Oppanna.com

ರಾಮಕಥಾ – ನಾಲ್ಕನೇ ದಿನ

ಬರದೋರು :   ಪೆಂಗಣ್ಣ°    on   31/01/2012    7 ಒಪ್ಪಂಗೊ

ಪೆಂಗಣ್ಣ°

ಹರೇ ರಾಮ

ನಿನ್ನೆ ಮೊನ್ನೆಯಾಂಗೆ ಎಲ್ಲೋರನ್ನೂ ಕೇಳಿಯೊಂಡು ಕಾರ್ಯಕ್ರಮದ ವರದಿಯ ಒಪ್ಪುಸುತ್ತೆ. ಕಥಾಪರ್ವ ಶುರುವಪ್ಪಲೆ ರಜಾ ಹೊತ್ತು ಇದ್ದಿದ್ದರಿಂದ ಶ್ರೀಧರಣ್ಣನ ವೀಣಾವಾದನಕ್ಕೆ ಗೋಪಾಲಣ್ಣನ ತಬಲಾ ಎಲ್ಲರ ಕುಶಿ ಪಡಿಸಿತ್ತು. ಒಟ್ಟಿಂಗೆ ಸಂಘಟಕರು ಎಲ್ಲೋರಿಂಗು ಒಂದು ಪತ್ರ ಕೊಟ್ಟು ಬಂದವರದ್ದು ಮಾಹಿತಿಯ ತುಂಬಿ, ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ಬರದು, ಒಟ್ಟಿಂಗೆ ಕೊಟ್ಟ ಕವರಿಲಿ ಹಾಕಿ ರಾಮಕಥಾ ಸೇವಾ ದೇಣಿಗೆ ಕೊಡುತ್ತ ಮನಸ್ಸಿಪ್ಪವು ಅದನ್ನೂ ಹಾಕಿ ಕೊಡುಲಕ್ಕು ಹೇಳಿದವು. ಗುರುಸೇವಕರು ಆ ವ್ಯವಸ್ಥೆಯ ಅಚ್ಚು ಕಟ್ಟಾಗಿ ಮಾಡಿದವು.

ಮುಂದೆ ಏವತ್ತಿನ ಹಾಂಗೆ ಶ್ರೀಗುರುಗಳ ಆಗಮನಂದ ಶ್ರೀರಾಮ ಪದ್ಯದೊಟ್ಟಿಂಗೆ ಶ್ರೀಗುರುಕರಾರ್ಚಿತ ಪೂಜೆಯೊರೇಗೆ ನಡದತ್ತು. ಮುಂದೆ ವಿದ್ವಾನಣ್ಣ ಇಂದ್ರಾಣ ಕಥೆಯ ಬಗ್ಗೆ ಹೇಳ್ತಾ.. “ನಾವು ಈ ಕಾರ್ಯಕ್ರಮದ ಆದಿಮಂಗಲದ ಹೊಸ್ತಿಲಿಲಿದ್ದು. ಹೇಳಿರೆ ನಾಳೆ ಕಥೆ ಮುಕ್ತಾಯ ಆವುತ್ತು. ರಾಮಕಥೆಲಿ ಬದುಕಿಗೆ ಬೇಕಾದ್ದು ಎಲ್ಲಾ ಇದ್ದು.  ರಾಮಾಯಣ ಗ್ರಂಥ ನವರಸಂಗಳಲ್ಲಿ ಎಲ್ಲವನ್ನೂ ಒಳಗೊಂಡಿದ್ದು, ಹೀಂಗಿಪ್ಪ ಗ್ರಂಥಂಗೊ ಭಾರತಲ್ಲಿ ಅಲ್ಲದ್ದೆ ಬೇರೆಲ್ಲೂ ಕಾಣ್ತಿಲ್ಲೆ. ವಾಲ್ಮೀಕಿ ಮಹರ್ಷಿಗೋ 24000 ಶ್ಲೋಕಂಗಳಲ್ಲಿ ಸೂಕ್ಷ್ಮವಾಗಿ ಹೇಳಿದ್ದರ ಹಿಂದೆ ಮುಂದಾಣಾದ್ದು ಸೇರುಸಿ ಇಲ್ಲಿ ವಿಸ್ತಾರವಾಗಿ ಹೇಳ್ತವು ಗುರುಗೊ. ಇಲ್ಲಿ ಹೇಳುವ ಕಥೆ ರಾಮಾಯಣ ಗ್ರಂಥದಮೊದಲ ಪುಟಂದಲೂ ಹಿಂದಾಣಾದ್ದು. ಈ ಕಥೆ ರಾವಣ ಕುಂಭಕರ್ಣರು ಮೊದಲು ಹಿರಣ್ಯಾಕ್ಷ, ಹಿರಣ್ಯಕಶ್ಯಪ, ಜಯವಿಜಯರಾಗಿದ್ದ ಕಥೆ” ಹೇಳ್ತ ವಿವರಣೆ ಕೊಟ್ಟಿಕ್ಕಿ, ಕಥೆ ಹೇಳ್ತ ಸಮಯಲ್ಲಿ ಕಲಾ ಪ್ರಾಕಾರಂಗಳಲ್ಲಿ ಸಹಾಯ ಮಾಡ್ತ ಎಲ್ಲೋರನ್ನು ಪರಿಚಯ ಮಾಡಿಕೊಟ್ಟವು. ಮುಂದೆ ಯೇವತ್ತಿನಾಂಗೆ ‘ಗುರುವರಾ ಕರುಣಾಸಾಗರ’ ಹೇಳ್ತ ಪದ್ಯದೊಟ್ಟಿಂಗೆ ಗೆಣವತಿ, ಮಹಾಬಲೇಶ್ವರನ ಸ್ಮರಣೆ ಮಾಡುವಾಗ, ನೀರ್ನಳ್ಳಿ ಮಾವ° ಹನುಮ ಲಕ್ಷ್ಮಣ ಸಹಿತ ಸೀತಾರಾಮಚಂದ್ರರ ಚಿತ್ರ ಬಿಡುಸಿದವು.

‘ಹರೇ ರಾಮ’ ಹೇಳಿ ಪ್ರವಚನ ಶುರುಮಾಡಿದ ಗುರುಗೊ ಭಗವಂತ ಎನ್ನ ಒಟ್ಟಿಂಗೆ ಇರೆಕ್ಕು ಹೇಳಿ ಕೇಳಿಯೊಂಡ ಭಕ್ತನ ಕಥೆ ಹೇಳಿದವು. ಆ ಕಥೆಲಿ ಈ ಕಾರ್ಯಕ್ರಮಲ್ಲಿ ಹೇಳುವ ನಾಲಗೆಯೂ ಕೇಳುವ ಕಿವಿಯೂ ರಾಮನಾಗಿರೆಕ್ಕು. ಹಾಂಗಾರೆ ಮಾತ್ರ ಈ ಕಾರ್ಯಕ್ರಮ ಸಾರ್ಥಕ ಅಕ್ಕಷ್ಟೇ ಹೇಳಿದವು. ಜಯವಿಜಯರಲ್ಲಿದ್ದ ‘ಆನು’ ಹೇಳ್ತ ಭಾವನೆಯ ಬಗ್ಗೆ ಹೇಳುವಾಗ ‘ಬಂಧನ’ ಹೇಳಿರೆಂತ ‘ಮೋಕ್ಷ’ ಹೇಳಿರೆಂತ ಹೇಳುದಕ್ಕೆ ಅಷ್ಟಾವಕ್ರರು ಎಂಟು ಅಕ್ಷರಲ್ಲಿ ಹೇಳಿದ “ಯದಾನಾಹಂ ತದಾ ಮೋಕ್ಷ” (ನಾನು ಹೇಳುದು ಇಲ್ಲದಿದ್ದರೆ ಮೋಕ್ಷ), “ಯದಾಹಂ ಬಂಧನಂ ತದಾ” (ನಾನು ಹೇಳುದೇ ಬಂಧನ) ಹೇಳುವದರೊಟ್ಟಿಂಗೆ ಕನಕದಾಸರು ಗುರುಕುಲಲ್ಲಿ ಹೇಳಿದ ಸಾಲು ‘ನಾನು ಹೋದರೆ ಹೋದೇನು’ ಹೇಳ್ತದರನ್ನೂ ನೆಂಪು ಮಾಡಿದವು. ಕಥೆ ಮುಂದುವರೆಸಿ ಜಯವಿಜಯರಿಂಗೆ ಮುಕ್ತಿ ಸಿಕ್ಕಿತ್ತು ಹೇಳಿ ಹೇಳುವಾಗ ಒಂದು ಉದಾಹರಣೆ ಕೊಟ್ಟವು. ಮಕ್ಕೋ ಜಿಲೇಬಿ ತಿನ್ನೆಕ್ಕು ಹೇಳಿ ಹಠ ಮಾಡಿರೆ ಒಂದು ರಾಶಿ ಜಿಲೇಬಿ ತಂದು ಕೊಟ್ಟು ತಿನ್ನದ್ದೆ ಏಳುಲಿಲ್ಲೆ ಹೇಳಿ ಹೇಳಿರೆ ಮುಂದೆ ಅವು ಎಂದಿಗೂ ಜಿಲೇಬಿ ತಿನ್ನವು. ಹಾಂಗೆ ಈ ಜಯವಿಜಯರಿಂಗೂ ಅವರ ಮನಸ್ಸಿಲಿಪ್ಪ ರೋಷ ದ್ವೇಷ ತೀರುವಲ್ಲಿವರೇಗೆ ಜಗಳ ಮಾಡ್ಳೆ ಬಿಟ್ಟು ಮತ್ತೆ ಮುಕ್ತಿ ಕೊಟ್ಟವು. ಜಗತ್ತಿಂಗೆ ಸದ್ಗತಿ ಕೊಟ್ಟವು. ಇದೆಲ್ಲ ಹರಿಯ ಮಹಿಮೆ ಹೇಳಿದವು. ಆಷ್ಟಪ್ಪಗ ಪ್ರೇಮಕ್ಕ° “ಕುಲುಮೆಯೊಳಗಿಟ್ಟು ಕೆಂಪಗೆ ಸುಟ್ಟು” ಹೇಳ್ತ ಪದ್ಯ ಹೇಳಿರೆ ನೀರ್ನಳ್ಳಿ ಮಾವ° ಚಿತ್ರ ಬಿಡುಸಿದವು.

ದಾನವ-ಮಾನವ-ಮಾಧವ. ಇವು ಜೀವನದ ಮೂರು ಅವಸ್ಥೆಗೊ. ಯಾರು ದಾನವರಿಂದ ಮಾನವರಾವುತ್ತವೊ ಅವಕ್ಕೆ ಮುಕ್ತಿ ಸಿಕ್ಕಿ ಮಾಧವರಾವ್ತವು. ವೈಕುಂಠ ಹೇಳಿರೆ ಯಾವುದಕ್ಕೂ ತಡೆ ಇಲ್ಲದ್ದು ಹೇಳಿ ಅರ್ಥವೂ ಹೇಳಿದವು. ಜಯವಿಜಯರು ವೈಕುಂಠ ಕಂಡಪ್ಪಗ ಅವರ ಮನಸ್ಸಿಲಿ ಬಂದಂಥಾ ಭಾವನೆಯ ವಿವರಿಸುವ ಪದ್ಯ “ಇಷ್ಟು ದಿನ ಈ ವೈಕುಂಠ”ವ ಪ್ರೇಮಕ್ಕ° ಹಾಡಿರೆ ಚಿತ್ರ ನಾಟ್ಯವೂ ಇತ್ತು. ವೈಕುಂಠವ ವರ್ಣನೆ ಮಾಡ್ತಾ, ಅದು ಕ್ಷೀರ ಸಾಗರ. ಅಲ್ಲಿ ವಾತ್ಸಲ್ಯ ತುಂಬಿ ತುಳುಕುತ್ತು. ಇಲ್ಲಿ ವಾತ್ಸಲ್ಯ ಹೇಳಿರೆ ಕರುವಿಗಾಗಿ ದ್ರವಿಸುವ ಭಾವ. ಕರಗಿ ನೀರಪ್ಪ ಭಾವ. ಅದೇ ಕ್ಷೀರಸಾಗರ ಹೇಳಿರೆ ಅನಂತ ವಾತ್ಸಲ್ಯ. ವೈಕುಂಠದ ಬಗ್ಗೆ ಇಪ್ಪ ಮಧುರಾಷ್ಟಕದ ಕಥೆ ನೆನಪು ಮಾಡಿಗೊಂಡವು. ಇದರ ಎರಡೇ ಶಬ್ದಲ್ಲಿ ಹೇಳ್ತರೆ ಸರ್ವಂ ಮಧುರಂ ಹೇಳಿ ಹೇಳಿದವು.

ಈ ಹಸಿವು ಹೇಳ್ತದು ಭೂಮಿಲಿ ಮಾತ್ರ ಇಪ್ಪದು. ಅದು ವೈಕುಂಠಲ್ಲಿ ಇಲ್ಲೆ. ಇಲ್ಲಿಪ್ಪ ಒಬ್ಬೊಬ್ಬಂಗೂ ಒಂದೊಂದು ಹಸಿವು.. ಕೇವಲ ಹೊಟ್ಟೆ ಹಸಿವು ಮಾತ್ರ ಅಲ್ಲ ವಿಧವಿಧವಾದ ಹಸಿವು. ಹೊಟ್ಟೆ ಹಸಿವಿನ ಬಗ್ಗೆ ಹೇಳುದಾದರೆ ಎರಡೊತ್ತು ಉಂಡವ° ಯೋಗಿ ಮೂರೊತ್ತು ಉಂಡವ° ಭೋಗಿ ಅದಕ್ಕಿಂತ ಹೆಚ್ಚು ತಿಂದವ° ರೋಗಿ. ಆದರೆ ಕೆಲವು ಅಪಭ್ರಂಶಂಗಳೂ ಇದ್ದು. ಉದಾಹರಣೆಗೆ ಒಬ್ಬ° ಮುನ್ನೂರು ಹೋಳಿಗೆ ತಿಂಬವನ ವಿದೇಶಿ ಸರ್ಕಸ್ಸು ಕಂಪೆನಿಯವ ಕರಕ್ಕೊಂಡು ಹೋವ್ತವು. ಹೋಳಿಗೆ ತಿಂಬ ಪ್ರದರ್ಶನಲ್ಲಿ ಅವಂಗೆ ಇನ್ನೂರೆ ತಿಂಬಲೆಡಿಗಾದ್ದು, ಏಕೆ ಎಡಿಗಾತಿಲ್ಲೆ ಕೇಳಿರೆ ಈಗ ರಜಾ ಹೊತ್ತಿನ ಮೊದಲು ತಿಂದಿತ್ತಿದ್ದೆ, ಈಗ ಏಕೋ ಎಡಿತ್ತಿಲ್ಲೆ ಹೇಳಿ ಹೇಳಿದ ಕಥೆಯ ವಿವರಿಸಿದವು. ವೈಕುಂಠ ಹೇಳಿರೆ ಅದು ಕ್ಷೀರಸಾಗರ. ಕ್ಷೀರ ಹೇಳಿರೆ ಹಾಲು. ಹಾಲು ಹೇಳಿರೆ ಅದೊಂದು ಬೆಸುಗೆ. ಮೆಶಿನಿಲಿ ಹಾಲು ಕರೆವದು ಮನುಷ್ಯರು ಮಾಡ್ತ ಕೆಲಸ ಅಲ್ಲ. ಕಂಜಿಯ ನೋಡಿ ಗೋವು ಅದಾಗಿಯೆ ಸೊರುಶೆಕ್ಕು. ವೈಕುಂಠಲ್ಲಿಯೂ ಇಪ್ಪದು ಆ ಒಂದೇ ಭಾವ. ಅದು ಮಧುರ ಭಾವ. ಅಲ್ಲಿ ಕ್ಷೀರಸಾಗರ. ಎಷ್ಟೋ ವರ್ಷಂದ ಹರಿತ್ತಾ ಇದ್ದು. ಅಲ್ಲಿ ಹಾಲು ಹಾಳಾಯಿದಿಲ್ಲೆ. ಏಕೆ ಹೇಳಿರೆ ಅಲ್ಲಿ ಹುಳಿ ಹಿಂಡುವವು ಇಲ್ಲೆ ಹೇಳಿ ವ್ಯಂಗ್ಯವನ್ನೂ ಸೇರ್ಸಿಯೊಂಡವು. ಆ ಕ್ಷೀರಸಾಗರವ ವರ್ಣಿಸುವ ಪದ್ಯ- ” ಆ ಗೋಮಾತೆ ಮಮತೆ ಸತತ ನೊರೆತ ಸಾಗರ, ಜಗತ್ಪಿತನ ಕರುಣೆ ಕರಗಿ ಕಲೆತ ಸಾಗರ”ವ ಪ್ರೇಮಕ್ಕ° ಹಾಡಿದವು ಒಟ್ಟಿಂಗೆ ನೃತ್ಯ ಚಿತ್ರವೂ ಇತ್ತು. ಆ ಕ್ಷೀರಸಾಗರ ಸಾವಿರಾರು ಗೋವುಗಳ ಹಾಲಲ್ಲ. ಕಾಮಧೇನು ಒಂದರ ಹಾಲು. ಅದೇ ಕ್ಷೀರಸಾಗರ – ಅದೇ ವೈಕುಂಠ. ಆ ಗೋಮಾತೆಯ ಕಂಡು ರಾವಣನ ವ್ಯಾಘ್ರ ಹೃದಯವೇ ಕರಗಿ ನೀರಾಯಿದು. ಆದರೆ, ಈಗಾಣ ರಾವಣರ ಹೃದಯ ಕರಗಿರೆ ದೇಶ ಉದ್ಧಾರ ಅಕ್ಕು ಹೇಳ್ತ ಇಂದಿನ ವಾಸ್ತವಿಕತೆಯ ಬಗ್ಗೆಯೂ ಹೇಳಿದವು. ಜೈಜೈ ಗೋಮಾತಾ ಜೈಜೈ ಗೋಮಾತಾ ಹೇಳಿ ಗೋಮಾತೆಗೆ ಜೈಕಾರ ಹಾಕಿಸಿಕ್ಕಿ ಮುಂದುವರೆಶಿದವು. ಗೋಮಾತೆಯ ಕಡಿವಲೆ ಬಂದಪ್ಪಗ ಸಾಕ್ಷಾತ್ ಶ್ರೀನಿವಾಸನೇ ತನ್ನ ತಲೆ ಒಡ್ಡುತ್ತ°. ಅಂಬಗ ಆ ಕತ್ತಿ ತಾಗಿದ ಜಾಗೆಲಿ ಶ್ರೀನಿವಾಸಂಗೆ ಕೂದಲು ಬೈಂದಿಲ್ಲೆ. ಆದಕಾರಣ ಇಂದಿಗೂ ನಾವು ತಿಮ್ಮಪ್ಪಂಗೆ ಮುಡಿ ಅರ್ಪಣೆ ಮಾಡುದು ಹೇಳಿ ವಿವರಿಸಿದವು.

ಹರಿಯ ಅವತಾರಂಗಳಲ್ಲಿ ರಾಮ-ಕೃಷ್ಣ ಅವತಾರಂಗೋ ಪ್ರಮುಖವಾದ್ದು. ಇಲ್ಲಿ ಕೃಷ್ಣ ಗೋಪಾಲ° ಆದರೆ ರಾಮ ಭೂಪಾಲನಾದ. ಆದರೆ ಗೋವಿನ ನಡುವಿನ ಸಂಬಂಧ ರಾಮಂಗೆ ಕೃಷ್ಣಂದಲೂ ಹೆಚ್ಚಿತ್ತು. ಏಕೇಳಿರೆ ಕೌಸಲ್ಯೆ ಪಾಯಸ ಕುಡುದ ಕಾರಣ ರಾಮ ಹುಟ್ಟಿದ್ದು. ಪಯಸ್ ಹೇಳಿರೆ ಹಾಲು. ಪಾಯಸಲ್ಲಿ ಪ್ರಮುಖ ಅಂಶ ಹಾಲು. ಆದಕಾರಣ ರಾಮನ ಶರೀರ ಹಾಲಿಂದ ನಿರ್ಮಾಣ ಆದ್ದು ಹೇಳಿಕ್ಕಿ ವಾಪಾಸು ಜೈಜೈ ಗೋಮಾತಾ ಹಾಡ್ಸಿದವು. ಗೋವು ಎಲ್ಲೆಲ್ಲಿಯೂ ಇದ್ದು ಹೇಳ್ತ ಸೃಷ್ಟಿಕರ್ತನ ಮೂಲ ಕ್ಷೀರಸಾಗರ. ಅಲ್ಲಿ ಹರಿ ಇದ್ದ ಹಾಂಗೇ ರುದ್ರನೂ ನಂದಿವಾಹನ, ನಂದಿ ಧ್ವಜದ ಮಧ್ಯೆ ಇರ್ತ. ನಂದಿ ಕಾಮಧೇನುವಿನ ಮಗ. ಹಾಂಗಾದ ಕಾರಣ ಸೃಷ್ಟಿ, ಸ್ಥಿತಿ, ಲಯ ಮೂರರಲ್ಲಿಯೂ ಕಾಮಧೇನು ಇದ್ದು. ಗೋಮಾತೆ ಇದ್ದು ಹೇಳ್ವಾಗ “ಮೊರೆಯಿತು ತುಂಬಿ ಕ್ಷೀರ ಸಾಗರವು ಕರೆಯಲು ಸೊರೆತು ಸುಧೆ ಸೊಂದೇನು” ಪದ್ಯಕ್ಕೆ ನಾಟ್ಯ ಚಿತ್ರವೂ ಇತ್ತು.

ಹಾಂಗೇ ಇನ್ನೊಬ್ಬ° ಆದಿಶೇಷ. ಹರಿ ಎಲ್ಲೋರನ್ನೂ ಆವರಿಸಿ ಅತ್ಯಂತ ಎತ್ತರಲ್ಲಿಪ್ಪವ°. ಆದರೆ ಹರಿಂದಲೂ ಎತ್ತರಲ್ಲಿ ಇಪ್ಪದು ಆದಿಶೇಷ. ಪಾತಾಳಲ್ಲಿ ನಿಂದು, ಭೂಮಿಯ ಹೊತ್ತದ್ದು ಆದಿಶೇಷನೇ. ರಾಮಾಯಣಲ್ಲಿ ರಾಮನ ತಮ್ಮ ಲಕ್ಷ್ಮಣನಾಗಿ ಹುಟ್ಟಿದ್ದು ಆದಿಶೇಷ°. ನಮ್ಮ ಎಲ್ಲಾ ದೇವರುಗೊಕ್ಕುಈ ಸರ್ಪಕ್ಕೂ ವಿಶೇಷವಾದ ನಂಟಿದ್ದು. ವಿಷ್ಣು ಶೇಷಶಯನ, ಶಿವ° ರುದ್ರ ಕೊರಳಿಲಿ ಸರ್ಪವ ಧರಿಸಿದವ°. ಆದರೆ ದುರ್ಗೆಯೊಟ್ಟಿಂಗೆ ಮಾತ್ರ ಸರ್ಪ ಇಲ್ಲೆ. ಏಕೇಳಿರೆ ಆ ದುರ್ಗೆಯೆ ಆ ಶಕ್ತಿ. ಕುಂಡಲಿನೀ ಶಕ್ತಿ ಹೇಳಿ ಆದಿಶೇಷನ ವರ್ಣನೆ ಮಾಡಿದವು. ಹಾಂಗೇ “ಸಕಲ ಕಷ್ಟ ಭಾರವನ್ನೂ ಹರಿಯೊಡಲು ಹೊತ್ತಿದೆ.. ಶೇಷ ದೇಹ ಹರಿ ಶರೀರ ಹೊತ್ತು ಧನ್ಯವೆನಿಸಿದೆ” ಹೇಳ್ತ ಪದ್ಯಕ್ಕೆ ನೃತ್ಯ ಚಿತ್ರ ಇತ್ತು. ವೈಕುಂಠ ಹೇಳ್ತದು ಸಹಬಾಳ್ವೆಯ, ಅಹಿಂಸಾ ತತ್ವವ ಹೇಳ್ತು. ಅಲ್ಲಿ ಗರುಡ, ಶೇಷ ಒಟ್ಟಿಂಗೆ ಇದ್ದರೂ ಅವು ಒಬ್ಬಂದೊಬ್ಬ ದ್ವೇಷಿಸುತ್ತಿದ್ದಿದ್ದವಿಲ್ಲೆ. ಏಕೇಳಿರೆ ಅವರಿಬ್ಬರ ಕಣ್ಣುದೇ ಹರಿಯ ಮೇಲಿರ್ತು. ಅವು ಒಬ್ಬೊಂದೊಬ್ಬ ನೋಡಿಗೊಳ್ತವಿಲ್ಲೆ. ಅಲ್ಲಿ ಸಹಬಾಳ್ವೆ ಇತ್ತು ಹೇಳಿದವು.

ಜಯ ವಿಜಯರು ವೈಕುಂಠಲ್ಲಿ ಎಲ್ಲವನ್ನೂ ನೋಡ್ತಾ ಇಪ್ಪಗ ಅವಕ್ಕೆ ಲಕ್ಷ್ಮಿಯ ಕಾಣ್ತು. ಅಲ್ಲಿಪ್ಪ ಐಶ್ವರ್ಯ ರಾಶಿ ಕಾಂಬಗ ಮರುತ್ತ ರಾಜನ ಹವನಲ್ಲಿ ನಾವು ಜಗಳ ಆಡಿದ್ದು ಕೇವಲ ಇದರ ಒಂದು ಸಣ್ಣ ಹನಿಗಾಗಿ ಹೇಳ್ತ ಅರಿವಾವುತ್ತು. ಇದರ ಹೇಳುವಾಗ ‘ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಮ್’ ಹೇಳ್ತ ಶ್ಲೋಕವ ನೆಂಪು ಮಾಡಿಯೊಂಡವು . ಪ್ರೇಮಕ್ಕ° ಅದರ ಹಾಡಿದವು. ಅದ್ವಿತೀಯ ಹೇಳಿರೆ  ಹರಿಯ ಸಾಮ್ರಾಜ್ಯಲ್ಲಿ ದ್ವಿತೀಯ ಸ್ಥಾನ ಲಕ್ಷ್ಮೀದು. ಆ ಲಕ್ಷ್ಮೀ ಅಲ್ಲಿ ಮಾ ಹೇಳಿರೆ ಅಮ್ಮ, ಆದರೆ ಇಲ್ಲಿ ಮಾಯೆ . ಭಗವಂತನ ಗುರುತು ಲಕ್ಷ್ಮೀ. ನಾವು ಅನುಭವಿಸುವ ಸುಖ ನಾರಾಯಣ, ಆದರೆ ಅದರ ಸಾಧನ ಲಕ್ಷ್ಮೀ.. ಹೇಳಿ ಹೇಳುವಾಗ ಲಕ್ಷ್ಮಿಯ ವರ್ಣನೆ ಮಾಡುವ ಪದ್ಯ “ಏನು ಧನ್ಯಳೋ ಲಕುಮಿ ಎಂತ ಮಾನ್ಯಳೋ.. ” ಹೇಳ್ತ ಪದ್ಯವ ಪ್ರೇಮಕ್ಕ° ಹಾಡಿದವು. ನೀರ್ನಳ್ಳಿ ಮಾವ° ಚಿತ್ರ ಬಿಡುಸಿದವು. ಜೀವಿಗೊಕ್ಕೆ ಕೊನೆ ಕಾಲಲ್ಲಿ ಗತಿ ಯಾರೋ ಅವನೇ ನಾರಾಯಣ ಅವನೇ ಹರ°, ಅವನೇ ವೈಕುಂಠದ ಅಧಿಪತಿ. ಕ್ಷೀರಸಾಗರದಧಿಪತಿಹೇಳಿ “ಕ್ಷೀರಸಾಗರತರಂಗ” ಹೇಳ್ತ ಶ್ಲೋಕವ ನೆಂಪು ಮಾಡಿಯೊಂಡವು. ಅದರ ಒಟ್ಟಿಂಗೆ ‘ಭೂಪಾsರೋಯಸ್ಯನಾಭೇ’ ಹೇಳ್ತ ಶ್ಲೋಕವನ್ನೂ ಹಾಡಿದವು.

ಮುಕ್ತಿಲಿ ಐದು ವಿಧ. ಸಾಲೋಕ್ಯ, ಸಾಮಿಪ್ಯ, ಸಾರ್ಷ್ಠಿ, ಸಾರೂಪ್ಯ, ಸಾಯುಜ್ಯ. ಸಾಲೋಕ್ಯ – ಭಗವಂತನ ಲೋಕಲ್ಲಿಪ್ಪಲೆ ಒಂದು ಅವಕಾಶ, ಸಾಮೀಪ್ಯ -ಭಗವಂತನ ಹತ್ತರೆ ಇಪ್ಪ ಅವಕಾಶ, ಸಾರ್ಷ್ಠಿ – ಭಗವಂತ ಅವನ ಐಶ್ವರ್ಯ ಎಲ್ಲವನ್ನೂ ಕೊಡ್ತ°, ಸಾರೂಪ್ಯ – ಅವನ ರೂಪವನ್ನೇ ಭಗವಂತ ನವಗೆ ಕೊಡ್ತ°, ಸಾಯುಜ್ಯ -ಹೇಳೀರೆ ಭಗವಂತನಲ್ಲಿ ಒಂದಪ್ಪದು. ಅದರಲ್ಲಿ ಜಯವಿಜಯರಿಂಗೆ ಸಿಕ್ಕಿದ್ದು ನಾಲ್ಕನೇ ಹಂತದ ಸಾರೂಪ್ಯ ಮುಕ್ತಿ. ಶಬರಿಗೆ ಸಿಕ್ಕಿದ್ದು ಸಾಮೀಪ್ಯ, ಕೆಲವುಸರ್ತಿ ಸಾರೂಪ್ಯಲ್ಲಿ ಪತನ ಅಪ್ಪ ಸಾದ್ಯತೆ ಇದ್ದು ಆದರೆ ಅಲ್ಲಿಂದ ಅವರ ಎತ್ತಿ ಸಾಯುಜ್ಯ ಮುಕ್ತಿ ಕೊಡುದು ಭಗವಂತನ ಕೆಲಸ ಹೇಳ್ತ ವಿವರಣೆ ಕೊಟ್ಟಿದವು. ಜಯವಿಜಯರು ವೈಕುಂಠಲ್ಲಿ ದ್ವಾರಪಾಲಕರಾಗಿಪ್ಪಗಳೇ ದಿನದಿನವೂ ಹರಿಯ ನೋಡುವ ಅವಕಾಶ ಸಿಕ್ಕಿ ಕಾರಣವಾತು ಹೇಳಿದವು. ಮುಂದೆ ರೂಪಕ ಇತ್ತು. ಐದು ಜೆನ ರಾಮಭಕ್ತರ ಬಗ್ಗೆ ಅವರ ಪಂಚಶರಣರು ಹೇಳಿಯೂ ಹೇಳ್ತವು. ಮೊದಲೆನೇದಾಗಿ ಗೌತಮ-ಅಹಲ್ಯೆಯರ ಕಥೆ ಹೇಳಿದವು. ಅಹಲ್ಯೆಯ ಮನಸ್ಸು ದುರ್ಬಲವಾಗಿದ್ದ ಕಾರಣ ಅದಕ್ಕೆ ಶಿಲೆಯಾಗಿರೆಕ್ಕಾಗಿ ಬಂತು. ಇಂದ್ರ ಕೆಟ್ಟ ದೃಷ್ಟಿಲಿ ನೋಡಿದ ಕಾರಣ ಅವಂಗೆ ಮೈಯೆಲ್ಲಾ ಕಣ್ಣಾಗಿ ಹೋಗಲಿ ಹೇಳ್ತ ಶಾಪ ಬಂತು. ಮುಂದೆ ಅವಂಗೆ ಸಹಸ್ರಾಕ್ಷ ಹೇಳಿ ಹೆಸರೂ ಬಂತು. ಆದರೆ ಅಹಲ್ಯೆಗೆ ಗೌತಮ ಒಂದು ಮಾತು ಹೇಳಿತ್ತಿದ್ದ ‘ಕಾಮನಿಂದ ನೀನು ಹಾಳಾದೆ, ಸರಿಯಾದರೆ ಇನ್ನು ರಾಮನಿಂದ’ ಹೇಳಿ. ಆದ್ದರಿಂದ ಅದಕ್ಕೆ ಮುಂದೆ ರಾಮನ ಸ್ಪರ್ಶಂದ ಕಠಿಣತೆ ಹೋಗಿ ಕೋಮಲತೆ ಬಂತು. ರಾಮ ಮದುವೆ ಆಯೆಕ್ಕಾರೆ ಮೊದಲೇ ಮುರುದ ಮದುವೆಯ ಮತ್ತೆ ಕೂಡುಸಿದ ಹೇಳ್ತ ಕತೆ ಹೇಳಿದವು., ಅದರ ರೂಪಕಲ್ಲೂ ತೋರ್ಸಿದವು.

ದೇಹದ ಶಕ್ತಿ ಪಾದದ ಮೂಲಕ ಹೆರ ಹರಿತ್ತು. ನವಗೆ ರಾಮನ ಪಾದ ಮಾತ್ರ ನೆಲದ ಮೇಲೆ ಕಾಂಬಲೆ ಸಿಕ್ಕುದು. ನಾವು ಅದನ್ನೇ ಪೂಜಿಸುದು ಹೇಳ್ತ ವಿವರಣೆ ಕೊಟ್ಟವು. ಹಾಂಗೆ ಆ ಶಕ್ತಿ ನಮ್ಮಂದ ಹೆರ ಹೋಗದ್ದಾಂಗೆ ನಾವು ಕಾಲು ಮಡುಸಿ ವಿಶೇಷ ಆಸನಂಗಳಲ್ಲಿ ಕೂಪದು ಹೇಳ್ತ ವಿಷಯವ ವಿವರಿಸಿದವು. ರಾಮನ ಪಾದುಕೆಯ ಭರತ ಕೊಂಡೋಗಿ ಆ ಪಾದುಕೆಯ ಮಡುಗಿ ರಾಜ್ಯಭಾರ ನೆಡೆಶಿದ್ದರನ್ನು ನೆಂಪು ಮಾಡಿಕೊಂಡವು. ” ಭಗವಾನ್ ಕೋ ಭೀ ಕಾಮ್ ಪಡ್‍ತಾಹೆ ಭಕ್ತೋಂ ಕಾ” ಹೇಳ್ತ ಹಿಂದಿ ಪದ್ಯವ ನೆಂಪು ಮಾಡಿ, ಗುಹ ಶ್ರೀರಾಮನ ಹೊಳೆ ದಾಂಟುಸಿ ಮುಕ್ತಿ ಬೇಡಿದ ಕಥೆಯ ಮನಸ್ಸಿಂಗೆ ಮುಟ್ಟುವ ಹಾಂಗೆ ಹೇಳಿದವು. ಮುಂದೆ ಜಟಾಯುವಿಂಗೆ ಮುಕ್ತಿ ಸಿಕ್ಕಿದ ಕಥೆ ಹೇಳಿದವು. ಜಟಾಯು ಹೇಳಿರೆ ಅದು ಗರುಡನ ಅಣ್ಣನ ಮಗ. ಅದು ದಶರಥನ ಮಿತ್ರ ಆಗಿತ್ತು. ಜಟಾಯು ಹೇಳ್ತ ರಾಮಭಕ್ತಂಗೆ ಅಕೇರಿಯಾಣ ಕಾಲಲ್ಲಿ ಹೇಳಿರೆ ಸಾಯುವ ಕಾಲಲ್ಲಿ ಉಪಚಾರ ಮಾಡುಲೆ ಸಾಕ್ಷಾತ್ ಜಗನ್ಮಾತೆಯಾದ ಸೀತದೇವಿಯೇ ಸಿಕ್ಕಿತ್ತು. ಜಟಾಯು ರಾಮನ ಮಡಿಲಿಲಿಯೇ ಮನುಗಿ ಸತ್ತತ್ತು. ದಶರಥಂಗೆ ಸಿಕ್ಕದ್ದ ಆ ಭಾಗ್ಯ ಜಟಾಯುವಿಂಗೆ ಸಿಕ್ಕಿತ್ತು. ರಾಮಂಗೂ ಧನ್ಯತೆ ಸಿಕ್ಕಿತ್ತು. ಹೇಳಿ ಕಥೆಯ ವಿವರಣೆ ಕೊಟ್ಟವು. ಅದರ ರೂಪಕಲ್ಲಿ ತೋರುಸಿದವು.

ಮುಂದಾಣಾದ್ದು ಶಬರಿಯ ಕಥೆ. ಬಾಕಿ ಎಲ್ಲೋರು ರಾಮನನ್ನೇ ಹುಡ್ಕಿಯೊಂಡು ಹೋದರೆ ಶಬರಿಯ ಭಕ್ತಿಗೆ ಮೆಚ್ಚಿ ರಾಮನೇ ಅದಿದ್ದಲ್ಲಿಗೆ ಬಂದು ಆತಿಥ್ಯ ಸ್ವೀಕರಿಸಿದ ಹೇಳ್ತ ವಿವರಣೆ ಕೊಟ್ಟಪ್ಪಗ ರೂಪಕಲ್ಲಿ ತೋರ್ಸಿದವು. ಜಟಾಯುವಿಂಗೆ ಸಾಯುಜ್ಯ ಮುಕ್ತಿ ಸಿಕ್ಕಿರೆ ಶಬರಿಗೆ ಸಾಮಿಪ್ಯ ಮುಕ್ತಿ ಸಿಕ್ಕಿತ್ತು.  ಮುಂದೆ ವಿಭೀಷಣಂಗೆ ಮುಕ್ತಿ ತೋರುಸಿದ್ದು ರಾಮನೇ. ರಾಮರಾಜ್ಯದ ಮುಂದಿಂದು ವಿಭೀಷಣ ರಾಜ್ಯ ಹೇಳ್ತ ಕಥೆಯ ಹೇಳಿದವು. ಒಟ್ಟಿಂಗೆ ಶರಣ ವಿಭೀಷಣ ರೂಪಕವೂ ಇತ್ತು. ಐದನೇಯವು ವಾಲ್ಮೀಕೀ, ಹೇಳಿ ಇಂದ್ರಾಣ ಕಥೆಗೆ ಮಂಗಳ ಕೊಟ್ಟವು.

ಎಂದಿನಂತೆ ಜಯ ಜಯ ರಾಮಕಥಾ ಪದ್ಯಕ್ಕೆ ಎಲ್ಲೋರು ಹೆಜ್ಜೆ ಹಾಕಿದವು. ಗುರುಗೊ ಮತ್ತೆ ರಾಮಾಯಣ ಗ್ರಂಥಕ್ಕ ಪೂಜೆ ಮಾಡಿ ಮಂಗಳಾರತಿ ಬೆಳಗಿ ಪ್ರಸಾದ ಕೊಟ್ಟವು. ಅದಾಗಿ ಎಲ್ಲೋರಿಂಗು ಅನ್ನಪ್ರಸಾದ ಇತ್ತು. ಜನ ಎಷ್ಟಕ್ಕೂ ಹೇಳಿರೆ ನವಗೆ ಸರೀ ಲೆಕ್ಕ ಬತ್ತಿಲ್ಲೆದಾ.. ಟೆಂಟು ತುಂಬಾ ಜೆನ ಕಂಡತ್ತು. ನಾಳಂಗಾಣ ನೆನಪಿಲಿ ನಾವು ಬೇಗ ಎರಡು ಕಾರಿಲಿ ಹೆರಟತ್ತು.

ಓಯೀ… ನಾಳೆಯೂ ಇದ್ದು. ಶ್ರೀರಾಮ ಕಥೆಯ ಪೀಠಿಕಾ ಕಾಂಡದ ಮುಕ್ತಾಯ. ಗೊಂತಾತಲ್ಲದೋ. ಬಪ್ಪಲೆ ಹೇಳಿಕೆ ಇಲ್ಲೆ ಗ್ರೇಶೆಡಿ. ಮರುವಳ ಮಾವ° ಮೊನ್ನೆಯೇ ಹೇಳಿದ್ದವು. ಮತ್ತೆ ಎಂಗೊಗೆ ನೋಡುಲಾತಿಲ್ಲೆ ಹೇಳ್ತದು ಬೇಡ.

ಪಟಂಗೋ:

ಅಡಿ ಟಿಪ್ಪಣಿ:

ಮುಕ್ತಿಯ ವಿಧಂಗೋ:

ಸಾಲೋಕ್ಯ – ಭಗವಂತನ ಲೋಕಲ್ಲಿಪ್ಪಲೆ ಒಂದು ಅವಕಾಶ
ಸಾಮೀಪ್ಯ – ಭಗವಂತನ ಹತ್ತರೆ ಇಪ್ಪ ಅವಕಾಶ
ಸಾರ್ಷ್ಠಿ – ಭಗವಂತ ಅವನ ಐಶ್ವರ್ಯ ಎಲ್ಲವನ್ನೂ ಕೊಡ್ತ
ಸಾರೂಪ್ಯ – ಅವನ ರೂಪವನ್ನೇ ಭಗವಂತ ನವಗೆ ಕೊಡ್ತ
ಸಾಯುಜ್ಯ – ಹೇಳೀರೆ ಭಗವಂತನಲ್ಲಿ ಒಂದಪ್ಪದು

ಜಯವಿಜಯರಿಂಗೆ ಸಿಕ್ಕಿದ್ದು ನಾಲ್ಕನೇ ಹಂತದ  ಸಾರೂಪ್ಯ ಮುಕ್ತಿ, ಶಬರಿಗೆ ಸಿಕ್ಕಿದ್ದು ಸಾಮೀಪ್ಯ ಕೆಲವುಸರ್ತಿ ಸಾರೂಪ್ಯಲ್ಲಿ ಪಥನ ಅಪ್ಪ ಸಾದ್ಯತೆ ಇದ್ದು ಆದರೆ ಅಲ್ಲಿಂದ ಅವರ ಎತ್ತಿ ಸಾಯುಜ್ಯ ಮುಕ್ತಿ ಕೊಡುದು ಭಗವಂತನ ಕೆಲಸ.

7 thoughts on “ರಾಮಕಥಾ – ನಾಲ್ಕನೇ ದಿನ

  1. ‘ಹರೇರಾಮ”
    “ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ” – ನಾವೂ ಧನ್ಯರು ಕಥೆ ಕೇಳಿ

  2. ಒಳ್ಳೆ ನಿರೂಪಣೆ..
    ಹರೇ ರಾಮ..

    ಓಯ್ ಅಣ್ಣೋ,
    ಮನೆಯವಕ್ಕೆ ಹೇಳಿಕೇ ಹೇಳಿ ಇದ್ದೋ?
    ಬಪ್ಪಲಾತಿಲ್ಲೆ ಹೇಳುವ ಪ್ರಷ್ನೆಯೇ ಇಲ್ಲೆ…
    “ಕುಣಿದು ಕುಪ್ಪಳಿಸಿ” ಹೇಳಿ ಗುರುಗೊ ಹೇಳಿದ್ದರ ಎಂತಕೆ ಬರದ್ದಿಲ್ಲೆ..
    ಕಾಂಬೊ° ಕೊಣಿವಗ.. 😉

    1. ಕುಣಿದು ಕುಪ್ಪಳಿಸಿ” ಹೇಳಿ ಗುರುಗೊ ಹೇಳಿದ್ದರ ಎಂತಕೆ ಬರದ್ದಿಲ್ಲೆ..- ಅಣ್ಣೋ ಈ ಪೆಂಗಣ್ಣ ಭಾರೀ ಹುಶಾರಿ ಎಂತಕೆ ಹೇಳೀರೆ ಇದರ ಓದುತ್ತವು ಬರೇ ಮನೆ ಒಳಕೂದು ಓದುತ್ತದಲ್ಲ ಇದಾ ಹಾಂಗಾಗಿ ಎಲ್ಲಿಯಾರು ಓಪೀಸಿಲಿಯೋ ಮಣ್ಣ ಕೊಣಿತ್ತದು ಬೇಡಾಳಿ ಅದರ ಸೇರುಸದ್ದಾಯಿಕ್ಕು ಅಲ್ಲದೋ.. 😉

      1. ನೋಡೋ°… ಅಂತೇ ಇಲ್ಲದ್ರೂ ಮಾಣಿಯ ಕಾಲೆಳೆತ್ತದು…

  3. ಲಾಯಕ ಆಯ್ದು ಭಾವಯ್ಯ. ಗುರುಗಳ ವಿವರಣೆಗೊ ಅದ್ಭುತ. ಕಥೆಯೊಳ ಕಥೆ ನೀತಿ ಚಿಂತನೆ ….

    ಅಲ್ಲಿ ಪಾಲ್ಗೊಂಡ ಪ್ರತಿಯೊಬ್ಬನೂ ಧನ್ಯರೇ.

    ಧನ್ಯವಾದ ಹೇಳಿತ್ತು ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×