ಹೊಟ್ಟೆ ಪಾಡು – ಕಟ್ಟು ಪಾಡು

December 24, 2010 ರ 6:58 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅದಾ ನಾಕು ದಿನ ಬೈಲಿಲಿ ಕಾಣದ್ದರೆ ಬತ್ತದಾ ಕೆಪ್ಪಣ್ಣನ ಪೋನು. ಎನಗೆ ಅವನ ಹಾಂಗೆಯೋ. ಅದೂ ಚುಣಾವಣೆ ಘೋಷಣೆ ಆದರೆ ಪುರುಸೋತ್ತು ಎಲ್ಲಿ ಸಿಕ್ಕುತ್ತು. ಒಂದೇ ತಿರುಗಾಟ. ಹಾಲುಮಜಲು[ಹಾ.ಮ.] ದೊಡ್ಡ ಬಾವಂದಲೂ ಜಾಸ್ತಿ ತಿರುಗಾಟ ಎನ್ನದೋ ಹೇಳುವಷ್ಟು. ಹಾಂಗೆ ಮೊನ್ನೆ ಹುಬ್ಬಳ್ಳಿಗೆ ಹೋದ್ದು, ಶುದ್ದಿ ಹುಡುಕುಲೆ. ಹೋದರೆ ಸಾಕಾ, ಹೊಟ್ಟೆಗೆ ಏನಾರು ಹಾಕೆಡದೋ. ಬಸವೇಶ್ವರ ಖಾನಾವಳಿ ಹೇಳಿರೆ ಪೇಮಸ್ಸು ಹೇಳಿತ್ತಿದ್ದ ಹಾ.ಮ. ಬಾವ. ಗಡದ್ದು ಜೋಳದ ರೊಟ್ಟಿ ತಿಂಬ ಆಸೆ. ಮಧ್ಯಾಹ್ನಕ್ಕೆ ಒಂದಾರು ರೊಟ್ಟಿ, ಎಣ್ಣೆಗಾಯಿ, ಹೆಸ್ರುಕಾಳು ಪಲ್ಯ, ಸಲಾಡ್, ಚಟ್ನಿ ಹೊಡಿ ಒಟ್ಟಿಂಗೆ ನೀರುಳ್ಳಿ, ಎಣ್ಣೆಲಿ ಹೊರುದ ಹಸಿಮೆಣ್ಸು. ಬರೆವಗ ಬಾಯಿಲಿ ನೀರು ಬತ್ತಾ ಇದ್ದು. ಪುನಾ ಇರುಳಿಂಗೆ ಹೋದರೆ ನೀರುಳ್ಳಿ ಇಲ್ಲೆ. ರೊಟ್ಟಿ ಎಡೆಕೆಲಿ ನೀರುಳ್ಳಿ ಇಲ್ಲದ್ರೆ ಹೇಂಗೆ. ಕೇಳಿರೆ ನೀರುಳ್ಳಿ ರೇಟು ಜಾಸ್ತಿ ಆಯಿದು ಹೇಳಿತ್ತು ಖಾನಾವಳಿ ಗುರಿಕ್ಕಾರ. ನೀರುಳ್ಳಿ ಇಲ್ಲದ್ರೆ ಅಲ್ಲಿಯವಕ್ಕೆ ಊಟ ಸೇರ. ಎಲ್ಲರೂ ಬೊಬ್ಬೆ ಹಾಕಿದ ಮೇಲೆ ಕೊಟ್ಟವು, ಊಟಕ್ಕೆ ನಾಕು ರುಪಾಯಿ ಜಾಸ್ತಿ ಆದಿನ.

ಅವಾಗ ನೆಂಪಾತು ಮನೆ ಊಟ. ಹವ್ಯಕರಲ್ಲಿ ನೀರುಳ್ಳಿ ಬಳಕೆ ಇಲ್ಲೆ ಹೇಳುಲೆ ಈಗಾಣ ಕಾಲಕ್ಕೆ ಸಾಧ್ಯ ಇಲ್ಲೆ. ಪೆರ್ಲದ ಬಾವನ ಹಾಂಗೆ ಒಬ್ಬೊಬ್ಬ ಇಪ್ಪವಕ್ಕೆ ಅದೇ ಸುಲಾಭದ ಅವಶ್ಯ ವಸ್ತು. ಆದರೆ ನಮ್ಮಲ್ಲಿ ನೀರುಳ್ಳಿ ಇಲ್ಲದ್ದೆ ಮಾಡ್ತ ಎಷ್ಟು ಬಗೆಗೊ ಇಲ್ಲೆ. ಇರಲಿ ನಮ್ಮ ಊಟ ನವಗೆ ಚೆಂದ. ಅವಕ್ಕೆ? ಈ ತರಕಾರಿಗೆ ಎಂತ ರೇಟು ಈ ಭಾವಯ್ಯಂಗೆ ಭಾಗ ಇಲ್ಲದ್ರೆ ಊಟವೇ ಸೇರ ಹೇಳಿತ್ತು ನೀರ್ಕಜೆ ಅಕ್ಕ ಮೊನ್ನೆ. ಎನಗರಡಿಯ ಅನು ಉಂಬದು ಹೋಟೆಲಿಲಿ ಅಲ್ಲದೋ. ಈಗ ಊಟಕ್ಕೆ ಎರಡುರುಪಾಯಿ ಜಾಸ್ತಿ ಮಾಡಿದ್ದವು. ಹೊಟ್ಟೆ ಕೇಳ್ತೋ?

ಶುದ್ದಿ ಹೇಳುವಾಗ ಸಚಿನ್ನನ ಬಗ್ಗೆ ಹೇಳದ್ರೆ ಬಪ್ಪ ಸರ್ತಿ ಮಾಷ್ಟ್ರು ಮಾವನ ಮನೆಗೆ ಹೋಪಗ ಊಟ ಕೊಡ ಮಾಷ್ಟ್ರತ್ತೆ. ಅದಾ ಮೊನ್ನೆ ಭಾರತ ಸೋತ ಪಂದ್ಯಲ್ಲಿ ಐವತ್ತನೇ ಶತಕ ಹೊಡದ್ದು ಸಚಿನ್ನು. ಸಚಿನ್ನಿನ ಶತಕಂದಲೂ ಎನಗೆ ಪಾಯಸ ಊಟ ಸಿಕ್ಕಿತ್ತು ಹೇಳಿ ಒಪ್ಪಕ್ಕಂಗೆ ಕೊಶಿ ಹೇಳಿದ ಒಪ್ಪಣ್ಣ ಪೋನಿಲಿ. ಇರಲಿ ಎನಗೆ ಹೋಪಲಾಯಿದಿಲ್ಲೆ. ಕಿರಿಕೆಟ್ಟಿಲಿ ಭಾರತದ್ದು ಎಷ್ಟೋ ದಾಖಲೆ ಆವುತ್ತಾ ಇದ್ದು, ಕೆಪ್ಪಣ್ಣ ಪುಸ್ತಕ ಮಾಡುವ ಅಂದಾಜಿಲಿದ್ದನಡ ಗುಣಾಜೆ ಮಾಣಿಗೆ ಓ ಮೊನ್ನೆ ಚಿನ್ನಸ್ವಾಮಿಲಿ ಸಿಕ್ಕಿ ಹೇಳಿದ್ದನಡ.

ಪುಸ್ತಕದ ಶುದ್ದಿ ಹೇಳಿಯಪ್ಪಗ ನೆಂಪಾತು[ಒಪ್ಪಣ್ಣನ ಹಾಂಗೆ, ನೆಂಪಾತು ಶುದ್ದಿ]. ಮೊನ್ನೆ ವಿ.ಕ. ಬಿಟ್ಟ ಭಟ್ರು ಎಂತ ಮಾಡ್ತವು? ನಮ್ಮ ಕೊಂಕಣಿಗೊ ದಿನಿಗೇಳಿದ್ದವು ಹೇಳುದು ಒಂದು ಶುದ್ದಿ. ಗುಲ್ವಾಡಿಯ ಪ್ರೆಂಡು ಆದ ಕಾರಣ ಹೋಗವು ಕಾಣ್ತು. ಇನ್ನೊಂದು ಶುದ್ದಿ ಯಾವುದೋ ತೆಲುಗರ ಕನ್ನಡ ಪೇಪರಿಂಗೆ ಸೇರುತ್ತವು ಹೇಳಿ. ಟಿ.ವಿ ಗಂತೂ ಹೋಗವು, ಅಷ್ಟು ಗ್ಯಾರಂಟಿ ಇದ್ದು ಎನಗೆ. ಇನ್ನು ರಾಡಿಯಾ ಶುದ್ದಿ ಹೇಳಿರೆ ಈಗಾ ದೊಡ್ಡ ಶುದ್ದಿ. ಕರ್ಣಾಟಂದ ಹೆರಾಣದ್ದು ಪೆರ್ಲದ ಭಾವಂಗೆ ಜಾಸ್ತಿ ಗೊಂತಿರ್ತಿದಾ. ಅವಾ ಇಂಟರುನೆಟ್ಟಿಲಿ ನೋಡಿಗೊಂಡು ಇರ್ತ ಯೇವಾಗಲೂ, ಹಾಂಗೆ ಆ ಶುದ್ದಿ ಕೇಳುಲೆ ಅವನತ್ರೆ ಹೋಗಿತ್ತಿದ್ದೆ, ಅದೆಂತದೋ ibnlies ಹೇಳಿ ಇದ್ದು ಹೇಳಿದ ನೋಡಿರೆ ಇದಾ ಇದರ ನೋಡು ಹೇಳಿದ http://ibnlies.in/ . ಅದರಲ್ಲಿ ಟಿ.ವಿ.ಯವು ಲೊಟ್ಟೆ ಹೇಳುದರ ಹಾಕಿದ್ದವಡ. ಮತ್ತೆ ನಿನ್ನೆ ಅದಾ ಭುವನ ಸುಂದರಿ ಬೆಂಗಳೂರಿಂಗೆ ಬಂದ ಶುದ್ದಿ ಇತ್ತಿದಾ. ಟಿ.ವಿ.ಲಿ ಅದರ ಸಂದರ್ಶನ ಮಾಡಿಯೊಂಡಿದ್ದ ಜೆನವು ಅದೂ ಕೊಣುದವೂ ನೋಡಿ, ಕೈಲಿ ಕುಪ್ಪಿ ಒಂದು ಇತ್ತಿಲ್ಲೆ ಅಷ್ಟೇ.

ಇದೆಲ್ಲ ಬರೆದಪ್ಪಗೊ ಹೆಡ್ಡಿಂಗು ಕೊಟ್ಟದು ಸರಿ ಆತೊ ಕಾಣ್ತು, ಹೊಟ್ಟೆ ಪಾಡಿಗಾಗಿ ಕಟ್ಟುಪಾಡು ಬಿಡೆಕಷ್ಟೇ ಹೇಳುತ್ತ ಹಾಂಗಾತು. ಇನ್ನು ಬರೆವಲೆ ಪುರುಸೋತ್ತು ಇಲ್ಲೆ. ಬೊಂಬಾಯಿಗೆ ಪಾಕಿಸ್ಥಾನಂದ ಯಾರೋ ಉಗ್ರಂಗೊ ಬೈಂದವಡ. ವಿಷಯ ತಿಳೊಕ್ಕಂಬಲೆ ಹೋಯೆಕ್ಕು ಮತ್ತೆ ಕಾಂಬ ಆಗದೋ…

~
ಪೆಂಗ ಪ್ರಮ್ ಬೈಲು.
bingi.penga@gmail.com

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಮೋಹನಣ್ಣ
  Krishnamohana Bhat

  ಏ ಪೆ೦ಗೊ ನೀನು ಎಲ್ಲಿಯಾರು ಬಯಲಿ೦ಗೆ ಊಟಕ್ಕೆ ಹೋಗು ದ೦ಡಿನ ತಾಳು ಸೊಪ್ಪಿನ ಸಾ೦ಬಾರು ಬೊಟ್ಟು ಹೂಗಿನ ಸಾರು ಮು೦ಡಿಗೆ೦ಡೆ ಮೇಲಾರ,ಸಾಲದ್ರೆ ಬಾಳೆ ಕಾಯಿ ತಾಳು,ಬಪ್ಪ೦ಕಾಯಿ ಬೋಳು ಕೊದಿಲು ಎಲ್ಲ ಮಾಡಿ ಕೊಡುಗು.ನೀರುಳ್ಳಿಗೆ ನೂರಾದರೂ ನಾವು ತಲೆ ಬೆಶಿ ಮಾಡೇಕು ಹೇಳಿ ಇಲ್ಲೆ.ಬೆಳವವಕ್ಕೆ ಸಿಕ್ಕುತ್ತರೆ ಸಿಕ್ಕಲಿ ಎಡೆಲಿಪ್ಪವಕ್ಕಾದರೆ ಎಲ್ಲ ಸೇರಿ ಎರಡೇರಡು ಬಾರ್ಸುವೊ೦.ಮತ್ತೆ ನೀನು ಆ ಕುಪ್ಪಿ ಹಿಡುದವರ ಸ೦ದರ್ಶನ ಮಾಡುವಾಗ ರಜ ಜಾಗ್ರತೆ ಮಾಡಿಗೊ ಕುಪ್ಪಿ ಹಿಡುದವಕ್ಕೆ ಕ೦ಪೆನಿ ಬೇಕಾವುತ್ತು ಎನ್ನ ಲೆಕ್ಕಟು ಇನಿ ಒ೦ಜಿ ನೂದು ಪಾಡ್ಲೆ ಹೇಳ್ಲು ಸಾಕು.ನಾಳ೦ಗೆ ಇನಿ ಇರ್ನಲೆಕ್ಕಟು ಹೇಳೀಯೂ ಹೇಳಗು.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಶಣ್ಣ
  ಶ್ರೀಶಣ್ಣ

  ಊರೂರು ತಿರುಗುವಾಗ ಅಲ್ಲಿಯಾಣ ಆಹಾರಕ್ಕೆ ಒಗ್ಗೆಕ್ಕಾವ್ತು. ಇಲ್ಲದ್ದರೆ ಉಪವಾಸವೇ ಗತಿ.
  ನೀರುಳ್ಳುಗೆ ರೇಟ್ ಜಾಸ್ತಿ ಆದ ನಂತ್ರ ಕೆಲವು ಹೋಟ್ಲುಗಳಲ್ಲಿ ನೀರುಳ್ಳಿ ದೋಸೆ ಮಾಡ್ತವಿಲ್ಲೆ ಅಡ.
  ಒಂದು ತಮಾಷೆ ನೆಂಪಾತು:
  ಹೋಟ್ಲಿಂಗೆ ಹೋಗಿ ಒಬ್ಬ ನೀರುಳ್ಳಿ ದೋಸೆಗೆ ಅರ್ಡರ್ ಮಾಡಿದ.
  ಸಪ್ಲೈಯರ್ ದೋಸೆಯೂದೆ ಒಂದು ಸಣ್ಣ ನೀರುಳ್ಳಿ ತುಂಡನ್ನೂ ತಂದು ಮಡುಗಿದ.
  ಇವಂಗೆ ಕೋಪ ಬಂತು. ನೀರುಳ್ಳಿ ದೋಸೆ ಹೇಳಿರೆ ಬರೇ ದೋಸೆ ತಂದೆ ಅಲ್ಲದಾ ಹೇಳಿ ಜೋರು ಮಾಡಿದ.
  ಸಪ್ಲೈಯರ್, ನೀರುಳ್ಳಿ ತೋರಿಸಿ ಇದು ಏನು? ಕೇಳಿದ. “ನೀರುಳ್ಳಿ” ಹೇಳಿದ ಇವ
  ದೋಸೆ ತೋರಿಸಿ ಇದು ಏನು? ಕೇಳಿದ. “ದೋಸೆ” ಹೇಳಿದ ಇವ
  ಆಯಿತಲ್ಲ ಅಲ್ಲಿಗೆ “ನೀರುಳ್ಳಿ ದೋಸೆ” ಹೇಳಿದ ಸಪ್ಲೈಯರ್.

  [Reply]

  VA:F [1.9.22_1171]
  Rating: +1 (from 1 vote)
 3. ಬೋಸ ಬಾವ
  ಬೋಸ...

  ಅದಾ, ಪೆಂಗಣ್ಣೊ.. ನೀನು ಎನ್ನ ಕರ್ದಿಲ್ಲೆ ಅನ್ನೆ… “ಬಸವೇಶ್ವರ ಖಾನಾವಳಿ” ಹೋಪಗ… :(
  ಆನು ಅಜ್ಜಕಾನ ಭಾವ ಬತ್ತಿತ್ಯೊ ಅನ್ನೆ..!
  4 ಕು ರೊಟ್ಟಿ ಹೊಡವಲಾವುತ್ತಿತ್ತು… :(

  [Reply]

  VA:F [1.9.22_1171]
  Rating: 0 (from 0 votes)
 4. ಪೆಂಗಣ್ಣ, ಶುದ್ದಿ ಚೆಂದಾಯಿದು ಆತಾ, ಇನ್ನೊಂದರಿ ನೀ ಡೆಲ್ಲಿಗೆ ಹೋವ್ತರೆ ಎನ್ನನ್ನೂ ಕರ್ಕೊಂಡೋಗಿ ಎನಗೊಂದು ಐಸುಕ್ರೀಮು ಕೊಡ್ಸೆಕ್ಕಾತಾ? 😉

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಅಡ್ಕತ್ತಿಮಾರುಮಾವ°ಪವನಜಮಾವಗಣೇಶ ಮಾವ°ಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಪುತ್ತೂರುಬಾವಜಯಶ್ರೀ ನೀರಮೂಲೆಪೆರ್ಲದಣ್ಣಮುಳಿಯ ಭಾವಡಾಮಹೇಶಣ್ಣಕೇಜಿಮಾವ°ದೊಡ್ಡಭಾವಕಾವಿನಮೂಲೆ ಮಾಣಿಚೆನ್ನೈ ಬಾವ°ಮಂಗ್ಳೂರ ಮಾಣಿದೊಡ್ಮನೆ ಭಾವದೀಪಿಕಾಮಾಷ್ಟ್ರುಮಾವ°ಕೊಳಚ್ಚಿಪ್ಪು ಬಾವಒಪ್ಪಕ್ಕಯೇನಂಕೂಡ್ಳು ಅಣ್ಣಶೀಲಾಲಕ್ಷ್ಮೀ ಕಾಸರಗೋಡುvreddhiಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ