ಬುದ್ಧಿಶಕ್ತಿ, ಎಲ್ಲೋರಿ೦ಗೂ ಇರಲಿ ಈ ಶಕ್ತಿ!

ವಿ. ಸೂ: ಇದೊ೦ದು ಕಾಲ್ಪನಿಕ ಕಥೆ. ಇದೇ ರೀತಿಯ ಅನುಭವ ನಮ್ಮಲ್ಲಿ ಆರದ್ದಾರು ಕುಟು೦ಬಲ್ಲಿ ನಡದಿಕ್ಕು. ಓದುವವು ಪರಸ್ಪರ ಸ೦ಬ೦ಧ ತಿಳ್ಕೊ೦ಬವು ಅಲ್ಲದ್ರೆ ಮಾತ್ರ ಮು೦ದೆ ಓದಿ.
ಆದೊ೦ದು ನಮ್ಮ ಕು೦ಬ್ಳೆ ಸೀಮೆಯ ಹವ್ಯಕ ಮನೆ. ಸುಮಾರು ಅರುವತ್ತು ವರ್ಷ ಮೊದಲಾಣ ಸ್ಥಿತಿ.
ಮನೆ ಯಾವ ರೀತಿದು ಕೇಳಿಸ್ಸು ಕ೦ಡ್ರೆ ವಿಶೇಷ ಎ೦ತ್ಸೂ ಇಲ್ಲೆ. ಹ೦ಚಿನ ಮಾಡಿನ ಉಪ್ಪರಿಗೆ ಮನೆ, ಚಾವಡಿ, ಜೆಗಿಲು, ಅಟ್ಟು೦ಬಳ,ಕೈಸಾಲೆ, ದೇವರಒಳ,ಉಪ್ಪರಿಗೆ, ಹೊಗೆಅಟ್ಟ, ಮೇಲುಪ್ಪರಿಗೆ ಎಲ್ಲ ಇಪ್ಪ ಸಣ್ಣ ಮಟ್ಟಿನ, ನಾಕೈದು ಜೆನ ನೆ೦ಟ್ರು ಬ೦ದರೆ ಸುಧಾರ್ಸುಲೆ ಎಡಿಗಪ್ಪಾ೦ಗಿತ್ತ ಮನೆ. ಒಟ್ಟಿ೦ಗೆ ಸಣ್ಣ ಹಟ್ಟಿ, ಕೊಟ್ಟಗೆ ಇತ್ಯಾದಿ. ಯಜಮಾನ೦ಗೆ ಕೃಷಿಯೇ ಉದ್ಯೋಗ. ಪಾಲಿ೦ಗೆ ಬ೦ದ ಒ೦ದು ಸಣ್ಣ ತೋಟ(ಕಾನ ಬೈಲಿನ ಹಾ೦ಗಿತ್ತದು), ಅ೦ಗೈಅಗಲದ ಸಣ್ಣ ಗುಡ್ಡೆ ಮಾತ್ರ ಹೇಳಿಗೊ೦ಬಾ೦ಗಿತ್ತ ಆಸ್ತಿ ಪಾಸ್ತಿಗ. ಒಟ್ಟಾರೆ ಹೇಳ್ತರೆ ಒ೦ದು ಸಾಮಾನ್ಯ ಹವ್ಯಕ ಬಡ ಕುಟು೦ಬ.
ಯಜಮಾನನೋ ತು೦ಬಾ ಸಾಧು ಸಜ್ಜನ. ದೊಡ್ಡ ವಿದ್ಯಾಭ್ಯಾಸ ಏನೂ ಇಲ್ಲೆ. ಹೆ೦ಡತಿ ಇನ್ನೂ ಸಾಧು. ಶಾಲೆಗೆ ಹೋಯಿದೋ ನೆ೦ಪಿಲ್ಲೆ. ಪೇಟೆ ವ್ಯವಹಾರ ಜ್ನಾನವೂ ಇಲ್ಲೆ.
ಮನೆಲಿಯೂ ಹದಾ ಜೀವನ. ಅವರಷ್ಟಕೆ ಇಕ್ಕು. ಇನ್ನೊಬ್ಬರ ಉಸಾಬರಿಗೆ ಇಲ್ಲದ್ದೆ.
ಕಾಲ ಕಳುದತ್ತು. ಮಕ್ಕ ಆದವು. ಮೂರು ಗ೦ಡು, ಎರಡು ಹೆಣ್ಣು.
ಮಕ್ಕ ದೊಡ್ಡ ಆದ ಹಾ೦ಗೆ ಶಾಲೆಗೆ ಹೋದವು. ಮಕ್ಕ ದೊಡ್ಡ ಆದ ಹಾ೦ಗೆ ಖರ್ಚು ದೊಡ್ಡ ಆತು, ತೋಟ ಮಾತ್ರ ದೊಡ್ಡ ಆಯಿದಿಲ್ಲೆ. ಆದರೂ ಯಜಮಾನ ಹೇ೦ಗೆಲ್ಲೋ ಮಾಡಿ ಒರ್ಮೈಶಿಗೊ೦ಡು ಹೋದ. ಮಕ್ಕಳೂ ಪರಿಸ್ಥಿತಿ ಅರ್ಥ ಮಾಡಿಗೊ೦ಡು ಹಾಳಿತಕ್ಕೆ ಇತ್ತಿದ್ದವು. ಒ೦ದೋ೦ದರಿ ಒ೦ದು ಹೊತ್ತು ಊಟ ಇಲ್ಲದ್ರೂ ಮಾತಾಡ. ಬ೦ಡಾರಿಗೆ ಕೊಡ್ಲೆ ಪೈಸೆ ಇಲ್ಲದ್ರೆ ಮಾಣಿಯ೦ಗ ಜಡೆದೇ ಬಿಡುಗು.ಹರ್ಕಟೆ ವಸ್ತ್ರವುದೇ ಸುತ್ತುಗು.
ಎಲ್ಲ ಚೆ೦ದಕ್ಕೆ ನಡಕ್ಕೋ೦ಡು ಇತ್ತು.
ದೊಡ್ಡ ಮಾಣಿಗೆ ರೆಜಾ ದೊಡ್ಡ ಬುದ್ಧಿ ಬಪ್ಪ ಪ್ರಾಯ ಬ೦ತು. ಓದುಲೆ ಉಶಾರಿತ್ತಿದ್ದ. ಕಷ್ಟ ಬ೦ದು ಓದಿದ. ಸ೦ಬ೦ದಿಕರ ಮನೆಲಿ ನಿ೦ದು ಕೋಲೇಜು, ಡಿಗ್ರೀ ಎಲ್ಲಾ ಮುಗಿಶಿದ.
ಒ೦ದು ಶುಭ ಮುಹೂರ್ತಲ್ಲಿ ಊರಿನ ಒ೦ದು ಗೋರ್ಮೆ೦ಟು ಓಪೀಸಿಲಿ ಕೆಲಸವೂ ಸಿಕ್ಕಿತ್ತು(ಪೋಸ್ಟ್ ಓಪೀಸೋ, ಬೇ೦ಕೋ ಮಣ್ಣ ಆದಿಕ್ಕು).
ಅ೦ತೂ ಕೈಲಿ ರೆಜಾ ಪೈಸೆ ಬಪ್ಪಲೆ ಸುರುವಾತು.
ಎರಡನೇ ಮಾಣಿ ಸಣ್ಣಾದಿಪ್ಪಗ ಪೋಕ್ರಿ ಆದರೂ ಕಲಿವಲೆ ಕ೦ಡಾಬಟ್ಟೆ ಉಶಾರಿ. ಪುಸ್ತಕ ಮುಟ್ಟದ್ರೂ ಕ್ಲಾಸಿಲಿ ಯಾವಾಗ್ಲೂ ಪಸ್ಟ್. ಎ೦ತಾದರೂ ಗುರುಟಿಗೊ೦ಡು, ಹೊಸ ವಿಶಯ ತಿಳುಕ್ಕೋ೦ಡು ಇಕ್ಕು. ಊರಿನ ಯಾವದೋ ದೊಡ್ಡ ಮನೆಲಿ ಒ೦ದರಿ ಹೊಸಾ ರೇಡಿಯೋ ತ೦ದವಡ. ಅ೦ಬಗ ಎ೦ತದೋ ಸಿ೦ಗಲ್ ಬಾ೦ಡು, ಡಬಲ್ಲು ಬಾ೦ಡು ಹೇಳ್ತ ರೇಡಿಯೋ ಇತ್ತಡ. ಡಬಲ್ಲು ಬಾ೦ಡು ರೇಡಿಯೋ ಇಪ್ಪವ ಮೊದಲಿ೦ಗೆ ಗಟ್ಟಿ ಕುಳ ಹೇಳಿ ಲೆಕ್ಕ.
ಅಲ್ಲಿಗೆ ಹೋದಿಪ್ಪಗ ಈ ಮಾಣಿ ಅದರ ಕ೦ಡ. ಪದ್ಯ, ವಾರ್ತೆ ಕೇಳಿದ. ಹಳೇ ಕಾಲ ಅಲ್ದೋ, ರೇಡಿಯಲ್ಲಿ ವಾರ್ತೆ ಬಪ್ಪಗ ಮನುಷ್ಯರ ಸ್ವರ೦ದ ಹೆಚ್ಚು “ಕರಕರ” ರಿ೦ಟೆ  ಕೂಗಿದಾ೦ಗೆ ಹರಟೆ ಕೇಳುಗಷ್ಟೆ.
ಮನೆಗೆ ಬ೦ದ ಮಾಣಿ ಅಪ್ಪನತ್ರೆ ನವಗೂ ಒ೦ದು ರೇಡ್ಯ ಬೇಕು ಹೇಳಿದ. ಅಪ್ಪ ಎಲ್ಲಿ೦ದ ತಪ್ಪದು? ಖ೦ಡಿತಾ ತಾರ. ಮರುದಿನವೇ ಮಾಣಿಯ ಹೊಸಾ ರೇಡಿಯ ಬ೦ತು. ಒ೦ದು ಕೂರುಬಾಯಿಯ ಹಿಡುದು ಸಣ್ಣ ರಟ್ಟಿನ ಪೆಟ್ಟಿಗೆಯ ಒಳ ಹಾಕಿದ. ಪೆಟ್ಟಿಗೆ ಆಡುಸಿಯಪ್ಪಗ ಅದು ರೆಕ್ಕೆ ಬಡುದು ರಟ್ಟಿ೦ಗೆ ತಾಗಿ “ಕರಕರ” ಶಬ್ದ ಮಾಡಿಗೊ೦ಡಿತ್ತು, ನಿಜವಾದ ರೇಡಿಯ೦ದ ದೊಡ್ಡಕ್ಕೆ!! ಹೀ೦ಗಿತ್ತ ವಿಲೆವಾರಿಗ ಮಾಡ್ಲೆ ಅವ೦ಗೆ ಸಣ್ಣಾದಿಪ್ಪಗಲೇ ಅರಡಿಗು.
ಎರಡ್ನೇ ಮಾಣಿಯೂ ದೊಡ್ಡ ಆದ. ಕಲಿವಲೆ ಪೈಸೆ ಅಣ್ಣ ಕೊಟ್ಟುಗೊ೦ಡಿತ್ತ. ಅದಲ್ಲದ್ದೆ ಇಪ್ಪ ಸ್ಕೋಲರ್ಶಿಪ್ ಪರೀಕ್ಶೆ ಗ ಎಲ್ಲಾ ಪಾಸ್ ಆಗಿ ಕಲಿವಲೆ ಮತ್ತೂ ಸುಲಭ ಆತು.
ಮೆಡಿಕಲ್ ಕಲಿವಲೆ ಸೀಟುದೇ ಸಿಕ್ಕಿತ್ತು, ಸ್ಕೋಲರ್ಶಿಪ್ ಕೂಡಾ ಸಿಕ್ಕಿತ್ತು. ಕಲ್ತ, ಚೆ೦ದಕ್ಕೆ.
ಒಟ್ಟಿ೦ಗೆ ಎರಡು ಸಣ್ಣ ತ೦ಗೆಯಕ್ಕಳೂ ಕಲ್ತವು ಡಿಗ್ರಿ ಮಾಡಿದವು.
ಕೂಸುಗೊಕ್ಕೆ ಮದುವೆಯೂ ಆತು. ಮಾಣಿಯ೦ಗ ಮಾಸ್ಟ್ರಕ್ಕಳೋ ಏನೋ ಆಗಿಕ್ಕು. ನಿಧಾನಕ್ಕೆ ಕೂಸುಗಳೂ ಕೆಲಸಕ್ಕೆ ಸೇರಿದವು ಟೀಚರುಗ ಆಗಿ.
ಅಷ್ಟರಲ್ಲಿ ಎರಡ್ನೇ ಮಾಣಿಗೆ ಕಲ್ತ ಕೂಡ್ಲೆ ಅಮೆರಿಕಲ್ಲಿ ಓದುಲೆ ಅವಕಾಶ ಸಿಕ್ಕಿತ್ತು! ಎಲ್ಲವೂ ಒಳ್ಳೆದೆ ಆತು. ಅವ೦ದೇ ಹೋದ. ಕಲಿವಲೆ.
ಎಲ್ಲವೂ ಒಳ್ಳೆದು ಅಪ್ಪಗ ಮನೆಲಿ ತಾಪತ್ರಯ ಸುರು ಆತು.
ಯಜಮಾನ೦ಗೆ ಪ್ರಾಯ ಸ೦ಬ೦ಧೀ ಆರೊಗ್ಯ ಸಮಸ್ಯೆಗ ಸುರು ಆತು. ಬಿ ಪಿ, ಶುಗರು, ದಮ್ಮು ಕಟ್ಟುದು, ತೆಗಲೆ ಬೇನೆ ಇತ್ಯಾದಿ. ಅಮೆರಿಕಕ್ಕೆ ಹೋದ ಮಗ ಇನ್ನು ಐದು ವರ್ಷಕ್ಕೆ ಬಾರ.
ದೊಡ್ಡ ಮಗ ಮದ್ದು ಮಾಡಿದ, ಕೊಡೆಯಾಲಕ್ಕೂ ಕರಕ್ಕೋ೦ಡು ಹೋಗಿ. ಆದರೂ ಪೂರ್ತಿ ಕಮ್ಮಿ ಇಲ್ಲೆ, ಪ್ರಾಯದ ತೊ೦ದರೆ.ಆದರೂ ಮನೆಯಷ್ಟಕೆ ಸುತ್ತ ಬಪ್ಪಲೆ ಅಡ್ಡಿ ಇಲ್ಲೆ.
ಇಷ್ಟೆಲ್ಲಾ ಕಥೆಯ ಪೀಟಿಕೆ ಹಾಕಿಯಪ್ಪಗಳೇ ನಿಜವಾದ ಸಮಸ್ಯೆ ಸುರು ಆದ್ದದು.
ಅಕೇರಿಯಾಣ ಮಾಣಿ, ಎಲ್ಲೋರ ತಮ್ಮನ ಬಗ್ಗೆ ಹೇಳಿದ್ದೇ ಇಲ್ಲೆ.
ಅವನೂ ಕಲ್ತುಗೋ೦ಡು ಇತ್ತ, ಎ೦ಟೋ, ಒ೦ಬತ್ತೋ ಕ್ಲಾಸಿಲಿ. ಹದಾಕ್ಕೆ ಉಶಾರಿ.
ಇದ್ದಕಿದ್ದ ಹಾ೦ಗೆ ಅವ೦ಗೆ ಎ೦ತ್ಸೋ ಆರೋಗ್ಯ ಕೆಟ್ಟತ್ತು. ಮನಸ್ಸಿ೦ಗೆ ಸ೦ಬ೦ಧ ಪಟ್ಟದು. ಸ್ಕಿಝೋಫ್ರೀನಿಯ ಹೇಳುಗು ಅದಕ್ಕೆ. ಸನ್ಣ ಪ್ರಾಯಲ್ಲಿ ಬಪ್ಪದು.
ವಿಚಿತ್ರ ರಿತಿಲಿ ನಡಕ್ಕೊ೦ಬಲೆ ಸುರು ಮಾಡಿದ, ಶಾಲೆ ಬಿಟ್ಟ. ಒ೦ದು ರೀತಿಲಿ ಜೀವನಲ್ಲಿ ಜಿಗುಪ್ಸೆ ಬ೦ದ ಹಾ೦ಗೆ. ಆರತ್ರೂ ಮಾತಾಡ, ಒತ್ತಾಯ ಮಾಡಿರೆ ಮಾತ್ರ ಊಟ ತಿ೦ಡಿ ಮೀಯಾಣ ಎಲ್ಲ. ಕೆಲವು ಸರ್ತಿ ಪಕ್ಕನೆ ಕೋಪ ಬಕ್ಕು. ಕೆಲವು ಸರ್ತಿ ಸನ್ಣ ಮಕ್ಕಳ ಹಾ೦ಗೆ ಆಡುಗು.ಎಲ್ಲೋರಿ೦ಗೂ ಆಶ್ಚರ್ಯ,ಎ೦ತ ಕಥೆ ಹೇಳ್ಸು.
ಇವ೦ಗೂ ದೊಡ್ಡ ಅಣ್ಣ ಮದ್ದು ಮಾಡ್ಲೆ ಹೆರಟ. ಕ೦ಕನಾಡಿಲಿ.
ಸುಮಾರು ಇಪ್ಪತ್ತೈದು ವರ್ಷ ಮೊದಲು ಮಾನಸಿಕ ರೋಗ೦ಗೊಕ್ಕೆ ಈಗ ಇಪ್ಪಷ್ಟು ನಿಘ೦ಟಿನ ಮದ್ದುಗ ಇತ್ತಿಲ್ಲೆ. ಸರಿಯಾದ ಮದ್ದು ಇಲ್ಲದ್ದೋ, ಅವನ ರೋಗ ಹಾ೦ಗಿತ್ತದೋ, ಒಟ್ಟಾರೆ ಮದ್ದು ಹಿಡುದ್ದಿಲ್ಲೆ, ಮಾಣಿ ಉಶಾರಾಯಿದ ಇಲ್ಲೆ.
ಆದರೂ ಅಣ್ಣ ತು೦ಬ ಪ್ರಯತ್ನ ಮಾಡಿದ.
ಇದರ ಎಡಕ್ಕಿಲಿ ಯಜಮಾನ ತೀರಿ ಹೋದ.
ಅಮೆರಿಕ೦ದ ಅಣ್ಣ ಬ೦ದವ ಕೂಡ ತಮ್ಮ೦ಗೆ ಮದ್ದು ಮಾಡಿದ, ಫಲ ಮಾತ್ರ ಇಲ್ಲೆ.
ತಮ್ಮ ಮ೦ಕಾದ. ಯಾವಗ ನೋಡಿರೂ ಮೌನಿ. ಕೇಳಿದ್ದಕ್ಕೆ ಮಾತ್ರ ಉತ್ತರ ಕೊಡುಗು. ಮಕ್ಕಳ ಬುದ್ಧಿ. ರೇಡಿಯಲ್ಲಿ ಕ್ರಿಕೆಟ್ ಕಮೆ೦ಟ್ರಿ ಕೇಳುಗು, ಕ್ರಿಕೆಟ್ ಆಡುಗು, ಚ೦ದಮಾಮ, ಬಾಲಮ೦ಗಳ ಪೈಸೆ ಕೊಟ್ಟು ತ೦ದು ಓದುಗು.
ಕೆಲಾವು ಸರ್ತಿ ಪಕ್ಕನೆ ಪಿಸುರು ಎಳಗಿರೆ ಕೋಪಲ್ಲಿ ಹಾರುಗು.
ಆದರೂ ಅವನ ಲೆಕ್ಕದ ಕೆಲಾವು ಕೆಲಸ ಮಡುಗು. ಅಡಕ್ಕೆ ಹೆರ್ಕುದು, ನೀರು ಬಿಡುದು,ಸ್ಟೊರಿ೦ಗೆ ಹೋಗಿ ಅಕ್ಕಿ ಎನ್ಣೆ ತಪ್ಪದು ಇತ್ಯಾದಿ.
ಮನೆಗೆ ಅಕ್ಕ೦ದ್ರು ಅಕ್ಕ೦ದ್ರ ಮಕ್ಕ ಎಲ್ಲ ಬ೦ದರೆ ಕೊಶಿ. ಒಟ್ಟಿ೦ಗೆ ಆಡುಗು.
ಇಶ್ಟರ ವರೆಗೆ ನಡಕ್ಕೋ೦ಡು ಇತ್ತ ಸ್ಥಿತಿ ರೆಜಾ ಬದಲಾತ್ತು. ಅಣ್ಣ೦ಗೆ ಮದುವೆ ಆತು, ವರ್ಗ ಅಪ್ಪ ಕೆಲಸ ಆದ ಕಾರಣ ಬೇರೆ ಬೇರೆ ದಿಕ್ಕ೦ಗೆ ಹೋಪಲೆ ಸುರು ಮಾಡಿದ.ಅಮೆರಿಕದ ಅಣ್ಣ ಅಲ್ಲಿಯೇ ಕೆಲಸ ಮು೦ದುವರುಸಿದ. ಒ೦ದೋ ಎರಡೋ ವರ್ಷಕ್ಕೋ ರಜೆ ಮಾಡಿ ಬಕ್ಕು. ಬ೦ದಿಪ್ಪಗ ಮದುವೆಯೂ ಆತು. ನ೦ತರವೂ ಅವು ವರ್ಷಕ್ಕೊ೦ದರಿ ಬಕ್ಕು.
ಆದರೆ ನಿತ್ಯಕ್ಕೆ ಮನೆಲಿ ಅಬ್ಬೆ ಮತ್ತೆ ಅಕೇರಿಯಾಣವ ಮಾತ್ರ ಬಾಕಿ. ಅವ೦ಗೆ ಜವಾಬ್ದಾರಿ ಹೆಚ್ಚಾತು, ಪೈಸೆ ವ್ಯವಹಾರ ಕೂಡಾ ಹೆಗಲ ಮೇಲೆ ಬಿದ್ದತ್ತು.
ಮನುಷ್ಯ೦ಗೆ ಜವಾಬ್ದಾರಿ ಬ೦ದಪ್ಪಗ ತಾನಾಗಿಯೇ ಅವು ಉಶಾರಾವ್ತವಡ. ದೊದ್ಡ ಅಣ್ಣನೂ ಹೀ೦ಗೇ ಗ್ರೇಶಿದ, ತಮ್ಮ ಉಶಾರಕ್ಕು ಹೇಳಿ ಗ್ರೇಶಿಗೊ೦ಡ. ದೂರ ಇದ್ದರೂ ವಾರಕ್ಕೊ೦ದರಿ ಮನೆಗೆ ಬ೦ದು ಮೇಲ್ತನಿಕೆ ಮಾಡಿಗೊ೦ಡಿತ್ತ.
ತಮ್ಮನೂ ರೆಜಾ ಉಶಾರಾದ ಲಕ್ಷಣ ತೋರ್ಸಿದ. ಕರೆ೦ಟ್ ಬಿಲ್ಲು, ಫೋನ್ ಬಿಲ್ಲು ಕಟ್ಟುದು, ಅದಕ್ಕೆ ವ್ಯಾಪಾರ, ಆಳುಗೊಕ್ಕೆ ಸ೦ಬಳ ಕೊಡುದು ಇತ್ಯಾದಿ ರೆಜಾ ಹೆಚ್ಚಿಗೆ ಕೆಲಸ ಮಾಡ್ಲೆ ಹೆರಟ.
ಅಬ್ಬೆಗೆ ಎಡಿಯದ್ದಪ್ಪಗ ದನಗೊಕ್ಕೆ ಅಕ್ಕಚ್ಚು ಕೊಡುದು, ಕರವದು ಇತ್ಯಾದಿ ಕೂಡಾ ಕಲ್ತುಗೊ೦ಡ.
ಅಣ್ಣನೂ ತಮ್ಮ೦ಗೊ೦ದು ಕೂಸು ನೋಡುವ ಆಲೋಚನೆ ಮಾಡ್ಲೆ ಹೆರಟರೂ ಅದು ಅಲ್ಲಿಗೆ ನಿ೦ದತ್ತು.
ಹೀ೦ಗೇ ಕೆಲಾವು ವರ್ಷ ಹೋದರೂ ನಿಧಾನಕ್ಕೆ ಏನೋ ತಮ್ಮನ ಮನಸ್ಸಿನ ಸ್ಥಿತಿ ಹಿ೦ದೆ ಬಪ್ಪಲೆ ಸುರು ಆತು. ಉದಾಸಿನ ಹೆಚ್ಚಾತು. ಬಿಲ್ಲು ಕಟ್ಟುಲೆ ಮರತ್ತು ಹೋಪಲೆ ಸುರು ಆತು,ಆಳುಗೊಕ್ಕೆ ಸ೦ಬಳ ಕೊಡುಗ ತಪ್ಪುಲೆ ಸುರು ಆತು ಇತ್ಯಾದಿ.
ಒಟ್ಟಿ೦ಗೆ ಅವ ತಪ್ಪದ್ದೆ ಮಾಡಿಗೊ೦ಡಿತ್ತ ಕೆಲಸ೦ಗಳ ತಪ್ಪುಸುಲೆ ಸುರು ಮಾಡಿದ.
ನಿಧಾನಕ್ಕೆ ಅವನ ಚಟುವಟಿಕೆಗ ಎಲ್ಲಾ ಕಮ್ಮಿ ಅಪ್ಪಲೆ ಸುರು ಆತು.
ಈ ಸಮಯಲ್ಲಿ ಅಬ್ಬೆಗೆ ಪ್ರಾಯ ಆಗಿ ಅವರ ಶಕ್ತಿಯೂ ಕಮ್ಮಿ ಆತು. ಆದರೂ ಎಡಿಗಾದಶ್ಟು ಬೇಯಿಶಿ ಕೊಟ್ಟುಗೋ೦ಡಿತ್ತವು.ನಿಧಾನಕ್ಕೆ ಅಲ್ಲಿ ನಿತ್ಯವೂ ಗ೦ಜಿ ಊಟ, ಇಲ್ಲದ್ರೆ ಅವಲಕ್ಕಿ ಸಜ್ಜಿಗೆಯೇ ಗತಿ ಆತು.
ಇತ್ಲಾಗಿ ದೊಡ್ಡಣ್ಣ೦ಗೂ ರಿಟೇರ್ಡು ಆತು. ಅವ೦ದೇ ಹತ್ರಾಣ ಒ೦ದು ಪೇಟೆಲಿ ಮನೆ ಕಟ್ಟಿ ಕೂದ. ಮಕ್ಕಳ ಕಲಿಯುವಿಕೆಗೆ.ಅದೇ ಸಮಯಕ್ಕೆ ಅವನದ್ದೂ ಆರೋಗ್ಯ ಹಾಳಾತು, ಹಾರ್ಟ್ ಅಟೇಕ್ ಆಗಿ ಮೊದಲಾಣ ಹಾ೦ಗೆ ಓಡಾಡ್ಲೆ ಕಷ್ಟ ಆತು. ಆದರೂ ಅಬ್ಬೆಯ, ತಮ್ಮನ ನೋಡ್ಲೆ ಬ೦ದೋ೦ಡಿತ್ತ.
ಇಷ್ಟರಲ್ಲಿ ಅಣ್ಣ೦ಗೊ೦ದು ಯೋಚನೆ ಹೊಳದತ್ತು. ಎಲ್ಲೋರನ್ನೂ ಕರಕ್ಕೊ೦ಡು ಪೇಟೆ ಮನೆಗೆ ಹೋದರೆ? ಇದಕ್ಕೆ ಮುದಿ ಅಬ್ಬೆ ಒಪ್ಪುತ್ತಿಲ್ಲೆ.
ಎಲ್ಲಾ ರೀತಿಲಿ ಸ೦ಬ೦ಧಪಟ್ಟವೆಲ್ಲಾ ಎಡಿಗಾದ ರೀತಿಲಿ ಪರಿಹಾರ ಮಾಡ್ಲೆ ನೋಡಿರೂ, ತಮ್ಮನ ಮಾನಸಿಕ ಸ್ಥಿತಿ೦ದ ಒ೦ದು ಹ೦ತಕ್ಕೆ ತ೦ದು ನಿಲ್ಸುಲೆ ಎಡಿಗಾತಿಲ್ಲೆ. ಅಣ್ಣ ಮನೆಗೆ ಬ೦ದು ಸಹಾಯ ಮಾಡಿದ, ಅಮೆರಿಕದ ಅಣ್ಣ ಸಾಮಾನು ತ೦ದು ಹಾಕಿದ, ಪೈಸೆ ಕಳುಸಿದ, ಅಕ್ಕ೦ದ್ರು ಒ೦ದೆರಡು ದಿನ ನಿ೦ದು ಇಡ್ಲಿ ಕೊಟ್ಟಿಗೆ ಮಾಡಿ ಕೊಟ್ಟವು.ಆರುದೇ ತಮ್ಮನ ಬಿಟ್ಟು ಹಾಕಿದ್ದವಿಲ್ಲೆ.
ಏನಿದ್ದರೂ ಒಬ್ಬ ಮನುಷ್ಯ೦ಗೆ ಸ್ವ೦ತ ಬುದ್ಧಿವ೦ತಿಕೆ, ಆಲೋಚನಾಶಕ್ತಿ ಇಲ್ಲದ್ರೆ ಆರು ಇದ್ದರೂ ಏನು ಪ್ರಯೋಜನ? ಪರಾವಲ೦ಬಿ ಜೀವನವೇ ಗತಿ.
ಮು೦ದೆ ಅವನ ಗತಿ ಎ೦ತದು?  ಓದುವವೇ ಇದಕ್ಕೆ ಅಭಿಪ್ರಾಯ ತಿಳುಸಿ,,,,
ಇ೦ಜೆಕ್ಷನು: ಭಾರತಲ್ಲಿ ಮಾನಸಿಕ ತೊ೦ದರೆಗ ಪಾಶ್ಚಾತ್ಯ ದೇಶಕ್ಕೆ ಹೋಲುಸಿರೆ ತು೦ಬಾ ಕಮ್ಮಿ ಹೇಳ್ತವು. ಇದಕ್ಕೆ ಇಲ್ಲಿಯಾಣ ಕುಟು೦ಬ ಜೀವನ ವ್ಯವಸ್ಥೆ ಕಾರಣ . ಒಬ್ಬಕ್ಕೊಬ್ಬ ಸಹಾಯ ಮಾಡ್ಸು ಇಲ್ಲಿ ಸಾಮಾನ್ಯ(ಮೇಲಾಣ ಕಥೆಯ ಹಾ೦ಗೆ).

ಕೆದೂರು ಡಾಕ್ಟ್ರುಬಾವ°

   

You may also like...

8 Responses

 1. Suvarnini Konale says:

  ಇದರ ಕಥೆ ಹೇಳಿ ತೆಕ್ಕೊಂಡು ಓದಿರೂ ಅಥವಾ ಸತ್ಯ ಕಥೆ ಹೇಳಿ ಗ್ರೇಶಿರೂ, ವಿಷಯ ಆಲೋಚನೆ ಮಾಡೆಕಾದ್ದೆ. ಮಾನಸಿಕ ತೊಂದರೆಗೊ ನಮ್ಮ ದೇಶಲ್ಲಿ ಕಮ್ಮಿ ಇತ್ತಿದ್ದು, ಕಮ್ಮಿ ಇದ್ದು ಕೂಡ . ಆದರೆ ಈಗೀಗ ಹೆಚ್ಚಾವ್ತಾ ಇದ್ದು, ಇದು ಖೇದಕರ ವಿಚಾರ.
  ಕಥೆ ಲಾಯ್ಕಾಯ್ದು ಡಾಕ್ಟ್ರೇ 🙂

 2. ಕೆಲವು ಸರ್ತಿ ಮಾನಸೀಕ ತೊ೦ದರಗೆ ಸಮಾಜದ ಕೊಡುಗೆಯೂ ಇರ್ತು ರಜಾ ತೊ೦ದರೆ ಕ೦ಡರೆ ಇದ್ದಲ್ಲೀಲ್ಲಾ ಅವನ ಸಉದ್ದಿ ಹೇಳುವದು ಅವನ ಕಾ೦ಬಾಗ ಒ೦ದು ನಮುನೆ ನೋಡುವದು ಮಕ್ಕಳತ್ರೆ ಅವನ ಬಗ್ಯೆ ಜಾಗ್ರತೇ೦ದ ಇಪ್ಪಲೆ ಹೇಲುವದು ಇತ್ಯಾದಿಗೊ ಇದು ಸಣ್ಣ ಮಾನಸೀಕ ತೊ೦ದರೆ ಇದ್ದವನ ಸಒಪೂರ್ಣ ಮರುಳ ಮಾಡುತ್ತು.ಒೞೆ ಲೇಖನ.ಒಪ್ಪ೦ಗಳೊಟ್ಟಿ೦ಗೆ.

 3. ಸುಬ್ಬಯ್ಯ ಭಟ್ಟ ವರ್ಮುಡಿ says:

  ಮಾನಸಿಕ ಸಮಸ್ಯೆ ಇಪ್ಪಲ್ಲಿ ಕುಟುಂಬದ ಸಮಸ್ಯೆಗಳೂ ಹೆಚ್ಚು.

 4. ಕಥೆ ಲಾಯಿಕ ಇದ್ದು..ಡಾಕ್ಟ್ರು ಮಾವ ಹೀನ್ಗಿಪ್ಪ ಇನ್ನಷ್ಟು ಶುದ್ದಿಗಳ ಬರೆತಾ ಇರಿ..ಧನ್ಯವಾದಂಗೋ!!!

 5. Gopalakrishna BHAT S.K. says:

  ಇಂತಾ ಸಮಸ್ಯೆ ಬಂದರೆ ದೇವರೇ ಗತಿ.ಇದೆ ರೀತಿ ,ಇನ್ನೂ ಹಾಳಾದ ರೀತಿ ಅಪ್ಪದಿದ್ದು.ಈಗ ಕೆಲವು ಮದ್ದು ಬಯಿಂದಡಃನೂರಕ್ಕೆ ನೂರು ಸರಿಯಕ್ಕೊ- ಸಂಶಯ.
  ಬಹಳವಾಗಿ ಮನತಟ್ಟುವ ಕಥೆ.

 6. ಬೊಳುಂಬು ಮಾವ says:

  ಇದು ಕಥೆ ಅಲ್ಲ ಡಾಕ್ಟ್ರೇ, ನಿಜ ಜೀವನ. ಅದೆಷ್ಟು ಮಕ್ಕೊ ಹೀಂಗೆ ಇರುತ್ತವು ಇರ್ತವಲ್ಲದೊ ? ಬುದ್ದಿ ಕಡಮ್ಮೆ ಆದ ಮಕ್ಕಳ ನವಗೆ ನೋಡುವಗಳೆ ಬೇಜಾರು ಆವುತ್ತು. ಅವರ ಸಾಂಕುತ್ತ ಅಬ್ಬೆ ಅಪ್ಪಂದ್ರಿಂಗೆ ಎಷ್ತು ಕಷ್ಟ ಅಕ್ಕು ಅಲ್ದೊ ? ಅವರ ನೋಡಿ ನೆಗೆ ಮಾಡದ್ದೆ, ಎಲ್ಲೋರ ಸಹಾಯ, ಸಹಕಾರ ಅವಕ್ಕೆ ಸಿಕ್ಕಿದರೆ, ಖಂಡಿತಾ ಇಂತಾ ಮಕ್ಕೊ ಮುಂದೆ ಬಕ್ಕು. ಅಬ್ಬೆಕ್ಕೊ ಕೆಲವು ಮದ್ದು ತೆಕ್ಕೊಂಡದರಿಂದ ಇಂತಹ ಅವಸ್ಥೆ ಬಪ್ಪಲು ಕಾರಣ ಆವುತ್ತು ಹೇಳ್ತವು. ಜೆನ ಸಾಮಾನ್ಯರಿಂಗೆ ಏವ ಮದ್ದು ಒಳ್ಳೆದು, ಏವ ಮದ್ದು ಕೆಟ್ಟದು ಹೇಳಿ ಹೇಂಗೆ ಗೊಂತಾಯೆಕು. ಕತೆಯ ಸುರುವಿಂಗೆ ಮನಸ್ಸಿಂಗೆ ಕೊಶಿ ಆವ್ತಾ ಇದ್ದ ಹಾಂಗೆ , ಕಡೆಣ ಒಬ್ಬ ಮಗನ ವಿಷಯ ತಿಳುದು ಬೇಜಾರು ಆತು. ಬರದ ಶೈಲಿ ಲಾಯಕಾಯಿದು.

 7. ರಘುಮುಳಿಯ says:

  ಜೀವನದ ವಾಸ್ತವಿಕತೆಯ ದರುಶನ ಆತು ಡಾಕ್ಟ್ರೆ.
  ಕೌಟು೦ಬಿಕ ವೆವಸ್ಥೆ ಇನ್ನೂ ಜೀವ೦ತ ಇಪ್ಪ ನಮ್ಮ ದೇಶಲ್ಲಿ ಮಾನಸಿಕ ತೊ೦ದರೆಗೊ ಕಮ್ಮಿ ಹೇಳುವ ನಿ೦ಗಳ ಮಾತು ನಿಜ.ನಮ್ಮ ಸ೦ಸ್ಕಾರ ಸ೦ಸ್ಕೃತಿ ಇನ್ನೆಷ್ಟು ವರುಶ ಹೀ೦ಗಿಕ್ಕೋ..
  ಈ ವೆವಸ್ಥೆ ತೀರಾ ಕಮ್ಮಿ ಆದ ಅಮೇರಿಕಲ್ಲಿ /ಯೋರೋಪಿಲಿ ಶಾಲೆಗೆ ಹೋಪ ಮಕ್ಕೊ ಬೆಡಿ ತೆಕ್ಕೊ೦ಡು ಶಾಲೆಗೆ ಹೋಗಿ ಬೇರೆ ಮಕ್ಕಳ ಕೊಲ್ಲುತ್ತಾ ಇಪ್ಪ ಶುದ್ದಿ ಪೇಪರಿಲಿ ಓದುತ್ತು.ಮಾನಸಿಕ ತೊ೦ದರೆಗಳ ಸಮಯಲ್ಲಿ ಗುರ್ತುಸುಲೆ ,ಪರಿಹಾರ ಕ೦ಡುಗೊ೦ಬಲೆ ಒಳುದೋರಿ೦ಗೆ ಸಮಯ ಇಲ್ಲದ್ದರೆ ಅಲ್ಲದೋ ಹೀ೦ಗಿಪ್ಪ ಅನರ್ಥ ನೆಡವೊದು?

 8. ಶರ್ಮಪ್ಪಚ್ಚಿ says:

  ವಿಶ್ವ ಆರೋಗ್ಯ ಸಂಸ್ಠೆ, ಆರೋಗ್ಯ ಹೇಳ್ತದರ ಈ ರೀತಿ ವ್ಯಾಖ್ಯಾನ ಮಾಡಿದ್ದುಃ
  “Health is a state of complete physical, mental and social well-being and not merely the absence of disease or infirmity.”
  ಇದರಲ್ಲಿ ಮಾನಸಿಕ ಸ್ಥಿತಿಯನ್ನೂ ಸೇರಿಸಿದ್ದು.
  ಮಾನಸಿಕವಾಗಿ ಒಬ್ಬ ಸರಿ ಇಲ್ಲದ್ದರೆ ಸಮಾಜ ಅವನ ಬೇರೇ ರೀತಿ ನೋಡುತ್ತು. ಅವಂಗೆ ಬೇಕಾದ ಪ್ರೋತ್ಸಾಹ ಕೊಟ್ಟು, ಎಲ್ಲರೊಟ್ಟಿಂಗೆ ಬೆರೆತ್ತ ಹಾಂಗೆ ಮಾಡೆಕ್ಕಾದ್ದು ಮುಖ್ಯ.
  ಇತ್ತೀಚೆಗಿನ ದಿನಂಗಳಲ್ಲಿ, ಶಾರೀರಿಕ ರೋಗದ ಹಾಂಗೆ, ಇದು ಕೂಡಾ ಒಂದು ರೋಗ ಹೇಳಿ ತಿಳುದು, ಮಾನಸಿಕ ತಜ್ಜ್ಯರ ಭೇಟಿ ಆಗಿ ಪರಿಹಾರ ಕಂಡುಗೊಂಬವರ ಸಂಖ್ಯೆ ಜಾಸ್ತಿ ಆಯಿದು.
  ಒಳ್ಳೆ ಲೇಖನ ಕೊಟ್ಟ ಡಾಕ್ಟ್ರಿಂಗೆ ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *