CA ಮಾಡುದು ಹೇಂಗೆ? -ಮೊದಲ ಹಂತ ಸಿಪಿಟಿ

ಎಲ್ಲರಿಂಗೂ ನಮಸ್ಕಾರ.

ಆನು ಬರವಲೆ ಶುರು ಮಾಡೆಕ್ಕಾರೆ ಮೊದಲು ಮನಸ್ಸಿಲಿ ಬರಿವಲೆಡಿಗೋ ಹೇಳಿ ಸಂಶಯ ಇತ್ತು. ಆದರೆ ಮೊದಲನೆ ಲೇಖನಕ್ಕೆ ಬಂದ ಪ್ರತಿಕ್ರಿಯೆ ನೋಡಿ ಸ್ವಲ್ಪ ಧೈರ್ಯ ಬಂತು. ಆ ಲೇಖನದ ಮುಂದುವರಿದ ಭಾಗವಾಗಿ ಸಿಎ ಪರೀಕ್ಷೆಯ ಮೊದಲ ಹಂತ ಸಿಪಿಟಿ (CPT – Common Proficiency Test) ಇದರ ಬಗ್ಗೆ ಸ್ವಲ್ಪ ವಿವರ ಕೊಡ್ತೆ.

ಇದು ಒಂದು ರೀತಿಲಿ ಸಿ.ಇ.ಟಿ.ಇದ್ದ ಹಾ೦ಗೆ,ಸಿ.ಎ.ಯ ಪ್ರವೇಶ ಪರೀಕ್ಷೆ.

ಇದಕ್ಕೆ ಸುರುವಿಂಗೆ ಮಾಡೆಕ್ಕಾದ ಕೆಲಸ ಹೇಳಿದರೆ ದಾಖಲಾತಿ(ರಿಜಿಸ್ಟ್ರೇಶನ್) ಮಾಡಿಕೊಂಬದು. ಒಬ್ಬ ವಿದ್ಯಾರ್ಥಿ ಹತ್ತನೇ ಕ್ಲಾಸು ಪಾಸಾದ

ಮತ್ತೆ ಸಿಪಿಟಿ ಪರೀಕ್ಷೆಗೆ ರಿಜಿಸ್ಟರ್ ಮಾಡುಲಕ್ಕು. ಆದರೆ ಪರೀಕ್ಷೆ ಬರಿವಲೆ ದ್ವಿತೀಯ ಪಿಯುಸಿ ಅಥವಾ ಅದಕ್ಕೆ ಸಮಾನವಾದ ಇತರ ಪರೀಕ್ಷೆ ಬರದಿರೆಕ್ಕು (ಫಲಿತಾಂಶ ಬರೆಕ್ಕಾದ್ದಿಲ್ಲೆ) ಮತ್ತು ಸಿಪಿಟಿ ಪರೀಕ್ಷೆ ಇಪ್ಪ ತಿಂಗಳಿನ ಮೊದಲನೇ ತಾರೀಖಿಗೆ ರಿಜಿಸ್ಟ್ರೇಶನ್ ಮಾಡಿ ೬೦ ದಿನ ಆಗಿರೆಕ್ಕು. ಹೇಳಿರೆ ಎಪ್ರಿಲ್ ೧ನೇ ತಾರೀಖಿಗೆ ಅಥವಾ ಅದಕ್ಕಿಂತ ಮೊದಲು ರಿಜಿಸ್ಟ್ರೇಶನ್ ಮಾಡಿದವು ಜೂನ್ ತಿಂಗಳಿಲಿ ನಡಿವ ಪರೀಕ್ಷೆ ಬರಿವಲಕ್ಕು. ಮುಂದಾಣ ಹಂತಕ್ಕೆ ಹೊಯೆಕ್ಕಾದ್ರೆ ಸಿಪಿಟಿ ಮತ್ತು ಪಿಯುಸಿ ಎರಡರಲ್ಲೂ ಪಾಸು ಆಯೆಕ್ಕಾದ್ದು ಅಗತ್ಯ.

ಸಿಪಿಟಿ ಪರೀಕ್ಷೆ ವರ್ಷಲ್ಲಿ ೨ ಸರ್ತಿ, ಹೇಳಿರೆ ಜೂನ್ ಮತ್ತು ದಶಂಬರ ತಿಂಗಳಿಲಿ ನಡೆತ್ತು. ಪ್ರಶ್ನೆಗೊ ಬಹು ಆಯ್ಕೆ ಮಾದರಿಲಿ (multiple choice) ಇರ್ತು. ಒಟ್ಟು ೪ ವಿಷಯಂಗೊ ಇದ್ದು. ಒಟ್ಟು ೨೦೦ ಮಾರ್ಕು. ಒಂದೇ ದಿನಲ್ಲಿ ಪರೀಕ್ಷೆ ಮುಗಿತ್ತು. ಬೆಳಿಗ್ಗೆ ಮತ್ತು ಮಧ್ಯಾಹ್ನ ತಲಾ ೧೦೦ ಮಾರ್ಕಿನ ಹಾಂಗೆ ಪರೀಕ್ಷೆ ನಡೆತ್ತು.

Session I: (ಬೆಳಿಗ್ಗೆ)

Section A: Fundamentals of Accounting                    60 Marks
Section B: Mercantile Laws                                              40 Marks
Session II: (ಮಧ್ಯಾಹ್ನ)
Section C: General Economics                                       50 Marks
Section D: Quantitative Aptitude                                 50 Marks
ವಿವರವಾದ ಪಠ್ಯಕ್ರಮ (ಸಿಲಬಸ್) ಈ ಕೊಂಡಿಲಿ ನೋಡುಲಕ್ಕು. http://220.227.161.86/11885cpt_syllabus_210808.pdf
ಪ್ರತೀ ಸರಿ ಉತ್ತರಕ್ಕೆ ೧ ಮಾರ್ಕು ಮತ್ತು ತಪ್ಪು ಉತ್ತರಕ್ಕೆ (-೦.೨೫) ಮಾರ್ಕು. ನಾಕೂ ವಿಷಯ ಒಟ್ಟು ಸೇರಿ ೧೦೦ ಮಾರ್ಕು ಬಂದರೆ ಪಾಸು. ಆದರೆ ಎರಡು ಹೊತ್ತೂ ಪರೀಕ್ಷೆ ಬರಿಯೆಕ್ಕು. ಬೆಳಿಗ್ಗೆ ೧೦೦ರಲ್ಲಿ ೧೦೦ ತೆಗದು ಮಧ್ಯಾಹ್ನ ಹೋಗದ್ದರೆ ಫೈಲು. ಸಿಇಟಿ ಮತ್ತು ಸಿಪಿಟಿಗೆ ಇಪ್ಪ ಮುಖ್ಯ ವ್ಯತ್ಯಾಸ ಹೇಳಿರೆ ಸಿಪಿಟಿಲಿ ಒಳ್ಳೆ ರೇಂಕು ತೆಗೆಯಲೇಬೇಕು ಹೇಳಿ ಇಲ್ಲೆ. ಹಾಂಗಾಗಿ ವಿಪರೀತ ಒತ್ತಡ ಮಕ್ಕಳ ಮೇಲೆ ಇರ್ತಿಲ್ಲೆ.
ಪಾಸಾದ ಕೂಡಲೇ ಮುಂದಾಣ ಹಂತಕ್ಕೆ
ಹೋಪಲಕ್ಕು ಮತ್ತು ಬೇಕಾದ ಕೋಚಿಂಗ್ ಕ್ಲಾಸಿಗೆ ಸೇರುಲಕ್ಕು.
ಇಷ್ತು ವಿಷಯ ಗೊಂತಾದ ಮತ್ತೆ ಇದರ ಒಟ್ಟು ಖರ್ಚು ಎಷ್ತು ಹೇಳಿ ನೋಡುವ
ಅರ್ಜಿ ನಮೂನೆ (ಅಪ್ಲಿಕೇಶನ್ ಫಾರ್ಮ್)                             ರೂ.  ೧೦೦
ದಾಖಲಾತಿ ಶುಲ್ಕ (ರಿಜಿಸ್ಟ್ರೇಶನ್)                                      ರೂ. ೬,೦೦೦
ಪರೀಕ್ಷೆ ಶುಲ್ಕ                                                                    ರೂ. ೬೦೦
ಒಟ್ಟು                                                                               ರೂ. ೬೭೦೦
(ಇದು ಈಗ ಚಾಲ್ತಿಲಿಪ್ಪ ಖರ್ಚು. ಅವಗವಗ ಬದಲಾವಣೆ ಅಕ್ಕು.) ಇದಲ್ಲದ್ದೆ ಬ್ಯಾಂಕ್ ಡಿಡಿ ಚಾರ್ಜು ಹೆಚ್ಚಿಗೆದು. ಪ್ರೈವೇಟ್ ಕೋಚಿಂಗಿಗೆ ಹೋವ್ತರೆ ಅದರ ಖರ್ಚು ಹೆಚ್ಚಿಗೆ (ಬೇಕಾದರೆ ಮಾತ್ರ). ಎನಗೆ ಗೊಂತಿಪ್ಪ ಹಾಂಗೆ ಮಂಗಳೂರಿಲಿ ಎರಡು ಕಡೆಲಿ ಕೋಚಿಂಗ್ ಕೊಡ್ತವು.
೧. ಸಿಎ ಇನ್ಟಿಟ್ಯೂಟ್ (ಮಂಗಳೂರು ಶಾಖೆ) – ಕರಂಗಲ್ಪಾಡಿ
೨. ತ್ರಿಶಾ ಕೋಚಿಂಗ್ ಕ್ಲಾಸ್- ಮಣ್ಣಗುಡ್ಡೆ
ಇದೆರಡು ಅಲ್ಲದ್ದೆ ಕೆಲವು ಜನ ಪ್ರೈವೇಟಾಗಿ ಮನೆಲೇ ಹೇಳಿ ಕೊಡುವವೂ ಇದ್ದವಡ.
ಅದೇ ರೀತಿಲಿ ಬೆಂಗಳೂರಿಲಿ ಕೋಚಿಂಗ್ ಕೊಡುವ ಹಲವಾರು ಸಂಸ್ಥೆಗೊ ಇದ್ದು. ಅದರಲ್ಲಿ ಮುಖ್ಯವಾದ್ದು
೧. ಕಾಪ್ಸ್ (CAPS), ಬನಶಂಕರಿ. – (ಇದು ಆನು ಸಿಎ ಫೈನಲಿಗೆ ಕೋಚಿಂಗಿಗೆ ಹೋದ ಸಂಸ್ಥೆ ಆದ ಕಾರಣ ಎನಗೆ ಸ್ವಲ್ಪ ಪ್ರೀತಿ ಜಾಸ್ತಿ. ಇದರ ಬಗ್ಗೆ ಒಂದು ಪ್ರತ್ಯೇಕ ಲೇಖನವನ್ನೇ ಬರೆತ್ತೆ.)
೨. ಸಂಪತ್ ಅಕಾಡೆಮಿ – ರಾಜಾಜಿನಗರ ೫ನೇ ಬ್ಲಾಕ್
೩. ಯಶಸ್ – ಮಲ್ಲೇಶ್ವರಂ. ಇತ್ಯಾದಿ ಇತ್ಯಾದಿ..
ಸಿಪಿಟಿಯ ಮುಂದಾಣ ಹಂತ ಐಪಿಸಿಸಿ. ಇದರ ಬಗ್ಗೆ ಇನ್ನಾಣ ಲೇಖನಲ್ಲಿ ಬರಿತ್ತೆ.
ಮತ್ತೆ ಕಾಂಬ,
ವೋಣಿಯಡ್ಕ ಕಿಟ್ಟಣ್ಣ.

ಓಣಿಯಡ್ಕ ಕಿಟ್ಟಣ್ಣ

   

You may also like...

17 Responses

 1. ತೆಕ್ಕುಂಜ ಕುಮಾರ says:

  ಧನ್ಯವಾದ. ಸಿಪಿಟಿ ಮತ್ತೆ ಐಪಿಸಿಸಿ ನಡುಗೆ ನಿಗದಿತ ಸಮಯ ಇದ್ದೋ. ಸಿಪಿಟಿ ಮುಗುಶಿ, ಇಂತಿಷ್ಟೇ ಸಮಯದೊಳ ಐಪಿಸಿಸಿ ಮುಗುಶೆಕ್ಕು ಹೇಳುವ ಮಿತಿ ಇದ್ದ..? ಮುಂದಾಣ ಕಂತಿಲಿ ತಿಳುಸುವೆ ಅಲ್ಲದೋ..?

  • ಸಿಪಿಟಿ ಮುಗುಶಿ, ಇಂತಿಷ್ಟೇ ಸಮಯದೊಳ ಐಪಿಸಿಸಿ ಮುಗುಶೆಕ್ಕು ಹೇಳುವ ಮಿತಿ ಇಲ್ಲೆ, ಸಿಪಿಟಿ ಮತ್ತೆ ಐಪಿಸಿಸಿ ನಡುಗೆ ಸಮಯ ೯ ತಿಂಗಳು…
   🙂

  • ಓಣಿಯಡ್ಕ ಕಿಟ್ಟಣ್ಣ says:

   ಗರಿಷ್ಠ ಮಿತಿ ಇಲ್ಲೆ. ಐಪಿಸಿಸಿ ದಾಖಲಾತಿ ಆಗಿ ಪರೀಕ್ಷೆ ಬರವಲೆ ಕನಿಷ್ಠ ೯ ತಿಂಗಳು ಆಯೆಕ್ಕು.

 2. ರಘು ಮುಳಿಯ says:

  ಮಾಹಿತಿಗೆ ಧನ್ಯವಾದ ಕಿಟ್ಟಣ್ಣಾ.
  ಪಿ.ಯು.ಸಿ. ಕಾಮರ್ಸ್ ಆಗಿರೆಕ್ಕು,ಅಲ್ಲದೊ?ಒಳುದವೂ ಅರ್ಹರೊ?

  • ರಘುಮಾವ,
   ಪಿಯುಸಿ ಕಾಮರ್ಸ್ ಆಗಿರೆಕು ಹೇಳುವ ನಿಯಮ ಏನು ಇಲ್ಲೆ. ಸೈನ್ಸು ಆರ್ತ್ಸು ತೆಕ್ಕೊಂಡವ್ವುದೇ ಬರವಲಕ್ಕು ಕಾಣ್ತು.

   • ಓಣಿಯಡ್ಕ ಕಿಟ್ಟಣ್ಣ says:

    ಮಂಗ್ಳೂರ ಮಾಣಿ ಹೇಳಿದ್ದು ಸರಿ ಇದ್ದು. ಈಗ ಪಿಯುಸಿ ಆರ್ಟ್ಸ್ ಅಥವಾ ಸೈನ್ಸ್ ಆದರೂ ಅಡ್ಡಿ ಇಲ್ಲೆ. ಪಿಯುಸಿ ಬದಲು ಕೆಲವು ಡಿಪ್ಲೊಮ ರೀತಿಯ ಕೋರ್ಸು ಮಾಡಿದವ್ವೂ ಸಿಪಿಟಿ ಬರವಲಕ್ಕು. ಅದರ ವಿವರ ಈ ಕೊಂಡಿಲಿ ಇದ್ದು. http://www.icai.org/post.html?post_id=3374

 3. ತುಂಬ ಚೆಂದಕೆ ವಿವರಂಗಳ ಕೊಟ್ಟಿದಿ ಕಿಟ್ಟಣ್ಣಾ…
  ಹೇಳಿಯೊಂಡಿದ್ದ ಹಾಂಗೇ, ಈ ಡಿಗ್ರಿ ಆಗಿ ಸಿಎ ಮಾಡ್ತೆ ಹೇಳಿ ಹೆರಡುವವ್ವುದೇ ಸಿಪಿಟಿ ಬರೆಯಲೇ ಬೇಕು ಅಲ್ಲದಾ??
  ಡಿಗ್ರಿ ಆದವಕ್ಕೆ ಏನಾದರೂ ಪರೀಕ್ಷೆಂದ ವಿನಾಯಿತಿ ಇದ್ದೋ?
  ಇನ್ನಾಣ ಲೇಖನಕ್ಕೆ ಕಾದುಗೊಂಡಿರ್ತೆಯ…

  • ಓಣಿಯಡ್ಕ ಕಿಟ್ಟಣ್ಣ says:

   ಆನು ಸಿಎ ಮಾಡ್ಲೆ ಸುರು ಮಾಡುವಾಗ ವಿನಾಯಿತಿ ಇತ್ತು (ಆನು ಪಿಯುಸಿ ಆದ ಕೂಡ್ಲೆ ಸುರು ಮಾಡಿದೆ. ಹಾಂಗಾಗಿ ಉಪಯೋಗ ಆಯಿದಿಲ್ಲೆ) ಈಗ ಆ ವಿನಾಯಿತಿ ತೆಗದ್ದವು. ಹಾಂಗಾಗಿ ಡಿಗ್ರಿ ಆದರುದೆ ಸಿಪಿಟಿ ಅನಿವಾರ್ಯ.

 4. ಶರ್ಮಪ್ಪಚ್ಚಿ says:

  ಒಳ್ಲೆ ಮಾಹಿತಿ ಕೊಟ್ಟ ಲೇಖನ. ಮುಂದಿನ ಕಂತಿನ ನಿರೀಕ್ಷೆಲಿ ಒಂದು ಒಪ್ಪ

 5. Gopalakrishna BHAT S.K. says:

  ಲಾಯ್ಕ ಆಯಿದು.

 6. ಹರೇ ರಾಮ

  ಉಪಯುಕ್ತ ಮಾಹಿತಿ .

  ಧನ್ಯವಾದ

 7. ಓಣಿಯಡ್ಕ ಕಿಟ್ಟಣ್ಣ says:

  ಒಪ್ಪ ಕೊಟ್ಟವಕ್ಕೆ, ಶುಭ ಹಾರೈಸಿದವಕ್ಕೆ ಧನ್ಯವಾದ.

 8. ಇದೆಂತ ಇಷ್ಟು ರಜ್ಜ ರಜ್ಜ ಬರವದು?
  ಕಾವಲೆ ಉದಾಸನ ಆವುತ್ತು.

  • ಓಣಿಯಡ್ಕ ಕಿಟ್ಟಣ್ಣ says:

   ರಜ್ಜ ರಜ್ಜ ಬರದರೇ ಗಮ್ಮತಿಪ್ಪದು.. ಜನ ನಮಗೆ ಕಾಯ್ತವು ಹೇಳಿರೆ ಭಾರೀ ಖುಶಿ ಆವ್ತು. ಹಾಂಗೆ ಹೇಳಿ ತುಂಬಾ ಕಾಯ್ಸುತ್ತಿಲ್ಲೆ.. ನೆಕ್ಷ್ಟ್ ಪಾರ್ಟ್ ಬತ್ತಾ ಇದ್ದು..

 9. ಮಂಗ್ಳೂರು ಮಾಣಿದೇ ಒಳ್ಳೆ ಉತ್ತರ ಕೊಡುದು ಕಾಣ್ತು. ಸೀ.ಏ. ಮಾಡ್ತಾ ಇದ್ದನಾ ಹೇಂಗೆ?

  • ಓಣಿಯಡ್ಕ ಕಿಟ್ಟಣ್ಣ says:

   ಅಪ್ಪು.. ಅವನೂ ಸಿಎ ಮಾಡ್ತಾ ಇದ್ದ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *