ಸೀಪೀಸೀಆರೈ CPCRI

October 3, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ಶ್ರೀ ಮುರಳೀಕೃಷ್ಣ ಹಳೆಮನೆ (ಮುರಳಿಭಾವ) – ಇವು ಕೂಡ್ಳಿಲಿ ಇಪ್ಪ ಸೀಪೀಸೀಆರೈಲಿ ತಾಂತ್ರಿಕ ಮಾಹಿತಿ ತಜ್ಞರಾಗಿ ಕಾರ್ಯ ಮಾಡಿಗೊಂಡು ಇದ್ದವು.

ಬೈಲಿನ ಎಲ್ಲೋರ ಶುದ್ದಿಗಳನ್ನೂ ಓದಿ ಅನುಭವಿಸುತ್ತ ಇವರ ಆಸಗ್ತಿ ಕಂಡ್ರೆ ನೆರೆಕರೆಯೋರಿಂಗೆ ತುಂಬಾ ಕೊಶಿ.
ಬರವಣಿಗೆ ಇವರ ಹವ್ಯಾಸ. ಹೊಸಹೊಸ ಚಿಂತನೆಗಳ ಹಂಚುದು ಇವರ ಅಭ್ಯಾಸ. ನಲುವತ್ತೊರಿಶ ಪ್ರಾಯ ಆದರೂ, ಆಸಗ್ತಿಲಿ ಇಪ್ಪತ್ತೊರಿಶದ ಜವ್ವನ!
ಆಪೀಸಿಲಿ ಏನಾರು ಹೊಸ ಮೀಟಿಂಗೋ ಮಣ್ಣ ಆಯೇಕೋ – ಇವರ ಅನುಭವಂಗಳ ಮೂಲಕ ಅದು ಪಕ್ವ ಅಪ್ಪದು.
ಮನೆಲಿಯೂ ಹಾಂಗೇ – ತೋಟ, ಗೆದ್ದೆ, ಪರಂಗಿಚೆಕ್ಕೆ, ವೆನಿಲ್ಲ, – ಹೀಂಗಿರ್ತದರ ನೆಟ್ಟು ಮಾಡುಗು.
ಕೃಷಿಮಾಡ್ಳೆ ಇವರ ಮನೆಯೋರುದೇ ಉಸ್ತುವಾರಿ ತೆಕ್ಕೊಂಗು.
ಇಬ್ರ ಆಸಗ್ತಿಲಿ ಹಳೆಮನೆಯ ತೋಟ ಹೊಸಹೊಸತ್ತಾಗಿ ಹೊಳೆತ್ತಾ ಇದ್ದು!

ನಮ್ಮದೇ ಬೈಲಿನ, ನಮ್ಮದೇ ಊರಿನ ಈ ಮುರಳಿಭಾವ ಒಂದು ಶುದ್ದಿ ಬರದು ಕಳುಸಿದ್ದವು, ಅವರ ಸೀಪೀಸೀಆರೈ ಯ ಬಗ್ಗೆ.
ಒದಿ, ಅಭಿಪ್ರಾಯ ತಿಳುಶಿ..
ಇನ್ನಾಣ ಶುದ್ದಿ ಬರವಲೆ ಪ್ರೋತ್ಸಾಹ ಮಾಡಿಕ್ಕಿ..

ಅಡಕ್ಕೆ, ಕೊಕ್ಕೋ ಮತ್ತೆ ತೆಂಗು ಈ ಮೂರು ಬೆಳೆಗಳಲ್ಲಿ ಕೇಂದ್ರ ಸರ್ಕಾರ ಸಂಶೋಧನೆ ಮಾಡ್ಲೆ ಸೀಪೀಸೀಆರೈ ಯ ಸ್ಥಾಪನೆ ಮಾಡಿದ್ದು.
ಸಂಸ್ಥೆಗೆ ಹೆಡ್ಡಾಫೀಸು ಇಪ್ಪದು ಕಾಸರಗೋಡಿನ ಹತ್ತರೆ ಕೂಡ್ಲಿಲ್ಲಿ.
ಆರಿಂಗಾರು ಬೇಕಾರೆ ಈಗ ಕೆಲವು ವೆಸ್ಟ್ ಕೋಸ್ಟ್ ಮತ್ತೆ ಟೀಂಟುಡಿ ತೆಂಗಿನ ಸೆಸಿಗೊ ಇದ್ದು.
ವೆಸ್ಟ್ ಕೋಸ್ಟ್ ಸೆಸಿಗೆ ೨೯ ರೂ. ಟೀಂಟುಡಿ ಗೆ ೫೫.

ಲೇಟೆಸ್ಟ್ ತೆಂಗಿನ ತಳಿ ಕಲ್ಪ ಸಮೃದ್ಧಿ ಹೈಬ್ರಿಡ್ (ಸೆಸಿಗೊ ಮುಗುದ್ದು, ಇನ್ನಾಣ ಬೇಸಗೆಲಿ ಅರ್ಜಿ ಹಾಕಿರೆ ಒಂದೆರಡು ಸಿಕ್ಕುಗು).
ಕಂಗು ಮತ್ತೆ ಕೊಕ್ಕೋದ ರಿಸರ್ಚ್ ವಿಟ್ಲ (ಬದನಾಜೆ ಅಜ್ಜನ ಮಂಗಳ ಮಂಟಪದ ಹತ್ತರೆ) ಮತ್ತೆ ಉಪ್ಪಿನಂಗಡಿಂದ ಸುಬ್ರಹ್ಮಣ್ಯಕ್ಕೆ ಹೋಪ ದಾರಿಲಿ ನೆಟ್ಟಣ ಕಳುದು ಬಿಳಿನೆಲೆ ಶಾಲೆಯ ಹತ್ತರೆ ಕಿದು ಹೇಳ್ತಲ್ಲಿ ಅಷ್ಟೆ ಅಲ್ಲ, ಸಿಕ್ಕಿಂಗೆ ಹೋಪ ದಾರಿಲಿ ಜಲ್ಪಾಯಿಗುರಿಯ ಹತ್ತರೆ ಮೋಹಿತ್ ನಗರ ಮತ್ತೆ ಅಸ್ಸಂನ ಗೌಹಾಟಿಯ ಸೈಡಿಲ್ಲಿಪ್ಪ ಕಾಹಿಕುಚಿ ಎಂಬಲ್ಲಿಯುದೇ ಸೀಪೀಸೀಆರೈ ಯ ಶಾಖಗಳಲ್ಲಿ ನೆಡೆತ್ತಾ ಇದ್ದು.

ಮುರಲೀಕೃಷ್ಣ ಹಳೆಮನೆ

ಅಡಕೆಯ ಹೊಸಾ ತಳಿ ಶ್ರೀವರ್ಧನ ಮತ್ತೆ ನಾಲ್ ಬರಿ ವಿಮೋಚನಗೆ ಕಾಯ್ತಾ ಇಪ್ಪದು, ಮತ್ತೆ ಗಿಡ್ಡ ತಳಿ ಹೈಬ್ರಿಡ್ ವಿಟ್ಲ ೧ ಮತ್ತೆ ಇದ್ದು ಆದರೂ ವಿಟ್ಲಲ್ಲಿ ಸೆಸಿ ಕೇಳಿರೆ ಪ್ರಸಾದ ಹಂಚುವ ನಮೂನೆಲಿ ಸ್ಯಾಂಪಲ್ಲು ಸಿಕ್ಕುಗು.
ಈಗ ಕೊಕ್ಕೋಲ್ಲಿ ಒಂದು ಹೊಸಾ ತಳಿಯುದೆ ಮತ್ತೆ ನಾಲ್ಕು ಹೈಬ್ರಿಡ್ ತಳಿಗಳುದೆ ಗ್ರಾಫ್ಟ್ ಮಾಡಿ ತೊಟ್ಟೆಲಿ ಸಿಕ್ಕುತ್ತು.
ಕಾಸರಗೋಡು ಸೀಪೀಸೀಆರೈಲಿ ಎರೆ ಹುಳು, ಎರೆ ಗೊಬ್ಬರ, ತೆಂಗಿನಕಾಯಿ ಚಿಪ್ಸ್, ಸ್ನೊಬಾಲ್ ಎಳನೀರು, ತೆಂತಾ ಎಣ್ಣೆ ಎಲ್ಲಾ ಸಿಕ್ಕುತ್ತು.
ಒಕ್ಟೋಬರ ೨೭ರಿಂದ ೩೦ರ ವರೇಗೆ ಅಂತಾರ್ರಾಷ್ಟ್ರೀಯ ತೆಂಗು ಜೈವ ವೈವಿಧ್ಯ ಕಾನ್ಫರೆನ್ಸ್ ಇದ್ದು, ಆ ಸಮೇಲಿ ಒಂದು ಪ್ರದರ್ಶನಕ್ಕೆ ಏರ್ಪಾಡು ನೆಡೆತ್ತಾ ಇದ್ದು.

ಸೆಮಿನಾರಿಲ್ಲಿ ಭಾಗವಹಿಸುಲೆ ಕೃಷಿಕರಿಂಗೆ ೨೦೦೦ ರೂ, ಆದರೆ ಪ್ರದರ್ಶನ ಮಾಂತ್ರ ನೋಡ್ತರೆ ಕಾಸು ಬಿಚ್ಚೆಕ್ಕು ಹೇಳಿ ಇಲ್ಲೆ.

ಹೆಚ್ಚಿನ ವಿವರಂಗೊಕ್ಕೆ: www.cpcri.gov.in

H. Muralikrishna

Technical Information Officer (since 1998)
PME Cell
Central Plantation Crops Research Institute
Kudlu PO, Kasaragod – 671 124
Phone: 04994 232895 extn 255
232893, 232894, 233090
Mobile: 09447439503

home e-mail: hmkrishna@bsnl.in

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಸುವರ್ಣಿನೀ ಕೊಣಲೆ
  Suvarnini Konale

  ಒಳ್ಳೆ ಮಾಹಿತಿ. ಧನ್ಯವಾದಂಗೊ :)
  ಇನ್ನೊಂದು ಮಾಹಿತಿ ಬೇಕಾತು.ಮಂಗಳೂರಿನ ಸುತ್ತಮುತ್ತ ಎಲ್ಲಿಯಾರೂ Msc Horticulture ಮಾಡಿ,experience ಇಪ್ಪವಕ್ಕೆ vacancy ಇದ್ದ? ಎನ್ನ ಗುರ್ತದವಕ್ಕೆ ಒಬ್ಬರಿಂಗೆ ಬೇಕಾತು.

  [Reply]

  ಹಳೆಮನೆ ಮುರಲಿ

  ಮುರಲಿಕೃಷ್ಣ ಹಳೆಮನೆ Reply:

  ಡಾಗುಟ್ರಕ್ಕೋ, ತೋಟಗಾರಿಕೆಲಿ ಸ್ನಾತಕೋತ್ತರ ಮಾಡಿದವಕ್ಕೆ ಮಂಗಳೂರಿನ ಹತ್ತರೆ ಕೆಲಸದ ಅವಕಾಶ ಬೇಕಾರೆ ಕರ್ನಾಟಕ ಗೌರ್ಮೆಂಟಿನ ವಿಭಾಗಂಗಳನ್ನೇ ನೋಡೆಕಷ್ಟೆ. ಅವು ಅಲ್ಲಲ್ಲಿ ರೈತ ಸಂಪರ್ಕ ಕೇಂದ್ರ ಹೇಳಿ ಆಪೀಸು ಮಡುಗಿದ್ದವನ್ನೇ, ಅಲ್ಲೆಲ್ಲ ಈ ತೋಟಗಾರಿಕೆಯವು ಬೇಕಾವುತ್ತವು.
  ಸರಿಯಾಗಿ ಓದಿ ಒಂದು ಏ.ಆರ್.ಎಸ್ಸ್. ಹೇಳ್ತ ಪರೀಕ್ಷೆ ಪಾಸಪ್ಪಲೆ ಪ್ರಯತ್ನ ಮಾಡಲಿ, ಪಾಸಾದರೆ ಮತ್ತೆಂತ ತೊಂದರೆ ಇಲ್ಲೆ. ವಿಟ್ಲ ಸೀಪೀಸಿಆರೈಲಿಯುದೆ ಬಿಳಿನೆಲೆ (ಕಿದು) ಸಿಪಿಸಿಆರೈಲಿಯುದೆ ಅವಕಾಶ ಇದ್ದು. ಯಾವುದಕ್ಕೂ, ಎಂಪ್ಲಾಯ್ಮೆಂಟು ನ್ಯೂಸ್ ಪತ್ರಿಕೆ ಇವೆಲ್ಲಾ ತಪ್ಪದ್ದೆ ಓದ್ಲೆ ಹೇಳಿ. ವರುಷಕ್ಕೊಂದಾರಿ ಮಾಡ್ತ ಈ ಪರೀಕ್ಷೆ ಕಳುದ ವಾರ ಅಷ್ಟೆ ಕಳಾತು. ತತ್ಕಾಲಕ್ಕೆ ಯಾವುದಾದರೂ ತೋಟಗಾರಿಕಾ ನರ್ಸರಿಯೋ, ಬೀಜೋತ್ಪಾದನಾ ಕಂಪೆನಿಯೋ, ಮಧ್ಯಂತರ ಕಾಲಕ್ಕೆ ಸಹಾಯಕ್ಕೆ ಸಿಕ್ಕುತ್ಸೋ ನೋಡಲಿ. ಕೃಷಿ ವಿಶ್ವವಿದ್ಯಾನಿಲಯದ ನೋಟೀಸು, ವೆಬ್ ಸೈಟು ಎಲ್ಲಾ ನೋಡಿಕೊಂಡಿರಲಿ, ಅಲ್ಲೆಲ್ಲಾ ಟೆಂಪರರಿ ಅವಕಾಶಂಗೊ ಬತ್ತಾ ಇರ್ತು.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಅವಕ್ಕೆalmost 8-10 yrs experience ಇದ್ದು, ಈಗ ತಿಂಗಳಿಂಗೆ ನಾಲ್ಕು ದಿನ ಬೆಂಗ್ಳೂರಿಂಗೆ ಹೋಗಿ ಬತ್ತವು ಮಂಗ್ಳೂರಿಂದ!! ಮಾಹಿತಿಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಮುರಳಿ ಭಾವಾ,
  ಕೆಂದಾಳಿ ತೆಂಗಿನ ಸೆಸಿ ಸಿಕ್ಕುವ ಸಾಧ್ಯತೆ ಇದ್ದೋ?

  [Reply]

  ಕೇಜಿಮಾವ°

  ಡಾ.ಕೆ.ಜಿ.ಭಟ್. Reply:

  ವಿಟ್ಳ ಸಿಪಿಸಿಅರೈಲಿ ಕೇಳಿರೆ ಗೊಂತಕ್ಕು.ಡಾ.ಆನಂದ್ ಹೇಳುತ್ತವನ ಹತ್ತರೆ ಎನ್ನ ಹೆಸರು ಹೇಳಿ ನೋಡಿ.

  [Reply]

  VA:F [1.9.22_1171]
  Rating: 0 (from 0 votes)
 3. ಹಳೆಮನೆ ಮುರಲಿ
  ಮುರಲಿಕೃಷ್ಣ ಹಳೆಮನೆ

  ರಘು ಬಾವಾ, ನಿಂಗೊ ಫೆಬ್ರವರಿ – ಮಾರ್ಚಿಯ ಸಮಯಲ್ಲಿ ಬಿಳಿನೆಲೆ (ಕಿದು, ಸುಬ್ರಹ್ಮಣ್ಯದ ಹತ್ತರೆ) ಸೀಪೀಸಿಆರೈಯ ಭೇಟಿ ಮಾಡಿ. ಅಲ್ಲಿಂದ ನಿಂಗೊಗೆ ಕೆಂದಾಳಿಯ ಬಿತ್ತಿನ ಕಾಯಿ ಸಿಕ್ಕುಗು. ಅಲ್ಲಿ ಎಂಗಳ ಗೋಪಾಲಕೃಷ್ಣಣ್ಣ ಇದ್ದವು ಅವು ಸಹಾಯ ಮಾಡುಗು. ಈ ಒರುಷದ ಕೆಂದಾಳಿ ಎಲ್ಲಾ ಜೂನಿಲ್ಲೇ ಮುಗಾತು.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಮುರಳಿ ಭಾವಾ,ಧನ್ಯವಾದ.ತೆಕ್ಕೊಂಬಲೆ ವೆವಸ್ತೆ ಮಾಡುತ್ತೆ.

  [Reply]

  VA:F [1.9.22_1171]
  Rating: 0 (from 0 votes)
 4. ಹಳೆಮನೆ ಮುರಲಿ
  ಮುರಲಿಕೃಷ್ಣ ಹಳೆಮನೆ

  ಕಾರಣಾಂತರಂದ “ತೆಂಗಿನ ಜೈವಿಕ ವೈವಿಧ್ಯಂದ ಸಮೃದ್ಧಿ – ಅಂತಾರ್ರಾಷ್ಟ್ರೀಯ ಕೋನ್ಫ಼ರೆನ್ಸು” ದಿನ ಬದಲುಸಿ ಒಕ್ಟೋಬರ 25 ರಿಂದ ಒಕ್ಟೋಬರ 28 ಹೇಳಿ ಬದಲಾಯಿದು. ಮಂತ್ರಿಗೊ ಎಲ್ಲಾ ಬಂದು ಉದ್ಘಾಟನೆ ಮಾಡ್ತವು. ಕೃಷಿ ವಸ್ತು ಪ್ರದರ್ಶನವುದೇ ಈ ದಿನಂಗಳಲ್ಲೇ ಇರ್ತು. ಹೆಚ್ಚಿನ ವಿವರಕ್ಕೆ ಎಂಗಳ ವೆಬ್ಬು ಸೈಟು http://www.cpcri.gov.in ನೋಡಿ.

  [Reply]

  VA:F [1.9.22_1171]
  Rating: 0 (from 0 votes)
 5. suresha krishna

  CPCRI li mara haattuva illadre, mara hattadde kaayi kova yaavudadaru salakarane iddo? tayaaru maadiddadu? kannurina ondu saadhana bagge kelidde? ningoge vivara gonthidda? iddare vivara prakara bareri…kelasadavu sikkuttaville…bhaari upakaara akku….

  [Reply]

  VA:F [1.9.22_1171]
  Rating: 0 (from 0 votes)
 6. ಹಳೆಮನೆ ಮುರಲಿ
  ಮುರಲಿಕೃಷ್ಣ ಹಳೆಮನೆ

  ಸೀಪೀಸೀಆರೈಯವ ಆಗಿ ಹೇಳುವದಲ್ಲ, ಒಬ್ಬ ಕೃಷಿಕ ಆಗಿ ಹೇಳುವದು – ನಮ್ಮ ದೇಶಲ್ಲಿ ಕೃಷಿಕರ ಕಷ್ಟ ಅರ್ಥ ಮಾಡಿಕೊಂಬವು ಕೃಷಿಕರೇ ಹೊರತು ಕೃಷಿ ವಿಜ್ಞಾನಿಗೊ ಅಲ್ಲ. ಇಲಾಖೆಯವು ಅವರ ಮೇಲಧಿಕಾರಿಗೊ ಹೇಳಿದ ರೀತಿಲಿ ಕೆಲಸ ಮಾಡಿ ಸಂಬಳ ತೆಕ್ಕೊಳ್ತವು. ಹಾಂಗಾಗಿ ಪ್ರಯೋಜನಕ್ಕಿಪ್ಪ ಉಪಕರಣ ಅಥವಾ ಸಲಕರಣೆ ಎನಗೆ ಕಂಡು ಬಯಿಂದಿಲ್ಲೆ. ತೆಂಗಿನ ಮರ ಹತ್ತುಲೆ ತಮಿಳ್ನಾಡು ಕೃಷಿ ವಿಶ್ವವಿದ್ಯಾನಿಲಯದ ಉಪಕರಣ ತೊಂದರೆ ಇಲ್ಲೆ. ಕೊಯ್ವಲೆ ಜರ್ಮನಿ, ಯುರೋಪ್, ಅಮೇರಿಕಾ ಇಲ್ಲೆಲ್ಲ ಸಿಕ್ಕುವ ಒಂದು ಉಪಕರಣ ಎನಗೆ ಇಂಪ್ರೆಸ್ಸಿವ್ ಆಗಿ ಕಂಡಿದು. ವೆಬ್ ಸೈಟಿಲ್ಲಿ ನೋಡಿ : http://www.gardena.com/opencms/opencms/DE/en/products/Product/index.html?cat=PK420&scat=PK42035&prod=4078500030304&bls=0

  [Reply]

  VA:F [1.9.22_1171]
  Rating: 0 (from 0 votes)
 7. ಸುರೇಶ ಕೃಷ್ಣ

  Link kalusiddakke dhanyavaadagalu..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಕೇಜಿಮಾವ°ವಿದ್ವಾನಣ್ಣvreddhiಗಣೇಶ ಮಾವ°ಸರ್ಪಮಲೆ ಮಾವ°ಬೋಸ ಬಾವಅಡ್ಕತ್ತಿಮಾರುಮಾವ°ದೊಡ್ಡಮಾವ°ಶಾ...ರೀಪುತ್ತೂರಿನ ಪುಟ್ಟಕ್ಕಉಡುಪುಮೂಲೆ ಅಪ್ಪಚ್ಚಿದೀಪಿಕಾಪವನಜಮಾವಪುಣಚ ಡಾಕ್ಟ್ರುಕಳಾಯಿ ಗೀತತ್ತೆವಿನಯ ಶಂಕರ, ಚೆಕ್ಕೆಮನೆಬೊಳುಂಬು ಮಾವ°ತೆಕ್ಕುಂಜ ಕುಮಾರ ಮಾವ°ಗೋಪಾಲಣ್ಣಶ್ಯಾಮಣ್ಣಅನಿತಾ ನರೇಶ್, ಮಂಚಿಶರ್ಮಪ್ಪಚ್ಚಿಮಂಗ್ಳೂರ ಮಾಣಿವೆಂಕಟ್ ಕೋಟೂರುಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ