ಭಾಗ 13 : ಅಂತ್ಯೇಷ್ಟಿ : ಸಂಸ್ಕಾರಂಗೊ

ಅಂತ್ಯೇಷ್ಟಿ

ಅಂತ್ಯೇಷ್ಟಿ ಹೇಳ್ವದು ಮನುಷ್ಯ ಜೀವನದ ಅಕೇರಿಯಾಣ ಸಂಸ್ಕಾರ. ದೇವತೆಗಳ ಹೊರತು ಪಡಿಸಿ, ಉಳಿದ ಎಲ್ಲಾ ಜೀವ ರಾಶಿಗೊ ತನ್ನ ಪೂರ್ವಾರ್ಜಿತ ಕರ್ಮಾನುಸಾರವಾಗಿ ಯಾವುದೇ ದೇಹವ ಧರಿಸಿದ್ದರೂ, ನಿಸರ್ಗನಿಯಮಾನುಸಾರವಾಗಿ ಒಂದು ನಿರ್ದಿಷ್ಟಕಾಲಾವಧಿಯ ನಂತರ ಆ ದೇಹವ ತೊರವಲೇಬೇಕು. ಆತ್ಮವೊಂದು ಮಾನವ ದೇಹವ ಧರಿಸಿ, ಉದ್ದೇಶಿತ ವ್ಯವಹಾರವ ನಡೆಸಿ, ನಿರ್ದಿಷ್ಟ ಕಾಲಾವಧಿಯನಂತರ ಆ ದೇಹವ ತೊರೆದಪ್ಪಗ  ಆ ವ್ಯಕ್ತಿ ಅವಸಾನ ಹೊಂದಿದ ಹೇಳಿ ಹೇಳುವದು. ಆ ದೇಹವಾಸಿ ಆಗಿದ್ದ ಆ ಆತ್ಮದ ಉನ್ನತಿಗೆ ಆ ದೇಹ ಉತ್ಪತ್ತಿ ಅಪ್ಪಂದ ಮದಲೇ ಸುರುಮಾಡಿದ ಗರ್ಭಾಧಾನಾದಿ ಸಂಸ್ಕಾರ ಕ್ರಿಯೆಗೊ ಪೂರ್ಣವಾಗಿ, ಆ ದೇಹಲ್ಲಿ ವ್ಯವಹರಿಸಿದ ಆತ್ಮವು, ಈ ದೇಹಮೋಹಂದ ಪಾರಾಗಿ, ತಾನು ಮಾಡಿದ ಕರ್ಮಾನುಸಾರವಾಗಿ ಮುಂದಾಣ ಫಲವ ಅನುಭವುಸಲೆ ಸಿದ್ಧ ಆವ್ತು.  ಈ ದೇಹಂದ ಅಗಲಿದ ಆತ್ಮಕ್ಕೆ ಇದುವರಗೆ ತನಗೆ ಆಶ್ರಯ ನೀಡಿದ ದೇಹದ, ಮೋಹವ ಬಿಡಿಸಿ, ಮುಂದಾಣ ಪಯಣಕ್ಕೆ ಅಣಿಗೊಳುಸುವ ಕ್ರಿಯೆಯೇ – ‘ಅಂತ್ಯೇಷ್ಟಿ’.

ಜೀವ, ಆತ್ಮ ಎಲ್ಲಾ ಸುಳ್ಳು, ನಮ್ಮ ಶರೀರಲ್ಲಿ ನೈಸರ್ಗಿಕ ಚೈತನ್ಯ ಉಡುಗಿ ಹೋದ್ದರಿಂದ ದೇಹದ ಚಟುವಟಿಕೆ ಸ್ತಬ್ದ ಆತು, ಚೈತನ್ಯಕ್ಕೆ ಬೇಕಪ್ಪ ಆಮ್ಲಜನಕ ಕೊರತೆಯಿಂದಾಗಿ ಮೆದುಳು ನಿಷ್ಕ್ರಿಯ ಆತು, ಇದುವೇ ಸಾವು ಹೇಳಿ ವಿಚಾರವಾದಿಗಳ ನಂಬಿಕೆ ಆಗಿದ್ದರೂ, ಚೈತನ್ಯ ಉಡುಗಿದ ಈ ಮೃತ ಕಾಯವ ಹಾಂಗೇ ಬಿಟ್ಟರೆ, ದುರ್ನಾತ, ಪರಿಸರ ಕಲುಷಿತ ಆವ್ತು ಹೇಳುವುದರ ಒಪ್ಪುತ್ತವು.  ಆದ್ದರಿಂದಲೇ, ಮಣ್ಣಿನಡಿಲಿ ಹೂಳುವದು, ಬೆಂಕಿಯಲ್ಲಿ ಸುಡುವದು ಅತ್ಯಗತ್ಯ ಹೇಳಿ ಅವರವರ ಸಂಪ್ರದಾಯ ಪ್ರಕಾರ ಮಾಡಿದ್ದವು. ಬೆಂಕಿಯಲ್ಲಿ ಸುಡುವಾಗಲೂ ದೇಹದ ಚರ್ಮ ಮಾಂಸಾದಿಗಳಿಂದ ದುರ್ವಾಸನೆ ಹರಡುತ್ತು ಹೇಳ್ವದು ನಿರ್ವಿವಾದ. ವ್ಯಕ್ತಿಯ ದೇಹಾಂತ್ಯದ ನಂತರ ಉಂಟಪ್ಪ ಇಂಥ ಪರಿಸರದೋಷಂಗಳ ನಿವಾರಣೆ ಮಾಡುವದಕ್ಕಾಗಿಯೇ ನಮ್ಮ ಶಾಸ್ತ್ರ ದೇಹಾಂತ್ಯ ಸಂಸ್ಕಾರವ ರೂಢಿಗೆ ತಂದದಡ.

ವೇದೋಕ್ತಕ್ರಮಲ್ಲಿ ಅಂತ್ಯೇಷ್ಟಿಯ ಆಚರುಸುವಾಗ ಮೃತ ವ್ಯಕ್ತಿಯ ದೇಹ ತೂಕಕ್ಕೆ ಸಮವಾದ ವಾ ಅಧಿಕ ಪ್ರಮಾಣದ ತುಪ್ಪ, ಪರಿಮಳ ಸೂಸುವ ಅಗರು, ತಗರು, ಗಂಧ, ಚಂದನ, ಕರ್ಪೂರ, ಕಸ್ತೂರಿ, ಕೇಸರಿ ಇತ್ಯಾದಿ ಸುಗಂಧ ದ್ರವ್ಯಂಗಳ ತುಪ್ಪ ಪ್ರಮಾಣಕ್ಕೆ ಅನುಗುಣವಾಗಿ ತುಪ್ಪದೊಟ್ಟಿಂಗೆ ಸೇರುಸುವದಡ. ಇದರ ಜೊತೆಲಿ ಕರ್ಪೂರ, ಪಾಲಾಶ, ಇತ್ಯಾದಿ ಸುಗಂಧ ಮರಂಗಳ ಒಂದು ಅಂದಾಜು ದೇಹತೂಕದ ಎರಡು ಪ್ರಮಾಣ ಉಪಯೋಗುಸುವದಡ. ಶವಕ್ಕೆ ಅಂತ್ಯ ಸ್ನಾನ ಮಾಡುಸಿ ಚಂದನಾದಿ ಸುಗಂಧಲೇಪನ ಮಾಡಿ ನೂತನ ವಸ್ತ್ರಧಾರಣ ಮಾಡಿಸಿ, ಶವವ ಶ್ಮಶಾನಕ್ಕೆ ಸಾಗುಸಿ, ಅಲ್ಲಿ ಕ್ರಮಬದ್ಧವಾಗಿ ಚಿತೆಯ ಏರ್ಪಡಿಸಿ, ಶವವ ಚಿತೆಯ ಮೇಲೆ ಇರಿಸಿ, ಸೌದಿ, ಸುಗಂಧ ಮರಂಗಳ ಅದರ ಮೇಗಂದಲೂ ಜೋಡುಸಿ, ಅಲ್ಲಲ್ಲಿ ಕರ್ಪೂರ ಇರಿಸಿ (ಅಣು ವಿಕಿರಣವ ತಡೆಹಿಡುದು ಪರಿಸರ ಶುದ್ಧಗೊಳುಸುವ ಶಕ್ತಿ ಕರ್ಪೂರಕ್ಕೆ ಇದ್ದು ಹೇಳಿ ನಾವು ಮದಲೊಂದು ಶುದ್ಧಿಲಿ ಓದಿದ್ದು), ಶಿರೋಭಾಗಂದ ಪಾದದವರೇಂಗೂ ಕರ್ಪೂರ ಮಡುಗಿದ್ದಲ್ಲಿ ತುಪ್ಪದ ದೀಪದ ಮೂಲಕ ಬೆಂಕಿಯ ಹೊತ್ತುಸುವದು. (ಔಪಾಸನ ಇದ್ದರೆ ಔಪಾಸನಕರ್ಮ ಲೋಪ ಪ್ರಾಯಶ್ಚಿತ್ತ ಮಾಡಿ ಔಪಾಸನ ಸಮಾರೋಪ ಮಾಡಿ ಅದರಿಂದ ಚಿತಾಗ್ನಿಯ ಮಾಡುವದು, ಔಪಾಸನ ಇಲ್ಲದ್ದರೆ ಲೌಕಿಕಾಗ್ನಿ) ಮಂತ್ರಯುಕ್ತವಾಗಿ ಆಜ್ಯಾಹುತಿ ನೀಡಿ ಚಿತಾಗ್ನಿ ಪ್ರಜ್ವಲ ಗೊಳುಸುವದು. ಮತ್ತೆ ನಾಲ್ಕು ಸುತ್ತಿನಿಂದಲೂ ಮಂತ್ರ ಪೂರ್ವಕ ಆಜ್ಯಾಹುತಿ ಕೊಡುವದಡ. ಶವವು ಸಂಪೂರ್ಣವಾಗಿ ದಹಿಸಿ ಭಸ್ಮ ಅಪ್ಪನ್ನಾರವೂ ಆಜ್ಯಾಹುತಿ ಮಾಡಿಗೊಂಡಿಪ್ಪದಡ. ಮತ್ತೆ ಎಲ್ಲೋರು ಸ್ನಾನ ಮಾಡಿ, ಬಟ್ಟೆ ಶುಚಿ ಮಾಡಿ ಶ್ಮಶಾನ ಬಿಡುವದು. ಮನೆಯ ಲಾಯಕ ತೊಳದು ಸ್ವಸ್ತಿವಾಚನ, ಶಾಂತಿಕರಣ ಮಂತ್ರ ಹೇಳಿ ಶಾಸ್ತ್ರೋಕ್ತ ವಿಧಿಲಿ ಅಗ್ನಿಪ್ರತಿಷ್ಠಾಪನೆ ಮಾಡಿ. ಆಜ್ಯಾಹುತಿ ಕೊಟ್ಟು ಹೋಮ ಮಾಡುವದಡ. ಇದರಿಂದ ಮೃತನ ವಾಯುವು ಹೊರಹೋಗಿ ಶುದ್ಧವಾಯು ಮನೆಯೊಳ ಪ್ರವಹಿಸುತ್ತು, ಎಲ್ಲರ ಚಿತ್ತವೂ ಶುದ್ಧಿ ಆವ್ತು  ಹೇಳಿ ಶಾಸ್ತ್ರ.  ಮೂರನೇ ದಿನ ಶ್ಮಶಾನಕ್ಕೆ ತೆರಳಿ, ಚೆತೆಂದ ಅಸ್ಥಿಗಳ ಸಂಗ್ರಹಿಸಿ ಒಂದು ಅಳಗೆಲಿ ತುಂಬಿಸಿ ಶ್ಮಶಾನಲ್ಲಿ ಮಡುಗಿ ಬೂದಿ ಕೂಡಿ ಮಣ್ಣುಕೂಡುವದು. ಅಸ್ಥಿ, ಬೂದಿಯ ಪವಿತ್ರ ನದಿಲಿ, ಸಮುದ್ರಲ್ಲಿ ಹಾಕುವುದು ಇತ್ಯಾದಿ ನಂಬಿಕೆಯೂ ಇದ್ದು. ಸಾಮಾಜಿಕ ಮತ್ತು ಪರಿಸರ ಹಿತ ದೃಷ್ಟಿಂದ ಇದರ ಮಾಡುವುದು ಕಡಮ್ಮೆ. ಮೃತಸಂದರ್ಭಲ್ಲಿ ವೈದಿಕ ಕ್ರಮ ಮಾಡ್ಳೆ ಎಡಿಗಾಗದ್ದೆ ಹೋದಲ್ಲಿ ಮುಂದೆ ಶುದ್ದದ ಒಟ್ಟಿಂಗೆ ಅಸ್ಥಿಸಂಚಯನ ಹೇಳಿ ಸುರುವಿಂದ ವೈದಿಕ ವಿಧಾನ ಮೂಲಕ ಸಂಸ್ಕಾರ ಮಾಡುವದು ಕ್ರಮ.

ಜೀವವು ಶರೀರವ ತೊರೆದಕೂಡಲೆ ಅದಕ್ಕೆ ಪ್ರೇತತ್ವ ಪ್ರಾಪ್ತವಾವ್ತು. ಈ ಪ್ರೇತವು ಪುನಃ ಮೃತಶರೀರವ ಸೇರಿ ಪುನಃ ಜೀವನ ಸಾಗುಸುವ ಅವಕಾಶ ಇಲ್ಲೆ. ಅದಕ್ಕಾಗಿಯೇ, ಶವ ದಹನ ಮಾಡುವ ಮದಲು ಮಾಡುವ ಪ್ರೇತಕರ್ಮಂಗೊ ಈ ಪ್ರೇತಕ್ಕೆ ಯುಕ್ತವಾದ ಶರೀರ ಪ್ರಾಪ್ತಿ ಆಯೇಕು ಹೇಳ್ವ ಭಾವನೆಂದಡ.

ವ್ಯಕ್ತಿಯ ದೇಹಾಂತ್ಯ ದಿನಂದ ಮೊದಲ್ಗೊಂಡು ಶವದಹನ, ಪ್ರೇತಕರ್ಮ, ದಶರಾತ್ರ, ಏಕಾದಶಾಹ, ದ್ವಾದಶಾಹ, ಸಪಿಂಡೀ ಕರ್ಮ, ಮಾಸಿಕ, ಅರೆಮಾಸಿಕ, ವರ್ಷಾಂತ, ಸಾಂವತ್ಸರಿಕ ಶ್ರಾದ್ಧ, ಗಯಾಶ್ರಾದ್ಧಾದಿ  ಉತ್ತರ ಕ್ರಿಯೆಗೊ ಆಚರುಸುವುದು ವೈದಿಕ ಕ್ರಿಯೆಗೊ. ಇದರ ಬಗ್ಗೆ ವಿವರ ಮತ್ತೆ ಮುಂದಕ್ಕೆ ಪ್ರತ್ಯೇಕ ಚಿಂತನೆ ಮಾಡುವೋ°

ಜೀವವು ದೇಹವ ತ್ಯಜಿಸಿದ ಮತ್ತೆ ಮುಂದೆ ಎಂತ ಆವ್ತು ಹೇಳಿ ಮದಲಿಂದಲೂ ಮುಗಿಯದ್ದ ಜಿಜ್ಞಾಸೆ. ನಮ್ಮ ಸನಾತನ ಧರ್ಮಶಾಸ್ತ್ರ ಪ್ರಕಾರ, – ವ್ಯಕ್ತಿಯು ಮೃತ ಪಟ್ಟನಂತರ, ಅಗೋಚರ ಆಗಿಪ್ಪ ಅವನ ಆತ್ಮಕ್ಕೆ ಸ್ಥೂಲ ದೇಹದ ಆಸರೆ ತಪ್ಪಿ ಗೊಂದಲಲ್ಲಿ ಇರ್ತು. ಈ ಗೊಂದಲವ ತಪ್ಪುಸಲೆ ಅದಕ್ಕೊಂದು ಸೂಕ್ಷ್ಮ ಶರೀರವ ಕಲ್ಪಿಸಲಾವ್ತಡ. ಇದಕ್ಕೆ ‘ಪ್ರೇತತ್ವ’ ಹೇಳಿ ಹೆಸರು. ಪ್ರೇತತ್ವ ಹೇಳ್ವದು ಬಹಳ ಕಷ್ಟದಾಯಕ ನೆಲೆ. ಯಾವುದೇ ಉತ್ತಮ ಸಂಸ್ಕಾರ ಪಡದ ಆತ್ಮಕ್ಕೂ ಈ ಪ್ರೇತತ್ವಂದ ಮುಕ್ತಿ ಸಿಕ್ಕುವನ್ನಾರ ಸಮಾಧಾನ ಇಲ್ಲೆಡ. ಸ್ಥೂಲದೇಹಿಗಳಾದ ನವಗೆ ನಮ್ಮ ಹಸಿವು ಬಾಯಾರಿಕೆ ನೀಗುಸಲೆ ಕಳ್ಳತನ ಮಾರ್ಗವೂ ಇರುತ್ತು, ಆದರೆ, ಸೂಕ್ಷ್ಮ ದೇಹಿಯಾಗಿಪ್ಪ ಪ್ರೇತಂಗೊಕ್ಕೆ ಅದೂ ಅವಕಾಶ ಇಲ್ಲೆಡ. ಆಹಾರ ವಸ್ತುಗಳ ಕೇವಲ ಮೂಸಿ ನೋಡಿಗೊಂಡ ಮಾತ್ರಂದ ಅವು ಅವುಗಳ ಹಸಿವೆ ನೀಗಿಸಿಗೊಂಬಲಾವ್ತರೂ, ವೇದಮಂತ್ರಂಗೊ, ದೇವತಾ ಸ್ತೋತ್ರಂಗೊ ನಡಕ್ಕೊಂಡಿಪ್ಪಲ್ಲಿಗೆ ಅವಕ್ಕೆ ಪ್ರವೇಶ ಇಲ್ಲೆಡ. ನದಿ, ಕೆರೆ, ಬಾವಿ ಮುಂತಾದ ನೀರು ಮಾತ್ರ ಸೇವಿಸಿ ತೃಷೆ ತೀರಿಸಿಗೊಂಬಲೂ ಇಲ್ಲೆಡ. ಅಶುದ್ಧ ನೀರು, ಮತ್ತು ಅವುಗೊಕ್ಕೆ ಕೊಡುವ ತರ್ಪಣ ನೀರು ಮಾತ್ರ ಅವಕ್ಕೆ ಸಲ್ಲುತ್ತಡ. ಮೃತರ ಉತ್ತರಾಧಿಕಾರಿಗೊ ಮಾಡುವ ಉತ್ತರಕ್ರಿಯಾದಿಗಳಿಂದ ಪ್ರೇತತ್ವ ಕಳದು, ತನ್ನ ಕರ್ಮಫಲಾನುಸಾರ ಪಿತೃಲೋಕಕ್ಕೋ, ಸ್ವರ್ಗಕ್ಕೋ, ನರಕಕ್ಕೋ ಹೋಪದಡ. ಕೆಲವಕ್ಕೆ ಕೂಡಲೇ ಪುನರ್ಜನ್ಮ ಪಡದು ಈ ಭೂಮಂಡಲಲ್ಲಿಯೇ ಪುನಃ ಹುಟ್ಟುವದು ಇದ್ದಡ.

ಪ್ರೇತತ್ವಂದ ಮುಕ್ತಿ ಪಡದ ಆತ್ಮ ಯಾವುದೇ ಲೋಕಲ್ಲಿ ಯಾವುದೇ ರೂಪದಲ್ಲಿ ಇದ್ದರೂ ಅವಕ್ಕೆ ಈ ಲೋಕದ ಪೂರ್ವ ಜನ್ಮಂಗಳ ಸಂಬಂಧ / ಸಂಬಂಧಿಗೋ, ಉತ್ತರಾಧಿಕಾರಿಗೊಕ್ಕೂ ಇದ್ದೇ ಇದ್ದಡ. ಅದಕ್ಕಾಗಿಯೇ ಶ್ರಾದ್ಧಲ್ಲಿ ಅಗ್ನೌಕರಣ, ಹವನ – ಹೋಮ ಆಚರುಸುವದಡ. ಅಲ್ಲಿ ಮಾಡುವ ‘ಸ್ವದಾ’ ರೂಪದ ಹೋಮಲ್ಲಿ ‘ಸೋಮ’ ಪಿತೃಪೀತ ಹೇಳ್ವ ಲೋಕಕಾರಣರಾದ ದೇವತೆಗೊಕ್ಕೆ ಆಹುತಿ ಮೂಲಕ ತೃಪ್ತಿಪಡುಸುವದಡ. ಇದರ ಒಟ್ಟಿಂಗೆ ವಿಶ್ವೇದೇವ, ಪುರೂರವ, ಆರ್ದವ, ವಸು, ರುದ್ರ, ಆದಿತ್ಯ,  ಸೋಮ ಮುಂತಾದ ಪಿತೃಗಳನ್ನೂ ತೃಪ್ತಿ ಪಡುಸುವದಡ. ಒಟ್ಟಿಲ್ಲಿ, ನಮ್ಮ ಮಾತಾ-ಪಿತೃ ಮೊದಲ್ಗೊಂಡು ಸಮಸ್ತ ದೇವ, ಪಿತೃಗಣವ ಶ್ರಾದ್ಧ ಮಾಡುವಾಗ ನಿಮಂತ್ರಿತ ಬ್ರಾಹ್ಮಣರಲ್ಲಿ ಆವಾಹಿಸಿ, ಅನ್ನ, ವಸ್ತ್ರ, ದಕ್ಷಿಣೆ ದಾನಂಗಳಿಂದ ಸತ್ಕರಿಸಿ ತೃಪ್ತಿಪಡುಸುವದಾವ್ತಡ. ಹೀಂಗೆ ವರ್ಷ ವರ್ಷವೂ ನಾವು ಆಚರುಸುವ ತಿಥಿಂದ (ಶ್ರಾದ್ಧ) ಮೃತ ಆತ್ಮ ಎಲ್ಲೇ ಯಾವರೂಪಲ್ಲೇ ಇರಲಿ , ಅವಕ್ಕೆ, ನಾವು ಶ್ರದ್ಧೆಂದ ಸಲ್ಲುಸುವ ಸಕಲ ವಸ್ತು ದ್ರವ್ಯಂಗೊ ಬೇರೊಂದು ಮೂಲಂದ, ಬೇರೆ ಬೇರೆ ರೂಪಲ್ಲಿ ಹೋಗಿ ಸೇರ್ತು ಹೇಳಿ ಶಾಸ್ತ್ರ. ನಮ್ಮಿಂದ ಬಿಟ್ಟು ಹೋದ ಆತ್ಮ ಎಲ್ಲಿ ಎಷ್ಟು ದಿನ ಇರ್ತು ಹೇಳಿ ನವಗೆ ಅರಡಿಯ.  ಅದಕ್ಕಾಗಿಯೇ ಪ್ರತಿಯೊಂದು ತಲೆಮಾರಿಲ್ಲಿಯೂ ಅಪ್ಪ, ಅಜ್ಜ, ಮುತ್ತಜ್ಜ ., ಅಬ್ಬೆ, ಅಜ್ಜಿ, ಮುತ್ತಜ್ಜಿ ಹೀಂಗೆ ಮೂರು ತಲೆಮಾರಿನವರೇಂಗೆ  ಆಹ್ವಾನಿಸಿ, ಆವಾಹನೆ ಮಾಡಿ ಸತ್ಕರುಸುವದು. ಇದರಿಂದ ಅವಕ್ಕೆ ತೃಪ್ತಿಯಾಗಿ ನಮ್ಮ ಅಲ್ಲಿಂದಲೇ ಆಶೀರ್ವದಿಸಿ ನಮ್ಮ ಪ್ರಕೃತ ಜೀವನ ಸಮಸ್ಯೆ, ದಾರಿದ್ರ, ದುಃಖಂಗೊ ದೂರ ಆವ್ತು ಹೇಳಿ ನಂಬಿಕೆ.  ಪ್ರಪಂಚಲ್ಲಿ ಜನನ, ಮರಣ ಎರಡೂ ದೈವೇಚ್ಛೆ. ಇದರ ನಿಯಂತ್ರಣ ನಮ್ಮತ್ರೆ ಇಲ್ಲೆ. ಕೆಲವೊಂದು ನಕ್ಷತ್ರಲ್ಲಿ ಜನನವೋ ಮರಣವೋ ಆದರೆ, ಕುಟುಂಬದ ಇತರರಿಂಗೆ ದೋಷಡ. ಅದಕ್ಕೆ ಜ್ಯೋತಿಶಾಸ್ತ್ರಲ್ಲಿ ಹೇಳಿದ ಪ್ರಕಾರ ಪರಿಹಾರ ಮಾಡಿಗೊಂಡು ಮುಂದಾಣ ದಾರಿ ಸುಗಮಗೊಳಿಸಿಗೊಳ್ಳೆಕ್ಕಾದ್ದು ಕರ್ತವ್ಯ.

ಪರಿಸಮಾಪ್ತಿ

ಇದುವರಗೆ ಕೆಲವು ಕಂತುಗಳಲ್ಲಿ ನಾವು ನೋಡಿದ್ದು ನಮ್ಮ ಸಂಸ್ಕಾರದ ಬಗೆಗಿನ ಕಿರುಪರಿಚಯ. ಪ್ರತಿಯೊಂದು ವಿಷಯಕ್ಕೂ ಆಳವಾದ ಅರ್ಥ ಇದ್ದು ಹೇಳಿ ನಾವು ಮನಗೊಂಬಲಕ್ಕು. ಪ್ರತಿಯೊಂದು ವಿಷಯಲ್ಲಿ ಪುಟಗಟ್ಟಲೆ ತಿಳ್ಕೊಂಬ ವಿಚಾರಂಗೊ ಇದ್ದು ಹೇಳಿ ನಾವು ಮನಗಂಡತ್ತು. ಪ್ರತಿಯೊಂದು ವಿಷಯವನ್ನೂ ದೀರ್ಘವಾಗಿ ಹೇಳುವಷ್ಟರ ಅನುಭವ ಎನಗೆ ಇಲ್ಲೆ. ಅಂದರೂ ಸಂಸ್ಕಾರ ಎಂತರ ಎಂತಕೆ ಹೇಳಿ ಕಿರುಪರಿಚಯ ಮಾಡಿಗೊಂಬ ಚಿಕ್ಕ ಪ್ರಯತ್ನಕ್ಕೆ ಇಳುದ್ದದು. ಹೇಳಿದ ವಿಚಾರಂಗಳಲ್ಲಿ ಏನಾರು ಹೆಚ್ಚು ಕಡಮ್ಮೆ ಆಗಿದ್ದರೆ ದಯವಿಟ್ಟು ತಿದ್ದಿಕೊಡೆಕು ಹೇಳಿ ವಿನಮ್ರ ವಿನಂತಿ. ಈ ಶುದ್ದಿಗಳ ಚಿಕ್ಕವಾಗಿ ಚೊಕ್ಕವಾಗಿ ಬೈಲಿಲಿ ಹಾಕಲೆ ಸಹಕರಿಸದ ಗುರಿಕ್ಕಾರ್ರಿಂಗೆ ಪ್ರಥಮ ವಂದನೆ. ಶುದ್ದಿಗೆ ಸಲಹೆ ಮತ್ತು ಸೂಚನೆಗಳ ಕೊಟ್ಟ ಡಾ.ಮಹೇಶಣ್ಣಂಗೆ, ಶರ್ಮಪ್ಪಚ್ಚಿಗೆ, ಶ್ರೀ ಅಕ್ಕಂಗೆ, ಶುದ್ದಿಯ ಆಯ್ತಮಾಡಿ ಚಂದಮಾಡಿ ಹಾಕಲೆ ಸಹಕರಿಸಿದ ಅಜ್ಜಕಾನ ಭಾವಂಗೆ ಅನಂತಾನಂತ ಧನ್ಯವಾದಂಗೊ. ಪ್ರತಿ ಕಂತಿನ ಶುದ್ದಿಯ ಓದಿಗೊಂಡು  ಪ್ರೋತ್ಸಾಹದ ಒಪ್ಪಕೊಟ್ಟು ಹುರಿದುಂಬಿಸಿದ ಪ್ರತಿಯೊಬ್ಬಂಗೂ ತುಂಬು ಹೃದಯದ ಧನ್ಯವಾದಂಗೊ. ಈ ಲೇಖನಕ್ಕೆ ಎನಗೆ ಆಧಾರ ಮಾಹಿತಿಯಾಗಿ ಉಪಯೋಗಿಸಿಗೊಂಡ ಪುಸ್ತಕ – ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಪಠ್ಯ ಪುಸ್ತಕ – ‘ಹದಿನಾರು ಸಂಸ್ಕಾರಗಳು’, ಅನಂತ ಪ್ರಕಾಶನದವರ ‘ಸಂಸ್ಕಾರ ಸಾರ’, ವಿದ್ವಾನ್ ವಾಸುದೇವ ಪರಾಂಜಪೆಯವರ ‘ಸಂಸ್ಕಾರ ಸಂಜೀವಿನಿ’ ಪುಸ್ತಕಕ್ಕೂ ಚಿರಋಣಿ. ಕರಡು ಪ್ರತಿಯ ನೋಡಿ, ಸೂಕ್ತ ಸಲಹೆ – ಮಾಹಿತಿ ಕೊಟ್ಟು ಸಹಾಯ ಮಾಡಿದ ತುಪ್ಪೆಕ್ಕಲ್ಲು ಭಾವಂದ್ರಿಂಗೂ ಅನಂತಾನಂತ ಧನ್ಯವಾದಂಗೊ.

‘ದೇವನೊಬ್ಬ ನಾಮ ಹಲವು’ ಹೇಳಿ ನಂಬುತ್ತ ಹಾಂಗೆ ಬೇರೆ ಬೇರೆ ಊರಿಲ್ಲಿ ಆಚರುಸುವ ಕ್ರಮಂಗೊ ಕೆಲವು ಹಲವು ಬಗೆ ಆಗಿಕ್ಕು. ಆದರೆ ಎಲ್ಲೋರ ಮೂಲ ಉದ್ದೇಶ – ‘ಸಂಸ್ಕಾರ’. ನಮ್ಮೆಲ್ಲರ ಜೀವನದ ಗುರಿ ಒಂದೇ. ಆದರೆ, ಅದರ ಸೇರುವ ಹಾದಿ ಮಾತ್ರ ಬೇರೆ ಬೇರೆ. ಅನಿಶ್ಚಿತ, ದುರ್ಗಮ, ಕಠಿಣ ಹಾದಿಲಿ, ನಡದು ಬಳಲಿ ಬೆಂಡಾಗಿ ಹೋಪದು ಅಥವಾ ನಿಶ್ಚಿತವಾದ, ಸುಗಮವಾದ ಒಳಹಾದಿಲಿ ಸಾಗಿ ಶೀಘ್ರ ಗುರಿತಲಪುವದು ಇದು ಆಯಾ ವ್ಯಕ್ತಿಗೆ ಬಿಟ್ಟ ಸಂಗತಿ. ಆದರೆ , ಹೋಪ ದಾರಿ ಮಾತ್ರ ಸರಿಯಾದ್ದು ಆಗಿರೇಕು ಅಷ್ಟೇ.

ಎಲ್ಲೋರಿಂಗೂ ಒಳ್ಳೇದಾಗಲಿ – ಎಲ್ಲವೂ ಶುಭವಾಗಲಿ

|| ಹರೇ ರಾಮ ||

(ಮುಗುದತ್ತು)

ಕಳುದ ವಾರ :  ಭಾಗ 12: ವಿವಾಹ

http://oppanna.com/lekhana/samskara-lekhana/bhaga-12-vivaha

ಚೆನ್ನೈ ಬಾವ°

   

You may also like...

19 Responses

 1. ತೆಕ್ಕುಂಜ ಕುಮಾರ ಮಾವ° says:

  ಚೆನ್ನೈಭಾವ,

  ಅಭಿನಂದನೆಗೊ. ಎಲ್ಲ ಹದಿನಾರು ಸಂಸ್ಕಾರಂಗಳ ಬಗ್ಗೆ ಒಟ್ಟು ಹದಿಮೂರು ಕಂತಿಲಿ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದ.

  • ಚೆನ್ನೈ ಭಾವ says:

   ಪ್ರತಿಶುದ್ದಿಗೂ ಬೆಶಿ ಬೆಶಿ ಒಪ್ಪ ಕೊಟ್ಟು ಮತ್ತಾಣ ಕಂತು ಇನ್ನು ಲಾಯಕ ಬಪ್ಪ ಹಾಂಗೆ ಉತ್ತೇಜನ ಹೇಳಿ ಬ್ಯುಸಿ ಮಾಡುಸ್ಯೋಂಡು ಬಂದದು- ತೆ.ಕು ಮಾವ°. ನಿಂಗಳ ಪ್ರೋತ್ಸಾಹ ಹೀಂಗೆ ಮುಂದುವರಿಯೆಕು. ಧನ್ಯವಾದಂಗೊ.

 2. ಶರ್ಮಪ್ಪಚ್ಚಿ says:

  ನಿರಂತರವಾಗಿ ನಮ್ಮ ಸಂಸ್ಕಾರಂಗಳ ಬಗ್ಗೆ ಒಳ್ಲೆ ಮಾಹಿತಿ ಕೊಟ್ಟ ಲೇಖನ ಮಾಲೆ ಮುಗುದತ್ತು ಹೇಳುವಾಗ ಏನೋ ಕಳಕ್ಕೊಂಡ ಹಾಂಗೆ ಆವ್ತು.
  ಆದರೆ ಎಲ್ಲಾ ಲೇಖನಂಗಳೂ ಮತ್ತೆ ಮತ್ತೆ ಓದಿ ಮನನ ಮಾಡ್ಲೆ ಯೋಗ್ಯವಾದ್ದು ಮತ್ತೆ ನಮ್ಮ ಮುಂದಿನ ಸಂತತಿಯವಕ್ಕೆ ಮಾಹಿತಿ ಕೊಡೆಕಾದ ವಿಶಯಂಗಳ ಚೊಕ್ಕವಾಗಿ ಸಂಗ್ರಹಿಸಿ ಕೊಟ್ಟ ಒಳ್ಳೆ ಮಾಲಿಕೆ ಕೂಡಾ.
  ಅಬಿನಂದನೆಗೊ
  ಮುಂದೆ ಬೇರೆ ವಿಶಯಂಗಳ ಬಗ್ಗೆ ಹೀಂಗೆ ಮಾಹಿತಿಗಳ ನಿರೀಕ್ಷೆಲಿ

  • ಚೆನ್ನೈ ಭಾವ says:

   ಎಲ್ಲಾ ಶುದ್ದಿಗಳ ಓದಿ ಉತ್ತಮ ಪ್ರೋತ್ಸಾಹವನ್ನೂ ಕೊಟ್ಟು ಎಲ್ಲೋರನ್ನು ಹುರಿದುಂಬುಸುವ ಬೈಲ ಎಲ್ಲೋರ ಅಪ್ಪಚ್ಚಿ- ‘ಶರ್ಮಪ್ಪಚ್ಚಿ’ಗೆ ಎಷ್ತು ಧನ್ಯವಾದ ಹೇಳಿರೂ ಸಾಲ. ಆನುಕರಣೀಯ .

 3. pakalakunja says:

  hare raama

  • ಚೆನ್ನೈ ಭಾವ says:

   ‘ಹರೇ ರಾಮ’ . ಪಕಳಕುಂಜ ಮಾವಂಗೆ ಧನ್ಯವಾದ. ತೀರಾ ಅಪರಿಚಿತರೇನಲ್ಲ ನಾವು. ೨೦ ವರ್ಷ ಮದಲೆ ಮೀಸೆಬೈಲು, ಕಲ್ಯಟೆ, ಮೂಲಡ್ಕ, ಹೊಸಮೂಲೆ ಒಟ್ಟಿಂಗೆ ಕೆಲವು ಕೂಟಂಗಳಲ್ಲಿ ಭೇಟಿಯಾಯ್ದು. ಅಂದರೂ ನಿಂಗೊಗೆ ನೆಂಪಿರ., ಎಂತಕೆ ಕೇಳಿರೆ, ನಿಂಗೊ ನೋಡುವಾಗ ಸಣ್ಣ ಮಾಣಿ!!!!

 4. jayashree.neeramoole says:

  ಚೆನ್ನೈ ಭಾವಂಗೆ ಅನಂತ ಧನ್ಯವಾದಂಗೋ… ಸಹಕರಿಸಿದ ಇತರರಿಂಗೂ ಧನ್ಯವಾದಂಗೋ… ಇನ್ನುದೆ ಹಲವು ವಿಚಾರಂಗಳ ಬಗ್ಗೆ ಚೆನ್ನೈ ಭಾವನಿಂದ ಉತ್ತಮೋತ್ತಮ ಲೇಖನ ಮಾಲೆಗ ಮೂಡಿ ಬರಲಿ ಹೇಳಿ ಆಶಯ…

  • ಚೆನ್ನೈ ಭಾವ says:

   ಅಕ್ಕಂಗೆ ಧನ್ಯವಾದ. ನವಗೆ ಧರ್ಮಕ್ಕೆ ಸಿಕ್ಕಿದ ಬೈಲಿನ ಬೆಳೆಸಿ ಉಳಿಸಿ ಸಾರ್ಥಕಪಡುಸಿಗೊಂಬೊ. ಎಲ್ಲೋರು ಮುಂದೆಬಂದು ಹೆಚ್ಚು ಹೆಚ್ಚು ಸಂಗ್ರಹಯೋಗ್ಯ ಶುದ್ದಿಗಳ ಬರದು ಹಂಚಿಗೊಳ್ಳೆಕ್ಕೆಂಬುದೇ ಆಶಯ.

   • jayashree.neeramoole says:

    ನೂರಕ್ಕೆ ನೂರರಷ್ಟು ಸತ್ಯ… ನಮಗೆ ‘ಧರ್ಮ’ ಕ್ಕೆ ಸಿಕ್ಕಿದ ಬೈಲಿನ ಸಾರ್ಥಕಗೊಳಿಸೆಕ್ಕು… ಆ ಮೂಲಕ ಒಪ್ಪಣ್ಣನ ಶ್ರಮ ಸಾರ್ಥಕ ಆಯೆಕ್ಕು…

 5. ವಿಷ್ಣು ನಂದನ says:

  ಭಾವಾ ತುಂಬ ಒಳ್ಲೆ ಲೇಖನ ಮಾಲೆ ನಿಂಗಳದ್ದು.

  ಇಷ್ತೊಂದು ಶ್ರಮ ವಹಿಸಿ ಎಲ್ಲರಿಂಗೂ ಶುದ್ದಿ ಹೇಳಿದ್ದಕ್ಕೆ ಧನ್ಯವಾದ.

  ಎಲ್ಲ ಲೇಖನ ಓದಿದ್ದಿಲ್ಲೆ. ಪುರುಸೊತ್ತಿಲಿ ಓದೆಕ್ಕು.

  • ಚೆನ್ನೈ ಭಾವ says:

   ಎಡೆಎಡೆಲಿ ಬಂದು ಎಡಿಗಾಷ್ಟು ಓದಿ ನೀಡುವ ಮೆಚ್ಚುಗೆಯ ಒಪ್ಪಕ್ಕೆ ವಿ.ನಂದನಣ್ಣಂಗೆ ಧನ್ಯವಾದ. ಬಂದುಗೊಂಡಿರಿ.

 6. ಪೆರ್ಮುಖ ಈಶ್ವರ ಭಟ್ says:

  ೧೬ ಸಂಸ್ಕಾರ೦ಗಳ ಕುರಿತು ಸರಳವಾಗಿ,ಅರ್ಥಪೂರ್ಣ ಲೇಖನ ಒದಗಿಸಿ ಎಂಗಳ ಕಣ್ಣು ತೆರೆಸಿದ ರಾಮಕೃಷ್ಣಣ್ಣಂಗೆ ಉತ್ತರೋತ್ತರ ಅಭಿವೃದ್ಧಿ ಆಗಲಿ, ಸಮಸ್ತ ಸನ್ಮಂಗಳಗಳನ್ನೂ ಸೌಭಾಗ್ಯಗಳನ್ನೂ ದೇವರು ಕರುಣಿಸಲಿ ಹೇಳಿ ಹಾರೈಸುತ್ತೆ.ಸಮಾಜಕ್ಕೆ ಉಪಯುಕ್ತವಾದ ಹೀ೦ಗಿಪ್ಪ ಲೇಖನ೦ಗಳ ಬರವ ನಿರ೦ತರ ಸಾಮರ್ಥ್ಯವ ದೇವರು ಒದಗುಸಲಿ.

  • ಚೆನ್ನೈ ಭಾವ says:

   ಮಾವನ ಪ್ರೀತಿಯ ಒಪ್ಪಕ್ಕೆ ಹೃತ್ಪೂರ್ವಕ ಧನ್ಯವಾದ

 7. skgkbhat says:

  ಉತ್ತಮವಾದ ಶೈಲಿಲಿ ಎಲ್ಲಾ ಹದಿನಾರು ಸಂಸ್ಕಾರಂಗಳ ವಿವರಿಸಿದ ಅಣ್ಣಂಗೆ ಶುಭವಾಗಲಿ.ಅಪರ ಸಂಸ್ಕಾರಂಗಳನ್ನೂ ವಿವರಿಸೆಕ್ಕು ಹೇಳಿ ಕೋರುತ್ತೆ.

  • ಚೆನ್ನೈ ಭಾವ says:

   ಒಳ್ಳೆ ಸಲಹೆ ಗೋಪಾಲಣ್ಣ. ಈ ಬಗ್ಗೆ ಅನುಭವ ಸಾಲ. ಅಂದರೂ ಬೈಲಿಂಗೆ ಇದು ಅಗತ್ಯ ಬೇಕು. ಭಟ್ಟಮಾವನ ಮುಖತ ಕಂಡು ವಿಷಯ ತಿಳ್ಕೊಂಡು ಖಂಡಿತ ಬರವ ಪ್ರಯತ್ನ ಮಾಡುವೋ°. ಧನ್ಯವಾದ.

 8. Shama Prasad says:

  ಧನ್ಯವಾದಂಗೊ. ತುಂಬ ಚೆಂದಕೆ ಎಲ್ಲವನ್ನು ಬರದ್ದಿ. ಇನ್ನುದೆ ಹೀಂಗಿಪ್ಪ ವಿಶಯಂಗೊ ಬರಲಿ.

 9. ಸಿಂಧೂ says:

  ಒಳ್ಳೆ ಮಾಹಿತಿ… ಚುಟುಕಾಗಿ ಕೊಟ್ಟು ಸಂಸ್ಕಾರಂಗಳ ಅರ್ಥ ಬೇಗ ತಿಳ್ಕೊಂಬಲೆ ಸಹಾಯ ಆತು… ಪ್ರಿಂಟ್ ಔಟು ತೆಗದು ಮಡಿಕ್ಕೊಂಬಲಕ್ಕು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *