ಮೊದಲ ಮಾತು – ಗೆಣಪ್ಪಣ್ಣಂಗೆ ನಮಸ್ಕಾರ

September 11, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮೋರಲ್ಲಿ ಎಲ್ಲೋರೂ ಉಶಾರಿಗಳೇ.
ಉಶಾರಿಗಳ ನೋಡಿಗೊಂಬದು ಬಯಂಕರ ಬಂಙ ಅಪ್ಪಾ!!
ಇದರೆಡಕ್ಕಿಲಿ ಒಬ್ಬ ಪೆಂಗ ಬಂದರೆ ಹೇಂಗಿಕ್ಕು?
ಯೋಚನೆ ಮಾಡಿ, ಇಂದಿಂದ ನಮ್ಮ ಬೈಲಿಲಿ ಒಬ್ಬ ಪೆಂಗಂದೇ ಇದ್ದ°!
ಓದಿ, ಉತ್ತರ ಕೊಡಿ!

ಆತೋ?

ಗುರಿಕ್ಕಾರ°

ಯೇ ಇದು ಆರು ಪೆಂಗ ಗ್ರೇಶಿದರೋ?
ಒಪ್ಪಣ್ಣ ಬೈಲಿಲಿ ಯೇವಾಗ್ಲೂ ಬಂದೊಡಿಪ್ಪವ, ಆದ್ರೆ ಒಪ್ಪ ಬರಿವಲೆ ಪುರ್ಸೋತ್ತಿಲ್ಲದ್ದವ.
ಕಾರಣ ಆನು ಯೇವಾಗ್ಲೂ ಊರೂರು ತಿರುಗುತ್ತ ಇಪ್ಪದು. ಪುರುಸೋತ್ತು ಇಪ್ಪಗ ಓದುದು ಮಾತ್ರ ಎನ್ನ ಕೆಲಸ.
ಓ ಮೊನ್ನೆ ಒಪ್ಪಣ್ಣನ ಮನೆಗೆ ಹೋಗಿತ್ತಿದ್ದೆ. ಅವ ಕೇಳಿದ  ನಿಂಗಳೂ ಬರೆತ್ತೀರಾ?.
ಎನಗೆ ಬಿಂಗಿ ಹೇಳುದು ಮಾಂತ್ರ ಗೊಂತಿಪ್ಪದು ಹೇಳಿದೆ. ಅದೂ ಅಕ್ಕು.. ನಿಂಗಳ ತಿರುಗಾಟಲ್ಲಿ ಸಿಕ್ಕುವ ಸಮಕಾಲೀನ ಸುದ್ದಿಗಳ ಬಿಂಗಿ ರೂಪಲ್ಲಿ ಹೇಳಿ ಕೇಳಿಕೊಂಡ.
ಶುರು ಮಾಡುದು ಯೇವಾಗ?

ನಮ್ಮಲ್ಲಿ ಕಾರ್ಯಂಗ ಶುರು ಅಪ್ಪದು ಗೆಣಪ್ಪಣ್ಣನ ಮಾತಾಡ್ಸುದ್ರಿಂದ. ಅದಾ ಯೇವ ಗೆಣಪ್ಪಣ್ಣ ಹೇಳ್ತಾ ಇವಾ ಗ್ರೇಶಿದಿರೋ.
ನಮ್ಮ ಮುಳಿಯ ಬಾವನೋ, ಚೆನ್ನೆಬೆಟ್ಟಣ್ಣನೋ, ಆಟದ ಮರುಳು ಇಪ್ಪವು ಪದ್ಯಾಣದವೋ ಕೇಳುಗು. ಗೆಣವತಿ ಭಟ್ರೋ, ಅಡಿಗೆ ಗೆಣಪ್ಪಣ್ಣನೋ ಕೇಳುಗು ಇನ್ನು ಕೆಲವು ಜೆನೊ.
ನಮ್ಮ ಮಾಸ್ಟ್ರು ಮಾವನ ದೊಡ್ಡ ಮಗ ಇದ್ದನ್ನೆ ಅಮೇರಿಕಲ್ಲಿ ಅವನತ್ರೆ ಕೇಳಿರೆ – ಗನ್ಸೋ ಕೇಳುಗಡ, ಅಲ್ಲಿಪ್ಪ ನಮ್ಮವರ ಹೆಸರುಗೋ ಹಾಂಗೆ ಆದ ಕಾರಣ. ಓ ಅಂದು ಸಿಕ್ಕಿಪ್ಪಗ ಹೇಳಿತ್ತಿದ್ದ. ಅಲ್ಲಿ ‘ಹಾ‘  ಹೇಳಿ ಇದ್ದು (Havyaka Association of Americas).
ಅಲ್ಲಿ ಹೋಗಿಪ್ಪಗ ಕ್ರಿಸ್, ತಿಮ್ಸ್, ಮಹಾ, ಸನಾ, ಜಿಮ್ಸ್, ಲಾಕ್ಸ್ ಎಲ್ಲಾ ಇತ್ತಿದ್ದವಡ, ಬಂಡಾಡಿ ಅಜ್ಜಿ ಕೇಳಿರೆ ಬೈಗು ಮನಾರಕ್ಕೆ. ದೊಡ್ಡ ಮಾವ ಹತ್ರ ಹೋಪಲು ಬಿಡವು.

ಇವರ ನೆಂಪು ಮಾಡಿದ್ದಲ್ಲ ಆನು. ಅದಾ ಮೂಷಿಕ ವಾಹನಲ್ಲಿ ಬತ್ತನ್ನೆ, ಅವನ ಮಾತಾಡ್ಸಿ ಶುರು ಮಾಡುವೊ ಹೇಳಿದ್ದು.
ಇಂದು ಅವನ ದಿನ. ಇಂದೇ ಬರವಲೆ ಶುರು ಮಾಡ್ತಾ ಇದ್ದೆ. ಪುರುಸೋತ್ತು ಇಪ್ಪಗ ಬರೆತ್ತೆ.
ದಿನಕ್ಕೆ ನಾಕು ಸರ್ತಿ ಬರೆದರೂ ಬರೆವೆ ಇಲ್ಲೆ ಹೇಳಿರೆ ತಿಂಗ್ಳಿಗೊಂದಾದದೂ.
ಸಮಕಾಲೀನ ಶುದ್ದಿ ಹೇಳ್ತೆ. ನಿಂಗೋ ಬೈಲಿನ ಎಲ್ಲರಿಂಗೂ ಕೊಟ್ಟ ಸಹಕಾರವ ಎನಗೂ ಕೊಡಿ ಹೇಳ್ತಾ ಇಂದು ವಿರಮಿಸುತ್ತೆ.

-ಇಂದ್ರಾಣ ಊರು ಕೊಡೆಯಾಲ

ಓಂ ಗಂಗಣಪತಯೇ ನಮಃ || ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್ ||

~

ಪೆಂಗ ಪ್ರಮ್ ಬೈಲು.
bingi.penga@gmail.com

ಮೊದಲ ಮಾತು - ಗೆಣಪ್ಪಣ್ಣಂಗೆ ನಮಸ್ಕಾರ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಮುಳಿಯ ಭಾವ
  raghumuliya

  ಪೆಂಗಂಗಳ ಬೈಲಿಂಗೆ ಪೆಂಗಂಗೆ ಸ್ವಾಗತ.
  ಕೊಡೆಯಾಲಲ್ಲಿ ಕೊಡೆ ಹಿಡುಕ್ಕೊಂಡು ನೆಡದರೂ ಚೆಂಡಿಯೇ ಹೇಳಿ ಶರ್ಮಪ್ಪಚ್ಚಿ ವಾರ್ತೆ ಹೇಳಿದವು.ಈಗ ಹೆಂಗಿದ್ದು?

  [Reply]

  VA:F [1.9.22_1171]
  Rating: +1 (from 1 vote)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮಳೆ ಬಿಟ್ಟರೂ, ಕೊಡೆ ಹಿಡ್ಕೊಂಡು ಹೋಗದ್ದರೆ ಚೆಂಡಿಯೇ.
  ಮಳೆ ನೀರು ಅಲ್ಲ!!!
  ವಾಹನದವು ರಟ್ಟಿಸಿದ ಚರಂಡಿ ನೀರು.

  [Reply]

  ಬಲ್ನಾಡುಮಾಣಿ

  ಆದರ್ಶ Reply:

  ಕೊಡೆ ಇದ್ದರೆ ಅಡ್ಡಕ್ಕೆ ಹಿಡುದು ರಕ್ಷಣೆ ಪಡವಲಕ್ಕು ಅಪ್ಪಚ್ಚಿ!

  [Reply]

  ನೆಗೆಗಾರ°

  ನೆಗೆಗಾರ° Reply:

  {ಅಡ್ಡಕ್ಕೆ ಹಿಡುದು ರಕ್ಷಣೆ ಪಡವಲಕ್ಕು }
  – ಪಕಾಸಿಂಗೆ ಆಗದೋ ಅಂಬಗಾ? 😉

  [Reply]

  ಲೂಟಿ ಮಾಣಿ Reply:

  ಪಕಾಸಿಂಗೆ ಚೂರು ಗಿಡ್ಡ ಅಕ್ಕು. ನಗೆ ಬಾವ 😀

  VA:F [1.9.22_1171]
  Rating: 0 (from 0 votes)
 3. ಮೋಹನಣ್ಣ
  Krishnamohana Bhat

  Raghu bhavana haange aanude pengangala bailinge ennondu hosa pengana swagatisutte.mathe sharmappachi helidaange male bandaru baaradru kode eddaru kode elladru kodeyaalakke hoodare eega chendiye.kode adda hidivale kasta aavuttaane bhavayya.Oppangalottinge .

  [Reply]

  VA:F [1.9.22_1171]
  Rating: 0 (from 0 votes)
 4. ರಾಜಾರಾಮ ಸಿದ್ದನಕೆರೆ

  ಅಲ್ಲಯ್ಯಾ ನಾವೆಲ್ಲಾ ಒಂದು ಹದಿನೈದು ವರ್ಷ ಹಿಂದಾಣ ಸ್ಥಿತಿಯ ಗ್ರೆಶಿದರೆ ಈಗ ಅದೆಷ್ಟೋ ಸುಖ ಅಲ್ಲದ !!?
  ನಮ್ಮ ಮಕ್ಕಳ ಕಾಲಕ್ಕೆ ಇನ್ನೂ ಚೆಂದದ ಊರು ನಮ್ಮದಕ್ಕು!!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಎರುಂಬು ಅಪ್ಪಚ್ಚಿವೆಂಕಟ್ ಕೋಟೂರುಚೆನ್ನಬೆಟ್ಟಣ್ಣಚೂರಿಬೈಲು ದೀಪಕ್ಕಡಾಮಹೇಶಣ್ಣಮಂಗ್ಳೂರ ಮಾಣಿಮಾಷ್ಟ್ರುಮಾವ°ಸರ್ಪಮಲೆ ಮಾವ°ದೊಡ್ಡಭಾವಕೇಜಿಮಾವ°ಪೆರ್ಲದಣ್ಣಪೆಂಗಣ್ಣ°ಶೀಲಾಲಕ್ಷ್ಮೀ ಕಾಸರಗೋಡುದೊಡ್ಮನೆ ಭಾವಅಡ್ಕತ್ತಿಮಾರುಮಾವ°ಅಕ್ಷರ°ಪಟಿಕಲ್ಲಪ್ಪಚ್ಚಿಪುಣಚ ಡಾಕ್ಟ್ರುವಿಜಯತ್ತೆಶಾಂತತ್ತೆಬಟ್ಟಮಾವ°ಹಳೆಮನೆ ಅಣ್ಣಅನಿತಾ ನರೇಶ್, ಮಂಚಿನೆಗೆಗಾರ°ವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ