ಭಾರತದ ಭರತಂಗೊ ಮೈಮರೆತವೋ ಭಾವ

ತಲೆ ಬರಹ ನೋಡಿ ಎಂಗೊಗೆ ಇಪ್ಪದು ಅಲ್ಲ ಗ್ರೇಶಿಕ್ಕೆಡಿ ಅಕ್ಕಂದ್ರೂ.. ತಲೆಬರಹ ನೋಡಿ ಜೆನ ಓದೆಕ್ಕು ಹೇಳ್ತದು ಚಾಲ್ತಿಲಿ ಇದ್ದಲ್ಲದೋ.. ಕೆಲವು ಪೀತ ಪತ್ರಿಕೆಗೊಕ್ಕೆ ಇದೇ ಬಂಡವಾಳ ಕೂಡ. ಹಾಂಗೆ ಬರದ್ದು. ಓ ಮೊನ್ನೆ ಬೈಲು ಹೊಸತ್ತು ಆದಪ್ಪಗಲೇ ಬರೆಯೆಕ್ಕು ಗ್ರೇಶಿದ್ದರೂ ಆಗಿತ್ತಿಲ್ಲೆ. ನಿನ್ನೆ ಬಸ್ಸಿಲಿ ಹೋಪಗ ಎರಡು ಜೆನ ಮಾತಾಡ್ತಾ ಇದ್ದ ವಿಷಯವೇ ಇಂದ್ರಾಣ ಸುದ್ದಿ.

ಇರಲಿ ಮೊದಲೆ ಹೇಳಿಕ್ಕುದು. ಈ ಸುದ್ದಿಗೆ ಎನ್ನತ್ರೆ ಯೇವದೇ ಅಧಾರ ಇಲ್ಲೆ. ಆದರೆ ಆ ಅನಾಮಿಕ ಮನುಶ್ಯನ ಭಾವನೆ ನೋಡಿದ ಎನಗೆ ಇದರಲ್ಲಿ ಸತ್ಯ ಇಕ್ಕು ಕಂಡತ್ತು. ಹಾಂಗೆ ಹೇಳ್ತಾ ಇದ್ದೆ. ವಿಮರ್ಶೆ ಮಾಡುವೋ. ಸರಿಯೋ ತಪ್ಪೋ ಹೇಳ್ತದು ನಮ್ಮಂದ ಅರಡಿಯ. ಶುದ್ದಿಗೆ ಬಪ್ಪಾ. ಜಾಸ್ತಿ ತಲೆ ತಿಂತಿಲ್ಲೆ.

ಓ ಮೊನ್ನೆ ಇತ್ಲಾಗೆ ನಮ್ಮ ದೇಶದ ಪ್ರತಿಷ್ಟಿತ ಸಂಸ್ಥೆ ಇಸ್ರೋ ಒಂದು ಉಪಗ್ರಹ ಹಾರುಸಿತ್ತು.. ಮೇಲೆ ಹೋದ್ದು ನೋಡ್ತಾ ಇದ್ದ ಹಾಂಗೆ ಕೆಳ ಉದುರಿತ್ತು. ತಾಂತ್ರಿಕ ಕಾರಣಂದ ಉದುರಿದ್ದು, ವರ್ಶಲ್ಲಿ ಹೊಸತ್ತು ಮಾಡ್ತಯಾ ಹೇದವೊ ವಿಜ್ಙಾನಿಗೊ. ಹತ್ತು ಹದಿನೈದು ವರ್ಶಲ್ಲಿ ಮಾಡಿದ್ದು ನಿಮಿಷಲ್ಲಿ ಹೋತು ಒಂದು ಕಡೆ ಆದರೆ, ವರ್ಶಲ್ಲಿ ಪುನಾ ಮಾಡ್ತದು ಹೇಂಗೆ ಹೇಳ್ತದು ಇನ್ನೊಂದು ಕಡೆ. ಅದು ತಲೆಲಿ ತಿರುಗುತ್ತಾ ಇತ್ತು ಆನು ಊರೂರು ತಿರುಗುತ್ತಾ ಇದ್ದಾಂಗೆ.

ಆ ಎರಡು ಜೆನರ ಮಾತುಕತೆ ಕೇಳುವಾಗ ಅದು ಸತ್ಯ ಆದಿಕ್ಕು ಹೇಳಿ ಕಂಡತ್ತು. ಅವರ ಮಾತುಕತೆಯ ಮೂಲ ಅಂಶ ಹೀಂಗಿದ್ದು. “ಒಂದು ಸಣ್ಣ ತಪ್ಪಿಂದ ದೇಶಕ್ಕೆ ನಾನ್ನೂರು ಕೋಟಿ ನಷ್ಟ ಆತು. ಕಲೆಕ್ಟರ್(ಎಂತರ ಹೇಳಿ ಎನಗೆ ಗೊಂತಿಲ್ಲೆ, ಅವು ಉಪಯೋಗಿಸುತ್ತ ಒಂದು ಸಾಧನ ಆದಿಕ್ಕು) ನಿಲ್ಲುಸದ್ದೆ ಮಾಡಿದ ಅಜಾಗರೂಕತೆಂದ ಉಪಗ್ರಹ ಕೆಳ ಬಿದ್ದತ್ತು. ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ಈ ನಷ್ಟ ಆವುತ್ತಿತ್ತಿಲ್ಲೆ”. ಎಂತ ಹೇಳುದು. ಅದಕ್ಕೆ ಹೇಳಿದ್ದು ಭಾರತದ ಭರತಂಗೊ ಮೈಮರೆತವೋ ಭಾವ ಹೇಳಿ. ಭಾರತದ ಅಭಿವೃದ್ದಿಗೆ ಇಪ್ಪದು ಹೀಂಗಾದರೆ.

ಅವಾ ಇನ್ನು ಮುಂದುವರೆದು ಹೇಳಿದ “ಅದರಲಿ ಇನ್ನು ಕನ್ನಡದವಕ್ಕೆ ಏನೂ ಪ್ರಯೋಜನ ಇಲ್ಲೆ. ಆ ಮಳೆಯಾಳಿಗೊ ನಮ್ಮವಕ್ಕೆ ಕೆಲಸ ಸಿಕ್ಕುಲೆ ಬಿಡುತ್ತವಿಲ್ಲೆ. ಹೇಂಗೂ ಮುಖ್ಯಸ್ಥರೂ ಅಲ್ಲಿಯಾಣವೇ ಆದ ಕಾರಣ ಮಾತಾಡುವ ಹಾಂಗೂ ಇಲ್ಲೆ. ” ಹಾಂಗಾಗಿ ಅವಕ್ಕೆ ಮಾತಾಡಿರೆ ಅವರ ಕೆಲಸ ಹೋಪ ಬೆಶಿಯೂ ಇತ್ತು ಅವರ ಮಾತಿಲಿ.

ಸಣ್ಣ ಸಣ್ಣ ವಿಶ್ಯಂಗಳ ದೊಡ್ಡ ಶುದ್ದಿ ಮಾಡುವ, ಆಪರೇಶನ್ ಮಾಡುವ ಮಾಧ್ಯಮಂಗಳೂ ಈ ಬಗ್ಗೆ ಎನೂ ಮಾತಾಡಿದ್ದವಿಲ್ಲೆ. ನಮ್ಮ ಅಗತ್ಯವ ಆರೂ ಪ್ರಶ್ನೆ ಮಾಡವು. ಬೇಡದ್ರ ಎಷ್ಟೂ ಹೇಳುಗು. ಅದಕ್ಕೆ ಕಲಿಗಾಲ ಹೇಳುದಲ್ಲದ. ಇನ್ನಾದರೂ ಒಳ ರಾಜಕೀಯವ ಬಿಟ್ಟು, ಭಾರತದ ರಕ್ಷಣೆಗೆ ಬೇಕಾದ ಅವಶ್ಯಂಗಳ ಕೊಡುಗೆ ನೀಡಲಿ ಹೇಳ್ತದು ಎನ್ನ ಆಶಯ. ಅದಾ ಹೊತ್ತಪ್ಪಗ ಒಂದು ಒಳ್ಳೆ ಶುದ್ದಿ ಬಂತು. ನಮ್ಮ ವಾಯುಸೇನೆಗೆ ನಮ್ಮಲ್ಲಿಯೆ ತಯಾರಿಸಿದ ಹೊಸ ಯುದ್ಧವಿಮಾನ ಬಂತಡ. ಅವಕ್ಕೊಂದು ಅಭಿವಂದನೆ ಹೇಳುತ್ತಾ ಇಂದ್ರಾಣ ಶುದ್ದಿಯ ಮುಗುಶುತ್ತೆ. ವಿಧಾನ ಮಂಡಲ ಅಧಿವೇಶನ ಶುರು ಅಪ್ಪ ಹೊತ್ತಾತು ಅತ್ಲಾಗಿ ಹೋಗಿ ಬತ್ತೆ, ಮತ್ತೆ ಕಾಂಬೋ..

~
ಪೆಂಗ ಪ್ರಮ್ ಬೈಲು.
bingi.penga@gmail.com

ಮೋರೆಪುಟ: facebook.com/penga.bailu

ಪೆಂಗಣ್ಣ°

   

You may also like...

8 Responses

 1. mohananna says:

  ಅಯ್ಯಯ್ಯಯ್ಯೋ ವಿಧಾನ ಸೌದಕ್ಕೊ?ಅಲ್ಲಿ ರಜ ಜಾಗ್ರತೆ ಮಾಡಿಗೊ ಮೇಜಿಗೆ ಹತ್ತುವವು ಮೈಕ್ರೋಫೋನು ಇಡ್ಕುವವು ಎಲ್ಲ ಇಕ್ಕು.ಮತ್ತೆ ಜಾಗ್ರತಗೂ ಭರತ೦ಗೋಕ್ಕೂ ಆಗಿಬತ್ತಿಲ್ಲೇನೆ.ಹಾ೦ಗಾಗಿ ಅಲ್ಲದೊ ಇಷ್ಟೆಲ್ಲಾ ನಷ್ಟ೦ಗೊ ಬತ್ತದು.ಒಪ್ಪ೦ಗಳೊಟ್ಟಿ೦ಗೆ

 2. vishnunandana says:

  Idu ISRO, DRDO, IIT, IISC hingippa thanthrika kshethrangalalli misalathi madugidare appa avanthra. ISRO kku reservation iddu.

  Ondu Clerk, Attender hingippa post yella reservation iddaru thondare ille.

  Aadre theera naipunyathe bekagippa hingippa samsthegalalli reservation kottu jenangala thumbusire hinge appadu.

 3. ಮೌನಿ says:

  ವಾರ್ತಾ ಮಾಧ್ಯಮ೦ಗೊ ಪ್ರಜಾಪ್ರಭುತ್ವದ ಮೂಲಸ್ತ೦ಭ೦ಗಳಲ್ಲಿ ಒ೦ದು. ಆದರೆ ಇ೦ದು ೯೫% ಮಾಧ್ಯಮ೦ಗಳುದೆ ಇದರ ಒ೦ದು ಬಿಸಿನೆಸ್ ಆಗಿ ತೆಕ್ಕೊ೦ಡು ವ್ಯವಹರಿಸುತ್ತಾ ಇಪ್ಪದು ವಿಪರ್ಯಾಸ. ಎಷ್ಟೋ ಒಳ್ಳೆ ಸುದ್ದಿಗೊ ನೆಡೆತ್ತಾ ಇಪ್ಪದು ಪೇಪರುಗಳಲ್ಲಿ / ಟಿ ವಿ ಲಿ ಬತ್ತೇ ಇಲ್ಲೆ, ಬ೦ದರೂ ಅದಕ್ಕೆ ಬೇಕಾದ ಪ್ರಾಮುಖ್ಯತೆ ಸಿಕ್ಕುತ್ತಿಲ್ಲೆ. ಅದುವೇ ಕೆಲವು ಸರ್ತಿ ಬಹಳ ಸಣ್ಣ ಋಣಾತ್ಮಕ ವಿಷಯ೦ಗೊ ಬಹಳ ದೊಡ್ಡದಾಗಿ ಚಿತ್ರೀಕರಿಸಲ್ಪಡ್ತು. ಶುದ್ದಿಯ ಸತ್ಯಸ೦ಧತೆ೦ದಲುದೆ ಜಾಸ್ತಿ ಅದು ಎಷ್ಟು ಸೆನ್ಸೇಷನಲ್ ಆಗಿರ್ತು ಹೇಳುವದರ ಮೇಲೆ ಆ ಶುದ್ದಿಯ ಪ್ರಾಮುಖ್ಯತೆ ನಿರ್ಣಯಿಸಲ್ಪಡ್ತು. ನಮ್ಮ ದೇಶಲ್ಲಿಪ್ಪ ಪತ್ರಿಕಾ ಸ್ವಾತ೦ತ್ರ್ಯ ಅಗತ್ಯಕ್ಕಿ೦ತ ಹೆಚ್ಚು ದುರುಪಯೋಗ ಅಪ್ಪದರ ಒಟ್ಟಿ೦ಗೆ ಪತ್ರಿಕಾ ಧರ್ಮ ನಿರ್ಲಕ್ಷಿಸಲ್ಪಡ್ತಾ ಇಪ್ಪದು ಬೇಜಾರದ ವಿಷಯ.ಕನ್ನಡದ ಒ೦ದು ಟಿ ವಿ ಚಾನೆಲಿಲ್ಲಿ ಪ್ರಸಾರ ಅಪ್ಪ ಒ೦ದು ಚರ್ಚಾ ಕಾರ್ಯಕ್ರಮ ಇದ್ದು.. ಅದರ್ಲಿ ಚಾನೆಲಿನವು ಕೇಳ್ತ ಪ್ರಶ್ನೆಗಳ ಗುಣಮಟ್ಟ ನೋಡಿರೆ ವಾಕರಿಕೆ ಬತ್ತು. ಚರ್ಚಾವಿಷಯದ ನಿಷ್ಪಕ್ಷತೆ೦ದಲುದೆ ಜಾಸ್ತಿ ಎದುರು ಇಪ್ಪ ಮನುಶ್ಯನ ಹೇ೦ಗೆ ತೇಜೋವಧೆ ಮಾಡ್ಳೆ ಎಡಿಗು ಹೇಳುವದರಲ್ಲಿಯೇ ಅವಕ್ಕೆ ಜಾಸ್ತಿ ಆಸಕ್ತಿ.
  ಕೆಲವು ಸರ್ತಿ ಕೆಲವು ವಿಷಯ೦ಗಳಲ್ಲಿ ಮಾಧ್ಯಮ೦ಗೊ ತಲೆ ಹಾಕದ್ದೆ ಇಪ್ಪದೇ ಒಳ್ಳೇದು. ಮು೦ಬಯಿ ಆಕ್ರಮಣದ ಸಮಯಲ್ಲಿ ಟಿ ವಿ ಚಾನೆಲುಗೊ ಕ್ರಿಕೆಟ್ ಮ್ಯಾಚ್ ತೋರುಸುತ್ತಷ್ಟು ಉತ್ಸಾಹಲ್ಲಿ ಅಲ್ಲಿ ನೆಡೆತ್ತಾ ಇತ್ತಿದ್ದ ವಿಶಯ೦ಗಳ ನೇರ ಪ್ರಸಾರ ಮಾಡಿದ್ದದು, ಅದರಿ೦ದಾಗಿ ಉ೦ಟಾದ ತೊ೦ದರೆಗೊ ಇದೆಲ್ಲಾ ಆರಿ೦ಗುದೆ ಸುಲಭಲ್ಲಿ ಮರದಿರ. ಇಸ್ರೋ ದ ಸ೦ಶೋಧನೆಗೊ ಕೂಡಾ ರಹಸ್ಯವಾಗಿ ಇರೆಕಾದ್ದದು ದೇಶದ ಹಿತದೃಷ್ಟಿ೦ದ ಅಗತ್ಯ ಅಲ್ಲದೊ? ಅದರ್ಲಿ ಕೆಲಸ ಮಾಡ್ತ ಜನ೦ಗಳ ಬೆಲೆ ಕಟ್ಟಲೆ ಎಡಿಯದ್ದ ಪರಿಶ್ತಮ ಆಗಿರ್ತು ಒ೦ದು ಕ್ಷಣಲ್ಲಿ ನುಚ್ಚುನೂರಾದ್ದದು. ಎ೦ತದೇ ಆದರೂ ಅವು ಬೇಕು ಬೇಕಾಗಿಯೇ ಮಾಡಿದ ತಪ್ಪು ಆಗಿರ ಹೇಳಿ ಕಾಣ್ತಷ್ಟೆ.

 4. ಬೋಸ... says:

  {…ಮೇಲೆ ಹೋದ್ದು ನೋಡ್ತಾ ಇದ್ದ ಹಾಂಗೆ ಕೆಳ ಉದುರಿತ್ತು.}

  ಭಾವ, ಬಕ್ಕಿನ ಬಳ್ಳಿಲಿ ಬಿಗ್ಗುದ್ದು ಕಟ್ಟೆ ಕಾತು ಹಾ೦ಗಾರೆ ಉದುರ್ತಿತ್ತಿಲ್ಲೆ… 😉
  ಆನು ಈ ಕಟ್ಟ೦ಗಳ ಎಲ್ಲಾ ಹಾ೦ಗೆ ಮಾಡುಸ್ಸಿದ.. 🙂

 5. ರಘುಮುಳಿಯ says:

  ಉಪಗ್ರಹಕ್ಕೆ ನೀರುಳ್ಳಿ ಕಟ್ಟುಲೇ ಮರದತ್ತೋ ಹೇಳಿ.ಅದು ಮೇಲೆ ಹೋದದ್ದು ಅಲ್ಲಿಯೇ ಬಾಕಿ..

  • ಮೌನಿ says:

   ನೀರುಳ್ಳಿ ಕಟ್ಟಿ ದೊಡ್ಡಾ ಗುಣ ಎ೦ತೂ ಇಲ್ಲೆ ರಘು ಭಾವಾ.. ಅದು ಮೇಲೆ ಹೋಕು, ಮಾ೦ತ್ರ ನಮ್ಮ ಹಿಡಿತಕ್ಕೆ ಸಿಕ್ಕ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *