ವಿಷ್ಣು ಸಹಸ್ರನಾಮದ ಜನ್ಮ ದಿನ ಭೀಷ್ಮ ಏಕಾದಶೀ..

February 14, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದ್ರಾಣ ಭೀಷ್ಮ ಏಕಾದಶಿ ಹಬ್ಬದ ಪ್ರಯುಕ್ತದ ವಿಶೇಷ ಲೇಖನ..

ಇಂದು  ಸೋಮವಾರ,  ಫೆಬ್ರವರಿ 14.
ಮಾಘ ಶುಕ್ಲ ಏಕಾದಶಿ
ಅಥವಾ  ಭೀಷ್ಮ ಏಕಾದಶಿ.
ನಮ್ಮ ಧಾರ್ಮಿಕ ಇತಿಹಾಸಲ್ಲಿ ಪರಮ ಪುಣ್ಯ ದಿನ. ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಹುಟ್ಟಿದ ದಿನ.
ಈ ದಿನ, ಕುರು ವಂಶದ ಹಿರಿಯ° ಭೀಷ್ಮಾಚಾರ್ಯ°, ಭಗವಾನ್  ಶ್ರೀ ಕೃಷ್ಣನ  ವಿರಾಟ್ ರೂಪವ ಯುಧಿಷ್ಠಿರಂಗೆ  ಶ್ರೀ ವಿಷ್ಣುಸಹಸ್ರ ನಾಮದ ಮೂಲಕ ಉಪದೇಶ ಮಾಡಿ, ವಿಷ್ಣು ಲೋಕ  ಪ್ರವೇಶ  ಮಾಡಿದ ದಿನ.
ಇಚ್ಚಾಮರಣಿ ಹೇಳುವ ವರವ ಪಡಕ್ಕೊಂಡ ಭೀಷ್ಮ ನಮ್ಮ ಭಾರತದ ಪರಂಪರೆಲಿ ಪ್ರಸಿದ್ಧನೂ, ಯುದ್ಧ ಕುಶಲನೂ, ಅತೀ ಹೆಚ್ಚು ಕಾಲ ಬದುಕ್ಕಿ ಕುರುಕುಲ ಉದ್ಧಾರಕ್ಕೆ ತನ್ನ ಜೀವನವ ವ್ಯಯಿಸಿ,  ಕುಲಗೌರವ ಒಳಿಶಿ  ಕೀರ್ತಿ ತಂದ ಒಬ್ಬ ಮಹಾನ್ ಪುರುಷ. ಭೀಷ್ಮ, ಧರ್ಮಶಾಸ್ತ್ರ, ಅರ್ಥ ಶಾಸ್ತ್ರ, ಯುದ್ಧ ಕಲೆಲಿ ನಿಪುಣ ಆಗಿತ್ತಿದ್ದ°. ಇವನ ಧರ್ಮ ಜ್ಞಾನ ಎಷ್ಟು ಇದ್ದತ್ತು ಹೇಳಿದರೆ ದೇವಾದಿ ದೇವತೆಗೋ ಭೀಷ್ಮನ ಹತ್ತರೆ ಸಲಹೆ ತೆಕ್ಕೊಂಡು ಇತ್ತಿದ್ದವು ಹೇಳಿ ಮಹಾಭಾರತಲ್ಲಿ ಉಲ್ಲೇಖ ಪಟ್ಟಿದು. ತನ್ನ ಅಪ್ಪನ ಬಾಳು ಬೆಳಗುಲೆ ತನ್ನ ಉಜ್ವಲ ಭವಿಷ್ಯವ ದಾರಿ ಮಾಡಿ ಕೊಟ್ಟ ದೇವವ್ರತನ ಈ ಘಟ್ಟಿ ನಿರ್ಧಾರಕ್ಕೆ ಭೀಷ್ಮ ಹೇಳ್ತ ಹೆಸರಾದ್ದದು. ಒಬ್ಬ ಆದರ್ಶ ಮಗ° ಹೇಂಗಿರೆಕ್ಕುಹೇಳಿ ತೋರ್ಸಿದ ವೆಗ್ತಿತ್ವ.

ಶರಶಯ್ಯೆಲಿ ಮನುಗಿ ವಿಷ್ಣುಸಹಸ್ರನಾಮ ಬೋಧನೆಲಿಪ್ಪ ಭೀಷ್ಮ

ತನ್ನ ಜೀವನ ಪರ್ಯಂತ ಬ್ರಹ್ಮಚಾರಿ ಆಗಿದ್ದುಗೊಂಡು, ಜೀವನಲ್ಲಿ  ಬಂದ ಎಲ್ಲಾ ಕಷ್ಟಂಗಳ ಎದುರಿಸಿ,  ಸಿಂಹಾಸನಲ್ಲಿ ಕೂಪ ತನ್ನ ವಂಶದವರ ರಕ್ಷಕ° ಆಗಿ, ಮಾರ್ಗದರ್ಶಕ° ಆಗಿ  ಕುರು ಕುಲದ ಅಭೇದ್ಯ ಕವಚ ಆಗಿ ತನ್ನ ವಚನಂಗಳ  ಭೀಷ್ಮ ಪಾಲ್ಸಿತ್ತಿದ್ದ°.      ಧರ್ಮಕ್ಕಾಗಿ ಯುದ್ಧ ನಡದ ಧರ್ಮಕ್ಷೇತ್ರವಾದ ಕುರುಕ್ಷೇತ್ರಲ್ಲಿ, ಕೌರವರು, ಪಾಂಡವರು ಎದುರು ಬದುರು ನಿಂದು ಯುದ್ಧ ಸನ್ನದ್ಧರಪ್ಪಗ, ಸಿಂಹಾಸನಕ್ಕೆ ಬದ್ಧನಾಗಿರ್ತೆ ಹೇಳಿ ಅಪ್ಪಂಗೆ  ಮಾತು ಕೊಟ್ಟ ಒಂದೇ ಕಾರಣಕ್ಕೆ ಅಧರ್ಮದ ಕಡೆಂಗೆ ಭೀಷ್ಮ ಪಿತಾಮಹ  ತನ್ನ ಬಲವ  ಕೊಡ್ತ°. ಅಜಾತಶತ್ರು  ಭೀಷ್ಮನ ಹತ್ತರೆ ಅವನ ಅನುಮತಿ ಇಲ್ಲದ್ದೆ ಬಪ್ಪಲೆ ಸಾಕ್ಷಾತ್ ಯಮಧರ್ಮಂಗೂ ಹೆದರಿಕೆ ಇತ್ತಡ್ಡ. ಸಾಕ್ಷಾತ್ ಶಿವ°, ವಿಷ್ಣುವಿಂಗಲ್ಲದ್ದೆ ಬೇರೆ ಆರಿಂದಲೂ ಸೋಲ್ಸುಲೇ ಎಡಿಯದ್ದ ಭೀಷ್ಮಾಚಾರ್ಯ, ಯುದ್ಧ ನಡಕ್ಕೊಂದು ಇಪ್ಪಗ, ತನ್ನ ಇನ್ನೊಂದು ವಚನಕ್ಕೆ ಬದ್ಧನಾಗಿ ಶಸ್ತ್ರ ತ್ಯಾಗ ಮಾಡಿ, ಯುದ್ಧ ಸನ್ಯಾಸ ತೆಕ್ಕೊಂಡು, ಗಾಯಗೊಂಡು, ಅರ್ಜುನ ಹಾಸಿ ಕೊಟ್ಟ ಬಾಣಂಗಳ ಮೇಲೆ, ಶರಶಾಯಿಯಾಗಿ ತನ್ನ ಮರಣವ ಕಾಯೇಕ್ಕಾವುತ್ತು.
ಯುದ್ಧ ಮುಗುದು, ಕೌರವರೆಲ್ಲ ಸತ್ತು  ಧರ್ಮಜ್ಞನಾದ ಯುಧಿಷ್ಠಿರ° ಕುರುವಂಶದ ಸಿಂಹಾಸನವ ಅಲಂಕರಿಸುತ್ತ°. ಆ ಸಮಯಲ್ಲಿ ಯುಧಿಷ್ಠಿರ°  ಶ್ರೀ ಕೃಷ್ಣನ ಹತ್ತರೆ ಒಬ್ಬ ಒಳ್ಳೆಯ, ನ್ಯಾಯಪಾಲ°, ಧರ್ಮಾತ್ಮ ರಾಜನ ಕರ್ತವ್ಯಂಗಳ ಹೇಳಿ ಕೊಡೆಕ್ಕು,ಹೇಳಿ ಕೇಳಿ ಅಪ್ಪಗ, ಶ್ರೀಕೃಷ್ಣ ಅವನ ಹತ್ತರೆ ಹೇಳ್ತ°,  ನಿನಗೆ ಇದರ ಎಲ್ಲಾ ಹೇಳಿ ಕೊಡ್ಲೆ ಸಮರ್ಥ ಆದವ° ಭೀಷ್ಮಾಚಾರ್ಯ ಒಬ್ಬನೇ!!!!  ನಿನಗೆ ಬೇಕಾದ ಎಲ್ಲಾ ಧರ್ಮನೀತಿಯ, ರಾಜನೀತಿಯ ಬೋಧಿಸುಲೇ ಅವನೇ ಆಯೆಕ್ಕಷ್ಟ್ತೆ ಹೇಳಿ ತಿಳಿಶಿ ಕೊಡ್ತ°. ಭಗವಂತನಾದ ಶ್ರೀ ಕೃಷ್ಣ ಪಾಂಡವರಿಂಗೆ  ಹೀಂಗೇ ಹೇಳುಲೆ ಒಂದು ಕಾರಣ ಇದ್ದತ್ತು. ಕುರುಕ್ಷೇತ್ರ ಯುದ್ಧ ಕೌರವ,ಪಾಂಡವರ ನಡುಗೆ ನಡವ ಸಮಯಲ್ಲಿ, ಕೃಷ್ಣ ಅರ್ಜುನನ ಸಾರಥಿ ಆಗಿತ್ತಿದ್ದನ್ನೇ!!! ಗೀತೆಯ ಉಪದೇಶ ಪಡದು, ಆ ದಿನದ ಯುದ್ಧ ಮುಗುದು  ವಾಪಾಸು ಬಪ್ಪ ಸಮೆಯಲ್ಲಿ, ಯುದ್ಧ ಭೂಮಿಲಿ ಇದ್ದ ಬಿಡಾರಕ್ಕೆ ಎತ್ತುವಾಗ ಅರ್ಜುನ ಕೃಷ್ಣನ ಹತ್ತರೆ ಪಡಿ ತೆಗವಲೆ ಹೇಳಿದಾಡ್ಡ°!!! ಇದರ ಕೇಳಿ ಕಕ್ಕಾಬಿಕ್ಕಿ ಆದ ಕೃಷ್ಣ!!! ಭಗವದ್ಗೀತೆಯ ಉಪದೇಶ ಮಾಡಿದ ಒಬ್ಬ° ಗುರು ಸ್ಥಾನಲ್ಲಿ ಇಪ್ಪ ಕೃಷ್ಣನ , ಅರ್ಜುನ ರಜ್ಜವೂ ಗೌರವಿಸಿದ್ದಾ° ಇಲ್ಲೆ ಹೇಳಿ ಕೃಷ್ಣಂಗೆ ಇವಂಗೆ ಮಾಡಿದ ಉಪದೇಶ ವೆರ್ತ ಹೇಳಿ ಆತಡ್ಡ.ಒಬ್ಬ° ಶಿಷ್ಯ ಹೇಂಗಿರೆಕ್ಕು ಹೇಳಿ ಕೃಷ್ಣ ಭಗವದ್ಗೀತೆಯ ನಾಲ್ಕನೇ ಅಧ್ಯಾಯದ 34 ನೇ ಶ್ಲೋಕಲ್ಲಿ ಹೇಳಿದ್ದ° ಹೀಂಗೇ..

ತದ್ವಿದ್ಧಿ ಪ್ರಣಿಪಾತೇನ  ಪರಿಪ್ರಶ್ನೆನ ಸೇವಯಾ |
ಉಪದೇಶ್ಯಂತಿ  ತೇ ಜ್ಞಾನಂ ಜ್ಞಾನಿನಸ್ತತ್ವದರ್ಶಿನಃ ||

ಈ ಜ್ಞಾನವ ನೀನು ತತ್ವತಿಳುದ ಜ್ಞಾನಿಗಳಿಂದ ಅವರ ಹತ್ತರೆ ಹೋಗಿ, ಅವಕ್ಕೆ ಪೂರ್ತಿ ಶರಣಾಗಿ, ಅವರ ಸೇವೆ ಮಾಡಿ, ಕಪಟ ಬಿಟ್ಟು, ವಿನಯಪೂರ್ವಕವಾಗಿ ಪ್ರಶ್ನೆ ಮಾಡಿದರೆ, ಪರಮಾತ್ಮತತ್ವವ ಪೂರ್ತಿ ತಿಳ್ಕೊಂಡ, ಜ್ಞಾನಿಗ ಆದ ಮಹಾತ್ಮರು ನಿನಗೆ ತತ್ವಜ್ಞಾನದ ಉಪದೇಶ ಮಾಡುಗು. ನಾವು ಉಪದೇಶ ಪಡೆಯೇಕ್ಕಾದರೆ ಹೇಂಗಿರೆಕ್ಕು ಹೇಳ್ತದರ ಈ ಶ್ಲೋಕ ಹೇಳ್ತು.

ಗುರುವಿಂಗೆ ಶರಣಾಗದ್ದೆ ನವಗೆ ಅವು ಮಾಡಿದ ಉಪದೇಶ ನವಗೆ ಲಭಿಸ ಹೇಳಿ. ಅದೂ ಅಲ್ಲದ್ದೆ ಗುರುಗೋ ಹೇಳಿದ್ದು ಒಂದೇ ಸರ್ತಿಯಂಗೆ ನವಗೆ ಅಂದಾಜು ಅಕ್ಕು ಹೇಳ್ಲೇ ಎಡಿಯ, ನವಗೆ ಮನದಟ್ಟು ಅಪ್ಪನ್ನಾರ ವಿಷಯ ತಿಳ್ಕೊಂಬ ತಾಳ್ಮೆ, ಸಮಯ ನಮ್ಮಲ್ಲಿ ಇರೆಕ್ಕು ಹೇಳಿ.ಅದಕ್ಕೇ ದಾಸವರೇಣ್ಯರು ಹಾಡಿದ್ದು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಹೇಳಿ!!
ಕೃಷ್ಣ ಆಲೋಚನೆ ಮಾಡಿದ°, ಪಾಂಡವರಿಂಗೆ ಧರ್ಮ ಪಾಠ ಅವಕ್ಕೆ ಅರ್ತ ಅಪ್ಪ ಹಾಂಗೆ ಕಲಿಶುಲೇ ಒಬ್ಬ° ಆಚಾರ್ಯ ಬೇಕು ಹೇಳಿ, ಶರೀರ ತ್ಯಾಗ ಮಾಡ್ಲೆ ತಯಾರಾಗಿದ್ದ ಭೀಷ್ಮನೇ ಇವಕ್ಕೆ ಸರಿ ಹೇಳಿ ಭೀಷ್ಮನ ಸೂಚಿಸಿದ್ದು. ಶ್ರೀ ಕೃಷ್ಣ ನ ಮಾತಿಂಗೆ ಬೆಲೆಕೊಟ್ಟು ಯುಧಿಷ್ಠಿರ ಅಜ್ಜ° ಭೀಷ್ಮನ ಹತ್ತರೆ, ಒಬ್ಬ ರಾಜನ ಕರ್ತವ್ಯಂಗಳ ಬಗ್ಗೆ, ಸರಿ ತಪ್ಪುಗಳ ಬಗ್ಗೆ,  ತನ್ನ ಮನಸ್ಸಿನ  ಸಂದೇಹಂಗಳ ಕೇಳಿ, ಅವನ ಹತ್ತರೆ ಮೊದಲಾಣ  ಹಿರಿಯರಿಂದ ಬಂದ ರಹಸ್ಯಂಗ ಹೇಳೆಕ್ಕು, ಜನ್ಮಾಂತರದ ಚಕ್ರಂದ ಮುಕ್ತಿ ಹೊಂದಿ, ಮೋಕ್ಷ ಪಡದು ಸಚ್ಚಿದಾನಂದ ಪಡವ ಮಾರ್ಗ ಹೇಳೆಕ್ಕು ಹೇಳಿ ಕೇಳಿಗೊಳ್ಳುತ್ತ°. ಮೈಮೇಲೆ ಇಪ್ಪ ಗಾಯಂಗಳಿಂದ ಮತ್ತೆ ಪ್ರಾಯಂದಾಗಿ ಎನ್ನಂದ ಎಡಿಗಾಗ ಹೇಳಿದಾಡ°  ಭೀಷ್ಮ. ಅಂಬಗ ಕೃಷ್ಣ ಭೀಷ್ಮನ ನೆನಪು ಶಕ್ತಿಗೆ ಪುನಾ ತ್ರಾಣ ಕೊಡ್ತೆ ಆಳಲ್ಲಿ ಇಪ್ಪ ಜ್ಞಾನವ ಹೆರ ತೆಕ್ಕೊಂಡು ಪಾಂಡವರಿಂಗೆ ಹೇಳು ಹೇಳಿ ಹೇಳಿದ°.

ಭೀಷ್ಮ, ಕೃಷ್ಣ ಕೊಟ್ಟ ವರಲ್ಲಿ ಸ್ಪಷ್ಟವಾಗಿ, ನಿರರ್ಗಳವಾಗಿ ತನ್ನ ಎಲ್ಲಾ ಹಿಂದಾಣ ಕಲಿಯುವಿಕೆಯ ಒಟ್ಟು ಮಾಡ್ತ°.  ಒಂದು ಜೇನು ಹುಳು ಬೇರೆ ಬೇರೆ ಹೂಗಿಂದ ಚೀಪೆ ತಂದು ಜೇನು ಮಾಡಿ ನವಗೆ ಕೊಡ್ತ ನಮುನೆಲಿ, ಭೀಷ್ಮ, ಅವನ ಜೀವನ ಪೂರ್ತಿ ಬೇರೆ ಬೇರೆ ಕಾಲಲ್ಲಿ, ಬೇರೆ ಬೇರೆ ಋಷಿ ಮುನಿಗಳ ಸೇವೆ ಮಾಡಿ ಪಡಕ್ಕೊಂಡ ಜ್ಞಾನವ ಒಟ್ಟು ಸೇರ್ಸಿ, ಆ ರಹಸ್ಯಂಗಳ ಶ್ಲೋಕ ರೂಪಲ್ಲಿ, ಅವ° ಜೀವನಲ್ಲಿ ನಡಕ್ಕೊಂಡು ಬಂದ ರೀತಿಲಿ ಪಾಂಡವರಿಂಗೆ ಉಪದೇಶ ಕೊಡ್ತ°. ಶ್ರೀಕೃಷ್ಣ ನ ದಿವ್ಯ ಉಪಸ್ತಿತಿಲಿ  ಭೀಷ್ಮಾಚಾರ್ಯ ಮತ್ತೆ ಯುಧಿಷ್ಠಿರ ಇಬ್ಬರ ಮಾತುಕತೆ  ಶ್ರೀ ವಿಷ್ಣು ಸಹಸ್ರನಾಮದ ಜನ್ಮಕ್ಕೆ ಕಾರಣ ಆತು. ಭಗವಂತಂದಲೇ ಆಯ್ಕೆಯಾದ ಆಚಾರ್ಯ° ಭೀಷ್ಮ ಹೇಳಿದ ವಿಷ್ಣು ಸಹಸ್ರನಾಮಲ್ಲಿ, ಗೀತೆಯ ಮತ್ತೆ ವೇದದ ಸಾರ ಇದ್ದು. ಶ್ರೀ ವಿಷ್ಣು ಸಹಸ್ರನಾಮ ಹೇಳಿದರೆ ಹೆಸರೇ ಹೇಳ್ತ ಹಾಂಗೆ   ಶ್ರೀ ವಿಷ್ಣುವಿನ ಒಂದು ಸಾವಿರ ಹೆಸರುಗಳ ಹೇಳಿ, ಭಗವಂತನ ವಿವಿಧ ರೂಪವ, ಶೌರ್ಯವ ಗುಣಗಾನ ಮಾಡಿಪ್ಪದು. ಶ್ರೀ ವಿಷ್ಣು  ಸಹಸ್ರನಾಮ ನಮ್ಮ ಈ ಲೋಕಕ್ಕೆ ತೆರಕ್ಕೊಂಡದು ಮಾಘ ಮಾಸದ ಶುಕ್ಲ ಪಕ್ಷ ಏಕಾದಶಿ ದಿನ. ಇದು, ಶ್ರೀ ಕೃಷ್ಣ ಅರ್ಜುನಂಗೆ ಭಗವದ್ಗೀತೆ ಉಪದೇಶ ಮಾಡಿದ ಸರೀ ಎರಡು ತಿಂಗಳಿಂಗೆ  ಪ್ರಕಟ ಆದ್ದದು. ಈ ದಿನ ಭೀಷ್ಮ ಶ್ರೀವಿಷ್ಣು ಸಹಸ್ರನಾಮವ ಉಪದೇಶ ಮಾಡಿಕ್ಕಿ ವಿಷ್ಣುವಿನ ಪರಮಸಾಯುಜ್ಯ ಪಡಕ್ಕೊಂಡ ದಿನ ಹೇಳ್ತ ಲೆಕ್ಕಲ್ಲಿ ಭೀಷ್ಮ ಏಕಾದಶಿ ಹೇಳಿದೆ ಇದರ ಹೇಳ್ತವು. ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯ ಅರ್ಜುನಂಗೆ ವ್ಯಕ್ತ ಪಡಿಸಿದ°. ಅರ್ಜುನ ಕೃಷ್ಣನ ಹತ್ತರೆ ಸುಮಾರು ಪ್ರಶ್ನೆಗಳ ಕೇಳಿ ಅವನ ಸಂಶಯ ಪರಿಹರಿಸುಲೇ ನೋಡಿದರೂ ಅವಂಗೆ ಅದರ ಪೂರ್ತಿಯಾಗಿ ಆ ಸಾರವ  ಹೀರಿಗೊಂಬಲೆ ಎಡಿಗಾಯಿದಿಲ್ಲೇ. (ನಮ್ಮ) ಪುಣ್ಯಕ್ಕೆ, ಸಂಜಯ ಆ ಎಲ್ಲಾ ವಿಚಾರಂಗಳನ್ನೂ ಧೃತರಾಷ್ಟ್ರಂಗೆ ಹೇಳಿಗೊಂಡಿದ್ದವ°, ಉಪದೇಶದ  ಪೂರ್ಣ ಸಾರವ ಪಡಕ್ಕೊಂಡು ನಾವೆಲ್ಲ ಭಗವದ್ಗೀತೆಯ ಅನುಭವಿಸುವ ಹಾಂಗೆ ಮಾಡಿದ°. ಇದು ಹೇಂಗೆ ಗೊಂತಿದ್ದಾ? ಮಾಷ್ಟ್ರುಮಾವ° ಹೇಳುವ ವಿಷಯಂಗಳ ಒಪ್ಪಣ್ಣ ನವಗೆ ಅರ್ತ ಅಪ್ಪ ಹಾಂಗೆ ಹೇಳ್ತಾ ಇಲ್ಲೆಯಾ ಹಾಂಗೆ!!! :-)

ಆದಿ ಶಂಕರಾಚಾರ್ಯರು ಶ್ರೀ ವಿಷ್ಣು ಸಹಸ್ರನಾಮಕ್ಕೆ ಭಾಷ್ಯ ಬರದ್ದವು. ಶ್ರೀ ವಿಷ್ಣು ಸಹಸ್ರನಾಮವ ನಿತ್ಯ ಕೇಳಿದರೆ, ಹೇಳಿದರೆ,  ಜಪಿಸಿದರೆ ಆಯುರಾರೊಗ್ಯ, ಸಕಲ ಸೌಭಾಗ್ಯ ವೃದ್ಧಿ ಆವುತ್ತು ಹೇಳಿ ನಂಬಿಕೆ ಇದ್ದು. ಇದು ಅತ್ಯಂತ ಶಕ್ತಿಶಾಲಿ, ಪ್ರಭಾವಯುತವಾದ ಸ್ತೋತ್ರ ಇದರ ಪಠಣಂದ ಮುಕ್ತಿ ಸಿಕ್ಕುತ್ತು. ಈ ವಿಷ್ಣು ಸಹಸ್ರನಾಮದ ಮಹಿಮೆಯ ಹೇಳ್ತಾ ಭಗವಾನ್ ಶಿವ° ಪಾರ್ವತೀ ದೇವಿಯ ಹತ್ತರೆ ಹೇಳ್ತ° ಎಂತ ಹೇಳಿರೆ, ಆರಿಂಗೆ ವಿಷ್ಣು ಸಹಸ್ರನಾಮವ ಪೂರ್ಣ ಓದುಲೆ ಎಡಿಗಾಯಿದಿಲ್ಲೆಯಾ ಅವು ಕೇವಲ ಈ ಒಂದು ಶ್ಲೋಕವ ಮೂರು ಸರ್ತಿ  ಹೇಳಿದರೂ ಅವಕ್ಕೆ ಶ್ರೀ ವಿಷ್ಣು ಸಹಸ್ರನಾಮ ಓದಿದ ಪೂರ್ಣ ಅನುಗ್ರಹ ಸಿಕ್ಕುತ್ತು ಹೇಳಿ.. 
ಶ್ರೀ   ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೆ |
ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೇ||

ಏಕಾದಶಿ  ಹೇಳಿದರೆ ಕೃಷ್ಣ ಪಕ್ಷ ಅಥವಾ ಶುಕ್ಲ ಪಕ್ಷದ ಹನ್ನೊಂದನೇ ದಿನ.
ಈ ದಿನ ವಿಷ್ಣು ವಿನ ವೈಕುಂಠದ ಬಾಗಿಲು ತೆರೆದಿರ್ತು ಹೇಳಿ ಲೆಕ್ಕ. ಏಕಾದಶಿ ದಿನ ಉಪವಾಸಲ್ಲಿ ಇದ್ದು ಶ್ರದ್ಧೆಲಿ ವಿಷ್ಣುವಿನ ನಾಮಸ್ಮರಣೆ, ವಿಷ್ಣು ಕಥಾ ಶ್ರವಣ, ವಿಷ್ಣು ಪೂಜೆ ಮಾಡಿದಲ್ಲಿ ಮೋಕ್ಷ ಪ್ರಾಪ್ತಿ ಆವುತ್ತು ಹೇಳಿ ನಮ್ಮ ಹಿರಿಯರು ಹೇಳಿದ್ದವು. ಸತ್ವ ಹೇಳಿದರೆ ಧನಾತ್ಮಕ ಚಿಂತನೆ. ಸಾತ್ವಿಕ ಹೇಳಿದರೆ   ಧನಾತ್ಮಕ ಚಿಂತನೆ ಇಪ್ಪವ°. ಈ ದಿನ ನಮ್ಮಲ್ಲಿ ಸಾತ್ವಿಕ ಭಾವನೆ ಬೆಳಗಿ, ನವಗೆ ಜ್ಞಾನ ಪ್ರಾಪ್ತಿ ಆವುತ್ತು ಹೇಳಿ ಏಕಾದಶಿ ದಿನವ ಮಹತ್ವದ ದಿನ ಆಗಿ ಮಡಿಗಿದ್ದವು. ಈಗಾಣ  ವೈಜ್ಞಾನಿಕ ವಿಧಿಲೂ ಈ ಉಪವಾಸವ ಒಳ್ಳೇದು ಹೇಳ್ತವು. ನಮ್ಮ ಬೈಲಿನ ಡಾಗುಟ್ರಕ್ಕೊಇದರ ಚೆಂದಕ್ಕೆ ಹೇಳಿದ್ದವು ನವಗೆ!!   ಈಗಾಣ ನಮ್ಮ ತಿಂಬ ಕ್ರಮಲ್ಲಿ, ತಿಂಬ ವಸ್ತುಗಳಲ್ಲಿ, ತುರ್ತು ಜೀವನಲ್ಲಿ ಆರೋಗ್ಯ ಏರುಪೇರು ಆವುತ್ತು. ಆ ದಿಶೆಂದ ಒಂದೊಂದರಿ ಉಪವಾಸ ಮಾಡುದು ಆರೋಗ್ಯವೃದ್ಧಿಗೆ ಒಳ್ಳೇದು. ನಮ್ಮ ಅಂಗಾಂಗಂಗೊಕ್ಕೆ ವಿಶ್ರಾಂತಿ ಸಿಕ್ಕಿ, ನಮ್ಮ ಶರೀರದ ವಿಷವಸ್ತುಗಳ ಹೆರ ಹಾಕುಲೆ ಸಹಾಯ ಮಾಡ್ತು.  ಹಾಂಗಾಗಿ ನಮ್ಮ ಹಿರಿಯರು  ಹೇಳಿದ  ತಿಂಗಳಿನ ಎರಡು ದಿನ ಆದರೂ ಉಪವಾಸ ಮಾಡಿ ನಮ್ಮ ಆರೋಗ್ಯವೂ ಹೆಚ್ಚುಸಿಗೊಂಡು , ದೇವರ ಸಾನ್ನಿಧ್ಯವನ್ನೂ ಪಡಕ್ಕೊಂಬ ಒಳ್ಳೆಯ ಅವಕಾಶ. ಆದರೆ ನಮ್ಮ ಕೆಲವು ಪುಡಾರಿಗೋ ‘ಉಪವಾಸ ಸತ್ಯಾಗ್ರಹ’ ಹೇಳಿ ಮಾಡ್ತ  ಹಾಂಗೆ ನಮ್ಮ ಬೋಸ ಭಾವಂಗೆದೆ ಒಂದು ಹೊತ್ತಿನಷ್ಟೇ ಉಪವಾಸ ಮಾಡ್ಲೆ ಎಡಿಗಪ್ಪದಡ್ಡ !! 😉 ಉದಿಯಂದ ಮಧ್ಯಾಹ್ನವರೆಗೆ ಮಾಂತ್ರ!!!

ವಿಷ್ಣು ಸಹಸ್ರನಾಮಲ್ಲಿ ಅಕೇರಿಗೆ ಹೇಳ್ತ ಹಾಂಗೆ..

ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುಧ್ಯಾತ್ಮನಾವಾ ಪ್ರಕೃತೇ ಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ರ್ಪಯಾಮಿ ||

ಕಾಯಂದಾಗಿ, ವಚನಂಗಳಿಂದಾಗಿ, ಮನಸ್ಸಿಂದಾಗಿ, ಬುದ್ಧಿಂದಾಗಿ, ಆತ್ಮಂದಾಗಿ, ಪ್ರಕೃತಿಂದಾಗಿ, ಸ್ವಭಾವಂದಾಗಿ – ಎಂತೆಲ್ಲ ಮಾಡ್ತನೋ – ಆ ಸಕಲವನ್ನೂ ನಾರಾಯಣಂಗೆ  ಸಮರ್ಪಿಸುತ್ತೆ – ಹೇಳಿ ಪ್ರಾರ್ಥನೆ ಮಾಡುತ್ತು.

ನಾವು ಈ ಜನ್ಮಲ್ಲಿ ಮಾಡುವ ಎಲ್ಲಾ ಕೆಲಸಂಗಳೂ, ಅನುಭವಿಸುವ ಎಲ್ಲಾ ಸುಖ ದುಃಖಂಗಳೂ, ಒಟ್ಟಾಗಿ ಇಡೀ ಜನ್ಮವನ್ನೇ ದೇವರಿಂಗೆ ಸಮರ್ಪುಸುತ್ತೆಯಾ° ಹೇಳಿ ಅರ್ತ. ಯಾವಾಗ ಪ್ರತಿಯೊಬ್ಬನಲ್ಲಿಯೂ ಈ ಭಾವನೆ ಬತ್ತೋ, ಅವ° ಖಂಡಿತವಾಗಿಯೂ ವಿಷ್ಣು ಸಾಯುಜ್ಯ ಪಡೆತ್ತ°. ಜೀವನದ ಚಕ್ರದ ಹುಟ್ಟು ಸಾವಿನ ಉರುಳಾಟಲ್ಲಿ ನಾವು ಪ್ರತಿ ಜನ್ಮಲ್ಲಿ ಬಂದು ಹೋಗದ್ದೆ ಆದಷ್ಟು ಬೇಗ ಭಗವಂತನ ಸಾಯುಜ್ಯ ಪಡೆಯೆಕ್ಕು ಹೇಳಿ ಆದರೆ ನಮ್ಮ ಹಿರಿಯರು ನವಗೆ ಹೇಳಿಯೇ ಪ್ರಸಾದಿಸಿ ಕೊಟ್ಟ ಸ್ತೋತ್ರಂಗಳ ಮನಸ್ಸು ಮಡುಗಿ ಪಠಣ ಮಾಡೆಕ್ಕು. ಇಲ್ಲದ್ದೆ ಇದ್ದಲ್ಲಿ ನಾವು ಜನ್ಮಾಂತರದ ಚಕ್ರಲ್ಲಿ ಸಿಕ್ಕಿ ಒಂದಾಗಿ ಒಂದು ಜನ್ಮಲ್ಲಿ ಬಂದು ಹೋಗಿ ಮಾಡೆಕ್ಕಕ್ಕು. ಎಲ್ಲೋರಿಂಗೂ ಅವರವರ ಬಾಳಿನ ದಾರಿ ಸುಲಭವಾಗಿ ದಾಂಟುವ ಹಾಂಗೆ ಆಗಲಿ. ಎಲ್ಲೋರಿಂಗೂ  ಗುರು ದೇವರ ಅನುಗ್ರಹ ಇದ್ದುಗೊಂಡು, ಜೀವನಲ್ಲಿ ಒಳ್ಳೆ ದಾರಿ ಕಾಂಬ ಹಾಂಗೆ ಆಗಲಿ ಹೇಳ್ತ ಹಾರೈಕೆ.

ಸೂ:

 • ಇದು ಸಂಗ್ರಹ ಮಾಡಿದ ಒಂದು ಶುದ್ದಿ. ನಾವು ನಿತ್ಯ ಸ್ತೋತ್ರ ಮಾಡುವ ಶ್ರೀ ವಿಷ್ಣು ಸಹಸ್ರನಾಮದ ಮೂಲವ ತಿಳ್ಕೊಂಬ ಒಂದು ಪ್ರಯತ್ನ. ಈ ಶುದ್ದಿಯ ಸುಳಿವು ಕೊಟ್ಟು, ಕೊಂಡಿ ಕೊಟ್ಟು ಬರವಲೆ ಪ್ರೇರೇಪಿಸಿದ ಶರ್ಮಪ್ಪಚ್ಚಿಗೆ, ಶ್ಲೋಕ ಮಾಹಿತಿ ಕೊಟ್ಟ ಬಟ್ಟಮಾವಂಗೆ ಧನ್ಯವಾದಂಗ.
 • ಸುಬ್ಬುಲಕ್ಷಿ ಅಜ್ಜಿ ಹೇಳಿದ ವಿಷ್ಣುಸಹಸ್ರನಾಮವೂ, ಇಂಗ್ಳೀಶಿಲಿ ಬರದ ಶ್ಲೋಕಂಗಳೂ ಈ ಸಂಕೊಲೆಲಿ ಇದ್ದು: ಸಂಕೊಲೆ
 • ಪಟ: ಇಂಟರ್ನೆಟ್ಟಿಂದ
ವಿಷ್ಣು ಸಹಸ್ರನಾಮದ ಜನ್ಮ ದಿನ ಭೀಷ್ಮ ಏಕಾದಶೀ.., 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಸುಭಗ
  ಸುಭಗ

  ಶ್ರೀ ಅಕ್ಕ, ಇದು ಗಡಿಬಿಡಿಲಿ ಓದಿ ಮುಗುಶುವ ಕುಶಾಲಿನ ಶುದ್ದಿ ಅಲ್ಲದ್ದ ಕಾರಣ ತಡವಾಗಿಯಾದರೂ ಇಂದು ಸಾವಕಾಶ ಕೂದಂಡು ಓದಿದೆ. ತುಂಬ ಚೆಂದಕೆ ಬರದ್ದಿ. ಭೀಷ್ಮನ ಉನ್ನತ ವ್ಯಕ್ತಿತ್ತ್ವವ ಇಲ್ಲಿ ಸಮರ್ಪಕವಾಗಿ ಅನಾವರಣ ಮಾಡಿದ್ದಿ. (ವಿಷ್ಣು ಸಹಸ್ರನಾಮದ ಕರ್ತೃ ಭೀಷ್ಮ ಹೇಳ್ತ ಸಂಗತಿಯೂ ಎನಗೆ ಈ ವರೆಗೆ ಗೊಂತಿದ್ದಿಲ್ಲೆ! ) ‘ಆಚಾರ್ಯ’ ಅಭಿದಾನವ ಪಡವಲೆ ನಿಜವಾಗಿಯೂ ಅರ್ಹತೆ ಇಪ್ಪ ವ್ಯಕ್ತಿ ಅವ ಹೇಳುದಕ್ಕೆ ಈ ಘಟನೆಯೇ ಸ್ಪಷ್ಟ ಸಾಕ್ಷಿ.

  ಮಹಾಭಾರತದ ಈ ಅಮೂಲ್ಯ ಅಂಶವ ಬೈಲಿನವಕ್ಕೆ ಹಂಚಿದ ನಿಂಗಳೂ ಒಂದುಲೆಕ್ಕಲ್ಲಿ ಆಧುನಿಕ ‘ಸಂಜಯ’ನೇ 😉

  ಅಭಿನಂದನೆಗೊ. ಹೀಂಗಿಪ್ಪದು ಇನ್ನಷ್ಟು ಬರಲಿ ಶ್ರೀ ಅಕ್ಕ…

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಸುಭಗ ಭಾವ°, ಒಪ್ಪಕ್ಕೆ ಧನ್ಯವಾದ.
  [ಮಹಾಭಾರತದ ಈ ಅಮೂಲ್ಯ ಅಂಶವ ಬೈಲಿನವಕ್ಕೆ ಹಂಚಿದ ನಿಂಗಳೂ ಒಂದುಲೆಕ್ಕಲ್ಲಿ ಆಧುನಿಕ ‘ಸಂಜಯ’ನೇ]
  ಕೃಷ್ಣನ ವರಂದ ದಿವ್ಯದೃಷ್ಟಿ ಇದ್ದ ಕಾರಣ ಸಂಜಯಂದ ನವಗೆ ವಿಷಯಂಗ ಸಿಕ್ಕಿತ್ತು ಅಲ್ಲದಾ? ಹಾಂಗೇ ಎನಗೂ ಶರ್ಮಪ್ಪಚ್ಚಿಯೂ, ಬಟ್ಟಮಾವನೂ ದಿವ್ಯದೃಷ್ಟಿ ಕೊಡದ್ದೆ ಇರ್ತಿತ್ತರೆ ಎನಗೂ ಈ ವಿಷಯ ಹೇಳ್ಳೆ ಎಡಿಗಾವುತ್ತಿತ್ತಿಲ್ಲೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಗೋಪಾಲಣ್ಣಅಜ್ಜಕಾನ ಭಾವಪುಣಚ ಡಾಕ್ಟ್ರುಶಾ...ರೀಪೆರ್ಲದಣ್ಣಪುತ್ತೂರುಬಾವಸಂಪಾದಕ°ಅಡ್ಕತ್ತಿಮಾರುಮಾವ°ಅನುಶ್ರೀ ಬಂಡಾಡಿಪವನಜಮಾವಡೈಮಂಡು ಭಾವವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ಬಂಡಾಡಿ ಅಜ್ಜಿದೊಡ್ಮನೆ ಭಾವಅನು ಉಡುಪುಮೂಲೆವಾಣಿ ಚಿಕ್ಕಮ್ಮವಿದ್ವಾನಣ್ಣಡಾಮಹೇಶಣ್ಣಪಟಿಕಲ್ಲಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುನೀರ್ಕಜೆ ಮಹೇಶಮಾಷ್ಟ್ರುಮಾವ°ಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ