ಈ ವಾರದ ಮುಖ್ಯ ಗಟನೆಗಳ ಬಗ್ಗೆ

February 11, 2011 ರ 2:45 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೆಪ್ಪಣ್ಣನದ್ದು ಅವಾಗಾವಾಗ ರಗಳೆ, ಮಾಡ್ಸು ಎಂತರ. ಗಣಕದ ಹತ್ರ ಕೂಪಲೆ ಪುರುಸೋತ್ತು ಸಿಕ್ಕೆಕ್ಕನ್ನೆ.

ಮೊನ್ನೆ ಸಾಹಿತ್ಯ ಸಮ್ಮೇಳನಕ್ಕೆ ಬಪ್ಪಲಿಲ್ಲೆಯೋ ಕೇಳಿದ. ಆ ದಿನ ಹೋಪಲಾತಿಲ್ಲೆ, ಬಜಗೋಳಿಗೆ ಹೋದ ಕಾರಣ, ಹಾಂಗಾಗಿ ಮರುದಿನ ಹೋದ್ಸು ಒಟ್ಟಿಂಗೆ ಚುಬ್ಬಣ್ಣ ಸಿಕ್ಕಿದ.
ಭಾರತದ ಭರತಂಗೊ ಮೈಮರೆತವೋ ಭಾವ” ಹೇಳಿದ ನೀನು ನೀನು ಹಾಂಗೆ ಆದೆಯಾ?” ಕೇಳಿದ ಅವ°.
ಇಲ್ಲೆಪ್ಪ ಮತ್ತೆ ಬರೆವಲೆ ಶುರು ಮಾಡ್ತೆ‘ ಹೇಳಿತ್ತಿದ್ದೆ.
ಹಾಂಗೆ ಇಂದು ಅದೇ ಶುದ್ದಿಯ ಬರೆವದೋ ಯೋಚಿಸಿ ಹೊರಟರೆ ವಿವರವಾಗಿ ಬರೆವಲೆ ಸಮಯ ಬೇಕು.

ಒಂದೆರಡು ದಿನಲ್ಲಿ ವಿವರವಾದ ಶುದ್ದಿ ಬತ್ತು, ಈಗ ವರ್ತಮಾನದ ಶುದ್ದಿ ಬರೆತ್ತೆ.

ಈಗ ಬೆಂಗಳೂರಿಲಿ ವೈಮಾನಿಕ ಪ್ರದರ್ಶನದ್ದೇ ಶುದ್ದಿ.
ಯೆಡ್ಯೂರಪ್ಪನೊಟ್ಟಿಂಗೆ ಗುಣಾಜೆ ಮಾಣಿ ಮೊನ್ನೆ ಬೆಳಗ್ಗೆಯೇ ಹೋಯಿದ ಉದ್ಘಾಟನೆಗೆ.
ಬಾರಿ ಲಾಯ್ಕಿದ್ದು, ಒಂದೇ ಕೊರತೆ ಒಳ ಹೋಯೆಕ್ಕಾದರೆ ಪೈಸೆ ಕೊಡೆಕ್ಕು. 😉
ಗುಣಾಜೆ ಮಾಣಿ ಈ ಸರ್ತಿ ಬಿಟ್ಟು ಹೋಯಿದ, ಪೆರ್ಲದಣ್ಣ ಹೋಯಿದನಡ. ಅವ° ಹೇಳುಗು ಕತೆಯ.

ಅಲ್ಲಿಂದ ಬಂದಪ್ಪಗ ಸಿಕ್ಕಿತ್ತು ನಮ್ಮ ಗೌಡ್ರ ಪಕ್ಷದ ಶಾಸಕನ ದರೋಡೆ ಮಾಡಿದ್ದ ಹೇಳಿ ಬಂದಿಸುತ್ತವು ಹೇಳ್ತ ಕತೆ. (ಸಂಕೊಲೆ)
ಎಂತಾವುತ್ತೋ ಗೊಂತಿಲ್ಲೆ ನೋಡುವೋ°.

ಇದರೊಟ್ಟಿಂಗೆ ನಮ್ಮ ದೇಶದ ಜಾಗೆಯ ಬಾಂಗ್ಲಾದೇಶಕ್ಕೆ ಕೊಡ್ತ ಯೋಚನೆ ಶುರು ಆಯಿದಡ, (ಸಂಕೊಲೆ)
ಕಾಶ್ಮೀರಲ್ಲಿ ನಮ್ಮ ರಾಷ್ಟ್ರ ಧ್ವಜ ಹಾರುಸುಲೆ ಬಿಡದ್ದವು ಇನ್ನು ಎಂತೆಲ್ಲ ಮಾಡ್ತವೋ°.

ಪೆಂಗಣ್ಣ ಯೇವತ್ತು ಬೇಜಾರ ಮಾಡ್ತವ ಅಲ್ಲ. ಆದರೆ ಮೊನ್ನೆಂದ ಒಂದು ವಿಚಾರಲ್ಲಿ ರಜಾ ಬೇಜಾರು ಆಯಿದು.
ನಮ್ಮತನ ಒಳಿಯೆಕ್ಕು, ನಮ್ಮವು ಮೇಲೆ ಬರೆಕ್ಕು ಹೇಳ್ತದು ಬೈಲಿನ ಆಶಯ.
ಹಾಂಗೆ ಹಾರೈಸಿದ ವ್ಯಕ್ತಿ ಇಂದು ಇನ್ನೊಬ್ಬ ನಮ್ಮ ವ್ಯಕ್ತಿಯ ಕೆಳ ಮಾಡ್ತ ಸ್ಥಿತಿಗೆ ಕಾರಣ ಆದವು ಹೇಳುವಾಗ ಅಪ್ಪದಿದಾ.
ಒಂದು ಮೇರು ಸಂಸ್ಥೆ ಮೇರು ವ್ಯಕ್ತಿಯ ಆಶ್ರಯ ಪಡೆವದು ಸಹಜ. ಆದರೆ ಅದು ಇನ್ನೊಬ್ಬಂಗೆ ತೊಂದರೆ ಅಪ್ಪಲೆ ಆಗ ಇದಾ.
ಒಂದು ವ್ಯವಸ್ಥೆಯ ಮೇರು ವ್ಯಕ್ತಿಯ ಭೀಷ್ಮ ಹೇಳ್ತ ಪರಿಪಾಠ ನಮ್ಮಲ್ಲಿದ್ದು. ಎನ್ನ ಪ್ರಕಾರ ಆ ರೀತಿ ಹೇಳಿಸಿಕೊಂಡರೂ ಅವ° ವ್ಯಕ್ತಿತ್ವಲ್ಲಿ ಧರ್ಮರಾಯನೂ ಆಗಿರೆಡದಾ?
ಮಹಾಭಾರತಲ್ಲಿ ಬಪ್ಪ ಭೀಷ್ಮಂದಲೂ ಶ್ರೇಷ್ಠವಾಗಿ ಕಾಂಬದು ಧರ್ಮರಾಯ ಅಲ್ಲದೋ. ಭೀಷ್ಮ ಕೌರವರ ಪಕ್ಷಲ್ಲಿದ್ದು ಪಾಂಡವರ ಗೆಲುವಿನ ಚಿಂತೆ ಮಾಡಿದ.
ಆದರೆ ಧರ್ಮರಾಯ ಗೆಲ್ಲೆಕ್ಕೂ ಹೇಳಿ ಆದರೂ ಕೌರವರಲ್ಲಿ ಸ್ನೇಹವನ್ನೆ ಬಯಸಿದ. ಅಂತ ಧರ್ಮರಾಯನ ಸ್ಥಾನಲ್ಲಿ ನಾವಿರೆಡದಾ?.

ಒಂದು ವ್ಯವಸ್ಥೆ ಗೆಲ್ಲೆಕ್ಕಾದರೆ ಆ ವ್ಯವಸ್ಥೆಲಿಪ್ಪವೆಲ್ಲ ತಂಡವಾಗಿ ಕೆಲಸ ಮಾಡೆಕ್ಕು. ವ್ಯವಸ್ಥೆಯ ಭಾಗವಾಗಿಪ್ಪ ಮುಖ್ಯ ತಂಡ ಅಲ್ಲಿಂದ ಹೆರ ಹೋಗಿಯಪ್ಪಗ ಆ ವ್ಯವಸ್ಥೆಯ ಉಳಿಸಿ ಬೆಳೆಶುದು ಅಷ್ಟು ಸುಲಭ ಅಲ್ಲ.
ಅಂತ ಸಂದರ್ಭಲ್ಲಿ ಆ ವ್ಯವಸ್ಥೆಯ ಬೆಳೆಶಿದವಂಗೆ ಕೈಕೊಟ್ಟು, ಒಬ್ಬ ಮೇರು ವ್ಯಕ್ತಿಯ ತಂದು ಕೂರಿಸಿದರೆ ಎಂತಕ್ಕು ಆ ವ್ಯಕ್ತಿಗೆ?
ಯಾಕೆ ಈ ಕಳಕಳಿ ಹೇಳಿಯೋ?
ಆ ಮೇರು ವ್ಯಕ್ತಿಯ ಬಗ್ಗೆ ಹೆಚ್ಚಿಗೆ ಗೊಂತಿಲ್ಲದ್ದರೂ ಸಾಮಾನ್ಯ ಜೆನ ನಮ್ಮ ಅಳತೆ ಮಾಡಿಯಪ್ಪಗ ಹೇಂಗೆ ಹೇಳುತ್ತವೋ ಹಾಂಗಿಪ್ಪ ಎನ್ನ ಅಭಿಪ್ರಾಯದ ಪ್ರಕಾರ, ಅವ° ಉತ್ತಮ ಕಸುಬುಗಾರ.
ತಂಡ ಸದಸ್ಯರೆಲ್ಲರ ಒಟ್ಟಿಂಗೆ ತೆಕ್ಕೊಂಡೋಪಲ್ಲಿ ರಜಾ ಹಿಂದೆ ಅನುಸುತ್ತು. ಆದರೆ ಆನು ಹೇಳ್ತ ವ್ಯಕ್ತಿ, ಸಣ್ಣಗಾಗಿಪ್ಪಗಿಂದಲೂ ತಂಡ ಸ್ಪೂರ್ತಿಲಿ ಬೆಳೆದವ°.
ಸ್ವತಹ ಒಬ್ಬ ಆ ವ್ಯವಸ್ಥೆಯ ಮಟ್ಟಿಗೆ ನಮ್ಮ ರಾಜ್ಯವ ಪ್ರತಿನಿಧಿಸಿದ ಆಟಗಾರ.
ಆಟದ ಎಲ್ಲಾವಿಭಾಗಲ್ಲೂ ಸೈ ಎನಿಸಿಕೊಂಡವ. ತಂಡದ ಎಲ್ಲೋರಿಂಗೂ ಪ್ರೋತ್ಸಾಹ ಕೊಟ್ಟು ಅವರ ಬೆಳವಣಿಗೆಲಿ ಕುಶಿ ಕಂಡವ. ಇದೆಷ್ಟು ಸರಿ. ಇನ್ನೂ ಹಲವು ಕಾರಣಂಗೊ ಇದ್ದು.

ಮೊದಲು ನಮ್ಮೂರಿನ ಎಂಡೋಸಲ್ಪಾನ್ ನಂತಹ ವಿಶ್ಯಂಗೋ ಚರ್ಚೆಗೆ ಬತ್ತಿತ್ತಿಲ್ಲೆ.
ಅಂತ ಹತ್ತು ಹಲವು ವಿಚಾರಂಗಳ ಬೆಳಕಿಗೆ ತಂದು ವ್ಯವಸ್ಥೆಯ ಬೆಳೆಶಿದ ಅವ° ಇಲ್ಲಿ ಮಾಂತ್ರ ಸೋತ.
ವ್ಯವಸ್ಥೆಯ ಮುಖ್ಯಸ್ಥರ ನಿಲುವಿಂದ. ಅದೂ ನಮ್ಮದೇ ವ್ಯಕ್ತಿಗೋಸ್ಕರ. ಹಾಂಗಾಗಿ ಬೇಜಾರ ಆದ್ದು.
– ಇದು ಆರ ಬಗ್ಗೆ ಹೇಳಿದ್ದು ಹೇಳಿ ನಿಂಗೊಗೆ ಗೊತ್ತಾತ? ಆದರೆ ಹೇಳಿ.

~
ಪೆಂಗಣ್ಣ ಪ್ರಮ್ ಬೈಲು.
bingi.penga@gmail.com

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶಿವನೆ ಬಲ್ಲ ….!!!!!!!

  ಎಲ್ಲ ವಿಶ್ವೇಶ್ವರನ ಮಹಿಮೆ… ನಿಂಗೋ ಎಂತ ಹೇಳ್ತಿ

  [Reply]

  VA:F [1.9.22_1171]
  Rating: 0 (from 0 votes)
 2. ಬೋಸ ಬಾವ
  ಬೋಸ...

  ಉಮ್ಮಪ್ಪಾ…!!
  ಹೀ೦ಗೆಲ್ಲಾ ಹೇಳಿರೆ ನವಗರಡ್ಯ… :(

  [Reply]

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಪೆ೦ಗಣ್ನನ ವಿಮರ್ಶೆ ನಿಜ.ಪ್ರಚಾರದ ಆಸಕ್ತಿಯಿಲ್ಲದ್ದೆ ಒ೦ದು ವೆವಸ್ಥೆಯ ಹೊಸ ಎತ್ತರಕ್ಕೆ ತ೦ದ ಜೆನವ ಗುರುತಿಸದ್ದದು ಆಶ್ಚರ್ಯ ತತ್ತು.ಮು೦ದೆ ನೋಡುವ,ವೆತ್ಯಾಸ ಗೊ೦ತಕ್ಕನ್ನೆ.

  [Reply]

  VA:F [1.9.22_1171]
  Rating: 0 (from 0 votes)
 4. ಒಪ್ಪಣ್ಣ

  ಪೆಂಗಣ್ಣಾ..
  ಈಗಾಣ ಒರ್ತಮಾನಂಗಳ ನಿನ್ನದೇ ಆದ ರೀತಿಲಿ ವಿಮರ್ಶೆ ಮಾಡಿಗೊಂಡು, ಒಳ್ಳೆ ಶುದ್ದಿ ಹೇಳಿದ್ದೆ.

  ಒಬ್ಬನ ತಪ್ಪಗ ಇನ್ನೊಬ್ಬನ ಮುಳುಗುಸುದು ಈಗಾಣ ಸ್ಪರ್ಧಾತ್ಮಕ ಜಗತ್ತಿಲಿ ಸಹಜವೇ, ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ದೇವಸ್ಯ ಮಾಣಿಪೆಂಗಣ್ಣ°ಪೆರ್ಲದಣ್ಣಪುತ್ತೂರುಬಾವಸಂಪಾದಕ°ಡಾಗುಟ್ರಕ್ಕ°ಶೇಡಿಗುಮ್ಮೆ ಪುಳ್ಳಿಸರ್ಪಮಲೆ ಮಾವ°ಶ್ಯಾಮಣ್ಣವಿದ್ವಾನಣ್ಣಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆಶಾಂತತ್ತೆಯೇನಂಕೂಡ್ಳು ಅಣ್ಣಅನಿತಾ ನರೇಶ್, ಮಂಚಿಬಂಡಾಡಿ ಅಜ್ಜಿದೀಪಿಕಾಚೆನ್ನಬೆಟ್ಟಣ್ಣಕಾವಿನಮೂಲೆ ಮಾಣಿದೊಡ್ಮನೆ ಭಾವಪುತ್ತೂರಿನ ಪುಟ್ಟಕ್ಕಶಾ...ರೀಸುಭಗಬೊಳುಂಬು ಮಾವ°ಅಡ್ಕತ್ತಿಮಾರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ