ಸುದ್ದಿಗಳ ನಡುಕೆ ಮತ್ತೆ ಮತ್ತೆ ಕಾಡುತ್ತ ಪ್ರಶ್ನೆ!

ತ್ರಿಪದಿ ಬರದು ತಿರುಗಾಟಕ್ಕೆ ಹೆರಟವಂಗೆ ಬರವಲೆ ಪುರುಸೋತ್ತು ಇತ್ತಿಲ್ಲೆ. ಬೇರೆ ಬೇರೆ ಊರಿಂಗೆ ಹೋಗಿ ಬರೆಕನ್ನೇ. ಹೇಳುತ್ತರೆ ಸುದ್ದಿಗೇನೂ ಕಮ್ಮಿ ಇಲ್ಲೆ. ಸುದ್ದಿಗಳೂ ಹಾಂಗೆ ರಾಜಕೀಯದ ಬಗ್ಗೆ ಬೇಕಾದಷ್ಟು ಸುದ್ದಿ ಸಿಕ್ಕುತ್ತು. ಅದನ್ನೇ ಹೇಳ್ತಾ ಹೋದರೆ ಚರ್ವಿತಚರ್ವಣ ಅಕ್ಕೋ ಕಾಂಬದು ಒಂದೊಂದರಿ. ಈಗ ರಜಾ ಸುದ್ದಿ ಬದಲಪ್ಪುಲೆ ಶುರು ಆಯಿದು. ಇಲ್ಲದ್ರೆ ಎಲ್ಲಿ ಹೋದರೂ ಕರುನಾಡ ಭೂ ಮಾಪಿಯಾದ್ದೇ ಸುದ್ದಿ ಆಗಿತ್ತು.

ಮೊನ್ನೆ ವಡೋದರಕ್ಕೆ ಹೋಗಿತ್ತೆದ್ದೆ. ಕಿರುಕೆಟ್ಟು ನೋಡುಲೆ. ಗಂಭೀರನ ಗಾಂಭೀರ್ಯ, ವಿರಾಟನ ಆರ್ಭಟ, ಕೊಶಿ ಆತು. ಅಲ್ಲಿಂದ ಗಡ್ಕರಿ ಮಗನ ಮದುವೆ. ವಿಧರ್ಭಲ್ಲಿ ವಿಜೃಂಭಣೆಯ ಮದುವೆ. ನಮ್ಮ  ನೆಗೆಮಾಣಿಯ ಕರ್ಕೊಂಡು ಹೋಗಿತ್ತರೆ ತಿಂದೊಂಡು ಅಲ್ಲೆ ಬಾಕಿ ಆವ್ತಿದ್ದನೋ ಏನೋ.

ಅದೆಲ್ಲ ಮುಗುಶಿಯಪ್ಪಗ ಪ್ರೆಂಚರ ಅಧ್ಯಕ್ಷ ಬಂದ ಇದಾ. ನಮ್ಮ ಬೆಂಗಳೂರಿನ ಇಸ್ರೋಗೆ ಅಲ್ಲಿಯೂ ಹೋಗಿ ಮಾತಾಡ್ಸಿ ಆತು. ನಮ್ಮ ದೇಶಕ್ಕೆ ಬೆಂಬಲ ಇದ್ದಡ ಆ ದೇಶದ್ದು ಅಮೇರಿಕೆಯ ಹಾಂಗೋ ಗೊತಿಲ್ಲೆ. ಅಲ್ಲಿಂದ ಹೆರಟಪ್ಪಗ ಪೆರ್ಲದ ಬಾವ ಪೋನು ಮಾಡಿದ, ಅದಾ ಕೈಯ ಎರಡು ಬೆರಳು ಜೋಡಿಸಿ ಮೂರು ಬೆರಳು ಬಿಟ್ಟ ಸಿನೆಮಾ ಇದ್ದಲ್ಲದಾ ನೋಡುಲೆ ಬತ್ತೆಯಾ ಕೇಳುಲೆ. ಬಾವ ಎನಗೆ ಕಾಸ್ರೋಡಿಂಗೆ ಹೋಯೆಕ್ಕು ಹೇಳಿದೆ. ಅಲ್ಲಿಗೆ ಇಂದು ಹೋಗಿಕ್ಕೆಡ ನೆಂಪಿಲ್ಲೆಯಾ ಕೇಳಿದ.

ನೆಂಪಿರದ್ದೆ ಇಕ್ಕೋ, ನಮ್ಮ ದೇಶ ಸ್ವತಂತ್ರ ಆದ ಮೇಲೆ ಸರ್ವಸತಂತ್ರ ಅಪ್ಪಲೆ ಮೊದಲ ಹೆಜ್ಜೆಯ. ಇಂದು ದಶಂಬರ ೬. ಹಿಂದುಸ್ಥಾನಿಗೊಕ್ಕೆ ಸುವರ್ಣ ದಿನ. ಹದಿನೆಂಟು ವರ್ಶದ ಹಿಂದಾಣ ದಿನವ ನೆಂಪಿಲ್ಲೆ ಹೇಳಿರೆ ತಪ್ಪಾಗದ. ಗುಣಾಜೆ ಮಾಣಿಗೆ ಮರದ್ದೋ ಕಾಣ್ತು. ಈ ಸರ್ತಿ ಸಮೋಸ ಬೈಂದಿಲ್ಲೆ ಇದಾ. ಇರಲಿ. ಆದಿನ ಕರಸೇವಕರೆಲ್ಲಾ ಅಯೋಧ್ಯೆಲಿ ಸೇರಿದ ದಿನ. ಭವ್ಯ ಭಾರತದ ಶ್ರೀರಾಮ ಮಂದಿರದ ನಿರ್ಮಾಣದ ಆರಂಭದ ಮುಹೂರ್ತಕ್ಕೆ ಎಲ್ಲೊರು ಕಾದೊಂಡಿದ್ದವು. ಎಲ್ಲೆಲ್ಲಿಯೂ ‘ಜೈ ಶ್ರೀರಾಮ್’ ಜೈಕಾರ. ಉದೆಯಕಾಲ ಹತ್ತು ಗಂಟೆಗೆ ಮಹಾನ್ ಸಂತ ಮಹಂತರೂ, ರಾಷ್ಟ್ರನಾಯಕಂಗೋ ಸೇರಿತ್ತಿದ್ದವು. ಹನ್ನೆರಡು ಹದಿನೈದರ ಸುಮುಹೂರ್ತಲ್ಲಿ ಹೊಸ ಮೈಲಿಗಲ್ಲಿನ ಆರಂಭಕ್ಕೆ ಕಾದೊಂಡಿತ್ತವು.

ಅದರೆ ಆದ್ದೇ ಬೇರೆ. ಸುಮಾರು ಹನ್ನೆರಡು ಗಂಟೆಯ ಹೊತ್ತಿಂಗೆ ೪0೦-೫೦೦ ಜೆನ ಎಲ್ಲ ಅಡೆತಡೆಗಳ ಬೇಧಿಸಿ ಒಳ ಹೋಗಿ ಮಸೀದಿಯ ಉರುಳುಸುಲೆ ಶುರು ಮಾಡಿದವು.  ಮದ್ಯಾಹ್ನ ೪ರ ಹೊತ್ತಿಂಗೆ ಉರುಳಿಸಿದವು. ಗಲಾಟೆ ಜೋರಾಗಿ ಕೆಲವು ಜೆನ ಸತ್ತವು. ಅವ ಆತ್ಮಕ್ಕೆ ಶಾಂತಿ ಸಿಕ್ಕಲಿ. ಮಸೀದಿ ಉರುಳುಸಿದ್ದು ತಪ್ಪೋ ಸರಿಯೊ ಮಾತಾಡ್ತಿಲ್ಲೆ. ಕೋರ್ಟಿನ ತೀರ್ಪು ಹೇಳಿದ್ದೆ ಕೆಲವು ದಿನ ಹಿಂದೆ. ರಾಮನ ಜನ್ಮಸ್ಥಾನದ ಕುರುಹಿನ ಎತ್ತಿ ಹಿಡುದ್ದು ಕೋರ್ಟ್. ಹಾಂಗಾಗಿ ಮಸೀದಿಂದಲೂ ಮೊದಲಿದ್ದದು ಮಂದಿರವನ್ನೆ. ಒಪ್ಪಣ್ಣನ ನೆಂಪಿನ ಸುದ್ದಿಯ ಜೋಳಿಗೆಯ ಓದಿಯಪ್ಪಗ ನೇಂತಾತು ಇದೆಲ್ಲಾ.

ಅದೇ ಇಂದು. ಉದಿಯಪ್ಪಗಳೇ ಕನ್ನೆಪ್ಪಾಡಿಲಿ ಬಸ್ಸಿಂಗೆ ಕಲ್ಲು ಹೊಡುದ್ದವು ಹೇಳ್ತ ಸಮೋಸ ಬಂತು ದೊಡ್ಡಬಾವಂದು. ಪೆರ್ಲದಬಾವ ಹೇಳಿದ್ದರ ಕೇಳಿದ್ದು ಒಳ್ಳೆದಾತು ಅನುಸಿತ್ತು ಒಂದರಿ, ಸ್ವಲ್ಪ ಹೊತ್ತಿಂಗೆ ಪೆರ್ಮುಖ ಅಪ್ಪಚ್ಚಿ ಫೋನ್ ಮಾಡಿದವ ಹೇಳಿದ, ಅವನ ಬಾವ ನಿನ್ನೆ ಕಾಸ್ರೋಡಿಂದ ಹೆರಟ ಬಸ್ಸು ಬೆಂಗಾವಲು ಪಡೆಯೊಟ್ಟಿಂಗೆ ಕರ್ಣಾಟಕ ಗಡಿಯೊರೆಗೆ ಬಂದದ್ದಡ. ಇನ್ನು ಹೊತ್ತು ಕಳ್ದಪ್ಪಗ ಅಜ್ಜಿಮನೆ ಪುಳ್ಳಿಯ ತಂಗೆ ಇದ್ದ ಬಸ್ಸಿಗೆ ಕಲ್ಲಿಡುಕಿದ ಸುದ್ದಿ ಸಿಕ್ಕಿತ್ತು. ಎಂತ ಅಪ್ಪಾ ಇವಕ್ಕೆ ಬೇರೆ ಕೆಲಸವೆ ಇಲ್ಲೆಯೊ ಹೇಳಿತ್ತು ಒಪ್ಪಕ್ಕ. ನಮ್ಮವರ ಉದಾರತನಲ್ಲಿ ಅವರ ಕೇಳುವವೇ ಇಲ್ಲೆನ್ನೆ.

ಅಖಂಡ ಹಿಂದೂಸ್ಥಾನವ ನೋಡುವ ದಿನ ಎಂದು ಬತ್ತೋ ಇದು ಪೆಂಗಣ್ಣಂಗೆ ಯೇವತ್ತೂ ಕಾಡುತ್ತ ಪ್ರಶ್ನೆ. ನಿಂಗಳತ್ರೆ ಉತ್ತರ ಇದ್ದೋ?

ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ ||

~
ಪೆಂಗ ಪ್ರಮ್ ಬೈಲು.
bingi.penga@gmail.com

ಪೆಂಗಣ್ಣ°

   

You may also like...

5 Responses

 1. ಬತ್ತು ಬತ್ತು.. ಬತ್ತಾ ಇದ್ದು. ಇನ್ನೇನು ಬಂತು.

 2. ರಘುಮುಳಿಯ says:

  ಪೆಂಗ ಭಾವ,ಅಖಂಡ ಹಿಂದೂಸ್ಥಾನವ ನೋಡೋದು ಕನಸಿನ ಮಾತೇ ಆಗಿಕ್ಕು.ಈಗಾಣ ನಮ್ಮ ಮನಸ್ಥಿತಿ ಸ್ವಾತಂತ್ರ್ಯಪೂರ್ವಲ್ಲಿ ಇದ್ದದರಿ೦ದ ಹಾಳಾಯಿದು.ನಮ್ಮ ಮೇಲೆ ಹೆರದೇಶದವರ ಆಳ್ವಿಕೆ ದಬ್ಬಾಳಿಕೆ ಶತಮಾನ೦ಗಳ ಕಾಲ ನೆಡವಲೆ ಮೂಲಕಾರಣ ಹಿಂದೂಗಳ ಒಗ್ಗಟ್ಟಿನ ಕೊರತೆ.ಈಗ ನಮ್ಮ ಘನ ಕರ್ನಾಟಕ ರಾಜ್ಯಲ್ಲೇ ಕಾಣ್ತಿಲ್ಲೆಯ ಭಾವ. ಇಪ್ಪ ರಾಜಕೀಯ ಪಕ್ಷ೦ಗೋ ಎಲ್ಲಾ ಒಂದಲ್ಲದ್ದರೆ ಒಂದು ಜಾತಿಯ ಹೆಸರು ಹೇಳಿಗೊಂದು ಆಳ್ವಿಕೆ ಮಾಡೊದಲ್ಲದಾ. ಲಿಂಗಾಯಿತರೋ,ಗೌಡರೋ,ಕುರುಬರೋ ಮತ್ತೊಂದೋ .ಇನ್ನು ಈ ಜಾತಿಗೋ ಎಲ್ಲ ಒಟ್ಟಪ್ಪಲೇ ಸಾಧ್ಯ ಇದ್ದೋ? ಆದರೆ ಸ್ವಾರ್ಥಸಾಧನೆಲಿ ಮಾಂತ್ರ ಏಕತೆ ಇದ್ದಪ್ಪ,ಜಾತಿಬೇಧವೂ ಇಲ್ಲೇ,ಪಕ್ಷಬೇಧವೂ ಇಲ್ಲೇ , ಎಷ್ಟು ತುಂಬಿದರೂ ಅತಿಬೇಧಿಯೂ ಇಲ್ಲೆ.
  ದೇವರೇ ಗಸಿ .

  • ನೀರ್ಕಜೆ ಅಪ್ಪಚ್ಚಿ says:

   ಕೆಳಾಣ ಜಾತಿಗೊಕ್ಕೆ ದೀಕ್ಷೆ ಕೊಡುವ ಬುಧ್ಧಿ ಬ್ರಾಮರಿಂಗೆ ಬಂದರೆ ಅಕ್ಕು.. ಇಲ್ಲದ್ದರೆ ಹೀಂಗೇ ಹಾಳಾವುತ್ತಾ ಇಕ್ಕು.

 3. ನೀರ್ಕಜೆ ಅಪ್ಪಚ್ಚಿ says:

  ದೇಶದ ಬಗ್ಗೆ ಕಾಳಜಿ ಇಪ್ಪವು ಊರಿಲಿ (ದಕ್ಷಿಣ ಕನ್ನಡಲ್ಲಿ) ಪಟ್ಟಾಗಿ ಕೂದು ಜಾಗೆ ತೆಗದು ಸಂಘಟನೆ ಮಾಡಿದರೆ ದಕ್ಷಿಣ ಕನ್ನಡ ಪಾಕಿಸ್ಥಾನ ಅಪ್ಪದರ ತಪ್ಪುಸುಲೆ ಸಾಧ್ಯ ಇದ್ದು. ಅದು ಬಿಟ್ಟು ಎಲ್ಲ ಜಾಗೆ ಕೊಟ್ಟು ಬೆಂಗಳೂರಿಂಗೆ ಬಂದರೆ ನೆಹರು ನಗರ ಇಬ್ರಾಹಿಮ್ ನಗರ ಆಗದ್ದೆ ಮತ್ತೆಂತ ಆವುತ್ತು?

  ಆನು ಹೇಳಿದ್ದನ್ನೇ ಹೇಳಿದರೆ ಬೈಲಿಲಿ ಎಲ್ಲೋರಿಂಗೂ ತಲೆ ಚಿಟ್ಟು ಹಿಡಿಗು. ಆದರೂ ಹೇಳ್ತೆ.. ಎನಗೆ ಬೇರೆ ಎಂತ ಕೆಲಸ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *