ಎಲ್ಲವನ್ನೂ ಒಪ್ಪಿ ಅಪ್ಪಿಕೊಂಬ ಧರ್ಮ

October 1, 2010 ರ 6:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ತೀರ್ಪು ಹೇಂಗಿಕ್ಕು ಮಾತಾಡಿದ್ದು.
ಈಗ ತೀರ್ಪು ಬೈಂದು. ಎಲ್ಲರಿಂಗೂ ಗೊಂತಿದ್ದು.
ಮೂರುನಾಮದ ತೀರ್ಪು, ಅದೂ ಎಡೆಲಿ ಒಂದು ಭಾಗ ಅವಕ್ಕೆ.
ಯಾವ ಜಾಗೆ ಹೇಳುದಕ್ಕೆ ಸರಿಯಾದ ಉತ್ತರ ಇಲ್ಲೆ.
ಆದರೆ ದೇಶ ಸಹಜ ಸ್ಥಿತಿಲೇ ಇದ್ದು, ಅದಕ್ಕೆ ಕಾರಣ?

ನಿನ್ನೆ ತೀರ್ಪಿನ ಕೇಳುಲೆ ಲಕ್ನೋಗೆ ಹೋಪಲೆ ಆಯಿದಿಲ್ಲೆ. ಬೆಂಗಳೂರಿಲಿ ಟಿ.ವಿ.ಲಿ ನೋಡಿದ್ದು.
ಮೊದಲಿಂದಲೂ ಏನೇ ಆದರೂ ತೊಂದರೆ ಮಾಧ್ಯಮಂದ ಹೇಳಿ ಅವರ ಕೋರ್ಟಿನ ಒಳದಿಕ್ಕೆ ಬಿಟ್ಟಿದವಿಲ್ಲೆ.
ಆದರೆ ಗಂಟೆ ನಾಕೂ ಹತ್ತು ಅಪ್ಪಗ ನೋಡೆಕ್ಕಿತ್ತು, ಕೋರ್ಟಿಂದ ಹೆರ ಬಂದ ವಕೀಲಂಗಳ ಮುತ್ತಿದ ಮಾಧ್ಯಮ ಸ್ನೇಹಿತರ.
ಊರಿಲಿ ಉದಿಯಪ್ಪಗ ಕಾಕೆಗೊಕ್ಕೆ ಅಕ್ಕಿ ಕಾಳು ಹಾಕುದಿದ್ದಿದಾ ಅದು ನೆಂಪಾತು ಎನಗೆ.
ಇನ್ನು ಮಾಧ್ಯಮ ಗೋಷ್ಟಿಗೆ ಮಾಡಿದ ವ್ಯವಸ್ಥೆಯ ಬಿಟ್ಟು ವಕೀಲಂಗ ಮಾತಾಡುಲೆ ಶುರು ಮಾಡಿಯಪ್ಪಗ ಎಂತ ಹೇಳಿದವೋ ಆ ರಾಮಂಗೂ ಗೊಂತಾಯಿದೋ ಇಲ್ಲೆಯೋ?

ಅಂತೂ ತೀರ್ಪು ಪ್ರಕಟ ಆತು, ರಾಮ ಹುಟ್ಟಿದ ಜಾಗೆ ಅಯೋಧ್ಯೆಯೆ ಹೇಳಿ ಎಲ್ಲಾ ಜಡ್ಜಂಗಲೂ ಹೇಳಿದವೂ.
ಅದಾ ನಮ್ಮ ಗಣಕಿಂಡಿ ಮಾವ ಇಲ್ಲೆಯೋ ಅವು ಹೇಳಿದ್ದು ನೆಂಪಾವುತ್ತು, “ಇನ್ನು ಕರುಣಾನಿಧಿಗೆ ರಾಮನ ಜನ್ಮ ಪತ್ರ ಕೊಡುಲಕ್ಕು” ಹೇಳಿ.
ತೀರ್ಪು ಸಮಾಧಾನ ತಂದಿದು ಆದರೆ, ರಾಮ ಹುಟ್ಟಿದ ಜಾಗೆ ಅಪ್ಪಡಾ, ಮಸೀದಿ ಇಸ್ಲಾಮಿಕ್ ಕಾನೂನಿನ ಪ್ರಕಾರ ಇಲ್ಲೆಡಾ.
ಆದರೂ ಒಂದು ತುಂಡು ಅವಕ್ಕೆ ಎಂತಕೋ ಗೊಂತಾಯಿದಿಲ್ಲೆ. ಅದೂ ಎಲ್ಲಿ ಜಾಗೆ ಕೊಡೆಕ್ಕು ಹೇಳುದು ಸಮಕಟ್ಟು ಇಲ್ಲೆ.
ತೀರ್ಪು ಏನೇ ಇದ್ದರೂ ಮೇಲಾಣ ಸುಪ್ರೀಂ ಕೋರ್ಟಿಂಗೆ ಹೋಪಲಿದ್ದಡ, ನಾವು ಮೊದಲು ಮಾತಾಡಿದ ಹಾಂಗೆ.

ಅಂತೂ ನವಗೆ ರಜಾ ಸಮಧಾನದ ವಿಶಯ, ಜಾಸ್ತಿ ಜಾಗೆ, ಒಟ್ಟಿಂಗೆ ರಾಮನ ಜನ್ಮಸ್ಥಳವ ಕೋರ್ಟ್ ಒಪ್ಪಿದ್ದರಿಂದ.
ಹತ್ತು ಸಾವಿರ ಪುಟಗಳ ಪೂರ್ತ ಓದಿದ ಮೇಲೆ ಗೊಂತಕ್ಕಷ್ಟೆ ಎಂತ ಮಾಡುಲೆಡಿಗು ಹೇಳುದು.
ಯಾಕೆ ಹೇಳಿರೆ, ಕೋರ್ಟ್ ಒಂದು ಮಾತು ಹೇಳಿದ್ದು ಜಾಗೆ ಎಲ್ಲರ ಹೆಸರಿಲಿ ಇರೆಕ್ಕು ಹೇಳಿ.
ಆದರೂ ನಾವು ತೀರ್ಪಿಂದ ಸಂತೋಷ ಪಟ್ಟುಕೊಳ್ಳುತ್ತಾ ಇದ್ದೆಯಾ, ನಮ್ಮ ಪರಾವಾಗಿ ಇದ್ದು ಹೇಳಿ
ಅದಕ್ಕೆ ಹೇಳಿದ್ದು ‘ಎಲ್ಲವನ್ನೂ ಒಪ್ಪಿ ಅಪ್ಪಿಕೊಂಬ ಧರ್ಮ‘ ನಮ್ಮ “ಸನಾತನ ಧರ್ಮ” ಹೇಳಿ.

ಎಲ್ಲವನ್ನೂ ಒಪ್ಪಿ ಅಪ್ಪಿಕೊಂಬ ಧರ್ಮ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಮೋಹನಣ್ಣ
  Krishna Mohana Bhat

  ಏ ಪೆ೦ಗ ಭಾವ ನೀನು ಎಲ್ಲೋರನ್ನೂಪೆ೦ಗ ಮಾಡ್ತವನೋ ಹೇಳಿ ಇಲ್ಲದ್ದರೆ ಇಷ್ಟು ಚೆ೦ದಕೆ ವಿಚಾರ ಮಾಡುವವ೦ ಪೆ೦ಗ ಅಪ್ಪಲೆ ಸಾದ್ಯ ಇಲ್ಲೆ.ಇರಲಿ ವಿಷಯ ದೊಡ್ಡದು ಎ೦ತ ಹೇಳಿರೆ ಈ ಬ್ಯಾರಿ ವರ್ಗ ಹೇಳ್ತದರ ಸ೦ತೋಷ ಪಡುಸದ್ದರೆ ಬದುಕ್ಕುವೆ ಹೆಳ್ತ ಎದೆಗಾರಿಕೆ ಕೋರ್ಟಿ೦ಗೂಇಲ್ಲದ್ದೆ ಆಯಿದು.ನಮ್ಮವೇ ಒ೦ದಷ್ಟು ಮೀರ್ ಸಾದಕ೦ಗೊ ಇದ್ದವದ ಓಟಿ೦ಗೆ ಬೇಕಾಗಿ ಮಗಳ ಬೇಕಾರೂ ಬ್ಯಾರಿಗೆ ಕೊಟ್ಟು ಅದರ ಸಮರ್ಥಿಸಿಯೊ೦ಬವು ಇ೦ತವರ ಬ್ಯಾರಿಗಳಿ೦ದಲೂ ಮದಲೇ ನಾಶ ಮಾಡಿರೆ ದೇಶ ಒಳಿಗು.ನವಗೆ ಹೆರಾಣವರಿ೦ದಲೂ ಹೆಚ್ಹು ತೊ೦ದರೆ ಇ೦ತವರಿ೦ದ.ಹೆರಾಣವರ ಶತ್ರುಗೊ ಹೇಳಿ ಗೊ೦ತಿರ್ತು ಇವ್ವು ನಮ್ಮಒಟ್ಟಿ೦ಗೆ ಇದ್ದು ಕತ್ತಿ ಹಾಕುವವು.ನಾವು ಗೆದ್ದರೆ ಕುರ್ಸಿಲಿ ಕುಬ್ಬಲೆ ಮದಾಲು ಬತ್ತವು. ಇದಲ್ಲದ್ದೆ ಒಟ್ಟಿ೦ಗೆ ಒ೦ದಷ್ಟು ಪೈಸೆಯೂ ಮರ್ಯಾದೆ ಇಲ್ಲದ್ದೆ ಮಾಡಿಯೊ೦ಗು.ಶ್ರೀರಾಮ ನಿನ್ನ ಕೈ ಚಳಕಲ್ಲಿ ಈ ದುಷ್ಟ೦ಗಳ ಮದಲು ನಾಶ ಮಾಡು ಹೆಳಿ ಕೆಳಿಯೊ೦ಬೊ.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  (ನಿನ್ನೆ ತೀರ್ಪಿನ ಕೇಳುಲೆ ಲಕ್ನೋಗೆ ಹೋಪಲೆ ಆಯಿದಿಲ್ಲೆ)
  ಪೆಂಗ ಭಾವ ಹೋಗಿದ್ದರೆ ಕತೆಯೇ ಬೇರೆ ಇರ್ತಿತ್ತೋ?ಪೂರ್ತಿ ಅಯೋಧ್ಯೆ ನವಗೇ ಬರ್ತಿತ್ತೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಸಂಪಾದಕ°ಬೊಳುಂಬು ಮಾವ°ಬೋಸ ಬಾವಅಕ್ಷರ°ಶೀಲಾಲಕ್ಷ್ಮೀ ಕಾಸರಗೋಡುಕಳಾಯಿ ಗೀತತ್ತೆಯೇನಂಕೂಡ್ಳು ಅಣ್ಣಅಜ್ಜಕಾನ ಭಾವಸರ್ಪಮಲೆ ಮಾವ°ಸುಭಗರಾಜಣ್ಣಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಪಟಿಕಲ್ಲಪ್ಪಚ್ಚಿವೆಂಕಟ್ ಕೋಟೂರುನೀರ್ಕಜೆ ಮಹೇಶಪುಣಚ ಡಾಕ್ಟ್ರುಅನುಶ್ರೀ ಬಂಡಾಡಿಚುಬ್ಬಣ್ಣಅಡ್ಕತ್ತಿಮಾರುಮಾವ°ದೇವಸ್ಯ ಮಾಣಿಶೇಡಿಗುಮ್ಮೆ ಪುಳ್ಳಿಚೆನ್ನೈ ಬಾವ°ಮಾಷ್ಟ್ರುಮಾವ°ಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ