ಭೂತ

ಶಂಭಟ್ರಿಂಗೆ ಅಂದು ಉದಿಯಪ್ಪಗಳೇ ಗಡಿಬಿಡಿ.
ನಾಕು ಗಂಟೆಗೆ ಎದ್ದವು.ನಿತ್ಯದ ಕೆಲಸ ಮುಗಿಸಿದವು.
ಅವರ ಯಜಮಾಂತಿ ನಾಕು ದೋಸೆ ಎರೆದು ಕೊಟ್ಟವು.ಅದರ ಹೇಂಗೊ ತಿಂದವು.
ಕಣ್ಣು ಟೈಂಪೀಸಿನ ಮೇಲೇ ಇತ್ತು.ಚಳಿಗಾಲ.ರಜಾ ಚಳಿ ಚಳಿ ಆಗಿಂಡಿತ್ತು.ಆದರೂ ಹೋಯೆಕ್ಕಾದಕ್ಕೆ ಹೋಗದ್ದೆ ನಿವೃತ್ತಿ ಇಲ್ಲೆನ್ನೆ?

ಕೋರ್ಟಿಲಿ ಅಂದೇ ಅವರ ಕೆರೆನೀರಿನ ನಂಬ್ರದ ವಾಯಿದೆ.
ಅದು ಅವರ ಪಾಲಿನ ಕೆರೆ. ಇಪ್ಪದೇನೋ ಅವರ ಜಾಗೆಲೇ. ಒಂದು ಕಾಲಲ್ಲಿ ವಿಷುವಿನ ನಂತರವೂ ಸುಮಾರು ದಿನ ಎರಡು ಹೊತ್ತೂ ನೀರು ಸಿಕ್ಕುಗು.
ಸುತ್ತ ಏಳೆಂಟು ಪಾಲುಗಾರಕ್ಕೊಗೆ ಧಾರಾಳ ಆಗಿಕೊಂಡಿತ್ತು.ಈಗ ಕಷ್ಟದ ಕಾಲ.ಕೆಡ್ವಾಸ ವರೆಗೂ ನೀರು ಸಿಕ್ಕ.

ಕೆಳಾಣ ತೋಟ ಅವರ ದಾಯಾದಿ ರಾಮಭಟ್ರದ್ದು.
ಅವಕ್ಕೆ ವಾರಲ್ಲಿ ಒಂದು ದಿನದ ನೀರು ಸಿಕ್ಕೆಕ್ಕು.
ಅದು ಅಲ್ಲಿಗೆ ವರೆಗೆ ಮುಟ್ಟುತ್ತಿಲ್ಲೆ.ಅದಕ್ಕೆ ಪಾಪ ಶಂಭಟ್ರು ಎಂತ ಮಾಡುದು?

ಅವು ರಾಮಭಟ್ರಿಂಗೆ ಹೇಳಿ ನೋಡಿದವು-ನಿನ್ನ ಹಕ್ಕು ಎನಗೆ ಕೊಡು, ಬಪ್ಪಷ್ಟು ದಿನ ಆನು ನೀರು ತೆಕ್ಕೊಳ್ತೆ ಹೇಳಿ.
ನಮ್ಮವಕ್ಕೆ ಕೆಲವರಿಂಗೆ ಒಂದು ಕೆಟ್ಟ ಗುಣ ಇರುತ್ತು,ಎನಗೆ ಸಿಕ್ಕದ್ದರೂ ಬೇಡ,ಮತ್ತಿದ್ದವಂಗೆ ಕೊಡೆ ಹೇಳಿ.
ರಾಮಭಟ್ರು ಹೇಳಿದವು-ಎನ್ನ ಹಕ್ಕಿನ ನೀರು ಕೊಡು, ಇಲ್ಲದ್ದರೆ ನಿನ್ನ ಮೇಲೆ ನಂಬ್ರ ಮಾಡುವೆ, ನಿನಗೂ ತೆಕ್ಕೊಂಬಲೆ ಬಿಡೆ…ಇಂಜಂಕ್ಷನ್ ಮಾಡಿಸುವೆ-ಹೇಳಿ!

ಶಂಭಟ್ರೂ ಅದೇ ಮಣ್ಣಿಲಿ ಹುಟ್ಟಿದೋರಲ್ಲದೊ?
ಸಮಾಧಾನಿ ಆದರೂ ಅವಕ್ಕೆ ಕೋಪ ಬಂತು.

“ಇದಾ ರಾಮ,ನೀನು ಎಂತ ಬೇಕಾರೂ ಮಾಡು,ಎನಗೂ ವಕೀಲರಿದ್ದವು” ಹೇಳಿದವು ಶಂಭಟ್ರು!

ಆತು,ಎರಡೂ ಮನೆಯವು ವಕೀಲರ ನೇಮಿಸಿದವು,ನಂಬ್ರ ಸುರುವಾತು,ತಿಂಗಳಿಂಗೊಂದರಿ ವಾಯಿದೆ ಅಕ್ಕು.
ಪ್ರತಿ ಸರ್ತಿಯೂ ಕಾಸರಗೋಡಿಂಗೆ ಹೋಕು,ಇನ್ನಾಣ ವಾಯಿದೆ ಯಾವಾಗ ಹೇಳಿ ಕೇಳಿ ಬಕ್ಕು.
ವಕೀಲಂಗೆ ರಜ ಪೈಸೆ ಕೊಡುಗು.ಬಾಳೆ ಗೊನೆಯೊ,ಹಲಸಿನಕಾಯಿಯೊ ಕಾಣಿಕೆ ಕೊಡುಗು.
ವಕೀಲನ ಯಜಮಾಂತಿ ಕಾಫಿ,ತಿಂಡಿ ಎಲ್ಲ ಕೊಡುಗು.ಹೀಂಗೆ ನಡಕ್ಕೊಂಡಿತ್ತು.

ಶಂಭಟ್ರು ಬೇಗಬೇಗ ಅಂಗಿ ಸುರುಕ್ಕೊಂಡವು.ಸಮಯ ಅಷ್ಟಪ್ಪಾಗಳೇ ಐದೂವರೆ!ಸುರುವಾಣ ಬಸ್ಸು ಆರೂ ಹತ್ತಕ್ಕೆ,
ಅವರ ಮನೆಂದ ಬಸ್ಸಿಂಗೆ ಎರಡು ಮೈಲು ನಡೆಕ್ಕು.”ಇದಾ,ಆನು ಹೋಗಿಕೊಂಡು ಬತ್ತೆ,ಎಂತಾರೂ ಆಯೆಕ್ಕೊ ಕಾಸರಗೋಡಿಂದ?”ಹೇಳಿ ಕೇಳಿದವು.

“ಒಳ್ಳೆ ಹಪ್ಪಳ ಸಿಕ್ಕಿರೆ ತನ್ನಿ.ಬೇರೆ ಏನೂ ಬೇಡ”ಹೇಳಿದವು ಅರ್ಧಾಂಗಿ. ಸುಮ್ಮನೆ ಹೊತ್ತೊಂಡು ಬರೆಕ್ಕನ್ನೆ-ಹೇಳಿ ಅವರ ಯೋಚನೆ.
“ಟೋರ್ಚು ತೆಕ್ಕೊಳ್ಳಿ”ನೆನಪು ಮಾಡಿದ ಹೆಂಡತಿಗೆ”ಅದೇನೂ ಬೇಡ .ಈಗ ಉದಿ ಅಕ್ಕು.ಸಾರ ಇಲ್ಲೆ.ದಾರಿ ಕಾಂಗು.”ಹೇಳಿ ಉತ್ತರ ಕೊಟ್ಟು ಚೀಲ ತೆಕ್ಕೊಂಡು ಹೆರಟವು.
ಮೂಡಲಾಗಿ ಚೂರು ಬೆಣಚ್ಚಿ ಕಾಣುತ್ತೊ ಇಲ್ಲೆಯೊ ಹೇಳಿ ಇತ್ತಷ್ಟೆ.ಮನೆಂದ ಮೇಲೆ ಗುಡ್ಡೆ ಹತ್ತಿ ಮಣ್ಣಿನ ಮಾರ್ಗಲ್ಲಿ ನಡದವು-ದಾರಿ ಸರಿ ಕಾಣದ್ದರೂ ಅಭ್ಯಾಸ ಇಪ್ಪ ದಾರಿ,ಸೀದ ಬೀಸ ಬೀಸ ನಡೆದವು.

ಅವಕ್ಕೆ ಎದುರು ಕಾಂಬದೆಂತರ?ಒಂದಾಳು ಎತ್ತರದ್ದು!ಅದು ಮನುಷ್ಯನೊ ಅಲ್ಲ ಮೃಗವೊ ಹೇಳಿ ಅವಕ್ಕೆ ಸಂಶಯ.
ಹಂದುತ್ತಿಲ್ಲೆ ಆ ಮನುಷ್ಯ….ಎಯ್,ಎಯ್ ಹೇಳಿ ಸಣ್ಣಕೆ ಹೇಳಿದರೂ ಹಂದುತ್ತಿಲ್ಲೆ…ಬಸ್ಸಿಂಗೆ ಹೊತ್ತಾತು…ಹತ್ತರೆ ಮನೆ ಇಲ್ಲೆ.ಆರಿಂಗೂ ಕೇಳ.
ಶಂಭಟ್ರಿಂಗೆ ಹೆದರಿಕೆ ಆತು.ಈ ರಾಮ ಎಂತಾದರೂ ಮಾಟ ಮಡುಗಿದನೊ ಎಂತ?ವಿರೋಧ ಹೆಚ್ಚಾದರೆ ಜೆನಂಗೊ ಎಂತದೂ ಮಾಡುಗು…

ಹೆಂಡತಿ ಹೇಳಿದರೂ ಟೋರ್ಚು ತಾರದ್ದು ಹೆಡ್ಡಾತು ಹೇಳಿ ಹೇಳಿಕೊಂಡವು.ವಾಪಸ್ಸು ಹೋಪದೊ?
ಆ ವ್ಯಕ್ತಿ ಮೇಲಂಗೆ ಹಾರುಲೆ ಬಂದರೆ?
ಎಷ್ಟೋ ಜೆನ ದಾರಿಲಿ ಏನೊ ಆಗಿ ಸತ್ತದು ನೆಂಪಾಗಿ ಅವಕ್ಕೆ ನಡುಕ ಬಂತು.ಆನು ಸತ್ತರೆ ಪಾಪ ಅದು ಮನೆಲಿ ಮಕ್ಕಳ ಕಟ್ಟಿಕೊಂಡು ಹೇಂಗೆ ಬದುಕುಗು?-ಹೇಳಿ ಅವರ ಕಣ್ಣಿಲಿ ನೀರು ಬಂತು.
ಅಲ್ಲಾ,ಇದು ಭೂತವೇ ಆದಿಕ್ಕೊ?
ಛಿ,ಛಿ, ಬ್ರಾಹ್ಮಣರಾಗಿ ಪ್ರೇತಕ್ಕೆಲ್ಲ ಹೆದರಲಿದ್ದೊ? ಅಷ್ಟು ಹೊತ್ತಿಂಗೆ ಅವಕ್ಕೆ ಹಳೆ ನೆಂಪು ಬಂತು….

**********

ತುಂಬಾ ವರ್ಷ ಮೊದಲು ಅವಕ್ಕೆ ಹದಿನೆಂಟು ವರ್ಷ ಪ್ರಾಯ, ಮಕ್ಕಳಾಟಿಕೆ ಬಿಡದ್ದ ಪ್ರಾಯ.
ಗುಂಪೆ ಗುಡ್ಡೆಯ ಹತ್ತರೆ ಅವರ ಸೋದರತ್ತೆಯ ಮನೆ. ಅಲ್ಲಿಗೆ ಹೋಗಿತ್ತಿದ್ದವು. ನಾಕು ದಿನ ಭಾವಂದ್ರ ಒಟ್ಟಿಂಗೆ ಇಪ್ಪಲೆ.
ಗುಡ್ಡೆ ಮೂರು ಸರ್ತಿ ಹತ್ತಿ ಇಳಿದಾತು-ಆ ನಾಕು ದಿನಲ್ಲಿ.

ಮರುದಿನ,ಅವರ ಭಾವಂದ್ರು ಹತ್ತರೆ ಎಲ್ಲಿಯೊ ಪೂಜೆಗೆ ಹೋಯಿದವು:ಇವಕ್ಕೆ ಹೋಪಲೆ ಹೇಳಿಕೆಯ ಕೊರತ್ತೆ ಆತು.ಮಧ್ಯಾನ್ನ ಅತ್ತೆ ಬಡಿಸಿದ ಊಟ ಉಂಡವು-ಮನಿಗಿದವು.
ಒರಕ್ಕು ಬಯಿಂದಿಲ್ಲೆ. ಎದ್ದಿಕ್ಕಿ ಅತ್ತೆ,ಆನು ಗುಡ್ಡೆಗೆ ಹೋಗಿ ಬತ್ತೆ ಹೇಳಿದವು.
ಅತ್ತೆಗೆ ಅರೆ ಒರಕ್ಕು , ಅವಕ್ಕೆ ಇವು ಗುಂಪೆ ಗುಡ್ಡೆ ಹತ್ತುಗು ಹೇಳಿ ಅಂದಾಜಾಯಿದಿಲ್ಲೆ-ಹೆರ ಕೂಪಲೆ ಹೋವುತ್ತ ಹೇಳಿ ಗ್ರೇಶಿದವು. ಆವಗ ಕಕ್ಕುಸು ಎಲ್ಲರ ಮನೆಲೂ ಇಲ್ಲೆನ್ನೆ.

ಶಂಭಟ್ರು ಗುಡ್ಡೆ ಹತ್ತಲೆ ಹೋದವು-ಒಬ್ಬನೆ.
ದಾರಿ ಗೊಂತಿದ್ದ ಕಾರಣ ಕಾಲು ಬಚ್ಚುವಷ್ಟು ತಿರುಗಿದವು.ಕಾಟು ಹಣ್ಣು ಬಾಯಿಗೆ ಹಾಕಿಕೊಂಡವು.ಪಾರೆಲಿ ಕೂದು ಗಾಳಿ ತಿಂದವು,ಆದರೂ ಒಬ್ಬನೆ ಇಪ್ಪಲೆ ಉದಾಸನ ಆತು.
ಈಗ ಭಾವಂದ್ರು ಬಪ್ಪಲಾತು-ಹೇಳಿ ಗ್ರೇಶಿದವು.ಸಮಯವೂ ಆರು ಗಂಟೆ ಅಕ್ಕು.ಕತ್ತಲೆ ಆದರೆ ಮನೆಂದ ಹುಡಿಕ್ಕಿಯೊಂಡು ಬಕ್ಕು.ಮೆಲ್ಲಂಗೆ ಹೆರಟವು.
ಅದ…
ಎದುರ ಒಂದು ಜೆನ ಹೆಹೆಹೆ ಹೇಳಿಯೊಂಡು ಬಂತು. ಗಂಟಲು ವರೆಗೆ ಕುಡಿದ್ದು. ಅದೊ,ಅದರ ವಸ್ತ್ರವೊ,ಅದರ ಹಲ್ಲೊ…
ಕಂಡರೆ ಕಾರುಲೆ ಬಕ್ಕು-ಹಾಂಗಿತ್ತು.

ಭಟ್ರೆ,ಭಟ್ರೆ,ಎಂತ ಇಲ್ಲಿ?-ಗುರ್ತ ಇಲ್ಲದ್ದರೂ ಭಟ್ರು ಹೇಳಿ ಮಾತಾಡಿಸಿತ್ತು.
ಅವರ ಜನಿವಾರ ಕಾಣುತ್ತನ್ನೆ-ಅಂಗಿ ಹಾಕದ್ದ ಕಾರಣ.
ಇವಕ್ಕೆ ಅಸಹ್ಯ ಆತು-ದೂರ ಹೋಗು ಹೇಳಿದವು. ಅದು ಮತ್ತಷ್ಟು ಹತ್ತರೆ ಬಂತು-ಕುಡಿದ ಮನುಷ್ಯಂಗೆ ಜಾತಿ ಭೇದ ಗೊಂತಾತಿಲ್ಲೆಯೊ ಏನೊ?

ಪಿಸುರು ತಲೆಗೇರಿದ ಶಂಭಟ್ರು ಕೈಯೆತ್ತಿ ಅದರ ಕಪಾಳಕ್ಕೆ ಒಂದು ಬಿಗಿದವು; ಅದು ತಿಂದದು,ಕುಡುದ್ದರ ಎಲ್ಲಾ ಕಾರಿ ಬಿದ್ದತ್ತು.
ಹತ್ತರೆ ನಿಂಬಲೆ ಎಡಿಯ. ಅವು ಓಡಿಯೊಂಡೆ ಮನೆ ಸೇರಿದವು.ಒಬ್ಬನೆ ಹೋದ್ದಕ್ಕೆ ಅತ್ತೆ ಬೈದವು…
ಸುಟ್ಟವು ಎಲ್ಲಾ ಮಾಡಿ ಕಾದೊಂಡಿತ್ತಿದ್ದವು ಅಳಿಯಂಗೆ ಬೇಕಾಗಿ.

*************

ಈ ಜೆನ ಅದುವೆ ಎಂತದೊ? ಅದು ಸತ್ತು ಭೂತ-ಪಿಶಾಚಿ ಆತೊ ಏನೊ?
ಎನ್ನ ಪೆಟ್ಟಿಲೇ ಸತ್ತಿದೊ ಏನೊ-ಆರೂ ಹೇಳುದು ಕೇಳಿದ್ದಿಲ್ಲೆ…. ಶಂಭಟ್ರ ಮನಸ್ಸಿಲಿ ಎಲ್ಲೊ ಹುಗ್ಗಿದ್ದ ಕಳ್ಳ ಹೆರ ಬಂದು ಆಡುಲೆ ಸುರು ಮಾಡಿತ್ತು.

ಆದರೆ ಬ್ರಾಹ್ಮಣರು ಹೆದರೆಕ್ಕು ಹೇಳಿ ಇಲ್ಲೆನ್ನೆ.ಅಪ್ಪ ನೂಲು ಹಾಕಿ ಉಪದೇಶ ಮಾಡಿದ ಗಾಯತ್ರಿ ಜಪ ಇದ್ದನ್ನೆ?ಮತ್ತೆಂತ ಹೆದರಿಕೆ?

ಅಲ್ಲೆ ಪಾರೆಲಿ ಕೂದು ಕಣ್ಣು ಮುಚ್ಚಿ ನೂರೆಂಟು ಗಾಯತ್ರಿಜಪ ಮಾಡಿದವು.

‌********

ಕಣ್ಣು ಬಿಟ್ಟು ನೋಡುತ್ತವು-ಬೆಣಚ್ಚಿ ಆವುತ್ತಾ ಇದ್ದು-ಭೂತ ಎಲ್ಲಿದ್ದು?

ಭೂತ ಎಲ್ಲಿಯೂ ಇಲ್ಲೆ!
ಜಾತ್ರೆಯ ಪ್ರಚಾರದ ಒಂದು ವಸ್ತ್ರದ ಬ್ಯಾನರ್ ಕೆಳ ಬಿದ್ದಿದು-ಒಂದು ದಡ್ಡಾಲದ ಒಣಗಿದ ಗೆಡುವಿನ ಮೇಲೆ- ಹೊದೆದ ಹಾಂಗೆ ಇತ್ತು!

ಮನಸ್ಸಿಲೇ ಭೂತ ಇಪ್ಪದು-ನಮ್ಮ ಭೂತಕಾಲವೆ ನಮಗೆ ಭೂತ-ಬೇರೇನೂ ಇಲ್ಲೆ!
ಬಸ್ಸು ಹೋಪಲಾತು ಹೇಳಿ ಶಂಭಟ್ರು ಓಡಿದವು.

ಗೋಪಾಲಣ್ಣ

   

You may also like...

14 Responses

  1. Indira K Bhat says:

    Kathe thumba natural aagi layka iddu. All the best Gopala

    Intha kathegala innu raja bare gopala

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *