25.01.2013: ಐದನೇ ದಿನದ ರಾಮಕಥೆ

ಇಂದು ಐದನೇ ದಿನದ ಶ್ರೀರಾಮಕಥೆ ನೆಡದತ್ತು,  ಸಂಪನ್ನ ಗೊಂಡತ್ತು.  ಇಂದು ರಾವಣನ ಹತ್ರೆ  ಕೆಚ್ಚೆದೆಲಿ  ಹೋರಾಡಿ ಕಡೇಂಗೆ ಸೋಲಲಪ್ಪಗ ತಾನು ಸಂಪಾದಿಸಿದ ಪುಣ್ಯವ ಎಲ್ಲ ಧಾರೆ ಎರೆದು ತ್ಯಾಗಮಾಡಿದ  ವೀರಾಗ್ರಣಿ  ಅನುರಣ್ಯನ ಕಥೆಯ ಗುರುಗೊ ಹೇಳಿದವು. ನಮಗೆ ಏವ ಹೆದರಿಕೆಯೂ ಇಲ್ಲದ್ದೆ ಸುಖವಾಗಿ ಇರುಳು ಒರಗಲೆ ಅನುವು ಮಾಡಿ ಕೊಡ್ತಾ ಇಪ್ಪ,  ದೇಶದ ರಕ್ಷಣೆ ಮಾಡ್ತಾ ಇಪ್ಪ ಸೈನಿಕರ ನಾವು ದಿನ ನಿತ್ಯ ಮನಸ್ಸಿಲ್ಲಿ ನೆನಸೆಳೊಕು ಹೇಳಿ ಈ ದಿನದ ರಾಮಕಥೆಯ  ಅವಕ್ಕೆ ಅರ್ಪಿಸಿದವು ಗುರುಗೊ.   ದೇಶಭಕ್ತಿಯ ಹಿಂದಿ ಪದ್ಯವೊಂದರ ಕೇಳಿ ಅಪ್ಪಗ ಎಲ್ಲೋರ ಕಣ್ಣಾಲಿಗೊ ತುಂಬಿ ಬಂತು.  ಈ ಅನುರಣ್ಯನೇ ಮುಂದೆ ರಾಮನ ರೂಪಲ್ಲಿ ಬಂದು ರಾವಣನ ಕೊಲ್ಲುತ್ತ.  ರೂಪಕಲ್ಲಿ,  ರಾವಣನ ಕಲ್ಪನೆಯ ಸೊಗಸಾಗಿ ನಿರೂಪಿಸಿದವು.  ಕಪಿ ಸೈನ್ಯ ಲಂಕಾ ನಗರವ ಹೊಡಿ ಮಾಡುವುದು, ವೇದವತಿಯ  ಕೋಪ,   ರಾಮ ರಾವಣ ಯುದ್ದ ಎಲ್ಲವೂ ಲಾಯಕು ಬಂತು. ಕೆಲಾವು ಫೊಟೋಂಗೊ ನೋಡ್ಳೆ ಇರಳಿ ಅಲ್ಲದೊ ?

 

ಬೊಳುಂಬು ಮಾವ°

   

You may also like...

6 Responses

 1. ರಾಮಕತೆಯ ಕಣ್ಣಾರೆ ಕಾಂಬಲೆಡಿಗಾಗದ್ದರೂ ಪಟಂಗಳ ಮೂಲಕ ಬೊಳುಂಬು ಮಾವ ತೋರುಸಿಕೊಟ್ಟದಕ್ಕೆ ಧನ್ಯವಾದಂಗೊ.ಶ್ರೀಗುರುಗೊಕ್ಕೂ ಇಲ್ಲಿಂದಲೇ ನಮಸ್ಕಾರಂಗೊ

 2. ಅದ್ಭುತ… ಅಲ್ಲ.. ಅಲ್ಲ., ನಿಜವಾಗಿ ತುಂಬಾ ತುಂಬಾ ಲಾಯಕ ಆಯ್ದು ನಿನ್ನಾಣ ರಾಮಕತೆ. ಇದು ಶ್ರೀ ಸಂಸ್ಥಾನಂದ ಮಾತ್ರವೇ ಸಾಧ್ಯ. ಹರೇ ರಾಮ. ಶ್ರೋತೃಗಳ / ಸಭಿಕರ / ವೀಕ್ಷಕರ ರಾಮಕತೆಲಿ ತಲ್ಲೀನರಪ್ಪಲ್ಲಿ ಸಫಲತೆ ಕಂಡಿದು. ಆ ರಾವಣ ಮಾವನ ನೆಗೆ ಭಾರೀ ಪಷ್ಟಾಯ್ದು. ನಿಜವಾದ ರಾವಣ ಅಲ್ಯೆಲ್ಯೋ ಸುತ್ತಿಗೊಂಡಿಪ್ಪಾಂಗೆ ಅನಿಸಿತ್ತು.

 3. ತೆಕ್ಕುಂಜ ಕುಮಾರ ಮಾವ° says:

  ಕೊಡೆಯಾಲದ ರಾಮಕಥೆ “ನ ಭೂತೋ ನ ಭವಿಷ್ಯತಿ” ಹೇಳುವ ಹಾಂಗೆ ಇದ್ದತ್ತು. ನಿನ್ನೆ ಗುರುಗೋ ಕೊಟ್ಟ ಸಂದೇಶ,ನಮ್ಮ ಸರಹದ್ದು ಕಾಯ್ವ “ಅಮರ್ ಜವಾನ್” ರ ಸ್ಮ್ರರಣೆ,ದೇಶದ ಅತ್ಯುನ್ನತ ಧಾರ್ಮಿಕ ನಾಯಕರೊಬ್ಬ ಶಿಷ್ಯಕೋಟಿಗೆ ಕೊಟ್ಟ ” ವರ್ಷದ ಸಂದೇಶ” ಹೇಳುಲೆ ಯೇವ ಅನುಮಾನವೂ ಇಲ್ಲೆ.
  ಶ್ರೀ ಗುರುಭ್ಯೋ ನಮಃ

  ।ಹರೇ ರಾಮ।

 4. ವಿದ್ಯಾ ರವಿಶಂಕರ್ says:

  ರಾಮಕಥೆಯ ಮನೆಂದಲೇ ನೋಡುವ ಅವಕಾಶ ಸಿಕ್ಕಿತ್ತು ಮಾವ.

 5. ರಾಮಕಥೆ ಹೇಳಿರೆ ರಾಮ ಕಥೆಯೇ…
  ” ರಾಮಕಥೆಯ ಉದ್ದೇಶ ಸಮಾಜ ಪರಿವರ್ತನೆ ಅಲ್ಲದ್ದೆ ಬೇರೆಂತಲ್ಲ” ಹೇಳಿ ಗುರುಗ ಹೇಳಿದ್ದು ಇನ್ನೂ ಕೆಮಿಲಿದ್ದು.. 🙂
  ಅದ್ಭುತ ರಾಮಕಥೆ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *