ಬ್ರಾಹ್ಮಣರ ವಲಸೆ ಏಕೆ ಆತು?

ಬ್ರಾಹ್ಮಣರ ವಲಸೆ ಏಕೆ ಆತು?ಬಡೆಕ್ಕಿಲ ಸರಸ್ವತಿ

ಇದೊಂದು ಯೋಚಿಸಲೇ ಬೇಕಾದ ಪ್ರಶ್ನೆ. ಬ್ರಾಹ್ಮಣರಿಂದು ಮಾತ್ರವೇ ಅಲ್ಲ, ಬೇರೆ ವರ್ಣ ಜಾತಿಯೊರ ವಲಸೆಯೂ ಈ ದೇಶಲ್ಲಿ ನಡದಿಕ್ಕು, ಹೇಳುಲೆಡಿಯ. ಪ್ರಾಚೀನ ಕಾಲಲ್ಲಿ ಶಿಲಾಶಾಸನಂಗಳಲ್ಲಿ ಸಿಕ್ಕುದು ಆ ಕಾಲದ ರಾಜ ಮಹಾರಾಜರು ಬ್ರಾಹ್ಮಣರಿಂಗೆ ದಾನವಾಗಿ, ಉಂಬಳಿಯಾಗಿ ಕೊಟ್ಟಂಥ, ಅಥವಾ ರಾಜರ ವಿಜಯಯಾತ್ರೆಯ ವಿಷಯ. ಬ್ರಾಹ್ಮಣಂಗೆ ಗೆದ್ದೆ ಹೂಡುದು ನಿಷಿದ್ಧವಾಗಿಪ್ಪದು ನಿಂಗೊಗೆಲ್ಲ ಗೊಂತಿಪ್ಪ ವಿಷಯವೇ. ಮತ್ತೆ ಅವಕ್ಕೆ ಜೀವನಕ್ಕೆ ದಾರಿ ಎಂತ? ಹಾಂಗಾಗಿ ರಾಜಾಶ್ರಯವೇ ಅವಕ್ಕಿದ್ದದು. ಅದು ತಪ್ಪಿದ ಕಾಲಲ್ಲಿ ಏನಾದರೂ ವ್ಯವಸ್ಥೆ ಆಗಲೇ ಬೇಕು. ಹಾಂಗಾಗಿ ವಲಸೆಗೆ ಶರಣಾಗಿರೆಕ್ಕು. ಶಾಸ್ತ್ರಂಗಳಲ್ಲಿ ಮರ ಗಿಡ ಹಣ್ಣಿನ ಕೃಷಿಗೆ ನಿಷೇಧ ಇಲ್ಲದ್ದ ಕಾರಣ, ವಾಣಿಜ್ಯ ಬೆಳೆ ಅಡಕ್ಕೆ ಬಿತ್ತಿನ ಹಿಡ್ಕೊಂಡೆ ಅವು ವಲಸೆ ಹೋಗಿರೆಕ್ಕು. ವಿದೇಶೀಯರ ಆಕ್ರಮಣ, ವಿಭಿನ್ನ ಸಂಸ್ಕೃತಿಯೊರೊಟ್ಟಿಂಗೆ ಇಪ್ಪಲೆ ಸಾಧ್ಯ ಆಗದ್ದೆ, ಊರು ಬಿಟ್ಟಿಕ್ಕು. ಸಾಂಕ್ರಾಮಿಕ ರೋಗ, ನೆರೆಹಾವಳಿ, ಬರಗಾಲ ಶತ್ರುಗಳ ವಿನಾಶಕಾರೀ ಅತ್ಯಾಚಾರ ಇವು ಕೂಡಾ ವಲಸೆಗೆ ಕಾರಣಂಗಳೇ. ಮುಖ್ಯವಾಗಿ ಬ್ರಾಹ್ಮಣರಿಂಗೆ ಕೃಷಿಭೂಮಿ ಇಲ್ಲದ್ದದು ಪ್ರಬಲವಾದ ಕಾರಣ ಇದ್ದಿಕ್ಕು. ಇದು ಅಹಿಚ್ಛತ್ರದೊರಿಂಗೆ ಮಾತ್ರ ಅಲ್ಲ, ಇತರ ಸಾರಸ್ವತರು, ಗೌಡಸಾರಸ್ವತರು ಪಲಾಯನ ಮಾಡಿದ ದಾಖಲೆ ಇತಿಹಾಸಲ್ಲಿ ಇದ್ದು. ಈಗ ಸಾರಸ್ವತರ ವಿಷಯವನ್ನೇ ತೆಕ್ಕೊಂಬೊ°

ಸಾರಸ್ವತರೆಂಬ ಹೆಸರು ಬಂದದು ಸರಸ್ವತೀ ನದೀಪ್ರದೇಶದಲ್ಲಿದ್ದೊರಿಂಗೆ. ಸರಸ್ವತೀ ನದಿ ಬತ್ತಿ ಹೋಗಿ ಅದು ಗುಪ್ತಗಾಮಿನಿಯಾಗಿ ತ್ರಿವೇಣಿ ಸಂಗಮ ಆವ್ತು ಎಂಬ ನಂಬಿಕೆ ಇದ್ದನ್ನೇ? ನದಿಯೇ ಇಲ್ಲದ್ದ ಕಾರಣ ಸಾರಸ್ವತರು ಕೆಲವು ಜೆನ ಕಾಶ್ಮೀರಕ್ಕೂ, ಕೆಲವು ಜೆನ ಗೌಡದೇಶಕ್ಕೂ ಪ್ರಯಾಣ ಮಾಡಿದವು. ಬಂಗಾಳ, ಒರಿಸ್ಸಾ ಪ್ರದೇಶಲ್ಲಿ ಹಲವಾರು ವರ್ಷ ಜೀವನ ಮಾಡಿದವು. ಹವಿಕರ ವಲಸೆಂದ ಎಷ್ಟೋ ವರ್ಷ ಕಳುದು ಇವು ದೀರ್ಘಪ್ರಯಾಣ ಮಾಡಿ ರತ್ನಗಿರಿಗೆ (ಮಹಾರಾಷ್ಟ್ರ) ಬಂದವು. ಹೆಚ್ಚಿನಂಶ ಮುಸಲ್ಮಾನ ಆಕ್ರಮಣ ಆಗಿ ಹಿಂದೂ ರಾಜಾಶ್ರಯ ತಪ್ಪಿಹೋದ್ದು ಇವೇ ಕಾರಣಂಗೊ ಆದಿಕ್ಕು. ಗೌಡದೇಶಲ್ಲಿಪ್ಪಾಗ ಒಂದು ಘಟನೆ ನಡದತ್ತು. ಅವರ ಗುರುಗೊ ತೀರ್ಥ ಕೊಡುವಾಗ, ತೀರ್ಥಲ್ಲಿ ಒಂದು ಸಣ್ಣ ಮೀನು ಬಂತೊಡೊ. ಶಿಷ್ಯ ತನ್ನ ಕೈಲಿ ಮೀನು ನೋಡಿ ಕೇಳಿದೊಡೊ° “ರಕ್ಷಿಸೆಕ್ಕೋ ಭಕ್ಷಿಸೆಕ್ಕೋ? ಹೇಳಿ”. ಅದಕ್ಕೆ ಗುರು “ಭಕ್ಷಿಸು” ಹೇಳಿದಡೊ. ಅಂದಿಂದ ಗೌಡಸಾರಸ್ವತರು ಮತ್ಸ್ಯ ಬ್ರಾಹ್ಮಣರಾದವು. ಇದು ಅವ್ವೇ ಹೇಳಿದ ಕಥೆ. ಬಂಗಾಳದ ಬರಗಾಲ ಇಪ್ಪತ್ತನೇ ಶತಮಾನದ ಆದಿಕಾಲಲ್ಲಿ ನಡದ್ದು ನಿಂಗೊಗೆಲ್ಲ ಗೊಂತಿಕ್ಕು. ಅದರಿಂದವೂ ತೀವ್ರವಾದ ಕ್ಷಾಮ ಹಿಂದೆಯೂ ನಡದಿಕ್ಕು. ಆವಗ ಮೀನುಗಳೇ ಈ ಭಾಗದ ಜನರ ಜೀವ ಒಳಿಶಿಕ್ಕು. ಹೀಂಗೆ ಅನಿವಾರ್ಯ ಕಾರಣ ಇಲ್ಲದ್ದೆ ಸಸ್ಯಾಹಾರಿಗಳಾಗಿದ್ದೊರು ಮತ್ಸ್ಯಾಹಾರಿಗೊ ಅಪ್ಪಲೆ ಸಾಧ್ಯ ಇಲ್ಲೆ. ಆ ಮೇಲೆ ರತ್ನಗಿರಿಂದ ಗೋವೆಗೆ ಬಂದವು. ಗೌಡಸಾರಸ್ವತರ ವೃತ್ತಿ ವ್ಯಾಪಾರ. ಹಾಂಗಾಗಿ ಸಮುದ್ರ ತೀರ ಅವಕ್ಕೆ ಅನುಕೂಲ ಹೇಳಿ  ಕಂಡಿಕ್ಕು. ಆದರೆ ಅಲ್ಲಿಯೂ ಅವರ ಧರ್ಮ ಬಿಟ್ಟಿದವಿಲ್ಲೆ. ಅವರ ಭಾಷೆ ಪ್ರಾಕೃತವಾಗಿದ್ದದು ಮರಾಠಿ ಮತ್ತು ಕನ್ನಡದ ಸಂಪರ್ಕ ಪಡದು ಕೊಂಕಣಿ ಭಾಷೆಯಾಗಿ ರೂಪ ಪಡದತ್ತು. ಅವು ವ್ಯಾಪರಕ್ಕೆ ಅನುಕೂಲವಾದ ಕನ್ನಡ ಲಿಪಿಯನ್ನೇ ಉಪಯೋಗಿಸಿಕೊಂಡವು. ಕೊಂಕಣಿ ಎಂಬ ಹೆಸರಾದ್ದು ಕೊಂಕಣ ದೇಶವಾದ್ದರಿಂದಾಗಿ (ಸಂಸ್ಕೃತ ಜನ್ಯ ಭಾಷೆಯೇ). ಆದರೆ ಫೋರ್ಚುಗೀಸರು ಗೋವೆಯ ಗೆದ್ದು  ವ್ಯಾಪಾರವ ತಮ್ಮ ವಶ ಮಾಡಿಗೊಂಡದು, ಮತಾಂತರ ಮಾಡುದು, ಒಪ್ಪದ್ದೊರ ’ಗಿಲೊಟಿನ್’ ಎಂಬ ರಾಕ್ಷಸ ಯಂತ್ರದೊಳ ಹಾಕಿ ಶರೀರವ  ಮುರುದು ನುಗ್ಗುನುರಿ ಮಾಡುವ ಪೈಶಾಚಿಕ ಕೃತ್ಯ, ಶಬ್ದಕ್ಕೆ ನಿಲುಕಲಾಗದ್ದಂಥ ಈ ಯಂತ್ರ ಪಾಶ್ಚಾತ್ಯರ ಕ್ರೌರ್ಯಕ್ಕೆ ನಿದರ್ಶನ (ಹದಿನೇಳನೇ ಶತಮಾನಲ್ಲಿ ಫೆಂಚ್ ಕ್ರಾಂತಿ ಆಗಿಪ್ಪಾಗಳೂ ಇಂಥ ಯಂತ್ರಲ್ಲಿ ಹಾಕಿ ಲಕ್ಷಕ್ಕೂ ಮೇಲ್ಪಟ್ಟು ನಿರಪರಾಧಿ ವಿರೋಧಿಗಳ ಕಗ್ಗೊಲೆ ಮಾಡಿದ್ದವು. ಈ ಚರಿತ್ರೆ “ ಎ ಟೇಲ್ ಒಫ್ ಟೂ ಸಿಟೀಸ್” ಎಂಬ  ಕಾದಂಬರಿಲಿ ವಿವರಿಸಿದ್ದವು. ಮುಖ್ಯವಾಗಿ ಶ್ರೀಮಂತರ ವಿರುದ್ಧ ನಡದ ಅಂತರ್ಯುದ್ಧ ಅದು)

ಕನ್ನಡದ ಗಳಗನಾಥನೂ ಗೋವೆಲಿ ಪೋರ್ಚುಗೀಸರು ಮತಾಂತಕ್ಕೋಸ್ಕರ ಹಿಂದೂಗಳ ಮೇಲೆ ನಡೆಸಿದ ತ್ಯಾಚಾರಂಗಳ ವರ್ಣಿಸಿದ್ದ°. ರಾಮಕೃಷ್ಣಾ ನಮಃಶಿವಾಯ ಹೇಳಿ ಪ್ರಾಣ ಬಿಟ್ಟೊರ ಬಲಿದಾನ ಆತ್ಮಾರ್ಪಣೆ ಲೆಕ್ಕಕ್ಕೆ ಸಿಕ್ಕದ್ದಷ್ಟು ನಡದು ಹೋಯಿದು. ಹೀಂಗಾಗಿ ಅಲ್ಲಿಂದ ಓಡಿಹೋಗದ್ದೆ ಬೇರೆ ದಾರಿ ಇದ್ದೋ? ಭಯಂಕರವಾದ ನರಕಯಾತನೆ, ಚಿತ್ರಹಿಂಸೆ ಕೊಟ್ಟು ಕೊಲ್ಲುದು, ಇತ್ಯಾದಿ ಕ್ರೌರ್ಯಂಗಳ ಕಂಡು ರಾತ್ರೋರಾತ್ರಿ ದೋಣಿಲಿಯೋ ಹಡಗಿಲಿಯೋ ಪ್ರಯಾಣ ಮಾಡಿ ಪಶ್ಚಿಮ ಕರಾವಳೀ ತೀರಲ್ಲಿ ಕೊಚ್ಚಿಯ ವರೆಗೆ ಅಲ್ಲಲ್ಲಿ ಅನುಕೂಲ ಕಂಡಲ್ಲಿ ಸುರಕ್ಷಿತ ಪ್ರದೇಷಲ್ಲಿ ನೆಲಸಿದವು. ಕೆಲವು ಜನ ಭೂಮಾರ್ಗಲ್ಲಿಯೂ, ನಡದೋ , ಓಡಿಯೋ, ಕುದುರೆಗಳಲ್ಲಿ ಓಡಿ ಆತ್ಮ ರಕ್ಷಣೆ, ತಮ್ಮ ಬ್ರಾಹ್ಮಣ್ಯವ ರಕ್ಷಣೆ ಮಾಡಿಗೊಂಡವು. ಎಲ್ಲೆಲ್ಲೋ ಚದರಿಹೋದವು. ಹೋಪಲೆ ಸಾಧ್ಯ ಅಗದ್ದೊರು ಒಂದೋ ಕ್ರೈಸ್ತರಾದವು ಇಲ್ಲೆಯೋ ಪ್ರಾಣತ್ಯಾಗ ಮಾಡಿದವು. ಪಲಾಯನ ಮಾಡಿದೊರು ಗೋವೆಂದ ಹೆರಡುವಾಗ ಅವರ ಮುಖಂಡರೂ ಗುರುಹಿರಿಯರೂ ಪರಸ್ಪರ ಪ್ರತಿಜ್ಞೆ ಮಾಡಿಗೊಂಡವು. ನಾವು ಎಲ್ಲೇ ಇರಲಿ, ಹೇಂಗೇ ಇರಲಿ ಪರಸ್ಪರ ಭೇಟಿ ಆದರೆ ಕೊಂಕಣಿ ಬಾಷೆಲಿಯೇ ಮಾತಾಡೆಕ್ಕು ಹೇಳಿ ಭಾಷೆ ಕೊಟ್ಟು ಪ್ರತಿಜ್ಞಾಬದ್ಧರಾದವು.  ಈ ಕ್ರಮ ಎನ್ನ ಸ್ನೇಹಿತೆಯರಾಗಿದ್ದ ಕೊಂಕಣಿ ಹುಡುಗಿಯರು ಕೂಡಾ ಚಾಚೂ ತಪ್ಪದ್ದೆ ಪಾಲಿಸಿಗೊಂಡಿತ್ತಿದ್ದವು. ನಿಂಗಳೂ ಇದರ ಕೊಂಕಣಿಗಳಲ್ಲಿ ಗಮನಿಸಿಪ್ಪಿ ಹೇಳಿ ಗ್ರೇಶುತ್ತೆ. ಗೌಡದೇಶ ಅರ್ಥಾತ್ ಅಂಗ, ವಂಗ, ಕಳಿಂಗ ಪ್ರದೇಶಂದ ಮಂಗಳೂರಿನ ವರೆಗೆ ಗೌಡಸಾರಸ್ವತರು ಬಂದು ಮುಟ್ಟಿದ ಅವರ ಸಾಹಸಗಾಥೆಯ 1946-47 ರಲ್ಲಿಯೇ ಎನಗೆ ವಿವರ್ಸಿದ್ದವು ಆ ಹುಡುಗಿಯರು. ಇನ್ನೊಂದು ವಿಷಯ,ಕೊಂಕಣಿಯ ಲಿಪಿ ಕನ್ನಡವೇ. ಅದೇ ದಿನಂಗಳಲ್ಲಿ ಆನು ಅವರ ’ಕೊಂಕ್ಣಿ ಸಮಾಚಾರ್’ ಎಂಬ ಕನ್ನಡ ಲಿಪಿಯ ಪತ್ರಿಕೆ ಗೋವೆಂದ ಬತ್ತಾ ಇದ್ದದು-ಅದರ ಓದಿದ್ದೆ. ಅವರ ಸಮುದಾಯದ ಉದ್ಯೋಗವೇ ವ್ಯಾಪಾರ. ಅವರಲ್ಲಿ ಎಷ್ಟು ಒಗ್ಗಟ್ಟು ಇದ್ದು ಹೇಳಿದರೆ ಬಡ ಕೊಂಕಣಿ ಹುಡುಗರ ತಮ್ಮ ಅಂಗಡಿಲಿ ಮಡಿಕ್ಕೊಂದು ಕೆಲವು ಸಮಯ ಕಳಿವಾಗ ಅವಕ್ಕೆ ಒಂದು ಸಣ್ಣ ಅಂಗಡಿ ಕೊಡುದು ಕೂಡಾ ಮಾಡ್ತವು. ಆದರೆ ಸಾರಸ್ವತರು ಶ್ಯಾನುಭೋಗಿಕೆ ಮಾಡುವೊರು ಲೆಕ್ಕಪತ್ರ ಮಡುಗುದು ಹೀಂಗಿಪ್ಪ ಕೆಲಸ ಮಾಡುವೊರು. ಅವರ ನಮ್ಮೊರು ಸೇನಮಕ್ಕೊ ಹೇಳಿ ಹೇಳ್ತವು. ಅವರ ಸಂಖ್ಯೆಯೂ ಕಡಮ್ಮೆ. ಇವರ ವಲಸೆ ಹವಿಕರ ವಲಸೆಂದ ಎಷ್ಟೋ ವರ್ಷ ಕಳುದು ನಡದ್ದು. ಅಹಿಚ್ಚತ್ರಂದ ಬ್ರಾಹ್ಮಣರು ಬೇರೆಬೇರೆ ಕಾರಣಂದಾಗಿ ದಕ್ಷಿಣಕ್ಕೆ ವಲಸೆ ಬಯಿಂದವು, ತಂಡೋಪತಂಡವಾಗಿ!. ಇತಿಹಾಸವ ಪರಿಶೀಲಿಸುವಾಗ ರಾಜಾಶ್ರಯ, ಜನಾದರ, ಕಮ್ಮಿ ಆತು, ಮತ್ತೆ ಬೌದ್ಧ ಧರ್ಮದ ಪ್ರಾಬಲ್ಯ! ಅಶೋಕ, ಬಿಂಬಿಸಾರ ಮುಂತಾದ ಚಕ್ರವರ್ತಿಗೊ ಬೌದ್ಧರಿಂಗೆ ಬುದ್ಧವಿಹಾರಂಗಳ ಕಟ್ಟಿಸಿಕೊಡುದು, ಬೌದ್ಧ ಸನ್ಯಾಸಿಗೊಕ್ಕೆ ರಕ್ಷಣೆ ಒದಗಿಸುದು ಇದರಲ್ಲೇ ಮಗ್ನರಾಗಿ ಬ್ರಾಹ್ಮಣರೂ ವೈದಿಕ ಮತವೂ ಕಡೆಗಣಿಸಿ ಹೋಗಿ ನಿರ್ಲಕ್ಷ್ಯಕ್ಕೂ ಒಳಗಾಗಿ ಹೋದಿಕ್ಕು. ಮುಂದೆ ಮುಸಲ್ಮಾನರ ಆಕ್ರಮಣ, ಮತಾಂತರ, ಸ್ತ್ರೀಯರ ಅಪಹರಣ, ಅತ್ಯಾಚಾರ! ಮತ್ತೆ ಕೆಲವು ಕಾಲ ಕಳುದು ಪೋರ್ಚುಗೀಸರ ದಾಳಿ , ಇವೆಲ್ಲ ಕಷ್ಟಕೋಟಲೆಗಳಿಂದಾಗಿ ಈ ದೇಶಲ್ಲಿ ಅಳುದು ಒಳುದ ಬ್ರಾಹ್ಮಣರು ನಾಶವೋ, ತಲೆದಂಡವೋ ಪಲಾಯನವೋ ಆಗಿ ಇಂದು ಬ್ರಾಹ್ಮಣರಷ್ಟು ಅಲ್ಪಸಂಖ್ಯಾತರು ಬೇರೆ ಯಾವ ಮತಸ್ಥರೂ, ವರ್ಣ ಜಾತಿಯೋರು ಆರೂ ಇಲ್ಲೆ. ಹಾಂಗಾಗಿ “ಎಲ್ಲಾ ಶಾಖಾಹಾರಿ ಬ್ರಾಹ್ಮಣರು ಒಗ್ಗಟ್ಟಾಗಿ ಪರಸ್ಪರ ವೈವಾಹಿಕ ಸಂಬಂಧಂಗಳ ಏರ್ಪಡಿಸಿಗೊಂಬದು ಶ್ರೇಯಸ್ಕರ” ಹೇಳಿ ವಿದ್ವಾಂಸರು ಹೇಳ್ತವು. ಹಳ್ಳಿ ಮಾಣ್ಯಂಗೊ ನಿರ್ಲಕ್ಷ್ಯಕ್ಕೆ ಒಳಗಾದ್ದರ ಕಂಡು ಈ ರೀತಿ ಸಲಹೆ ನೀಡ್ತಾ ಇದ್ದವು. ನಮ್ಮತನವನ್ನೂ ಒಳಿಶಿಗೊಂಡು ಉತ್ತಮವಾದ್ದರ ಸ್ವೀಕರಿಸೆಕ್ಕು. ಉನ್ನತ ಶಿಕ್ಷಣ ಪಡದ ಕೂಸುಗೊ ಪರಜಾತಿಯೊರ ಮದುವೆ ಅಪ್ಪದು ಈಗಾಣ ದುರಂತವೇ. ಅದಕ್ಕೆ ನಮ್ಮ ಸಮುದಾಯಲ್ಲಿ ರಕ್ತಗತವಾಗಿ ಬಂದ ತಾರತಮ್ಯ  ನಡವಳಿಕೆಯೂ ಒಂದು ಕಾರಣ ಆಗಿಪ್ಪ ಸಾಧ್ಯತೆ ಇದ್ದು. ಈ ವಿಚಾರವಾಗಿ ಹವಿಕರು ಆತ್ಮಾವಲೋಕನೆ ಮಾಡಿಗೊಳ್ಳೆಕ್ಕಾದ ಸಮಯ ಬಯಿಂದು. ಕೂಸುಗಳ ಅಬ್ಬೆ ಅಪ್ಪನೂ ಈ ಪರಿಸ್ಥಿತಿಗೆ ಕಾರಣರಾಗಿಪ್ಪಲೂ ಸಾಕು. ಇನ್ನೊಂದು ಮುಖ್ಯ ವಿಷಯ ಇಂದ್ರಾಣ ವಿಶ್ವಮಾನವತೆ, ವಿಶ್ವ ಬಂಧುತ್ವ, ಜಾತ್ಯಾತೀತ ವಿಚಾರಧಾರೆ, ಹೊಸದಿಕ್ಕು, ಹೊಸನೋಟ, ನಗರ, ವಿದೇಶ ಪ್ರವಾಸದ ಆಕರ್ಷಣೆ, ಧನದಾಹ, ಇವುಗಳ ಝಂಝಾವಾತಲ್ಲಿ ಸಾಮಾಜಿಕ ದೋಷಂಗಳೊಟ್ಟಿಂಗೆ ಉತ್ತಮವಾದ ಕೌಟುಂಬಿಕ ಶಾಂತಿ, ಮತ್ತದಕ್ಕೆ ಪೂರಕವಾದ ಉತ್ತಮ ಸಂತಾನ ಪಡೆಕಾದ ಅವಶ್ಯಕತೆ, ಮಾನವೀಯ ಮೌಲ್ಯಂಗೊ, ಎಲ್ಲವೂ ಬಜಕ್ಕೆರೆಯ ಹಾಂಗೆ ಹಾರಿ ಹೋವ್ತಾ ಇದ್ದಲ್ಲದಾ? ಅದಕ್ಕೆ ಕಾರಣ ಇಂದ್ರಾಣ ವಿದ್ಯಾಭ್ಯಾಸ ಶಿಕ್ಷಣಂಗಳಲ್ಲಿ ಸೇರ್ಪಡೆಯಾಗದ್ದ ನೀತಿಪಾಠ! ಹಿರಿಯರಲ್ಲಿ ಗೌರವ, ಭಾರತೀಯ ಪ್ರಜ್ಞೆ, ಸಂಸ್ಕೃತಿಯ ಮೇಲೆ ಅಭಿಮಾನ, ಪಿತೃ ಋಣ ಮಾತೃ ಋಣ,ದೇವ ಋಣಂಗಳ ಬಗ್ಗೆ ಪರಿಜ್ಞಾನ ಹೀನವಾದ ಶಿಕ್ಷಣ ಪದ್ಧತಿ. ಹೃದಯ ಸಂಸ್ಕಾರ ಕೊಡದ್ದ ಶಿಕ್ಷಣವೇ ಇಂದ್ರಾಣ ಎಲ್ಲಾ ದುರಂತಕ್ಕೆ ಕಾರಣ. ಇಂದ್ರಾಣ ಅಬ್ಬೆ ಅಪ್ಪಂದ್ರು ನಮ್ಮ ಯುವಪೀಳಿಗೆಲಿ ಪರಿವರ್ತನೆ ತರೆಕ್ಕು. ಮನೆಯೇ ಮೊದಲ ಪಾಠಶಾಲೆ ಆದ್ದರಿಂದ ಅದು ಅವರ ಕೈಲಿದ್ದು.

ಸರ್ವೇ ಭವಂತು ಸುಖಿನಃ | ಸರ್ವೇ ಸಂತು ನಿರಾಮಯಾಃ |  ಸರ್ವೇ ಭದ್ರಾಣಿ ಪಶ್ಯಂತು |ಮಾ ಕಶ್ಚಿದ್ ದುಃಖ ಭಾಗ್ ಭವೇತ್|

ಓಂ ಶಾಂತಿಃ ಶಾಂತಿಃ ಶಾಂತಿಃ

~~~***~~~

ಇದನ್ನೂ ಓದಿ:- ಹವ್ಯಕರ ಮೂಲಸ್ಥಾನ ಯಾವದಾಗಿತ್ತು?

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ,
ನಂ: 1566, 19th ಕ್ರಾಸ್, ರೂಪಾನಗರ
ಭೋಗಾದಿ ಪೋಸ್ಟ್
ಮೈಸೂರು 570026

9019274678

 

 

ಶರ್ಮಪ್ಪಚ್ಚಿ

   

You may also like...

2 Responses

  1. raghumuliya says:

    ಉತ್ತಮ ಲೇಖನಮಾಲೆ . ಸರಸ್ವತಿ ಅತ್ತೆಗೂ , ಪ್ರಕಟ ಮಾಡ್ತಾ ಇಪ್ಪ ಅಪ್ಪಚ್ಚಿಗೂ ಧನ್ಯವಾದ .

  2. ಈ ಲೇಖನ ಒಳ್ಳೆ ಸತ್ವಯುತವಾಗಿ ಪ್ರಭುದ್ಧತೆ ಸಾಲಿಲ್ಲಿ ಇದ್ದು. ಹಾಂಗೇ ಮುಸಲ್ಮಾನರು ಅವರ ಮತಕ್ಕೆ ಮತಾಂತರ, ಹಿಂದೂಸ್ತ್ರೀಯರ ಅಪಹರಣ, ಅದಕ್ಕೆ ನಾವು ಎಚ್ಚೆತ್ತುಕೊಳ್ಳೆಕ್ಕಾದ ಅನಿವಾರ್ಯತೆ, ಅದೆಷ್ಟೋ ಸಾಂದರ್ಭಿಕ ಕಿವಿಮಾತು ಇದ್ದು. ಸರಸ್ವತಿ ಅತ್ತಗೆ ಹಾಂಗೇ ಶರ್ಮಭಾವಂಗೆ ಹೃದಯಾಂತರಾಳದ ನಮನಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *