Oppanna.com

ಅಂತೂ ಬಂತೂ ನಿಷೇಧ

ಬರದೋರು :   ಪೆಂಗಣ್ಣ°    on   30/04/2011    14 ಒಪ್ಪಂಗೊ

ಪೆಂಗಣ್ಣ°

ಪೆಂಗಣ್ಣ ಬರೆಯದ್ದೆ ಸುಮಾರು ದಿನ ಆತು. ಎಲ್ಲೋರು ಕೇಳುವವೇ. ಶ್ರೀ ಅಕ್ಕ ಅಂತೂ ಶುದ್ದಿ ಹುಡ್ಕುಲೆ ಹೋದವ ನಾಪತ್ತೆ ಆದನೋ ಹೇಳುವ ಮಟ್ಟಿಗೆ. ಎಂತರ ಮಾಡುದು ರಜಾ ಕೇರಳಕ್ಕೆ ಹೋದ್ಸು ಇದಾ. ಬೇಕಾದಲ್ಲಿ ಸಿಕ್ಕ ಈ ಅಂತರಜಾಲ, ಒಟ್ಟಿಂಗೆ ನಮ್ಮ ಊಟವುದೇ. ಊಟ ಇಲ್ಲದ್ದೆ ನಮ್ಮ ಆಟ ಇದ್ದೋ.

ಇರಳಿ ವಿಷಯಕ್ಕೆ ಬಪ್ಪೋ. ಸದ್ಯ ನಮ್ಮ ಬೈಲಿನ ಆಚಂಗೆ ಈಚಂಗೆ ಶುದ್ದಿ ಅವ್ತಾ ಇಪ್ಪದು ಎಂಡೋ ಸಲ್ಫಾನ್ ಬಗ್ಗೆ. ಅದರಿಂದ ಆದ ಅನಾಹುತಂಗೊ ಅಷ್ಟಿಸ್ಟಲ್ಲ. ಈ ಬಗ್ಗೆ ಕನ್ನಡದ ಮಾಧ್ಯಮಂಗಳಲ್ಲಿ ಏನೂ ಮಾಹಿತಿ ಸಿಕ್ಕುತ್ತಿಲ್ಲೆ ಹೇಳುಲಕ್ಕೋ ಏನೋ. ಕೆಲವು ರಾಜಕಾರಣಿಗಳ ಬಿಟ್ರೆ ಚಾರ್ವಕದ ಸಂಜೀವನಂತಹ ಸಾಮಾನ್ಯರ ಬಗ್ಗೆ ಏನೂ ಬತ್ತಿಲ್ಲೆ.

ಈ ಬಗ್ಗೆ ಮೊದಲು ಕಾರ್ಯನಿಮಿತ್ತರಾದವು ನಮ್ಮವೇ ಆದ ನಮ್ಮ ಬೈಲಿನ ಶ್ರೀ ಶ್ರೀ ಪಡ್ರೆ ಮತ್ತು ಶ್ರೀ ಮೋಹನಕುಮರ್ ವೈ ಎಸ್. ಅತ್ಯಂತ ವ್ಯವಸ್ಥಿತವಾಗಿ ಹೋರಾಟವ ನಡೆಶಿದವು ಹೇಳಿ ದೊಡ್ಡಬಾವ ಸಮೋಸ ಕಳ್ಸಿ ಎಲ್ಲಾರಿಂಗೂ ಹೇಳ್ತಾ ಇದ್ದ. ನಿಂಗಳೂ ಹೇಳಿ. ಅಂತರಾಷ್ಟ್ರೀಯ ಮಾಧ್ಯಮಂಗಳಲ್ಲೂ ಮಾಹಿತಿಯ ಕೊಟ್ಟು ಈ ವಿಷವರ್ತುಲದ ಬಗ್ಗೆ ಬೆಳಕು ಚೆಲ್ಲಿದವು. ಅವರ ಈ ಪ್ರಯತ್ನ ಇಂದು ವ್ಯವಸ್ಥೆಯ ವಿರುದ್ದ ಹೋರಾಟ ಶುರು ಅಪ್ಪಲ್ಲಿ ಸಹಾಯಕವಾಯಿದು. ಲೆಕ್ಕಲ್ಲಿ ಕೇರಳಲ್ಲಿ ಹರತಾಳವೂ ನಡದತ್ತು

ಈ ಸಂದರ್ಭಲ್ಲಿ ಒಂದು ಶುದ್ದಿ ಬಂತಿದಾ. ಜರ್ಮನಿಯ ಜಿನೇವಾಲ್ಲಿ ನಡೆದ ಸಾವಯವ ಕೃಷಿಕರ ಸಮ್ಮೇಳನಲ್ಲಿ ಮುಂದಿನ ಹನ್ನೊಂದು ವರ್ಷಗಳ ಕಾಲ ಎಂಡೋಸಲ್ಫಾನ್ಗೆ ನಿಷೇಧ ಹೇರುತ್ತೆಯ ಹೇಳ್ತ ಮಾತಿನ ವಿಶ್ವದ ಹೆಚ್ಚಿನ ದೇಶದ ಪ್ರತಿನಿಧಿಗೊ ಒಪ್ಪಿಗೆ ಕೊಟ್ಟವು. ಚೈನಾದಂತ ಕೆಲವು ದೇಶಂಗಳ ಬಿಟ್ಟು.
ಈ ವಿಚಾರವ ಕೆಳಾಣ ಸಂಕೋಲೆಲಿ ಓದುಲಕ್ಕು.
http://indiatoday.intoday.in/site/story/kerala-govt-seeks-blanket-ban-on-endosulphan/1/136695.html

ಇನ್ನೊಂದು ಮುಖ್ಯ ವಿಚಾರ ಮೇಲೆ ಹೇಳಿದ ನಮ್ಮವೇ ಆದ ಶ್ರೀಪಡ್ರೆ ಮತ್ತು ಮೋಹನಕುಮರ್ ಬಗ್ಗೆ ಇಂದು ಮಳೆಯಾಳ ಮಾಧ್ಯಮಂಗೊ ವಿಷೇಶ ವರದಿಗಳ ನೀಡಿದ್ದು ನಾಳಾಣ ಮಳೆಯಾಳಿ ಪತ್ರಿಕೆಗಳಲ್ಲೂ ಬತ್ತಾ ಇದ್ದು. ಅರ್ಥ ಅಪ್ಪವು ಓದಿ ಉಳುದವಕ್ಕೆ ಹೇಳಿ. ಅವಕ್ಕೆ ಅವರ ಕಾರ್ಯಕ್ಕೆ ಪೆಂಗಣ್ಣನ ಅಬಿವಂದನೆಗೋ.

ಇದಾ ಈಗ ಆನು ಕೊಡೆಯಾಲಕ್ಕೆ ಹೋಯೆಕ್ಕು. ಬೋಚ ಬಾವ ಊಟಕ್ಕೆ ಬಪ್ಪಲೆ ಹೇಳಿದ್ದ. ಮತ್ತೆ ಸಿಕ್ಕುತ್ತೆ ಆತೋ!

~
ಪೆಂಗಣ್ಣ ಪ್ರಮ್ ಬೈಲು.
bingi.penga@gmail.com

14 thoughts on “ಅಂತೂ ಬಂತೂ ನಿಷೇಧ

  1. ಶ್ರೀ ಪಡ್ರೆ ಮತ್ತು ಶ್ರೀ ಮೋಹನಕುಮಾರ್ ಅಂಥವರ ಪ್ರಯತ್ನ ಇಂದು ಫಲ ಕೊಟ್ಟಿದು ಹೇಳ್ಲಕ್ಕು.

  2. (ಬೋಚ ಬಾವ ಊಟಕ್ಕೆ ಬಪ್ಪಲೆ ಹೇಳಿದ್ದ.)
    ಆವ ಬಪ್ಪಲೆ ಹೇಳಿದ್ದಿರ. ಊಟಕ್ಕೆ ಬತ್ತೆ ಹೇಳಿದ್ದಾದಿಕ್ಕು.

    1. ಏ ಶ್ಯಾಮಣ್ಣ, ಒ೦ದು ವೇಳೆ ಊಟಕ್ಕೆ ಬಪ್ಪಲೆ ಹೇಳಿರೂ,ಅವನ ಮನೆಗೆ ಆಗಿರ ಅಲ್ಲದೊ?

      1. ಇಕ್ಕು. ಒಟ್ಟಿಂಗೆ ಏವದಾದರೂ ಮದುವೆಗೋ ಉಪ್ನಾಯನಕ್ಕೊ ಊಟಕ್ಕೆ ಹೋಪ ಹೇಳಿ ಇಕ್ಕು. ಅಲ್ಲದಾ?

  3. “ಹೋದೆಯಾ ಪಿಶಾಚಿ ಹೇಳಿರೆ ಬ೦ದೆಯಾ ಗವಾಕ್ಷದೊಳಗೆ” ಹೇಳಿ ಈ ಎ೦ಡೋಸಲ್ಫಾನ್ ಇನ್ನೊ೦ದು ರೂಪಲ್ಲಿ ಬಾರದ್ದರೆ ಸಾಕು.

  4. ಎಂಡೊವಿಂಗೆ ನಿಷೇಧ ಬಂದದು ಕೇಳಿ ಕೊಶಿ ಆತು. ಸಂಪೂರ್ಣವಾಗಿ ಆಯೆಕಿತ್ತು.

  5. ಮನುಷ್ಯಂಗೆ ಮನುಷ್ಯನೇ ಶತ್ರು…..

  6. ಇದೊಂದು ಸ್ವಾಗತಾರ್ಹ ಒಪ್ಪಿಗೆ. ಆದರೆ ಅದರ ಸಂಪೂರ್ಣ ನಿಷೇದ ಮಾಡಿದ್ದವಿಲ್ಲೆ ಅಡ. 22 ಜಾತಿಯ ಬೆಳೆಗೊಕ್ಕೆ 5 ವರ್ಷಕ್ಕೆ ಉಪಯೋಗಿಸುಲೆ ಅಕ್ಕಡ. ಆದರೆ ಸಂಪೂರ್ಣ ನಿಷೇಧಿಸೆಕ್ಕು ಹೇಳಿ ಎನ್ನ ಅಭಿಪ್ರಾಯ.

  7. ನಿಷೇಧಿಸೆಕ್ಕಾದ್ದು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ. ಆದರೆ ಮೋಹನ ಅಜ್ಜಂಗೆ ಅದರೊಟ್ಟಿಂಗೆ ವಿಪರೀತ ವ್ಯಾಮೋಹ ಅಡ ಅಲ್ಲದಾ?

  8. ಎಂಡೊ ಸಲ್ಪಾನ್ ನಿಷೇಧ ಸ್ವಗತಾರ್ಹ…. ಆದರೆ ಇಂದ್ರಾಣ ವಿಜಯಕರ್ನಾಟಕ ಪತ್ರಿಕೆಲಿ ನೋಡಿದ ಪ್ರಕಾರ ಭಾರತಲ್ಲಿ ನಿಷೇಧ ಬರೆಕ್ಕರೆ ಇನ್ನುದೇ 12 ವರ್ಷ ಕಾಯೆಕ್ಕು….. ಅಷ್ಟಪ್ಪಗ ಎಂತಾವುತ್ತೋ ದೇವರಿಂಗೇ ಗೊಂತು…

    ಹೆಚ್ಚಿನ ವಿವರಕ್ಕೆ

    http://www.vijaykarnatakaepaper.com/svww_index1.php

    ಪುಟ ಸಂಖ್ಯೆ 12

  9. ಎಂಡೊ ಸಲ್ಫಾನ್ ನಿಷೇಧ ಸ್ವಾಗತಾರ್ಹ.

  10. ಅದಾ.. ಅಷ್ಟಪ್ಪಗ ಪೆಂಗಣ್ಣನ ಶುದ್ದಿ ಒಪ್ಪಾಯಿದು ಹೇಳಿ ಒಪ್ಪ ಕೊಡ್ಲೆ ಬಿಟ್ಟೋತಿದಾ..

    ಪೆಂಗಣ್ಣೋ.. ಶುದ್ದಿ ಪಷ್ಟಾಯಿದು ಮಿನಿಯ.. ಬೋಚ ಭಾವನೊಟ್ಟಿಂಗೆ ಪಾಚ ಉಂಡಿಕ್ಕಿ ಇನ್ನೊಂದು ಶುದ್ದಿ ಹೇಳಿ

  11. ಎಂಡೋಸಲ್ಫಾನ್ ನಿಷೇಧ ಆತು ಹೇಳಿ ಗೊಂತಾದಪ್ಪಗ ಒಬ್ಬ ಭಾವಯ್ಯ ಎನಗೆ ಹೀಂಗೆ ಸಮೋಸ ಕಳ್ಸಿದ- ” ಒಂದು ಸಂಶಯ ಬಾಕಿ ಒಳುದ್ದು ಭಾವಾ, ಎಂಡೋಸಲ್ಫಾನ್ ನಿಷೇಧಿಸೆಕ್ಕು ಹೇಳಿ ‘ಜಿನೇವಾ’ಲ್ಲಿ ತೀರ್ಮಾನ ತೆಕ್ಕೊಂಬಲೆ ಕಾರಣ ಆಚುಮ್ಮನ ಉಪವಾಸವೋ? ಅಲ್ಲ ಪಿಣರಾಯಿ ವಿಜಯನ್ ನ ಹರತಾಳವೋ?”

    ಅದಕ್ಕೆ ಆನು ಉತ್ತರ ಕೊಟ್ಟೆ-
    “ಅದೆರಡೂ ಅಲ್ಲ. ‘ಜಿನೇವಾ’ಲ್ಲಿ ಇಪ್ಪವಕ್ಕೆ ಬೆಶಿ ಮುಟ್ಟ್ಲೆ ಮುಖ್ಯ ಕಾರಣ ‘ಜೆನಿವಾರ’ ಇಪ್ಪವರ (ಶ್ರೀ ಪಡ್ರೆ & ಡಾ.ಮೋಹನ್ ಕುಮಾರ್) ನಿರಂತರ ಹೋರಾಟ, ತಪಸ್ಸು” ಹೇಳಿ

    1. ಸುಭಗಣ್ಣಾ..
      ಆಚುಮ್ಮ – ಪಿಣರಾಯಿ ಹೊಯಿಕೈ ಮುಗಿವಗ ಇನ್ನೊಂದು ಸರಕಾರ ಬಂದು ಆವುತ್ತು 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×