ಗುರು ಸಾಮಿಪ್ಯವೂ, ಸಮ್ಮೇಳನದ ಅನುಭವವೂ

February 21, 2011 ರ 11:30 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆನು, ಚುಬ್ಬಣ್ಣ, ಬೋಚ ಭಾವ ಸೇರಿಯೊಂಡು ಸಾಹಿತ್ಯ ಸಮ್ಮೇಳನಕ್ಕೆ ಹೋದ ಶುದ್ದಿ ಹೇಳುತ್ತೆ ಹೇಳಿದವಂಗೆ ಬರವಲೆ ಪುರುಸೋತ್ತು ಆಯಿದಿಲ್ಲೆ. ಮೊದಲು ವಾರದ ಶುದ್ದಿಗಳ ಮಾತಾಡೆಕ್ಕು, ರಾಜಕೀಯ ಬಿಟ್ಟರೆ ಬೇರೆಂತ ಇಲ್ಲೆ. ಬಳ್ಳಾರಿಯ ಜೆನಂಗಳ ಹೊಸ ಟಿ. ವಿ. ಚಾನೆಲ್ ಶುಕ್ರವಾರ ಶುರುವಾತು. ನೋಡುವಾಗ ಒಂದೊಳ್ಳೆ ತಂಡ, ಒಳ್ಳೆ ತಂತ್ರಜ್ಞಾನ ಇದ್ದ ಹಾಂಗೆ ಕಾಣ್ತು. ಶುದ್ದಿಗಳ ಹೇಂಗೆ ಜನಗಳ ಮನಕ್ಕೆ ದನಿಯಾಗಿಸುತ್ತವು ನೋಡೆಕ್ಕಷ್ಟೆ. ಬೋಸಭಾವ ‘ಜನಶ್ರೀ’ ಹೇಳಿ ಹೆಸರೆಂತಕೆ ಮಡಗಿದ್ದು ಕೇಳಿದ. ಇಲ್ಲಿ ಹೆಚ್ಚು ಕಮ್ಮಿ ಆದರೆ ‘ಇತಿಶ್ರೀ’ ಅಕ್ಕು ಹೇಳಿದೆ, ಅಲ್ಲದೋ.

ಒಪ್ಪಣ್ಣ ಗುರುಗಳ ಬೇಟಿಗೆ ಹೋದ ಶುದ್ದಿ ಹೇಳಿದ್ದ, ಅಲ್ಲಿಗೆ ಪೆಂಗಣ್ಣ ಬಂದ್ಸು ಅವಂಗೆ ನೆಂಪಾತಿಲ್ಲೆ ಕಾಣ್ತು, ಅಲ್ಲಾ ಒಪ್ಪ ಬರೆತ್ತನಿಲ್ಲೆ ಹೇಳ್ತ ಕೋಪವೋ ಗೊಂತಿಲ್ಲೆ..ಜೀಪಿಲಿ ಅವನ ಹಿಂದೆ ಸ್ಟೆಪ್ನಿ ಟಯರಿನ ಮೇಲೆ ಕೂದೊಂಡು ಹೋದ್ದಿದಾ. ಮತ್ತೆ ಪೇನಿನ ಹಿಂದೆ ಗೋಡೆಗೆ ಒತ್ತ ಕೂದ್ದು. ಎನಗೆ ಅಲ್ಲಿ ಇನ್ನೂ ಒಂದು ಶುದ್ದಿ ಸಿಕ್ಕಿದ್ದು. ಎಡಪ್ಪಾಡಿ ಬಾವ ಬಾರೀ ಬೆಶಿಲಿ ಇತ್ತಿದ್ದ, ಬೋಸಬಾವ ಪೇನಿಗೆ ನೀರು ಹಾಕಿ ಸ್ಪ್ರಿಂಕ್ಲರ್ ಮಾಡುವನ ಕೇಳುವಷ್ಟು. ಎಂತ ಹೇಳಿರೆ ವಿಷಯ ಅವನ ಒತ್ತಕ್ಕೆ ಕೂದವನದ್ದು. ಅವ ನಮ್ಮ ಬೋನಂತಾಯದ ಅರವಿಂದ, ಓ ಮೊನ್ನೆ ‘ವಿಶ್ವ ಶಟ್ಲ್ ಬ್ಯಾಂಡ್ಮಿಂಟನ್ ಚಾಂಪಿಯನ್ ಶಿಪ್  ೨೦೧೧ರ ವಿಶ್ವ ಚಾಂಪಿಯನ್’ ಆಗಿ ಆ ಶುದ್ದಿ ಗುರುಗಳತ್ರೆ ಹೇಳುಲೆ ಬಂದದ್ದಡ. ಎಡಪ್ಪಾಡಿ ಬಾವಂಗೆ ಸಮಯ ಇಲ್ಲದ್ದಿಪ್ಪಗ ಅವನ ಹೇಂಗೆ ಪರಿಚಯ ಮಾಡುಸ್ಸು ಹೇಳಿ ಮಂಡೆ ಬೆಶಿ ಆದ್ದು. ಅದು ಗೊಂತಪ್ಪಗ ಚಪ್ಪಾಳೆ ತಟ್ಟುಲೆ ಶುರು ಮಾಡಿದ ಬೋಚಬಾವ ಕೆಪ್ಪಣ್ಣ ಒಂದು ಗುದ್ದು ಕೊಟ್ಟಪ್ಪಗಳೇ ನಿಲ್ಲುಸಿದ್ದು. ಬೋನಂತಾಯದ ಮಾಣಿಗೆ ಬೈಲಿನ ಶುಭಹಾರೈಕೆಗೋ. ಇನ್ನೂ ದೊಡ್ಡ ದೊಡ್ಡ ಪ್ರಶಸ್ತ್ತಿ ಬರಲಿ.

ಅದಿರಳಿ ಆನು ಹೇಳುಲೆ ಹೆರಟ ಸಮ್ಮೇಳನ ಶುದ್ದಿಗೆ ಬಪ್ಪ. ಚುಬ್ಬಣ್ಣನ ಬೈಕಿಲಿ ಆನುದೆ, ಬೆತ್ತಸರವು ಈಚ ಭಾವನ ಬೈಕಿಲಿ ಬೋಚಬಾವನುದೆ ಕೂದೊಂಡು ಹೋದ್ಸು. ಹೆರಡುವಾಗಲೇ ಬೋಚ ಬಾವ ಎನಗೆ ಬೆತ್ತಸರವು ಬಾವನ ಬುಲ್ಲೆಟೆ ಆಯೆಕ್ಕು ಹೇಳಿ ವರಾತ ಶುರು ಮಾಡಿತ್ತಿದ್ದ. ಬೈಕು ಮಡಗುಲೆ ಜಾಗೆ ಇದ್ದೋ. ಸಮ್ಮೇಳನ ಜಾಗೆಂದ ಒಂದು ಮೈಲು ದೂರಲ್ಲಿ ಒಂದು ಮರದ ಬುಡಲ್ಲಿ ಮಡಗಿ ನ್ಯಾಷನಲ್ ಕೋಲೇಜಿನ ಜಾಲಿಂಗೆ ನೆಡಕ್ಕೊಂಡು ಹೆರಟತ್ತು. ಬೋಚಬಾವ ದಾರಿಲಿ ಒಂದು ಬುಗ್ಗೆ ತೆಕ್ಕೊಂಡ. ಅವನ ಉಗುರು ತಾಗಿ ನಾಲ್ಕೆಜ್ಜೆ ಹೋಗಿಯಪ್ಪಗ ಪಟಾಕಿ ಹೊಟ್ಟಿತ್ತಿದ. ಸಮ್ಮೇಳನದ ಜಾಲಿಂಗೆ ಬಂದರೆ ಎಲ್ಲಿ ನೋಡಿರೂ ಜೆನವೋ ಜೆನ ಆ ಉರಿ ಬೆಶಿಲಿಂಗೂ. ಮೊದಲು ಸಭೆಗೋ ಪುಸ್ತಕ ಪ್ರದರ್ಶಿನಿಗೋ ಯೋಚಿಸಿತ್ತು. ಪುಸ್ತಕ ಪ್ರದರ್ಶಿನಿ ನೋಡಿ ಸಭೆಗೆ ಹೋಪ ಆಗದೋ ಹೇಳಿದ ಚುಬ್ಬಣ್ಣ. ಸರಿ ಹೇಳಿ ಒಳ ಹೋಪ ದ್ವಾರದ ಹತ್ರ ತಲುಪಿಯಪ್ಪಗ ಬೋಚಬಾವ ಅದಾ ಆ ಜೆನ  ಸಿನೆಮಾಲ್ಲಿ ರೌಡಿ ವೇಶ ಹಾಕುಸ್ಸು ಹೇಳಿ ಬೊಬ್ಬೆ ಹಾಕಿದ. ನೋಡಿರೆ ಶರತ್ ಲೋಹಿತಾಶ್ವ ಒಂದು ಉದ್ದದ ವಸ್ತ್ರದ ಚೀಲಲ್ಲಿ ತುಂಬಾ ಪುಸ್ತಕ ತುಂಬುಸಿಯೊಂಡು ಹೆರ ಬತ್ತಾ ಇತ್ತು.

ಒಳ ಹೊಗ್ಗಿದ ಹಾಂಗೆ ದಿನಪತ್ರಿಕೆ, ವಾರಪತ್ರಿಕೆಯ ಸ್ಟಾಲುಗೊ. ಹೊಸದಿಗಂತ, ಉದಯವಾಣಿ, ಪ್ರಜಾವಾಣಿ, ಸಂಯುಕ್ತ ಕರ್ಣಾಟಕ, ವಿಜಯ ಕರ್ಣಾಟಕ, ಕನ್ನಡಪ್ರಭ ಇತ್ಯಾದಿಗೊ. ಅಲ್ಲಿಂದ ಮುಂದೆ ಒಬ್ಬರ ನೋಡಿ ಈ ಜೆನವ ಆನು ನೋಡಿದ್ದೆ ಹೇಳಿದ ಚುಬ್ಬಣ್ಣ. ನೋಡಿರೆ ‘ಸಂಕ್ರಮಣ’ ಪ್ರಕಾಶನದ ಸ್ಟಾಲಿಲಿ, ಚಂಪಾ (ಚಂದ್ರಶೇಖರ ಪಾಟೀಲ) ಮಾತಡ್ಸಿದೋರ ಮಾತಾಡ್ಸಿಯೊಂಡು, ಹಸ್ತಾಕ್ಷರ ಕೇಳಿದವಕ್ಕೆ ಕೊಟ್ಟೋಂಡು, ಪುಸ್ತಕ ಮಾರಿಯೊಂಡು ನಗುಮುಖಂದ ಇಪ್ಪದು ನೋಡಿಯಪ್ಪಗ ಪೆಂಗಣ್ಣಂಗೆ ಕೊಶಿ ಆತು. ಚುಬ್ಬಣ್ಣಂಗೆ ಹೇಳಿ ನಾಕು ಪಟ ತೆಗೆದತ್ತು.ಮುಂದೆ ಹೋದರೆ ಒಂದು ಸ್ಟಾಲಿಲಿ ಕಾ.ರಾ. ಮಾರ್ಗ ದೊಡ್ಡ ಬೋರ್ಡ್. ಬೋಚ ಬಾವನ ಅಲ್ಲಿಂದ ಹೆರಡುಸುಲೆ ಕಷ್ಟ ಆತು.ಇನ್ನು ಕೆಲವು ಜಾತೀಯತೆಯ ಎತ್ತಿ ತೋರ್ಸುವಂತದ್ದು ಇತ್ತು. ನಾವು ಇದರ ಈಗ ಮಾತಾಡ್ಸು ಬೇಡ. ಇನ್ನೊಂದು ಜಾಗೆಲಿ ಸುಭಾಷ್ ಪಾಳೆಕಾರನ ನೈಸರ್ಗಿಕ ಕೃಷಿ ಅಂಗಡಿಲಿ ಗುರುಗಳ ಪಟ ನೋಡಿ ಎಲ್ಲರಿಂಗು ಕೊಶಿ ಆತು.

ಇನ್ನು ಮುಂದೆ ಹೋದರೆ ಕರ್ಣಾಟಕ ರಕ್ಷಣಾ ವೇದಿಕೆಯ ಗಂಗಾ ಪ್ರಕಾಶನದ ಅಂಗಡಿ.ಕಾವೇರಿ ಪ್ರಕಾಶನದ ಬದುಲು ಗಂಗಾ ಪ್ರಕಾಶನ ಎಂತ್ಸಕೆ ಹೇಳಿ ತಲೆ ಕೆರಕ್ಕೊಂಡ ಬೆತ್ತಸರವು ಬಾವ.  ಕಾವೇರಿಲಿ ನೀರು ಕಮ್ಮಿ ಆದರೆ ಗಂಗೆಂದ ತಪ್ಪಲಾದಿಕ್ಕು ಹೇಳಿದ ಬೋಚಬಾವ. ಒಂದೊಂದರಿ ಬೋಚಬಾವ ಹೇಳ್ತದು ಮಾಡಿರೆ ನಾವು ಸಂಶೋಧಕ ಅಪ್ಪಲಕ್ಕು ಹೇಳಿ ಕಾಂಬದು, ಅವನ ಇಂತಾ ಉಪಾಯಂಗಳ ಕೇಳಿಯಪ್ಪಗ. ಕಜೆ ಡಾಗುಟ್ರದ್ದು, ಸ್ವಪ್ನ, ನವಕರ್ಣಾಟಕ, ಸಾಹಿತ್ಯ ಭಂಡಾರ, ಕರ್ಣಾಟಕದ ಎಲ್ಲಾ ಪತ್ರಿಕೆಗೆಗಳ ಸ್ಟಾಲು ಇತ್ಯಾದಿಗೊ ಕೂಡಾ ಇತ್ತು.ಚಿಟ್ಟೆ ಪ್ರಕಾಶನದ ಕನ್ನಡ ಶುಭಾಷಯ ಪತ್ರಂಗೊ ಲಾಯಕ ಇತ್ತು. ಬೆತ್ತಸರವು ಬಾವ ನಾಕು ತೆಕ್ಕೊಂಡ, ಆರಿಂಗೆ ಕೇಳೆಡಿ ಗೊಂತಿಲ್ಲೆ. ಅಂತೂ ಪ್ರತಿ ಅಂಗಡಿಗಳಾ ನೋಡಿ ಬೇಕಾದ ಪುಸ್ತಕ ತೆಕ್ಕೊಂಡು ಹೆರಬಂದೆಯೊ.

ಅಲ್ಲಿಂದ ಸಭೆಗೆ ಬಪ್ಪ ದಾರಿಲಿ ತಿಂಡಿ ಅಂಗಡಿಗೊ ಐಸ್ಕ್ರೀಮ್ ಅಂಗಡಿಗೊ ಇತ್ತು. ಪುಣ್ಯಕ್ಕೆ ನೆಗೆಕ್ಕಾರ ಬೈಂದನಿಲ್ಲೆ. ಇಲ್ಲದ್ರೆ ಬೊಂಬೆ ಮೀಠಾಯಿ ಬೇಕು ಹೇಳಿ ಕಿರ್ಚುತ್ತಿದ್ದನೋ ಏನೊ?. ಚುಬ್ಬಣ್ಣ ಪಟ ತೆಗೆವದರಲ್ಲಿ ಬ್ಯುಸಿ ಆದ. ಚಿದಾನಂದ ಮೂರ್ತಿಗೆ ರಾಜ್ಯಪಾಲ ಗೌರವ ಡಾಕ್ಟರೇಟು ಕೊಡುದು ಬೇಡ ಹೇಳಿದ್ದಕ್ಕೆ ಪ್ರತಿಭಟನೆ ನಡೆತ್ತಾ ಇತ್ತು. ಚುಬ್ಬಣ್ಣನ ಕೆಮರ ನೋಡಿ ಪೇಪರಿನವಕ್ಕೆ ಪೋಸು ಕೊಟ್ಟ ಹಾಂಗೆ ಒಂದು ಪೋಸು ಕೊಟ್ಟವು. ಕಡ್ಲೆ ಮಾರುದು, ಚುರುಮುರಿ ಮಾಡುದು, ಪೋಲಿಸುಗೊ, 24 ಗಂಟೆ ದೊಡ್ಡ ಶುದ್ದಿ ಹೇಳ್ತ ಟಿ.ವಿ. ಬಸ್ಸು ಕಿರಿಕೆಟ್ಟು ಪಿಚ್ಚಿಲಿ ನಿಂದ್ಸು, ದೂರದರ್ಶನದ ಗಾಡಿ ಎಲ್ಲಾ ಪಟ ತೆಗೆದು ಸಭಾಂಗಣಕ್ಕೆ ಹೋದೆಯೋ.

ವೇದಿಕೆಲಿ ಎದುರಿನ ಸೀಟಿಲಿ ದೊಡ್ಡ ಗೌಡ್ರು, ಶಂಕರ ಮೂರ್ತಿ, ಜಿ ಪರಮೇಶ್ವರ, ಹಿಂದೆ ಸಮ್ಮಾನಿತ ಸಾಹಿತಿಗೊ. ಅವೆಂತೆಲ್ಲ ಸಾಹಿತ್ಯದ ಬಗ್ಗೆ ಮಾತಾಡುಗು ಎನಗರಡಿಯ.  ದೊಡ್ಡ ಗೌಡ್ರು ಪ್ರಧಾನಿ ಪಟ್ಟಂದ ಕೆಳ ಇಳುದ ಪಕ್ಷಪಾತದ ಸಾಹಿತ್ಯ ಹೇಳಿತ್ತು. ಎತ್ತಣಿಂದೆತ್ತ ಸಂಬಂಧವೋ ಹೇಳಿದ ಬೆತ್ತಸರವು ಬಾವ. ಅಷ್ಟಪ್ಪಗ ಚುಬ್ಬಣ್ಣ ಎದುರು ಹೋಗಿ ದೊಡ್ಡಗೌಡ್ರು ನಿದ್ದೆ ಮಾಡ್ತ ಪಟ ತೆಕ್ಕೊಂಡು ಬಂದ. ರಜಾ ಹೊತ್ತು ಕೂದು, ಸಾಹಿತ್ಯ ಎಂತ್ಸು ಇಲ್ಲೆ, ಬರೇ ರಾಜಕೀಯ ಭಾಷಣ ಕೇಳಿ ಮಾರ್ಕ್ ಕಬ್ಬನ್ ದ್ವಾರಲ್ಲಿ ಹೆರಬಂದೆಯ. ಅಷ್ಟೋತ್ತಿಗೆ ನಿತ್ಯ ಮುಖ್ಯಮಂತ್ರಿ ಚಂದ್ರು ಕಾರಿಂದ ಇಳಿಯುದು ಕಂಡು ಪಟ ತೆಗದು, ಇನ್ನು ಹೆರಡುವ ಹೇಳಿ ಬೈಕು ಇಟ್ಟಲ್ಲಿಂಗೆ ಹೆರಟೆಯ.

ಚುಬ್ಬಣ್ಣ ದಾರಿಸಾಗುಲೆ ಪಟ ತೆಗೆದ. ಶುದ್ದಿಗೆ ಎಂತ ಪಟ ಬೇಕು ಹೇಳಿ ಆನು ಹೇಳಿದೆ. ಹಾಂಗೆ ಹೋಪಗ ಒಬ್ಬ ಪೋಲಿಸ್ ದಿನಿಗೇಳಿದ. ಎಂತ್ಸಪ್ಪ ಹೇಳಿ ಹತ್ತರೆ ಹೋದರೆ ಅವನ ಗೊಂತಿದ್ದೋ ಸಿನೆಮಲ್ಲಿ ಅಮ್ಮಾ.. ಅಕ್ಕೋ.. ಹೇಳ್ತ ಜೆನವ ಕೇಳಿದ. ಒಂದರಿ ಜೀವ ಬಂತು. ನೋಡಿರೆ ಬಿರಾದಾರ್(ಹಾಸ್ಯ ನಟ). ಚುಬ್ಬಣ್ಣ ಅವನತ್ರೆ ಒಂದು ಪಟ ಸಾರ್ ಹೇಳಿದ. ಬೋಚಬಾವ ಆನುದೆ ನಿಲ್ಲುತ್ತೆ ಹೇಳಿದ. ಬೆತ್ತಸರವು ಬಾವ ಅವಂಗೆ ಜೋರು ಮಾಡಿದ, ನೀನು ನಿತ್ತರೆ ಯಾರು ಬಿರಾದಾರ್ ಹೇಳಿ ಗೊಂತಾಗ ಹೇಳಿ. ಅಷ್ಟಪ್ಪಗ ಕೋಟೆ ನಾಗರಾಜ ಬಂದ. ಇಬ್ಬರ ಒಟ್ಟಿಂಗೆ ನಿಲ್ಲುಸಿ ಪಟ ತೆಗೆದು ಹೆರಟೆಯ. ಬೈಕಿನ ಮಡಗಿದಲ್ಲಿಂದ ಮಾರ್ಗಕ್ಕೆ  ತಂದಪ್ಪಗ , ಒಬ್ಬ ಬೆಳಿ ಅಂಗಿ ಪ್ಯಾಂಟಿನ ಜೆನ ಚೀಲ ಹಿಡ್ಕೊಂಡು ತುರು ತುರು ಹೋವ್ತಾ ಇದ್ದು. ನೋಡಿರೆ ಬಿರಾದಾರ್. ಸಮ್ಮೇಳನ ಪ್ರಶಸ್ತಿ ಸಿಕ್ಕಿದ್ದರ ಹಿಡ್ಕೊಂಡು ಬಸ್ ಸ್ಟಾಂಡಿಗೆ  ಹೋವ್ತಾ ಇದ್ದದು. ಸಹಾಯಕ ಸಿನೆಮಾ ಕಲಾವಿದರ ಬದುಕಿನ ಚಿತ್ರಣ ಮನಸ್ಸಿಗೆ ಬಂತೊಂದರಿ. ಬೈಕು ಹತ್ತಿ ಕಾಮತನ ಹೋಟೆಲಿಂಗೆ ಹೋಗಿ ಜೋಳದ ರೊಟ್ಟಿ ಊಟ ಮಾಡಿ ಮನೆಗೆ ಹೆರಟೆಯೊ.

ಇದು ಪೆಂಗಣ್ಣಂಗೆ ಕಂಡ ಸಮ್ಮೇಳನದ ವಿಶಯಂಗೋ. ಬರದ್ದು ಉದ್ದ ಆತೋ ಹೆಂಗೆ?. ಬರದ್ದದು ತಡ ಆತು ಹೇಳಿ ಬೇಜಾರು ಮಾಡಿಕ್ಕೆಡಿ. ಗುರಿಕ್ಕಾರ್ರು ಶುದ್ದಿ ಹುಡ್ಕುಲೆ ದೂರ ಕಳ್ಸಿತ್ತಿದ್ದವು.. ಅಲ್ಲಿ ಬೈಲಿಂಗೆ ಬಪ್ಪಲಾಯಿದಿಲ್ಲೆ. ಅದಾ ಓ ಅಲ್ಲಿ ಎಡಪ್ಪಾಡಿ ಬಾವ ಬತ್ತಾ ಇದ್ದ, ವಿರಾಟ್ ಪೂಜೆಗೆ ಬಪ್ಪಲೆ ಹೇಳುಲೆ ಕಾಣ್ತು. ಅವ ಎಂತಾರು ಹೊಸ ಶುದ್ದಿ ಹೇಳುಗು, ಮೊನ್ನೆ ಸುಭಗ ಬಾವನ ಬೇಟಿಯಾಗಿ ಬೈಂದ ಇದಾ. ಆ ಊರಿನ ಶುದ್ದಿ ಸಿಕ್ಕುಗು. ನಾವು ಇನ್ನೊಂದರಿ ಸಿಕ್ಕುವೋ.

ಸೂಚನೆ: ಸಾಹಿತ್ಯದ ಪಟಂಗಳ ಬೈಲಿಂಗೆ ಚುಬ್ಬಣ್ಣ ಒಂದೆರಡು ದಿನಲ್ಲಿ ತೋರ್ಸುತ್ತ.

~
ಪೆಂಗಣ್ಣ ಪ್ರಮ್ ಬೈಲು
bingi.penga@gmail.com

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಒಪ್ಪಣ್ಣ

  ಪೆಂಗಣ್ಣೋ..
  ಬೆಶಿಬೆಶಿ ಶುದ್ದಿಗಳ ಮತ್ತೊಂದರ ಬೈಲಿಂಗೆ ಹೇಳಿದ್ದೆ ನೀನು, ಕೊಶಿ ಆತು.

  ಮೊನ್ನೆ ಗುರುಗಳ ಆಶೀರ್ವಚನ ಕೇಳುಲೆ ಸುರುವಿಂಗೆ ಕೂದೋರಲ್ಲಿ ನೀನಿತ್ತಿಲ್ಲೆ,
  ಎಂತಾರು ಶುದ್ದಿ ಸಿಕ್ಕುತ್ತೋ ಹೇಳಿಗೊಂಡು – ಮಾಧ್ಯಮದವರ ಹತ್ತರೆ ಹೋಗಿತ್ತಿದ್ದೆ, ಅಲ್ದೋ? ಅದಕ್ಕೆ ಮೊನ್ನೆ ಶುದ್ದಿಹೇಳುವಗ ನಿನ್ನ ಬಿಟ್ಟದು, ಅಷ್ಟೇ ಆತೋ?

  ಹೇಳಿದಾಂಗೆ, ಬೋಸಬಾವ ಸಾಹಿತ್ಯಸಮ್ಮೇಳನಕ್ಕೆ ಎಂತಕೆ ಬಂದದು? ಕಡ್ಳೆ ತಿಂಬಲೋ?

  [Reply]

  ಬೋಸ ಬಾವ

  ಬೋಸ... Reply:

  ಒಪ್ಪಣ್ಣ ಭಾವ…
  ಪೆಂಗಣ್ಣನೋ… ಅತ್ತೆ ಇತ್ತೆ.. ಓ೦ಗ್ಯೊ೦ಡು ಇತ್ತಾ.. 😀
  ಚುಬ್ಬಣ್ಣ ಕೆಮರಲಿ ಪಟ ತೆಕ್ಕೊ೦ಡು ಇತ್ತ…:P
  ಅಲ್ಲಿ, ಪುಸ್ತಕದ ರಾಶಿಯೋ ರಾಶಿ…!! :)
  ಎಡಕ್ಕಿಲಿ ಮೈಕ್ಕಲ್ಲಿ ಆರೋ ಮ೦ತ್ರಿಗೊ ಅಡ… ಸುಮ್ಮನೇ ಮಾತಾಡಿಯೋ೦ಡು ಇತ್ತವಿದಾ.. 😀
  ಎನಗೆ ಎ೦ತದೂ ಅರ್ಥಾದಿಲ್ಲೆ.. 😛
  ಆನು ಹಟಮಾಡಿದಕ್ಕೆ, ಚುಬ್ಬಣ್ಣ ಎನಗೆ ಒ೦ದು ಲಾಲಿತೆಗದು ಕೊಟ್ಟ.. 😉

  [Reply]

  VN:F [1.9.22_1171]
  Rating: +1 (from 1 vote)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಏ ಚುಬ್ಬಣ್ಣ ಭಾವೋ ಪಟ ಏವತ್ತು ತೊರ್ಸುತ್ತೆ?

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಭಾವ… ಪಟ ತೋಳೆತ್ತಾ ಇದ್ದವು.. 😉 ಇ೦ದು ಸಿಕ್ಕುತ್ತು.. ಇ೦ದು ಇರುಳಿ೦ಗೆ ಹಾಕುತ್ತೆ.. ಆತ.. :)

  [Reply]

  ನೆಗೆಗಾರ°

  ನೆಗೆಗಾರ° Reply:

  ಚೆಲ, ಪೂರ ತೊಳದಾದ ಮತ್ತೆ ತೋರುಸುತ್ತದೆಂತಕೆ?
  ಎಂತಾರು ಚಿತ್ರ ಬಾಕಿಒಳುದಿಪ್ಪಗಳೇ ತೋರುಸು, ಆತೋ? 😉

  [Reply]

  VA:F [1.9.22_1171]
  Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ನೆಗೆಗಾರ°ದೇವಸ್ಯ ಮಾಣಿದೊಡ್ಡಮಾವ°ಶೇಡಿಗುಮ್ಮೆ ಪುಳ್ಳಿಶಾ...ರೀಡಾಮಹೇಶಣ್ಣವಾಣಿ ಚಿಕ್ಕಮ್ಮಶರ್ಮಪ್ಪಚ್ಚಿಜಯಶ್ರೀ ನೀರಮೂಲೆಮಾಲಕ್ಕ°vreddhiಚೆನ್ನಬೆಟ್ಟಣ್ಣಶೀಲಾಲಕ್ಷ್ಮೀ ಕಾಸರಗೋಡುಅಕ್ಷರದಣ್ಣಕೇಜಿಮಾವ°ಚುಬ್ಬಣ್ಣನೀರ್ಕಜೆ ಮಹೇಶಶುದ್ದಿಕ್ಕಾರ°ವೇಣಿಯಕ್ಕ°ದೊಡ್ಮನೆ ಭಾವಬಟ್ಟಮಾವ°ಕಳಾಯಿ ಗೀತತ್ತೆಡಾಗುಟ್ರಕ್ಕ°ವಿಜಯತ್ತೆಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ