Oppanna.com

ಕೊಡೆಯಾಲ ರಾಮ ಕಥೆ – ಕಡೇ ದಿನ

ಬರದೋರು :   ಪೆಂಗಣ್ಣ°    on   01/02/2012    14 ಒಪ್ಪಂಗೊ

ಪೆಂಗಣ್ಣ°

ಹರೇರಾಮ

ಯಾವಗಾಣ ಹಾಂಗೆ ಎಲ್ಲೋರತ್ರು ಕೇಳಿಯೊಂಡು ಇಂದಿನ ಹೇಳಿರೆ ಕೊಡೆಯಾಲದ ರಾಮಕಥೆಯ ಕಡೇದಿನದ ಕಥೆಯ ಹೇಳ್ತೆ. ಗುರುಗೋ ಪರಿವಾರದ ಅಣ್ಣಂದ್ರು ರಾಮಯಣ ಗ್ರಂಥವ ತೆಕ್ಕೊಂಡು ಬಪ್ಪಗ ಪೂರ್ಣ ಕುಂಭ ಸ್ವಾಗತ ಮಾಡಿ ಬರಮಾಡಿಯೊಂಡವು. ಗುರುಗೋ ಪುಷ್ಪಾರ್ಚನೆ ಮಾಡಿ ಪೀಠವ ಅಲಂಕರಿಸಿದವು. ಶ್ರೀರಾಮ ಜಯರಾಮ ಪದ್ಯದೊಟ್ಟಿಂಗೆ ಶ್ರೀಕರಾರ್ಚಿತ ಪೂಜೆಯೂ ನಡದತ್ತು. ಮುಂದೆ ವಿದ್ವಾನಣ್ಣ ಮಾತಾಡಿ ಇಂದು ಐದನೇ ದಿನ . ಇಲ್ಲಿನ ಕಾರ್ಯಕ್ರಮ ಪರಿಸಮಾಪ್ತಿಯ ದಿನ. ಕಥೆಯ ಮೂಲಕ ಸಂಸ್ಕಾರ ಉದ್ದೀಪನ ಮಾಡುದೇ ರಾಮಕಥೆ. ಮಾತು, ಕಾವ್ಯ , ಶಾಸ್ತ್ರ, ಗೀತ ನೃತ್ಯ ಎಲ್ಲದರ ಗುರಿ ಒಂದೇ. ಜೀವಿಯ ಹೃದಯವ ಸಂಸ್ಕಾರಗೊಳಿಸುದು, ಶುದ್ದವಾಗಿರೆಕಾದ ಹೃದಯ ಅಶುದ್ದ ಅಪ್ಪಲೆ ಶುರುವಾದರೆ ಅವರ ಸರಿ ಮಾಡುದು ಗುರುವಿನ ಜವಾಬ್ದಾರಿ. ಅದು ಸಂತ ಪರಂಪರೆಯ ಉದ್ದೇಶ, ಆಶಯ ಕೂಡಾ ಅಪ್ಪು. ಅದೇ ರೀತಿ ರಾಮಕಥೆಯ ಉದ್ದೇಶವೂ ಅದೇ. ಇಲ್ಲಿ ಕಲಾವಿದರು ಸಭೆಗೆ ಬೆನ್ನು ಹಾಕಿ ಕೂದ್ದಕ್ಕೆ ವಿವರಣೇ ಕೊಟ್ಟು, ಕಲೆ ರಾಮಂಗಾಗಿ ಅರ್ಪಿಸುವಂತದ್ದು, ರಾಮಭಕ್ತರಿಂಗಲ್ಲ ಹೇಳಿ ಹೇಳಿದವು. ಹಾಂಗೆ ಕಲಾವಿದರ ಪರಿಚಯಿಸಿ, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲೋರ ನೆನಪು ಮಾಡಿಯೊಂಡವು. ನಮ್ಮ ಕಥೆಯೂ ರಾಮಕಥೆ ಅಪ್ಪ ಹಾಂಗಾಗಲಿ ಹೇಳಿ ಹಾರೈಸಿದವು. “ನಿನ್ನ ದರುಶನ ನೀಡೋ, ಎನ್ನ ಧನ್ಯನ ಮಾಡೋ” ಹೇಳ್ತ ಪದ್ಯದೊಟ್ಟಿಂಗೆ ಗೆಣವತಿ ಮಹಾಬಲೇಶ್ವರನ ಸ್ತುತಿ ಮಾಡಿದವು. ನೀರ್ನಳ್ಳಿ ಮಾವ ಚಿತ್ರ ಬಿಡಿಸಿದವು. ಮುಂದಾಣಾದ್ದು ರಾಮಕಥೆ.

ಹರೇರಾಮ ಹೇಳಿ ಶುರು ಮಾಡಿದ ಗುರುಗೋ ರಾಮನನ್ನೂ ಗುರುಗಳನ್ನೂ ನೆಂಪು ಮಾಡಿಗೊಂಡು, ಬದುಕು ಒಂದು ಕಣ್ಣಾಮುಚ್ಚಾಲೆ ಆಟ. ಅದು ಮಕ್ಕಳ ಆಟ. ಮಕ್ಕಳಾಟಲ್ಲಿ ಒಬ್ಬ ಹಲವರ ಹುಡ್ಕುದು, ಆದರೆ ನಮ್ಮ ಆಟಲ್ಲಿ ನಾವು ಹಲವರು ಒಬ್ಬನ ಹುಡ್ಕುದು. ಆ ಒಬ್ಬನೇ ಆ ನಾರಾಯಣ. ಇದು ಅವನ ಹುಡುಕುತ್ತ ಆಟ. ಆ ಶ್ರೀಮನ್ನಾರಯಣನೂ ಕಣ್ಣಾಮುಚ್ಚಾಲೆ ಆಟ ಆಡಿದ. ಅದು ದೂರದವರೊಟ್ಟಿಂಗಲ್ಲ, ದ್ವಾರದವರೊಟ್ಟಿಂಗೆ. ಆ ಜಯ ವಿಜಯರೊಟ್ಟಿಂಗೆ ಹೇಳಿ ಹೇಳಿದವು. ವೈಕುಂಠಲ್ಲಿ ಎರಡು ಬಗೆ ಜೆನ. ಮುಕ್ತರು ಮತ್ತು ಅಧಿಕಾರಿಗೊ. ಮುಕ್ತರು ಎಲ್ಲಿ ಬೇಕಾರು ಇಪ್ಪಲಕ್ಕು. ಅಧಿಕಾರಿಗೊಕ್ಕೆ ನಿರ್ದಿಷ್ಟ ಜವಾಬ್ದಾರಿ ಇರ್ತು. ಜಯವಿಜಯರು ಅಧಿಕಾರಿಗಳಾಗಿದ್ದವು. ಅವಕ್ಕೆ ದ್ವಾರ ಕಾವ ಜವಾಬ್ದಾರಿ ಇತ್ತು. ಕೃಪಾಸಾಗರನೂ ಸಾಗರದ ಹಾಂಗೇ, ಸಾಗರವು ನದಿ ತನ್ನ ಸೇರುವಾಗ ಹೇಂಗೆ ಒಂದುಸರ್ತಿ ಅದರ ತಡುದು ನಿಲ್ಲುಸುತ್ತೋ ಹಾಂಗೆ, ಹಂಸ ಹಾಲು ನೀರಿನ ಬೆರಕ್ಕೆ ಮಾಡಿಕೊಟ್ರೆ ಬರೀ ಹಾಲಿನ ಕುಡುದು ನೀರಿನ ಹಾಂಗೆ ಬಿಡ್ತ ಹಾಂಗೆ ಆ ಪರಮಹಂಸನುದೇ. ಅದೇ ರೀತಿ ಅವು ಸ್ವಲ್ಪ ಶುದ್ಧಿಯಾಗಲಿ ಹೇಳಿ ಜಯವಿಜಯರ ದ್ವಾರಪಾಲಕರಾಗಿ ದ್ವಾರದ ಬಳಿ ಮಡಗಿತ್ತಿದ್ದ ಹೇಳಿ ಹೇಳಿದವು.

ದ್ವಾರ ಹೇಳಿರೆ ಅದು ಒಳ ಹೋಪಲೆ ಹೇಂಗೆ ಉಪಯೋಗ ಆವುತ್ತೋ ಹಾಂಗೆ ಹೆರಬಪ್ಪಲುದೇ ಸಹಾಯ ಮಾಡ್ತು. ಹಣ್ಣು ಕೊಯ್ಯುವ ಕತ್ತಿ ಕಣ್ಣಿನ ಕೊಯ್ಯುವ ಹಾಂಗೆ ಹೇಳಿ ವಿವರಿಸಿದವು. “ನೀಚೆ ಗಿರ್‍ನ ಊಂಚೇ ಹೋನೇಕಾ ಸಾಧನ್” ಹೇಳಿರೆ ಕೆಳ ಬಿದ್ದರೆ ಅದು ಮೇಲೇಳುಲೆ ಬಂದ ಅವಕಾಶ. ಜಯವಿಜಯರಿಂಗೂ ಹಾಂಗೆ ಆತು. ಆದರೆ ಅವರಲ್ಲಿ ಇನ್ನೂ ದೋಷ ಇತ್ತು. ಹಾಂಗಾದ ಕಾರಣ ಅವರ ಮತ್ತೆ ಬೀಳುಸೆಕ್ಕೂಳಿ ಹರಿ ಸನಕಾದಿಗಳ ಅವನ ಹತ್ತರಂಗೆ ಬಪ್ಪ ಹಾಂಗೆ ಮಾಡ್ತ. ಸನಕಾದಿಗಳು ಹೇಳಿರೆ, ಸನಕ, ಸನಂದನ, ಸನಾತನ, ಸನದ್ವಜಾತ, ಸನತ್ ಕುಮಾರ ಹೇಳಿ ಬ್ರಹ್ಮನ ಮಕ್ಕೋ. ಅವು ಸದಾ ಬಾಲಕರ ಹಾಂಗೆ ಇಪ್ಪದು. ಅವು ಅವಧೂತರು ಹೇಳಿ ಹೇಳಿಯಪ್ಪಗ “ಅವಧೂತರಿವರು ಕೇಳಾ ಕೊಡವಿಹರು ಬವದ ದೂಳ” ಹೇಳ್ತ ಪದ್ಯವ ಪ್ರೇಮಕ್ಕ ಹಾಡುವಾಗ ಶ್ರೀಪಾದ ಮಾವ ಗೋಪು ಬಾವ ಸಾತ್ ನೀಡಿದವು. ನೀರ್ನಳ್ಳಿ ಮಾವ ಚಿತ್ರ ಬಿಡುಸಿದವು. ಪೂರ್ಣ ಬೆಳವಣಿಗೆ ಆದವು ಹೇಳಿರೆ ಮನಸ್ಸಿಲಿ ಪೂರ್ಣ ಒಳ್ಳೆದನ್ನೇ ತುಂಬಿಯೊಂಡವು. ಯಾವಾಗಲೂ ಮಗುವಿನ ಹಾಂಗೆ ಇರ್ತದು ಹೇಳ್ತ ವಿವರಣೆ ಕೊಟ್ಟವು. ‘ಋತ್ಯಾ ಚರ್ಪಟವಿರಚಿತ ತಂತಃ ಪುಣ್ಯಾಪುಣ್ಯ ವಿವರ್ಚಿತ ಪಂಥಃ’ ಹೇಳ್ತ ಶ್ಲೋಕವ ಹಾಡಿದವು ಪ್ರೇಮಕ್ಕ. ಕಪಟ ಹೇಳ್ತ ಪದಂದ ಕಪ್‍ಡಾ ಆತು. ಕಪ್‍ಡಾ ಹೇಳಿರೆ ಬಟ್ಟೆ ಅದೂ  ಕಪಟವೇ, ಒಳ ಒಂದು ಹೆರ ಒಂದು, ತೋರುಸುಲೆ ಸಹಾಯ ಮಾಡ್ತು. ಬರೇ ವಸ್ತ್ರ ಒಬ್ಬ ಸಾಮಾನ್ಯ ವ್ಯಕ್ತಿಯ ಹೇಳಿರೆ ನಮ್ಮೊಟ್ಟಿಂಗೆ ಚಾ ಕುಡುದ ವ್ಯಕ್ತಿಯ ರೂಪಕಲ್ಲಿ ಹರಿಯನ್ನಾಗಿ ತೋರ್ಸುತ್ತು ಹೇಳಿ ವ್ಯಂಗ ಮಿಶ್ರಿತ ಸಂಗತಿಯ ಹೇಳಿದವು. ಹಾಂಗೆ ಅವಧೂತರ ಬಗ್ಗೆ ವಿವರಣೆ ಕೊಡುತ್ತ ಸದಾಶಿವ ಬ್ರಹ್ಮೇಂದ್ರರ ಕಥೆಯ ಹೇಳಿದವು. ಕೈಕಡುದ ನವಾಬಂಗೆ ಕಡುದ ಮೇಲೆ ಅವು ಅವಧೂತರು ಹೇಳಿ ಗೊಂತಾವುತ್ತು ಎನಗೆ ಮುಕ್ತಿ ಕೊಡಿ ಹೇಳಿ ಅವ ಕೇಳ್ತವಡ. ನಿನಗೆ ಎಂತ  ಮಾಡೆಕ್ಕೂಳಿ ಕಾಣ್ತೋ ಅದರ ಮಾಡೆಡ ಹೇಳಿಕ್ಕಿ ಅವು ಹೋವುತ್ತವು, ಇದರಿಂದಾಗಿ ಅದರಲ್ಲಿಪ್ಪ ದುಷ್ಟ ಗುಣಂಗೊ ದೂರ ಆಗಿ ಅದಕ್ಕೆ ಬೇಗನೆ ಮುಕ್ತಿ ಸಿಕ್ಕಿತ್ತು. ವೈಕುಂಠ ಹೇಳ್ತದು ಎಲ್ಲಿಯೋ ಇಪ್ಪದಲ್ಲ ಅದು ನಮ್ಮೊಳವೇ ಇದ್ದು, ನಾವು ಅದರ ಕಂಡುಗೊಳ್ಳೆಕಷ್ಟೆ ಹೇಳಿದವು.

ಹರಿಯ ಕಾಂಬಲೆ ಸನಕಾದಿಗೋ ವೈಕುಂಠಕ್ಕೆ ಬಂದವು. ವೈಕುಂಠದ ಆರನೇ ಬಾಗಿಲು ದಾಂಟಿದವು. ಏಳನೇ ಬಾಗಿಲಿನ ಹತ್ತರಂಗೆ ಬಂದಪ್ಪಗ ಬಾಗಿಲು ಮುಚ್ಚಿತ್ತು. ಅಷ್ಟಪ್ಪಗ ಅವರ ಮನಸ್ಸಿನ ಭಾವ ವ್ಯಕ್ತಪಡಿಸುವ ಗೀತೆ, “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ” ಗೀತೆಯ ಪ್ರೇಮಕ್ಕ ಹಾಡಿದವು. ನೀರ್ನಳ್ಳಿ ಮಾವ ಚಿತ್ರ ಬಿಡುಸಿದವು. ಏಳನೇ ಬಾಗಿಲಿನ ಕಾದುಗೊಂಡು ಜಯವಿಜಯರು ಇತ್ತಿದ್ದವು. ಸನಕಾದಿಗ ಬಂದಪ್ಪಗ ಬಾಗಿಲು ತೆಗದ್ದವಿಲ್ಲೆ. ಏಕೆ ಹೇಳಿರೆ ಅವರ ಮನಸ್ಸಿನ ಬಾಗಿಲೂ ಮುಚ್ಚಿತ್ತು. ಅವರಲ್ಲಿದ್ದ ಅಹಂಭಾವ ಪೂರ್ತಿಯಾಗಿ ಹೋಗಿತ್ತಿಲ್ಲೆ., ಸನಕಾದಿಗಳ ತಡದು ನಿಲ್ಲಿಸಿ ತಮಾಷೆ ಮಾಡಿದವು. ದ್ವಾರ ಆಯೆಕ್ಕಾದವು. ದಿವಾರ್ ಆಗಿ ಹೋದವು ಹೇಳ್ತ ಕಥೆಹೇಳುವಾಗ, ಪ್ರವಾಹ ಬಪ್ಪಗ ತಲೆ ತಗ್ಗುಸುತ್ತ ಹುಲ್ಲು ಒಳಿತ್ತು, ಗಟ್ಟಿಯಾಗಿ ಎದುರು ನಿಂದ ಮರ ಕೊಚ್ಚಿ ಹೋವುತ್ತು ಹೇಳುವ ಉದಾಹರಣೆ ಕೊಟ್ಟವು. ಜಯವಿಜಯರು ತಡದಪ್ಪಗ ಆ ಸನಕಾದಿಗೊಕ್ಕೆ ಕೋಪ ಬಂತು ಅವರ ಮುಖಲ್ಲಿ ಕೋಧ ಇತ್ತು ಹೇಳುವಾಗ “ಕ್ರೋಧಾಗ್ನಿ ಮುಖದ ಸುತ್ತ ಕಾರುಣ್ಯವಂತ ಚಿತ್ತ ಹೇಳ್ತ” ಪದ್ಯ ಹಾಡಿದವು. ಮುಂದೆ ಸನಾಕಾದಿಗೊ ಜಯ ವಿಜಯರಿಂಗೆ ಪಾತಳ ಲೋಕಕ್ಕೆ ಹೋಗಿ ಬೀಳಿ ಹೇಳಿ ಶಾಪ ಕೊಟ್ಟವು. ಹೇಳಿಯಪ್ಪಗ “ಮಾಕುರು ಧನ ಜನ ಯೌವನ ಧರ್ಮ” ಹೇಳ್ತ ಶ್ಲೋಕವ ಪ್ರೇಮಕ್ಕ ಹಾಡಿದವು.

ನೌಷ ಇಂದ್ರ ಆಗಿತ್ತಿದ್ದ, ಅವನ ಅಹಂಕಾರ ಹೆಚ್ಚಾದ್ದಕ್ಕೆ ಮಹಾಮುನಿ ಅಗಸ್ತ್ಯರು ಹಾವಾಗಿ ಹೋಗು, ಸರ್ಪ ಆಗು ಹೇಳಿ ಶಾಪ ಕೊಟ್ಟದ್ದನ್ನೂ ನೆಂಪು ಮಾಡಿಯೊಡವು. “ನೆತ್ತಿಗೆ ಮತ್ತು ಹತ್ತಿದರೆ.. ಪದವಿಯಮದ ಹದ ಮೀರಿದರೆ.. ಪಥನ ಪತ ಎದುರಾಗುವುದು.. ಕದನದ ಗತಿ ಬದಲಾಗುವುದು” ಹೇಳ್ತ ಪದ್ಯವನ್ನೂ ನೆಂಪು ಮಾಡಿಯೊಂಡವು. ಎತ್ತರಕೇರುವ ಪ್ರೇರಣೆಯೂ, ಹರಿಪದಕಾತ್ಮ ನಿವೇದನೆಯೂ ಹೇಳ್ತ ಪದ್ಯವ ಹಾಡಿದವು ಪ್ರೇಮಕ್ಕ. ನೀರ್ನಳ್ಳಿ ಮಾವ ಚಿತ್ರ ಬಿಡುಸಿದವು. ಕಥೆಯ ಮುಂದುವರೆಶಿ ಜಯವಿಜಯರಿಂಗೆ ಸನಕಾದಿ ಮುನಿಗೊ ಶಾಪ ಕೊಟ್ಟಪ್ಪಗ ಅವಕ್ಕೆ ಅವರ ತಪ್ಪಿನ ಅರಿವಾತು. ಅವರ ಕಣ್ಣೀರ ಧಾರೆ ಸನಕಾದಿಗಳ ಪಾದತೊಳದತ್ತು ಹೇಳ್ತ ಕಥೆ ಹೇಳುವಾಗ “ಬಿನ್ನಹಕೆ ಬಾಯಿಲ್ಲವಯ್ಯಾ ಅನಂತಾಪರಾಧ ಎನ್ನೊಳಗೆ ಇರಲಾಗಿ” ಹೇಳ್ತ ಪದ್ಯಕ್ಕೆ ನೀರ್ನಳ್ಳಿ ಮಾವ ಚಿತ್ರ ಬಿಡುಸಿದವು.

ಜಯವಿಜಯರು ಸನಕಾದಿಗಳ ತಡದ್ದು ಗೊಂತಾಗಿ ಹರಿ ಅವು ಇದ್ದಲ್ಲಿಗೆ ಶೇಷನ ಮೇಲಂದ ಎದ್ದು ಬತ್ತ ಅಷ್ಟಪ್ಪಗ ಅವನ ಹಿಂದೆ ಅನಂತ ದೇವತೆಗಳು ಬತ್ತವು ಆ ವೈಭವದ ವರ್ಣನೆ ಮಾಡಿದವು. “ಹಾಂಗೆ ಬಂದನು ದೇವರದೇವಾ ಬಿಡದೆ ಭಕ್ತರ ಕಾವ” ಹೇಳ್ತ ಪದ್ಯವ ಶ್ರೀಪಾದಣ್ಣ ಯಕ್ಷಗಾನ ಶೈಲಿಲಿ ತಾವೇ ಸ್ವತಃ ಮದ್ದಳೆ ಬಾರ್ಸಿಯೊಂಡು ಹಾಡಿರೆ ಗೋಪಣ್ಣ ತಬಲಲ್ಲಿಯೇ ಚೆಂಡೆ ಪೆಟ್ಟಿನ ಕೇಳಿಸಿದವು. ಹರಿ ಬಂದಪ್ಪಗ ಸನಕಾದಿಗೊಕ್ಕೆ ಆಶ್ಚರ್ಯ ಆವುತ್ತು. ಅಷ್ಟಪ್ಪಗ ಅವ ಹೇಳ್ತ ಸೇವಕ ಮಾಡಿದ ತಪ್ಪಿಗೆ  ಸ್ವಾಮಿಯೂ ಹೊಣೆ. ಆದ್ದರಿಂದ ನಿಂಗಳ ಕ್ಷಮೆ ಕೇಳ್ತೆ ಹೇಳಿ, ಹಾಂಗೇ ಜಯ ವಿಜಯರ ಬಗ್ಗೆ ಕಾಳಜಿವಹಿಸಿ ಅವು ಬೇಗ ಶಾಪ ಮುಕ್ತರಾಗಿ ಎನ್ನ ಹತ್ರಂಗೆ ಬಪ್ಪಹಾಂಗೆ ಮಾಡಿ ಹೇಳಿಯೂ ಕೇಳಿಗೊಳ್ಳುತ್ತ ಹೇಳುವ ಕಥೆಯ ಹೇಳುವಾಗ  ದಂಡನೆ ಹೇಳುದು ಜೀವನ ಕಲ್ಯಾಣಕ್ಕಾಗಿ ಇಪ್ಪದು ಹೇಳಿ ಹೇಳಿಕ್ಕಿ ಭಾರತೀಯ ದಂಡಸಂಹಿತೆ ಹೇಳ್ತದು ಬಾರೀ ಉತ್ತಮದ್ದು, ದಂಡನೆ ಆತ್ಮದ ಕಲೆ ತೊಳವಲೆ ಇಪ್ಪದು ಹೇಳಿ ವರ್ಣಿಸಿದವು.

ಹರಿ ತಾನೆ ತಾನಾಗಿ ಬಂದು ಭೂಮಿಗಿಳಿಯುವ ಮುನ್ಸೂಚನೆ ಕೊಡ್ತ. ಹರಿಭಕ್ತರ ಪಾಲಿಗೆ ಹಾಂಗೆ ಸೇವಕನೂ ಆವ್ತ ಹೇಳಿ ವರ್ಣನೆ ಮಾಡುವಾಗ “ಹೂವ ತರುವವರ ಮನೆಗೆ ಹುಲ್ಲಾ ತರುವ” ಪದ್ಯಕ್ಕೆ ಚಿತ್ರವು ಇತ್ತು. ಹಾಂಗೆ ನಾವು ಇನ್ನೊಬ್ಬರಿಂದಾಗಿ ಹೆಸರು ಪಡೆತ್ತು ಹೇಳುವುದಕ್ಕೆ ವಿವರಣೆ ಕೊಡುತ್ತಾ ವಿಷ್ಣು ಕೈಲಾಸಕ್ಕೆ ಹೋಗಿಪ್ಪಗ ಶಿವನ ಕೊರಳಿಲಿಪ್ಪ ಸರ್ಪ ಗರುಡನ ಕುಶಲ ವಿಚಾರಿಸುತ್ತಡ. ಅದು ಶಿವ ಹಿಂದೆ ಇದ್ದ ಹೇಳುವ ಧೈರ್ಯಲ್ಲಿ. ಹಾಂಗೇ ಕತ್ತೆ ಮೇಲೆ ಸಾಮನು ಸಾಗಿಸಿದ ಕಥೆಯೂ ಹೇಳಿದವು. ತನ್ನ ಮೇಲಿನ ಸಾಮನಿಂಗೆ ಗೌರವ ಇದ್ದದ್ದು ಹೇಳಿ ಕತ್ತೆಗೆ ಗೊಂತಾದ್ದು ಅಗಸನ ಚಾಟಿಪೆಟ್ಟು ಬಿದ್ದ ಮೇಲೆ ಹೇಳಿ ಹೇಳಿದವು. ಹರಿ ಕೇಳಿಗೊಂಡದ್ದಕ್ಕೆ ಸನಕಾದಿಗಳು ಜಯ ವಿಜಯರತ್ರೆ ನಿಂಗೊಗೆ ಏಳು ಜನ್ಮದ ಸ್ನೇಹ ಅಕ್ಕೋ ಮೂರು ಜನುಮದ ವೈರ ಅಕ್ಕೋ ಕೇಳಿಯಪ್ಪಗ, ‘ಮೂರು ಜನ್ಮದ ವೈರವೇ ಅಕ್ಕು’ ಹೇಳ್ತವು. ಏಕೆ ಹೇಳಿರೆ ಬೇಗನೆ ಮುಗಿತ್ತನ್ನೆ ಹೇಳಿ. ಆದರೆ ಅವರ ಮನಸ್ಸಿಲಿ ಆ ವೈರತ್ವ ಹೇಳುದು ಇನ್ನೂಸ್ವಲ್ಪ ಉಳುದಿತ್ತು. ಆದ ಕಾರಣವೇ ಅವು ಅದರ ಒಪ್ಪಿದ್ದು. ಅವರ ಪರಿಸ್ಥಿತಿ ಅಧಿಕಾರ ಕಳಕ್ಕೊಂಡ ರಾಜಕಾರಣಿಗಳ ಹಾಂಗೆ ಆಗಿತ್ತು ಹೇಳಿ ವ್ಯಂಗ ಮಾಡಿದವು. ಅದರೊಟ್ಟಿಂಗೆ ಕುಲಶೇಖರಾಳ್ವರು ಬರದ ಪದ್ಯ “ದಿವಿವಾ ಭುವಿವಾ ಮಾಸ್ತುವಾಸಹ”ವ ಪ್ರೇಮಕ್ಕ ಹಾಡಿದವು.  ಪ್ರೇಮಲ್ಲಿ ಯುಗ ಕ್ಷಣ ಆವುತ್ತು ದ್ವೇಷಲ್ಲಿ ಕ್ಷಣ ಕ್ಷಣವೂ ಯುಗ ಆವುತ್ತು ಹೇಳುದರ ಮರವಲಾಗಾಳಿ ಹೇಳಿದವು.

ಜಯವಿಜಯರು ಅಕ್ಕು ಹೇಳಿ ಒಪ್ಪಿಗೊಂಡದು ಆ ಮೂರು ಜನ್ಮವೇ. ಶಿಶುಪಾಲ – ದಂತವಕ್ರ, ಹಿರಣ್ಯಾಕ್ಷ – ಹಿರಣ್ಯ ಕಷ್ಯಪ, ರಾವಣ – ಕುಂಭಕರ್ಣ ಈ ಮೂರು ಜನ್ಮಂಗೊ ಹೇಳಿ ಹೇಳಿದವು. ಮುಂದೆ ರೂಪಕ ಇತ್ತು ಸನಕಾದಿಗೊ ವೈಕುಂಠಕ್ಕೆ ಬಂದಲ್ಲಿಂದ ತ್ರಿಜನ್ಮ ಮೋಕ್ಷದವರೆಗಾಣ ಕಥೆ ರೂಪಕಲ್ಲಿತ್ತು. ಇದೆಲ್ಲವ ತೋರಿಸಿದ ನಮ್ಮವೇದಿಕೆ ಇಂದು ವೈಕುಂಠವೇ ಆಗಿತ್ತು. ವೇದಿಕೆಯ ರಂಗ ಸಜ್ಜಿಕೆ ಹಾಂಗಿತ್ತು ಕುಸುರಿ ಕೆತ್ತನೆಯ ದ್ವಾರ ಬಾಗಿಲು ಚಿನ್ನದ ಬಣ್ಣಲ್ಲಿ ಕಂಡೊಂಡಿದ್ದರೆ ಅದರೊಳ ಆದಿಶೇಷ, ಶೇಷಶಯನ ವಿಷ್ಣು, ಅವನ ಮೇಲೆ ಬ್ರಹ್ಮ, ಒಟ್ಟಿಂಗೆ ಲಕ್ಷ್ಮಿ ಗರುಡ ಎಲ್ಲವನ್ನೂ ತೋರಿಸಿತ್ತವು ತಿಮ್ಮಪ್ಪಣ್ಣ – ಅಶೋಕಣ್ಣ ಬಳಗದವು. ರೂಪಕದ ನಂತರ ಗುರುಗೋ ಹೇಳಿದ ಕೆಲವು ವಿಚಾರಂಗ ಪಟ್ಟಿ ಮಾಡಿದ್ದು.

ಈ ಕಥೆ ಕೇಳಿದ ಮೇಲೆ ನಿಂಗೊಗೆ-

  • ಅವಧೂತರಾದ ಸನಕಾದಿಗೊ ಶಾಪ ಕೊಟ್ಟದ್ದು ಸರಿಯೋ?
  • ಅವಕ್ಕೆ ಕೋಪ ಬಂದದ್ದು ಅಹಂಕಾರ ಅಲ್ಲದಾ?
  • ಭಗವಂತನ ಹತ್ತರೆ ಅಹಂಕಾರ ಸರಿಯಾ?
  • ಜಯವಿಜಯರು ಸನಕಾದಿಗಳ ತಡದ್ದು ಅವರ ಕರ್ತವ್ಯ ಅಲ್ಲದಾ ಅದರ ಮಾಡಿದ್ದು ತಪ್ಪೋ?
  • ಐದು ವರ್ಷದ ಮಕ್ಕಳ ಹಾಂಗಿಪ್ಪವರ ವಿವೇಚನೆ ಮಾಡದ್ದೇ ಒಳ ಬಿಡ್ಲಕ್ಕಾ?
  • ದ್ವಾರಪಾಲಕರಪ್ಪಲೆ ದೋಷ ಇದ್ದ ಜಯವಿಜಯರು ಯೋಗ್ಯರಾ?
  • ಶಿಕ್ಷೆ ಕೊಡೆಕಾದ್ದು ಭಗವಂತನೋ ಅಲ್ಲಾ ಸನಕಾದಿಗಳೋ?
  • ಭೂಲೋಕಲ್ಲಿ ಸರಿ, ವೈಕುಂಠಲ್ಲಿಯೂ ಹೀಂಗಿಪ್ಪದು ನಡೆತ್ತೋ ಹಾಂಗಾರೆ ಅಲ್ಲಿಗೂ ಇಲ್ಲಿಗೂ ಎಂತ ವ್ಯತ್ಯಾಸ?
  • ಅಲ್ಲಿಯೂ ಹೀಂಗಿರ್ತದೆಲ್ಲ ನಡಗಾ?

ಹೀಂಗಿದ್ದ ಪ್ರಶ್ನೆಗೊ ಮೂಡುಗು, ಆದರೆ.,

  • ಜಯವಿಜಯರ ಪಥನ ಅದು ಉತ್ತಾನದ ಪಥನ. ದಿವ್ಯತೆ ಮತ್ತು ದೋಷಗಳ ಪರಾಕಾಷ್ಟೇಯೆ ಜಯವಿಜಯರು. ಹರಿ ದೋಷವನ್ನೂ ಕೂಡಾ ವಿಶ್ವಮಂಗಳಕ್ಕಾಗಿ ಉಪಯೋಗ ಅಪ್ಪ ಹಾಂಗೆ ಮಾಡ್ತ.
  • ಕೋಪ ಶಾಪ ಎರಡೂ ತಪ್ಪಲ್ಲ. ಆದರೆ ಅದರ ಪರಿಣಾಮದ ಮೇಲೆ ತೀರ್ಮಾನ ಮಾಡೆಕ್ಕು.
  • ದೋಷ ಹುದುಗಿದ್ದ ಕಾರಣ ಜಯವಿಜಯರಲ್ಲಿ ದ್ವೇಷ ಆವರಿಸಿದ್ದು.
  • ಸನಕಾದಿಗಳು ಮಾಡಿದ್ದು ಚಿಕಿತ್ಸೆ. ಅವು ಜಯವಿಜಯರ ಭೂಮಿ ಹೇಳ್ತ ಆಸ್ಪತ್ರೆಗೆ ಕಳುಸಿದ್ದು
  • ಸಣ್ಣ ಕಾಯಿಲೆಗೆ ಆಸವ ಸಾಕು ಇನ್ನು ಕೆಲವಕ್ಕೆ ಗುಳಿಗೆ ಬೇಕು ಇನ್ನು ಕೆಲವಕ್ಕೆ ಭಸ್ಮ ಬೇಕು ಅದರಿಂದಲೂ ದೊಡ್ಡದಕ್ಕೆ ವಿರೇಚನ ಬೇಕು  ಅದರಿಂದಲೂ ಆಗದ್ದರೆ ಶಸ್ತ್ರ ಚಿಕಿತ್ಸೆ. ಹೇಳ್ತ ವಿವರಣೆಯೊಟ್ಟಿಂಗೆ
  • ಹೊಟ್ಟೆಗೆ ಚೂರಿ ಹಾಕುದು ಸರಿಯೋ ತಪ್ಪೋ ಹೇಳಿ ಕೇಳಿರೆ ಯಾರೇ ಆದರೂ ತಪ್ಪೇ ಹೇಳುಗಷ್ಟೇ. ಆದರೆ ಅದರ ಉದ್ದೇಶ ಎಂತದ್ದು ಹೇಳುವುದು ಮುಖ್ಯ. ಯಾವುದೇ ಘಟನೆ ಹಿತ ಅಥವಾ ಅಹಿತ ಹೇಳುಲೆ ಅದರ ಪರಿಣಾಮದ ಮೇಲೆ ತೀರ್ಮಾನ ಮಾಡೆಕ್ಕು ಹೇಳಿ ಹೇಳಿದವು. ಹಾಂಗೆ ಜಯ ವಿಜಯರ ಕತೆ ಇಲ್ಲದ್ರೆ
  • ದಶಾವತಾರ ಆವುತ್ತಿತ್ತಿಲ್ಲೆ ವರಾಹ ನರಸಿಂಹ, ರಾಮ ಕೃಷ್ಣ ಹೇಳ್ತ ನಾಲ್ಕು ಅವತಾರ ಇರ್ತಿತ್ತಿಲ್ಲೆ.
  • ರಾಮಕೃಷ್ಣರಿಲ್ಲದ್ದೆ ಭಾರತೀಯ ಸಂಸ್ಕೃತಿ ಇರ್ತಿತ್ತಿಲ್ಲೆ.
  • ರಾಮಯಣ, ಭಾರತ, ಭಾಗವತ, ಗೀತ, ಪುರಾಣಂಗೊ ಇಲ್ಲದ್ದೇ ಅವ್ತಿತ್ತು
  • ಜಯವಿಜಯರಿಂದಾಗಿಯೇ ಹರಿ ಭೂಮಿಗೆ ಬಂದು ಭೂಮಿಯ ಉದ್ದರಿಸಿದ್ದು. ಹರಿ ಎರಡು ರೂ ಹಾಕಿ ಕೋಟಿ ಕೋಟಿ ಸಂಪಾದನೆ ಮಾಡಿದ
  • ಸಾಲಿಗ್ರಾಮವೇ ಇರ್ತಿತ್ತಿಲ್ಲೆ. ಅದೂ ಜಯವಿಜಯರಿಂದಾಗಿ ಆದ್ದು ಕರಿ ಮಕರ ಸಂಹಾರ ಸಮಯಲ್ಲಿ
  • ಎಷ್ಟೋ ಕ್ಷೇತ್ರ, ಸಂತರು, ಹೆಸರುಗೊ, ದೇವಸ್ಥಾನಂಗೊ ಇರ್ತಿತ್ತಿಲ್ಲೆ
  • ವಿನೋದವಾಗಿ ಹೇಳುದಾದರೆ ಗೋಕರ್ಣವೂ ಇರ್ತಿತ್ತಿಲ್ಲೆ, ಆತ್ಮಲಿಂಗವೂ ಇರ್ತಿತ್ತಿಲ್ಲೆ, ರಾಮಚಂದ್ರಾಪುರ ಮಠವೂ ಇರ್ತಿತ್ತಿಲ್ಲೆ ರಾಮ ಕಥೆಯೂ ಇರ್ತಿತ್ತಿಲ್ಲೆ. ನಾವೂನೀವೂ- ಗೊಂತಿಲ್ಲೆ
  • ಇಂಥಾ ಘಟನೆ ಭೂಮಿಲಿ ಈಗ ಎಲ್ಲಿಯಾರೂ ನಡದ್ದಾಗಿರ್ತಿದ್ದರೆ ಒಂಡು ಸಸ್ಪೆನ್ಶನ್‍ಲಿಯೊ ಅಲ್ಲದ್ದರೆ ಡಿಸ್‍ಮಿಸ್‍ಲಿಯೊ ಮುಗಿತ್ತಿತ್ತು. ಮುಂದೆ ಕೋರ್ಟ್ ಲೇಬರ್ ಲಾ ಇದ್ದದೇ ಹೇಳಿದವು.
  • ನಾವು ರಾವಣನ ದ್ವೇಷಿಸುತ್ತು ಖಂಡಿತವಾಗಿ, ಆದರೆ ಅವನ ಒಳ ಇದ್ದ ಆ ದಿವ್ಯಾತ್ಮವ ಪೂಜಿಸೆಕ್ಕಾವ್ತು ಹೇಳಿದವು

ಈ ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಎಲ್ಲೋರ ನೆಂಪು ಮಾಡಿದವು.

ರಾಮಾಯಣಾ ಹೇಳಿರೆ ಒಂಡು ಎರಡಾತು ಆ ಎರಡು  ಒಂದಾತು. ಪುನಾ ಒಂಡು ಎರಡಾತು ಆ ಎರಡು ಒಂದಾತು.  ಆ ಒಂದು ಎರಡಾತು ಎರಡು ಒಂದಾಗಿ ಅದು ರಾಮಾಯಣಕ್ಕೆ ಕಾರಣ ಆತು ಹೇಳಿರೆ ಕರಿಮಕರ ಆಗಿದ್ದ ಜಯವಿಜಯರು ಅಲ್ಲಿಂದ ಹಿಡುದು ರಾವಣ ಕುಂಭಕರ್ಣಾರಾದವರೆಗಿನ ಅವರ ಜೀವನವೇ ರಾಮಾಯಣಕ್ಕೆ ಕಾರಣ ಆತು. ರಾಮ ರಾವಣನ ಭೇಧಿಸಿದ್ದು ಸರಿಯಾದ ಜಾಗೆ ನೋಡಿ. ಆ ಬಾಣಲ್ಲಿ ಮಮತೆ ಇತ್ತು. ನಮ್ಮ ಜೀವ ಯಾವ ನಾಡಿಯ ಮೂಲಕ ಹೋವ್ತೋ ಮುಂದೆ ನಾವು ಹಾಂಗಾವುತ್ತು ಹೇಳಿದವು. “ರಾಮನ ಅವತಾರ ರಘು ಕುಲ ಸೋಮನ ಅವತಾರ” ಪದ್ಯದ ವೀಡಿಯೋ ತೋರುಸಿದವು.

“ಮನಕೆ ಬಂದರೆ ಒನಕೆಯೂ ಚಿಗುರುವುದು” ಹೇಳ್ತ ಸಾಲಿನ ನೆಂಪು ಮಾಡಿ ಮನಸ್ಸೆಲ್ಲ ಮಂಗಳಮಯ ಆಗಲಿ ಹೇಳಿ ಈ ರಾಮಕಥೆಗೆ ಮಂಗಲ ಹೇಳಿದವು.

ಮುಂದೆ ಯೇವತ್ತಿನ ಹಾಂಗೆ ಜೈ ಜೈ ರಾಮಕಥಾ ಪದ್ಯಕ್ಕೆ ಎಲ್ಲೋರು ಕುಣುದವು. ಗುರುಗೊ ರಾಮಾಯಣಾ ಗ್ರಂಥಕ್ಕೆ ಅರ್ಚಿಸಿ ಮಂಗಳ ನೀರಾಜನ ಮಾಡಿದವು. ದ್ವಜಾವರೋಹಣ ಮಾಡಿ ರಾಮಾಯಣ ಗ್ರಂಥ ಸೀತಾರಾಮ ವಿಗ್ರಹಂಗಳ ಚೆಂಡೆ ಮೇಳದೊಟ್ಟಿಂಗೆ ವೇದಿಕೆಂದ ಸ್ವಸ್ಥಾನಕ್ಕೆ ತೆಕ್ಕೊಂಡೋದವು ಪರಿವರದಣ್ಣಂದ್ರು.

ಕಥೆ ಹೇಳುವಾಗ ಇದು ಮರದಿತ್ತು. ಊಟವೂ ಇತ್ತು. ಉಂಡು ನಾವುದೇ ಹೆರಟತ್ತು. ಆ “ರಾಮನಾಮ” ಮಾಂತ್ರ ಮನಸ್ಸಿಲೇ ಉಳುದತ್ತು.

ಹರೇರಾಮ

ಓಯೀ, ನಾವು ಕೊಡೆಯಾಲಂದ ಹೆರಟತ್ತು. ಕಾಂಬೋ.

ಪಟಂಗೊ:

14 thoughts on “ಕೊಡೆಯಾಲ ರಾಮ ಕಥೆ – ಕಡೇ ದಿನ

  1. ಕೊಡೆಯಾಲದ ರಾಮಕಥೆ ಮುಗುದತ್ತನ್ನೇ… ರಾಮಕಥೆಯ ಭಾವ ತುಂಬಿ ಆಸ್ವಾದಿಸುಲೆ ಬಾಬೆ ಬಿಟ್ಟಿದಿಲ್ಲೇ… ಪೆಂಗಣ್ಣ ನ ವರದಿಂದಾಗಿ ಬಿಟ್ಟು ಹೋದ ಕೆಲವು ಭಾಗ ಸಿಕ್ಕಿತ್ತು… ಹರೇ ರಾಮಲ್ಲಿ ಹಾಕಿಯಪ್ಪಗ ಅಥವಾ DVD ಸಿಕ್ಕಿಯಪ್ಪಗ ಭಾವ ತುಂಬಿ ಆಸ್ವಾದಿಸೆಕ್ಕು ಹೇಳಿ ಇದ್ದು…

  2. ಐದೂ ದಿನದ ಶ್ರೀರಾಮಕಥಾ ವರದಿಯ ಓದಿ ಆನಂದ ಪಟ್ಟ ಎಲೋರಿಂಗೂ ದನ್ಯವಾದ.
    ಇಲ್ಲಿ ನಮ್ಮದು ಏನೂ ಇಲ್ಲೆ. ಎಲ್ಲವೂ ಶ್ರೀ ಸಂಸ್ಥಾನದ ಮಾತುಗೋ..
    ಅದರ ಮಾಧ್ಯಮವಾಗಿ ಬಯಲಿಗೊಪ್ಪಿಸಿದ್ದು ಮಾಂತ್ರ ಈ ಪೆಂಗಣ್ಣ.
    ಇದೆಲ್ಲವನ್ನೂ ಶ್ರೀಚರಣಕ್ಕೆ ಅರ್ಪಿಸಿದ್ದು.. ಹರೇರಾಮ

    1. ಕೊಡೆಯಾಲಲ್ಲಿ ನೆಡದ ರಾಮಕಥೆ ತುಂಬಾ ಯಶಸ್ವಿ ಆತು. ಎಲ್ಲೋರ ಶ್ರಮ ಸಾರ್ಥಕ ಆತು. ಅದರೆಡೆಲಿ
      ಪೆಂಗಣ್ಣನ ಶ್ರಮವುದೆ ಸಾರ್ಥಕ ಆತು. ಐದು ದಿನದ ರಾಮಕಥೆಯ ವರದಿಯನ್ನುದೆ ಒರಕ್ಕು, ಬಚ್ಚಲು ಹೇಳಿ ಉದಾಸೀನ ಮಾಡದ್ದೆ , ಚೆಂದಕೆ,ಅಂದಂದೇ ಬೈಲಿಂಗೆ ಒಪ್ಪುಸಿದ ಪೆಂಗಣ್ಣನನ್ನೂ ಎಷ್ಟು ಕೊಂಡಾಡಿದರೂ ಸಾಲ. ಹರೇ ರಾಮಾ.

  3. ಮುಕ್ತಿ ಪಥದ ಐದು ಮೆಟ್ಟಲುಗೊ-ಸಾಲೋಖ್ಯ,ಸಾಮೀಪ್ಯ,ಸಾಷ್ಟಿ,ಸಾರೂಪ್ಯ,ಸಾಯುಜ್ಯ.ಈ ಬಗ್ಗೆ ಶ್ರೀಗುರುಗೋ
    ನವಗೆ ಅರ್ಥ ಅಪ್ಪಹಾಂಗೆ ವಿವರುಸಿದವು…………

  4. ಅದ್ಭುತ..!!!
    ಶ್ರೀ ರಾಮಕತೆಯೂ,
    ಪೆಂಗಣ್ಣನ ಶ್ರಮವೂ.

  5. ರಾಮಕಥೆ ಗೆ ದಿನಾಲೂ ಹೋಗಿದ್ದರೂ ಪೆ೦ಗಣ್ಣ ಬರೆದ೦ತೆ ಎಲ್ಲಾನೂ ನೆನಪಿಲ್ಯಾಗಿತ್ತು…ಓದ್ತಾ ಹೋದಾ೦ಗೆ ನೆನಪು ಮರುಕಳಿಸ್ತು…ಚೆ೦ದಕ್ಕೆ ಬರದ್ದೆ….
    ರಾಮಧ್ಯಾನ ಮಾಡ್ತಾ ಕುಣಿದು ಮೈಮರೆತ ಕ್ಷಣ ಮಾತ್ರ ಮರೆಯಲಾಗದ್ದು….

  6. ಒಂದು ಶುದ್ದಿಯನ್ನೂ ಬಿಡದ್ದೆ, ವಿವರವಾಗಿ ನಿರೂಪಿಸಿ ಎಲ್ಲರಿಂಗೂ ಒದಗಿಸಿ ಕೊಟ್ಟ ಪೆಂಗಣ್ಣಂಗೆ ನಮೋ ನಮಃ
    ಐದು ದಿನದ ಕಾರ್ಯಕ್ರಮಂಗಳಲ್ಲಿಯೂ ಭಾಗವಹಿಸುವ ಒಳ್ಳೆ ಅವಕಾಶ ಎನಗೆ ಒದಗಿ ಬಂದಿತ್ತು.
    ಕಾರ್ಯಕ್ರಮ ಮುಗಿವಾಗ ಇರುಳು ೧೦ ಗಂಟೆ ಕಳುದ್ದದೂ ಇದ್ದು.
    ಆದರೂ ಛಲ ಬಿಡದ ತ್ರಿವಿಕ್ರಮ ಈ “ಪೆಂಗಣ್ಣ” ಎಲ್ಲವನ್ನೂ ವಿವರವಾಗಿ ಬರದು ಇರುಳಿಂದಿರುಳೇ ಬೈಲಿಂಗೆ ತರೆಕಾರೆ ಅವ ಪಟ್ಟ ಶ್ರಮಕ್ಕೆ ಬೆಲೆ ಕಟ್ಟಲೆ ಎಡಿಯ.
    ಜೈ ಶ್ರೀ ರಾಂ

  7. ಕಾರ್ಯಕ್ರಮಲ್ಲಿ ಭಾಗವಹಿಸುವ ಯೋಗ ಇಲ್ಲದ್ದರೂ,ಬೈಲಿಲಿ ಐದು ದಿನದ ಸಕಾಲಿಕ ವಿವರವಾದ ಸಚಿತ್ರ ನಿರೂಪಣೆ೦ದಾಗಿ ವಿಷಯ೦ಗಳ ತಿಳಿವ ಭಾಗ್ಯ ದಕ್ಕಿತ್ತು.
    ಹರೇ ರಾಮ.ಧನ್ಯವಾದ ಪೆ೦ಗಣ್ಣ.

  8. “ರಾಮನಾಮ ಪಾಯಸಕ್ಕೆ ವಿಠಲ ನಾಮ ಸಕ್ಕರೆ” ಆದರೆ ಇಲ್ಲಿ ರಾಮಾಯಣದ ಕಥೆ ಹೇಳ್ತ ಪಾಯಸಕ್ಕೆ ಈ ಕಾರ್ಯಕ್ರಮವೇ ಸಕ್ಕರೆ ಅದರ ನಮ್ಮ ಮನಸ್ಸಿಲಿ ಹಾಕಿ ನಾವೂ ಚಪ್ಪರಿಸಿತ್ತು … “ಜೈ ಜೈ ರಾಮಕಥಾ ಜೈ ಶ್ರೀ ರಾಮಕಥಾ “

  9. ಅಣ್ಣೋ…
    ತುಂಬ ಖುಶಿ ಆತು..
    ಅಪರೂಪದವರ ಕಾಂಬ ಹಾಂಗಾತು.
    ಈ ಹಿಂದಾಣ ರಾಮಕಥೆಗಳಿಂದ ನಿನ್ನಾಣದ್ದು ತುಂಬ ಹೊಸತ್ತಾಗಿ ಕಂಡತ್ತು. ಒಂದು ಸಣ್ಣ ಘಟನೆಯ, ಏಷ್ಟು ಚೆಂದಕೆ ವಿವರಿಸಿದವು ಗುರುಗೊ??

  10. ಏನು ಧನ್ಯಳೋ ಲಕುಮಿ ಹೇಳಿ ಅವು ಹಾಡಿದಾಂಗೆ ಏನು ಧನ್ಯನೋ ನೀನು ಪೆಂಗಣ್ಣ ಹೇಳಿ ನಾವು ಹಾಡೆಕ್ಕಾಗಿದ್ದು.

    ಅಧ್ಬುತ ಸಾಹಸ ಭಾವ. ಶ್ರೀಗುರುದೇವತಾಕೃಪೆ ಸದಾ ನಿಂಗೊಗಾಗಿರಲಿ. ಅಂದ್ರಂದ್ರಾಣ ಶುದ್ದಿ ಅಂದಂದೇ ವಿವರವಾಗಿ ಬೈಲಿಂಗೆ ನೀಡಿ ಎಂಗೊಗೂ ಪರೋಕ್ಷವಾಗಿ ರಾಮಕಥಾ ಕೇಳುವಾಂಗೆ ಮಾಡಿದ್ದು ಅದ್ಭುತ ಸಾಧನೆ ಹೇಳಿ ಶ್ಲಾಘಿಸಿತ್ತು -‘ಚೆನ್ನೈವಾಣಿ’

    [ ಕಥೆ ಹೇಳುವಾಗ ಇದು ಮರದಿತ್ತು.] – ಇಲ್ಲೆ ಇಲ್ಲೆ ಅದು ಅಕೇರಿಗೆ ಕಥೆ ಮುಗುದಮತ್ತೆ ಅಲ್ಲದೋ. ಅದರ ಅಕೇರಿಗೇ ಹೇಳೆಕ್ಕಾದ್ದು.

  11. ಧನ್ಯವಾದ. ಇನ್ನು ಎಲ್ಲಿಗೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×