ಮಾಧ್ಯಮಾವಲೋಕನ

ನಾವು ಪೆಟ್ರೋಲಿಂಗೆ ರೇಟು ಹೆಚ್ಚಾತು ಹೇಳಿದ ಮೇಲೆ ಎರಡು ಸರ್ತಿ ಹಚ್ಚಾತು. ರಜಾ ಅಂಬ್ರೇಪಿಲಿ ಇದ್ದ ಕಾರಣ ಬೈಲಿಂದ ಹೆರ ಇತ್ತಿದ್ದು. ಹಿಂದಾಣಾ ತುಂಡರಿಸುವ ಶುದ್ದಿ ವಿಚಾರ ಬರೆವಾಗ ಹೇಳಿತ್ತೆ ರಂಗಣ್ಣ ರಾಜಿನಾಮೆ ಶುದ್ದಿ. ಅದು ಪಕ್ಕಾ ಆಗಿ ಅವ ಇನ್ನೊಂದು ಹೊಸ ಚಾನೆಲ್ಲು ಶುರು ಮಾಡ್ತಾ ಇಪ್ಪದು ಪಕ್ಕಾ ಆತು. ಇರಲಿ. ಯಾವಾಗಂದ ಕಾಂಬಲೆ ಸಿಕ್ಕುತ್ತು ಗೊಂತಿಲ್ಲೆ.

ಇನ್ನೊಂದು ಚಾನೆಲ್ಲು ಇದ್ದಲ್ಲದಾ ಟಿ.ವಿ. 9. ಇಲ್ಲಿ ಕೆಲಸ ಮಾಡುವ ಶಿವ ರಾಜೀನಾಮೆ ಕೊಡ್ತಾ ಇಪ್ಪದು ಹೊಸ ಶುದ್ದಿ. ಅಷ್ಟೊಳ್ಳೆ ಕೆಲಸಂದ ರಾಜಿನಾಮೆ ಕೊಡುಗೊ ಕೇಳೆಡಿ. ಕಾರಣ ಇದ್ದು. ಅವ° ಸಮಯ ನ್ಯೂಸ್‍ನ ಮುಖ್ಯಸ್ಥ ಆಗಿ ಸೇರ್ತಾ ಇಪ್ಪದೇ ಇದಕ್ಕೆ ಕಾರಣ.  ಈ ಜನ ಸುಮಾರು ವಿಶೇಷ ಕಾರ್ಯಕ್ರಮಂಗಳ ಮಾಡಿದವ°.  ಮುಂಬೈ ದಾಳಿ ನೇರಪ್ರಸಾರ ಮಾಡಿ ಹೆಸರು ಗಳಿಸಿದವ°. ಇನ್ನು ಸಮಯಲ್ಲಿ ಏನೆಲ್ಲಾ ಬಲಾವಣೆ ಆವ್ತು ನೋಡೆಕಷ್ಟೆ.

ಇದೇ ಸಮಯಲ್ಲಿ ಸಂಕೇಶ್ವರರ ಹೊಸ ಪತ್ರಿಕೆಯು ಆರಂಭ ಆವ್ತಾ ಇದ್ದು. ಇದು ಮತ್ತೊಂದು ದರಸಮರಕ್ಕೆ ಕಾರಣ ಅಕ್ಕೋ? ವಿಜಯಕರ್ನಾಟಕ ಬಂದಪ್ಪಗ ನಾಕೂವರೆ ರುಪಾಯಿ ಇದ್ದ ದಕ್ಷಿಣಕನ್ನಡದ ರಾಷ್ಟ್ರೀಯ ದಿನ ಪತ್ರಿಕೆ ಉದಯವಾಣಿಯೂ ಒಂದೂವರೆ ರುಪಾಯಿಗೆ ಇಳುದಿತ್ತು. ಕಾದು ನೋಡುವೋ°.

ಇತ್ತೀಚೆಗೆ ಮಾಧ್ಯಮಲೋಕ ಬದಲಾವುತ್ತಾ ಇದ್ದು. ಮೊದಲೆಲ್ಲಾ ಸಂಪಾದಕ ಯಾರೇ ಇರಲಿ, ಪತ್ರಿಕೆಗೆಗಳಿಗೆ ತನ್ನದೇ ಧ್ಯೇಯ, ದೃಷ್ಟಿಕೋನ ಇರ್ತಿತ್ತು. ಈಗ ಹಾಂಗಲ್ಲ ಸಂಪಾದಕ ಯಾವ ಪತ್ರಿಕೆ ಹೋವ್ತನೋ ಆ ಪತ್ರಿಕೆ ಅವನ ಧ್ಯೇಯ, ದೃಷ್ಟಿಕೋನವ ಹೊಂದಿರುತ್ತು. ಕೆಲವು ಪತ್ರಿಕೆಗಳ, ಪತ್ರಿಕೆ ಹೇಳುದಕ್ಕಿಂತ ಬ್ಲಾಗು-ಪತ್ರಿಕೆ ಹೇಳುಲಕ್ಕೇನೋ? ಪತ್ರಿಕೆಗೊ ಶುದ್ದಿ ಕೊಡುದಕ್ಕಿಂತ ಹೆಚ್ಚು ಲೇಖನಂಗಳ ಕೊಡುತ್ತಾ ಇದ್ದು. ಆ ಲೇಖನಂಗೊ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಕೊಡುವಂತಾಗಿದ್ದರೆ ತೊಂದರೆ ಇತ್ತಿಲ್ಲೆ. ಕೆಲವು ವ್ಯಕ್ತಿ ವ್ಯಕ್ತಿಗಳ ಸಂಘರ್ಷಂಗಳ ತಮ್ಮೊಳ ಚರ್ಚಿಸುವ ಬದಲು ಮಾಧ್ಯಮಂಗಳ ಮೂಲಕ ಚರ್ಚಿಸುವ ಹಾಂಗಿರ್ತು. ಆದರೂ ಅದು ಸಮಾಜದ ನ್ಯೂನತೆಗಳ ಸರಿ ಮಾಡುಲಿಪ್ಪದು ಹೇಳಿಕೊಂಬದು ಬೇಜಾರದ ಸಂಗತಿ.

ಪತ್ರಿಕೆಗೊ ಎಂತರ ಕೊಡೆಕ್ಕು. ಮುಖ್ಯವಾಗಿ ಪ್ರಪಂಚದ ಆಗುಹೋಗುಗಳ ಶುದ್ದಿ. ಒಟ್ಟಿಂಗೆ ಸಮಾಜದ ಸ್ವಾಸ್ಥ್ಯಕ್ಕೆ ಬೇಕಾದ ಅವಶ್ಯಕಂಗಳನ್ನೂ ಕೊಡಲಿ. ಅಲ್ಲದೋ. ಅದು ಬಿಟ್ಟು ಸ್ವಪ್ರತಿಷ್ಠೆಯ ಚರ್ಚೆಗಳ ಕೊಡುದು ಸರಿಯೋ. ಈ ಬಗ್ಗೆ ನಾವೋಂದು ಸಣ್ಣ ಚರ್ಚೆ ಮಾಡುವ ಆಗದೋ?

ಪೆಂಗಣ್ಣ°

   

You may also like...

9 Responses

 1. ಶ್ರೀಕಾಂತ ಹೆಗಡೆ says:

  ಖಂಡಿತಾ, ನಿಂಗಳ ದೃಷ್ಟಿಕೋನ ಸರಿ ಇದ್ದು. ಸಮಾಜಕ್ಕೆ ಊರುಗೋಲಾಗಕಾದ ಮಾದ್ಯಮ, ರಾಜಕೀಯ ಗಲಾಟೆಳ್ನ, ಸನ್ಯಾಸಿಗಳ ಚಾಪಲ್ಯಗಳ್ನ, ಯಾವುದೋ ನಟಿಮಣಿಯ ರಾಸಗಳನ್ನ ರಸವತ್ತಾಗಿ ನಿರೂಪಿಸ್ತಾ ಹೋಗ್ತಾ ಇದ್ದು. ಪೆಟ್ರೋಲ್ ಗ್ಯಾಸ್ ದರ ಏರಿದರೆ, ಇವತ್ತು ವಿದ್ಯುತ್ ಬೇರೆ ಏರಿದ್ದಡ. ಇದನ್ನೆಲ್ಲ ಪ್ರಕಣೆ ಮಾಡ್ತವೇ ಹೊರ್ತು ಆ ನೀತಿಯ ವಿರುದ್ಧ ಆಂದೋಲನ ಇಲ್ಲೆಯೇ ಇಲ್ಲೆ.
  ಬಹುತೇಕ ಮುದ್ರಣ ವಿದ್ಯುನ್ಮಾನ ಮಾಧ್ಯಮ ಭ್ರಷ್ಟಾಚಾರದ ಕೊಂಪೆ, ಇವು ಸರ್ಕಾರಗಳ ರಾಜಕಾರಣಿಗಳ ಉದ್ಯಮಪತಿಗಳ ಲಂಚದ ಬಗ್ಗೆ ಮಾತಾಡಿರೆ ” ಭೂತದ ಬಾಯಲ್ಲಿ ಭಗವದ್ಗೀತೆ ” ಬಂದಾಂಗೆ ಕಾಣ್ತು. ಕನ್ನಡದಲ್ಲಿ ನಂದೊಬ್ಬಂದೇ ಪ್ರತಾಪ ಎಂದು ಬಿಂಬಿಸಲು ಹೊರಟವನೊಬ್ಬ ದೇಶವೆ ಎದ್ದು ನಿಲ್ಲುವ ವಾಮನ ಸನ್ಯಾಸಿಯ ಕಾಷಾಯ ಎತ್ತುಲೆ ಪ್ರಯತ್ನ ಮಾಡ್ತಿದ್ದ.
  ನಮ್ಮ ಹವ್ಯಕರೇ ಹವ್ಯಕರಿಗೆ ಮುಳು, ಕಿತ್ ಬಿಸಾಕ್ತ ಹೇಳಿ ಮುಂಚೆಯೇ ಗೊಂತಾಗಿ, ರಾಜಿನಾಮೆಕೊಟ್ಟು ಹೆರಬಂದವ, ಚೆನ್ನಾಗಿ ಮಾಡಿಕೊಂಡ್ ಇಪ್ಪ ಹವ್ಯಕನನ್ನು ರಾಜಕೀಯ ಪ್ರಭಾವದಿಂದ ಹೆರಗಟ್ಟಿ ತಾನು ಅಲ್ಲಿ ಕೂತ, ಇನ್ನೊಬ್ಬ ಈಗ ತಾನೆ ದ.ಕ.ಮೂಲದ ಪತ್ರಿಕೆಯೊಂದಕ್ಕೆ ಹೊಸದಾಗಿ ಬಂದು ಚೆಲೋ ಮಾಡಿಕೊಂಡಿದ್ದಿದ್ದ, ಟೀವೀ ಮಾದ್ಯಮದಿಂದ ಬಂದ ಹವ್ಯಕ ಮಾಣಿಯೊಬ್ಬ ಅವನ್ನು ಹೆರಗಟ್ಟಿ ತಾನು ಕೂತ. ಹೀಂಗೆ ಹವ್ಯಕರೇ ಖೋ ಖೋ ಆಡ್ತಾ ಇದ್ದರೆ ಸರಿಯೇ ?

 2. ಚೆನ್ನೈ ಭಾವ says:

  ನಿಂಗಳ ಟಿ.ವಿ. 9 ಒಂದೆರಡು ದಿನ ನೋಡಿರೆ ಮತ್ತೆ ಟಿ.ವಿ. ನೋಡ್ತೇ ಬೇಡಾ ಕಾಂಗು.

  • ಕೆ.ಜಿ.ಭಟ್ says:

   ಆನು ಟಿವಿ ನೋಡುದು ಬಿಟ್ಟು ಎರಡು ವರ್ಷ ಆತುಃ)

 3. ತೆಕ್ಕುಂಜ ಕುಮಾರ says:

  {ದಕ್ಷಿಣಕನ್ನಡದ ರಾಷ್ಟ್ರೀಯ ದಿನ ಪತ್ರಿಕೆ ಉದಯವಾಣಿಯೂ ….} ಪ್ರಯೋಗ ಲಾಯಿಕಿದ್ದು. !!!

 4. ಈಚ ಭಾವ says:

  ಏ ಪೆಂಗಣ್ಣ ಭಾವ ಈ ವಿಷಯ ಆನು ಮಾತಾಡುವ ಹಾಂಗಿಲ್ಲೆ..!

  • ಈ.ಪ್ರ says:

   ಮಾತಾಡಿದರೂ ಎಂತ ಆವುತ್ತಿಲ್ಲೆ ಭಾವಾ ………. ಇದೆಲ್ಲ ನಾವು ಮಾತಾಡಿರೆ ಸರಿಅಪ್ಪಲಿದ್ದ ???

 5. ಬೊಳುಂಬು ಮಾವ says:

  ಪತ್ರಿಕೆಗೊ ಶುದ್ದಿ ಕೊಡುದಕ್ಕಿಂತ ಹೆಚ್ಚು ಲೇಖನಂಗಳ ಕೊಡುತ್ತಾ ಇದ್ದು. ನಿಜ. ಆ ಲೇಖನಂಗಳುದೆ, ಅಗುದ್ದರನ್ನೇ, ಮತ್ತು ಮತ್ತು ಅಗುದ ಹಾಂಗೆ. ಅದರಲ್ಲಿ ಹೊಸತನ ಇಲ್ಲೆ. ಲೇಖನದ ತಲೆಬರಹ ನೋಡಿದ ಕೂಡ್ಳೆ, ಅದರಲ್ಲಿ ಎಂತ ಬರದಿಕ್ಕು ಹೇಳಿ ನವಗೆ ಮದಲೇ ಗೊಂತಾವುತ್ತು. ಹಾಂಗಾಗಿ ಪೇಪರು ಓದಲೆ ಸುಲಭ !! ಮತ್ತೆ, ವ್ಯಕ್ತಿಯೊಬ್ಬನ ಅಂತೇ ಹೊಗಳಿ ಪುಟ ತುಂಬುಸುತ್ತದುದೆ ಇತ್ತೀಚೆಗೆ ತುಂಬಾ ಕಾಂಬಲೆ ಸಿಕ್ಕುತ್ತು. ರಾಜಕೀಯದ ವಿಷಯಂಗೊ ರೈಸುತ್ತಾ ಇರ್ತು. ಅವು ಎಂತ ಮಾಡಿರು, ಏವದೇ ಜೆನ ಅಧಿಕಾರಕ್ಕೆ ಬಂದರುದೆ, ಜೆನ ಸಾಮಾನ್ಯರಿಂಗೆ ಅವರಿಂದ ಏವ ಪ್ರಯೋಜನವುದೆ ಇಲ್ಲೆ. ಸಮಾಜಲ್ಲಿ ಎಂತಾರು ಒಳ್ಳೆದು ಆಯೆಕಾರೆ, ಜೆನಸಾಮಾನ್ಯದವನ ಅಭಿಪ್ರಾಯಕ್ಕೆ ಬೆಲೆ ಬರೆಕು. ಪೇಪರಿನವು ಅವರ ಅಭಿಪ್ರಾಯಂಗಳ ಪ್ರಕಟಿಸೆಕು. ಮೇಲಾಣವಕ್ಕೆ, ಆ ಧ್ವನಿ ಎತ್ತೆಕು. ಆದರೆ, ದೊಡ್ಡವರ ಸಹಾಯ, ಕೃಪಾ ಕಟಾಕ್ಷ ಇಲ್ಲದ್ರೆ, ಪತ್ರಿಕೆಯ ಎಷ್ಟು ದಿನ ನೆಡಸಲೆಡಿಗು ?

 6. ರಘು ಮುಳಿಯ says:

  ಇಪ್ಪದರ ಇಪ್ಪ ಹಾ೦ಗೆ ಹೇಳುವ ಪತ್ರಿಕೆಗೊ ವಿರಳ ಆಗಿ ಹೋತು.ಇ೦ದು ಮಾಧ್ಯಮದವು ಹೇಳಿದ್ದು ಶುದ್ದಿ ಹೇಳಿ ಆಯಿದು. ನೀರಾ ರಾಡಿಯಾ ಟೇಪುಗಳಲ್ಲಿ ಈ ದೇಶದ ಆಡಳಿತವ ಹೇ೦ಗೆ ತಮ್ಮ ಕೈಯೊಳ ಹಾಕಿದ್ದವು ಹೇಳಿ ಅ೦ದಾಜಿ ಆವುತ್ತು.ಆಳುವ ರಾಜಕೀಯ ಪಕ್ಷವ ಓಲೈಸಿ ಪ್ರತಿದಿನ ಪುಟಗಟ್ಟಲೆ ಜಾಹೀರಾತು ಬ೦ದರೆ ಮುಗಾತು,ಜಾಹೀರಾತಿಲಿ ಕೊಟ್ಟ ಒ೦ದೇ ಒ೦ದು ವಿಷಯ ಸತ್ಯ ಇರ. ಅದು ಜೆನ ದುಡುದು ಕೊಟ್ಟ ಪೈಸೆ ಹೇಳಿ ಆರಿ೦ಗೂ ನೆ೦ಪಿಲ್ಲೆ.ನಾವೂ ಇವರ ಚೆ೦ದ ನೋಡುತ್ತೇ ಹೊರತು ಪ್ರತಿಭಟಿಸುತ್ತೂ ಇಲ್ಲೆ.
  ನಿಜವಾದ ಶುದ್ದಿಗೊ ಮಣ್ಣಿ೦ಗೆ ಸೇರುತ್ತು,ಅಷ್ಟೆ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *