ಸಿಎ ಮಾಡುದು ಹೇಂಗೆ – ಹಂತ ೨ – ಐಪಿಸಿಸಿ

June 19, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲರಿಂಗೂ ನಮಸ್ಕಾರ.

ಕಳುದ ವಾರ ಸಿಪಿಟಿ ಬಗ್ಗೆ ನಾವು ತಿಳುಕ್ಕೊಂಡಾತು. ಅದರಲ್ಲಿ ಒಂದು ಮುಖ್ಯ ಬದಲಾವಣೆ ತಪ್ಪ ಪ್ರಸ್ತಾಪವ ಸಿಎ ಇನ್ಸ್ಟಿಟ್ಯೂಟ್ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದು. ಒಂದು ವೇಳೆ ಅದಕ್ಕೆ ಸರಕಾರದ ಒಪ್ಪಿಗೆ ಸಿಕ್ಕಿರೆ (ಸಿಕ್ಕುತ್ತು, ಸ್ವಲ್ಪ ಸಮಯ ತೆಕ್ಕೊಂಗು) ಡಿಗ್ರಿ ಮುಗುಶಿದವು ಸಿಪಿಟಿ ಬರೆಯಕ್ಕಾದ ಅಗತ್ಯ ಇಲ್ಲೆ. (ಕಾಮರ್ಸ್ ಡಿಗ್ರಿ ಆದರೆ ೫೫%, ಬೇರೆ ಯಾವದೇ ಡಿಗ್ರಿ ಆದರುದೆ ೬೦% ಇದ್ದರೆ ಮಾತ್ರ ವಿನಾಯಿತಿ). ಇದು ಜಾರಿಗೆ ಬಂದ ಮತ್ತೆ ಸಿಎಲಿ ಒಂದು ಹಂತ ಕಡಮ್ಮೆ ಆವುತ್ತು(ಕೆಲವರಿಂಗೆ).

ಕಳುದ ಲೇಖನಲ್ಲಿ ಹೇಳಿದ ಹಾಂಗೆ ಸಿಪಿಟಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗೊ ಐಪಿಸಿಸಿಗೆ ರಿಜಿಸ್ಟ್ರೇಶನ್ ಮಾಡಿಕೊಂಬಲೆ ಅರ್ಹರು (ಮೇಲೆ ಹೇಳಿದ ತಿದ್ದುಪಡಿ ಜಾರಿಗೆ ಬಪ್ಪಲ್ಲಿಯವರೆಗೆ). ಐಪಿಸಿಸಿ ಪರೀಕ್ಷೆ ಬರವಲೆ ರಿಜಿಸ್ಟ್ರೇಶನ್ ಆಗಿ ಕನಿಷ್ಠ ೯ ತಿಂಗಳು ಆಯೆಕ್ಕು. ಐಪಿಸಿಸಿಲಿ ಒಟ್ಟು ಎರಡು ಗ್ರೂಪ್ ಇದ್ದು. ವಿದ್ಯಾರ್ಥಿ ಅವನ ಅನುಕೂಲ ನೋಡಿಕೊಂಡು ಎರಡನ್ನೂ ಒಟ್ಟಿಗೆ ಅಥವಾ ಒಂದು ಮುಗುಶಿ ಇನ್ನೊಂದು ಗ್ರೂಪ್ ಬರೆವ ಅವಕಾಶ ಇದ್ದು.

ಸಿಎ ಕಲಿಕೆಯ ಬಹು ಮುಖ್ಯ ಭಾಗ ಹೇಳಿರೆ ಆರ್ಟಿಕಲ್ ಶಿಪ್. ಆರ್ಟಿಕಲ್ ಶಿಪ್ ಹೇಳಿರೆ ಒಂದು ರೀತಿಲಿ ಟ್ರೈನಿಂಗ್ ಇದ್ದ ಹಾಂಗೆ. ಒಬ್ಬ ಸ್ವಂತ ಪ್ರಾಕ್ಟೀಸ್ ಮಾಡ್ತಾ ಇಪ್ಪ ಸಿಎಯ ಕೈಕೆಳ ೩-೩.೫ ವರ್ಷ ತರಬೇತಿ ಪಡಕ್ಕೊಂಬದು ಅಗತ್ಯ. ಈ ಆರ್ಟಿಕಲ್ ಶಿಪ್ ಸುರು ಮಾಡೆಕ್ಕಾದರೆ ಐಪಿಸಿಸಿಯ ಕನಿಷ್ಠ ಒಂದು ಗ್ರೂಪ್ ಆದ್ರೂ ಪಾಸಾಗಿರೆಕ್ಕು.

ಐಪಿಸಿಸಿ ಪರೀಕ್ಷೆ ಬರವ ಮೊದಲು ಇನ್ಸ್ಟಿಟ್ಯೂಟ್ ನಡೆಸುವ ೧೦೦ ಗಂಟೆ ಕಂಪ್ಯೂಟರ್ ಟ್ರೈನಿಂಗ್ ಮತ್ತು ಒಂದು ವಾರದ ಒರಿಯಂಟೇಶನ್ ಪ್ರೋಗ್ರಾಮ್ ಗೆ ಹಾಜರಾಯೆಕ್ಕು. ಕಂಪ್ಯೂಟರ್ ಟ್ರೈನಿಂಗ್ ನ ಕೊನೆಲಿ ಪ್ರತ್ಯೇಕ ಪರೀಕ್ಷೆ ಇರ್ತು ಆದರೆ ಒರಿಯಂಟೇಶನ್ ಪ್ರೋಗ್ರಾಮ್ ಗೆ ಪರೀಕ್ಷೆ ಹೇಳಿ ಏನೂ ಇಲ್ಲೆ. ಐಪಿಸಿಸಿ ಪರೀಕ್ಷೆ ವರ್ಷಲ್ಲಿ ೨ ಸರ್ತಿ ನಡೆತ್ತು. (ಮೇ ಮತ್ತು ನವಂಬರ್). ಪ್ರತೀ ಎರಡು ಪರೀಕ್ಷೆ ನಡುವಿಲಿ ಒಂದು ದಿನ ರಜೆ ಇರ್ತು(೭ ವಿಷಯಕ್ಕೆ ೧೩ ದಿನ, ರಜೆ ಸೇರ್ಸಿ).

ವಿಷಯಂಗೊ ಈ ನಮೂನೆ ಇದ್ದು.

Group I
Paper 1:Accounting (100 marks)
Paper 2:Law, Ethics and Communication
-Part I: Law (60 marks)
(a)Business Laws (30 marks)
(b)Company Law (30 marks)
-Part II: Business Ethics (20 marks)
-Part III: Business Communication (20 marks)
Paper 3:Cost Accounting and Financial Management
-Part I: Cost Accounting (50 marks)
-Part II: Financial Management (50 marks)
Paper 4:Taxation
-Part I: Income-tax (50 marks)
-Part II: Service Tax (25 marks) and VAT (25 marks)

Group II
Paper 5: Advanced Accounting (100 marks)
Paper 6:Auditing and Assurance (100 marks)
Paper 7: Information Technology and Strategic Management
-Section A: Information Technology (50 marks)
-Section B: Strategic Management (50 marks)

ವಿವರವಾದ ಸಿಲಬಸ್ ಈ ಕೊಂಡಿಲಿ ಸಿಕ್ಕಿತ್ತು http://220.227.161.86/14621IPCC_Syllabus.pdf

ಐಪಿಸಿಸಿ ಪರೀಕ್ಷೆ ಸಿಪಿಟಿಯ ಹಾಂಗೆ ಬಹುವಿಧ ಆಯ್ಕೆ ಅಲ್ಲ. ಅದು descriptive mode ಲಿ ನಡೆತ್ತು. ಪ್ರತೀ ವಿಷಯಲ್ಲಿ ಕನಿಷ್ಠ ೪೦ ಮಾರ್ಕು ಮತ್ತು ಸರಾಸರಿ ೫೦ ಮಾರ್ಕು ತೆಗೆಯೆಕ್ಕು. ಒಂದು ವೇಳೆ ಅಷ್ಟು ಮಾರ್ಕ್ ಬರದ್ದರೆ ಆ ಗ್ರೂಪಿಲಿಪ್ಪ ಎಲ್ಲಾ ವಿಷಯಂಗಳ ಮತ್ತೆ ಬರೆಯೆಕ್ಕಾವ್ತು. ಯಾವುದಾದರೂ ವಿಷಯಲ್ಲಿ ೬೦ಕ್ಕಿಂಥ ಹೆಚ್ಚು ಮಾರ್ಕು ತೆಗದರೆ ಮುಂದಾಣ ೩ ಪ್ರಯತ್ನದವರೆಗೆ ಆ ವಿಷಯವ ಪುನಃ ಬರೆಯೆಕ್ಕಾದ ಅಗತ್ಯ ಇಲ್ಲೆ. (ಎಲ್ಲರೂ ಎರಡೂ ಗ್ರೂಪಿನ ಒಂದೇ ಸರ್ತಿಗೆ ಪಾಸಾಯೆಕ್ಕು ಹೇಳಿ ಆಶಿಸುತ್ತೆ.) ಎರಡೂ ಗ್ರೂಪ್ ಒಟ್ಟಿಗೆ ಬರವದರ ಲಾಭ ಎಂತ ಹೇಳಿರೆ ಒಂದು ಗ್ರೂಪಿಲಿ ಸರಾಸರಿ ಮಾರ್ಕ್ ಕಡಮ್ಮೆ ಆದರೆ ಇನ್ನೊಂದು ಗ್ರೂಪಿನ ಹೆಚ್ಚಿಗೆ ಮಾರ್ಕಿನೊಟ್ಟಿಗೆ ಅಡ್ ಜಸ್ಟ್ ಮಾಡುಲಕ್ಕು (ಸರಾಸರಿಗೆ ಮಾತ್ರ, ಪ್ರತೀ ವಿಷಯಲ್ಲಿ ಕನಿಷ್ಠ ೪೦ ಬೇಕೇ ಬೇಕು).  ರೇಂಕು ಕೊಡುವಾಗ ಎರಡೂ ಗ್ರೂಪ್ ಒಟ್ಟಿಗೆ ಬರದವರ ಮಾತ್ರ ಲೆಕ್ಕಕ್ಕೆ ತೆಕ್ಕೊತ್ತವು.

ಕಳುದ ಸರ್ತಿ ಹೇಳಿದ ಸಂಸ್ಥೆಗಳೇ ಐಪಿಸಿಸಿಗೂ ಕೋಚಿಂಗ್ ಕೊಡ್ತವು. ಆ ಪಟ್ಟಿಗೆ ಮಂಗಳೂರು ಗಣಪತಿ ಹೈಸ್ಕೂಲ್ ರಸ್ತೆಲಿಪ್ಪ ‘TRIAD’ ಅನ್ನೂ ಸೇರುಸುಲಕ್ಕು. ಹಾಂಗೇ ಕಳುದ ಸರ್ತಿ ಹೇಳಿದ ‘ತ್ರಿಶಾ ಕೋಚಿಂಗ್ ಕ್ಲಾಸ್’ ನವು ಉಡುಪಿಲಿಯೂ ಕ್ಲಾಸ್ ತೆಕ್ಕೊತ್ತವು.

ಕೊನೇದಾಗಿ ಇದಕ್ಕೆ ಅಪ್ಪ ಖರ್ಚಿನ ಲೆಕ್ಕ ಹಾಕುವ.

ಅಪ್ಲಿಕೇಶನ್ ಫಾರ್ಮ್                            ರೂ ೧೦೦
ರಿಜಿಸ್ಟ್ರೇಶನ್ ಫೀಸ್                              ರೂ ೯,೦೦೦ (ಆರ್ಟಿಕಲ್ ಶಿಪ್ ಗೆ ಈಗಳೇ ರಿಜಿಸ್ಟ್ರೇಶನ್ ಮಾಡಿರೆ ೨೦೦೦ ಹೆಚ್ಚಿಗೆ) (ಒಂದೊಂದೇ ಗ್ರೂಪಿಗೆ ರಿಜಿಸ್ಟ್ರೇಶನ್ ಮಾಡಿರೆ ಸ್ವಲ್ಪ ಜಾಸ್ತಿ ಆವ್ತು)
ಪರೀಕ್ಷೆ ಅಪ್ಲಿಕೇಶನ್ ಫಾರ್ಮ್                 ರೂ ೧೦೦ (ಆನ್ ಲೈನ್ ಅಪ್ಲೈ ಮಾಡಿದ್ರೆ ಫ್ರೀ)
ಪರೀಕ್ಷೆ ಫೀಸ್                                       ರೂ ೧೨೫೦ (ಸುಮಾರಿಗೆ, ಸರಿಯಾಗಿ ನೆನಪಿಲ್ಲೆ)

ರಿಜಿಸ್ಟ್ರೇಶನ್ ಫೀಸ್ ನ ವಿವರ ಈ ಕೊಂಡಿಲಿ ಸಿಕ್ಕುತ್ತು, http://220.227.161.86/20751ipccfee_stru.pdf

ಸಿಪಿಟಿಲಿ ರೇಂಕು ತೆಗದ ಅಥವಾ ಹೆತ್ತವರ ಆದಾಯ ೧ ಲಕ್ಷ ರೂಪಾಯಿ ದಾಂಟದ್ದ ಮಕ್ಕೊ ಸ್ಕಾಲರ್ ಶಿಪ್ಪಿಂಗೆ ಅಪ್ಲೈ ಮಾಡ್ಲಕ್ಕು. ಅದರ ವಿವರ ಈ ಕೊಂಡಿಲಿ ಇದ್ದು. http://220.227.161.86/20325scholarscheme_form.pdf

ಮುಂದಾಣ ಕಂತು ಆರ್ಟಿಕಲ್ ಶಿಪ್ ಮತ್ತು ಸಿಎ ಫೈನಲ್ ನ ಬಗ್ಗೆ,

ಮತ್ತೆ ಕಾಂಬ,
ವೋಣಿಯಡ್ಕ ಕಿಟ್ಟಣ್ಣ.
ಸಿಎ ಮಾಡುದು ಹೇಂಗೆ - ಹಂತ ೨ - ಐಪಿಸಿಸಿ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಮಂಗ್ಳೂರ ಮಾಣಿ

  ಲೇಖನ ಲಾಯಕ ಆಯಿದು ಕಿಟ್ಟಣ್ಣಾ..
  {ಆರ್ಟಿಕಲ್ ಶಿಪ್ ಸುರು ಮಾಡೆಕ್ಕಾದರೆ ಐಪಿಸಿಸಿಯ ಕನಿಷ್ಠ ಒಂದು ಗ್ರೂಪ್ ಆದ್ರೂ ಪಾಸಾಗಿರೆಕ್ಕು.} – ಅದು ಸುರೂಆಣ ಗ್ರೂಪ್ ಆಗಿರೆಕು ಅಲ್ಲದೋ?

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಅಪ್ಪು. ಆನು ಯಾವ ಗ್ರೂಪ್ ಅದ್ರೂ ಆವ್ತು ಹೇಳಿ ತಪ್ಪು ತಿಳ್ಕೊಂಡಿತ್ತಿದ್ದೆ. ಸಿಎ ವೆಬ್ ಸೈಟಿಲಿ ಕೂಡ ಮೊದಲಿಂಗೆ ಯಾವ ಗ್ರೂಪಿಗೆ ಬೇಕಾದ್ರೂ ರಿಜಿಸ್ಟ್ರೇಶನ್ ಮಾಡ್ಲಕ್ಕು ಹೇಳಿ ಇದ್ದು. ಕೊನೆಲಿ ಆರ್ಟಿಕಲ್ ಶಿಪ್ ಸುರು ಮಾಡೆಕ್ಕಾರೆ ಸುರುವಾಣ ಗ್ರೂಪ್ ಪಾಸಾಯೆಕ್ಕು ಹೇಳಿ ಬರಕ್ಕೊಂಡಿದ್ದು. ತಪ್ಪಿನ ತಿದ್ದಿದ್ದಕ್ಕೆ ಒಂದೊಪ್ಪ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  :)

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಧನ್ಯವಾದ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಪುಣಚ ಡಾಕ್ಟ್ರುದೇವಸ್ಯ ಮಾಣಿಅಕ್ಷರ°ಶೇಡಿಗುಮ್ಮೆ ಪುಳ್ಳಿಮಂಗ್ಳೂರ ಮಾಣಿಶ್ಯಾಮಣ್ಣಚೂರಿಬೈಲು ದೀಪಕ್ಕವಿಜಯತ್ತೆಅಕ್ಷರದಣ್ಣಕಳಾಯಿ ಗೀತತ್ತೆಹಳೆಮನೆ ಅಣ್ಣಗಣೇಶ ಮಾವ°ಬಟ್ಟಮಾವ°ಪವನಜಮಾವಎರುಂಬು ಅಪ್ಪಚ್ಚಿಸುವರ್ಣಿನೀ ಕೊಣಲೆಬೊಳುಂಬು ಮಾವ°ಡಾಗುಟ್ರಕ್ಕ°ಜಯಶ್ರೀ ನೀರಮೂಲೆಕೇಜಿಮಾವ°ದೊಡ್ಡಮಾವ°ಒಪ್ಪಕ್ಕವೇಣಿಯಕ್ಕ°ಪೆರ್ಲದಣ್ಣಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ