ಭೋಜನ ಸ್ವೀಕಾರ ಮಂತ್ರ

January 16, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಣ್ಣ ಇಪ್ಪಗ ಜೆಪದ ಮಂತ್ರಂದ ಕಲಿವಲೆ ಸುರುಮಾಡ್ತವು.
ಅಂಬಗ ಗೋಪಿ ಮೆತ್ತಿಗೊಂಡು ಜೆಪ ಮಾಡ್ತದು ತುಂಬ ಕುಶಿಯ ಸಂಗತಿ.
ದೊಡ್ಡ ಆದ ಮತ್ತೆ ಕೈನ್ನೀರು ತೆಗವ ಮಂತ್ರಂದ ಕಲಿವಲೆ ಸುರು ಮಾಡುದಡ – ಎಂತಕೆ ಹೇಳಿರೆ, ದೊಡ್ಡವಕ್ಕೆ ಉಂಬದೇ ಕುಶಿಯ ಸಂಗತಿ ಅಡ!

ಇದು ಕೈನ್ನೀರು ತೆಗವಗ ಹೇಳ್ತದು, 
ಭೋಜನ ಸ್ವೀಕಾರ ಮಂತ್ರ
:

1. ಪ್ರೋಕ್ಷಣೆ:

ಬಾಳೆಲೆಬುಡಲ್ಲಿ (ಬಾಳೆಬುಡಲ್ಲಿ ಅಲ್ಲ!) ಕೂದಂಡು ಸುರೂವಿಂಗೆ ಕೈಲಿ ನೀರು ತೆಕ್ಕೊಂಡು ಅಶನಕ್ಕೆ ಗಾಯತ್ರಿ ಮಂತ್ರಲ್ಲಿ ಪ್ರೋಕ್ಷಣೆ ಮಾಡುದು:
ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ||
ಧಿಯೋ ಯೋನ:ಪ್ರಚೋದಯಾತ್ ||

2. ಪರಿಷಿಂಚನೆ:
ಈ ಮಂತ್ರ ಹೇಳಿಗೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ದಕ್ಷಿಣ ಭಾಗಂದ ಪ್ರಾರಂಭ ಮಾಡಿ ವೃತ್ತಾಕಾರಲ್ಲಿ ಪುನಃ ದಕ್ಷಿಣಕ್ಕೆ ನೀರು ಸುತ್ತುಗಟ್ಟುವದು.
ಇದುವೇ ಪರಿಷಿಂಚನೆ
ಸತ್ಯಂ ತ್ವರ್ತೇ ನ  ಪರಿಷಿಂಚಾಮಿ || (ಹಗಲಿಂಗೆ)
ಋತಂ ತ್ವಾ ಸತ್ಯೇನ
ಪರಿಷಿಂಚಾಮಿ ||(ಇರುಳಿಂಗೆ)

3. ಹವಿಸ್ಸು ಸಮರ್ಪಣೆ:
ಬಾಳೆ ಎಲೆಯ ದಕ್ಷಿಣ ಭಾಗಲ್ಲಿ ಪೂರ್ವಂದ ಪ್ರಾರಂಭ ಮಾಡಿ ಪಡು ಹೊಡೆಂಗೆ ಯಮಾದಿ ದೇವತೆಗಕ್ಕೆ ಹವಿಸ್ಸು ಸಮರ್ಪಣೆ.
ಒಂದೊಂದೇ ಅಶನವ ಮಡುಗಿ ಒಂದೊಂದು ಬಿಂದು ನೀರು ಬಿಡುವದು.
ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ |
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |

(ನಾಲ್ಕು ಅವುಳು ಅಶನ ಮಡಗುದು)

ಚಿತ್ರಾಯ ನಮ: ತೃಪ್ತಿರಸ್ತು |
ಚಿತ್ರಗುಪ್ತಾಯ ನಮ: ತೃಪ್ತಿರಸ್ತು |
ಯಮಾಯ ನಮ: ತೃಪ್ತಿರಸ್ತು |
ಯಮಧರ್ಮಾಯ ನಮ: ತೃಪ್ತಿರಸ್ತು ||

(ನಾಲ್ಕು ಹುಂಡು ನೀರು ಬಿಡುದು)
(ವಸಿಷ್ಠ ಗೋತ್ರದವು  ಈ ರೀತಿ ಹವಿಸ್ಸು ಸಮರ್ಪಣೆ ಮಾಡ್ಲೆ ಇಲ್ಲೆ. ಅವು ನಿತ್ಯ ಅಗ್ನಿಹೋತ್ರಿಗ!
ಅವು ಅಗ್ನಿಯ ಆರಾಧನೆ ಮಾಡುವಗ ಹವಿಸ್ಸು ಸಮರ್ಪಣೆ ಮಾಡುವದು ಹೇಳಿ ಶಾಸ್ತ್ರ ವಚನ)

4. ಪ್ರಾರ್ಥನೆ:
ಎಡದ ಕೈ ಪವಿತ್ರ ಬೆರಳಿಲಿ ಬಾಳೆಎಲೆ ಮುಟ್ಟಿಗೊಂಡು, ಬಲ ಕೈಲಿ ನೀರು ಹಿಡ್ಕೊಂಡು ಈ ಮಂತ್ರ ಪ್ರಾರ್ಥನೆ ಮಾಡೇಕು:
ಅಂತಶ್ಚರಸಿ ಭೂತೇಷು ಗುಹಾಯಾಂ ವಿಶ್ವತೋಮುಖಃ |
ತ್ವಂ ಯಜ್ನಸ್ತ್ವಂ ವಷಟ್ಕಾರಸ್ತ್ವಂ ವಿಷ್ಣುಃ ಪುರುಷಃ ಪರಃ ||

ಇದರ ಹೇಳಿಗೊಂಡೂ ಆ ನೀರಿನ ಕುಡಿಯೇಕು:
ಅಮೃತೋಪಸ್ತರಣಮಸಿ ಸ್ವಾಹಾ ||

5. ಅನ್ನಪ್ರಾಶನ:

ಇನ್ನು ಅನ್ನ ಪ್ರಾಶನ (ಅವುಳು ನುಂಗುದು).
ಒಂದೊಂದು ಮಂತ್ರಕ್ಕೂ ಒಂದೊಂದು ಕ್ರಮಲ್ಲಿ ಅಶನ ‘ಸ್ವಾಹಾ’ ಮಾಡುದು.

ಓಂ ಪ್ರಾಣಾಯ ಸ್ವಾಹಾ ||  ಪೂರ್ವ ದಿಕ್ಕಿಂದ ಒಂದು ಅಶನವ ಅಗುಷ್ಠ , ತೋರು, ಮಧ್ಯ, ಬೆರಳುಗಳ ಸೇರ್ಸಿ ಹೆರ್ಕಿ ಪ್ರಾಶನ ಮಾಡೆಕ್ಕು.
ಓಂ ಅಪಾನಾಯ ಸ್ವಾಹಾ ||  ದಕ್ಷಿಣ ದಿಕ್ಕಿಂದ ಅಂಗುಷ್ಠ, ಮಧ್ಯ, ಪವಿತ್ರ ಬೆರಳುಗಳ ಸೇರ್ಸಿ..
ಓಂ ವ್ಯಾನಾಯ ಸ್ವಾಹಾ ||  ಪಶ್ಚಿಮ ದಿಕ್ಕಿಂದ ಅಂಗುಷ್ಠ, ಪವಿತ್ರ, ಕಿರು ಬೆರಳುಗಳ ಸೇರ್ಸಿ..
ಓಂ ಉದಾನಾಯ ಸ್ವಾಹಾ ||  ಉತ್ತರ ದಿಕ್ಕಿಂದ ಅಂಗುಷ್ಠ, ಕಿರು, ತೋರು ಬೆರಳುಗಳ ಸೇರ್ಸಿ..
ಓಂ ಸಮಾನಾಯ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
ಓಂ ಬ್ರಹ್ಮಣೇ ಸ್ವಾಹಾ ||ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು

ಋಷಿಮುನಿಗೊಕ್ಕೆ ಊಟ ಹೇಳಿ ಇದ್ದದು ಇದೇ ಆರು ತುತ್ತಗೊ ಮಾಂತ್ರ ಅಡ.
ನಾವು ಸಾಂಪ್ರದಾಯಿಕವಾಗಿ ಅವುಳು ತಿಂದು ಮತ್ತೆ ಉಂಬಲೆ ಸುರುಮಾಡುದು.
ಹಾಂಗೆ, ಇನ್ನು ಗಡದ್ದಿಂಗೆ ಉಂಬದು.

6. ಆಪೋಶನ :

ಊಟ ಆದಮೇಲೆ ಆಪೋಶನ.
ಬಲ ಕೈಗೆ ನೀರು ಹಾಕಿಯೊಂಡು ಈ ಮಂತ್ರ ಹೇಳಿಕ್ಕಿ ಕುಡಿವದು.
ಅಮೃತಾಪಿಧಾನಮಸಿ ಸ್ವಾಹಾ ||

ಇನ್ನು ಕೈ ತೊಳದು ಅಪ್ಪನ್ನಾರ ಆಹಾರ / ನೀರು ಸೇವನೆ ಮಾಡ್ಳಾಗ. ನೀರು ಕುಡಿತ್ತರೂ ಎದ್ದು ಕೈ ತೊಳದ ಮತ್ತೆಯೇ ಆತಷ್ಟೆ.

ಭೋಜನ ಸ್ವೀಕಾರ ಮಂತ್ರ, 3.8 out of 10 based on 4 ratings

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ವೆಂಕಟೇಶ

  Magange upanayana maadule alochane maaduvaga ee lekhan sikkiddu baari upakara aathu.

  [Reply]

  VA:F [1.9.22_1171]
  Rating: 0 (from 0 votes)
 2. Sthuti Bhat

  hello,ganesha maava,,ninga elligoo laaga haakle suru maadideera?laayika aayidu aatha,,kai neeru tegava vishaya,but enga koosuga kai neeru tegava haange illenne,, ha, helida haange ningoge idara ella baravale time eshtottinge sikkuttu?
  oppanna na bagge parichaya aayekkashte, nidhaanavaagi nodte oppanna.. olle lekhanakke ibru oppannandringe dhanyavadagalu…..

  [Reply]

  VA:F [1.9.22_1171]
  Rating: 0 (from 0 votes)
 3. ಗುತ್ತು ಸದಾಶಿವ’

  ಇಷ್ಟೆಲ್ಲಾ ಸಂಗತಿದೆ ಇದ್ದು – ಭೋಜನ ಸ್ವೀಕಾರಲ್ಲಿ ಹೇಳುವದು ಎನಗೊಂತಿತ್ತಿದ್ದಿಲ್ಲೆ! – ಇಷ್ಟು ವಿವರವಾಗಿ ತಿಳುದು ಒಂದುದೆ ತಪ್ಪಿಲ್ಲದ್ದ ಹಾಂಗೆ ಬರೆಕಾರೆ ಆ ಬರದ ಜನಕ್ಕೆ ಜ್ಞಾನದೆ ಸಹನೆದೆ ಸ್ಪೂರ್ತಿದೆ ಮೂಗಿಂದ ಮೇಲೆ ಇಪ್ಪಲೇ ಬೇಕು! – ಆರೇ ಇರಳಿ ಅವಕ್ಕೆ ಎನ್ನ ಎದೆ ಒಳಂದ ಧನ್ಯವಾದ!

  [Reply]

  VA:F [1.9.22_1171]
  Rating: +1 (from 1 vote)
 4. Vinoda

  E manthrangala Ottinge … Namma Bhagavadgeethe Manthra helidhare olledhu

  Brahmarpanam Brahma Havir
  Brahmagnau Brahmana Hutam
  Brahmaiva Tena Ghantavyam
  Brahmakarma Samadhinaha

  Aham Vaishvanaro Bhutva
  Praninaam Dehamaa Ashritaha
  Prana Pana Samayuktah
  Pachamyannam Chaturvidham

  For More details see:

  http://www.sathyasai.org/devotion/prayers/brahmar.html

  [Reply]

  VA:F [1.9.22_1171]
  Rating: +5 (from 5 votes)
 5. prashanth

  olleya vishaya gonthathu

  [Reply]

  VA:F [1.9.22_1171]
  Rating: 0 (from 0 votes)
 6. ಕುವೈತ್ ಭಾವ

  ಗಣೇಶ ಮಾವ, ಉತ್ತಮ ಲೇಖನ. ಆದರೆ ಒಂದು ಸಂಶಯ….. ಪ್ರಾಶನ ಆರಂಭ ಪೂರ್ವಂದ ಅಲ್ಲದೋ? ಮುದ್ರಾರಾಕ್ಷಸನ ಹಾವಳಿಯೋ ಏನೋ? ಎನಗೆ ತೋರಿದ್ದರ ಕೆಳ ಬರದ್ದೆ.

  ಓಂ ಪ್ರಾಣಾಯ ಸ್ವಾಹಾ || ಪೂರ್ವ ದಿಕ್ಕಿಂದ ಅಶನವ ತೋರು ಬೆರಳು, ಮಧ್ಯಮ, ಅಂಗುಷ್ಠ ಬೆರಳುಗಳ ಸೇರ್ಸಿ ಹೆರ್ಕಿ ಪ್ರಾಶನ ಮಾಡೆಕ್ಕು.
  ಓಂ ಅಪಾನಾಯ ಸ್ವಾಹಾ || ದಕ್ಷಿಣ ದಿಕ್ಕಿಂದ ಅಶನವ ಮಧ್ಯಮ,ಪವಿತ್ರ,ಅಂಗುಷ್ಠ ಬೆರಳುಗಳ ಸೇರ್ಸಿ..
  ಓಂ ವ್ಯಾನಾಯ ಸ್ವಾಹಾ || ಪಶ್ಚಿಮ ದಿಕ್ಕಿಂದ ಕಿರುಬೆರಳು, ಪವಿತ್ರ ಬೆರಳು, ಅಂಗುಷ್ಠ ಬೆರಳು ಸೇರ್ಸಿ..
  ಓಂ ಉದಾನಾಯ ಸ್ವಾಹಾ || ಉತ್ತರ ದಿಕ್ಕಿಂದ ಕಿರು ಬೆರಳು, ತೋರು ಬೆರಳು, ಅಂಗುಷ್ಠ ಬೆರಳು ಸೇರ್ಸಿ..
  ಓಂ ಸಮಾನಾಯ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
  ಓಂ ಬ್ರಹ್ಮಣೇ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು

  ಎನ್ನದು ತಪ್ಪಿದ್ದರೆ ಗೊಂತಿದ್ದನ್ನೆ…, ತಿದ್ದಿಕ್ಕಿ.

  [Reply]

  VA:F [1.9.22_1171]
  Rating: 0 (from 0 votes)
 7. ಗಣೇಶ ಮಾವ°
  ಗಣೇಶ ಮಾವ

  ಪಾಠನ್ತರ,ದೇಶ ಕಾಲೌ ಸಂಕೀರ್ತ್ಯ…ಹೇಳುವ ಹಾಂಗೆ ಒಂದೊಂದು ಗ್ರಂಥ ಆಧಾರ ಪ್ರಕಾರ ಇರ್ತು ಭಾವ,ಆನು ಕಾಂಚೀ ಮಠದ ಪದ್ಧತಿಯ ಇಲ್ಲಿ ಹಾಕಿದ್ದು..ನಿಂಗಳ ಸಲಹೆಗೆ ಧನ್ಯವಾದ.

  [Reply]

  ranju Reply:

  dayavittu trikala sandhya vandhane vidhi vidhana bagge detailagi bareyakku heli korike…

  [Reply]

  VA:F [1.9.22_1171]
  Rating: 0 (from 0 votes)
 8. Kesh
  Keshavchandra Bhatt Kekanaje

  Hello Ganesh Mava,

  Tumba thanks for bhojana mantra.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗನೆಗೆಗಾರ°ಶ್ರೀಅಕ್ಕ°ವೆಂಕಟ್ ಕೋಟೂರುಅಕ್ಷರದಣ್ಣಪವನಜಮಾವದೊಡ್ಡಮಾವ°ಕೊಳಚ್ಚಿಪ್ಪು ಬಾವಶ್ಯಾಮಣ್ಣಬಂಡಾಡಿ ಅಜ್ಜಿವಸಂತರಾಜ್ ಹಳೆಮನೆಉಡುಪುಮೂಲೆ ಅಪ್ಪಚ್ಚಿಜಯಗೌರಿ ಅಕ್ಕ°ಕೇಜಿಮಾವ°ದೊಡ್ಡಭಾವಪುತ್ತೂರಿನ ಪುಟ್ಟಕ್ಕಗಣೇಶ ಮಾವ°ಕಳಾಯಿ ಗೀತತ್ತೆಶರ್ಮಪ್ಪಚ್ಚಿಕಾವಿನಮೂಲೆ ಮಾಣಿಡಾಮಹೇಶಣ್ಣvreddhiಸಂಪಾದಕ°ಶಾಂತತ್ತೆಬಟ್ಟಮಾವ°ವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ