ಭಾಷೆ ಮಾತ್ರೆ ಬಂದ್ರೆ ಆಯ್ದಿಲ್ಲೆ ಸಂತಿಗೆ ಭಾವನೂ ಬರವು

February 7, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಜಾರ್  ಮಾಡ್ಕಳಡಿ ಬಯಲಲ್ಲಿಪ್ಪ ನೆರೆಕರೆ ನೆಂಟ್ರೆಲ್ಲವ, ಖರೇ ಹೇಳ್ತೆ ; ನನ್ಗೆ ಈ ಫೇಸ್-ಬುಕ್, ಆರ್ಕುಟ್ ದಿಂದ ಹೆರ್ಗೆ ಹೋಗಿಬುಡವು ಹೇಳ್ವಷ್ಟು ಸಿಟ್ಬಂದಿತ್ತು.
ಯೆಂಥಕ್ಕೆ ಬಲ್ರ, ಯಾವಾಗ್ ನೋಡ್ರೂ ಒಂದಲ್ಲ ಒಂದು “ಶುಭಾಶಯ ” ಹಂಚ್ತಾನೇ ಇರ್ತ್ರಪ.
ಅದ್ರಲ್ಲೂ ಈ ‘ಬರ್ತಡೇ ವಿಶ್’ ಕೇಳಿ ಕೇಳಿ ಮೈಯೆಲ್ಲಾ ಉರ್ದ್ ಹೋತು. ಮತ್ತ ಈಗೀಗ ಭಯಂಕರ ಜಾಸ್ತಿ ಆಗೋಜು ಈ ಹು.ಹ. ಪರಿಕಲ್ಪನೆ. ಹಾಂಗ್ಹೇಳಿ ಮೊದ್ದಲಿಂದ್ಲೂ ಯಾವ್ ಹಿಂದೂ ಹಬ್ಬನೂ ಅಷ್ಟು ಜೋರಾಗಿ ಮಾಡ್ತ್ರಿಲ್ಲೆ ಹೇಳಿ ಜನ್ರ ಆಕ್ಷೇಪ ತೀರಾ ಸುಳ್ಳೇನಲ್ಲ.
ಖಂಡಿತಾ ಹೌದು ಒಬ್ರ ಮನ್ಸು ಇನ್ನೊಬ್ರಿಗೆ ಚೆಲೋದ್ನ ಬಯ್ಸ್ತಾನೇ ಇವರವು. ಅದ್ರಲ್ಲಿ ಎರಡ್ಮಾತಿಲ್ಲೆ. ಆದ್ರೆ ಇಲ್ಲಿ ಆಗ್ತಾ ಇಪ್ಪದು ಹಾಂಗಲ್ಲ.
ಅಮೇರಿಕದಲ್ಲಿ ದಿನಕ್ಕೊಂದೊಂದು ‘ಡೇ’ ನಿರ್ಧಾರ ಆಗ್ತು. ಅದರ್ನ ಅವು ಅವರ ಭಾಷೆಲಿ ಹೇಳ್ತ. ನಾವು ಅದ್ರನ ನಂಭಾಷೆಲಿ ಉಲ್ದ್ರೆ ಅದು ಖಂಡಿತಾ ಹವ್ಯಕತನ ಆಜಿಲ್ಲೆ.
ಅದ್ಕೇ ಹೇಳ್ತೆ ಇದ್ದೆ ಭಾಷೆ ಸಂತಿಗೆ ಭಾವನೂ ಬರವು ಹೇಳಿ.

ಆ ನೋ ಭದ್ರಾ ಕೃತವೋ ಯಂತು ವಿಶ್ವತಃ || ಹೇಳಿ ನಮ್ಮ ಹಿರಿಜನ ಹೇಳಿದ್ದ.
ಒಳ್ಲೆದು ಎಲ್ಲಿದ್ರೂ ಇತ್ಲಾಗಿ ಬರಲಿ ಹೇಳಿ. ಹಾಂಗ್ಹೇಳಿ ಎಲ್ಲಾ ತಪ್ಪನ್ನೂ ತಪ್ಸಗಂಬು ‘ಗುರಾಣಿ ‘ ಅಪ್ಲುಲಿಲ್ಲೆ ಇದು.
ಕಿಟಕಿ ಬಾಗ್ಲಿಂದ ಚೆಲೋ ಗಾಳಿ ಬೆಳ್ಕು ಬರವು ಖರೆ ಆದ್ರೆ ಬೆಂಕಿ ಬಿರುಗಾಳಿ ಬಂದು ನಂಗ್ಳನ್ನೆ ಹಾಳ್ಮಾಡುಲಿಲ್ಲೆ ಅಲ್ದಾ.

ಯನ್ನ ಗುರುಸ್ಥಾನದಲ್ಲಿ ಇಪ್ಪ ಚ.ಮೂ.ಕೃಷ್ಣಶಾಸ್ತ್ರಿಗಳು ಯಾವಾಗ್ಲೂ ಹೇಳ್ತಿದ್ರು. ಮಾತೃಭಾಷೆಲಿ ಯೊಚ್ನೆ ಮಾಡಿ ಸಂಸ್ಕೃತದಲ್ಲಿ ಮಾತಾಡಡಿ ತಪ್ಪಾಗೋಗ್ತು ಸಂಸ್ಕೃತದಲ್ಲೇ ಯೋಚನೆ ಮಾಡುಲೆ ಕಲ್ತ್ಕಳಿ ಹೇಳಿ. ಪಕ್ಕಾ ಹೌದು ಹೇಳಿ ಯನ್ನ ಅನುಭವ.
ಆ ಮಾತು ಇಲ್ಲಿಗೂ ಅನ್ವಯ ಆಗ್ತು. ಹವ್ಯಕ ಭಾಷೆಲಿ ಹೇಳುಕ್ಕಿಂತ ಮುಂಚೆಯಾ ಹವ್ಯಕ ಸಂಸ್ಕೃತಿಲಿ ವಿಚಾರ ಮಾಡು ಅಗತ್ಯ ತೀರಾ ಇದ್ದು.
ಈ ಇಂಗ್ಲೀಶ್ ಕಲ್ಚರ್ನ ನಂ ಭಾಷೆಲಿ (ಹವಿಗನ್ನಡ ಮಾತ್ರ ಅಲ್ಲ ಕನ್ನಡ ಸಂಸ್ಕೃತ ತೆಲುಗು ತುಳು ಎಲ್ಲ) ಅನುಕರಣೆ ಮಾಡ್ಕಂಡು ಹೋದ್ರೆ ಹೇಂಗೆ ಕಾಣ್ತು ಗೊತ್ತಿದ್ದ….
ತೀರ್ಥಕೊಡುವ ಪಂಚಪಾತ್ರೆ ಉದ್ಧರಣೆ ಇಟ್ಗಂಡು ಅದ್ರಿಂದ ‘ವೈನ್’ ವಿತರಣೆ ಮಾಡಿದ್ ಹಾಂಗೇ ಕಾಣ್ತು.

ಇನ್ನು ಬಗೇಲಿ ವ್ಯಾಕರಣದ ಕಡೆಗೆ ಬಪ್ಪ.
ಈ ಹೊಸವರ್ಷದ ಶುಭಾಶಯ, ಸಂಕ್ರಾಂತಿ ಶುಭಾಶಯ, ಯುಗಾದಿ ಶಿವಾಶಯ, ಶಿವರಾತ್ರಿ ಸದಾಶಯ ….
ಈ ಎಲ್ಲ ತಥಾಕಥಿತ ಇಂಗ್ಲಿಶ್ ವಾಕ್ಯಗಳ ಅಕ್ಷರಶಃ ಅನುವಾದದ ವಾಕ್ಯಗಳು ಇದ್ವಲಿ. ಇವು ವ್ಯಾಕರಣ ರೀತ್ಯಾ ನೋಡಿರ ಅಸಂಬದ್ಧವಾಗಿದ್ದು.
ಈ ಷಷ್ಠಿವಿಭಕ್ತಿ ಹೇಳಿ ಒಂದ್ ಇಪ್ಪದು ಎಲ್ಲರಿಗಗೂ ಗೊತ್ತಿದ್ದು ಅಲ್ದಾ ‘ ಅ’ಹೇಳುವ ಪ್ರತ್ಯಯ ಇಪ್ದು.
ಗುರುಗಳ ಪಾದ ಹೇಳಿರೆ ಯಾವ ಪಾದ ಗುರುಗಳಿಗೆ ಸೇರಿದ್ದೋ ಅದು, ಪಾದುಕೆಯ ಪೂಜೆ ಹೇಳಿರೆ ಯಾವ ಪೂಜೆ ಪಾದುಕೆಗೆ ಸಂಬಂಧಿಸಿದ್ದೋ ಅದು, ಯಂಗಳ ಮನೆ ಅಂದ್ರೆ ಯಂಗಕ್ಕೆ ಸಂಬಂಧಪಟ್ಟ ಮನೆ ಹೇಳಿ ಅಲ್ದಾ.
ಹಾಂಗೇ ಯೋಚನೆ ಮಾಡಿರೆ… ಸಂಕ್ರಾಂತಿ ಶುಭಾಶಯ ಅಂದ್ರೆ ಎಂಥದು. ಯಾವು ಶುಭ ಆಶಯ ಸಂಕ್ರಾಂತಿಗೆ ಸಂಬಂಧಪಟ್ಟಿದ್ದೋ ಅದು ಹೇಳಿ ಆತು ಅಲ್ದಾ ?
ಸಂಕ್ರಾಂತಿಗೆ ಸಂಬಂಧ ಪಟ್ಟ ಎಳ್ಳು ಬೆಲ್ಲ ಸಕ್ರೆ ಪಾಯ್ಸ, ಪೂಜೆ, ಸೂರ್ಯ..
ಇತ್ಯಾದಿ ಹೇಳಿರೆ ಒಪ್ಗಳ್ಲಕ್ಕು.

ಶುಭ = ಒಳ್ಳೆಯ ಆಶಯ = ಬಯಕೆ.
ಸಂಕ್ರಾಂತಿಗೆ ಎಂಥ ಒಳ್ಳೆಯ ಬಯಕೆ ಇರ್ತು ಮಣ್ಣಂಗಟ್ಟಿ. ಆಚರಣೆ ಮಾಡ್ವವಕ್ಕೆ ಇರಕಾಗಿದ್ದು. ಅಂದ್ರೆ ಯಾವಾಗಲೂ ತಮ್ಮ ಇಷ್ಟಮಿತ್ರರಿಗೆ ಒಳ್ಳೆಯದನ್ನೇ ಬಯಸು ಒಬ್ಬ ಈ ಸಂಕ್ರಾಂತಿ ಹೇಳುವ ಹಬ್ಬದ ಶುಭ ಸಂದರ್ಭದಲ್ಲಿ ಇನ್ನೊಬ್ಬಂಗೆ ಒಳ್ಳೆಯದನ್ನು ಬಯಸ್ತೆ ಹೇಳಿ ಸಾಂಕೇತಿಕವಾಗಿ ಮಾತ್ನಲ್ಲಿ ಹೇಳಕಾದ್ರೆ ಈ ಶುಭಾಶಯ ನಿರ್ದಿಷ್ಟ (specific) ಆಗಿ ಇರವು ಅಲ್ದಾ ?
ಅಂದ್ರೆ .. ಸಂಕ್ರಾಂತಿ ಶುಭಸಂದರ್ಭದಲ್ಲಿ ನಿಮಗೆ ಸರ್ವವಿಧದ ಸೌಭಾಗ್ಯ ಸಿಗಲಿ ಎಂಬ ಶುಭಾಶಯ.
ಎಳ್ಳಿನ ನಯವು ಹೊಳಪನ್ನೂ, ಬೆಲ್ಲದ ಅಂಟು ಬಾಂಧವ್ಯವನ್ನೂ ನಿಮ್ಮ ಬದುಕಿನಲ್ಲಿ ಹೆಚ್ಚಿಸಲಿ ಎಂಬ ಸದಾಶಯ.
ಕರ್ಕದಿಂದ ಮಕರಕ್ಕೆ ಪರಿಕ್ರಮಿಸುವ ಭಾಸ್ಕರನು ನಿಮಗೆ ಆಯುರಾರೋಗ್ಯೈಶ್ವರ್ಯಗಳನ್ನು ದಯಪಾಲಿಸಲಿ ಎಂಬ ಶಿವಾಶಯಗಳು…..

ಹಿಂಗೆ ಯೋಚ್ನೆ ಮಾಡ್ಳಕ್ಕು ಕಾಣ್ತಪ.
ಇನ್ನು ನಿಂಗ ಚಿಕ್ಕದಾಗಿ ಚೊಕ್ದಾಗಿ, ಶಾರ್ಟು ಸ್ವೀಟು ಹೇಳೆಲ್ಲ ಮಾತಾಡುರಿ. ಆದ್ರೆ ನಾವು ಎಲ್ಲದ್ರ ವಿಷ್ಯದಲ್ಲೂ ಹೀಂಗೆ ಆಲೋಚ್ನೆ ಮಾಡ್ತ್ವಿಲ್ಯಲಿ.
ಒಂದ್ಸಾರಿ ಕಾಸರಗೋಡ್ನ ಒಬ್ರು ಹೆರಿ ಮಾವ ಹವ್ಯಕ ಸಂಪಾದಕ್ರಿಗೆ ಅಂದ್ರೆ ನಂಗೆ ಒಂದ್ ಪತ್ರ ಬರೆದಿದ್ದ.
ಕನ್ಡದಲ್ಲಿ ವಿಳಾಸ ಬರ್ಯಕಾದ್ದು ಹೇಂಗೆ ಹೇಳಿ. ” ಉತ್ತರಕನ್ನಡ ಜಿಲ್ಲೆಯ ಕುಮಟತಾಲ್ಲೂಕಿನ ಅಂತ್ರವಳ್ಳಿಗ್ರಾಮದ ಕೈಗಳ್ಮನೆಯ ರಾಮಚಂದ್ರ ಹೆಗಡೆಯ ಮಗ ಶ್ರೀಕಾಂತ ಹೆಗಡೆಯವರಿಗೆ “ಹೇಳಿ ವಿಳಾಸ ಬರೆಯವು.
ಆದ್ರೆ ಈಗ ನಂಗ ಬರೆತಾ ಇಪ್ಪುದು ಪೂರ್ಣ ತಪ್ಪು, ಇಂಗ್ಲಿಶ್ನ To ಹೇಳುದ್ನೇ ಅನುಕರಿಸಿ ‘ಗೆ’ ಹೇಳಿ ಶುರುಮಾಡ್ಕಂಡು ಹಾಂಗೇ ಮುಂದ್ವರಿತಾ ಇದ್ದಾಜು.

ಕನ್ನಡದಲ್ಲಿ ಬರೀ ‘ಪ್ರತ್ಯಯಕ್ಕೆ’ ಯಾವುದೇ ಅರ್ಥ ಇಲ್ಲೆ ಹೇಳಿ ಗೊತ್ತಿಲ್ಯ. ಕೇಳಿದ್ದ.
ಅದ್ರನ್ನೇ ಮುಂದುವರ್ಸಿ ಹೇಳುದಿದ್ರೆ ಇನ್ನು ಕೆಲ್ವೇ ದಿನಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಲ್ಲೇ ನಡುಲೆ ಇದ್ದು.
ಅದು 77 ಸರ್ತಿ ಮಾಡ್ತಾ ಇದ್ವಡ. ಇದ್ರನ್ನ ಪ್ರಸಿದ್ಧ ಕನ್ಡಡ ದೈನಿಕ ಪತ್ರಿಕೆಯೂ ಹೇಂಗ್ ಬರೆತಾ ಇದ್ದು ಗೊತ್ತಿದ್ದ 77ನೇ ಕನ್ನಡ …. ಹೇಳಿ.
ಕನ್ನಡದಲ್ಲಿ ‘ನೇ’ ಅಂಬ್ದಕ್ಕೆ ಅರ್ಥ ಎಂಥ ? ಇದು 77ನೆಯ ಹೇಳಿ ಆಗಡ್ದಾ ? ಅಲ್ಲೂ ಮತ್ತೆ ಕುರುಡು ಅನುಕರಣೆ ಆಂಗ್ಲದಲ್ಲಿ 77th ಹೇಳಿ ಬರೆತ್ವಲಿ ಅದ್ಕೇಯಾ ಹಾಂಗಾಜು ಕಾಣ್ತು.
ಅಲ್ಲಿಂದಿಲ್ಲಿಗೂ ಮಂಗನ ಟೋಪಿ ಕಥೆ ಹಾಂಗೆಯಾ ನಂಗ ಅನುಕರಣೆ ಅನುಸರಣೆ ಮಾಡಿಯೇ “ಮಂಗನಿಂದ ಮಾನವ ” ಹೇಳುವ ಡಾರ್ವಿನ್ ನ ಬುರ್ನಸ್ ಹಶೀ ಸುಳ್ಳುವಾದನ ಸತ್ಯ ಮಾಡುಲೆ ನೋಡ್ತಾ ಇದ್ದಾಯ್ದು.

ಯೇನಂಬ್ರಿ !?

ಭಾಷೆ ಮಾತ್ರೆ ಬಂದ್ರೆ ಆಯ್ದಿಲ್ಲೆ ಸಂತಿಗೆ ಭಾವನೂ ಬರವು, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಕಾ೦ತಣ್ಣಾ,
  ಕ೦ಡದ್ದರ ಕ೦ಡ ಹಾ೦ಗೆ ಬರದ್ದಿ.
  ಬರ್ತ್ ಡೇ ಹೇಳಿರೆ ಹೋಪ ಡೇ ಹತ್ತರೆ ಆತು ಹೇಳಿ ನೆನಪ್ಪುಸೊದು ಹೇಳಿ,ನಿ೦ಗಳೇ ಹೇಳಿದ್ದಲ್ಲದೋ
  ನಾವೆಲ್ಲಾ ಓದಿ ಯೋಚನೆ ಮಾಡಿ,ವ್ಯಾವಹಾರಿಕವಾಗಿ ಅನುಸರಿಸುವ ಪರ್ದೇಶಿ ಪದ್ಧತಿಗಳ ನಿಲ್ಲುಸಿ ನಮ್ಮದೇ ಸ೦ಸ್ಕೃತಿಲಿ ಯೋಚನೆ ಮಾಡೆಕ್ಕಾದ ವಿಷಯ ಇದ್ದು.ಒಳ್ಲೆ ನಾಟುವ ,ಕಡ್ಪದ ಉಪಮೆಗೊ,ಈಗ ಅನಿವಾರ್ಯವೇ.ಧನ್ಯವಾದ.
  ಆರ್ಕುಟ್ ಮನುಷ್ಯನ ಮರ್ಕಟ್ ಮಾಡ್ತೊ ಹೇಳಿ ಸ೦ಶಯ ಆದ ಮೇಲೆ ಆನು ಮೋರೆಪುಟದ ಮೋರೆ ನೋಡುಲೂ ಹೋಯಿದಿಲ್ಲೆಪ್ಪ.
  ಒಪ್ಪಿ ಅನುಸರಿಸೊದೆ..

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಇಂಗ್ಳೀಷು ಕ್ರಮವ ಅನುಸರಿಸುವವರ ತಲಗೆ ಬಡಿತ್ತ ಹಾಂಗಿರುತ್ತ ಲೇಖನ. ಜೆನಂಗೊ ಬೇರೆಯವರ ಕ್ರಮವ ಕಣ್ಣು ಮುಚ್ಚಿ ಆಚರಿಸುವಗ ಯೋಚನೆ ಮಾಡ್ಳೇ ಬೇಕು. ಈಗ ಕೆಲವೊಂದು ಕಡೆ, ಹುಟ್ಟುಹಬ್ಬ ಆಚರಣೆ ಸಮೆಲಿ, ಇಂಗ್ಳೀಷು ಕ್ರಮದ ಕ್ಯಾಂಡುಲು ಊದಿ ನಂದುಸುವುದರ ಬದಲು, ಹೊತ್ತುಸಿ ಹಾಂಗೇ ಮಡಗುತ್ತವು. ಮಗುವಿಂಗೆ ಆರತಿಯನ್ನೂ ಎತ್ತುತ್ತವು. ಮೊಟ್ಟೆ ಹಾಕಿದ ಕೇಕು ತಾರದ್ರೆ ಅದು ಬರ್ತ್ ಡೆ ಆವುತ್ತೊ , ಹೇಳಿ ಮಕ್ಕಳೆ ಇತ್ಲಾಗಿ ಕೇಳುಗು. ಇಂಗ್ಳೀಶು ಕ್ರಮದ ಅಂಧಾನುಕರಣೆ, ತೀರ್ಥಕೊಡುವ ಪಂಚಪಾತ್ರೆ ಉದ್ಧರಣೆ ಇಟ್ಗಂಡು ಅದ್ರಿಂದ ‘ವೈನ್’ ವಿತರಣೆ ಮಾಡಿದ್ ಹಾಂಗೇ ಕಾಣ್ತು. ಒಳ್ಳಯ ಉದಾಹರಣೆ.

  [Reply]

  VA:F [1.9.22_1171]
  Rating: +1 (from 1 vote)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಕಾಂತಣ್ಣಾ, “ಭಾಷೆ ಸಂತಿಗೆ ಭಾವನೂ ಬರವು”, ಇದರ ಕನ್ನಡ ಅರ್ಥ ಕೊಡುತ್ತಿರೊ ? ಎಂಗಳ ಕುಂಬಳೆ ಹವ್ಯಕ ಭಾಷೆಲಿ ಎನಗೆ ಅರ್ಥ ಆಯಿದಿಲ್ಲೆ.

  [Reply]

  ಡಾಮಹೇಶಣ್ಣ

  ಮಹೇಶ Reply:

  ‘ಭಾಷೆಯೊಟ್ಟಿಂಗೆ ಭಾವವೂ ಬರೆಕು’ ಹೇಳಿಯೊ ಕಾಣ್ತು.

  [Reply]

  ಕಾಂತಣ್ಣ

  ಕಾಂತಣ್ಣ Reply:

  ಅಂದ್ರೆ ತಮ್ಮಾ, ಭಾಷೆಯೊಟ್ಟಿಂಗೆ ಭಾವನೂ ಬರೆಕು ಹೇಳಿ ನಿಂಗಳಹೊಡೆ ಭಾಷೆಲಿ ಹೇಳ್ಲಕ್ಕು.

  [Reply]

  VN:F [1.9.22_1171]
  Rating: 0 (from 0 votes)
 4. ಸುವರ್ಣಿನೀ ಕೊಣಲೆ
  Suvarnini Konale

  ನಾವೆಲ್ರೂ ಯೋಚ್ನೆ ಮಾಡಕ್ಕಾದ ವಿಷ್ಯಾನ ನೀವು ಚೆನಾಗಿ ಬರದ್ದಿ. ಅನುಕರಣೆ ಮಾಡದೇ ನಮ್ಮ ಆಚರಣೆ ಆಗ್ಲಾಗ. ನಾವೆಲ್ಲಾ ನಮ್ಮತನ ಉಳಿಶ್ಕ್ಯಳಕು. ಉತ್ತಮ ಲೇಖನಕ್ಕೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 5. ಬಲ್ನಾಡುಮಾಣಿ

  ಕಾಂತಣ್ಣ! ಲೇಖನ ಪಷ್ಟಾಯಿದು.. ಕಣ್ಣೂ ಮುಚ್ಚಿ ಅನುಕರಣೆ ಮಾಡ್ತ ಇಂದ್ರಾಣ ಶುಭಾಶಯ ಹೇಳುವ ಸಂಸ್ಕೃತಿಗೆ ಎಂತ ಹೇಳುದು.. ಅಭ್ಯಾಸಬಲಲ್ಲಿ ಆನುದೆ ಸಂಕ್ರಾಂತಿ ಶುಭಾಶಯ ಹೇಳಿದ್ದೆ ಸುಮಾರು ಸತ್ತಿ.. ಮತ್ತೆ ಯೋಚನೆ ಮಾಡಿದ್ದೆ, ಹೇಳಿದ್ದಕ್ಕೆ ಏನಾರು ಅರ್ಥ ಇದ್ದೋ ಹೇಳಿ.. ನಿಂಗಳ ಲೇಖನ ಓದಿಯಪ್ಪದ್ದೆ ನಿಗಂಟಾತು, :) ಅರ್ಥ ಇಲ್ಲೆ, ಬರೇ ಅನರ್ತ ಇಪ್ಪದು ಹೇಳಿ.. ಅನುಕರಣಾಶಾಸ್ತ್ರವ ಕಟುವಾಗಿ ಟೀಕಿಸಿದ ಲೇಖನ.. ನಿಜಕ್ಕು ಯೋಚನೆಗೆ ಹಚ್ಚಿತ್ತು.. ಹಿಂಗಿಪ್ಪ ಲೇಖನಂಗೋ ಇನ್ನ ಬರಳಿ..

  [Reply]

  VN:F [1.9.22_1171]
  Rating: 0 (from 0 votes)
 6. ಡಾಮಹೇಶಣ್ಣ
  ಮಹೇಶ

  ಕಾ೦ತಣ್ಣ,
  ‘ಲೋಕ ಹೋದ ಹಾ೦ಗೆ ಹೋವ್ತು’ ಹೇಳ್ತ ಈ ಕಾಲಲ್ಲಿ ಇ೦ತಹ ಸಾತ್ವಿಕ ಗದರುವಿಕೆಯ ಆವಶ್ಯಕತೆ ಇದ್ದು!
  ಭಾರತದ ಬಗ್ಗೆ ಯೋಚಿಸಿರೆ ಸಾಲ, ಭಾರತೀಯನಾಗಿ ಯೋಚಿಸು ಹೇಳುವದರ ಚೆ೦ದಕೆ ಬರದ್ದಿ.

  {ಸಂಸ್ಕೃತದಲ್ಲೇ ಯೋಚನೆ ಮಾಡುಲೆ ಕಲ್ತ್ಕಳಿ} ವಸ್ತುತಃ ಏಷಃ ಅದ್ಭುತಃ ಅನುಭವಃ , ಮಮಾಪಿ!!

  ಈ ‘ಡೇ’ಗಳ ಉದ್ದೇಶ ಒ೦ದು ವಿಶಯದ ಮಹತ್ತ್ವವ ಮನನ ಮಾಡುವದು ಮತ್ತು ಇತರರಿ೦ಗೆ ತಿಳಿಯಪಡಿಸುವದು. ಕೆಲವು ವಿಶಯ೦ಗಕ್ಕೆ ಅದರ ಅಗತ್ಯ ಇದ್ದು. ಆದರೆ ಅದರ ಹೇ೦ಗೆ ಆಚರಿಸುತ್ತವು ಹೇಳುವದರಲ್ಲಿ ಅದರ ಔಚಿತ್ಯ ನಿರ್ಧಾರ ಅಪ್ಪದು.
  ಜನ್ಮದಿನ ಆಚರಿಸುತ್ತರೆ ಆ ವ್ಯಕ್ತಿಯ ಅಭಿವೃದ್ಧಿಗೆ ಬೇಕಾದ್ದದರ ಬಗ್ಗೆ ಚಿ೦ತನೆ ಮಾಡ್ತ ಹಾ೦ಗಿಪ್ಪ ಕಾರ್ಯಕ್ರಮ ಇದ್ದರೆ ಒ೦ದು ಅರ್ಥ ಇದ್ದು ಅದಕ್ಕೆ. ಅದಲ್ಲದ್ದೆ ಬರೇ ದಿನದ ಹೆಸರಿಲ್ಲಿ ಆರೋಗ್ಯ ಹಾಳು ಮಾಡುವ ಮೋಜಿನ ಆಹಾರ/ವ್ಯವಹಾರ ಇದ್ದರೆ ಎ೦ತ ಪ್ರಯೋಜನ?

  ಒ೦ದು ಜಿಜ್ಞಾಸೆ:
  ‘ದಶಮ-ಸಮ್ಮೇಳನ’ ಇಲ್ಲಿ ಷಷ್ಠೀ ವಿಭಕ್ತಿ ಇಲ್ಲೆ. ‘ಸಮ್ಮೇಲನ’ ಪದದ ವಿಭಕ್ತಿಯೇ ‘ದಶಮ’ಕ್ಕೆ. ಇದು ಸ೦ಸ್ಕೃತದ ಶೈಲಿ.
  ಹಿ೦ದಿಲ್ಲಿ पहला, दूसरा …दसवाँ ಇಲ್ಲಿಯೂ ಆರನೇ/ನೆಯ ವಿಭಕ್ತಿ ಇಲ್ಲೆ.
  ‘ಮೊದಲನೆಯ ಸಮ್ಮೇಳನ’ ಇಲ್ಲಿ `ಮೊದಲನೆಯ’ ಹೇಳಿ ಷಷ್ಠಿಯಾ? ಅದರ ಆವಶ್ಯಕತೆ ಇದ್ದೊ? ಅಥವಾ ಇದು ಕನ್ನಡದ ವಿಶಿಷ್ಟತೆಯ?
  ದಕ್ಶಿಣದ ಬೇರೆ ಭಾಷೆಗಳಲ್ಲಿ ಹೇ೦ಗೆ?

  [Reply]

  ಕಾಂತಣ್ಣ

  ಕಾಂತಣ್ಣ Reply:

  ದಶಮ ಹೇಳೂ ಶಬ್ದ ” ಸಂಖ್ಯೇಯ ” ಅಂದರೆ ಕ್ರಮವಾಚಕ, ಅದಕ್ಕೆ ಷಷ್ಠಿಯ ಅಗತ್ಯ ಇರ್ತಿಲ್ಲೆ. ದಕ್ಷಿಣದ ುಳಿದೆ ಭಾಷೆ ಹೇಂಗೋ ನಂ ಗೊತ್ತಿಲ್ಲೆ. ಆದರೆ ಕನ್ನಡದಲ್ಲಿ ” ನೇ ” ಎಂಬ ಪ್ರತ್ಯಯ ಇದ್ದಾಂಗಿಲ್ಲೆ. ಅದು ಪಕ್ಕಾ ಅನುಕರಣೆ. ಮೊದಲನೆಯ ಅದು ಪೂರ್ಣ ಷಷ್ಠಿ ವಿಭಕ್ತಿ ಆಗ್ತು. ಎಂಥಕ್ಕೆ ಷಷ್ಠಿ ಬೇಡ ?

  ಮೊನ್ನೆ ಹೊಸದಿಗಂತದ ಮುಖಪುಟದ ಶೀರ್ಷಿಕೆ ” ಬೆಂಗಳೂರು ರಕ್ಷಣೆ ” ಬೇಕಾದ ಷಷ್ಠಿಯ ಕಳೆದದ್ದರ ಪರಿಣಾಮ ಎಂಥ ಅರ್ಥ ಕೊಡ್ತು ನೋಡಿ. ಷಷ್ಟಿ ಬೇಕಾದಲ್ಲಿ ಬೇರೆ ಹಾಕಿದ ನಿನ್ನೆಯ ಶೀರ್ಷಿಕೆ ನೋಡಿ.. ಕನ್ನಡಿಗರಿಗೆ ದಿಗ್ವಿಜಯ.

  [Reply]

  VN:F [1.9.22_1171]
  Rating: 0 (from 0 votes)
 7. ಕಾಂತಣ್ಣ

  ಗುಣಗ್ರಾಹಿಗಳಾಗಿ, ಗುಣಾತ್ಮಕವಾಗಿ, ಪೂರ್ವಾಗ್ರಹದ ಚಶ್ಮ ಇಲ್ಲೆದೆ ಯೋಚಿಸಿದ ಅಸಮಾನ ವಯಸ್ಕ ಸಮಾನ ಮನಸ್ಕರಾದ ಎಲ್ಲ ಬಂಧುಗಳಿಗೂವಾ ನಮಸ್ಕಾರ ಹೇಳಿದ್ದೆ.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಚೆನ್ನೈ ಬಾವ°ಅಕ್ಷರದಣ್ಣಶರ್ಮಪ್ಪಚ್ಚಿಪುಟ್ಟಬಾವ°ಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆವಿಜಯತ್ತೆಶೇಡಿಗುಮ್ಮೆ ಪುಳ್ಳಿಪುತ್ತೂರಿನ ಪುಟ್ಟಕ್ಕಕಳಾಯಿ ಗೀತತ್ತೆಡೈಮಂಡು ಭಾವವಸಂತರಾಜ್ ಹಳೆಮನೆರಾಜಣ್ಣಸಂಪಾದಕ°ವೇಣೂರಣ್ಣದೇವಸ್ಯ ಮಾಣಿಬೊಳುಂಬು ಮಾವ°ಶ್ರೀಅಕ್ಕ°ಹಳೆಮನೆ ಅಣ್ಣಸುಭಗಜಯಶ್ರೀ ನೀರಮೂಲೆಶುದ್ದಿಕ್ಕಾರ°ಕಾವಿನಮೂಲೆ ಮಾಣಿನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ