Oppanna.com

ಇದಾ ಇದು ಯೇವದರ ಪ್ರಭಾವ !!?

ಬರದೋರು :   ಪೆಂಗಣ್ಣ°    on   31/03/2011    18 ಒಪ್ಪಂಗೊ

ಪೆಂಗಣ್ಣ°

ಹೀಂಗೆ ಮೋರೆಪುಟಲ್ಲಿ ಸಂಚಾರ ಮಾಡ್ತ ಇಪ್ಪಗ ಒಂದು ಪಟ ಸಿಕ್ಕಿತ್ತು. ಬೈಲಿಲಿ ಬೆಶಿ ಬೆಶಿ ಚರ್ಚೆ ಆಗದ್ದೆ ಸುಮಾರು ದಿನವೂ ಆತು..!
ಪೂರ್ತ ಹಾಕುದು ಬೇಡ ಹೇಳಿ ವಿಷಯಕ್ಕೆ ಬೇಕಾದ್ದರ ತುಂಡು ಮಾಡಿ ಹಾಕಿದ್ದೆ.
ಪಟ ನೋಡಿ ನಮ್ಮ ಸಂಸ್ಕೃತಿ ಉಳುಶುತ್ತದು ಹೇಳಿರೆ ಅಪ್ಪೋ ಅಲ್ಲದೋ ಹೇಳಿ ಆತು ಪಟಕ್ಕೆ ಬರದ ತಲೆ ಬರಹ ನೋಡಿ ತಲೆಬರಹ ಹೀಂಗಿತ್ತು “ಬಳೆಗಳ ದಿನ” (bangles day) ಹೇಳಿ.

ಇದು ನಮ್ಮದು ಏನೂ ಇಲ್ಲೆ ಹೇಳಿ ಮಾಡ್ತದೋ.. ಅಲ್ಲಾ ನಮ್ಮ ಕೆಳ ಹಾಕುಲೆ ಮಾಡ್ತದು ಅಂದಾಜಿ ಆಯಿದಿಲ್ಲೆ.
ನಿಂಗೊಗೆ ಎಂತ ಅನುಸುತ್ತು ಹೇಳಿ..

18 thoughts on “ಇದಾ ಇದು ಯೇವದರ ಪ್ರಭಾವ !!?

  1. ಏ ಪೆಂಗಣ್ಣ, ನಿಂಗ ನಿನ್ನೆ ನಮ್ಮ ಬೋಸಬಾವನ ಬರ್ತುದೇಗೆ ಹೊಯಿದಿರಾ? ಅಲ್ಲಿ ಗಮ್ಮತು ಹೇಳಿ ಒಂದು ಗಾಳಿಸುದ್ದಿ ಸಿಕ್ಕಿತ್ತ್ಉ.

    1. ಗೆಣಪ್ಪ೦ಣ್ಣ.. ಎನ್ನ ಪತ್ತ್ರೊಡೆ ಯೋ????
      ಗಾಳಿಸುದ್ದಿ ಹೇಳಿತ್ತೊ?? ಯೋ…!!! 😛
      ಒಗ್ಗರಣೆ ಪರಿ೦ಮ್ಮಳ ಅಲ್ಲಿವರೆಗೆ ಎತ್ತಿತ್ತೊ?? 😉

  2. ಪ್ರದೀಪಣ್ಣೋ ಮು೦ದ೦ಗೊರೆಗೆ ಕಾಯೇಕಾದ್ದಿಲ್ಲೆ ಈಗಳೇ ಕಾಣುತ್ತು.ಬೇಕಾರೆ ಭಾರತದವು ವರ್ಲ್ದ್ಕಕಪ್ಪಿಲ್ಲಿ ಗೆಲ್ಲಲೆ ಪ್ರಾರ್ತನೆ ಮಾಡಿರೆ ಸಾಕು.ಅಲ್ಲದ್ರೆ ಒ೦ದಷ್ಟು ಹೊಸ ಹಿ೦ದಿ ಸಿನೆಮ ನೋಡಿರೂ ಅಕ್ಕು.ಒಪ್ಪ೦ಗಳೊಟ್ಟಿ೦ಗೆ.(ಹಿ೦ದಿ ಸಿನೆಮದ್ದಲ್ಲ)

  3. ಕೋಲ ಕಟ್ಲೆ ಒಂದು ವಿಷಯ…. ಹೀಂಗೆಪ್ಪದರ ಅಷ್ಟಕ್ಕೆ ಬಿಟ್ಟುಬಿಡೆಕು 🙂

  4. ಚುಬ್ಬಣ್ಣಂಗೆ ಎನ್ನದು ಫುಲ್ಲು ವೋಟು..ಆನು ಬರವಲೆ ಹೆರಟರೆ ರಿಪಿಟೀಷನ್ ಅಕ್ಕು.

  5. “ಬಳೆಗಳ ದಿನ”.. ಇದು ಈ ಪೇಟೆ ಜನರಲ್ಲಿ ಕಾ೦ಬದು.. ಇ೦ದ್ರಾಣ ಕೊಲೇಜು ಮಕ್ಕೊ, I.T/B.T ಕೆಲಸ ಮಾಡುತ್ತವು ಹುಟ್ಟುಹಾಕಿದ ಒ೦ದು ಕರ್ಮಕಾ೦ಡ.. ಇವಕ್ಕೆ ಎಲ್ಲ ಬೇರೆ ಉದ್ಯೊಗ ಇಲ್ಲೆ…. ಬಳೆಗಳ ದಿನದ೦ದು ಮಾ೦ತ್ರ ಹಾಕೆಕೋ?? ಬೇರೆ ದಿನ ಆಗದೊ??
    ಬರೀ ಬಳೆಗಳ ದಿನ ಮಾ೦ತ್ರ ಅಲ್ಲ, ಸೀರೆ ದಿಸ, ಪೇ೦ಟು ದಿನ… ಹೀ೦ಗೆಲ್ಲಾ ಮಾಡ್ತವು…
    ನಿಜವಾಗಿಯೂ.. ಆರಿ೦ಗು ಒ೦ದು ಶಿಸ್ತು ಇಲ್ಲೆ.. ಓತಪ್ಪೊರ ಮಾಡುಗು..

    ಹಾ೦ಗೆ ಹೇಳಿ ಇವ್ವು ಮಾಡ್ತು ತಪ್ಪು ಹೇಳಿ ಅಲ್ಲ.. ಕ್ರಮ ಸರಿ ಇಲ್ಲೆ ಹೇಳಿ… ಇದು ಬರೇ ನಿ೦ಪ್ಪಪ್ಪಗ ಮಾ೦ತ್ರ ಎ೦ತಗೆ..? ಯಾವತ್ತು ಮಾಡಿರೆ ಎ೦ತರ ಕಮ್ಮಿಯಪ್ಪದೂ?? ನಾವು ಪ್ರದರ್ಶನ ಮಾಡುವುದು ಎಷ್ಟು ಸರಿ ಹೇಳಿ??

  6. ಬಳೆಗಳ ದಿನ ಹೇಳಿಯೂ ಇದ್ದೊ?ಹೀ೦ಗೊ೦ದು ದಿನ ಆಚರಣೆ ಮಾಡುವ ಮಟ್ಟಕ್ಕೆ ನಾವು ಇಳುದತ್ತು ಕ೦ಡ್ರೆ ಮೋಸವೇ.ಅ೦ಗಡಿಯವ್ವು ಮಾರಾಟಕ್ಕೆ ಹೊಸ ರೀತಿ ಕ೦ಡುಹುಡುಕ್ಕಿದ್ದದೋ ಏನೋ !
    ಹೀ೦ಗೇ ಮು೦ದುವರುದು ಹಣೆಯ ಕು೦ಕುಮಕ್ಕೂ ಒ೦ದು ದಿನ ಹೇಳಿ ಬಕ್ಕೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×