ಸಿಎ ಅಂತಿಮ ಹಂತ – ಸಿಎ ಫೈನಲ್

ಎಲ್ಲರಿಂಗೂ ನಮಸ್ಕಾರ,
ಅನಿವಾರ್ಯ ಕಾರಣಂದಾಗಿ ಸಿಎ ಬಗ್ಗೆ ಅಕೇರಿಯಾಣ ಬರಹ ತುಂಬಾ ತಡ ಆತು. ಅದಕ್ಕೆ ಕ್ಷಮೆ ಇರಲಿ. ಕಳುದ ಸರ್ತಿ ಆನು ಐಪಿಸಿಸಿಯ ಬಗ್ಗೆ ವಿವರ ಕೊಟ್ಟಿತ್ತಿದ್ದೆ. ಐಪಿಸಿಸಿಯ ಮೊದಲ (ಅಥವಾ ಎರಡೂ) ಗ್ರೂಪ್ ಪಾಸಾದ ಮತ್ತೆ ಒಬ್ಬ ವಿದ್ಯಾರ್ಥಿ ಸಿಎ ಪ್ರಾಕ್ಟೀಸ್ ಮಾಡ್ತಾ ಇಪ್ಪವರ ಕೈ ಕೆಳ ೩ (ಕೆಲವು ಸಂದರ್ಭಲ್ಲಿ ೩.೫) ವರ್ಷ ಆರ್ಟಿಕಲ್ ಶಿಪ್ ಮಾಡ್ಲೆ ಸೇರಿಕೊಳ್ಳೆಕ್ಕು. ಈ ಆರ್ಟಿಕಲ್ ಶಿಪ್ ಹೇಳುದು ನಮಗೆ ಕಲಿತ್ತಾ ಇಪ್ಪ ಸಮಯಲ್ಲಿ ಸ್ವಲ್ಪ ರಗಳೆ ಹೇಳಿ ಅನ್ನಿಸಿದರೂ ಮುಂದೆ ಕೆಲಸಕ್ಕೆ /ವೃತ್ತಿ ಜೀವನಲ್ಲಿ ಅನುಕೂಲಕ್ಕೆ ಬಪ್ಪಂತಹ ಒಳ್ಳೆ ಅನುಭವ ಕೊಡ್ತು. ಕೆಲವು ವರ್ಷಕ್ಕೆ ಮೊದಲು ಆರ್ಟಿಕಲ್ ಶಿಪ್ಪಿಗೆ ಬಪ್ಪವರ ಹತ್ರ ಬಿಟ್ಟಿ ಕೆಲಸ ಮಾಡಿಸಿಕೊಂಡಿತ್ತವು ಹೇಳಿ ಕೇಳಿತ್ತಿದ್ದೆ. ಆದರೆ ಈಗ ನಾವು ನಮ್ಮ ಖರ್ಚಿಗೆ ಬೇಕಾಪ್ಪಷ್ಟು ಸ್ಟೈಫೆಂಡ್ ಅಪೇಕ್ಷಿಸುಲಕ್ಕು. ಆರ್ಟಿಕಲ್ ಶಿಪ್ ನ ಕೊನೆಯ ಒಂದು ವರ್ಷ Industrial Training ಹೇಳಿ ಆಯ್ದ ಕಂಪೆನಿಗಳಲ್ಲಿ ಕೆಲಸ ಮಾಡುವ ಅವಕಾಶವೂ ಇದ್ದು.

ಈ ೩ ವರ್ಷಲ್ಲಿ ಆರ್ಟಿಕಲ್ ಶಿಪ್ ನ ಒಟ್ಟಿಂಗೆ ಸಿಎ ಫೈನಲ್ ಪರೀಕ್ಷೆಗೂ ತಯಾರಿ ನಡುಸೆಕ್ಕಾವ್ತು. ಇದು ಒಟ್ಟು ೮ ವಿಷಯಂಗಳ ಒಳಗೊಂಡಿರ್ತ್ತು ಮತ್ತು ಇದರ ೪ ವಿಷಯಗಳ ಎರಡು ಗ್ರೂಪ್ ಮಾಡಿದ್ದವು.

Group I
Paper 1: Financial Reporting (100 Marks)
Paper 2: Strategic Financial Management (100 Marks)
Paper 3: Advanced Auditing and Professional Ethics (100 Marks)
Paper 4: Corporate and Allied Laws (100 Marks)
Section A: Company Law (70 Marks)
Section B: Allied Laws (30 Marks)
Group II
Paper 5: Advanced Management Accounting (100 Marks)
Paper 6: Information Systems Control and Audit (100 Marks)
Paper 7: Direct Tax Laws (100 Marks)
Paper 8: Indirect Tax Laws (100 Marks)
Section A: Central Excise (40 Marks)
Section B: Service Tax & VAT (40 Marks)
Section C: Customs (20 Marks)

ವಿವರವಾದ ಪಠ್ಯಕ್ರಮಕ್ಕೆ ಇಲ್ಲಿ ಒತ್ತಿ

ಪಾಸು ಮಾರ್ಕು ಐಪಿಸಿಸಿಯ ಹಾಂಗೇ ಇದ್ದು. ಪ್ರತಿ ವಿಷಯಲ್ಲಿ ಕನಿಷ್ಠ ೪೦, ಗ್ರೂಪ್ ಸರಾಸರಿ ೫೦. ಎರಡೂ ಗ್ರೂಪ್ ಒಟ್ಟಿಗೆ ಬರದರೆ ಒಂದು ಗ್ರೂಪಿಲಿ ಮಾರ್ಕು ಕಮ್ಮಿ ಆದರೆ ಇನ್ನೊಂದು ಗ್ರೂಪಿನ ಮಾರ್ಕಿನೊಟ್ಟಿಗೆ ಅಡ್ ಜಸ್ಟ್ ಮಾಡ್ಲಕ್ಕು. ಹೇಳಿರೆ ಒಟ್ಟು ೮೦೦ ಮಾರ್ಕಿಲಿ ೪೦೦ ತೆಗೆಯೆಕ್ಕು (೪೦ ಪ್ರತಿ ವಿಷಯಲ್ಲಿ ಬರಲೇಬೇಕು).  ಕೊನೆಯ ೬ ತಿಂಗಳು ಅಥವಾ ಅದಕ್ಕಿಂತ ಕಮ್ಮಿ ಸಮಯ ಆರ್ಟಿಕಲ್ ಶಿಪ್ ಬಾಕಿ ಇಪ್ಪವು ಪರೀಕ್ಷೆ ಬರವಲೆ ಅರ್ಹರು. ಪರೀಕ್ಷೆ ವರ್ಷಲ್ಲಿ ೨ ಸರ್ತಿ (ಮೇ ಮತ್ತು ನವೆಂಬರ್) ನಡೆತ್ತು.

ಇದರ ಒಟ್ಟಿಂಗೆ ೧೫ ದಿನದ General Management & Communication Skills Course(GMCS) ಹೇಳಿ ಒಂದು ಕೋರ್ಸಿಲಿ ಭಾಗವಹಿಸೆಕ್ಕಾವುತ್ತು. ಇದರ ಆರ್ಟಿಕಲ್ ಶಿಪ್ ನ ಕೊನೆಯ ೧೨ ತಿಂಗಳಿಲಿ ಯಾವಾಗ ಬೇಕಾದರೂ ಅಥವಾ ಸಿಎ ಪರೀಕ್ಷೆ ಆದ ಮತ್ತೆ ಮಾಡುಲಕ್ಕು.  ಈ ಮೂರೂ (ಫೈನಲ್ ಪರೀಕ್ಷೆ, ಆರ್ಟಿಕಲ್ ಶಿಪ್, ಜಿಎಂಸಿಎಸ್) ಮುಗುದ ಮತ್ತೆ ನಾವು ಇನ್ಸ್ಟಿಟ್ಯೂಟಿನ ಸದಸ್ಯತ್ವಕ್ಕೆ ಅರ್ಜಿ ಹಾಕುಲಕ್ಕು. ಇನ್ಸ್ಟಿಟ್ಯೂಟಿನ ಸದಸ್ಯತ್ವ ಪಡಕ್ಕೊಂಡವು ಮಾತ್ರ ಅವರ ಹೆಸರಿನ ಹಿಂದೆ ಸಿಎ ಅಥವಾ ಚಾರ್ಟರ್ಡ್ ಅಕೌಂಟಂಟ್ ಹೇಳಿ ಹಾಕಿಕೊಂಬಲಕ್ಕು.

ಸಿಎ ಫೈನಲ್ ಗೆ ಅಪ್ಪಂತಹ ಖರ್ಚು

ಆರ್ಟಿಕಲ್ ಶಿಪ್/ರಿಜಿಸ್ಟ್ರೇಶನ್                 ರೂ ೧೦,೦೦೦/-

GMCS ಫೀಸ್                                      ರೂ ೪,೦೦೦/-

ಪರೀಕ್ಷೆ ಫೀಸ್                                        ರೂ ೨,೨೫೦/-

(ಕಳುದ ಸರ್ತಿ ಹೇಳಿದ ಹಾಂಗೆ ಡಿಗ್ರಿ ಮುಗುಶಿದವಕ್ಕೆ ಸಿಪಿಟಿ ಪರೀಕ್ಷೆಯ ಅಗತ್ಯ ಇಲ್ಲೆ ಹೇಳುವ ಸುದ್ದಿಯ ಸಿಎ ಇನ್ಸ್ಟಿಟ್ಯೂಟ್ ತನ್ನ ವೆಬ್ ಸೈಟಿಲಿ ಪ್ರಕಟ ಮಾಡಿದ್ದು. ಆದರೆ ಸರಕಾರದ ಅಧಿಕೃತ ಮುದ್ರೆ ಬೀಳೆಕ್ಕಷ್ಟೆ. ವಿವರ ಇಲ್ಲಿದ್ದು)

ಕಡೆಯದಾಗಿ ಆನು ಸಿಎ ಕಲ್ತ ಸಂಸ್ಥೆ CAPS ನ ಬಗ್ಗೆ ನಾಲ್ಕು ಮಾತು.

CAPS ಇದು ಸಿಎ ಕೋಚಿಂಗಿಗೆ ಹೇಳಿ ೨೦೦೩ರಲ್ಲಿ ಪ್ರಾರಂಭ ಆದ ಸಂಸ್ಥೆ. ಇದುವರೆಗಾಣ ೮ ವರ್ಷಲ್ಲಿ ನೂರಕ್ಕೂ ಹೆಚ್ಚು rank ಈ ಸಂಸ್ಥೆಲಿ ಕಲ್ತ ವಿದ್ಯಾರ್ಥಿಗಳ ಪಾಲಾಯಿದು. ಇಲ್ಲಿ ಮಾಡುವ ಪಾಠ ಉಳುದ ಕಡೆಂದ ಒಳ್ಳೆದಿದ್ದೊ ಹೇಳುಲೆ ಆನು ಬೇರೆ ಕಡೆ ಹೋಯಿದಿಲ್ಲೆ. ಆದರೆ ಇಲ್ಲಿ ಪಾಠದ ಒಟ್ಟಿಗೆ ಹೇಳುವ ಇತರ ಸಂಗತಿಗೊ ಮನಸ್ಸಿಗೆ ತುಂಬಾ ಧೈರ್ಯ ಕೊಡ್ತು. ಪಾಠ ಮಾಡುವಾಗ ಅವು ಗಮನಿಸುಲೆ ಹೇಳುವ ಸಣ್ಣ ಸಣ್ಣ ವಿಷಯಗೊ, ಅವು ಕೊಡುವ ಉತ್ತೇಜನ ಪರೀಕ್ಷೆ ಸಮಯಲ್ಲಿ ತುಂಬಾ ಉಪಯೋಗಕ್ಕೆ ಬತ್ತು. ನಮ್ಮ ಯಾವುದೇ ಸಂಶಯವ ಪರಿಹರಿಸಿಕೊಂಬ ವ್ಯವಸ್ಥೆ ಇಲ್ಲಿದ್ದು. ಸಿಎ ಕಲಿವ ಮಕ್ಕೊಗೆ ಜೀವನಲ್ಲಿ ಮಜಾ ಮಾಡ್ಲೆ ಅವಕಾಶವೇ ಇಲ್ಲೆ ಹೇಳಿ ಕೆಲವರು ಹೇಳ್ತವು. ಆದರೆ ಇಲ್ಲಿ ಪ್ರತೀ ಬ್ಯಾಚಿಗೂ sports day, picnic ಹೇಳಿ ಸಮಯ ಮೀಸಲಿಡುತ್ತವು. ಒಟ್ಟಿಂಗೇ ಹಲವಾರು ನಮೂನೆಲಿ ಸಮಾಜಸೇವೆ ನಡೆತ್ತಾ ಇದ್ದು. ಒಟ್ಟಿಲಿ ಹೇಳುದಾದರೆ ಸಿಎ ಕಲಿಕೆಗೆ ಇದು ಬೆಂಗಳೂರಿನ ನಂ ೧ ಸಂಸ್ಥೆ ಹೇಳಿದರೆ ಅತಿಶಯೋಕ್ತಿ ಏನೂ ಅಲ್ಲ. ಇದರ ಬಗ್ಗೆ ಹೆಚ್ಚಿನ ವಿವರ ತಿಳ್ಕೊಂಬ ಆಸಕ್ತಿ ಇದ್ದರೆ ಇಲ್ಲಿ ಒತ್ತಿ.

ಸಿಎ ಬಗ್ಗೆ ಎಂತಾದರೂ ಮಾಹಿತಿ ಬೇಕಾದಲ್ಲಿ ಎನ್ನ ಸಂಪರ್ಕಿಸುಲಕ್ಕು.

ಎನ್ನ email: cashrikrishnav@gmail.com

ಮತ್ತೆ ಕಾಂಬ,

ಓಣಿಯಡ್ಕ ಕಿಟ್ಟಣ್ಣ.

ಓಣಿಯಡ್ಕ ಕಿಟ್ಟಣ್ಣ

   

You may also like...

9 Responses

 1. ಚೆನ್ನೈ ಭಾವ says:

  Law , Tax, Management ಹೇದು, ಓಯ್ ಕಿಟ್ಟಣ್ಣ , ೪೦ ೫೦ ಹೇಳಿ ವಿಷಯ ಅಲ್ಪ ಇದ್ದು ಇದು. ನಿಂಗಳ ಹಾಂಗೆ ಓದುವವಕ್ಕೆ ಅಕ್ಕಷ್ಟೇ ಮಿನಿಯಾ. ಎನ್ನಂದಾಗಪ್ಪ. ಲೊಟ್ಟೆ ಅಲ್ಲ ಕಿಟ್ಟಣ್ಣ , [ಸಿಎ ಬಗ್ಗೆ ಎಂತಾದರೂ ಮಾಹಿತಿ ಬೇಕಾದಲ್ಲಿ ಎನ್ನ ಸಂಪರ್ಕಿಸುಲಕ್ಕು.], ಬೈಲಿಲಿ ನಿಂಗೊ ಒಬ್ಬ ಜೆನ ಅಪ್ಪು, ಉತ್ತಮ ಮಾಹಿತಿ ಕೊಟ್ಟಿದಿ, ಉಪಯುಕ್ತ ಹೇಳಿ ಒಪ್ಪ.

  • ಓಣಿಯಡ್ಕ ಕಿಟ್ಟಣ್ಣ says:

   ಧನ್ಯವಾದಂಗೊ.. ಮೊನ್ನೆ ಬಂದ ಫಲಿತಾಂಶ ನೋಡಿ ಎನಗೆ ಆಶ್ಚರ್ಯ ಆತು. ಈ ಸರ್ತಿ ೨೨% ಜನ ಪಾಸು ಆಯಿದವು. ಬರೀ ೨% ಜನ ಪಾಸು ಅಪ್ಪದು ಹೇಳುದು ಈಗ ಅಂತೂ ಸತ್ಯ ಅಲ್ಲ.

 2. ಬೊಳುಂಬು ಮಾವ says:

  ಸಂಪೂರ್ಣ ಮಾಹಿತಿ ಕೊಟ್ಟ ಕಿಟ್ಟಣ್ಣಂಗೆ ಧನ್ಯವಾದಂಗೊ. ಸಿ ಎ ಮಾಡ್ಳೆ ಹೆರಟವಕ್ಕೆ ಇದರಿಂದ ಒಳ್ಳೆ ಪ್ರಯೋಜನ ಸಿಕ್ಕಲಿ.

 3. Gopalakrishna BHAT S.K. says:

  ಉಪಯುಕ್ತ ಮಾಹಿತಿ.
  ಕಲಿವದರ ಸಂತೋಷಲ್ಲಿ ಕಲಿವವಕ್ಕೆ ಕಷ್ಟ ಆಗ.

 4. ರಘು ಮುಳಿಯ says:

  ವಿದ್ಯಾರ್ಥಿಗೊಕ್ಕೆ ಉಪಯುಕ್ತ ಮಾರ್ಗದರ್ಶನ ಕೊಡುವ ಈ ಪ್ರಯತ್ನಕ್ಕೆ ಧನ್ಯವಾದ,ಕಿಟ್ಟಣ್ಣಾ.

 5. ಸಿಂಧೂ says:

  ಬೆಸ್ಟ್ ಲೇಖನ ಮಾಲೆ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *