Oppanna.com

ಭಿಕ್ಷುಕರು

ಬರದೋರು :   ಕಳಾಯಿ ಗೀತತ್ತೆ    on   24/06/2012    2 ಒಪ್ಪಂಗೊ

ಕಳಾಯಿ ಗೀತತ್ತೆ
Latest posts by ಕಳಾಯಿ ಗೀತತ್ತೆ (see all)

ಅಲ್ಲ…, ನಿಂಗೊ ಬೆಂಗಳೂರಿಂಗೆ/ದೊಡ್ಡ ಪೇಟೆಗೆ  ಒಂದರಿ ಬಂದರೆ ಗೊಂತಾಕ್ಕು, ಎಷ್ಟು ಜನ ಭಿಕ್ಷೆ ಬೇಡುವವು ಇದ್ದವು ಹೇಳಿ! ದಾರಿ ದಾರಿಗೂ ಇದ್ದವು.

ಬೇರೆ ಬೇರೆ ನಮೂನೆ ಭಿಕ್ಷುಕರೂ ಇದ್ದವು .

ಇಲ್ಲಿ ಮಕ್ಕಳ  ಒಂದು ವ್ಯಾನ್ ಲಿ ತಂದು ಬಿಟ್ಟು, ದೇವರ ಫೋಟೋ ಕೊರಳಿಂಗೆ ನೇಲ್ಸಿ ಬೇಡುಲೇ ಕಳ್ಸುವವು ಇದ್ದವು. ಹೊತ್ತಪಗ ಎಲ್ಲಾರನ್ನು ಒಟ್ಟಿಂಗೆ ವಾಪಾಸ್ ಕರಕ್ಕೊಂಡು ಹೋಕು.
ಅದರ ಎಡಕ್ಕಿಲಿ ಕೆಲವು ನಿಜವಾಗಿಯೂ ಕಾಲು ಸರಿ ಇಲ್ಲದ್ದವು. ಪ್ರಾಯ ಆದವು, ದುಡಿವಲೆ  ಎಡಿಯದ್ದವು, ಅದರ ಎಡಕ್ಕಿಲಿ ಎಲ್ಲಾ ಸರಿ ಇದ್ದವುದೇ ಇಕ್ಕು.
ಆರದ್ದೋ ಮಕ್ಕಳ ಒಟ್ಟಿ೦ಗೆ ಹಿಡ್ಕೊಂಬವೂ ಇದ್ದವು. ಕೊಡದ್ರೆ ಹಿಂದಂದ ಓಡ್ಸಿಗೊಂಡು  ಬಂದು ಬಡಿವವೂ ಇದ್ದವು.
ಒಟ್ಟು ಆರಿಂಗೆ ನಿಜವಾಗಿ ಪೈಸೆ ಕೊಡೆಕ್ಕಾದ್ದು ಹೇಳಿ ನಿರ್ಣಯ ಮಾಡ್ಲೇ ಎಡಿಯ. ಅಲ್ಲಲ್ಲಿ ಭಿಕ್ಷೆ ಬೇಡುವವು ಬೇರೆ!
ಹಾಂಗಾಗಿ  ಎಂತ ಅಪ್ಪದು ಹೇಳಿರೆ.., ಆರಿಂಗೂ ಕೊಡದ್ದೆ ಹೋಪದು ಹೇಳಿ ಅಪ್ಪದು.
ಒಂದೊಂದರಿ ಎಂತ ಮನಸ್ಸಿಂಗೆ ಬಕ್ಕು ಹೇಳಿರೆ, ಈ ಎಲ್ಲೋರಿಂಗೂ ಉಂಬಲೆ  ತಕ್ಕ ಸಿಕ್ಕದ್ರೆ ಕದ್ದು ಜೀವನ ಮಾಡ್ಲೆ ಕಲ್ತ್ರೆ ಎಂತ ಅಕ್ಕು ಹೇಳಿ!!
ನ್ಯಾಯವಾಗಿ ಭಿಕ್ಷೆ ಕೊಡಿ ಹೇಳಿ ಕೇಳಿರೆ ಹೆಚ್ಚಿನೋರೂ ಕೊಡ್ತವಿಲ್ಲೇ
ಅಷ್ಟಪ್ಪಗ ಗ್ರೇಷಿ ಹೋತು. ಈ ಎಲ್ಲಾ ಭಿಕ್ಷುಕರೂ ಕಳ್ಳಂಗೋ ಆದರೆ/ಅಗಿರ್ತೀತರೆ!! ನಮ್ಮಂದ ಎಡಿಗೋ…..??!!!
ಕದ್ದ  ಸಾಮಾನಿನ ವಸೂಲು ಸುಲಭವೂ ಅಲ್ಲ. ಜನಂಗೋ ಹೋದ್ದು ಹೋತು ಹೇಳಿ ಕೂರ್ತವುದೇ ಅಲ್ಲದೋ …

2 thoughts on “ಭಿಕ್ಷುಕರು

  1. ಯಾವುದೇ ಸಹಾಯ ಮಾಡುಲೆ ಹೆರಡುವ ಮುನ್ನ ನಾವು ಮನಸ್ಸು ಗಟ್ಟಿ ಮಾಡಿಗೊಂಡೆ ಹೆರಡೆಕ್ಕು. “ಸಹಾಯ ಮಾಡುತ್ತಾ ಹೋದ ಹಾಂಗೆ ಜಗತ್ತು ನಮ್ಮನ್ನೇ ನಿಸ್ಸಹಾಯಕರನ್ನಾಗಿ ಮಾಡುತ್ತು… ಆದರೆ ಸಹಾಯವನ್ನೇ ಮಾಡದ್ದರೆ ನಾವು ನಿಷ್ಪ್ರಯೋಜಕರಾಗಿ ಇರುತ್ತು…”.

  2. ಕೊಟ್ರೂ ಕಷ್ಟ, ಕೊಡದ್ರೂ ಕಷ್ಟ (ಮನಸ್ಸಿಂಗೆ). ಹಾಂಗಾಗಿ ತಲೆತಿರುಗಿಸಿ ನಮ್ಮ ದಾರಿ ನೋಡ್ತದೇ ಒಳ್ಳೆದು ಕಾಣ್ತು ಹಲವು ಸರ್ತಿ. ಒಂದು ರುಪಾಯಿ ಕೊಟ್ರೆ ಹತ್ತು ರೂಪಾಯಿ ಹಾಕಲೆ ಎಂತ ಸಂಕಟ ಹೇಳಿ ಕೇಳ್ವವೇ ಹೆಚ್ಚಿನ ಕಡೆ ಕಾಂಬದು. ಅಸಹಾಯಕಂಗೆ ನಮ್ಮಿಂದಪ್ಪ ಉಪಕಾರ ಮಾಡೆಕ್ಕಪ್ಪದೇ .., ಆದರೆ ನಮ್ಮನ್ನೇ ಅಸಹಾಯಕರಾಗಿ ಮಾಡಿಬಿಡ್ತವು ಹಲವು ಸರ್ತಿ!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×