ಶ್ರೀ ಅಕ್ಕ ಮಾಡಿದ ದಿಡೀರ್ ಉಂಡೆ

ಓಯ್ ಈ ಜೆನ ಇಲ್ಲೆ ಹೇಳಿ ಮಾತಾಡ್ಲೆ ಶುರು ಮಾಡಿದ್ದ ಕೆಪ್ಪಣ್ಣ, ನಾವಿದ್ದು ಆದರೆ ಇಲ್ಲಿ ಬರವಲೆ ಆತಿಲ್ಲೆ ಬಾವ ಹೇಳಿರೂ ಕೇಳ್ತಾ ಇಲ್ಲೆನ್ನೆ. ಇರಳಿ, ನಮ್ಮ ಇಂದ್ರಾಣ ವಸತಿ ಶ್ರೀ ಅಕ್ಕನಲ್ಲಿ. ಹೇಳಿದಾಂಗೆ ಶುದ್ದಿ ಹೇಳದ್ದೇ ಬೋಚ ಬಾವನೊಟ್ಟಿಂಗೆ ಆಲ್ಲಿಗೆ ತಲ್ಪುವಾಗ ಗಂಟೆ ಎಂಟೂಮುಕ್ಕಾಲು, ಶರ್ಮಪ್ಪಚ್ಚಿ ಹಾಸಿಗೆ ಬಿಡ್ಸುವ ಸಮಯ. ಗೇಟಿಂಗೆ ತಲ್ಪುವಾಗಲೇ ಕಾನವಣ್ಣನ ಸ್ವರ ಕೇಳ್ತು ಬಾಮಿನಿ ರಾಗಲ್ಲಿ. ಬೋಚ ಬಾವನ ಜೋಳಿಗೆಯ ಒಂದರಿ ನೋಡಿಕೊಂಡೆ ಚೋಕ್ಲೇಟ್ ಕಟ್ಟು ಇದ್ದೋ ಅಲ್ಲ ಒಂದೊಂದೇ ಕಾಲಿ ಮಾಡಿದ್ದನೋ ಹೇಳಿ.

ಒಳ ಹೋದಾಂಗೆ ಗೊಂತಾತು ಈ ಮಾಣಿಗೆ ಇರುಳಪ್ಪಗ ಉಂಡೆ ತಿನ್ನೆಕ್ಕು ಹೇಳಿ ಆಗಿ ರಾಗ ಶುರು ಮಾಡಿದ್ದು ಹೇಳಿ. ನಮ್ಮ ಚೋಕ್ಲೇಟ್ ಕೊಟ್ಟರು ರಾಗ ನಿಂದಿದಿಲ್ಲೆ. ಇವನೊಟ್ಟಿಗೆ ಹೇಳದ್ದೆ ಬಂದ ಇನ್ನೆರಡು ಇದ್ದವೂ ಹೇಳಿಯೊ ಮಣ್ಣೋ ಗೊಂತಿಲ್ಲೆ ಅಕ್ಕ ಆತು ಮಾಡಿ ಕೊಡುವ ಹೇಳಿತ್ತು. ಅಷ್ಟಪ್ಪಗ ಎರಡು ಚೋಕ್ಲೇಟ್ ಬಾಯಿಯೊಳ ಹೋತಿದಾ. ನವಗೆ ಸಂಶಯ ಅಕ್ಕಿ ನೀರಿಲಾಕಿ ಕಡದು ಬಾಣಾಲೆಲಿ ಮಗಚ್ಚಿ ಹಬೆಲಿ ಬೇಶಿ ಉಂಡೆ ಅಪ್ಪಲೆ ಸುಮಾರು ಹೊತ್ತು ಬೇಕು ಗಂಟೆ ಒಂಭತ್ತು ಕಾಲು ಆಯಿದು ಅವಾಗಲೇ. ನಮ್ಮ ಹೊಟ್ಟೆಗೆ ಬೀಳುವಾಗ ಹನ್ನೊಂದು ಕಳೀಗೋ ಆತು. ಎಂಗೊಗೆ ಹೆಜ್ಜೆ ಸಾಕು ಹೇಳುಲೆ ಅಡಗ್ಗೆ ಕೋಣೆಗೆ ಹೋಗಿಯಪ್ಪಗ ಅಕ್ಕ ಹೇಳಿತ್ತು ಅರ್ಧ ಗಂಟೆಲಿ ಆವ್ತು ಹೇಳಿ.

ಅಷ್ಟಪ್ಪಗ ನವಗೆ ಕುತೂಹಲ ಆತು, ಹಾಂಗೆ ಅಲ್ಲೇ ಮಾತಾಡಿಯೊಂಡು ಕೂದತ್ತು, ಒಟ್ಟಿಂಗೆ ಹತ್ತು ಹತ್ತು ಉಂಡೆ ಬೇಕಕ್ಕು ಹೇಳಿತ್ತು. ನಾವು ಮಾತಾಡಿಯೊಂಡಿದ್ದರೆ ಅಕ್ಕ ಒಂದು ಬಾಣಾಲೆಲಿ ಎರಡು ಮೂರು ಲೀಟರು ನೀರು ಬೆಶಿ ಅಪ್ಪಲೆ ಮಡುಗಿ, ಅರ್ಧ ಸೇರು ಬೆಳ್ತಿಗೆ ಅಕ್ಕಿಯ ಮಿಕ್ಸಿಲಿ ಹಾಕಿ ಹೊಡಿ ಮಾಡಿತ್ತು. ನೀರು ಬೆಶಿ ಅಪ್ಪಗ ಅಕ್ಕಿ ಹೊಡಿಯ ಅದಕ್ಕೆ ಹಾಕಿ ಮಗಚ್ಚಿತ್ತು ನೀರು ಕಾಲಿ ಅಪ್ಪನ್ನಾರ. ಮತ್ತೆ ಕುಕ್ಕರಿಲಿ ನೀರು ಹಾಕಿ ಕೆಳಂಗೊಂದು ಇಡ್ಲಿ ಪ್ಲೇಟ್ ಮಡಗಿ ಹಿಟ್ಟಿನ ಉಂಡೆ ಮಾಡಿ ಮಡಗಿತ್ತು. ಮುಚ್ಚಲ ಹಾಕಿ ಮೂರು ಕೂಕಿಲು ಹಾಕಿಯಪ್ಪಗ ಕುಕ್ಕರ್ ಕೆಳ ಮಡಗಿ ಐದು ನಿಮಷಲ್ಲಿ ದಿಡೀರ್ ಉಂಡೆ ರೆಡಿ. ಕೂಡುಲೆ ಬಸಳೆ ಬೆಂದಿಯೂ ಪೂಂಬೆ ಚಟ್ನಿಯೂ ಇತ್ತಿದಾ ಹತ್ತು ಹೇಳಿದ ಬೋಚ ಬಾವ ಅಂತೂ ಹದಿನೈದು ತಿಂದ. ಅಂಬಗ ಕಾನಾವಣ್ಣನೋ ಕೇಳುಗು ಚೆನ್ನೈ ಬಾವ. ಹೋಯ್ ಅವಾ° ಚೋಕ್ಲೇಟ್ ತಿಂದು ಟಿ.ವಿ. ನೋಡಿಯೊಂಡು ಅಲ್ಲೇ ವರಗಿತ್ತಿದ್ದಾ..

ಅಂತೂ ಹಬ್ಬದ ದಿನ ಹೋಗದ್ದರೂ ಹೊಟ್ಟೆಗೆಂತ ಕಮ್ಮಿ ಆಯಿದಿಲ್ಲೆ. ಈಗ ರಜಾ ವರಗದ್ದರೆ ನಾಡುದ್ದು ಆಡ್ವಾನಿ ಅಜ್ಜ ಬಪ್ಪಗ ಹೋಪಲೆಡಿಯಾ, ಮತ್ತೆ ಕಾಂಬಾ ಆತೋ…

~
ಪೆಂಗಣ್ಣ ಪ್ರಮ್ ಬೈಲು
bingi.penga@gmail.com

ಪೆಂಗಣ್ಣ°

   

You may also like...

6 Responses

 1. ತೆಕ್ಕುಂಜ ಕುಮಾರ ಮಾವ° says:

  ಅದಕ್ಕು, ಹೇಳದ್ದೆ ಮನೆಗೆ ಹೋಪವರ ಹೊಟ್ಟೆ ತುಂಬುಸುಲೆ ಅಕ್ಕನ ಐಡಿಯ ಒಳ್ಳೆದಾಯಿದು.!!!
  ಹುಂ…. ನೆಗೆಮಾಣಿ ಬಂದು ಹೋದ, ಪೆಂಗಣ್ಣನೂ ಬಂದ, ಇನ್ನೊಬ್ಬ ಇದ್ದ ತ್ರಿಮೂರ್ತಿಗಳ ಪೈಕಿಯವ, ಬರೇ ಹೊಟ್ಟೆ ತುಂಬುಸುತ್ತ ಆಲೋಚನೆ ಮಾಂತ್ರವಾ ಇವಂಗೆ.

  • ಬೋಸ ಬಾವ says:

   ಏ ಮಾವ… 🙂
   ನಾವು ತಪಸ್ಸಿ೦ಗೆ ಕೂಯಿದು.. ರಜ್ಜ ಸಮಯ ಕೊಡಿ.. 😛
   ಸದ್ಯಲ್ಲೆ ಬೋಚ ದಾಸ ಬಪ್ಪಲಿದ್ದು.. 😉

   • ಪೆಂಗಣ್ಣ° says:

    @ ಟಿ ಮಾವ
    ಈ ರಾಜಕೀಯದವರ ಕತೆಲಿ ಬೈಲಿಂಗಿಳವಾತಿಲ್ಲೆ. ಒಂದರಿ ವಿಧಾನಸೌಧಕ್ಕೆ ಅಲ್ಲಿಂದ ಹೈಕೋರ್ಟಿಂಗೆ.. ಮತ್ತೆ ಪರಪ್ಪನ ಅಗ್ರಹಾರಕ್ಕೆ..
    ಪರಪ್ಪನ ಅಗ್ರಹಾರಕ್ಕೆ ಹೋದರೆ ಇರುಳಿಂಗೆ ಮಾಮಸಮನಲ್ಲಿ ಮೊಕ್ಕಾಂ. ರಜಾ ದೂರ ಇಪ್ಪದು.

    @ ಬೋಚೋ..

    ನಿನ್ನ ತಪಸ್ಸು ಮುರಿವಲೆ ಆ ಟಿವಿಲಿ ಕೊಣಿವದು ಬಕ್ಕು..
    ನಿನಗೆ ನೆಗೆಮಾಣಿ ಸಿಕ್ಕಿದ್ದನೋ. ಆನು ಅವನತ್ರೆ ಮಾಷ್ಟ್ರುಮಾವ ಸರಸ್ವತಿ ಕಂಜಿ ಹಾಕಿದ್ದು, ಉದಿಯಪ್ಪಗ 5 ಸೇರು ಹೊತ್ತೋಪಗ 4 ಸೇರು ಹಾಲು ಸಿಕ್ಕುತ್ತಡ ಹೇಳಿ ಹೇಳಿದ್ದೇ ತಡ ಆನೊಂದರಿ ಪಾಠ ಒಪ್ಪಿಸಿಕ್ಕಿ ಬತ್ತೆ ಹೇಳಿ ಹೋದವನ ಸುದ್ದಿಯೇ ಇಲ್ಲೆ.
    ಸಿಕ್ಕಿರೆ ಹೇಳಾತೋ..

 2. ಸೂರ್ಯ says:

  ಹೋಯ್‌.. ಅದಾ ಪೆಂಗಣ್ಣ ಉಂಡೆ ಹಿಡ್ಕೊಂಡು ಬಂದ ಇದಾ…ಒಪ್ಪಣ್ಣ ಹೇಳಿದ್ದು ಕೇಳಿತ್ತಾ ಹೇಂಗೆ?…
  ಬೋಸ ೧೫ ಉಂಡೆ ತಿಂದಿದಾ ಹೇಳಿದ ಇವ ಎಷ್ಟು ತಿಂದಿದಪ್ಪಾ?…

 3. ಚೆನ್ನೈ ಭಾವ says:

  ಯೋ… ದೇವರೇ.ನಿಂಗಳೆ,! ಅಯ್ಯೋ ಪಾಪ ಕಾನಾವಣ್ಣ!! ಹುಂ… ಇರ್ಲಿ.

  ಸುಲಭದುಂಡೆ ವಿಷಯ ಲಾಯಕ ಇದ್ದು. ಒಪ್ಪ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *