ.. ಹೆರಟದೇ.. ಬೆಂಗ್ಳೂರಿಂದ ಮಂತ್ರಾಲಯ-ಹಂಪಿಗೆ.. ಬುಲೆಟ್ ಬೈಕಿಲಿ.. ಒಟ್ಟು 1300 ಕಿ.ಮೀ ಪ್ರಯಾಣ. ನಾಲ್ಕು ದಿನ ತಿರುಗಾಟ. ಮೊದಲಿಂದಲೇ ಬೈಕಿಲಿ ತಿರುಗುವ ಮರ್ಲಿದ್ದ  ಕಾರಣ ಈ ಸರ್ತಿ ಮಂತ್ರಾಲಯ ಹೊಡೆಂಗೆ ಹೋಪ ಹೇಳಿ ಕಂಡತ್ತು. ಸರಿ ಆನುದೆ. ಎನ್ನ ದೋಸ್ತಿದೆ ಹೋಪ ಹೇಳಿ ಪ್ಲಾನ್ ಮಾಡಿದೆಯ°. 4 ದಿನ ಮೊದಲೇ ಬೈಕ್ ಎಲ್ಲ ಸರ್ವೀಸ್ ಮಾಡ್ಸಿ ಮಡುಗಿದೆ. ಆದರೆ, ಬೈಕಿಲಿ ಕೂದೊಂಡು ಹೋಪದು ಹೇಳಿರೆ ರಜ ಕಷ್ಟ ಇಪ್ಪದು ಹಿಂದೆ ಕೂಪವಂಗೆ. ಇನ್ನು ಎನ್ನ ದೋಸ್ತಿಗೆ ಬೈಕು ಬಿಡ್ಲೆ ಎಡಿತ್ತಿಲ್ಲೆ . ಇಲ್ಲೇ ಬೆಂಗ್ಳೂರಿಲಿ ಸಣ್ಣ ಮಟ್ಟಿನ ಬೈಕ್ ಪ್ರಯಾಣ ಮಾಡಿದವ° ಅವ°. ಹೋಪ° ಹೇಳ್ತ ಉಮೇದು ಇಬ್ರಿಂಗೂ ಇತ್ತಿದಾ. ಆದ್ರೆ ಮೊದಲೇ `ದೋಸ್ತಿ‘ ಬಗ್ಗೆ ಎನಗೆ ರಜ ಸಂಶಯ ಇತ್ತು. ಒಂದು 300 ಕಿ.ಮೀ ಹೋದಿಕ್ಕಿ ಎನಗೆಡಿತ್ತಿಡಿಲ್ಲೆ ಮಾರಾಯ. ಹೇಳಿ ಕೈ ನೆಗ್ಗಿರೆ ಎಂತ ಮಾಡುದು.?  ಆದರೂ ಬುಲೆಟ್ ಹೆರಟತ್ತು.  ಭಾರೀ ಬೆಶಿಲು ಇಪ್ಪ ಕಾರಣ ಎಂಗ ಉದೆಕಾಲಕ್ಕೆ ಹೆರಟದು. ಸೂರ್ಯ ನಡು ನೆತ್ತಿಗೆ ಬಪ್ಪಗ ರಜ ದೂರ ಎತ್ತುಗನ್ನೆ ಹೇಳಿ ಅಂದಾಜಿ. ಮುನ್ನಾಣ ದಿನವೇ ರಜ ತಿಂಬಲೆ ಎಲ್ಲ ಕಟ್ಟಿಗೊಂಡು ಹೆರಟೆಯ°.. ನಮ್ಮ ಚಿಕ್ಕಬಳ್ಳಾಪುರ ಹೈವೇಲಿ ಆಂಧ್ರದ ಅನಂತಪುರ, ಗುತ್ತಿ, ಪತ್ತಿಕೊಂಡ, ಅದೋನಿ ಮಾರ್ಗವಾಗಿ ಮಂತ್ರಾಲಯಕ್ಕೆ ಸುಮಾರು 360 ಕಿ.ಮೀ ಎಂಗಳ ಮೊದಲನೇ ದಿನದ ಪ್ರಯಾಣ.
ಗುರ್.....
ಉದೆಕಾಲಕ್ಕೆ 5.50ಗೆ ಬೈಕ್ ಸ್ಟಾರ್ಟ್ ಆಗಿ ಹೈವೇಲಿ ಒಂದೇ ಸಮ ಹೋಪಲೆ ಸುರುವಾತದ. ಸೂರ್ಯ ಸಣ್ಣಕೆ ಮೂಡ್ತಾ ಇದ್ದ ಹೇಳುವಾಗಲೇ ಬೈಕಿಲಿ ಹೋಪ ಮಜವೇ ಬೇರೆ.. ಹಾಂಗೆ ಬೆಶಿಲು ಏರ್ತಾ ಇದ್ದಾಂಗೆ ಎಂಗಳ ಹೊಟ್ಟೆ ಆನುದೆ ಇದ್ದೆ ಹೇಳ್ಳೆ ಸುರುಮಾಡಿತ್ತು.. ಆದರೆ ಎಂತ ಮಾಡುದು ಹೈವೇ ಕರೇಲಿ ಹೋಟ್ಲು ಎಲ್ಲಿಯೂ ಕಾಣ.. ಎಲ್ಲಿದ್ದು ಹೇಳಿ ಕೇಳ್ಳೆ ಭಾಷೆಯೂ ಬಾರ.. ಆ ಕಾರಣಂದ ಬ್ಯಾಗಿಲಿತ್ತ 2 ಖರ್ಜೂರದ  ಕಟ್ಟು ಖಾಲಿ.. ಹಾಂಗೆ.. ಮಧ್ಯಾಹ್ನ ಎಂಗ ಎತ್ತಿದ್ದು ಪತ್ತಿಕೊಂಡ ಹೇಳುವಲ್ಲಿಗೆ.. ತಲೆ ಹೊಟ್ಟಿ ಹೋಪಾಂಗಿಪ್ಪ ಬೆಶಿಲು.. ಅಲ್ಲಿಂದ ಮತ್ತೆ ಮಂತ್ರಾಲಯಕ್ಕೆ ಸುಮಾರು 2.30 ಗಂಟೆ ದಾರಿ.. ಅಲ್ಯೊಂದು ಹೋಟ್ಲಿಲಿ ಸಮಾ ತಿಂದಿಕ್ಕಿ ಹೆರಟೆಯ.. ಅಷ್ಟಪ್ಪಗಲೇ ಬೆಶಿಲಿಂಗೆ ಇಬ್ರುದೆ ಹಣ್ಣಾಗಿ.. ಮೋರೆ ಎಲ್ಲ ಮುಜುವಿನ ಹಾಂಗೆ ಆಗಿತ್ತಿದು.. ಎನ್ನ ಹಿಂದೆ ಕೂದವನ ಸ್ಥಿತಿ ಕೇಳೆಡಿ.. ದಾರಿ ಕರೇಲಿ ಒಂದು ಹುಳಿ ಮರದ ಅಡಿ ನಿಲ್ಸಿ ಕೂದ ಎನ್ನ ದೋಸ್ತಿ ರಜ ಹೊತ್ತಿಂಗೆ ಮನಿಗಿದ… ಎನಗೆ ಕೂದಲ್ಲೆ ರಜ ಕಣ್ಣಡ್ಡ ಹೋತು.. ಎಚ್ಚರಿಕೆ ಆಗಿ ನೋಡಿಯಪ್ಪಗ ಇವ ಬೋದ ಇಲ್ಲದ್ದವರಾಂಗೆ ಮನಿಗಿದ್ದ°..!  ಸರಿ ಗಡಿಬಿಡಿಲಿ ಎದ್ದು.. ಮಂತ್ರಾಲಯ ಎತ್ತಿಯಪ್ಪಗ ಮಧ್ಯಾಹ್ನ 3 ಗಂಟೆ.. ಹಾಂಗೆ ಅಲ್ಯಾಣ ಮಠದ ಅತಿಥಿ ಗೃಹಲ್ಲಿ ಉಳ್ಕೊಂಡು ರಜ ವಿಶ್ರಾಂತಿ ತೆಕ್ಕೊಂಡೆಯ°. ಹೊತ್ತೋಪಗ ದರ್ಶನ ಮುಗಿಸಿ, ನೋಡೆಕ್ಕಾದ್ದೆಲ್ಲ ನೋಡಿಕ್ಕಿ ಮನುಗಿದೆಯ°.. ಮರುದಿನ ಉದೆಕಾಲಕ್ಕೆ ಹೊಸಪೇಟೆಗೆ ಹೆರಡುವ ಅಂದಾಜಿಲಿ…
ಮರುದಿನ ಉದೆಕಾಲಕ್ಕೆ ಮಂತ್ರಾಲಯಂದ ಹೆರಟದು 6 ಗಂಟೆಗೆ.. ಅಲ್ಲಿಂದ ಹೊಸಪೇಟೆಗೆ ಸುಮಾರು 170 ಕಿ.ಮೀ. ಅದೋನಿ-ಸಿರಗೊಪ್ಪ

ಅಡಕ್ಕೆ ಸಾಗುಸುಲೆ ಅಕ್ಕೊ..

ಮಾರ್ಗವಾಗಿ.. ಗೆದ್ದೆ, ಅದು ಇದು ಹೇಳಿ ನೋಡಿಗೊಂಡು ಎಂಗಳ ಪರಿಚಯಸ್ಥರ ಮನೆಗೆ ಬಪ್ಪ ಹೊತ್ತಿಂಗೆ ಮಧ್ಯಾಹ್ನ ಆಯ್ದು.. ಅಲ್ಲಿ ಉಂಡಿಕ್ಕಿ ಗಂಗಾವತಿ ಸನಿಹದ ಕೆಲವು ಜಾಗೆಗೊ (ಆನೆಗೊಂದಿ, ತುಂಗಭದ್ರಾ ನದಿ ನಡುವೆ ಇಪ್ಪ ನವ ವೃಂದಾವನ) ಇತ್ಯಾದಿ ನೋಡ್ಲೆ ಹೋದೆಯ°.. ಎರಡೂ ಜಾಗೆ ಭಾರೀ ಲಾಯ್ಕಿತ್ತು ಹೇಳಿ ಹೇಳುದೇ ಬೇಡ.. ಭತ್ತದ ಗೆದ್ದೆಯ ಅಪೂರ್ವ ಜಾಗೆಗ.. ಎಡಕ್ಕಿಲಿ ಕಲ್ಲಿನ ಗುಡ್ಡೆಗ.. ಅದೆಲ್ಲ ನೋಡಿ ವಾಪಾಸ್ ಮನಗೆ ಬಂದು ಮನುಗಿದೆಯ°.. ಮತ್ತೆ ಎಂಗಳ ಮರುದಿನದ ಕಾರ್ಯಕ್ರಮ ಸುರುವಾದ್ದು 8 ಗಂಟೆಗೆ.. ಅಲ್ಲಿಂದ ಸೀದ ಹಂಪಿಗೆ ಬಂದೆಯ°.. ಅಲ್ಲಿ ವಿರೂಪಾಕ್ಷ ಸೇರಿ ಹಲವು ದೇವಸ್ಥಾನ, ವಿಜಯನಗರ ಅರಸರ ಕಾಲದ ಕಟ್ಟಡಂಗ ಎಲ್ಲ ನೋಡಿದೆಯ°.. ಹಂಪಿ ಹೇಳಿರೆ ಹೇಂಗಿರ್ತು ಹೇಳಿ ವರ್ಣನೆ ಮಾಡ್ಲೆ ಎಡಿಯ. ಹಂಪಿ ಹಂಪಿಯೇ.. ಬೇರೆ ಯಾವುದೂ ಅದಕ್ಕೆ ಬಾರ.. ಜೀವಮಾನಲ್ಲಿ ಒಂದರಿ ನೋಡೆಕ್ಕೇ..!! ಅಲ್ಲಿಂದ ಮತ್ತೆ ಹೊಸಪೇಟೆಲಿಪ್ಪ ತುಂಗಭದ್ರಾ ಅಣೆಕಟ್ಟು, ಉದ್ಯಾನ ಎಲ್ಲಾ ನೋಡಿಕ್ಕಿ ಎಂಗ ಮೊದಲೇ ಬುಕ್ ಮಾಡಿದ ಲಾಡ್ಜಿ೦ಗೆ  ಬಂದು ಶಯನ ಆದೆಯ°..

ಆಚೆ - ಈಚೆ

ಯಥಾಪ್ರಕಾರ ನಾಲ್ಕನೇ ದಿನವೂ ಉದೆಕಾಲಕ್ಕೇ ಎಂಗ ಹೆರಟದು ಕೂಡ್ಲಿಗಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಬಂದು ಅಲ್ಲಿಂದ ಮಧ್ಯಾಹ್ನ 2 ಗಂಟೆ ಹೊತ್ತಿಂಗೆ ಸುಮಾರು 360 ಕಿ.ಮೀ ಪ್ರಯಾಣ ಮಾಡಿ ಬೆಂಗ್ಳೂರಿಂಗೆ ಬಂದೆಯ°.. ಆ ದಿನ ಹೊತ್ತೋಪಗ ಮನುಗಿದವು ಮತ್ತೆ ಮರುದಿನ ಉದಿಯಪ್ಪಗಳೇ ಎದ್ದದು.. ಬಚ್ಚೆಲು ಆ ನಮುನೆ ಇತ್ತು.. ಇನ್ನು ಆನು ಬೈಕಿಲಿ ಬತ್ತಿಲ್ಲೆ ಮಾರಾಯ. ಬಂದರೆ ಒಬ್ಬನೇ ಬೈಕು ಬಿಡೆಕು.. ಇಲ್ಲದ್ರೆ ಕೂದು ಕೂದು ಕುಂಡೆ ಹುಳಿ ಬತ್ತು ಹೇಳಿ ಎನ್ನ ದೋಸ್ತಿ.. ಒಂದು ಅಂತಿಮ ನಿರ್ಧಾರಕ್ಕೆ ಬಂದ°.. ಆದರೆ.. ನಾಲ್ಕು ದಿನ ಬೈಕಿಲಿ ತಿರುಗಿದ್ದು ಎಂದೂ ಮರೆಯ ಹೇಳಿಯೂ ಹೇಳಿದ°.. ನಿಜಕ್ಕೂ ಎನಗೂ ಬೈಕ್ ಯಾತ್ರೆ ಖುಷಿ ಕೊಟ್ಟಿತ್ತಿದು.. ಹೋಪ ವಿವಿಧ ಜಾಗೆಯ ಜನ ಜೀವನ, ಅಲ್ಯಾಣ ಪ್ರದೇಶಂಗ, ಕೃಷಿ, ವಿಶೇಷತೆಗ ಇತ್ಯಾದಿ ಎಲ್ಲ ಗೊಂತಾವ್ತು.. ನಮ್ಮ ಅನುಭವ ಹೆಚ್ಚು ಮಾಡ್ತು.. ಹೇಳುದು ಬೈಕ್ ಯಾತ್ರೆಯ ಹೆಚ್ಚುಗಾರಿಕೆ… ಬೈಕಿಲಿ ಹೋಪದು ಕಷ್ಟ ಆದರೂ, ಹದಾಕೆ ಹೋದರೆ ತೊಂದರೆ ಇಲ್ಲೆ.. ಒಂದಷ್ಟು ವಿಷಯಂಗಳ ನವಗೆ ತಿಳಿವಲೆ ಎಡಿತ್ತು ಹೇಳುದೇ ಮುಖ್ಯ… ಇನ್ನಾಣ ಸರ್ತಿ  ಇನ್ನೂ ಕೆಲವು ದಿಕ್ಕಂಗೆ ಹೋಪ ಅಂದಾಜಿದ್ದು.. ಬೈಲಿಲಿ ಆರಾದರೂ ಬೈಕಿಲಿ ಹೋಪ `ಮರ್ಲು’ ಇದ್ದರೆ ಬಪ್ಪಲಕ್ಕಿದಾ..

ನಿಂಗ ಬೈಕ್ ಯಾತ್ರೆ ಹೋವ್ತರೆ…
ನಿಂಗಳ ಆರೋಗ್ಯ ಸ್ಥಿತಿ ಸರಿ ಇರಲಿ (ಅಗತ್ಯ ಮಾತ್ರೆಗ ಬೇಕಾದ್ದು ಹಿಡ್ಕೊಳ್ಳಿ)
ಬೈಕ್ ಆರೋಗ್ಯ ಸ್ಥಿತಿ ಲಾಯ್ಕಿರೆಕು
ಬೈಕಿನ ಒಳ್ಳೆ ಮೆಕ್ಯಾನಿಕ್ ಹತ್ರೆ ತೋರ್ಸಿ ಸರ್ವೀಸ್ ಮಾಡ್ಸಿ
ಬೈಕಿನ ಆಯಿಲ್ ಕಡ್ಡಾಯವಾಗಿ ಬದಲಿಸಿ
ಬೈಕಿಂಗೆ ಹೆಚ್ಚುವರಿ ಎಕ್ಸಿಲರೇಟರ್, ಕ್ಲಚ್ ಕೇಬಲ್, ಟ್ಯೂಬ್ ಹಿಡ್ಕೊಳ್ಳಿ
ಶೂ, ಹೆಲ್ಮೆಟ್, ಗ್ಲೌಸ್, ಜಾಕೆಟ್ ಇರ್ಲೇ ಬೇಕು (ರೈಡಿಂಗ್ ಗಿಯರ್ ಇದ್ದರೆ ಒಳ್ಳೆದು)
ತಿಂಬಲೆ ಒಣ ಹಣ್ಣುಗ, ಖರ್ಜೂರ ಗ್ಲುಕೋಸ್ ಇರ್ಲಿ. ಕನಿಷ್ಟ 3 ಲೀ ನೀರೂ ಇರ್ಲಿ.
ಹೋಪ ಮಾರ್ಗದ ಬಗ್ಗೆ ಸ್ಪಷ್ಟ ಮಾಹಿತಿ ಇರ್ಲಿ
ಹೋದ ದಿಕ್ಕೆ ಎಣ್ಣೆ ತಿಂಡಿ, ಕಂಡಕಂಡದು ಪೂರಾ ತಿನ್ನೆಡಿ..!
ಎಡಿತ್ತಿಲ್ಲೆ ಹೇಳಿ ಆದ ಕೂಡಲೇ ರಜ ನಿಲ್ಸಿ, ಮತ್ತೆ ಮುಂದಂಗೆ ಹೋಗಿ
>>  ಇಷ್ಟೆಲ್ಲಾ ಮಾಡಿಗೊಂಡು

ಹೋಯೆಕ್ಕಾರೆ.. `ಮರ್ಲು’ ಯಾವ ನಮುನೆ ಇರೇಕು ಭಾವ ಹೇಳಿ ಕೇಳೆಡಿ..!

ಈಚ ಭಾವ ಬೆತ್ತಸರವು

ಬೆಶಿಲಿಲಿ.. ಬೈಕಿಲಿ..!, 1.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಪುಚ್ಚಪ್ಪಾಡಿ ಮಹೇಶ

  ಅನುಭವ ಕಥನ ಲಾಯ್ಕಿ ಇದ್ದು. ಬರ್ದು ಲಾಯ್ಕಿ ಆಯ್ದು.

  ಬೈಕಿಲಿ ಹೋಪ ಖುಷಿ ಬೇರೆ ಯಾವುದರಲ್ಲೂ ಇಲ್ಲೆ. ಆದ್ರೆ ಅಷ್ಟು ದೂರಕ್ಕಪ್ಪಗ “ಸೊಂಟದ ವಿಷ್ಯ” ಡೇಂಜರಕ್ಕು ಅಲ್ದಾ?.
  ಹಾಂಗಾಗಿ ಅವ್ಗ ಅವ್ಗ ರೆಸ್ಟ್ ಬೇಕು.
  ಈಗ ರೆಸ್ಟಾ?

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  [ಹೋದ ದಿಕ್ಕೆ ಎಣ್ಣೆ ತಿಂಡಿ, ಕಂಡಕಂಡದು ಪೂರಾ ತಿನ್ನೆಡಿ..!] – ಪೂರ ತಿಂಬಲೆ ನಮ್ಮಂದ ಎಡಿಯ. ಅಲ್ಪ ಇಕ್ಕು ಮಾಡಿ ಮಡುಗಿದ್ದಪ್ಪೋ.

  ಬೆಶಿಲಿಲ್ಲದ್ದ ಸಮಯ ಆದ್ರೆ ಬೈಕ್ ಸಾಹಸ , ತಿರುಗಾಟ ಲಾಯಕ್ಕವ್ತು. ಬೆಶಿಲಿಂಗಾದರೆ ನಿಂಗೊಗೆ ಮರ್ಲೇ !!

  ಲಾಯ್ಕಾಯ್ದು ನಿಂಗಳ ಕೆಲಸ ಹೇದು ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಈಚ ಭಾವ೦ಗೆ ಸ್ವಾಗತ.ಯಾತ್ರೆಯ ಅನುಭವ ಲಾಯ್ಕ ಆಯಿದು.ಬಚ್ಚಿರೆ ಮರದ ಅಡಿಲಿ ಹೇ೦ಗೆ ಒರಗುಲೆಡಿಗು ಹೇಳಿ ಪ್ರತ್ಯಕ್ಷ ಕ೦ಡ ಹಾ೦ಗೆ ಆತು,ಪಟ ನೋಡಿ!
  ದೂರಕ್ಕೆ ಬೈಕುಪ್ರಯಾಣ ಮಾಡುವವಕ್ಕೆ ನಿ೦ಗೊ ಸಲಹೆ ಕೊಟ್ಟದು ನೋಡಿ ಕೊಶಿ ಆತು.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮನುಗಿದ ಜಾಗೆಲಿ ಎರುಗು ಮತ್ತೂ ಇದ್ದಿದ್ದರೋ?!! ಎಂತದೇ ನೋಡಿ ಮನುಗಿರೂ ಅದೆಲ್ಲ ಫಕ್ಕಕ್ಕೆ ಕಣ್ಣಿಂಗೆ ಕಾಣ ಅಪ್ಪೋ.

  [Reply]

  VA:F [1.9.22_1171]
  Rating: 0 (from 0 votes)
 4. ಈಚ ಭಾವ
  ಈಚ ಭಾವ ಬೆತ್ತಸರವು

  ಎರುಗು ಎಲ್ಲವೂ ಇತ್ತು.. ಆದರೆ.. ಬೆಶಿಲಿನ ಬಚ್ಚೆಲಿಂಗೆ ಯಾವುದೂ ಗೊಂತಾಯ್ದಿಲೆ.. ಇದಾ.. !!

  [Reply]

  VA:F [1.9.22_1171]
  Rating: 0 (from 0 votes)
 5. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಲಾಯಿಕಾಯಿದು ಕಥನ..

  [Reply]

  VA:F [1.9.22_1171]
  Rating: 0 (from 0 votes)
 6. ಒಪ್ಪಣ್ಣ

  ಬೆತ್ತಸರವು ಈಚಬಾವನ ಅನುಭವ ಕಥಾಪ್ರಸಂಗ ಪಷ್ಟಾಯಿದು.
  ಆ ಬಡಬಡ ಶಬ್ದದ ಬೈಕ್ಕಿಲಿ ಅಷ್ಟು ದೂರ ಹೋದ್ದೇಂಗಪ್ಪಾ? ಯೋ ದೇವರೇ!
  ತರವಾಡುಮನೆ ಡೀಸಿಲುಪಂಪಿನಷ್ಟಕೆ ಶೆಬ್ದ ಅದರದ್ದು!
  ಒಪ್ಪಣ್ಣಂಗೆ ಮಣ್ಣ ಕೂತಿಕ್ಕಲೆಡಿಯ! 😉

  ಏನೇ ಇರಳಿ, ಶುದ್ದಿ ಮಾಂತ್ರ ಭಾರೀ ಪಷ್ಟಾಯಿದು.
  ಇನ್ನಾಣದ್ದು ಬರಳಿ.

  [Reply]

  VA:F [1.9.22_1171]
  Rating: +1 (from 1 vote)
 7. ಈಚ ಭಾವ
  ಈಚ ಭಾವ ಬೆತ್ತಸರವು

  ಏ ಒಪ್ಪಣ್ಣ ಭಾವ.. ಈಗಾಣ ಬುಲೆಟು ಬೈಕಿಂಗೆ ಆ ನಮುನೆ ಶಬ್ದ ಇಲ್ಲೆ.. ನಾವೊಂದರಿ ಒಟ್ಟಿಂಗೆ ಎಲ್ಯಾದ್ರೂ ಹೋಪ. ಆವಗ ಗೊಂತ್ತಾವ್ತು ಇದಾ..!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಪವನಜಮಾವಶಾ...ರೀಅನುಶ್ರೀ ಬಂಡಾಡಿಶಾಂತತ್ತೆvreddhiಕಜೆವಸಂತ°ವೆಂಕಟ್ ಕೋಟೂರುಚೂರಿಬೈಲು ದೀಪಕ್ಕಪುತ್ತೂರುಬಾವಶ್ಯಾಮಣ್ಣಬಟ್ಟಮಾವ°ಅಕ್ಷರ°ಚುಬ್ಬಣ್ಣಕೆದೂರು ಡಾಕ್ಟ್ರುಬಾವ°ಸರ್ಪಮಲೆ ಮಾವ°ಗಣೇಶ ಮಾವ°ಶ್ರೀಅಕ್ಕ°ಕಳಾಯಿ ಗೀತತ್ತೆಹಳೆಮನೆ ಅಣ್ಣಕೇಜಿಮಾವ°ಮಂಗ್ಳೂರ ಮಾಣಿಎರುಂಬು ಅಪ್ಪಚ್ಚಿಡಾಗುಟ್ರಕ್ಕ°ಅನು ಉಡುಪುಮೂಲೆಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ