ಮಂಗಳೂರು ಹವ್ಯಕರ ಸಭೆಯೂ – ಸಾಂಸ್ಕೃತಿಕ ಸಂಜೆಯೂ

January 2, 2012 ರ 11:00 pmಗೆ ನಮ್ಮ ಬರದ್ದು, ಇದುವರೆಗೆ 25 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಉಂಡೆ ಬೆಂದಿ ತಿಂದು ವೇಣಿ ಅಕ್ಕನಲ್ಲಿಂದ ಹೆರಟು ನಾವು ಕೊಡೆಯಾಲ ಪೇಟೆ ಸುತ್ತಿ ತಾಜುಮಹಲಿಲಿ ಮದ್ಯಾನ್ನದ ಊಟ ಮಾಡಿ ಹೊತ್ತೋಪಗ ಎತ್ತಿತ್ತದಾ, ಎಲ್ಲಿಗೆ ಕೇಳೆಡಿ . ನವಗೆ ಮೊನ್ನೆಯೇ ಹೇಳಿಕೆ ಕಾಕತ ಸಿಕ್ಕಿದ್ದು – ನಂತೂರು “ಭಾರತೀ ಕೋಲೇಜಿನ” ಹತ್ತರಂಗೆ . “ಮಂಗ್ಳೂರು ಹವ್ಯಕ ಸಭಾದ” ವರ್ಶಾವಧಿ-ಕಟ್ಟುಕಟ್ಳೆ, ನಂಬಿಗೊಂಡದು, ನಡಕ್ಕೊಂಡು ಬಂದದ್ದು, ಕಾಲ ಕಾಲಕ್ಕೆ ಎಡಿಗಾದ ಹಾಂಗೆ ಮಾಡಿಗೊಂಡು ಬಪ್ಪದು ಹಿಂಗೆಲ್ಲ ಹೇಳುಲೆ ಇಲ್ಲೆ.  ಅದು ವಾರ್ಷಿಕೋತ್ಸವವುದೇ, ಸಾಧಕರಿಂಗೆ ಸಮ್ಮಾನ ಮಾಡ್ತ ಕಾರ್ಯ ಕ್ರಮ, ಭಾರೀ ಗೌಜಿ.

ನಾವು ಎತ್ತುವಗ ಗಂಟೆಮುಳ್ಳು ನಾಕಕ್ಕೂ ನಿಮಿಶದ ಮುಳ್ಳು ಆರಕ್ಕೂ ತೋರುಸಿಗೊಂಡಿತ್ತು. ಹೋಪಗಲೇ ಸ್ವಾಗತಕ್ಕೆ ರೆಡೀ ಆಯಿದು ಎದುರೇ ಕಾಪಿ- ಚಾದ ಒಟ್ಟಿಂಗೆ ಬಿಸ್ಕೀಟುದೇ ಇತ್ತು ನಮ್ಮ ಕಾರ್ಯಕ್ರಮ ಅಲ್ಲಿಂದಲೇ ಸುರುವಾತು!, ಕಾರ್ಯಕ್ರಮನಡೆತ್ತ ರಂಗ ಮಂಟಪದ ಹತ್ತರೇ ಹವ್ಯಕ ಸಭಾದವು ಸ್ವಾಗತಕ್ಕೆ ಕೂದುಗೊಂಡಿತ್ತವು, ನಮ್ಮ     “ಮಾ” ಸಂಸ್ಥೆಯ ಗೋ ಉತ್ಪನ್ನಂಗ ಅಲ್ಲದ್ದೇ ಮಠದ ದಿನದರ್ಶಿಕೆಯ ಮಾರಾಟಕ್ಕೆ ಮಡುಗಿತ್ತಿದ್ದವು. ಎದುರು ಸುಮಾರು ಕುರ್ಶಿ ಹಾಕಿತ್ತಿದ್ದವಿದಾ , ಒಂದು ಕುರ್ಶಿ ಎಳದು ನಾವೂ ಒಂದು ಕರೇಳಿ ಕೂದತ್ತು.

ಕಾರ್ಯಕ್ರಮ ಸುರು ಆತು. ಸುಬ್ರಾಯ ಮಾವನ ಕಾವ್ಯ ವಾಚನ ಆದಮೇಲೆ ಮನೋರಮತ್ತೆ ಶ್ರೀ ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿಯ ಸುಶ್ರಾವ್ಯವಾಗಿ ಹಾಡಿದವು, ಕೇಕಣಾಜೆ ಪುಷ್ಪಾ ಅಕ್ಕ ಗೆಣವತಿದೇವರ ಪ್ರಾರ್ಥನೆ ಮಾಡಿದವು ಸಭಾಕಾರ್ಯಕ್ರಮ ಸುರುವಾತು, ಮಂಗಳೂರು ಹವ್ಯಕ ಸಭಾದ ಕಡೆಂದ ಸ್ವಾಗತ ಭಾಶಣ – ಆತು. ನಂತರ ಕೃಷಿಪಂಡಿತ ಬದನಾಜೆ ಶಂಕರ ಭಟ್ರ ಕಿರು ಪರಿಚಯ – .ಯು ಜಿ ಕೆ ಭಟ್ರು, ನಮ್ಮ ಭಾಶೆಲಿಯೇ ಭಾರೀ ಚೆಂದಕೆ ಮಾಡಿದವು, ವೈದಿಕ ಮನೆತನದವು ಕೃಷಿ ಪಂಡಿತ ಆದಲ್ಲಿವರೆಗಾಣ ಪೂರ್ತಿ ವಿವರ ಕೊಟ್ಟವು , ಇದಾದ ಮೇಲೆ ಮಂ. ಹ .ಸಭಾದ ಕಡೆಂದ ಅವಕ್ಕೆ ಸಮ್ಮಾನವೂ ಆತು,

ಮುಂದಾಣದ್ದು ಅವರ ಮಾತು- ಅಡಕ್ಕೆಲಿ ಯಾವೆಲ್ಲಾ ಅಂಶಂಗೊ ಇದ್ದು, ಅಡಕ್ಕೆಯ ಕೇವಲ ಅಗುದು ತುಪ್ಪುಲೆ ಅಲ್ಲದ್ದೇ ಬೇರೆ ಯಾವುದಕ್ಕೆಲ್ಲಾ ಉಪಯೋಗ ಮಾಡುಲೆ ಆವುತ್ತು ಹೇಳುದರ ಸೂಕ್ಷ್ಮವಾಗಿ ಹೇಳಿದವು, ಕೆಟ್ಟವರ ಒಟ್ಟಿಂಗೆ ಸೇರಿ ಒಳ್ಳೆವಕ್ಕುದೇ ಕೆಟ್ಟ ಹೆಸರು ಬಪ್ಪ ಹಾಂಗೇ ಹೊಗೆಸೊಪ್ಪಿಂದಾಗಿ ಅಡಕ್ಕೆ ಕೆಟ್ಟದ್ದು ಹೇಳುವ ಭಾವನೆ ಬಪ್ಪಲೆ ಸುರುವಾದ್ದೇ ಹೊರತು ಅಡಕ್ಕೆ ಕೆಟ್ಟದ್ದಲ್ಲ ಹೇಳುದರ ಸ್ವಾನುಭವಲ್ಲಿ ವಿವರಿಸಿದವು.

ಇದಾದ ಮೇಲೆ ಮುಖ್ಯ ಅತಿಥಿಗಳಾಗಿ ಬಂದ ಕೇಂಪ್ಕೋದ ಅದ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್ರು ನಮ್ಮ ಸಮಾಜಲ್ಲಿಪ್ಪ ಸಮಸ್ಯೆಗಳ ಲಘು ಹಾಸ್ಯ ಮಿಶ್ರಿತ ಭಾಶೆಲಿ ನಮ್ಮ ಮನಸ್ಸಿಂಗೆ ಮುಟ್ಟುತ್ತ ಹಾಂಗೆ ಹೇಳಿದವು. ಮಾಣಿಯಂಗೊಕ್ಕೆ ಕೂಸು ಸಿಕ್ಕುತ್ತಿಲ್ಲೆ, ಡಾಕುಟ್ರಕ್ಕಳನ್ನೂ ಈಗಾಣ ಕೂಸುಗೊ ಒಪ್ಪುತ್ತವಿಲ್ಲೆ ಹೇಳುವಲ್ಲಿವರೆಗೆ ಈಗಾಣಕಾಲ ಬಯಿಂದೂಳಿ ಹೇಳಿದವು , ಹವ್ಯಕರ ಸಂಸ್ಕೃತಿ ರಜಾರೂ ಒಳುದ್ದಿದ್ದರೆ ಅದು ಉತ್ತರ ಕನ್ನಡಲ್ಲಿ ನಮಲ್ಲಿ ಅಲ್ಲ ಹೇಳಿ ಹೇಳಿದವು. ಹಾಂಗೇ ಅಡಕ್ಕೆಯ ಈಗಾಣ ರೇಟು 150 ರಿಂದ 170 ಒಳ್ಳೆ ಕ್ರಯ, ಹೆಚ್ಚು ಆಶಗೆ ಬೀಳದ್ದೇ ಇದ್ದ ಕ್ರಯಕ್ಕೆ ಅಗತ್ಯ ಇಪ್ಪಗ ಅಡಕ್ಕೆ ಮಾರಿ ನಮ್ಮ ಜೀವನ ಸುಧಾರುಸಿಗೊಳೆಕ್ಕು ಹೇಳುವ ಕಿವಿಮಾತು ಕೊಟ್ಟವು.

ದೈತೋಟದ ಚಂದ್ರಶೇಖರ ಮಾವ ಖಂಡಿಗದಜ್ಜನ ನೆನಪು ಮಾಡಿಗೊಂಡವು. ಅಜ್ಜನ ಸ್ವಾಭಿಮಾನೀ ತತ್ವ ಎಲ್ಲಿವರೆಗಾಣದ್ದು ಹೇಳುದರ ವಿವರಿಸುತ್ತಾ , ಗವರುಮೆಂಟಿನವರ ಕಾನೂನು ಬಂದಪ್ಪಗ ಅವ್ವೇ ನೆಟ್ಟು ಬೆಳಶಿದ ತೆಂಗಿನ ತೋಟವ ಬಿಡೆಕ್ಕಾಗಿ ಬಂತು – ಅದೂ ಮಾಡಿದವು, ಕೆಲವು ಸಮಯ ಕಳುದಪ್ಪಗ ಯಾರೋ ಬಂದು ಅಜ್ಜನತ್ರೆ ಹೇಳಿದವಡ, ಅಜ್ಜ ನಿಂಗಳ ತೆಂಗಿನ ತೋಟ ಒಣಗಿ ನೋಡುಲೆ ಎಡಿಯದ್ದ ಹಾಂಗೆ ಆಯಿದು, ಎಲ್ಲಾ ಮರಂಗೊ ಸಾಯಿತ್ತಾ ಇದ್ದು ಅದಕ್ಕೆಂತಾರು ಮಾಡುಲಾಗದಾ ಹೇಳಿ , ಅದಕ್ಕೆ ಕಂಡಿಗದಜ್ಜ ಹೇಳಿದವಡ “ಇದಾ ತುಪ್ಪಿದರೆ ಮುಗಾತು ಅದರಲ್ಲಿ ಎಂತೆಲ್ಲ ಹೋಯಿದು ಹೇಳಿ ನೋಡ್ತ ಕ್ರಮ ಎನ ಗಿಲ್ಲೆ ” ಅದು ಎಂತಾದರೂ ತೊಂದರೆ ಇಲ್ಲೆ ಹೇಳಿ, ಇದು ಅವರ ಆದರ್ಶ ಆಗಿತ್ತು, ಅವು ಪ್ರಿನ್ಸಿಪಾಲರು ನಿಜ ಜೀವನಲ್ಲಿಯೂ ಆಗಿತ್ತಿದ್ದವು, ಅವರದ್ದೇ ಆದ ಪ್ರಿನ್ಸಿಪಲ್ನ ಅವು ಪಾಲುಸಿಗೊಂಡಿತ್ತಿದ್ದವು ಹೇಳಿ ಹೇಳಿದವು, ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ ಹೇಳಿ ಒಂದು ನಿಮಿಶ ಮೌನ ಪ್ರಾರ್ಥನೆಯೂ ಮಾಡಿತ್ತು.

ಇದಾದ ಮೇಲೆ ಹಲವಾರು ಕ್ಶೇತ್ರಲ್ಲಿ ಸಾಧನೆಮಾಡಿದ ಸುಮಾರು 15-20 ಜೆನಕ್ಕೆ ಸಮ್ಮಾನ ಮಾಡಿದವು , ಹಾಂಗೇ ಕಾರ್ಯಕ್ರಮ ಅಶ್ಟು ಚೆಂದಕೆ ನಡಶುಲೆ ದನ ಸಹಾಯ ಮಾಡಿದ ವರ ಸಮ್ಮಾನ ಮಾಡಿದವು, ಅಷ್ಟಪ್ಪಗ ವೈ ವಿ ಮಾವನ ಮಾತಾಡುಲೆ ದಿನಿಗೇಳಿದವು. ಅವು-ನಮ್ಮ “ಭಾರತೀ ವಿದ್ಯಾಸಂಸ್ಥೆ” “ಗುರುಗಳ” ಮಾರ್ಗದರ್ಶನಲ್ಲಿ ಯಾವ ಉದ್ದೇಶಲ್ಲಿ ಸುರುವಾತು, ಸುರುವಪ್ಪಗ ಹೇಂಗಿತ್ತು , ಮಧ್ಯಲ್ಲಿ ಹೇಂಗಾತು ಇನ್ನು ಹೇಂಗಾಯೆಕ್ಕು, ಹೆಂಗಾವುತ್ತು ಹೇಳುದರ ಚೆಂದಕೆ ನಮ್ಮ ಭಾಶೆಲಿಯೇ ಹೇಳಿದವು, ನಾಳೆಯಾಣ ಕಟ್ಟೋಣ ವಿಸ್ತರಣೆಯ ಕಾರ್ಯಕ್ರಮಕ್ಕೆ ಅವರ ಹೊಡೆಂದ ಹೇಳಿಕೆಯೂ ಹೇಳಿದವು, ಅದ್ಯಕ್ಷರಾದ ಈಶ್ವರ ಭಟ್ರ ಭಾಷಣ ಅಗಿ ಧನ್ಯವಾದ ಹೇಳಿ ಸಭಾಕಾರ್ಯ ಮುಗಾತು. ವಸಂತ ಲಕ್ಷ್ಮಿ ಅಕ್ಕಂದೆ ನೀರಮೂಲೆಯ ಶ್ರೀಕೃಷ್ಣಣ್ಣಂದೇ ಚೆಂದಕೆ ಕಾರ್ಯಕ್ರಮ ನಿರೂಪಣೆ ಮಾಡಿದವು.

ಇನ್ನಾಣದ್ದು ಸಾಂಸ್ಕೃತಿಕ ಕಾರ್ಯ ಕ್ರಮ –

ಸಿನೆಮಾ ಪದ್ಯಕ್ಕೆ ನಮ್ಮ ಎರಡು ಕೂಚಕ್ಕಂಗ ಚೆಂದಕೆ  ಡೇನ್ಸು ಮಾಡುವುದರ ಮೂಲಕ ಸುರುವಾತು, ನಮ್ಮವೇ ಆದ ಮುಂಡತ್ತಜೆ ಡಾ-ಶಂಕರ ಮಾವನ ಏಕಪಾತ್ರಾಭಿನಯ “ದಕ್ಷಾದ್ವರ”, ಎರಡೆರಡು ಭರತನಾಟ್ಯಂಗೊ ರೈಸಿತ್ತು ಅದರಲ್ಲಿ ಒಂದು ರಾಷ್ಟ್ರೀಯ ಮಟ್ಟದ ಕಲಾವಿದೆ ಹೇಳುದು ನಮ್ಮೆಲ್ಲೋರ ಹೆಮ್ಮೆ ಹೇಳುದರ ಹೇಳುಲೆ ಪೆಂಗಣ್ಣ ಹೆಮ್ಮೆ ಪಡ್ತಾ ಇದ್ದ. ನಂತರ ನಮ್ಮ ಹೆಮ್ಮಕ್ಕಳ ನಾಟಕ “ದೇವರು ಕೊಟ್ಟ ಶಿಕ್ಷೆ”, ಸಮಾಜಲ್ಲಿ ನಡೆತ್ತಾ ಇಪ್ಪ ಸಮಸ್ಯೆಯ ಚೆಂದಕೆ ತೋರುಸುಲೆ ಪ್ರಯತ್ನ ಮಾಡಿದ್ದವು,

ಅದಾ ಅಷ್ಟಪ್ಪಗ ಸುರುವಾತದಾ ಬೊಳುಂಬುಮಾವನ ನಿರ್ದೇಶನದ, ಮಾಂಬಾಡಿ ವೇಣುಗೋಪಾಲ ರಚಿಸಿದ ನಾಟಕ “ಶಮ್ಮಿಯ ಮದುವೆ” ಭಾರೀ ರೈಸಿತ್ತು, ಯಾವುದೇ ವ್ರುತ್ತಿಪರ ಕಲಾವಿದರಿಂದ ನಾವೇನು ಕಮ್ಮಿಇಲ್ಲೆ ಹೇಳಿ ತೋರ್ಸಿಕೊಟ್ಟವು, ನಮ್ಮತನ, ನಮ್ಮ ಸಂಸ್ಕೃತಿ, ನಮ್ಮ ಭಾಶೆ ಒಳುಶಿ ಬೆಳಶೆಕ್ಕು ಹೇಳುದರ ಒಟ್ಟಿಂಗೇ ಈಗಾಣಕಾಲದ ಸಮಸ್ಯೆ ಲವ್ ಜಿಹಾದಿಂದ ಸ್ವಲ್ಪದರಲ್ಲೇ ಬಚಾವಾಗಿ ಬಂದ ಕೂಸಿನ ಜೀವನ ಚಿತ್ರಣ, ಅಮೇರಿಕಲ್ಲಿದ್ದರುದೇ ನಮ್ಮ ಸಂಸ್ಕೃತಿಯ ಮರೆಯದ್ದ ಹಾಂಗಿದ್ದ ಮಾಣಿ, ಹೀಂಗಿಪ್ಪ ಕೆಲವು ಸನ್ನಿವೇಶಂಗಳ ಸೃಸ್ಠಿಮಾಡಿ ಅತೀ ಕಮ್ಮಿ ಸಮಯಲ್ಲಿ ನೋಡುಗರ ಮನಸ್ಸಿಂಗೆ ನಾಟುತ್ತ ಹಾಂಗೆ ನಾಟಕ ಆಡಿತೋರುಸಿದವು. ಅವರ ಶ್ರಮಕ್ಕೆ ಗೌರವ ಸೂಚಿಸುಲೆ ಪೆಂಗಣ್ಣ ಒಂದಾರಿ ತೊಪ್ಪಿ ತೆಗದ. ಇದಾದ ಮೇಲೆ “ಹೆಣ್ಣು ಸಮಾಜದ ಕಣ್ಣು” ಹೇಳ್ತ ಗೀತ ರೂಪಕ ಇತ್ತು ಲಾಯಿಕಾಯಿದು, ಇಂದಿನ ಸಮಾಜಲ್ಲಿ ಹೆಣ್ಣು ದುರ್ಗೆಯ ರೂಪಲ್ಲಿ ಪೂಜಿಸಲ್ಪಡುದು ಮಾತ್ರಾ ಅಲ್ಲದ್ದೇ ಎಲ್ಲಾ ಕ್ಷೇತ್ರಂಗಳಲ್ಲಿಯೂ ಮುಂದುವರುದ್ದವು ಹೇಳುದರ ಕಲಾತ್ಮಕವಾಗಿ ತೋರುಸಿದವು , ಲಕ್ಷ್ಮಿಅಕ್ಕ ಒಂದು ಪದ್ಯ ಹೇಳಿದವು, ರಾಶೀ ಚಲೋ ಆಯ್ದು. ಒಬ್ಬ ಸಣ್ಣ ಮಾಣಿಯ ಕೊಳಲುವಾದನ ಇತ್ತು, ವಾಪಾಸು ಒಂದು ಡೇಂಗುಸಿನಿಟ್ಟಿಂಗೆ ಸಾಂಸ್ಕ್ರುತಿಕ ಕಾರ್ಯಕ್ರಮ ಮುಗಾತು.

ಹಾಂಗಾರೆ ಇಸ್ಟು ಹೊತ್ತು ಕೂದವಕ್ಕೆ ಹೊಟ್ಟೆಗೆ ಎಂತ ಹೇಳಿ ಕೇಳೆಡಿ ಅದೂ ಹೇಳ್ತೆ, ಬೊಳುಂಬು ಮಾವನವರ ನಾಟಕ ಮುಗುದಪ್ಪಗಳೇ ಊಟದ ವ್ಯವಸ್ಥೆ ಸುರುಮಾಡಿತ್ತಿದ್ದವು. ಲಿಂಬೆ ಹುಳಿ ಉಪ್ಪಿನ ಕಾಯಿ, ಅಲಸಂಡೆ – ಕೇಬೇಜಿ ತಾಳ್ಳ, ಉದ್ದಿನ-ಹಪ್ಪಳ, ಟೊಮೆಟೋ ಸಾರು, ಚೀನಿಕಾಯಿ ಕೊದಿಲು, ಕೇನೆಗೆಂಡೆ+ಕಡ್ಲೆ ಮೇಲಾರ, ಸೇಮಗೆ ಸೀವು, ಮೈಸೂರ- ಪಾಕು, ಕಾರಕಡ್ಡಿ ಮಜ್ಜಿಗೆ ಇವಿಷ್ಟೂ ಅಶನದೊಟ್ಟಿಂಗೆ ಊಟಿಕ್ಕಿದ್ದದು. ಪಾಕ ನಳ-ಪಾಕವೇ ಸರಿ. ಪರಿಸರ ಸ್ನೇಹಿ ಹಾಳೆತಟ್ಟೆಲಿ ಊಟಮಾಡಿ ನಾವು ಹೆರಟತ್ತು.

ಹಾಂ ಅದಾ ಒಂದು ಸುದ್ದಿ ಹೇಳುಲೆ ಮರದತ್ತದಾ ನಮ್ಮ ಬಯಲಿಂದ ಸುಮಾರುಜೆನ ಇತ್ತವು. ಬೊಳುಂಬುಮಾವ – ಮನೆದೇವರೊಟ್ಟಿಂಗೆ , ಶರ್ಮಪ್ಪಚ್ಚಿ – ಮಗಳೊಟ್ಟಿಂಗೆ, ಅಭಾವ, ಪ್ರಭಾವ, ಶೇಡಿಗುಮ್ಮೆ ಭಾವನೊಟ್ಟಿಂಗೆ ಲೆಗುಚ್ಚರು ವಿದ್ಯಕ್ಕನೂ ಇತ್ತು. ಲಕ್ಷ್ಮಿ ಅಕ್ಕ ಇತ್ತವು, ಬತ್ತೆ ಹೇಳಿದ ಮಂಗ್ಳೂರುಮಾಣಿ ಮಾತ್ರಾ ನಾಪತ್ತೆ, ಜಯಕ್ಕ ಬಾಬೆಯೊಟ್ಟಿಂಗೆ ಇತ್ತಿದ್ದವು. ನಾವು ಮಾತಾಡ್ಸುಲೆ ಹೋಗಿ ಬಾಬೆಯ ಕೂಗುಸುದು ಬೇಡ ಹೇಳಿ ಮಾತಾಡುಸುಲೆ ಹೋಯಿದಿಲ್ಲೆ, ಜಯಕ್ಕಾ ಬೇಜಾರು ಮಾಡಿಗೊಳೆಡಿ ಕ್ಷಮೆ ಇರಳಿ, ನವಗೆ ಕಂಡವು ಇಷ್ಟು, ಯಾರಾದರೂ ಬಂದು ನಮ್ಮ ಕಾಣದ್ದೇ ಹೋದವಿದ್ದರೆ ಬೇಜಾರು ಮಾಡಿಗೊಳೆಡಿ, ಇನ್ನೊಂದಾರಿ ಸಿಕ್ಕುವೊ. ಜೆನ 250-300 ಇತ್ತಿದ್ದವಲ್ಲ ಹಾಂಗಾಗಿ ಹೆಡುಕ್ಕುಲೆ ಎಡಿಗಾಯಿದಿಲ್ಲೆ. ಹನ್ನೊಂದೂವವರೆ ಬೆಂಗ್ಳೂರು ಬಸ್ಸಿಂಗೆ ಎತ್ತಲೆಡಿಯ ಹೇಳಿ ನಾವು ಅಲ್ಲಿಂದ ಹೆರಟತ್ತು.

ಸೂ: ಹೆಚ್ಚಿನ ಪಟಂಗಳ ಬೊಳುಂಬು ಮಾವ ತರ್ಸಿ ಹಾಕುತ್ತವು.

~
ಪೆಂಗಣ್ಣ ಪ್ರಮ್ ಬೈಲು
bingi.penga@gmail.com

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 25 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಊರಿ೦ದ ಊರು ಸುತ್ತುವ ಪೆ೦ಗಣ್ಣ ಈ ಕಾರ್ಯಕ್ರಮ ಬಿಟ್ಟಿದಾ° ಇಲ್ಲೆ ಹೇಳಿ ಕೊಶಿ ಆತು.ವರದಿ ಬೈಲಿ೦ಗೆ ಒಪ್ಪುಸಿ ಅಪ್ಪಗ ಕೊಶಿ ಹೆಚ್ಚಾತು.
  ನಮ್ಮ ಬೊಳು೦ಬು ಮಾವ° ಮಿ೦ಚಿದ್ದವನ್ನೇ ! ಒಟ್ಟಿ೦ಗೆ ಇಪ್ಪದು ಮಾ೦ಬಾಡಿ ವೇಣು ಅಣ್ಣ ಅಲ್ಲದೋ?ಇವರ ತಾಳಮದ್ದಳೆ ಅರ್ಥಗಾರಿಕೆ ರೈಸುತ್ತು, ಈಗ ನಾಟಕವೂ ಮಾಡ್ತವೋ? ಚೆಲ..

  [Reply]

  ಪೆಂಗಣ್ಣ Reply:

  ಅಲ್ಲದೋ ಎಂತ್ಸಕೆ ಅವ್ವೇ!

  ವರದಿ ಮಾಡ್ತದೇ ನಮ್ಮ ಜವಾಬು ಅಲ್ಲಸೋ ಬಾವಾ

  [Reply]

  VA:F [1.9.22_1171]
  Rating: 0 (from 0 votes)
  ವೇಣು ಮಾಂಬಾಡಿ

  ವೇಣುಗೊಪಾಲ್ ಭಟ್ ಮಾ೦ಬಾಡಿ Reply:

  ಹೈ ರಘು ಅಣ್ನ…ಇದು ಹೊಸಾ ಪ್ರಯತ್ನ… ಃ)

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಅತ್ಯಂತ ಯಶಸ್ವಿ ಆಯಿದು… ಅಭಿನಂದನೆಗೋ… :)

  [Reply]

  VA:F [1.9.22_1171]
  Rating: 0 (from 0 votes)

  ಪೆಂಗಣ್ಣ Reply:

  ಒಯೇ ಮಾಂಬಾಡಿ ಮಾವಾ
  ನಿಂಗೊಗೂ ನಾವು ಟೊಪ್ಪಿ ಕೆಳ ಮಡಗುತ್ತು..

  ಇಲ್ಲಿಯೂ ಬಂದೊಂಡಿರಿ… ನಿಂಗ ಬರದ ನಾಟಕ ಪಷ್ಟಾಯಿದಿದಾ.. ಅದರ ನಮ್ಮ ಬೈಲಿಲಿಯೂ ಹಾಕಿರೆಂತ? ಗೋಪಾಲ ಮಾವ ಅರಡಿಶುಗು ಹೇಂಗೆ ಹಾಕುತ್ಸು ಹೇದು…

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಎಲಾ ., ಈ ಪೆಂಗಣ್ಣ ಬಸ್ಸಿಲ್ಯೋ, ರೈಲಿಲ್ಲ್ಯೋ, ಇಮಾನಲ್ಲಿಯೊ, ಕಾರ್ಲಿಯೋ, ಅಲ್ಲಾ ಬೈಕಿಲ್ಲಿಯೊ …ಎಂತರ್ಲಿಪಾ ಇಷ್ಟು ಪಾಷ್ಟು ಹೋವ್ತಾ ಇಪ್ಪದು ನಮ್ಮ ಬೈಲ್ಲಿ. ಓ ಮನ್ನೆ ಕೊಡಯಾಲ, ಮರುದಿನ ನೋಡಿರೆ ಮೆಡ್ರಾಸು, ಅದಾ ನಿನ್ನೆ ಕೊಡಯಾಲಕ್ಕೂ ಎತ್ತಿದ್ದ°!!

  ಹಾ! ಇದು ಶುದ್ದಿ ಓದಿ ಪಷ್ಟು ಆಯ್ದು ಹೇಳಿತ್ತಿದಾ ಇತ್ಲಾಗಿಂದ. ಮತ್ತೆ ಪೆಂಗಣ್ಣನ ತಿರುಗಾಟದ ವರದಿ ಈಗೀಗ ಬೆಶಿ ಬೆಶಿಗೆ ಬೈಲಿಂಗೆ ಬಪ್ಪಲೆ ಸುರುವಾದ್ದು ಸಂತೋಷ ವಿಷಯ. ಕೆಲವು ಸರ್ತಿ ತಿರುಗಾಟ ಜೋರಿದ್ದರೆ ಬರದು ಹಾಕುವಷ್ಟೂ ಪುರುಸೊತ್ತಾವ್ತಿಲ್ಲೆ ಎಂಬುದು ಸತ್ಯವಿಚಾರ ಅಪ್ಪು ಹೇಳಿ ಒಪ್ಪುತ್ತು. ಅಂದರೂ ಬರದು ಬೈಲಿಂಗೆ ಒಪ್ಪಿಸಿಯಪ್ಪಗ ಖುಶೀ ಆವ್ತಿದಾ.
  ಮಂಗ್ಳೂರು ಹವ್ಯಕ ಸಭಾದ ಕಾರ್ಯಕ್ರಮ ಯಶಸ್ವಿಯಾಗಿತ್ತು ಹೇಳಿ ಈ ಶುದ್ದಿ ನೋಡಿ ಅಂದಾಜಿ ಆತಿದಾ. ಚೊಕ್ಕ ವ್ಯವಸ್ಥೆ ಕೂಡ ಆಗಿತ್ತು. ಕಾಪಿಂದ ಉಪ್ಪಿನಕ್ಕಾಯಿವರೇಂಗೆ ಇತ್ತಿದ್ದು ಹೇಳಿದ ಮತ್ತೆ ಬೋಚಬಾವಂಗೆ ಖುಶೀ ಆದಷ್ಟು ನವಗೂ ಆತು. ಅಭಾವ, ಪ್ರಭಾವ ಸೇರಿದ ಮತ್ತೆ ಬೊಳುಂಬು ಮಾವನ ಪ್ರವೇಶಲ್ಲಿ ಕೈಚಪ್ಪಾಳೆ ರೈಸಿದ್ದು ಹೇಳಿ ಪ್ರತ್ಯೇಕ ಹೇಳೇಕ್ಕಾದ್ದಿಲ್ಲೆ ಅಪ್ಪೋ. ಮತ್ತೆ ಬೈಲಿಂದ ನಾಕು ಅಕ್ಕಂದ್ರೂ ಬಯಿಂದವು ಹೇಳಿಯಪ್ಪಗ ಮತ್ತೂ ಲಾಯಕ ಆತು.

  ಶುದ್ದಿ ಮೆಚ್ಚುಗೆ ಆತು ಹೇಳಿತ್ತು – ‘ಚೆನ್ನೈವಾಣಿ’.

  [Reply]

  ಪೆಂಗಣ್ಣ Reply:

  ಮೆಚ್ಚುಗೆಗೆ ಇಲ್ಲಿಂದಲೇ ವಂದನೆಗೋ..

  ಚೆನ್ನೈ ಬಾವನ ವೇಷ ನೋಡೆಕ್ಕು ಹೇಳ್ತವು ರಘು ಬಾವ!

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ತಿರುಗಾಟದ ತೆರಕ್ಕಿಲಿಯೂ ಶುದ್ದಿಯ ತಣಿಯೆಕ್ಕಾರೆ ಮದಲೇ ಬೈಲಿಲಿ ತಿಳಿಶಿದ್ದಕ್ಕೆ ಒಂದು ಒಪ್ಪ.
  ನಮ್ಮವೇ ಆದ ಬೊಳುಂಬು ಮಾವ ‘ರೈಸಿದ್ದು’ ಕೊಶಿ ಆತಿದ. ಅವಕ್ಕೆ ನಾವೂ ‘ತೊಪ್ಪಿ’ಕೆಲ ಮಡಗಿತ್ತು. ಆಭಿನಂದನೆಗೊ ಮಾವ.

  [Reply]

  ಪೆಂಗಣ್ಣ Reply:

  ರೈಸದ್ದೇ ಇಕ್ಕೋ..

  ಯೇ ಬಾವ ಇನ್ನು ನಿಂಗೋ ತೊಪ್ಪಿ ಹಾಕುಲಕ್ಕು..
  ಅದು ಒಂದರಿ ತೆಗದು ಕೆಳ ಮಾಡಿ ಪುನಾ ಹಾಕುಸ್ಸು ಹೇಳ್ತವು ಸುಭಾವ ಎಂತದೋ ದೊಡ್ಡ ಗ್ರಂಥ ಓದಿಯೊಂಡು..

  [Reply]

  VA:F [1.9.22_1171]
  Rating: 0 (from 0 votes)
 4. ಒಪ್ಪಣ್ಣ

  ಓಹೋ! ಕಾರ್ಯಕ್ರಮಕ್ಕೆ ಕಟ್ಟಿದ ಷ್ಟೇಜು ಬಿಚ್ಚುತ್ತರಿಂದ ಮದಲೇ ಬೈಲಿಲಿ ಶುದ್ದಿ ಬಂದಾತದ.
  ಒಳ್ಳೆದಾತು.

  ಬೊಳುಂಬು ಗುರಿಕ್ಕಾರ ಮಾವನ ಕಂಡದು ಕೊಶಿ ಆತು; ಬೈಲಿಂಗೆ ಒಂದರಿ ಬಂದಿಕ್ಕಲಿ ಅವು! 😉

  [Reply]

  ಪೆಂಗಣ್ಣ Reply:

  ಓಯಿ
  ಪರದೆ ಹಿಡಿವಲೆ ಬತ್ತೆ ಹೇಳಿ ಆ ಒಬ್ಬ ಹೇಳಿದವ ಬೈಂದನೇ ಇಲ್ಲೆ ಹೇಳ್ತಿದ್ದವು ಬೊಳುಂಬು ಮಾವ!

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಚೆ, ಚೆ, ಮಧ್ಯಾಹ್ನಕ್ಕೆ ಕೊಡೆಯಾಲದ ತಾಜಮಹಲಿಂಗೆ ಹೋದಿರೊ ? ನಿಂಗೊ ಉದಿಯಪ್ಪಗಳೇ ಕೊಡೆಯಾಲಕ್ಕೆ ಬಂದದು ಗೊಂತಾತಿಲ್ಲೆ. ಎನಗೆ ಮದಲೇ ಗೊಂತಾವುತ್ತಿತರೆ ದಿನಿಗೇಳ್ತಿತೆ. ಮಧ್ಯಾಹ್ನಕ್ಕೆ ಭಾರತೀ ಕಾಲೇಜಿಲ್ಲಿ ಶತರುದ್ರ ಇತ್ತು. ಪೆಂಗಣ್ಣಂಗೆ ಅಲ್ಲಿಗೆ ಬಂದಿದ್ರೆ ಅಲ್ಲೇ ಉಂಬಲಾವುತ್ತಿತು. ಹೇಳಿದ್ದರೆ ಸಂಗಾತಕ್ಕೆ ಬೋಚಬಾವನುದೆ ಖಂಡಿತಾ ಬತ್ತಿತ°. ಹೋಳಿಗೆ, ಒಣದ್ರಾಕ್ಷೆ ಪಾಯಸ ಎಲ್ಲ ಸೂಪರ್ ಇತ್ತು. ಮತ್ತೆ, ಹತ್ತು ರೂಪಾಯಿ ದಕ್ಷಿಣೆ ಬೇರೆ. ನಿಂಗೊ ಎಲ್ಲ ವಾರ್ಷಿಕೋತ್ಸವಕ್ಕೆ ಬಂದು ಕಡೇಣ ಕಾರ್ಯಕ್ರಮದ ವರೆಗೆ ನಿಂದು ಹೋದ್ದದು ಕೊಶೀ ಆತದ.

  [Reply]

  ಪೆಂಗಣ್ಣ Reply:

  ಯೇ ಮಾವಾ
  ಶರ್ಮಪ್ಪಚ್ಚಿ ಈ ವಿಶ್ಯ ಹೇಳಿದ್ದವೇ ಇಲ್ಲೆದಾ…

  ಇರಳಿ ತಾಜುಮಹಲಿಲಿ ನವಗೆ ನಷ್ಟ ಆಯಿದಿಲ್ಲೆ.. ಸುಭಗ ಬಾವ ಅಲ್ಲಿಯ ಬನ್ಸು ವರ್ಣನೆ ಮಾಡಿದ್ದಕ್ಕೆ ಹೋದ್ಸು.. ನಾವು ಪಿಲಾನು ಮಾಡಿ ಅವರ ಬಾವ ದೊಡ್ಡಜ್ಜನ ಪುಳ್ಳಿಯ ಕರಕ್ಕೊಂಡು ಹೋದ್ದಿದಾ.. ಕಿಸೆಗೆ ಪೆಟ್ಟು ಬಪ್ಪಲಾಗನ್ನೆ…

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಲೋ ಪೆಂಗಣ್ನ,
  ಇಷ್ಟು ಚೆಂದಕೆ ವರದಿ ಕೊಟ್ಟಿದೆ ಅಲ್ಲದಾ?
  ಎನ್ನ ಕಂಡು ಮಾತಾಡ್ಸದ್ದೆ ಹೋದ್ದಾ? ಹೋಗಲಿ, ಅಭಾವನ ಸಿಕ್ಕಿದನಾ?
  ಸುಮ್ಮನೆ ಅಲ್ಲ ನಿನಗೆ ಮಧ್ಯಾಹ್ನದ ಊಟ ಅಲ್ಲಿ ಸಿಕ್ಕದ್ದದು!!!

  [Reply]

  ಪೆಂಗಣ್ಣ Reply:

  ಕಂಡಿದಪ್ಪೋ.. ಓ ಆಚೆ ಕರೇಲಿ ಮೇಟ್ಲಿನ ಬುಡಾಲ್ಲಿ ಕೂದುಗೊಂಡಿತ್ತನ್ನೇ!

  VA:F [1.9.22_1171]
  Rating: 0 (from 0 votes)
 6. ಮಂಗ್ಳೂರ ಮಾಣಿ

  ಬಪ್ಪ ಮನಸ್ಸೆಲ್ಲ ಮಾಡಿ ಆಗಿತ್ತು ಪೆಂಗಣ್ಣೋ…
  ಆದರೆಂತ ಮಾಡುದು?
  ಜನವರಿ ಒಂದು – ಹೊಸ ವರ್ಶ – ಒಂದು ಮನಸ್ಸಿಂಗೆ ಹಿತ ಅಲ್ಲದ್ದ ಸುದ್ದಿಯೊಟ್ಟಿಂಗೆ ಶುರು ಆತು..
  ಎಲ್ಲಿಗೂ ಹೋಯೆಕೂಳಿ ಕಂಡಿದಿಲ್ಲೆ…
  ಬೇಜಾರು ಮಾಡಿಕ್ಕೆಡ ಆತಾ..??

  ಇನ್ನಾಣ ಸರ್ತಿ ಉದಿಯಪ್ಪಗಳೇ ಹೋಗಿ, ರುದ್ರ ಹೇಳಿ, ಉಂಡು, ನಾಟಕ ನೋಡಿಕ್ಕಿ ಬಪ್ಪೊ°…
  ಹೇ°…

  ಬೊಳುಂಬು ಮಾವಂಗೆ ಅಭಿನಂದನೆಗೊ..
  ಈ ಸರ್ತಿ ನೋಡ್ಲಾಯಿದಿಲ್ಲೆ,
  ಇನ್ನಾಣ ಸರ್ತಿ ಖಂಡಿತಾ ನೋಡ್ತೆ… :)

  [Reply]

  ಪೆಂಗಣ್ಣ Reply:

  ನೀ ಹೀಂಗೆ ಹೇಳಿದರೆ ಹೇಂಗೆ ಮಾರಾಯ..

  ನಮ್ಮ ಹೊಸ ವರ್ಶ ಬರೇಕಟ್ಟೇನ್ನೇ… ಅಂಬಗ ಹೀಂಗಿದ್ಸು ಆಗ..
  ಇದು ಮೂಡ(ಢ) ದೇಶದವರದ್ದಲ್ಲದೋ.. ಹೊಸ ವರ್ಶ…

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಅದು ಸರಿ..

  ಎನಗೆ ಪ್ರತಿದಿನವೂ ಹೊಸ ವರ್ಶವೇ..
  ಜನವರಿ ಒಂದು ಕೇಲೆಂಡರು ಬದಲುಸುವ ದಿನ ಹೇಳಿ ವಿಷೇಶ..!!

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಆಹಾ!!! ತೂಕದ ಮಾತು!!!

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  😉

  VA:F [1.9.22_1171]
  Rating: 0 (from 0 votes)
 7. ಜಯಶ್ರೀ ನೀರಮೂಲೆ
  jayashree.neeramoole

  ವಾರ್ಷಿಕೋತ್ಸವದ ಹಾಂಗೆ ಪೆಂಗಣ್ಣ ಬರದ ವರದಿಯೂ ಲಾಯಕ ಆಯಿದು… ಬೊಳುಂಬು ಮಾವನ ನಾಟಕ ನೋಡುಲೆ ಬೇಕಾಗಿ ಸಣ್ಣ ಬಾಬೆಯ ಕರೊಕ್ಕೊಂಡು ಆದರೂ ಹೆರಟದು…ಪೆಂಗಣ್ಣ ಎನ್ನ ನೋಡಿಯೂ ಮಾತಾಡ್ಸಿದ್ದಿಲ್ಲೇ ಹೇಳುವಗ ಬೇಜಾರು ಆತು… ಆದರೆ ಬೇಜಾರು ಮಾಡಿಗೊಂಡಿದಿಲ್ಲೇ ಎಂತಕೆ ಹೇಳಿರೆ ನೀನು ಬೈಲಿಂಗೊಸ್ಕರ ಇಷ್ಟೆಲ್ಲಾ ಕಷ್ಟ ಬತ್ತಾ ಇಪ್ಪಗ,ಅಷ್ಟೂ ಬ್ಯುಸಿ ಇಪ್ಪಗ ಇದೆಲ್ಲ ಸಣ್ಣ ವಿಷಯ… ಶರ್ಮಪ್ಪಚ್ಚಿ ಕಂಡು ಮಾತಾಡಿದವು… ತುಂಬಾ ಖುಷಿ ಆತು…

  [Reply]

  ಪೆಂಗಣ್ಣ Reply:

  ಯೇ ಜಯಕ್ಕಾ.. ಬೇಜಾರು ಮಾಡುಲಾಗಪ್ಪಾ…
  ನಾವು ಬೋಚ ಇದ್ದರೆ ಮಾತ್ರ ಉಳುದೋರ ಮಾತಾಡ್ಸುದು..

  ನಿಂಗೊಗೆ ಖುಷಿ ಆದರೇ ನವಗುದೇ.. ದನ್ಯವಾದಂಗ…

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಜನವರಿ ೨೮ ರಿಂದ ಮಂಗಳೂರಿಲ್ಲಿ ರಾಮಕಥೆ ಇದ್ದಡ… ಬೋಚನನ್ನೂ ಕರಕ್ಕೊಂಡು ಬಾ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ವಿಜಯತ್ತೆಅನು ಉಡುಪುಮೂಲೆಗಣೇಶ ಮಾವ°ವಿನಯ ಶಂಕರ, ಚೆಕ್ಕೆಮನೆಅಕ್ಷರದಣ್ಣಕಜೆವಸಂತ°ಚೆನ್ನೈ ಬಾವ°ಪುತ್ತೂರಿನ ಪುಟ್ಟಕ್ಕಅಕ್ಷರ°ದೇವಸ್ಯ ಮಾಣಿದೊಡ್ಮನೆ ಭಾವವೇಣಿಯಕ್ಕ°ದೊಡ್ಡಭಾವಕೇಜಿಮಾವ°ಚುಬ್ಬಣ್ಣಹಳೆಮನೆ ಅಣ್ಣನೀರ್ಕಜೆ ಮಹೇಶದೀಪಿಕಾವಸಂತರಾಜ್ ಹಳೆಮನೆಚೆನ್ನಬೆಟ್ಟಣ್ಣಪೆರ್ಲದಣ್ಣಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿವೇಣೂರಣ್ಣಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ