ಮಂಗಳೂರು ಹವ್ಯಕ ಸಭೆಲಿ “ಯಕ್ಷಧಾರೆ”

ಇಂದು ಮಂಗಳೂರು ಹವ್ಯಕ ಸಭೆಲಿ “ಯಕ್ಷಧಾರೆ” ಹೇಳಿ ಯಕ್ಷಗಾನ ಹಿಮ್ಮೇಳ ವೈಭವ ನೆಡದತ್ತು. ವಿಶೇಷ ಎಂತರ ಹೇಳಿರೆ, ಭಾಗವತಿಕೆ, ಮದ್ದಳೆ, ಚಂಡೆ ತಾಳ ಎಲ್ಲವೂ ಮಕ್ಕಳದ್ದೇ.  ರೈಸಿತ್ತಯ್ಯಾ ರೈಸಿತ್ತು. ಮಂಗಳೂರು ಹತ್ರಾಣ ಗಂಜಿಮಠಲ್ಲಿಪ್ಪ ರಾಜ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕೊ ಚೆಂದಕೆ ಕಾರ್ಯಕ್ರಮ ನೆಡಸಿಕೊಟ್ಟವು.

ಚೆಂದಕೆ ಎರಡು ಜೆಡೆ ಹಾಕಿ, ಹೂಗು ಮುಡುದು, ಲಂಗ ದಾವಣಿ ಹಾಕಿದ ಕೂಸುಗೊ ಭಾಗವತಿಕೆ ಮಾಡಿದ್ದದು, ತಾಳ ಕುಟ್ಟಿದ್ದದು, ಮದ್ದಳೆ ಬಡುದ್ದದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಕೊಟ್ಟತ್ತು. ವೆಂಕಟೇಶ ತಂತ್ರಿ ಮುಂಡು ಸುತ್ತಿ, ಬೆಳಿ ಅಂಗಿ ಶಾಲು ಹಾಕಿ ರಟ ರಟನೆ ಚೆಂಡೆ ಬಾರುಸಿ ಎಲ್ಲೋರ ಗಮನ ಸೆಳದ°.

ಪ್ರಖ್ಯಾತ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯ, ಮತ್ತೆ ಅವರ ಪತಿ ಶ್ರೀ ಹರಿನಾರಾಯಣ ಬೈಪಡಿತ್ತಾಯ ಈ ಮಕ್ಕೊಗೆಲ್ಲ ತರಬೇತಿ ಕೊಡುತ್ತಾ ಇದ್ದವು. ಅವು ಇಬ್ರುದೆ ಬಂದು ಕಾರ್ಯಕ್ರಮವ ನಿರ್ದೇಶಿಸಿದವು. ಕಡೇಂಗೆ, ಲೀಲಾವತಿ ಬೈಪಡಿತ್ತಾಯ ಅವು ಸಭಿಕರ ಒತ್ತಾಯದ ಮೇರೆಗೆ ಎರಡು-ಮೂರು ಯಕ್ಷಗಾನ ಪದ್ಯಂಗಳ ಹಾಡಿ ರಂಜಿಸಿದವು.

ಅವರ ಶಾಲೆಯ ಪ್ರಿನ್ಸಿಪಾಲ, ಶ್ರೀಯುತ ಗಜಾನನ ಭಟ್  ಈ ಮಕ್ಕೊಗೆಲ್ಲ ಒಳ್ಳೆ ಪ್ರೋತ್ಸಾಹ ಕೊಡುತ್ತವಾಡ. ಅವುದೆ ಬಂದು ಸಭಾ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತಾಡಿದವು. ಅವರ ಶಾಲೆಲಿ, ಶನಿವಾರ ದಿನ ಪೂರ್ತಿ ಮಕ್ಕೊಗೆ ಕಲಾಭಿರುಚಿಯ ಕಾರ್ಯಂಗಳಲ್ಲಿ ಅಭ್ಯಾಸ ಮಾಡುಸುತ್ತವಾಡ. ಯಕ್ಷಗಾನ ಹಿಮ್ಮೇಳ, ಕುಣಿತ, ಚಿತ್ರಕಲೆ, ಸಂಗೀತ, ಬೊಂಬೆ ತಯಾರಿ ಇತ್ಯಾದಿ ಕಲುಶುತ್ತವಾಡ. ಯಕ್ಷಗಾನದ ಎಲ್ಲಾ ವಿಷಯಂಗಳನ್ನು ಮಕ್ಕೊಗೆ ಹೇಳಿ ಕೊಟ್ಟು, ಪ್ರೋತ್ಸಾಹಿಸಿ, ಬೇರೆ ಬೇರೆ ದಿಕ್ಕೆ ಅದರ ಪ್ರದರ್ಶಿಸಿ ಉತ್ತೇಜನ ಕೊಡುತ್ತಾ ಇದ್ದದರ ನಾವೆಲ್ಲ ಪ್ರಶಂಸಿಸಲೆ ಬೇಕು. ಇಂಗ್ಲೀಷು ಮಾಧ್ಯಮಲ್ಲಿ ಕಲಿತ್ತವಾದರೂ, ನಮ್ಮ ಸಂಪ್ರದಾಯದ ಉಡುಗೆಲಿ ಬಂದು, ಯಕ್ಷಗಾನದ ಹಿಮ್ಮೇಳವ ಪ್ರದರ್ಶಿಸಿದ  ಮಕ್ಕಳ ಅಭಿನಂದಿಸಲೇ ಬೇಕು. ಹವ್ಯಕ ಸಭಾದ ಅಧ್ಯಕ್ಷ ಶ್ರೀ ಕಿಳಿಂಗಾರು ಈಶ್ವರ ಭಟ್ ಸಭೆಯ ಅದ್ಯಕ್ಷತೆ ವಹಿಸಿದ್ದಿದ್ದವು. ಕಾರ್ಯಕ್ರಮ ರೂಪುಗೊಂಬಲೆ ಸಹಕಾರ ನೀಡಿದ ಶ್ರೀ ಪಕಳಕುಂಜ ಗೋಪಾಲಕೃಷ್ಣ ಭಟ್ ಎಲ್ಲೋರನ್ನು ಪರಿಚಯ ಮಾಡಿದವು. ಶ್ರೀ ವೇಣುಗೋಪಾಲ ಭಟ್ ಮಾಂಬಾಡಿ ಕಾರ್ಯಕ್ರಮವ ನಿರ್ವಹಿಸಿದವು. ಕಳುದ ವರ್ಷದ ಅಧ್ಯಕ್ಷ  ಶ್ರೀ ಪಳ್ಳ ಪದ್ಮನಾಭ ಭಟ್, ಸಭಾದ ಉಪಾಧ್ಯಕ್ಷ ಶ್ರೀ ಕೆ.ಎಸ್.ಶಾಸ್ತ್ರಿ ವೇದಿಕೆಲಿ ಇದ್ದಿದ್ದವು.

ಚಂಡೆ, ಮೃದಂಗಲ್ಲಿ ವೆಂಕಟೇಶ ತಂತ್ರಿ, ಶಶಾಂಕ್, ಮೃದಂಗ, ತಾಳಲ್ಲಿ ಯೋಗ್ಯಶ್ರೀ, ದೀಪ್ತಿ, ನಿಕಿಲಾ, ಹಾಡುಗಾರಿಕೆಲಿ, ಧನ್ಯಶ್ರೀ, ನವ್ಯಶ್ರೀ, ಚಿನ್ಮಯಿ, ಐಶ್ವರ್ಯ, ಪವಿತ್ರ, ಪವನ್ ಕುಮಾರ್, ಸಂವಾದ ಜೈನ್, ನಿರೀಕ್ಷಾ, ಅನಿರುದ್ದ್, ಅನನ್ಯ ಪ್ರಭಾ, ಮತ್ತೆ, ಅಮೂಲ್ಯ ಭಾಗವಹಿಸಿದ್ದಿದ್ದವು.

ಕಾರ್ಯಕ್ರಮ ಚೆಂದ ಆತು, ಎಲ್ಲೋರಿಂಗು ಕೊಶಿ ಕೊಟ್ಟತ್ತು.

ಬೊಳುಂಬು ಮಾವ°

   

You may also like...

13 Responses

  1. Ganesh bhat says:

    Bolumbu mavana suddi odi khushi athu. Bengaloorilli agidre navagu hopalavthithu

  2. ಬಾಲಣ್ಣ (ಬಾಲಮಧುರಕಾನನ) says:

    ಬಲ್ಲಿರೆನಯ್ಯ ರೈಸಿತ್ತಯ್ಯ ರೈಸಿತ್ತು ಶಾಬ ಭಾಲ ರೈಸಿತ್ತೊ ರೈಸಿತ್ತು ನಮ್ಮ ಹವ್ಯಕ ಮಕ್ಕಳಾ ಯಕ್ಸಗಾನ! ತಿಳುಶಿದ
    ಕಲುಷಿದ ಎಲ್ಲೊರಿನ್ಗು ಒಪ್ಪೊನ್ಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *