Oppanna.com

ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ”

ಬರದೋರು :   ಬೊಳುಂಬು ಮಾವ°    on   01/05/2017    4 ಒಪ್ಪಂಗೊ

ಬೊಳುಂಬು ಮಾವ°

ನಿನ್ನೆ ಆದಿತ್ಯವಾರ ಎಪ್ರಿಲ್ 30. ಶಂಕರ ಜಯಂತಿಯುದೆ. ಮಂಗಳೂರು ಹವ್ಯಕ ಸಭಾದ ನೇತೃತ್ವಲ್ಲಿ ಅಪರಾಹ್ನ 4.30ಕ್ಕೆ ಒಂದು ವಿಶೇಷ ಕಾರ್ಯಕ್ರಮ ನೆಡದತ್ತು. ಅದು ನಂತೂರಿಲ್ಲಿಪ್ಪ ನಮ್ಮ ಭಾರತೀ ಕಾಲೇಜಿನ ಶಂಕರಶ್ರೀ ಸಭಾಂಗಣಲ್ಲಿ. ಎಪ್ರಿಲ್ 16ಕ್ಕೆ ಒಪ್ಪಣ್ಣ ಪ್ರತಿಷ್ಟಾನದ ವಿವಿ ಕಾರ್ಯಕ್ರಮ, ಹವ್ಯಕ ತಾಳಮದ್ದಳೆ ಇದೇ ಜಾಗೆಲಿ ನೆಡದ್ದದು ನಿಂಗೊಗೆಲ್ಲ ಗೊಂತಿದ್ದು. ಅದೇ ವೇದಿಕೆಲಿ ನಿನ್ನೆ ಹವ್ಯಕ ಸಭಾದವರ “ವಿಷು ಸಂಭ್ರಮದ ಸಂಗೀತ ಸೌರಭ” ಕಾರ್ಯಕ್ರಮ ನೆಡದತ್ತು. ಇದರ ವಿಶೇಷತೆ ಎಂತರ ಹೇಳಿರೆ, ಮಂಗಳೂರಿಲ್ಲಿಪ್ಪ ಐದು ಜೆನ ಖ್ಯಾತ ಹವ್ಯಕ ಸಂಗೀತ ವಿದುಷಿಗೊ, ಸಂಗೀತ ಗುರುಗೊ ಒಂದೇ ವೇದಿಕೆಲಿ ಒಟ್ಟುಸೇರಿ ಸಂಗೀತ ಕಚೇರಿ ನೆಡಶಿಕೊಟ್ಟದು. ಶ್ರೀಮತಿ ಜಯಲಕ್ಷ್ಮೀ ಎಸ್ ಶಾಸ್ತ್ರಿ, ಶ್ರೀಮತಿ ಜಯಲಕ್ಷ್ಮಿ ಪಿ ಭಟ್, ಶ್ರೀಮತಿ ಶ್ಯಾಮಲಾ ಎನ್ ಎಸ್ ಭಟ್, ಶ್ರೀಮತಿ ಅರುಣಾ ಕೆ.ಎಸ್. ಭಟ್ ಅಮೈ ಹಾಂಗೂ ಶ್ರೀಮತಿ ವೈಜಯಂತಿ ಕೆ.ಟಿ.ಭಟ್ ಒಟ್ಟುಸೇರಿ ನೆಡದ ಸಂಗೀತ ಸೌರಭ ಭಾರೀ ಪ್ರಶಂಸೆ ಪಡದತ್ತು. ಪಕ್ಕವಾದ್ಯಲ್ಲಿ ಪಿಟೀಲಿಲ್ಲಿ ಶ್ರೀ ಅನಿಲ ಕೃಷ್ಣ ಕುಂಬ್ಳೆ, ಮೃದಂಗಲ್ಲಿ ಶ್ರೀ ಮುರಳಿಕೃಷ್ಣ ಕುಕ್ಕಿಲ ಸಹಕರಿಸಿದವು. ಶ್ರೀಮತಿ ಮಾಳವಿಕಾ ಪಿ ಎಂ.ಭಟ್ ಅವುದೆ ಈ ಕಾರ್ಯಕ್ರಮಲ್ಲಿ ಸೇರೆಕಾಗಿತ್ತು. ಅನಿವಾರ್ಯ ಕಾರಣಂದ ಅವಕ್ಕೆ ಬಪ್ಪಲಾತಿಲ್ಲೆ.

ಶಂಕರ ಜಯಂತಿಯ ಆಚರಣೆಯ ಸುರುವಿಲ್ಲಿ ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ, ಶ್ರೀ ವೇಣುಗೋಪಾಲ ಭಟ್ ಮಾಂಬಾಡಿ, ನಿಕಟಪೂರ್ವ ಅಧ್ಯಕ್ಷ ಶ್ರೀ ಎಮ್.ಟಿ. ಭಟ್, ಕಾರ್ಯದರ್ಶಿ ಶ್ರೀ ಪಿ. ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಶ್ರೀ ಗೋವಿಂದ ಭಟ್ ಮೊದಲಾದವು ಒಟ್ಟು ಸೇರಿ ದೀಪ ಬೆಳಗಿ ಶ್ರೀ ಶಂಕರಾಚಾರ್ಯರಿಂಗೆ ವಂದಿಸಿದವು. ಮತ್ತೆ ಶ್ರೀಮತಿ ಪಾರ್ವತಿ ಭಟ್ ಮೋಂತಿಮಾರು ಎಲ್ಲೋರನ್ನು ಪರಿಚಯ ಮಾಡಿದವು. ಎಲ್ಲೋರಿಂಗು ಹೂಗು ಕೊಟ್ಟು ಸ್ವಾಗತಿಸಿದವು. ಅಧ್ಯಕ್ಷರು ಈ ಕಾರ್ಯಕ್ರಮ ನೆಡವಲೆ ಸಹಕರಿಸಿದವರ ಎಲ್ಲೋರನ್ನು ಕೃತಜ್ಞತಾಪೂರ್ವಕವಾಗಿ ಅಭಿನಂದಿಸಿದವು. ನಂತರ ಎರಡು ಗಂಟೆಗಳ ಕಾಲ ಅಭೂತಪೂರ್ವವಾಗಿ ಸಂಗೀತ ಸೌರಭ ನೆಡದತ್ತು. ಸಂಗೀತ ಪ್ರೇಮಿಗಳ ಮನ ತಣುಸಿತ್ತು. ಸಂಗೀತ ಗುರುಗಳೆಲ್ಲೋರನ್ನು ಒಟ್ಟುಗೂಡುಸಿ ನೆಡೆದ ಈ ಕಾರ್ಯಕ್ರಮವ ಎಲ್ಲೋರು ಮೆಚ್ಚಿಗೊಂಡವು. ಹವ್ಯಕ ಸಭಾದ ಅತ್ಯಂತ ಯಶಸ್ವಿ ಕಾರ್ಯಕ್ರಮ ಇದೊಂದು ಆಗಿತ್ತು ಹೇಳ್ಲೆ ಕೊಶಿಯಾವ್ತಾ ಇದ್ದು.

4 thoughts on “ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ”

  1. ಹರೇರಾಮ, ಭಾವಯ್ಯ. ಐದು ಜೆನ ವಿದುಷಿಗಳ ಕಾರ್ಯಕ್ರಮ, ಭಜಗೋವಿಂದಂ, ಇದೆಲ್ಲವೂ ; ಶ್ರವಣ, ನಯನಂಗೊಕ್ಕೆ ಆಹ್ಲಾದವಾಗಿಕ್ಕು. ಒಳ್ಳೆ ಶುದ್ದಿ!.

  2. ಮಂಗಳೂರು ಹವ್ಯಕ ಸಭೆ ನಡೆಸಿಕೊಟ್ಟ ಒಳ್ಳೆ ಕಾರ್ಯಕ್ರಮ.
    ಕಾರ್ಯಕ್ರಮದ ಸುರುವಿಂಗೆ ಶಂಕರಾಚಾರ್ಯರಿಂಗೆ ಗುರುವಂದನೆ ಸಲ್ಲಿಸಿ, ಭಜಗೋವಿಂದಂ ಹಾಡಿದ್ದು , ಶಂಕರ ಪಂಚಮಿಲಿ ಎಲ್ಲರೂ ಭಾಗವಹಿಸಿದ ಸುಸಂದರ್ಭ

  3. ಕಾರ್ಯ ಕ್ರಮದ ವಿವರ ಓದಿ, ಪಟಂಗಳನ್ನೂ ನೋಡಿಯಪ್ಪಗ ಅಲ್ಲಿ ಹೋದಷ್ಟೇ ಕೊಶಿಯಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×