Oppanna.com

ಆನುದೆ ಒಂದರಿ ಕಳ್ಳ ಆದೆ !!

ಬರದೋರು :   ಬೊಳುಂಬು ಮಾವ°    on   14/03/2012    36 ಒಪ್ಪಂಗೊ

ಬೊಳುಂಬು ಮಾವ°

ಈ ಬೊಳುಂಬು ಮಾವನ ಬಂಡಲ್ ಕತೆ ಸುರು ಆತು ಹೇಳಿ ಗ್ರೇಶೆಡಿ. ಇದು ನಿಜವಾಗಿಯೇ ನೆಡದ ಘಟನೆ ಹೇಳಿ ಹೇಳದ್ದೆ ಎನಗೆ ಮನಸ್ಸು ತಡೆತ್ತಿಲ್ಲೆ.
(ಕಳ್ಳ ಆದೆ ಅಷ್ಟೆ, ಆಗ್ಯೆಂಡಿದ್ದಿದ್ದೆ, ಅಥವಾ ಅಗ್ಯೊಂಡಿದ್ದೆ ಹೇಳಿ ಅಲ್ಲ!).
ಕತೆ ಹೇಳುವನ್ನ ಮದಲೆ ಎನ್ನ ಬಗ್ಗೆ ರಜ ನಿಂಗೊಗೆ ಹೇಳದ್ರೆ ಸರೀ ಅರ್ಥ ಆಗ.

ಆನು ಕಾಸರಗೋಡು ಗವರ್ಮೆಂಟು ಕಾಲೇಜಿಂಗೆ ಮಣ್ಣು ಹೊತ್ತವ°; ಬೊಳುಂಬಿಂದ ವಿದ್ಯಾನಗರಕ್ಕೆ ಬೇರೆ ಬೇರೆ ದಾರಿಲಿ ಹೋಪಲಕ್ಕು.
– ನೀರ್ಚಾಲಿಂಗೆ ಬಂದು ಬದಿಯಡ್ಕ ಮಾರ್ಗವಾಗಿ ವಿದ್ಯಾನಗರಕ್ಕೆ ಹೋಪಲಕ್ಕು.
– ನೀರ್ಚಾಲಿಂದ ಮಾನ್ಯ ಮೂಲಕ ವಿದ್ಯಾನಗರಕ್ಕೆ ಹೋಪಲಕ್ಕು.
– ಕೊರ್ತಿಗುಳಿ ಹೊಂಡಕ್ಕಿಳುದು ಗುಡ್ಡೆ ಹತ್ತಿ ಮಧೂರು ಆಗಿ ಹೋಪಲಕ್ಕು.
– ಬೇಳಕ್ಕೆ ಬಂದು ಕುಂಬಳೆಗೆ ಬಂದು ಕಾಸರಗೋಡು ಆಗಿ ಹೋಪಲಕ್ಕು. ಬೇರೆ ಬೇರೆ ಮಾರ್ಗಂಗೊ.
ಒಂದೊಂದು ದಿನ ಒಂದೊಂದು ರೂಟುಗೊ; ಎನ್ನ ಕ್ಲಾಸು ಮೇಟುಗೊವಕ್ಕೆಲ್ಲ, ಎನ್ನ ಮನೆ ಎಲ್ಲಿ ಬತ್ತು ಹೇಳಿ ಇನ್ನುದೆ ಅರ್ಥ ಆಗಿರ ಹಾಂಗಿಪ್ಪ ರೂಟುಗೊ!
ಒಂದೆರಡು ಸರ್ತಿ ಮಧೂರು ಮೂಲಕ ಹತ್ತು ಕಿಲೋ ಮೀಟರು ನೆಡಕ್ಕೊಂಡು ಹೋದ ಅನುಭವವುದೆ ಎನ್ನದು.

ಏವ ರೂಟು ಆದರುದೆ ಇಪ್ಪತ್ತೈದು ಪೈಸೆಂದ ಜಾಸ್ತಿ ಆಗ ಟಿಕೇಟಿನ ಪೈಸೆ. ಅಂಬಗ ಅದಕ್ಕೆ ಎಸ್ ಟಿ (ಸ್ಟುಡೆಂಟ್ ಟಿಕೆಟ್) ಹೇಳಿ ಹೆಸರು.

ಕಾರ್ಡು ಗೀರ್ಡು ಎಂತದುದೆ ಇಲ್ಲೆ. ಮೀನು ಮಾರ್ತವುದೆ ಎರಡು ಪುಸ್ತಕ ಕೈಲಿ ಹಿಡುಕ್ಕೊಂಡರೆ, ಎಸ್ ಟಿ ಸಿಕ್ಕುಗು!! 🙂

ಎಂಗಳ ಕಾಲೇಜಿನ ಬಗ್ಗೆ ಮರುವಳ ನಾರಾಯಣಣ್ಣ ಒಳ್ಳೆ ಮಾಹಿತಿ ಕೊಡುಗು; ಅವುದೆ ಎಂಗಳ ಕಾಲೇಜಿಂಗೆ ಬಂದವೇ.
ಶರ್ಮಪ್ಪಚ್ಚಿಯುದೆ ಎಂಗಳ ಕಾಲೇಜಿನವು ಹೇಳಿ ಎನ್ನ ಅಂದಾಜು. ಪೀಟಿಕೆ ಹಾಂಗಿರಳಿ; ಈಗ ವಿಷಯಕ್ಕೆ ಬಪ್ಪೊ°.

~

ಸಾಸಮೆಗುದೇ ಜಾಗೆ ಇಲ್ಲೆ...!? (ಪಟ "ಪ್ರದಕ್ಷಿಣೆಂದ" ತೆಗದ್ದದು, ಕದ್ದದಲ್ಲ)

ಕಾಲೇಜು ಬಿಟ್ಟು ಮಧ್ಯಾಹ್ನದ ಉರಿ ಬೆಶಿಲಿಲ್ಲಿ ಬಸ್ಸಿಂಗೆ ಕಾದು ಕೂದೊಂಡಿದ್ದಿದ್ದೆ ವಿದ್ಯಾನಗರದ ಬಸ್ಟೇಂಡಿಲ್ಲಿ.
ಆಂದು ಬದಿಯಡ್ಕಕ್ಕೆ ಆಗಿ ಎಂಗಳ ಊರಿಂಗೆ ಹೋಪ ಐಡಿಯಾ ಎನ್ನದು. ಬಸ್ಸು ಹತ್ತು ನಿಮಿಷ ತಡವಾಗಿಯೇ ಬಂತು. ಬಸ್ಸಿಂಗೆ ಹತ್ತುತ್ತ ಗಡಿಬಿಡಿಲಿ ಆನುದೆ ಸೇರಿದೆ.
ಕ್ಲೀನರಿನ ಬೈಗಳು ತಿಂದೊಂಡು ಹಾಂಗೂ ಹೀಂಗೂ ಮಾಡ್ಯೊಂಡು ಬಸ್ಸು ಹತ್ತಿದೆ. ಬಸ್ಸಿಲ್ಲಿ ಜೆನ ಕಿಕ್ಕಿರಿದು ಹೇಳ್ತವಲ್ಲದೊ, ಹಾಂಗೆ ತುಂಬಿಯೊಂಡಿದ್ದವು.
ಉಪ್ಪಿನ ಕಾಯಿ ಭರಣಿ, ಸಾಸಮೆಗುದೆ ಜಾಗೆ ಇಲ್ಲೆ – ಎಂತೆಲ್ಲ ಉಪಮೆಗಳ ಕೊಡ್ಳೆ ಅಕ್ಕು; ಭಾರತದ ಜೆನಸಂಖ್ಯೆ ಬಗ್ಗೆ ಸರಿಯಾಗಿ ತಿಳುವಳಿಕೆ ಬರೆಕಾರೆ ನಮ್ಮೂರಿನ ಬಸ್ಸಿಂಗೆ ಒಂದರಿ ಹತ್ತೆಕು!

ಮುಂದೆ ಹೋಗಿ ಹೇಳಿ ಕಂಡಕ್ಟರಿನ ಆರ್ಡರಿನ ಹಾಂಗೆ ಬಸ್ಸಿಲ್ಲಿ ಮುಂದೆ ಹೋದೆ; ಬಸ್ಸುದೆ ಮುಂದೆ ಹೋಪಲೆ ಸುರು ಆತು.
ಕೈಲಿಪ್ಪ ಭಾರವಾದ ಪುಸ್ತಕಂಗಳ ಒಟ್ಟಿಂಗೆ ಸುಲಾಬಲ್ಲಿ ಇಪ್ಪತ್ತು ಮಾರ್ಕುಗಳ ಗಳುಸಿಕೊಡ್ತ ರಿಕಾರ್ಡು ಪುಸ್ತಕವನ್ನು ಹಿಡ್ಕೊಂಡಿದ್ದಿದ್ದೆ.
ಎಂತ ಇವಂಗೆ ಪುಸ್ತಕಂಗಳ ಬೇಗಿಲ್ಲಿ ಹಾಕೆಂಬಲೆ ಆವ್ತಿತಿಲ್ಲೆಯೋ ಹೇಳಿ ಕೇಳಿಕ್ಕೆಡಿ. ಅಂಬಗಾಣ ಕಾಲಲ್ಲಿ ಪುಸ್ತಕಂಗಳ ಅಟ್ಟಿಯ ಕೈಲಿ ಹಿಡ್ಕೊಂಡು ಹೋಪದು ಫೇಶನ್ನು!
ಕಾಲೇಜು ಮಕ್ಕೊ ಹೇಳಿ ಕಾಣೆಕನ್ನೆ. 😉

ಇರಳಿ. ಒಂದು ಕೈಲಿ ಪುಸ್ತಕಂಗೊ, ಇನ್ನೊಂದು ಕೈಲಿ ಕಂಡಕ್ಟ್ರಿಂಗೆ ಕೊಡ್ಳೆ ಇಪ್ಪ ಚಿಲ್ಲ್ರೆ ಪೈಸೆಯನ್ನೂ ಬಸ್ಸಿನ ಮೇಲಾಣ ಸರಳನ್ನು ಹಿಡುದು ನೇಲುತ್ತಾ ನಿಂದೊಂಡಿದ್ದಿದ್ದೆ.
ಎನ್ನ ಕಾಲು ಒಂದು ಕಡೆಲಿ ಇದ್ದರೆ, ತಲೆ ಮತ್ತೊಂದು ಕಡೆಲಿ ಇತ್ತು. ಅದರೊಟ್ಟಿಂಗೆ, ಬೇರೆಯವರ ಭಾರವನ್ನೂ ಎನ್ನ ಕೈಲಿಪ್ಪ ಶಕ್ತಿಲೇ ಆಧರಿಸಿ ಹಿಡಿಯೇಕಾಗಿತ್ತು.
ಅದರೆಡೆಲಿ ಎನ್ನ ಕಾಲುಗವಕ್ಕೆ ನಿಂಬಲೆ ಸರಿಯಾಗಿ ಜಾಗೆ ಸಿಕ್ಕದ್ದೆ ಒದ್ದಾಡ್ತಾ ಇತ್ತು. ಜೆನರ ಬೈಗಳು, ಅಲ್ಯಾಣ ಬೆಗರು ವಾಸನೆ, ಆರಿಂಗೂ ಬೇಡ ಎನ್ನ ಅವಸ್ಥೆ.

ಕಂಡಕ್ಟರು ಬಂದರೆ, ಅವನ ಬೈಗಳು ಬೇರೆಯೇ. ಚಿಲ್ರೆ ಕೊಟ್ಟಿದಿಲ್ಲೇ ಹೇಳಿಯೋ, ಮುಂದೆ ಹೋಯಿದಿಲ್ಲೇ ಹೇಳಿಯೋ, ಮುಂದೆ ಹೆಚ್ಚು ಹೋದ್ದೆಂತಕೆ ಹೇಳಿಯೋ, ಎಂತಾದರೂ ಕಾರಣ ಇದ್ದೇ ಇರ್ತು.
ಅಷ್ಟು ಜನರ ಎಡಕ್ಕೆಲ್ಲಿ ಅದು ಎಂತ ಮಾಡುಗು. ಕಂಡಕ್ಟರ್ ಬಂದಪ್ಪಗ ಕೈಲಿಪ್ಪ ಪೈಸೆಯ ಹೇಂಗೋ ಕೊಟ್ಟೆ.
ಎನ್ನ ಕಡೆಂಗೆ ಒಂದರಿ ಕೋಪಲ್ಲಿ ನೋಡಿ, ಕೊಟ್ಟ ಚಿಲ್ರೆಯ ಬೇಗಿನ ಒಳ ಇಡುಕ್ಕಿಕ್ಕಿ, ಟಿಕೇಟು ಕೂಡಾ ಕೊಡದ್ದೆ ಹೋತು. ಯಬ್ಬ. ಎನ್ನ ಒಂದು ಕೈಗೆ ರಜಾ ಹಾಯ್ ಹೇಳಿ ಆತು.
ಬಸ್ಸಿನ ಒಳ ಇದ್ದ ಎನಗೆ ಹೆರ ಎಂತೂ ಕಂಡೊಂಡಿದ್ದತ್ತಿಲ್ಲೆ. ಬೆಣಂಚುದೆ ಅಷ್ಟಕ್ಕಷ್ಟೆ. ಗಾಳಿ ಅಲ್ಲಿಗೆ ಬಪ್ಪಲೆ ಸಾಧ್ಯವೇ ಇಲ್ಲೆ.
ಎದುರು ನೋಡಿರೆ ಸಾಲಾಗಿ ಕೈಗೊ.

ಎನ್ನ ಎದುರು ನಿಂದೊಂಡಿದ್ದಿದ್ದ ಮನುಷ್ಯನ ಹಿಂದಾಣ ಹೊಡೆ. ಅದರ ಚಾಣೆ ಮಂಡೆ ಮಾಂತ್ರ ಕಾಣ್ತಾ ಇತ್ತು.
ಮೂವತ್ತೋ ನಲುವತ್ತೋ ವರ್ಷ ಇಕ್ಕಾಯ್ಕು ಅದಕ್ಕೆ. ರಜಾ ಪೈಸೆಕ್ಕಾರನ ಹಾಂಗೇ ಇತ್ತು.
ಕಾಲಕ್ಕೆ ತಕ್ಕ ಹಾಂಗೆ ಪೇಂಟು ಅಂಗಿ ಹಾಕಿದ್ದತ್ತು. ಪೇಂಟಿನ ಹಿಂದಾಣ ಕಿಸೆಲಿ ದಪ್ಪದ ಒಂದು ಪರ್ಸು. ಅರ್ಧ ಹೆರಬಂದೊಂಡಿತ್ತು. ಅದರಲ್ಲಿ ತುಂಬ ನೋಟಿತ್ತೋ, ಚೀಟಿಗೊ ಇತ್ತೊ, ಎಂತೂ ಗೊಂತಿಲ್ಲೆ.
ರಜಾ ಹೊತ್ತಿನ ಪ್ರಯಾಣ ಕಳುದತ್ತು. ಎಲ್ಲಿಗೆ ಎತ್ತಿತ್ತು, ಒಂದುದೆ ಗೊಂತಿಲ್ಲೆ. ಎನಗೆ ಹೇಂಗಾರೂ ಬದಿಯಡ್ಕಕ್ಕೆ ಎತ್ತಿ ಅಪ್ಪಗ ಇಳುದರೆ ಆತು.
ಮತ್ತೆಂತ ತಲೆ ಬೆಶಿ. ಎನ್ನ ಗಮನ ಎದುರಾಣ ಮನುಷ್ಯನ ಪಕ್ಕೀಟಿನ ಕಡೆಂಗೆ ಹೋತು.

ಚೆಲ. ಪಕ್ಕೀಟು ಅಲ್ಲಿ ಇಲ್ಲೆ! ಕೆಳ ನೋಡಿರೆ ಅಲ್ಲೇ ಬಿದ್ದೊಂಡಿತ್ತು. ಆರಾರ ಕಾಲಿನ ಎಡೆಲಿ ಸಿಕ್ಕಿ, ಅದು ಇನ್ನು ಅಡಿಯಂಗೆ ಬೀಳುಗು.
ನವಗೆಂತೂ ಕಷ್ಟ ಇಲ್ಲದ್ರೆ, ಬೇರೆಯವಕ್ಕೆ ಉಪಕಾರ ಏಕೆ ಮಾಡ್ಳಾಗ ಅಲ್ಲದೊ? “ಪರೋಪಕಾರಾರ್ಥಂ ಇದಂ ಶರೀರಂ” ಹೇಳಿಯೊಂಡು ಮೆಲ್ಲಂಗೆ ಕಾಲಿಲ್ಲೇ ಪಕ್ಕೀಟಿನ ಮೇಗೆ ನೆಗ್ಗಿದೆ!
ಅಲ್ಲಿ ಬಗ್ಗಲೆ ಜಾಗೆ ಇದ್ದರೆ ತಾನೆ ಬಗ್ಗುತ್ತದು. ಆನು ಪಕ್ಕೀಟಿನ ತೆಗದ್ದದು ಆರ ಗಮನಕ್ಕೂ ಬಯಿಂದಿಲ್ಲೆ.
ಅದು ಆರ ಪಕ್ಕೀಟು ಹೇಳಿ ಎನಗೆ ಸರೀ ಆಗಿ ಗೊಂತಿದ್ದ ಕಾರಣ ಅದರ ಕೊಡ್ಳೆ ಬೇಕಾಗಿ ಆ ಜೆನವ ದಿನಿಗೇಳಿದೆ.
ಆ ಗದ್ದಲಲ್ಲಿ ಅದಕ್ಕೆ ಕೇಳಿತ್ತೋ ಇಲ್ಲೆಯೋ ಗೊಂತಾತಿಲ್ಲೆ; ಇನ್ನೊಂದರಿ ದಿನಿಗೇಳೆಕು – ಅಂಬಗಳೆ ಅದು ಅದರ ಹಿಂದಾಣ ಕಿಸೆಗೆ ಕೈ ಹಾಕಿ ನೋಡಿತ್ತು!
ಪಕ್ಕೀಟು ಅಲ್ಲಿಲ್ಲೆ ಹೇಳಿ ತಿರುಗಿ ನೋಡಿತ್ತು. ಎನ್ನ ಕೈಲಿ ಪಕ್ಕೀಟು !!

ಈಗಾಣ ಕಾಲಲ್ಲಿ ಹೇಂಗಿಪ್ಪ ಜೆನಂಗೊ ಎಲ್ಲ ಇರ್ತವಿಲ್ಲೆ.
ಎನ್ನ ಕೈಲಿ ಪಕ್ಕೀಟು ನೋಡಿ ಅದಕ್ಕೆ ಸಂಶಯ ಬಂದದೆ. ಸಂಶಯ ಹೇಳಿರೆ ಅದೊಂದು ಪಿಶಾಚಿ ಆಡ !
ಅದು ತಲಗೆ ಹೊಕ್ಕರೆ ? ಇದು ಎಂತ ಕಾಮನ್ ಕತೆ. ಇದರಲ್ಲಿ ಎಂತ ಇದ್ದು ಹೇಳಿಕ್ಕೆಡಿ. ಇದು ಇನ್ನುದೆ ಇಲ್ಲಿಗೆ ಮುಗುದ್ದಿಲ್ಲೆ.

ಈ ಪರ್ಸ್ ನನ್ನದು, ನಿನ್ನ ಕೈಗೆ ಹೇಗೆ ಬಂತು ?

ಇಲ್ಲ ಸಾರ್, ನಾನು ತೆಗೆದದ್ದಲ್ಲ ಪರ್ಸು ಕೆಳಗೆ ಬಿದ್ದಿತ್ತು, ನಿಮಗೆ ಕೊಡೋಣವೆಂದು ಹೆಕ್ಕಿದೆ” (ಹವ್ಯಕ ಭಾಷೆ ಪ್ರಯೋಗ ಮಾಡ್ತಿಲ್ಲೆ, ಎಂತ ಹೇಳಿರೆ, ಎನ್ನ ಕನ್ನಡ ಭಾಷೆಯೇ ಅವಕ್ಕೆ ಅರ್ಥ ಆಯಿದಿಲ್ಲೆ ಆಡ. ಇನ್ನು ಹವ್ಯಕಲ್ಲಿ ಮಾತಾಡಿರೆ ಅಕ್ಕೊ !!).

ಹುಂ. ಬಿದ್ದಿತ್ತಂತೆ, ದೊಡ್ಡ ಪರೋಪಕಾರಿ ನೀನು, ಹೀಗೆ ಎಷ್ಟು ಜನಕ್ಕೆ ಉಪಕಾರ ಮಾಡಲು ಹೋಗಿದ್ದೀಯಾ? ನಾನು ನೋಡಿದುದರಿಂದ ಆಯಿತು. ಇಲ್ಲದಿದ್ದರೆ ಯಾವಾಗಲೇ ಅದು ಮಾಯವಾಗಿ ಬಿಡುತ್ತಿತ್ತು
ಅದರ ದೊಡ್ಡ ಸ್ವರ ಕೇಳಿ ಅಪ್ಪಗ ಹತ್ರಾಣವೆಲ್ಲ, ಎಂತ ಕತೆ ಹೇಳಿ ವಿಚಾರುಸಿದವು.
ಎನ್ನ ಮಾತಿಂದ ದೊಡ್ಡ ಮನುಷ್ಯನ ಮಾತಿಂಗೆ ಜಾಸ್ತಿ ಬೆಲೆ ಬಂತು. ಆನೊಬ್ಬ ಪಿಕ್ ಪಾಕೆಟಿನ ಕಳ್ಳ ಹೇಳಿಯೇ ತೀರ್ಮಾನ ಆತು.

ಎನ್ನ ಗುರ್ತದವು ಆರುದೆ ಬಸ್ಸಿಲ್ಲಿ ಇದ್ದಿದ್ದವಿಲ್ಲೆ. ಆನು ಒಂದೊಂದು ದಿನ ಒಂದೊಂದು ರೂಟು ಹಿಡುದು ಹೋದ್ದದು ಎನಗೇ ತಿರುಗಿ ನಿಂದತ್ತದ!
ಅಂಬಗ ಏವದೋ ಒಂದು ಜೆನದ ಗಮನ ಎನ್ನ ಪ್ಯಾಂಟಿನ ಗಿಸೆಗೆ ಹೋತು. ಅಲ್ಲಿ ತಲೆ ನೆಗ್ಗಿ ನಿಂದೊಂಡಿದ್ದಿದ್ದ ಫಳ ಫಳನೆ ಹೊಳೆತ್ತ ವಸ್ತುವ ಕಂಡಪ್ಪಗ ಅವನ ಸಂಶಯ ಮತ್ತಷ್ಟುದೆ ಬಲ ಆತು.
ಆನುದೆ ಎನ್ನ ಗಿಸೆ ನೋಡಿದೆ. ಎಂತರ ಅದು, ಒಂದು ಕತ್ತರಿ !!
ಆ ಜೆನ ಒಳ್ಳೆ ಪತ್ತೇದಾರ ಪುರುಷೋತ್ತಮನ ಹಾಂಗೆ ಆ ಕತ್ತರಿಯ ತೆಗದು ಎಲ್ಲೋರಿಂಗು ತೋರುಸಿತ್ತು. ಎನ್ನ ಕಾಲುಗೊ ನಡುಗಲೆ ಸುರು ಆತು.

ಓ, ಕತ್ತರಿಯೂ ಇದೆ. ನನ್ನ ಪರ್ಸಿಗೆ ಕತ್ತರಿಯನ್ನು ಉಪಯೋಗಿಸಲೇ ಇಲ್ಲವೆಂದು ಕಾಣುತ್ತದೆ ಹೆ ಹ್ಹೆ ಹ್ಹೆ”. ದೊಡ್ಡಕೆ ನೆಗೆ ಮಾಡಿತ್ತು ಎದುರಾಣ ಜೆನ.
ಕಳ್ಳಮ್ಮಾರ್ ಸತ್ಯಂ ಪರೆಯಾನೆ ಇಂಡೊ ? ಕಾಣುಂಬೊ ವಳರೆ ಸಾಧು ಪೋಲೆ ಇಂಡ್. ಚೈಯಿನ್ನದು ಇಂಗನತ್ತಾ ಪಣಿ” – ಎನ್ನ ಮಲೆಯಾಳ ಸರೀ ಆಯಿದೋ ಗೊಂತಿಲ್ಲೆ. (ನಮ್ಮ ದೊಡ್ಡಭಾವನೇ ಹೇಳೆಕಷ್ಟೆ!) ಆನು ಅವು ಹೇಳ್ತರ ಕೇಳ್ತ ಸ್ಥಿತಿಲಿ ಇತ್ತಿಲ್ಲೆ.
ಬಾಯಲ್ಲಿ ವೇದ ವಾಕ್ಯ, ಮಾಡುವುದೆ ಇಂಥಾ ಕೆಲ್ಸ. ಹೀಗಿರುವವರನ್ನು ಸುಮ್ಮನೆ ಬಿಡಬಾರದು ”.
ಇಲ್ಲ ಸಾರ್ ನಾನು ತೆಗೆಯಲಿಲ್ಲ” ಎನ್ನ ಉತ್ತರ ಆರಿಂಗೆ ಬೇಕು ?

ಬಸ್ಸಿನೊಳಾಣ ಗಲಾಟೆ ನೋಡಿ ಕಂಡಕ್ಟರು ಎಂಗ ಇದ್ದಲ್ಲಿಗೆ ಬಂತು. ಅದರ ಹತ್ರೆ ಎಲ್ಲೋರುದೆ ಸಂಗತಿಯ ಸುಣ್ಣ ಬಣ್ಣ ಬಳುದು ರೋಚಕವಾಗಿ ಹೇಳಿದವು.
ಎನ್ನ ಮಾತಿಂಗೆ ಮೂರುಕಾಸಿನ ಬೆಲೆಯುದೆ ಇಲ್ಲದ್ದೆ ಆತು; ಎನಗೆ ಕಳ್ಳನ ಪಟ್ಟ ಸುಲಾಬಲ್ಲಿ ಸಿಕ್ಕಿತ್ತು.

ಕಂಡಕ್ಟರ್ ಹೇಳಿತ್ತು “ಆಂ. ಇವ ಒಬ್ಬ ಕಾಲೇಜು ಸ್ಟುಡೆಂಟು ಅಂತ ನನ್ನ ಹತ್ರ ಎಸ್.ಟಿ. ತೆಕೊಂಡಿದ್ದ ”.
ಕೈಯಲ್ಲಿ ಎರಡು ಪುಸ್ತಕ ಹಿಡಿದುಕೊಳ್ಳುವುದು, ಆಗ ಎಸ್ ಟಿ ಯು ಸಿಗುತ್ತದೆ, ಅದರೊಟ್ಟಿಗೆ ಇಂಥಾ ಕೆಲಸವನ್ನೂ ಮಾಡುವುದು. ಹೆ. ಹೆ. ಡಬ್ಬಲ್ ಪ್ರೊಫಿಟ್ಟು. . . !!” ಒಂದರ ವ್ಯಂಗ್ಯ.
ತನ್ನ ಮುಖ ನೋಡಿದರೆ ಎಲ್ಲರೂ ತನ್ನನ್ನು ನಂಬ ಬಹುದು ಅಂದು ಕೊಂಡಿದ್ದಾನೆ. ಮಾಲು ಸಮೇತ ಕಂಡುದರಿಂದ ಇವನದ್ದೆಲ್ಲಾ ಬಯಲಾಯಿತು. ಇಲ್ಲದಿದ್ದರೆ . . .” ಮತ್ತೊಂದರ ದೂಷಣೆ.
ಇಲ್ಲ ನಾನು ನಿರಪರಾಧಿ ” ಮಾತು ಎನ್ನ ಬಾಯಿಲಿ ಬಯಿಂದೇ ಇಲ್ಲೆ !
“ಇವನೊಬ್ಬ ಕಾಲೇಜು ಸ್ಟುಡೆಂಟಂತೆ, ಇವನಿಗ್ಯಾಕೆ ಕತ್ತರಿ ? ಹ ಹ್ಹ ಹ್ಹಾ, ಕಾಲೇಜಲ್ಲಿ ಕಿಸೆ ಕತ್ತರಿಸಲು ಹೇಳಿಕೊಡುತ್ತಿರ ಬೇಕು
”. ಏವದೋ ಒಂದು ಜೋಕು ಹಾರುಸಿತ್ತು.
ಎಲ್ಲೋರು ಒಟ್ಟಿಂಗೆ ನೆಗೆ ಸೇರುಸಿದವು.
ಹೂಂ. ಇವನಿಗೆ ನಾಲ್ಕು ಬಾರಿಸಿದರೇ ಸರಿಯಾಗಿ ಬಾಯಿ ಬಿಡುತ್ತಾನೆ. ಇವನನ್ನು ಪೋಲೀಸಿಗೆ ಕೊಡೋಣ, ಅವರು ಬಾಯಿ ಬಿಡಿಸುತ್ತಾರೆ. ” ಒಂದು ಅನುಭವಸ್ಥನ ಮಾತು.

ಏವದೋ ಒಂದು ಬಂದು ಎನ್ನ ಕೈ ಹಿಡುದತ್ತು!
ಎನ್ನದೆಂತ ಅಭ್ಯಂತರ ಇತ್ತಿಲ್ಲೆ. ಮತ್ತೊಂದು ಜೆನ ಬಂದು ಎನ್ನ ಕಿಸೆಂದ ಕತ್ತರಿಯ ಹಿಡುದು ಎಳದತ್ತು. ಅದಾ ಅದರೊಟ್ಟಿಂಗೆ ಒಂದು “ಚಿಮ್ಮುಟಿ”ಯುದೆ ಹೆರಬಂತು !
ಒಟ್ಟಿಂಗೆ ಒಂದು ಉದ್ದದ ಹಿಡಿಯಿದ್ದ ಸೂಜಿಯುದೆ !!
ಹೋ, ಇವನೊಡನೆ ಕತ್ತರಿ ಮಾತ್ರವಲ್ಲ. ಚಿಮುಟಿ, ಸೂಜಿಗಳೂ ಇವೆ. ಇವ ಹೀಗೆ ಕಂಡರೂ ಸಾಧಾರಣ ಆಸಾಮಿ ಅಲ್ಲ. ನೋಡಿ ಇವನ ಮುಸುಂಟು ನೋಡಿ”.

ಈಗ ಬಸ್ಸಿನ ಡ್ರೈವರಿಂಗುದೆ ಸಂಗತಿ ಗೊಂತಾತು. ಅದು ವಿಷಯಂಗಳ ಎಲ್ಲ ತಿಳ್ಕೊಂಡೇ ಬಸ್ಸು ಬಿಡುತ್ತಾ ಇದ್ದತ್ತು. ಏವದೋ ಸ್ಟಾಪ್ ಬಂತು ಹೇಳಿ ಕಾಣ್ತು. ಬಸ್ಸಿನ ಮಾರ್ಗದ ಕರೇಂಗೆ ಹೋಗಿ ನಿಲ್ಲುಸಿತ್ತು.
ಎರಡು ಜೆನಂಗೊ ಎನ್ನ ರಟ್ಟೆ ಹಿಡುದವು. ಇವು ಎನ್ನ ಎಲ್ಲಿಗೆ ಕರ್ಕೊಂಡು ಹೋವ್ತವು ಹೇಳಿ ಗೊಂತಾತು.
ಅಯ್ಯೋ ನಾನು ಕಳ್ಳನಲ್ಲ. ನಾನು ಕಾಲೇಜು ವಿದ್ಯಾರ್ಥಿ ನಿಜ. ನಾನು ಅವರ ಪರ್ಸು ತೆಗೆದಿಲ್ಲ ನನ್ನ ಮಾತು ನಂಬಿ ”. ಅವರ ಬೇಡ್ಯೊಂಡೆ.
ಹುಂ. ವಿದ್ಯಾರ್ಥಿಯಂತೆ, ಹೆ ಹ್ಹೆ, ಮಾವನ ಹತ್ರ ನಿಜ ಹೇಳುವೆಯಂತೆ . . . ಬಾರೊ . . . ನಿಮ್ಮಾವನ ಮನೆಗೆ ಹೋಗೋಣ”.

ಆನು ಕೆಳ ಇಳಿವೋ ಹೇಳಿ ಗ್ರೇಶಿರೆ, ಜೆನಂಗೊ ಎನ್ನ ಬಿಡೆಕಾನೆ. ಅವರ ಎಲ್ಲಾ ದೂಡೆಂಡು ಕೆಳ ಇಳಿತ್ತಾ ಇಪ್ಪಗ,
ಏಯ್, ಬಾರೋ . . . . ಮಗನೆ ! ನಿನ್ನಂಥವರನ್ನು ಸುಮ್ಮನೆ ಬಿಡಬಾರದು ”.
ಎನ್ನ ಎದುರಾಣ ಮನುಷ್ಯನೂ, ಕಂಡಕ್ಟರನು, ಮತ್ತೊಂದೆರಡು ಜೆನಂಗೊ ಎನ್ನೊಟ್ಟಿಂಗೆ ಕೆಳ ಇಳುದು ಬಂದವು. ಬದಿಯಡ್ಕ ಸ್ಟೇಷನಿಂಗೆ ಬಂದಾತು.

~
ಆನು ವಿಧೇಯ ವಿದ್ಯಾರ್ಥಿ ಹಾಂಗೆ ಹೋದೆ. ವಿಷಯವೆಲ್ಲವನ್ನುದೆ ಅಲ್ಯಾಣ ಸಬ್ ಇನ್ಸ್‌ಪೆಕ್ಟರ್ಂಗೆ ತಿಳುಸಿದವು.
ಆ ಕರೀ ಪೋಲೀಸು ಕೆಂಪು ಕಣ್ಣು ಮಾಡಿ ಎನ್ನ ನೋಡಿ “ಏಯ್ ಯಾರೋ ನೀನು, ಏನೋ ನಿನ್ನ ಗಲಾಟೆ, ನಿಜಾ ಬೊಗಳು” ಹೇಳಿತ್ತು.

ಆನೆಂತ ಕೊರಪ್ಪಲೆ, ನಾಯಿಯೊ ?!

ಹೆಚ್ಚಿನಂಶವುದೆ ಎನ್ನ ಮೋರೆಯ ನೋಡಿ ಅಪ್ಪಗ ಅದಕ್ಕೆ ನಿಜವಾದ ಸಂಗತಿ ಅರ್ಥ ಆಗಿಪ್ಪಲೂ ಸಾಕು.
ಆದರೂ ಎನ್ನ ಮನಸ್ಸಿಲ್ಲಿ ಇಪ್ಪದರೆ ಹೆರ ಬರುಸಲೆ ಬೇಕಾಗಿ ಹಾಂಗೆ ದರ್ಪ ತೋರುಸಿದ್ದಾಯ್ಕು. ಆನು ಎಲ್ಲ ಹೆದರೆಂಡೇ, ಎನ್ನ ಹೆಸರು, ವಿಳಾಸ ಎಲ್ಲವನ್ನೂ ಹೇಳಿದೆ.

ಓ, ಬಟ್ರು” ಹೇಳಿತ್ತು. ಬಟ್ರುಗೊ ಹೀಂಗಿಪ್ಪ ಕೆಲಸ ಮಾಡವು ಹೇಳಿ ಆತಾಯ್ಕು.
ಆನು ಕಾಸರಗೋಡು ಕಾಲೇಜಿಲ್ಲಿ ಕಲಿತ್ತವ, ಕಡೇಣವರ್ಷ ಬಿ ಎಸ್ ಸಿ ಮಾಡ್ತಾ ಇದ್ದೆ ಹೇಳಿ ಎನ್ನ ಐಡೆಂಟಿಟಿ ಕಾರ್ಡನ್ನುದೆ ತೋರುಸಿದೆ.
ಎಂಗಳ ಊರಿನ ದೊಡ್ಡವರೊಬ್ಬರ ಹೆಸರು ಹೇಳಿ ಗುರ್ತದವನೋ ಹೇಳಿ ಕೇಳಿ ಅಪ್ಪಗ ಅವು ಎನ್ನ ಅಣ್ಣನೇ ಹೇಳಿ ಹೇಳಿದೆ.
ಪೋಲೀಸಿಂಗೆ ನೆಗೆ ಬಂದು ತಡೆಯ ! ಯಬ್ಬ, ಎನ್ನ ಕೆಲಸ ತುಂಬಾ ಹಗುರ ಆತು!
~

ಪೋಲೀಸು ಸ್ಟೇಶನಿಲಿ ’ಪೋಲಿ’?

ಎಂತಕ್ಕಾದರೂ ಇರಳಿ ಹೇಳಿ ಎನ್ನ ವಿಳಾಸ ದಸ್ಕತ್ತು ಎಲ್ಲ ತೆಕ್ಕೊಂಡು ಎನ್ನ ನಿರಪರಾಧಿ ಹೇಳಿ ತೀರ್ಮಾನಿಸಿತ್ತು ಪೋಲೀಸು. ಆದರುದೆ, ಆ ಕತ್ತರಿ, ಚಿಮ್ಮುಟಿ ಎನ್ನ ಹತ್ರಂಗೆ ಹೇಂಗೆ ಬಂತು ಹೇಳಿ ಅದಕ್ಕೆ ಗೊಂತಾಯಿದಿಲ್ಲೆ!
ಅದೆಲ್ಲಾ ಸರಿ, ಈ ಕತ್ತರಿ, ಸೂಜಿ, ಚಿಮ್ಮುಟಿ ನಿಂಗಳ ಪ್ಯಾಂಟಿನ ಕಿಸೆಲಿ ಇತ್ತಾನೆ. ಅದು ಹೇಗೆ ಅಲ್ಲಿ ಬಂತು?
ಏ°! ನಮ್ಮ ಭಾಷೆಯುದೆ ಈ ಪೋಲೀಸಿಂಗೆ ಬತ್ತಾ ಇದ್ದು. ಒಳಾಂದೊಳವೇ ಎನಗೆ ಕೊಶಿಯೇ ಕೊಶಿ.
ಸರ್, ಆನು ಬಿ ಎಸ್ ಸಿ ಲಿ ಕಲಿತ್ತಾ ಇದ್ದೆ ಹೇಳಿ ಹೇಳಿದೆ ಅಲ್ಲದೊ? ಅದರಲ್ಲಿ ಪ್ರಾಣಿಶಾಸ್ತ್ರ ಎನ್ನ ಮೈನ್ ಸಬ್ಜೆಕ್ಟು.
ಅದರಲ್ಲಿ ಈ ವರ್ಷ ಎಂಗೊಗೆ ಡಿಸೆಕ್ಷನ್ ಹೇಳಿ, ಕೆಪ್ಪೆಯ, ತೋಳೆಯ, ಎರೆಹುಳವ ಎಲ್ಲ ಕೊರವಲೆ ಇರ್ತು. ಅದಕ್ಕೆ ಇದು ಹೇಂಗಾರೂ ಬೇಕಾನೆ.
ಬಸ್ಸಿನ ರಶ್ಶಿಲ್ಲಿ “ಡಿಸೆಕ್ಷನ್ ಬಾಕ್ಸ್ ”ನ ಹಿಡ್ಕೊಂಬಲೆ ಕಷ್ಟ ಆವ್ತು ಹೇಳಿ ಈ ಕತ್ತರಿ, ಚಿಮಟಿ ಮತ್ತೆ ಸೂಜಿ ಮಾಂತ್ರ ತಂದಿದ್ದಿದ್ದೆ.
ಅದರೊಟ್ಟಿಂಗೆ ಆನು ಬೇರೆಯವಕ್ಕೆ ಉಪಕಾರ ಮಾಡ್ಳೆ ಹೋದ್ದದುದೆ ಇಷ್ಟೆಲ್ಲ ರಾದ್ದಾಂತ ಅಪ್ಪಲೆ ಕಾರಣ ಆತು. ಎಲ್ಲ ಎನ್ನ ದುರದೃಷ್ಟ
”, ಹೇಳಿ ಹೇಳಿ‌ಅಪ್ಪಗ ಎನ್ನ ಕಣ್ಣಿಂದ ಎರಡು ಬಿಂದು ನೀರು ಬಿದ್ದತ್ತು. ಅದರ ಪುಸ್ತಕ ಚೆಂಡಿ ಆತು.

ಬೇಜಾರು ಮಾಡ್ಯೊಳೆಡಿ, ಹೋಗಿ, ನಿಂಗೊ ಹೋಗಿ” ಹೇಳಿ ಎನ್ನ ಸಾಮಾನುಗಳ ಎಲ್ಲ ಕೊಟ್ಟು ಮರ್ಯಾದಿಲಿ ಕಳುಸಿ ಕೊಟ್ಟತ್ತು.

ಇಂಥವರನ್ನು ಹೀಗೆ ಬಿಡುವುದೋ ? ಕಳ್ಳರ ನಾಲಿಗೆ ಹೇಗೆ ಬೇಕಾದರೂ ತಿರುಗುತ್ತದೆ. ಅವರ ಮಾತನ್ನೇ ಕೇಳಿ ಅವರನ್ನು ನಂಬಿದರೆ, ಚೆ. . .” ಎನಗೆ ಒಂದೆರಡಾದರು ಪೆಟ್ಟು ಬೀಳುಗು ಹೇಳಿ ಗ್ರೇಶಿತ್ತಾಯ್ಕು ಆ ಜೆನ.

ಏಯ್ ಮಿಸ್ಟರ್, ಕಳ್ಳ ಯಾರು, ಹೇಗಿರುವವರು ಎಂಬುದು ಅವರ ಮುಖವನ್ನು ನೋಡುವಾಗಲೇ ಸಾಧಾರಣ ಮಟ್ಟಿಗೆ ತಿಳಿಯುತ್ತೆ.
ಇವರು ನಿಜ ಹೇಳ್ತಾ ಇದ್ದಾರೆ ಅಂತ ಪ್ರೂವ್ ಮಾಡಿ ತೋರಿಸಿದರಲ್ಲ. ಮತ್ತೆ ಕತ್ತರಿ ವಿಷಯ ಏನು ಅಂತ ಅದೂ ಗೊತ್ತಾಯಿತಲ್ಲ. ಬೇರೆ ಯಾರಾದರೂ ಆಗಿದ್ದರೆ, ನಿಮ್ಮ ಮೇಲೆ ಮಾನನಷ್ಟ ಕೇಸು ಹಾಕುತ್ತಿದ್ರು. ಹೂಂ. ಮಾತಾಡದೆ ಹೊರಗೆ ಹೋಗಿ
”.

ಇನ್ನುದೆ ಆ ಮನುಷ್ಯಂಗೆ ಎನ್ನ ಮೇಗೆ ಸಂಶಯ ಇತ್ತೊ ಎಂತೊ, ಎನ್ನ ಎಂತೋ ಒಂದು ರೀತಿ ಜಂತುವಿನ ನೋಡಿದ ಹಾಂಗೆ ನೋಡ್ಯೊಂಡು ಅದು, ಕಂಡಕ್ಟರು, ಇನ್ನಿಬ್ರು ಬಂದು ಬಸ್ಸು ಹತ್ತಿದವು.
ಎನಗೆ ಹೇಂಗಾರೂ ನೀರ್ಚಾಲು ಬಸ್ಸು ಹತ್ತೆಕಾಗಿತ್ತು. ಬಸ್ಟೇಂಡಿಂಗೆ ಹೋದೆ.
ಬಸ್ಸಿಲ್ಲಿ ಇದ್ದ ಎಲ್ಲಾ ಕಣ್ಣುಗೊ ಎನ್ನ ಹಿಂದೆಯೇ ಬಂದೊಂಡಿತ್ತು.

~

ಅಲ್ಲ ಒಂದು ಸಂಗತಿ ನಿಂಗಳ ಹತ್ರೆ ಕೇಳ್ತೆ, ಕಿಸೆ ಕತ್ತರುಸಲೆ ಕತ್ತರಿ ಬೇಕಪ್ಪ, ಈ ಚಿಮುಟಿ ಎಂತಕೋ ?
ಕೈಲಿ ಮುಟ್ಟದ್ದೇ ಕಿಸೆಂದ ಪರ್ಸು ಹಾರುಸಲೋ ?
ಮತ್ತೆ ಸೂಜಿ ಎಂತಕೊ, ಹರುದ ಕಿಸೆಯ ಹೊಲಿವಲೊ ? ಎನಗೆ ಈಗಳೂ ನೆಗೆ ಬತ್ತು.

ಹೇಂಗಾರೂ ಎನ್ನ ಹೆಸರು ಗೋಪಾಲಕೃಷ್ಣ.  ಆ ಕೃಷ್ಣ ಪರಮಾತ್ಮಂಗೆ ಕಳ್ಳ ಕೃಷ್ಣ ಹೇಳಿ ಹೆಸರಿಪ್ಪಗ ಎನ್ನದೆಂತರ ? ಅಲ್ಲದೊ.

ಎನ್ನ ಹಾಂಗಿಪ್ಪ ಕಳ್ಳ ಇಲ್ಲದ್ರೆ ಆ ಮನುಷ್ಯಂಗೆ ಆ ಪರ್ಸು ಸಿಕ್ಕುತಿತೋ ಇಲ್ಲೆಯೋ, ಎನಗೆ ಗೊಂತಿಲ್ಲೆ.
ಎನಗೆ ಅದರ ಪರ್ಸು ತೆಗೆಕು ಹೇಳಿ ಇರ್ತಿದ್ದರೆ, ಎಷ್ಟೋ ಮದಲೆ ಹಾರುಸಲೆ ಆವುತ್ತಿತು, ಹಾಂಗಿತ್ತು ಅದರ ಸ್ಥಿತಿ.
ಅಂತೂ ಅಂದು ದೊಣ್ಣೆ ಪೆಟ್ಟು ತಿನ್ನದ್ದೆ ಬಚಾವಾದೆ. ಅಲ್ಲ, ಆನು ಚೌತಿ ದಿನ ಚಂದ್ರನ ಎಂತಾರು ನೋಡಿದ್ದಿದ್ದನೋ, ಹೇಳಿಯುದೆ ಸಂಶಯ ಬತ್ತು ಕೆಲವೊಂದರಿ.

~*~*~

36 thoughts on “ಆನುದೆ ಒಂದರಿ ಕಳ್ಳ ಆದೆ !!

  1. ಅನುಭವವು ಸವಿಯಲ್ಲ ಅದರ ನೆನಪೇ ಸವಿಯು, (ಕಹಿಯು!)
    ಅದ ಕದ್ದು ಮೇಯದೇ ಮನವು ?
    ( ಇದು ಎನ್ನದಲ್ಲ ,ಕವಿ ವಾಣಿ )

  2. ಬೊಳು೦ಬು ಮಾವಾ.. ಎನ್ನ ಕಣ್ಣಿ೦ದ ಈ ಶುದ್ದಿ ತಪ್ಪಿಯೇ ಹೋಗಿದ್ದತ್ತು ಇಷ್ಟು ದಿನ. ಈಗ ಕ೦ಡದಷ್ಟೇ.. ಆನುದೆ ಆ ಕೋಲೇಜಿನ ಹಳೆ ವಿದ್ಯಾರ್ಥಿಯೇ, ಎರಡು ವರ್ಷದ ಮಟ್ಟಿ೦ಗೆ. ಆದರೆ ಎ೦ಗೊ ಹೋಪಗ, ಎಸ್ಟಿ ಟಿಕೇಟಿ೦ಗೆ ೪೦ ಪೈಸೆ ಆಗಿದ್ದತ್ತು. ರೆಶ್ಶು ಹೇಳಿರೆ ಹೋಗಿ ಅನುಭವಿಸಿದವ೦ಗೇ ಗೊ೦ತು.
    ಜಯಕ್ಕ ಹೇಳಿದ ಹಾ೦ಗೆಯೇ, ಪರ್ಸು ಕೆಳ ಬಿದ್ದ೦ಡಿದ್ದದಾ ಹೇಳಿ ತೋರಿಸಿ ಕೊಟ್ರೆ ಸಾಕಿದ್ದತ್ತಪ್ಪಾ.. ಹೆರ್ಕಿ ಕೊಟ್ಟು ಉಪಕಾರ ಮಾಡ್ಲೆ ಹೆರಟಲ್ಲದೋ ಇಷ್ಟೆಲ್ಲ ಆದ್ದದು.. ಬರಹ ಲಾಯಕ ಆಯಿದು..

  3. ಛೇ ಒಂದು ಉಪಕಾರ ಮಾಡ್ಲೆ ಹೋಗಿ ಅಷ್ಟೆಲ್ಲ ಪಜೀತಿ ಆದ್ದು ಓದುವಗ ತುಂಬಾ ಬೇಜಾರ ಅತು.
    ಬಸ್ಸಿನ ರಶ್ಶು ವಿವರ್ಸಿದ್ದು ತುಂಬಾ ಲಾಯಿಕ ಆಯಿದು.
    ಕಂಡೆಕ್ಟರ್ ಮಹಾಶಯ ಪೈಸೆ ತೆಕ್ಕೊಂಡು ಟಿಕೇಟು ಕೊಡದ್ದೆ ಹೋಗಿ, ಮತ್ತೆ ಚೆಕ್ಕಿಂಗಿನವು ಬಂದು ಅಲ್ಲೂ ಮಾವ ಸಿಕ್ಕಿ ಬೀಳುವ ಹಾಂಗೆ ಅವ್ತೋ ಹೇಳಿ ಇನ್ನೊಂದು ಬೇಜಾರ ಇತ್ತು, ಸದ್ಯಕ್ಕೆ ಹಾಂಗೆ ಆಯಿದಿಲ್ಲೆ );
    ಪಾಪವೇ ಕಂಡತ್ತು ಓದುವಗ.

  4. ಓಹ್, ಸುಬ್ರಾಯಣ್ಣ ಬರೆಕು ಬರೆಕು ಬೈಲಿಂಗೆ. ನಿಂಗಳ ಒಪ್ಪ ಕಂಡು ತುಂಬಾ ಕೊಶಿ ಆತು. ಧನ್ಯವಾದಂಗೊ.
    ನಿಂಗಳ ಕವನಂಗೊ, ಬರಹಂಗೊ ಎಲ್ಲವೂ ಪ್ರದಕ್ಷಿಣೆಲಿ ಬತ್ತ ಹಾಂಗೇ ಇಲ್ಲುದೆ ಬರೆಕದ.

  5. ee kathe tumba chenda iddu Gopalanna Bus li nedada kathege ondu oppa kodle raililli hatthi akerivarege nedakkondu bandastu aatu Astude pratikriye nodi khushi aatu

  6. ನಡದ ಕತೆ ಓದಿ ಬೇಜಾರಾತು. ಕೆಲವು ಸರ್ತಿ ಹಾಂಗೆಲ್ಲ ಆವುತ್ತು. ಸತ್ಯ ಧರ್ಮ ಪಾಲಿಸಿಗೊಂಡಿಪ್ಪವಕ್ಕೆ, ಘಟನೆಯ ಕಡೇಂಗಾದರೂ ನಮ್ಮ ಸತ್ಯ ಸಂಧತೆಯ ಗುರುತಿಸಿ ಬಚಾವ್ ಮಾಡುಲೆ ಆರಾದರೂ ಸಿಕ್ಕುತ್ತವು.

    1. ಎನ್ನ ಕಥೆ ಕೇಳಿ ಬೇಜಾರು ಆದ್ದು ಕಂಡು ಮನಸ್ಸು ತುಂಬಿ ಬಂತು. ಕಷ್ಟಲ್ಲಿಪ್ಪಗ ಖಂಡಿತಾ ಆರದ್ದಾದರೂ ಸಹಾಯ ಸಿಕ್ಕಿಯೇ ಸಿಕ್ಕುತ್ತು. ಕಥೆ ನೈಜ ಹೇಳಿ ಗ್ರೇಶಿದ್ದಕ್ಕೆ ಧನ್ಯವಾದಂಗೊ.

  7. ಒಂದು ಘಟನೆಯ ಹಾಸ್ಯದೊಟ್ಟಿಂಗೆ ಬರದ್ದು ಲಾಯಿಕ ಆಯಿದು.
    ನೆನಪು ಮಧುರ ಹೇಳುವದು ಇದಕ್ಕೆಯೋ? ಅಂಬಗಾಣ ಫಜೀತಿಯ ಈಗ ಮೆಲುಕು ಹಾಕುವಾಗ ಏನೋ ಒಂದು ಕೊಶಿ ಅಲ್ಲದಾ?.
    “ಕಣ್ಣಾರೆ ಕಂಡರೂ ಪರಾಂಬರಿಸಿ ನೋಡೆಕ್ಕು” ಹೇಳುವದು ಹೀಂಗಿಪ್ಪ ಘಟನೆಯ ಆಧಾರಲ್ಲಿಯೇ ಆದಿಕ್ಕು.
    ಕೈಲಿ ಕತ್ತರಿ, ಸೂಜಿ, ಚಿಮ್ಮುಟಿ ಕಂಡ ಕೂಡ್ಲೆ ಕಳ್ಳ ಹೇಳ್ತ ತೀರ್ಮಾನಕ್ಕೆ ಜೆನಂಗೊ ಎಷ್ಟು ಬೇಗ ಬಂದವು ಅಲ್ಲದಾ!!!

    1. ಧನ್ಯವಾದಂಗೊ ಶರ್ಮಪ್ಪಚ್ಚಿ. ನಿಂಗೊಗೆ ಕೊಶಿ ಆದರೆ, ಎನಗುದೆ ಕೊಶಿ ಆದ ಹಾಂಗೆ.

  8. ಬೊಳುಂಬು ಮಾವನ ಪೇಚಾಟ, ಅನುಭವ ಪಷ್ಟಾಯಿದು. ಕಿಸೆಲಿ ಕತ್ತರಿ, ಇಕ್ಕುಳ ಎಲ್ಲ ಕಂಡಪ್ಪಗ ಜೆನ “ಈ ಮನುಶ್ಯ ಒಳ್ಳೆ ಕಸುಬುದಾರಿ”ಹೇಳಿ ಗ್ರೇಶಿಕ್ಕು, ಅಪ್ಪೋ..?

    1. ಕಿಸೆಂದ ಕತ್ತರಿ ಕತ್ತು ಹೆರ ಹಾಕಿದ್ದೆ ತೊಂದರೆ ಆದ್ದದು. ಒಳ್ಳೆ ಅನುಭವ ಇಪ್ಪ ಕಳ್ಳನ ಹಾಂಗೆ ಕಂಡತ್ತಾಯ್ಕು. ಕುಮಾರಮಾವನ ಒಪ್ಪ ಕಂಡು ಕೊಶಿ ಆತು.

    1. ಕತೆ ಅಲ್ಲ, ಅನುಭವದ ಕಲ್ಪನೆ ! ಮಹೇಶನ ಕಾಣದ್ದೆ ಹಲವು ಕಾಲ ಆತಾನೆ. ಒಪ್ಪಕ್ಕೆ ಧನ್ಯವಾದ.

  9. ಓ, ಆಶ್ರಿತ ಬೈಲಿಂಗೆ ಬಂದಿಯೊ ? ನೆಗೆ ಮಾಡಿದ್ದು ಕೇಳಿ ಕೊಶಿ ಆತು. ನಮ್ಮ ಬೈಲಿಲ್ಲಿ ಹೀಂಗಿಪ್ಪ ತುಂಬಾ ಲೇಖನಂಗೊ ಇದ್ದು. ಒಳೊಳ್ಳೆ ವಿಷಯಂಗೊ ಇದ್ದು. ಓದಿ ಉತ್ತರ ಬರವಲಕ್ಕು, ಶುದ್ದಿಯನ್ನು ಬರವಲಕ್ಕು. ಪುರುಸೊತ್ತು ಮಾಡಿ ಬೈಲಿಂಗೆ ಬತ್ತಾ ಇರು. ಧನ್ಯವಾದಂಗೊ.

  10. Appachi,

    kathe odide hehehehe…. nege maadi saakaathu yenage:) angare appachige heengippa ondu anubhavavu aaidalda!!!!!! way of writing laika aidu.. yellaru odideya maneli, bus li nethaadigondu hoda anubhavava vivarsiddu baari laikaaidu nege maadi hotte hunnathu:):)

    1. ಓಹ್ ! ಪ್ರಸಾದಣ್ಣ, ಬೈಲಿಂಗೆ ಅಂಬಗಂಬಗ ಬತ್ತಾ ಇರು ಮಾರಾಯ. ಒಪ್ಪ ಕೊಟ್ಟದು ಕಂಡು ಭಾರೀ ಕೊಶಿ ಆತದ.

  11. ಪಜೀತಿ ಪ್ರಸ೦ಗ ವಿವರಿಸಿದ್ದು ಲಾಯಿಕಾಯಿದು. ಈ ಘಟನೆ೦ದ ಮತ್ತೆ ದಿನಾಗುಳು ಒ೦ದೆ ರೂಟ್ ಲಿ ಹೋಪ ಪಾಠ ಕಲ್ತಿದಿರಾ?

    1. ಸರಿಯಾಗಿಯೇ ಹೇಳಿದೆ ನೋಡು. ಬೆಶಿ ತಾಗಿ ಅಪ್ಪಗ ಬಗ್ಗಲೇ ಬೇಕಾನೆ ! ಒಪ್ಪಕ್ಕೆ ಧನ್ಯವಾದ.

  12. ಲಾಯ್ಕ ಆಯಿದು

    1. ಗೋಪಾಲಣ್ಣಂಗೆ ಕೃತಜ್ನತೆಗೊ.

  13. ಮಾವ°ಂದೇ ಹೀಗೆಲ್ಲ ಕಿತಾಪತಿ ಮಾಡಿದ್ದವು ಹೇಳಿ ಗೊಂತಾಗಿಯಪ್ಪಗ ಅಳಿಯಂಗೆ ರಾಜಾ ಸಮಾಧಾನ ಆತಿದಾ??? 😉
    ಲಾಯಕ ಬರದ್ದಿ ಮಾವಾ° 🙂

    1. ಆನುದೆ ನೀನುದೆ ಒಂದೇ ಪಕ್ಷ ಹೇಳಿ ಸಮಾಧಾನ ಆತಾಯ್ಕು. ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ.

  14. ಅದಾ, ಒಪ್ಪಣ್ಣನದ್ದ್ಶೇ ಒಪ್ಪವಾದ ಒಪ್ಪ ಸಿಕ್ಕಿದ್ದದು ಕಂಡು ಗುರುಗಳ ಆಶೀರ್ವಾದ ಸಿಕ್ಕಿದಷ್ಟು ಸಂತೋಷ ಆತು.
    ಅಪ್ಪಪ್ಪಾ, ಬೇಜಾರದ್ದರ ಗ್ರೇಶಿರೆ ಈಗ ನೆಗೆ ಬತ್ತು, ನೆಗೆದರ ಗ್ರೇಶಿರೆ ಎಲ್ಲವೂ ಕಳುದತ್ತಾನೆ ಹೇಳಿ ಬೇಜಾರು ಆವುತ್ತು.

  15. ಚೆಲ ಬೊಳುಂಬುಮಾವನೇ!
    ಇಷ್ಟು ಪಾಪದ ನಿಂಗಳೂ ಒಂದರಿ ಪೋಲೀಸು ಷ್ಟೇಶನಿಂಗೆ ಹೋಗಿ ಬಂದಿರೋ? ಆಗಲಿ, ಅದೂ ಒಂದು ಅನುಭವ ಅಪ್ಪೋ.

    ಬಸ್ಸಿನ ರಶ್ಶಿನ ಶುದ್ದಿ ಕೇಳುವಗ ಎನಗೇ ಕೂದಲ್ಲೇ ಇಕ್ಕಟ್ಟು ಅನುಸಿತ್ತು;
    ಕೈ-ಬಾಯಿ ತೊರುಸುವೋರ ಪ್ರತಿಕ್ರಿಯೆಗೊ ಎಲ್ಲವೂ ಯಥಾವತ್ತಾಗಿ ಬಯಿಂದು ಮಾವ.
    ಪೋಲಿಸು ಶ್ಟೇಶನಿನ ಚಿತ್ರ ಪಷ್ಟಾಯಿದು; ನಿಂಗಳೇ ಬಿಡುಸಿದ್ದೋ ಅದು?

    ಚೆನ್ನೈಭಾವನ ಪೂರಕ ಮಾಹಿತಿಗಳೂ ಪಷ್ಟಿದ್ದು.

    ಒಟ್ಟಿಲಿ, ಪರ್ಸು ಹೆರ್ಕಲೆ ಹೆರಟು ಪಾಪದೋನು ಸಿಕ್ಕಿಬಿದ್ದದರ ಕಂಡು ಬೇಜಾರಾಗಿ ತಡೆಯ! 🙁
    ಬೊಳುಂಬುಮಾವನ ಒಳ್ಳೆ ಶುದ್ದಿ ಒಂದರ ಕೇಳಿ ಮನಸ್ಸು ರಜ ಹಗುರಾತು.
    ಬೇಜಾರದ್ದರ ಗ್ರೇಶಿರೆ ನೆಗೆಯೂ; ನೆಗೆದರ ಗ್ರೇಶಿರೆ ಬೇಜಾರವೂ ಆವುತ್ತಡ; ಇದೂ ಹಾಂಗೇ ಆತಲ್ಲದಾ ಮಾವಾ!

  16. ಭಾರೀ ಚೆ೦ದದ ನಿರೂಪಣೆ.
    ಉಪಕಾರ ಮಾಡುಲೆ ಹೋಗಿ ಪೆಟ್ಟು ತಿ೦ಬ ವ್ಯವಹಾರ ಆಗಿ ಹೋವುತ್ತಿತ್ತೋ ,ಏನೋ.ಸದ್ಯ ಎರಡು ಬಿದ್ದಿದಿಲ್ಲೆನ್ನೆ,ಧರ್ಮಕ್ಕೆ!ಆ ಪೋಲೀಸು ಇನ್ಸ್ಪೆಟ್ರ° ಆರು ಹೇಳಿ ತಿಳುದಿರೋ?

    1. ಮತ್ತೆ ಅತ್ಲಾಗಿ ತಲೆ ಹಾಕಿ ಮನುಗಿದ್ದಿಲ್ಲೆ ! ಸುಮ್ಮನೇ ಇಲ್ಲದ್ದ ಉಸಾಬರಿ ಎಂತಕೆ ಹೇಳಿ ತಿಳಿಯಲೂ ಹೋಯಿದಿಲ್ಲೆ .

  17. [ಎಸ್ ಟಿ ಸಿಕ್ಕುಗು ] – ಬೇಸಗೆ ರಜೆಲಿಯೂ ಎರಡು ಪುಸ್ತಕ ಹಿಡ್ಕೊಂಡತ್ತು ಬಸ್ಸು ಹತ್ತಿತ್ತು. ಇಪ್ಪತ್ತೈದು ಪೈಸೆ ಕೊಟ್ಟಿಕ್ಕಿ ಕಾಲೇಜಿನ ಎರಡು ಅಂತಸ್ತು ಆ ತಲೆಂದ ಈ ತಲೆವರೇಂಗೆ ಉದ್ದಾಕೆ ನಡದತ್ತು ಯಾವ ಕ್ಲಾಸುರೂಮಿಲ್ಲಿ , ಯಾವ ಕಂಬಕ್ಕೆ ಆರು ಎರಗಿಯೊಂಡು ನಿಂದೊಂಡಿದ್ದವು ಹೇಳಿ ನೋಡಿಕ್ಕಿ ಬಂದೊಂಡಿತ್ತು. ಪುಸ್ತಕ ರಫ್ ಪುಸ್ತಕವೂ ಅಕ್ಕು, ಡೈರಿಯೂ ಅಕ್ಕು. ಕಂಡೆಕ್ಟ್ರ ಕೇಳಿರೆ ಇನ್ನೆಂತ ಡಿಕ್ಷೆನರಿ ಪುಸ್ತಕ ಹೊತ್ತೊಂಡು ಬರೇಕೊ ಹೇಳಿ ಅತ್ಲಾಗಿ ಕೇಳುವದು. ಅದೇ ಇಪ್ಪತ್ತೈದು ಪೈಸೆಲಿ ಸಿನೇಮಾಕ್ಕೂ ಹೋಗಿಯೋಂಡಿತ್ತು, ಕೆಲವು ಜೆನ ಕಾರು ಕಲಿವಲೆ ಡ್ರೈವಿಂಗು ಸ್ಚೂಲಿಂಗೂ ಅದೇ ಇಪ್ಪತೈದು ಪೈಸೆ.
    ಆ ಕಾಲೇಜು ಬಿಟ್ಟಿಕ್ಕಿ ಮತ್ತೆ ಇನ್ನೊಂದು ಕೋಲೇಜಿಂಗೆ ಹೋಪಗ ಚೆ ಇದೆಂತ ಶಾಲೆ ಹಾಂಗೆ ಇದ್ದನ್ನೇ ಹೇಳಿ ಆಗಿಯೊಂಡಿತ್ತು. ತಿರುಗಲೆ ಜಾಗ ಇಲ್ಲೆ, ಕ್ಲಾಸು ಬಂಕ್ ಮಾಡಿ ಕಣ್ತಪ್ಪಿಸಿ ಹೋದರೂ ಗೊಂತಾವ್ತು, ಕರ್ಮ ಸ್ಟ್ರೈಕುಗೊ ಕೂಡ ಇಲ್ಲೆ!!
    `
    [ಅಂಬಗಾಣ ಕಾಲಲ್ಲಿ ಪುಸ್ತಕಂಗಳ ಅಟ್ಟಿಯ ಕೈಲಿ ಹಿಡ್ಕೊಂಡು ಹೋಪದು ಫೇಶನ್ನು!] – ಆ ದಿನಂಗಳ ನೆನಪಿಸಿತ್ತು.
    [ಟಿಕೇಟು ಕೂಡಾ ಕೊಡದ್ದೆ ಹೋತು.] – ಅಂಬಗ ಕೆಲವೇ ಬಸ್ಸುಗಳಲ್ಲಿ ಚೆಕ್ಕಿಂಗ್ ಹೇಳಿ ಇತ್ತಿದ್ದು. ಎಲ್ಲಾ ಇಪ್ಪತೈದು ಪೈಸೆ ವಸೂಲಿ ಮಾಡಿಕ್ಕಿ ಒಂದೇ ಟಿಕೆಟಿಲ್ಲಿ ಸುದರಿಕೆ ಕಂಡೆಕ್ಟ್ರ.
    [ಎನ್ನ ಮೋರೆಯ ನೋಡಿ ಅಪ್ಪಗ ಅದಕ್ಕೆ ನಿಜವಾದ ಸಂಗತಿ ಅರ್ಥ ಆಗಿಪ್ಪಲೂ ಸಾಕು] – ಮೋರೆ ನೋಡಿಯೇ ಅವಕ್ಕೆ ಸತ್ಯ ಅಂದಾಜು ಆವ್ತು. ನಮ್ಮ ಪುಕುಪುಕು ಎಡೆಲಿ ನಾವು ಎಡೆಲಿ ಮಂಗ ಆವ್ತು.
    [“ಓ, ಬಟ್ರು” ಹೇಳಿತ್ತು] – ರಸವಾತ್ತಾಯ್ದು.

    ಕತೆ ಸತ್ಯವೋ ಸುಳ್ಳೊ, ಅದು ಮುಖ್ಯ ಅಲ್ಲ. ಕತೆ ಅಂತೂ ಪಷ್ಟು ಆಯ್ದು. ನಿಜ ಅಲ್ಲ ಹೇಳ್ಳೂ ಎಡಿಯ. ನಿರೂಪಣೆಯೂ ಲಾಯಕ ಓದಿಸುಗೊಂಡು ಹೋತು ಹೇಳಿ – ‘ಚೆನ್ನೈವಾಣಿ’

    [ಮಾವನ ಎಸ್ ಟಿ ಕತೆ ಕೇಳಿಯಪ್ಪಗ ಇನ್ನೊಂದು ಇಲ್ಲಿ ಹಂಚಿಗೊಳ್ಳೆಕು ಹೇಳಿ ಕಂಡತ್ತು. ೧೯೭೬. ಬೇಸಗೆ ರಜೆ. ಮಾಣಿಗೆ ಏಳು ವರ್ಷ ಪ್ರಾಯ. ಆರು ವರ್ಷಲ್ಲಿಯೇ ಉಪನಯನ ಮಾಡಿಬಿಟ್ಟಿದವು. (ಎಂತಕೆ ಹೇಳಿ ಎನಗೊಂತಿಲ್ಲೆ, ಬಿಡುವೋ°). ಮಾಣಿಯ ವಸಂತ ವೇದ ಪಾಠಕ್ಕೆ ಮಧೂರಿಂಗೆ ಸೇರ್ಸಿಬಿಟ್ಟಿದ್ದವು. ಮಾಣಿ ಭಟ್ಟಕ್ಕಳ ಪೈಕಿ ಹೇಳಿ ಮಧೂರ್ಲಿಯೂ ಅಕ್ಷೇಪ ಹೇಳಿದ್ದವಿಲ್ಲೆ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ರುದೇ, ಕೇಶವ ಜೋಯ್ಸಿರದೇ. ಮಾಣಿ ಸಣ್ಣ ಹೇಳಿ ಎಂತ ಮಾಡಿರೂ ಸರಿ ಅಲ್ಲಿ. ಶಾಲಗೆ ಶನಿವಾರ ಆದಿತ್ಯವಾರ ರಜೆ ಇದಾ. ಹಾಂಗೆ ಮಧೂರಿಲಿಯೂ ರಜೆ ಹೇಳಿ ಗ್ರೇಶಿಯೊಂಡು ಮಾಣಿ ಮನಗೆ ಆರತ್ರ ಹೇಳದ್ದೆ ಹೆರಟಿಕ್ಕುವದು ಬಸ್ಸು ಹತ್ತಿ. ಮಧೂರಿಂದ ಊರಿಂಗೆ ಒಂದೇ ಬಸ್ಸು ಡೈರೆಕ್ಟು – ಕೆಬಿಟಿ. ಬಸ್ಸಿಲ್ಲಿ ಟಿಕೇಟೋ? ಆಯೇಕ್ಕಾದ್ದೇ ಅರ್ಧ ಟಿಕೇಟು. ಮಾಣಿಗೆ ಟಿಕೆಟು ತೆಗೆವದು ಎಂತಕೆ ಹೇಳಿಯೂ ಗೊಂತಿತ್ತಿಲ್ಲೆ. ಕಿಸೆಲಿ ಐವತ್ತು ಪೈಸೆ ಇಪ್ಪಲೂ ಇತ್ತಿದ್ದು. ಈ ಮಾಣಿ ಊರಿಂಗೆ ಹೋಪಗಳೂ ಬಪ್ಪಗಳೂ ಬಸ್ಸಿಲ್ಲಿ ಕಂಡೆಕ್ಟ್ರ ಟಿಕೆಟ್ಟು ಹೇಳಿಗೊಂಡು ಬಪ್ಪಗ ಹಿಂದಂದ ಮುಂದೆ ಹೋಗಿ ನಿಂಬದು. ಮುಂದಂಗೆ ಬಪ್ಪಗ ಹಿಂದಂಗೆ ಹೋಪದು. ಟಿಕೆಟ್ಟು ಒಂದೂ ಸರ್ತಿಯೂ ತೆಗದ್ದನೇ ಇಲ್ಲೆ ಎರಡು ತಿಂಗಳ್ಳಿ!!]

    1. ಕಾಲೇಜು ಜೀವನವ ಮತ್ತೊಂದರಿ ನೆಂಪು ಮಾಡಿದ ಚೆನ್ನೈಭಾವನ ಒಪ್ಪ ಒಪ್ಪಕ್ಕೆ ಧನ್ಯವಾದ. ದೊಡ್ಡ ರಜೆಯ ಮಧೂರು ವೇದಪಾಠವುದೆ ಪುನಃ ನೆಂಪಾತದ. ಎಂಗಳ ಮನೆ ಮಧೂರಿಂದ ಎರಡೆ ಮೈಲಿ ದೂರ ಆದರುದೆ, ಇರುಳಿಂಗೆ ಮಧೂರಿಲ್ಲೇ ನಿಲ್ಲೆಕಾಗಿ ಬಂದಿತ್ತು. ಸುತ್ತಿದ ವಸ್ತ್ರಕ್ಕೆ ಮಣ್ಣು ಅಪ್ಪಲಾಗ ಹೇಳಿ, ವಸ್ತ್ರ ಎತ್ತಿ ಚಡ್ಡಿಲಿ ಕೂದೊಂಡಿದ್ದವು ಕೆಲವು ಜೆನ ಮಕ್ಕೊ. ವಸ್ತ್ರ ತೊಳವಲೆ ಅವೇ ಆಗೆಡದೊ ?
      ವಿಶ್ವೇಶ್ವರ ಭಟ್ರು ಅಂಬಗ ಮಾಣಿಗೆ ಚೂಂಟಿದ್ದವಿಲ್ಲೆ ಆಯ್ಕು ?!

  18. ಕಥೆಯ ಓದಿ ನೆಗೆ ತಡೆತ್ತಿಲ್ಲೆ… ಸತ್ಯ ನಡದ ಘಟನೆಯ ಕಲ್ಪಿಸಿಗೊಂಡು ‘ಇನ್ನೊಬ್ಬಂಗೆ ಸಹಾಯ ಮಾಡುಲೆ ಹೆರಟರೂ ಕಷ್ಟವೇ ಈಗಾಣ ಕಾಲಲ್ಲಿ’ ಹೇಳಿ ಅನ್ನಿಸಿತ್ತು… ‘ಸತ್ಯ ಮತ್ತು ಧರ್ಮ’ಕ್ಕೆ ಯಾವತ್ತೂ ‘ಜಯ’ ಕಟ್ಟಿಟ್ಟ ಬುತ್ತಿ ಹೇಳುದರ ಘಟನೆ ಸಾಬೀತು ಮಾಡಿತ್ತು…

    1. ಸತ್ಯ ಧರ್ಮ ಹೇಳಿ ಉಪಕಾರ ಮಾಡ್ಳೆ ಹೋಗಿ ಧರ್ಮಕ್ಕೆ ಪೆಟ್ಟು ತಿಂಬಲೆ ಹೆರಟ ಎನ್ನ ಪರಿಸ್ಥಿತಿ ಆರಿಂಗೂ ಬೇಡ. ನೆಗೆ ಬಂದದು ಕೇಳಿ ಕೊಶಿ ಆತು.

      1. ಮಾವನ ಅನುಭವಂದ ಒಂದು ಪಾಠ ಕಲ್ತ ಹಾಂಗೆ ಆತು… “ನಿಮ್ಮ ಪರ್ಸ್ ಬಿದ್ದಿದೆ” ಹೇಳಿ ತೋರ್ಸುವದು ಮಾಂತ್ರ… ಹೆರ್ಕಿ ಕೊಡುವ ಪಂಚಾತಿಗೆ ಇಲ್ಲೇ… ಧನ್ಯವಾದ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×