Oppanna.com

ಇಂದು ಹೊತ್ತೋಪಗ ಕೊಡೆಯಾಲಲ್ಲಿ!

ಬರದೋರು :   ಪೆಂಗಣ್ಣ°    on   23/12/2011    9 ಒಪ್ಪಂಗೊ

ಪೆಂಗಣ್ಣ°

ಈ ಪೆಂಗ ಎಲ್ಲಿದ್ದ° ಗ್ರೇಶಿದಿರೋ? ನಮ್ಮ ತಿರುಗಾಟಲ್ಲಿ ಪುರುಸೊತ್ತು ಇದ್ದೋ.. ಹಾಂಗೆ ಇಂದು ಕೊಡೆಯಾಲಕ್ಕೆ ಎತ್ತಿದ್ದು. ಯೆನಂಕೋಡ್ಳಣ್ಣ ಪಟ ತೆಗೆಯಕ್ಕಾರೆ ಮಾಂತ್ರ ನೆಂಪಪ್ಪದು ಹೇಳಿ ಬೈವಲೆ ಶುರು ಮಾಡಿತ್ತಿದ್ದ. ಹಾಂಗೆ ಅವನ ಬೇಟಿ ಮಾಡುಲೆ ಹೆರಟತ್ತು. ಅವ ಮಾತಾಡ್ತ ಇಂದು ಬೊಳುಂಬು ಮಾವನ ನಾಟಕ ಇದ್ದು ಹೋಪನೋ ಕೇಳಿದ. ಹೋಪ ಹೇಳಿ ಹೋತು.

ಹೋದ್ದೆಲ್ಲಿಗೆ? ಅದ್ವೈತಕೀಟನಂತವು ಕಲಿತ್ತಲ್ಲಿಗೆ, ಅವ ಇತ್ತನಿಲ್ಲೆ. ಮೊನ್ನೆ ಮಾಸ್ಟ್ರು ಮಾವನ ಸಣ್ಣ ಮಗ ದಿನಿಗೇಳಿದ್ದಕ್ಕೆ ಅತ್ಲಾಗಿ ಹೋಯಿದನಡ. ಅಂತೂ ಶ್ರೀ ಧ.ಮ. ಕಾನೂನು ಮಹಾವಿದ್ಯಾಲಯದ ಸಭಾಂಗಣಕ್ಕೆ ತಲುಪಿತ್ತು. ತಲ್ಪುವಾಗ ಅಯನ ವಿ. ರಮಣ್ ಹೇಳ್ತ ಕೂಸಿನ ಡೇನ್ಸು ಮುಗುದಿತ್ತು. ಬಾರಿ ಲಾಯ್ಕ ಆಯಿದಡ.

ಹೋಯ್ ಎಂತ ಕಾರ್ಯಕ್ರಮ ಹೇಳಿದ್ದಿಲ್ಲೆನ್ನೆ. ಕೊಡೆಯಾಲಲ್ಲಿ ಒಂದು ಅಪರೂಪದ ಸಂಘ ಇದ್ದು. ಹೆಸರು “ರೇಡಿಯೋ ಕೇಳುಗರ ಸಂಘ”. ಅವು ಮಾಸಿಕ ಮಾಡ್ತವು. ಕುಶಾಲಲ್ಲ, ಮಾಸಕ್ಕೊಂದರಿ ಕಾರ್ಯಕ್ರಮ ಮಾಡ್ತವಿದಾ. ಈ ಸರ್ತಿ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಂಗ. ಪೆಂಗಣ್ಣಂಗೆ ಕೊಶಿ ಆತು ಒಂದು ಸುದ್ದಿ ಸಿಕ್ಕಿತ್ತನ್ನೆ ಹೇಳಿ. ನಮ್ಮ ವೆಂಕಟ್ರಮಣಣ್ಣನ ಉಪನ್ಯಾಸ. ಗೊಂತಾಯಿದಿಲ್ಲೆಯೋ, ಕೆ. ವಿ. ರಮಣ್ ಹೇಳಿರೆ ಗೊಂತಕ್ಕನ್ನೆ. ನಮ್ಮ ಸಂಸ್ಕೃತಿ ಒಳಿಯೆಕ್ಕಾರೆ ನಮ್ಮ ಮಕ್ಕಳ ಹೇಂಗೆ ಬೆಳೆಶೆಕ್ಕು ಹೇಳ್ತ ವಿಷಯಲ್ಲಿ ಉಪನ್ಯಾಸ.

ಅಬ್ಬೆ ಅಪ್ಪ ಮಕ್ಕೊಗೆ ಸಮಯ ಕೊಡೆಕ್ಕು. ಹೇಳ್ತದರ ಉದಾಹರಣೆ ಸಹಿತ ಕಮ್ಮಿ ಸಮಯಲ್ಲಿ ವಿವರಿಸಿದವು., ಶಾಲೆಗೆ ಬಾಡಿಗೆ ವಾಹನಲ್ಲಿ ಕಳ್ಸುವ ಬದಲು ನಾವೇ ಹೋಗಿ ಬಿಡುದು ಇತ್ಯಾದಿ. ಎಲ್ಲವೂ ಗುರುವೇ ಮಾಡೆಕ್ಕು ಹೇಳಿರೆ ಸಾಧ್ಯ ಇಲ್ಲೆ. ಅಬ್ಬೆ ಅಪ್ಪ ಮಕ್ಕೊಗೆ ಸಮಯ ಪ್ರೀತಿ ಕೊಟ್ಟು ತಿಳಿ ಹೇಳಿರೆ ಮಾತ್ರ ನಮ್ಮತನ ಒಳಿಗೂ ಹೇಳಿ ನೆಂಪು ಮಾಡಿದವು. ಒಟ್ಟಿಂಗೆ ಬೆಂಗಳೂರಿಗೆ ಹೋಗಿಪ್ಪಗಾಣಾ ಘಟನೆ ವಿವರಿಸಿದವು. ಅವರ ಮಗಳದೇ ಪ್ರಾಯದ ಕೂಸಿನ ಅಪ್ಪ ಅವರತ್ರೆ ಎನ್ನ ಮಗಳೂ ನಿಂಗಳ ಮಗಳಸ್ಟೆ ಉಶಾರಿ ಆಯೆಕ್ಕಾರೆ ಎಂತ ಮಾಡೆಕ್ಕು ಕೇಳಿದವಡ. ಇವು ಅವಕ್ಕೆ ಹೇಳಿದ್ದು ಮೊದಲು ನಿಂಗೋ ಎನ್ನ ಹಾಂಗೆ ಆಯೆಕ್ಕು ಹೇಳಿ. ನಾವು ಹೇಳಿಕೊಟ್ಟದ್ದನ್ನೆ ಮಕ್ಕೋ ಕಲಿವದು ಹೇಳ್ತದರ ನೆಂಪಿಸಿದವು.

ಸಭಾಧ್ಯಕ್ಷತೆ ವಹಿಸಿದ್ದ ಕಾರ್ಪೋರೆಷನ್ ಬ್ಯಾಂಕಿನ ಅಧಿಕಾರಿ ಜೋನ್ ಡಿಸೋಜ, ಮೂರು ಮಾರ್ಗ ಸೇರುವಲ್ಲಿ ಕೈಕಂಬ ಇರೆಕ್ಕು, ಅದು ಅಬ್ಬೆ ಅಪ್ಪ ಆಗಿರೆಕ್ಕು. ಮಕ್ಕ ಬೆಳೆತ್ತ ಸಂದರ್ಭಲ್ಲಿ ಸರಿಯಾದ ಮಾರ್ಗದರ್ಶನ ನೀಡೆಕ್ಕು. ಅದು ಮಾಡು ಇದು ಮಾಡು ಹೇಳುವ ಬದಲು, ಎಂತ ಮಾಡಿಕ್ಕಿ ಬಂದೆ ಹೇಳಿ ಮನೆಗೆ ಬಂದು ಹಿರಿಯರಿಂಗೆ ಹೇಳಿ ಹೇಳಿರೆ ಮಕ್ಕೊ ಹೇಳುಗು. ಅವು ಎಂತ ಮಾಡ್ತವು ಹೇಳುದರ ತಿಳ್ಕೊಳ್ಳೆಕ್ಕು. ಬೇಲಿ ಹಾಕಿ ದನ ಹೆರ ಹೋಗದ್ದಾಂಗೆ ಮಾಡುವ ಬದಲು, ದನ ಅದೇ ಹಟ್ಟಿಲಿ ಬಂದು ನಿಂಬಾಗೆ ಮಾಡೆಕ್ಕು ಹೇಳಿದವು.

ಅಷ್ಟಪ್ಪಗ ಅಭಾವನೂ ಪ್ರಭಾವನೂ ಬಂದವು. ಬೊಳುಂಬು ಮಾವನ ನಾಟಕ ನೋಡುಲೆ. ಬೊಳುಂಬು ಮಾವನ ಕಾರ್ಪೋರೇಷನ್ ಬ್ಯಾಂಕಿನ ಕನ್ನಡ ಸಂಘ “ಸಿರಿಗಂಧ” ತಂಡದ ಕಾರ್ಯಕ್ರಮ ಗೆಣವತಿಯ ಮಾತಾಡ್ಸುವ ಮೂಲಕ ಶುರು ಆತು. ಮೊದಲು ಚಂದನದಾ ಗೊಂಬೆ, ಎಲ್ಲಿರುವೆ ಮನವ ಕಾಡುವ ರೂಪಸಿಯೆ ಪದ್ಯ ಇತ್ತು. ನಂತ್ರ ಬೊಳುಂಬುಮಾವನ ಕಿರುನಾಟಕ ‘ಹೋರಾಟ’. ಓದು ಬರಹ ಗೊಂತಿಲ್ಲದ್ದವರಿಂದ ರಾಜಕಾರಣಿಗೋ ಉದ್ಯಮಿಗೋ ಭೂಮಿ ಕಬಳಿಸುವುದರ ವಿರುದ್ದ ಹೋರಾಟವ ಅತ್ಯಂತ ಕಮ್ಮಿ ಸಮಯಲ್ಲಿ ಚೊಕ್ಕವಾಗಿ ನಿರೂಪಿಸಿದ್ದವು. ಬೊಳುಂಬು ಮಾವನದ್ದು ಅಜ್ಜ ರೈತನ ಪಾತ್ರ ರೈಸಿದ್ದು. ‘ಹೆಬ್ಬೆಟ್ಟು ಒತ್ತಿ ಹೆಡ್ಡ ಆಗೆಡಿ’ ಹೇಳ್ತ ಕಿವಿಮಾತು ಕೊಟ್ಟವು.

ಎರಡನೇ ನಾಟಕ ‘ಸಂದರ್ಶನ’. ಗೋಪಾಲ್ ಆಂಡ್ ಕಂ.ಗೆ ಸಂದರ್ಶನ ಬಾರೀ ಪಸ್ಟಾಯಿದು. ಕಂಪೆನಿ ಕಾರ್ಯನಿರ್ವಾಹಣಾಧಿಕಾರಿಯಾಗಿ ಬೊಳುಂಬು ಮಾವ ಎಜ್ಡಿ ಸ್ಟಾರ್ಟು ಮಾಡಿದ್ದು ಸೂಪರ್. ಒಬ್ಬ ಅಭ್ಯರ್ಥಿ ಹಳೆ ಕಂಪೆನಿಯ ಮೇನೇಜರನ ವರ್ಣಿಸಿದ್ದು ಹೀಂಗೆ “ಅಳಗೆ ಹೊಟ್ಟೆಯ, ಕಂಬ ರಟ್ಟೆಯ ಕನ್ನಡಿ ಮಂಡೆ’ಯ ಜೆನ ಹೇಳಿ. ಇನ್ನೊಬ್ಬ ಎಲಿಯ ಬೀಲ ಉದ್ದ ಎಂತಕೆ ಕೇಳಿದ್ದಕ್ಕೆ ಸತ್ತ ಮೇಲೆ ಬೀಲ ಹಿಡುದು ಇಡ್ಕುಲೆ ಹೇಳಿದ್ದು ನೈಜಾಭಿನಯ ಇತ್ತು. ಅಂತೂ ಕನ್ನಡಾಭಿಮಾನಿಗೆ ಕೆಲಸ ಕೊಟ್ಟವು. ಎರಡು ನಾಟಕವ ಬರದು ನಿರ್ದೇಶಿದ ಬೊಳುಂಬುಮಾವನ ಕಾರ್ಯ ಸಾರ್ಥಕ ಆಯಿದು.

ಮಿಮಿಕ್ರಿ, ಭಾವಗೀತೆ, ದೇಶಭಕ್ತಿಗೀತೆಯೊಟ್ಟಿಂಗೆ ಕಾರ್ಯಕ್ರಮ ಮುಗುದತ್ತು. ಬೊಳುಂಬು ಮಾವನ ಮಾತಾಡ್ಸಿ ಅಭಿವಂದನೆ ಮಾಡಿ ನಾವು ಹೆರಟತ್ತು ಇನ್ನೋಂದೂರಿಗೆ.

ಹೇಳಿದಾಂಗೆ ಬೊಳುಂಬು ಮಾವ ಬರದು ನಿರ್ದೇಶಿದ ನಾಟಕ ನೋಡೆಕ್ಕಾರೆ ಇನ್ನೊಂಡು ಅವಕಾಶ ಇದ್ದು. ಅದು ಹವ್ಯಕ ನಾಟಕ. ಜೆನವರಿ ಒಂದನೇ ತಾರೀಕು ಹೊತ್ತೋಪಗ ಐದು ಗಂಟೆಗೆ ಕೊಡೆಯಾಲದ ನಂತೂರಿನ ಶ್ರೀಭಾರತೀ ಕೋಲೇಜಿನ ಸಭಾಂಗಣಲ್ಲಿ ಒಂದು ಕುರ್ಚಿ ಭದ್ರ ಮಾಡಿಕೊಳ್ಳಿ. ನೆಗೆ ಮಾಣಿ ಬೋಚ ಬಾವನೂ ಬಪ್ಪಲಕ್ಕು. ನಾಟಕ ಅರ್ಥ ಆಗದ್ದರೂ ಊಟ ಇದ್ದು. ಬೊಳುಂಬು ಮಾವ ಕೊಟ್ಟ ಹೇಳಿಕೆ ಕಾಕತವ ಶುದ್ದಿಕ್ಕಾರ ಕಂಪ್ಯೂಟರಿಂಗೆ ಹಾಕುವಾಂಗೆ ಮಾಡಿ ತತ್ತೆ ಹೇಳಿ ತೆಕ್ಕೊಂಡೋಯಿದ. ಬಕ್ಕು. ನವಗೆ ರೈಲು ಬಂದತ್ತು. ಸಿಬಾವನ ನೋಡುಲೆ ಮೆಡ್ರಾಸಿಂಗೆ ಹೋಗಿ ಬತ್ತೆ ಕಾಂಬೋ.

~
ಪೆಂಗಣ್ಣ ಪ್ರಮ್ ಬೈಲು
bingi.penga@gmail.com

ಸೂ: ಯೆನಂಕೋಡ್ಳಣ್ಣ ನಾಟಕ ಸುರುವಪ್ಪ ಮೊದಲೇ ಹೆರಟ ಕಾರಣ ಪಟ ಇಲ್ಲೆ.

9 thoughts on “ಇಂದು ಹೊತ್ತೋಪಗ ಕೊಡೆಯಾಲಲ್ಲಿ!

  1. laikddu enage mail madiಕನಡ ಚುಟುಕು ಬರೆಯಿರಿ

  2. ಗಡಿಬಿಡಿಯ ಎಡಕ್ಕಿಲಿ ನಮ್ಮ ಬೊಳು೦ಬು ಮಾವ ಮ೦ಗ್ಳೂರಿಲಿ ಮಾಡ್ತಾ ಇಪ್ಪ ಸಾ೦ಸ್ಕೃತಿಕ ಚಟುವಟಿಕೆಯ ಶುದ್ದಿ ಬೈಲಿಲಿ ತಿಳುಶಿದ್ದು ಲಾಯ್ಕ ಆತು.ಬೊಳು೦ಬು ಮಾವನ ಪದ ಓದಿ ನೆಗೆ ತಡೆಯ,ಭಾರೀ ಚೆ೦ದದ ಬೋಸನ ವರ್ಣನೆ,ಕಣ್ಣಿ೦ಗೆ ಕಟ್ಟುವ ಹಾ೦ಗಿದ್ದು.ನಮ್ಮ ಬೋಸ ಭಾವನೂ ಓದೆಕ್ಕಾದ ಪದ್ಯ..

  3. ಓಯ್‌ ಇದಾ ಪೆಂಗಣ್ಣ° ಬಂದದು.. ಕಾರ್ಯಕ್ರಮ ನಡೆದ್ದರ ಹಾಂಗೆ ರೆಕಾರ್ಡು ಮಾಡಿಯೊಂಡು ಬಂದು ಬೈಲಿಲಿ ಹಾಕಿದ್ದ°.. ಏ ಸಿಭಾವ ಮೆಡ್ರಾಸಿಂಗೆ ಎತ್ತಿದನೋ ಏ°

  4. ಹ್ಹ ಹ್ಹ .. ಪದ್ಯ ಸೂಪರಾಯ್ದು .. ಮತ್ತೆ ವಿವರಣೆದೆ ಲಾಯ್ಕಾಯ್ದು ಪೆಂಗಣ್ಣಂದು :))) 🙂

  5. ಏ ಪೆಂಗಣ್ಣೋ,
    ಕೊಡೆಯಾಲಕ್ಕೆ ಬಂದು ಎನ್ನ ಕಾಣಾದ್ದೆ ಹೋದ್ದೋ ನೀನು???

    ಬೊಳುಂಬು ಮಾವಾ,
    ಜನವಿ ಒಂದಕ್ಕೆ ಆನೂ ಬತ್ತೆ ಆತಾ?

  6. ಪೆಂಗಣ್ಣನ ಲೇಖನ ಕಾರ್ಯಕ್ರಮದ ಸಮಗ್ರ ವಿವರಣೆ ಕೊಟ್ಟತ್ತು.
    ಬೊಳುಂಬು ಮಾವನ ಕಿರು ನಾಟಕ “ಹೋರಾಟ” ಮೊದಲು ನೋಡಿತ್ತಿದ್ದೆ. ಜನವರಿ ಒಂದಕ್ಕೆ ಹಾಜರು ಹಾಕೆಕ್ಕೇ.
    ಬೊಳುಂಬು ಮಾವನ ಎರಡು ಚತುಷ್ಪದಿ ಒಳ್ಳೆ ರೈಸಿದ್ದು

  7. ಅಭಾವ, ಶೇಡಿಗುಮ್ಮೆ ಭಾವಯ್ಯ, ಶೇಡಿಗುಮ್ಮೆ ಪುಳ್ಳಿ, ಒಟ್ಟಿಂಗೆ ಪೆಂಗಣ್ಣನುದೆ ಕಾರ್ಯಕ್ರಮಕ್ಕೆ ಬಂದದು, ಚಪ್ಪಾಳೆ ತಟ್ಟಿದ್ದದು ಕೇಳಿ ಕೊಶಿ ಆತದ. ಸುರುವಿಂದ ಕಡೆಂಗೆ ವರೆಗೆ ಸಮಾಧಾನಲ್ಲಿ ಕೂದು ಬೆಶಿ ಬೆಶಿ ಸುದ್ದಿಯನ್ನು ಒಪ್ಪುಸಿದ್ದ ಪೆಂಗಣ್ಣ. ಕೂಸು ಆಯನಾ ನಿಜಕ್ಕೂ ಒಳ್ಳೆ ಪ್ರತಿಭಾವಂತೆ. ಅದರ ನಾಟ್ಯ, ಸ್ಮರಣ ಶಕ್ತಿ, ಭಾಷಾ ಪ್ರೌಡಿಮೆ ಎಲ್ಲವೂ ಅದ್ಹುತ.
    ಎಂಗಳ “ಹೋರಾಟ” ಮತ್ತೆ “ಸಂದರ್ಶನ” ದೊಡ್ಡ ನಾಟಕ ಎಂತೂ ಅಲ್ಲ. ಸುಮ್ಮನೆ ಗಮ್ಮತ್ತಿಂಗೆ ಮಾಡಿದ್ದಷ್ಟೆ. ಬ್ಯಾಂಕಿನವಕ್ಕೆ ಸರೀ ಪ್ರಾಕ್ಟೀಸು ಮಾಡ್ಳೆ ಪುರುಸೊತ್ತು ಬೇಕಾನೆ ?!
    ಸಂದರ್ಶನಲ್ಲಿ ಆನು ಓದಿದ ಕವನವ ಅವಂಗೆ ಅರಡಿತ್ತ ಹಾಂಗೆ ಪೆಂಗಣ್ಣ ಹೇಳಿದ್ದ. ಅದರ ಸರಿಯಾದ ರೂಪವ ಬೈಲಿಂಗೆ ಕೊಡದ್ದೆ ಎನಗೆ ಮನಸ್ಸು ತಡೆತ್ತಿಲ್ಲೆ. ಕಂಪೆನಿ ಬಾಸ್ ನ ವರ್ಣಿಸಿ ಬರದ ಪದ್ಯ –

    ಕುಂಭವನೆ ಮೀರಿಸುವ ಹಿರಿದಾದ ಹೊಟ್ಟೆ
    ಕಂಬವನೆ ನಾಚಿಸುವ ತೋರದಾ ರಟ್ಟೆ
    ಕನ್ನಡಿಯು ಬೇಕಿಲ್ಲ ಮುಖವ ನೋಡಲ್ಕೆ
    ಫಳ ಫಳನೆ ಹೊಳೆವಂಥ ತಲೆಯದೋ ಮೊಟ್ಟೆ ।

    ಕುರುಕುರು ತಿಂಡಿಯಲಿ ಬಲು ದೊಡ್ಡ ಪ್ರೀತಿ
    ಕಿರಿಕಿರಿಯ ಮಾಡುವಲಿ ಬಹು ದೊಡ್ಡ ಖ್ಯಾತಿ
    ಕರಿಕರಿಯ ಮುಖವು ನೋಡಲ್ಕೆ ಕೋತಿ
    ಸರ್ವರಿಗು ಗೊತ್ತವರ ಜಿಪುಣತನ ನೀತಿ ॥

    ಕಾರ್ಯಕ್ರಮಕ್ಕೆ ಬಂದು ಎಂಗಳ ಪುಂಡಾಟಿಕೆಯ ಕಂಡು ಪ್ರೋತ್ಸಾಹಿಸಿದ ಎಲ್ಲೋರಿಂಗುದೆ ಧನ್ಯವಾದಂಗೊ.

    1. ಕಂಪನಿ ಬಾಸ್ ನ ವರ್ಣಿಸಿ ಬರದ ಪದ್ಯ ಲಾಯಕ ಇದ್ದು …

  8. ಹೋ… ಹು!

    ಆಗಲಿ, ಬೈಲ ಪರವಾಗಿ ಪೆಂಗಣ್ಣ ಅಲ್ಲಿತ್ತಿದ್ದು ಕೇಳಿ ಖುಶೀ ಆತಿದಾ. ಅದೂ ನಮ್ಮ ಬೊಳುಂಬು ಮಾವನ ಕಾರ್ಯಕ್ರಮ ಇಪ್ಪಗ ನಾವಾರೂ ಹೋಯ್ದಿಲ್ಲೇಳಿ ಅಪ್ಪಲಾಗಪ್ಪ ಖಂಡಿತ. ಭಾಷಣದ ಮುಖ್ಯಾಂಶ ಒಳ್ಳೆ ಸಂದೇಶ ಇತ್ತಿದ್ದು ಓದು ಖುಶೀ ಆತು.

    ಬೊಳುಂಬು ಮಾವನ ನಾಟಕಕ್ಕೆ ಅಭಾವ ಪ್ರಭಾವ ಸೇರಿಗೊಂಡು ಕೈಚಪ್ಪಾಳೆ ಮಾಡಿದ್ದು ಲಾಯಕ ಆತು. ಸಮಾನ್ಯವಾಗಿ ಭಾವ ಅಪ್ಪದು ಮಾವ ಅಪ್ಪದು ಅಜ್ಜ ಅಪ್ಪದು ಇಪ್ಪದೇ. ಆದರೆ, ಅಲ್ಲಿ ಬೊಳುಂಬು ಮಾವ° ಅಜ್ಜ ಆದ್ದು ಅಲ್ಲ, ಮಾಡಿದ್ದು!

    ಓಹ್ ಪೆಂಗಣ್ಣನ ರೈಲು ಚೆನ್ನೈ ಕಡೆಂಗೆ ಹೆರಟಿದೋ. ಬರ್ಲಿ ಬರ್ಲಿ. ಸ್ವಾಗತ ಮಾಡುವೋ°. ಚಕ್ಕರ್ಪೆ ಕೊಟ್ಟಿಗೆ ಬಾಳೆಲಿ ಮಡುಸಿ ಮಡಿಗಿ ಆಯ್ದು. ಇದಾ ಆ ಗಡಿಲಿ ರಜಾ ಜಾಗ್ರತೆ! ನೆಂಪು ಹೇಳಿಕ್ಕಿ.

    ಚಳಿ ಚಳಿ ದಶಂಬ್ರದ ಬೆಶಿ ಬೆಶಿ ಸುದ್ದಿಗೆ ಬೆಶಿ ಬೆಶಿ ಒಪ್ಪವುದೆ ಹೇಳಿತ್ತು -‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×