ಭಾಷೆಯ ಅವಾಂತರ

April 18, 2017 ರ 12:36 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಮೊಬೈಲಿಲ್ಲಿ  ಕಳುಸಿದ  ಲಘು ಬರಹ ಇಲ್ಲಿದ್ದು. ನಿಂಗಳ ಒಪ್ಪ ಕೊಟ್ಟು ಪ್ರೋತ್ಸಾಹಿಸಿ
-ಶರ್ಮಪ್ಪಚ್ಚಿ

ಭಾಷೆಯ ಅವಾಂತರಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

ನಮ್ಮ ಬದುಕಿಲ್ಲಿ ಅದೆಷ್ಟೋ ಘಟನೆಗೊ ಮರೆಯಲಾರದ್ದದು ಇರ್ತು.ಕೆಲವು ಘಟನೆಗೊ ನಮಗೆ ದುಃಖ ತಪ್ಪದಾದಿಕ್ಕು. ಕೆಲವು ನೆಗೆ ತರ್ಸುದುದೆ ಇರ್ತು. ಹಾಸ್ಯವ ಹಂಚಿ ಇನ್ನೊಬ್ಬರ ಮೋರೇಲೂ ಒಂದಿಷ್ಟು ನೆಗೆ ಅರಳುಸುದು ಕೂಡಾ ಒಂದು ಕಲೆ. ಆದರೆ ಎನಗೆ ಅದು ಅಭ್ಯಾಸ ಆಯೆಕಷ್ಟೆ. ಯಾವುದೇ ಭಾಷೆಯನ್ನೂ ಸರಿಯಾಗಿ ಅರ್ಥ ಗೊಂತಿಲ್ಲದ್ದೆ ಮಾತಾಡಿರೆ, ನಮಗೆ ಬಪ್ಪ ಮೆಸೇಜ್ ಗಳ ಕಣ್ಮುಚ್ಚಿ ಇನ್ನೊಬ್ಬರಿಂಗೆಕಳ್ಸಿರೆ ಕೆಲವು ಸರ್ತಿ ನಾವು ಬೆಗುಡಂಗೊ ಅಪ್ಪದು ಹೇಂಗೇಳಿಪ್ಪ ಕಥೆ ಇದು.

ಎನ್ನ ಮದುವೆ ಆದ್ದದು ಎಪ್ರಿಲ್ 15 ನೇ ತಾರೀಕಿಂಗೆ. ಹೇದ್ಸರೆ ವಿಷುವಿನ ಮರುದಿನ. ಅಂಬಗ ಪೋನು, ಮೊಬೈಲ್ ಇಲ್ಲದ್ದ ಕಾರಣ ಶುಭಾಶಯ ಹೇಳ್ಲೆ ಆರೂ ಇತ್ತಿದ್ದವಿಲ್ಲೆ. ವಿಷುವಿನ ಮರುದಿನವೇ ಆದ ಕಾರಣ ಎಂಗೊಗೇ ನೆಂಪಾಗಿಂಡಿತ್ತಷ್ಟೆ.

ಈಗ ಆರೇಳೊರ್ಷಂದ ಎನ್ನತ್ರೂ ಮೊಬೈಲ್ ಇದ್ದು. ಅಂಬಗ ಹೀಂಗೇ ಕೆಲವು ಹತ್ರಾಣ ನೆಂಟ್ರುಗೊ ಎಲ್ಲ ಮೆಸೇಜ್ ಮಾಡ್ಲೆ ಸುರು ಮಾಡಿದವು. ಎನಗು ಅದು ಭಾರೀ ಕೊಶಿಯಾಗಿಂಡಿತ್ತು.

” ಆನು ನಿಂಗಳೊಟ್ಟಿಂಗೇ ಇದ್ದರೂ  ನಿಂಗೊಗೆ ಎನ್ನ ನೆಂಪಾಗದ್ರೂ ಇವಕ್ಕೆಲ್ಲ ನೆಂಪಿದ್ದಿದಾ….” ಹೇದ್ಸು ಇವರತ್ರೂ ರೆಜಾ ಪೋರ್ಸು ಕೊಚ್ಚಿಂಡಿತ್ತಿದ್ದೆ.

” ಆತು ಮಾರಾಯ್ತಿ ಅವಕ್ಕಾದರೂ ನಿನ್ನ ನೆಂಪಿದ್ದನ್ನೇ..ಈ ಪೋನು ಬಂದ ಮತ್ತೆ ಈಚವನ ಕಣ್ಣಿಂಗೆ ಕಾಣದ್ದದಾರಿಂಗೇಳಿ ನೋಡಿದ್ದೆಯಾ” ಕೇಳಿದವು.

“ನಿಂಗೊ ಏವಗಳೂ ಹೀಂಗೇ…. ಎನ್ನ ನೆಂಟ್ರುಗೊಕ್ಕೆಲ್ಲ ಎನ್ನತ್ರೆಷ್ಟು ಪ್ರೀತಿ.ನಿಂಗೊಗೆ ಅದು ಕಾಂಬಗ ಹುಳ್ಕಪ್ಪದಲ್ದಾ” ಹೇದ್ಸೆರಡು ದೊಡ್ಡ ಮಾತುದೆ ಹೇಳಿ ಕಣ್ಣು ಮೂಗು ಉದ್ದಿಕೊಂಡೆ.

ಅವು ಎನ್ನತ್ರೆ ಅಷ್ಟು ಪ್ರೀತಿಲಿ ಮೆಸೇಜ್ ಕಳ್ಸುಗ ಆನೂದೆ ಅವಕ್ಕೆ ಕಳ್ಸದ್ರೆ ಹೇಂಗಕ್ಕೂಳಿ ಮೊಬೈಲ್ ಹಿಡುದು ಗುರುಟುದರ್ಲಿ ಎನ್ನ ಕೆಲಸಂಗೊ ಪೂರಾ ಬಾಕಿಯಾತು.

ಹಾ….ಈಗ ಕಥೆ ಎಲ್ಲೆಲ್ಲಿಗೋ ಹೋಗಿ ಎಂಗಳ ಗುಂಪೆಗುಡ್ಡೆ ಹತ್ತುಲೆ ಹೆರಟತ್ತನ್ನೇ….

ಅಲ್ಲಿಗೆ ಇನ್ನೊಂದರಿ ಹೋಪ. ಈಗ ಪುನಾ ಈ ವಿಶಯಕ್ಕೇ ಬಪ್ಪ. ನಾಕೊರಿಶ ಮೊದಲೊಂದರಿ ವಿಷು ಹಬ್ಬ ಎಪ್ರಿಲ್15  ಕ್ಕೆ ಬಂದದು ನಿಂಗೊಗೆಲ್ಲ ನೆಂಪಿದ್ದಾದಿಕ್ಕು. ನಿಂಗೊಗೆ ನೆಂಪಿಲ್ಲದ್ರೂ ಈ ಕಥೆಯ ನಾಯಕ….!!!!

ನಾಯಕ ಹೇಳಿರೆ ಜಾತಿ ಹೇದ್ಸು ಗ್ರೇಶೆಡಿ.ಇಂಗ್ಲಿಷ್ ಲಿ ಹೇಳ್ತವಲ್ಲದಾ….ಅದಂತೋ ಹೀರೋ ಹೇದ್ಸೋ ಮತ್ತೋ….ಹಾಂ….ಅದುವೇ….ಅಲ್ಲಲ್ಲ ಅವನೇ…..

ಎಲ್ಲೋರೂ ಅವಕ್ಕವಕ್ಕೆ ಬಂದ ಮೆಸೇಜ್ ಗಳ ಅಂತೇ ಇನ್ನೊಬ್ಬಂಗೆ ಕಳುಗುದೂಳಿ ಎನಗಷ್ಟರ ವರೆಗೂ ಗೊಂತಿತ್ತಿದ್ದಿಲ್ಲೆ .

ಎಂಗಳ ಸಂಬಂಧಿಕರು ಕೆಲವು ಜೆನ ಮಲಯಾಳಿಗೊ. ಅಜ್ಜಂದ್ರೆಲ್ಲ ಇಪ್ಪಗ ಮಾತಾಡಿಂಡಿದ್ದ ಕನ್ನಡ ಮಕ್ಕಳ ಕಾಲಕ್ಕೆ ಮಾತಾಡಿರೆ ಅರ್ಥಾವ್ತೂಳಿ….ಹೇಳಿ ಹೇಳಿ ಪುಳ್ಳಿಯಕ್ಕಳ ಕಾಲಕ್ಕಪ್ಪಗ *ಕನ್ನಡ ಅರಿಯೂಲ್ಲ* ಹೇಳಿಯಾತು.

ಹಬ್ಬಂಗಳ ಸಮಯಲ್ಲಿ ಶುಭಾಶಯ ಮೆಸೇಜ್ ಕಳ್ಸಿ ಮೊಬೈಲ್ ಕಂಪೆನಿಯವರ ಹೊಟ್ಟೆ ತುಂಬುಸುದು ನಮ್ಮ ಅಭ್ಯಾಸ ಅಲ್ಲದಾ..ಹಾಂಗೇ ಈ ಕಥೆಯ ಹೀರೋದೆ ಮೆಸೇಜ್ ಮಾಡಿದ. ಹೀರೊ ಹೇದ್ಸರೆ ಅಂವ  ದೊಡ್ಡ ಆಯಿದಾಂಯಿಲ್ಲೆ. ಬರೀ ಪಿ.ಯು.ಸಿ.ಕಲಿವದಷ್ಟೆ. ವಿಷುವಿನ ಮುನ್ನಾಳದಿನವೇ ಎನಗೆ ಕನ್ನಡಲ್ಲಿ ವಿಷು ಹಬ್ಬದ ಶುಭಾಶಯ ಹೇದ್ಸು ಅವನ ಮೆಸೇಜ್ ಬಂತು.ಅವನ ಮೆಸೇಜ್ ನೋಡಿ ಆನು ಗೆಡ್ಡಕ್ಕೆ ಕೈ ಮಡುಗಿ ಕೂದೆ. ಎಂತಾತಿದಕ್ಕೇದ್ಸು ಗ್ರೇಶೆಡಿ.

ಕನ್ನಡಲ್ಲಿ ಒಂದು ಅಕ್ಷರ ಮಾತಾಡ್ಲೆಡಿಯದ್ದವ ಎನಗೆ ಕನ್ನಡಲ್ಲಿ ಮೆಸೇಜ್ ಮಾಡಿದಾಳಿಯಪ್ಪಗ ಹಾಂಗಪ್ಪದು ಸಹಜ ಅಲ್ಲದಾ….?

ಎಲ!!ಇವನೇ….ಏವಗ ಇಷ್ಟು ಲಾಯ್ಕ ಕನ್ನಡ ಕಲ್ತೀತಪ್ಪಾಳಿ ಗ್ರೇಶಿ ಮೆಸೇಜ್ ಪೂರ್ತಿ ಓದಿದೆ.“ವಿಷು ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ನಿಮಗೂ ನಿಮ್ಮ ಮನೆಯವರಿಗೂ ಆದರದ ಸ್ವಾಗತ” ಳಿಯೂ ಬರದ್ದ.

ಎನಗೆ ಕೊಶಿಯಾತು. ಮಲಯಾಳಿಗೊ ಕನ್ನಡ ಕಲ್ತವನ್ನೇ.ಇವರತ್ರೂ ಹೇಳಿಕೊಂಡೆ.ವಿಷುವಿಂಗೆ ಅವರ ಮನಗೋಪಲೆ ಹೇಳಿಕೆ ಕೂಡ ಕನ್ನಡಲ್ಲೇ ಹೇಳಿದ್ದ. ಇವರತ್ರೆ ಹೇದ್ಸೆಂತಕೆ ಗೊಂತಿದ್ದಾ…. ಅವು ಏವಗಲೂ ನಿನ್ನ ನೆಂಟ್ರುಗೊಕ್ಕೆಲ್ಲ ಭಾಶೆಯಿಲ್ಲೆಳಿ ನೆಗೆ ಮಾಡ್ತವಲ್ಲದಾ..ಅದಕ್ಕೆ. ಇವಂಗೊಬ್ಬಂಗಾದರೂ ಭಾಶೆಯಿದ್ದೂಳಿ ಅವಕ್ಕೂ ಗೊಂತಾಗಲಿಳಿ.

ಅವು ನೆಗೆ ಮಾಡಿದವು. “ಅಂವ ಕನ್ನಡ ಕಲ್ತಿದಾಳಿ ನಿನಗೆಂತ ಧೈರ್ಯ? ಆರಾರು ಕಳ್ಸಿದ್ದರ ನಿನಗೆ ಕಳ್ಸಿದ್ದಾದಿಕ್ಕು.”

ಅಷ್ಟು ಬೇಗ ಸೋಲೊಪ್ಪಲೆ ಮನಸು ಬತ್ತೋ?

“ಸುಮ್ಮನೇ ನಿಂಗೊಗೆನ್ನ ನೆಂಟ್ರ ತಮಾಶೆ ಮಾಡ್ಲೆ ಮನಸು ಬತ್ತನ್ನೇ….ಅವಕ್ಕೆಲ್ಲ ಕನ್ನಡ ಹೇದ್ಸರೆ ಅಭಿಮಾನ ಇದ್ದು. ಕಲಿಯೇಕೂಳಿ ಮನಸ್ಸಿದ್ದರಾತು. ಹಾಂಗೆ ಕಲ್ತವು ಹೇಳಿಕೊಂಡೆ.

” ಹಾಂಗಾರೆ ಒಳ್ಳೆದಾತು.ನೀನುದೆ ಅವಂಗೆ ಕನ್ನಡಲ್ಲೇ ಕಳ್ಸು ಹೇಳಿದವು. ಭಾರಿ ಕೊಶಿಲಿ ಬರದೆ “ನಿಮಗೂಶುಭಾಶಯ ನಮ್ಮ ಮದುವೆ ವಾರ್ಷಿಕವೂನಾಳೆಯಾದುದರಿಂದನೀವು ಇಲ್ಲಿ ಬನ್ನಿ” ಕಳ್ಸಿಕ್ಕಿ ಆನೆನ್ನ ಕೆಲಸಕ್ಕೋದೆ. ರೆಜಾ ಹೊತ್ತಪ್ಪಗ ತಮ್ಮ ಪೋನು ಮಾಡಿ ನೆಗೆ ಮಾಡ್ಲೆ ಸುರು ಮಾಡಿದ.

“ಎಂತ ವಿಶಯ ಹೇಳದ್ದೆ ಅಂತೇ ನೆಗೆ ಮಾಡುದೆಂತಕೆ” ಕೇಳಿದೆ..

ನೀನು ಆರಿಂಗೆ ಕನ್ನಡಲ್ಲಿ ಮೆಸೇಜ್ ಮಾಡಿದ್ದೆ ಕೇಳಿದ.

ಹಾ….ಅವನ ಹೆಸರೇಳಿ ಅಂವ ಎನಗೆ ಕನ್ನಡಲ್ಲಿ ಕಳ್ಸಿದ ಕಾರಣ ಕಳ್ಸಿದೆ. ಈಗ ಸರೀ ಕನ್ನಡ ಕಲ್ತಿದಲ್ದಾ ಕೇಳಿದೆ.

ತಮ್ಮಂಗೆ ನೆಗೆ ತಡವಲೇ ಎಡಿಯ. “ಅದರ ಆನವಂಗೆ ಕಳ್ಸಿದ್ದು. ಈಗ ನೀನು ಕಳ್ಸಿದ್ದರ ಎನಗು ಕಳ್ಸಿದ್ದ. ಬೇರೆ ಕನ್ನಡ ಗೊಂತಿಪ್ಪ ಅವನ ಜೊತೆಕ್ಕಾರಂಗೊಕ್ಕೂ ಕಳುಗಿ ಮಾಣಿ ಸೋತು ಹೋಯಿದ. ಎಲ್ಲರೂ ಅವನತ್ರೆ ನಿನಗೇವಗ ಮದುವೆಯಾದ್ದು ಕೇಳ್ತವಾಡ. ಹಾಂಗೆ ಸರಿಯಾಗಿ ಅರ್ಥ ಎಂತರಾಳಿ ಎನಗೆ ಪೋನ್ ಮಾಡಿದ.” ತಮ್ಮನ ಮಾತು ಕೇಳಿಯಪ್ಪಗ ಎನಗೂ ಒಂದರಿ ನೆಗೆ ಬಂದರೂ ಅವನ ಗ್ರೇಶುಗ ಪಾಪ ಹೆದ್ಸಾತು.

ಅದರಿಂದ ಮತ್ತೆ ಪ್ರತಿ ವೊರಿಶವು ಎಪ್ರಿಲ್15 ಕ್ಕೆ ಉದಿಯಪ್ಪಗ ಮೊಬೈಲ್ ತೆಗವಗ ಅವನದ್ದೇ ಮೆಸೇಜ್ ಸುರೂ ಕಾಂಬದು.ಎನ್ನ ಹಾಂಗೆ ಅವನೂ ಅದರ ಮರದ್ದಾಯಿಲ್ಲೇಳಿ ಬೇರೆ ಹೇಳೆಡನ್ನೇ….

ಪ್ರಸನ್ನಾ ವಿ ಚೆಕ್ಕೆಮನೆ

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. Venugopal Kambaru

  ಲಾಯಕ ಆಯಿದು

  [Reply]

  ಪ್ರಸನ್ನಾ ವಿ ಚೆಕ್ಕೆಮನೆ Reply:

  ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಗೋಪಾಲ

  ಹೆ ಹ್ಹೆ,. ಲಾಯಕಾಯಿದು.

  [Reply]

  ಪ್ರಸನ್ನಾ ವಿ ಚೆಕ್ಕೆಮನೆ Reply:

  ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 3. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಪ್ರಸನ್ನಾ, ಲಾಯ್ಕಾಯಿದು. ನಿನ್ನ ಕವನ ಕಟ್ಟುವ ಕೌಶಲವ ಇಲ್ಲಿ ತೋರ್ಸಲಕ್ಕನ್ನೆ? ದಿನ್ಕಕೊಂದರ ಹಾಂಗೆ?

  [Reply]

  VA:F [1.9.22_1171]
  Rating: 0 (from 0 votes)
 4. ಪ್ರಸನ್ನಾ ವಿ ಚೆಕ್ಕೆಮನೆ

  ಪ್ರಯತ್ನ ಮಾಡ್ತೆ ಅತ್ತೇ….

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°

  ಕಥೆ ಓದಿಕ್ಕಿ ಹಿ ಹಿ ಹಿ ಹೇದೆ ಆನಿಲ್ಲಿಂದ

  [Reply]

  ಪ್ರಸನ್ನಾ ವಿ ಚೆಕ್ಕೆಮನೆ Reply:

  ಗ್ರೇಶುಗ ಈಗಲೂ ನೆಗೆ ಬತ್ತು. ಹಾಂಗಿದ್ದ ಅನುಭವ ಅದು.

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  S.K.Gopalakrishna Bhat

  ಭಾರೀ ಲಾಯ್ಕ ಆಯಿದು.

  [Reply]

  ಪ್ರಸನ್ನಾ ವಿ ಚೆಕ್ಕೆಮನೆ Reply:

  ಧನ್ಯವಾದ ಅಣ್ಣಾ….ಕೊಶಿಯಾತು ನಿಂಗಳ ಪ್ರತಿಕ್ರಿಯೆ ನೋಡಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ನೀರ್ಕಜೆ ಮಹೇಶಅಜ್ಜಕಾನ ಭಾವಮಾಲಕ್ಕ°ಅನುಶ್ರೀ ಬಂಡಾಡಿನೆಗೆಗಾರ°ವಸಂತರಾಜ್ ಹಳೆಮನೆಬೋಸ ಬಾವಚುಬ್ಬಣ್ಣಜಯಗೌರಿ ಅಕ್ಕ°ಶರ್ಮಪ್ಪಚ್ಚಿದೊಡ್ಡಭಾವಗೋಪಾಲಣ್ಣಕಾವಿನಮೂಲೆ ಮಾಣಿಸಂಪಾದಕ°ದೊಡ್ಡಮಾವ°ಗಣೇಶ ಮಾವ°vreddhiಪುಣಚ ಡಾಕ್ಟ್ರುಶುದ್ದಿಕ್ಕಾರ°ಪವನಜಮಾವಕಳಾಯಿ ಗೀತತ್ತೆಶಾಂತತ್ತೆಚೆನ್ನಬೆಟ್ಟಣ್ಣಸುವರ್ಣಿನೀ ಕೊಣಲೆಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ