ಚಳಿಯೂ . . ಜಾತ್ರೆಯೂ. . ಮಕ್ಕಳೂ. .

February 5, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 37 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಊರಿನ ಯುವ ಪತ್ರಕರ್ತ, ಚಿಂತಕ, ಶ್ರೀ ಮಹೇಶ ಪುಚ್ಚಪ್ಪಾಡಿ – ಪುಚ್ಚಪ್ಪಾಡಿ ಅಣ್ಣ ಆಗಿಂಡು ನಮ್ಮ ಬೈಲಿಂಗೆ ಬತ್ತಾ ಇದ್ದವು.
ಪಂಜ ಭಾಷೆಯ ಮನೆಮಾತಾಗಿ ಬಳಸುತ್ತ ಈ ಪುಚ್ಚಪ್ಪಾಡಿ ಅಣ್ಣ ಮುಂದಾಣ ದಿನಂಗಳಲ್ಲಿ ಅದೇ ಪಂಜಭಾಶೆಲಿ ಶುದ್ದಿ ಹೇಳ್ತವು.
ಇದರಿಂದಾಗಿ ಪಂಜಭಾಷೆಯ ಅಗತ್ಯತೆ ನೀಗಿತ್ತು.

ಶುದ್ದಿಯ ಎಲ್ಲೋರು ಓದಿ, ಒಪ್ಪ ಕೊಟ್ಟು ಪ್ರೋತ್ಸಾಹಿಸೇಕು ಹೇಳ್ತದು ನಮ್ಮ ಹಾರಯಿಕೆ.
ಪುಚ್ಚಪ್ಪಾಡಿ ಅಣ್ಣನ
ನೆರೆಕರೆ ಪುಟ:
http://oppanna.com/nerekare/puchhappady
ಮೋರೆಪುಟ: http://www.facebook.com/profile.php?id=1047245909
ಓರುಕುಟ್ಟುತ್ತ ಪುಟ: http://www.orkut.co.in/Main#Profile?uid=3871124276361827502
~
ಗುರಿಕ್ಕಾರ°

ಎಂತಾ ಚಳಿ ಭಾವಯ್ಯ. ಹೆರ ಕಾಲುಮಡುಗುಲೆ ಆವುತ್ತಿಲ್ಲೆ. ಜಾತ್ರೆಗೆ ಹೋಯೆಕ್ಕು ಹೇಳಿ ಮಗ ಒತ್ತಾಯ ಮಾಡ್ತಾ ಇದ್ದ , ಎಂತ ಮಾಡುದು ಹೇಳಿ ಗೊಂತಾವುತ್ತಿಲ್ಲೆ,  ಹೇಳಿ ಆಚೆ ಮನೆ ಸುಬ್ಬಪ್ಪಣ್ಣ ಹೇಳಿಕೊಂಡು ಇತ್ತಿದ್ದ.

ಅದು ಅಪ್ಪು. ಚೆಳಿ ಕಂಡಾಪಟ್ಟೆ ಇದ್ದು. ಹತ್ತು ಗಂಟೆ ನಂತ್ರ ಹಿಮ ಬೀಳ್ತಾ ಇರ್‍ತು. ಹಿಮಕ್ಕೆ ಹೋದರೆ  ಶೀತ ಅಕ್ಕು ಹೇಳಿ ಅಜ್ಜಿದೇ ಹೇಳ್ತಾ ಇದ್ದಿದ್ದವದ.
ಆದರೂ ಮಗ ಹೇಳುವಾಗ ಜಾತ್ರೆಗೆ ಹೋಗದ್ದರೆ ಅವ ಬಿಡ್ತನಾ ?. ಮತ್ತೆ ಗಲಾಟೆ ಬೇರೆ ಇದ್ದದ.

ಈಗ ಹಾಂಗೇ ಅಲ್ಲದ, ನಾಳೆ ಶಾಲೆಗೆ ಹೋದರೆ ಎರಡು ಮಂಚ್ ತೆಗದು ಕೊಡ್ತೆ , ಇಲ್ಲದ್ದರೆ ಇಲ್ಲೆ , ನೀನು ಈಗ ಓದದ್ದರೆ ನಾಳಂಗೆ ಚಾಕೋಲೇಟ್ ಇಲ್ಲೆ , ಕ್ಲಾಸಿಲಿ ಫಸ್ಟ್ ಬಂದರೆ ಬೈಕ್ ತೆಗೆದು ಕೊಡ್ತೆ .. . .
ಇದೆಲ್ಲಾ ಹೇಳಿಯೇ ಅಲ್ಲದೋ ಮಕ್ಕಳ ಓದುಶುದು. ಹಾಂಗೇ ಸುಬ್ಬಪ್ಪಣ್ಣಂದೇ ಅಂದು ಒಂದರಿ ಮಗಂಗೆ ಹೇಳಿದ್ದಡ , ನಿನ್ನ ಜಾತ್ರೆಗೆ ಕರಕ್ಕೊಂಡು ಹೋವ್ತೆ ಹೇಳೀ.
ಈಗ ಸುಬ್ಬಪ್ಪಣ್ಣಂಗೆ ಹೋಗದ್ದೆ ವಿಧಿ ಇಲ್ಲೆ , ಅದಲ್ಲದ್ದರೆ ನಾಳೆ ಇನ್ನೂ ಹಠ ಮಾಡ್ತಾ.ಒಬ್ಬನೇ ಮಗ ಅಲ್ಲದ ಕೊಂಡಾಟ ಬೇರೆ.
ಅಂತೂ ಈ ಚಳಿಗೆ ಸುಬ್ಪಣ್ಣ ಹೆರಟ. ಬೈಕಿಲಿ ಅಕ್ಕೋ ಮಗ , ಕಾರಿಲಿ ಅಕ್ಕೋ ಹೇಳಿ ಮತ್ತೆ ಮಗನ ಹತ್ತರವೇ ಕೇಳ್ಯಾಪ್ಪಗ , ಕಾರಿಲೇ ಹೋಪ ಹೇಳೀ ಹೇಳಿದ.
ಒಳ್ಳೇದೇ ಆತು ಹೇಳೀ ಗ್ರೇಶಿದ. ಕಾರು ಹೋಯ್ತು ಹೇಳಿ ಅಪ್ಪಗ ಹೆಂಡತಿಯೂ ಹೆರಟತ್ತು , ಅವಗ ಮಗಳು ಹೆರಟತ್ತು. ಅಂತೂ ಸುಬ್ಬಪ್ಪ್ಣನ  ಇಡೀ ಮನೆಯೇ ಜಾತ್ರೆಗೆ ಹೆರಟತ್ತು.

ಅಬ್ಬಾ . . . !,
ಜಾತ್ರೆಲಿ ಭಾರೀ ರಶ್ ಇದ್ದೇ ಇರ್‍ತಲ್ಲ. ಕಾರು ಎಲ್ಲಿ ಪಾರ್ಕ್ ಮಾಡುದು ಹೇಳೀ ನೋಡ್ಯಾಪ್ಪಗ  ಹೆಂಡತಿ  ಶಾಂತಕ್ಕ ಹೇಳಿತ್ತು,  “ಇದ ನವಗೆ ಬೇಗ ಹೋಪಾಂಗೆ ಇಪ್ಪ ಜಾಗೆಲೀ ನಿಲ್ಸಿ , ಮಗಳು ಹಠ ಮಾಡಿರೆ ಹೋಯೆಕ್ಕಷ್ಟೆ”,

“ ಆತು ಮಾರಾಯ್ತಿ ಇಲ್ಲೇ ಎಲ್ಲಾರು ನಿಲ್ಸುವಾ” ಹೇಳಿ ಸುಬ್ಬಪ್ಪಣ್ಣ  ಮಾರ್ಗದ ಕರೆಲೇ ನಿಲ್ಸಿದ ಕಾರಿನ.
ಕಾರು ಇಳ್ದಾಪ್ಪಗಳೇ ಮಗ ಹೇಳಿದ “ಅಪ್ಪಾ ಅಲ್ಲಿ ನೋಡಿ ಐಸ್‌ಕ್ರೀಂ ಇದ್ದು , ಇದ ಇಲ್ಲಿ ಬೊಂಬೆ ಇದ್ದು” ಹೇಳ್ಲೆ ಸುರು ಮಾಡಿದ.

“ಎಲ್ಲಾ ಮತ್ತೆ ಮತ್ತೆ” ಹೇಳಿದ ಸುಬ್ಬಪ್ಪಣ್ಣ.

ಅಷ್ಟಪ್ಪಗ, “ಇದಾ ನಾವು ದೇವಸ್ಥಾನದ ಒಳ ಒಂದರಿ ಹೋಗಿ ಬಪ್ಪ” ಹೇಳಿ ಹೇಳಿತ್ತು ಶಾಂತಕ್ಕ.
“ಹ್ಹೂ ಆತು ಆತು” ಹೇಳೀ ಮನಸ್ಸಿಲ್ಲದ ಮನಸ್ಸಿಲಿ ಹೋದ ಸುಬ್ಪಪ್ಪಣ್ಣ. ಒಳ ಹೋಪಗಳೇ  ನೆರೆಮನೆಯ ರಾಮ ಸಿಕ್ಕಿದ, “ಹ್ಹೋ ಎಂತ ಸುಬ್ಬಪ್ಪಣ್ಣ” ಹೇಳಿ ಕೇಳಿದ.
“ಆಗ ಬಪ್ಪಲೆ ಇಲ್ಲೆ ಹೇಳಿ ಹೇಳಿದೆ ?” , “ಅಪ್ಪು ಮಾರಾಯ ಇದ ಮಗ ಬಿಟ್ಟಿದನೇ ಇಲ್ಲೆ ಹಾಂಗೆ ಬಂದದು ,ಒಳ ಹೋಗಿ ಬತ್ತೆ” ಹೇಳಿ ದೇವಸ್ಥಾನ ಒಳ ಹೋದ ಸುಬ್ಬಪ್ಪಣ್ಣ. ದೇವರಿಗೊಂದು ನಮಸ್ಕಾರ ಹೇಳಿ ಹೆರ ಬಪ್ಪಗ ಗುರಿಕ್ಕಾರ ಶ್ಯಾಂ ಭಾವಯ್ಯ ಸಿಕ್ಕಿದ.
ಅಷ್ಟಪ್ಪಗ ಮಗಂದು ಸುರು ಆತು , “ಅಪ್ಪಾ ಐಸ್‌ಕ್ರೀಂ , ಬೊಂಬೆ. . .” , “ನಿಲ್ಲಾ . . ಹೋಪಗ ತೆಗವ” ಹೇಳಿ ಜೋರಿಲಿ ಹೇಳಿದ.

ಶ್ಯಾಂ ಭಾವಯ್ಯಂದು ಆತು , ಎಂತಡಾ ಅವಂಗೆ , “ಅಲ್ಲಾ ಅದು ಐಸ್‌ಕ್ರೀಂ ಬೇಕಡ ಈಗ ಎಂತರ ಚಳಿಗೆ , ಮತ್ತೆ ತೆಗವಲೆ ಅಕ್ಕು ಹೇಳಿರೆ ಕೇಳ್ತಿಲ್ಲೆ.”.
“ಮತ್ತೆ ಎಂತ ಭಾವಯ್ಯ , ಮೊನ್ನೆ ಆಚೆ ಕರೆ ಮಾವನ ಮನೆಗೆ ಪೂಜೆ ಹೋಯಿದಿರಾ?”.
“ಇಲ್ಲೆ ಸುಬ್ಬಪ್ಪಣ್ಣ , ಆ ದಿನ ಅಡಕ್ಕೆ ತೆಗೆವಲೆ ಬಂದಿತ್ತಿದ್ದು ಹಾಂಗೆ ಹೋಯಿದಿಲ್ಲೆ , ಆಳುಗಳುದೇ ಇಲ್ಲೆ.”
“ಆನುದೇ ಹೋಯಿದಿಲ್ಲೆ ಭಾವಯ್ಯ. ಆ ದಿನ ಎಂಗಳ ರಬ್ಬರ್ ಟ್ಯಾಪಿಂಗ್‌ಗೆ ಜೆನ ಬಂದಿತ್ತು. ಹಾಂಗೆ ಅದರ ಒಟ್ಟಿಂಗೆ ತೋಟಕ್ಕೆ ಹೋದೆ.” “ಅದಪ್ಪು ಸುಬ್ಬಪ್ಪಣ್ಣ ಈಗ ರಬ್ಬರಿಂಗೆ ರೇಟುದೇ ಇದ್ದಲ್ಲದ , ಬೇಗ ಬೇಗ ಹಾಲು ತೆಗೆದರೆ ಲಾಭ” .
“ಅಪ್ಪು  ಭಾವಯ್ಯ , ಈಗ ರೇಟು ಇಳಿತ್ತಾ ಇದ್ದು ನೋಡಿ , ಮೊನ್ನೆ ಮೊನ್ನೆ ೨೪೦ ವರೆಗೆ ಹೋಗಿತ್ತು ಇಂದು ೨೨೦ ಕ್ಕೆ ಇಳುದ್ದು”,
“ಅಂತೂ ಅಡಕ್ಕೆಂದ ಅಕ್ಕಲ್ಲದಾ.” ಅದಪ್ಪು . .

“ಅಪ್ಪಾ ಐಸ್‌ಕ್ರೀಂ. .”  ಮತ್ತೆ ಮಗಂತು ಆತು ಸೈರನ್.  “ಆತು ಹೋಪನಾ ನಿನಗೆ ಹೇಳಿರೆ ಗೊಂತಾವುತ್ತಿಲ್ಲೆಯಾ ?”. ಎರಡ್ಡು ಪೊಡಸಿದ. “ನಿಂಗೋ ಅವಂಗೆ ಎಂತಕೆ ಬೈವದು , ತೆಗದು ಕೊಡ್ತೆ ಆವುತ್ತಿಲ್ಲೆಯಾ” ಹೇಳೀ ಶಾಂತಕ್ಕ ಸುಬ್ಬಪ್ಪಣ್ಣಂಗೆ ಹೇಳಿತ್ತು.
ಆತು ಹೋಪ ಹೇಳಿ ಹೋದವು ಜಾತ್ರೆ ಅಡ್ಕಕ್ಕೆ.

ಸುರುವಿಂಗೆ  ಆಟದ ಸಾಮಾನಿನ ಅಂಗಡಿಗೆ ಹೋಗಿಯಾತದ. ಅಲ್ಲಿ ಅಂಗಡಿ ಜೆನ ಇವರ ನೋಡಿ ವಿಮಾನವೊಂದು ಬಿಟ್ಟತ್ತದ ರೊಯ್ ಹೇಳೀ. ಇದು ಅಕ್ಕು ಅಪ್ಪ ಹೇಳಿದ ಮಾಣಿ.
ಅಷ್ಟಪ್ಪಗ ಮಗಳುದೇ ಎನಗೂ ಬೇಕು ಹೇಳಿತ್ತು. ಆಯ್ತು ಎರಡು ಕೊಡಿ ಹೇಳಿ ತೆಕ್ಕೊಂಡು ರೇಟು ಕೇಳಿರೆ ೩೦೦ ರುಪಾಯಿ ಹೇಳಿತ್ತು. ಕಡಿಮೆ ಮಾಡಿ ಹೇಳಿ ಚರ್ಚೆ ಸುರು ಆತು.ಅಂತೂ ೨೫೦ ರುಪಾಯಿಗೆ ಸಿಕ್ಕಿತ್ತು. ಅದು ತೆಕ್ಕೊಂಡು ಮುಂದೆ ಹೋಪಗ ಅಪ್ಪ ಅದ ಅಲ್ಲಿ ಜೆಸಿಬಿ ಇದ್ದು ಅದು ಬೇಕು ಹೇಳಿ ಹಠ ಸುರುವಾತು. ಅದೂ ತೆಕ್ಕೊಂಡಾತು. ಮಗಳದ್ದೂ ಆತು ಎನಗೂ ಬೇಕು ಹೇಳಿ. “ಆದು ಬೇಡ ಮಗಾ ಇದ ಇಲ್ಲಿ ಕಾರು ಇದ್ದು ಇದು ಅಕ್ಕು ನಿನಗೆ” ಹೇಳಿ ಶಾಂತಕ್ಕ ಹೇಳಿತ್ತು ಮಗಳಿಂಗೆ. ಅಕ್ಕು ಅಕ್ಕು ಹೇಳಿ ತಲೆ ಆಡುಸಿತ್ತು.ಹಾಂಗೆ ಕಾರು ತೆಕ್ಕೊಂಡಾತು. ಅಷ್ಟಪ್ಪಗ “ಅಪ್ಪಾ ಐಸ್‌ಕ್ರೀಂ” ಬೇಕು ಹೇಳಿ ಸುರುವಾತದ ಮಗಂದು ಹಠ. “ಬೇಡ ಮಗಾ ಶೀತ ಅಲ್ಲದಾ ಅದು ತಿಂದರೆ ಗಂಟ್ಲು ಬೇನೆ ಅಕ್ಕು ಬೇಡ” ಹೇಳಿ ಶಾಂತಕ್ಕ ಹೇಳಿತ್ತು.ಸುಬ್ಬಪ್ಪಣ್ಣಂದೇ ಬೇಡ ಹೇಳೀರೂ ಇವ ಕೇಳಿದ್ದೇ ಇಲ್ಲೆ. ಎನಗೆ ಬೇಕೇ ಬೇಕು ಹೇಳಿ ಹಠ ಹಿಡಿದ. “ಇದ ನಾಳೆ ಶೀತ ಸುರುವಾದರೆ ಎನಗೆ ಗೊಂತಿಲ್ಲೆ”, “ಶೀತ ಆಗ ಎನಗೆ ಬೇಕೇ ಬೇಕು” ಹೇಳಿ ಮಗಂದು ಹಠ ಜೋರಾತು , ಆತು ಇದ ಬಾ .  ಹೇಳಿ ಐಸ್ ಕ್ರೀಂ ಗಾಡಿಯ ಹತ್ತರ ಹೋಪಗ “ಎನಗೆ ಚೋಕೋಬಾರೇ ಆಯೆಕ್ಕು” ಹೇಳಿ ಮತ್ತೆ ಹಠ ಸುರುವಾತು. ಆಯ್ತು ಅದೇ ಕೊಡಿ ಮಾರಾಯ್ರೆ. ಹೇಳಿ ೧೫ ರುಪಾಯಿ ಕೊಟ್ಟು ತೆಕ್ಕೊಂಡ. ಈ ಚಳಿಗೆ ಹೇಂಗೆ ತಿಂತೆ ನೀನು ಕೇಳಿದ ಸುಬ್ಬಪ್ಪಣ್ಣ. ಚಾಕೋಬಾರ್ ತಿಂದಾದಪ್ಪಗ  ಹಾಂಗೇ ವರಕ್ಕು ತೂಗುಲೆ ಸುರುವಾತು ಮಾಣಿಗೆ. “ಅಪ್ಪಾ ಹೋಪನ . . ಹೋಪನ” ಹೇಳಿದ ಕೇಳ್ಲೆ ಸುರುಮಾಡಿದ. “ಇದ ಇದರ ನಿಂಗಳೇ ಹಿಡ್ಕೊಳಿ” ಹೇಳೀ ಆಟದ ಸಾಮಾನಿನ ಅಪ್ಪನ ಹತ್ತರ ಕೊಟ್ಟ. ಸುಬ್ಬಫ್ಫಣ್ಣ ಅದರ ಶಾಂತಕ್ಕನ ಹತ್ತರ ಕೊಟ್ಟ. ಅದು ಸಿಕ್ಕಿದ ಕಡಲೇ ಶಾಂತಕ್ಕನ ಕೈಲಿ ಇಪ್ಪ ಮಗಳೂ ಅದರ ತೆಕ್ಕೊಂಡತ್ತು. ಅದ..  ಅಷ್ಟಪ್ಪಗ ಮಾಣೀ ಹಠ ಸುರು ಮಾಡಿದ , “ಅದ ತಂಗೆ ಅದರ ಹಿಡ್ಕೊಂಬಲೆ ಆಗ ,ನಿಂಗಳೇ ಹಿಡ್ಕೊಳ್ಳೆಕ್ಕು” ಹೇಳಿ ರಂಪಾಟ ಸುರುವಾತು. ಆತು ಮಾರಾಯ ಆನೇ ಹಿಡ್ಕೊಳ್ತೆ ಹೇಳಿ ಮಗಳ ಕೈಂದ ತೆಕ್ಕೊಂಡ , ಅಷ್ಟಪ್ಪಗ ಮಗಳುದೇ ಕೂಗುಲೆ ಸುರು ಮಾಡಿತ್ತು , ಎನಗೆ ಒಂದರಿಕೊಡಿ , ಅದು ಎನಗೆ ಬೇಕು ಹೇಳಿ ಹಠ ಸುರು ಮಾಡಿತ್ತು. ಇಬ್ರುದೇ ಎನಗೆ ಎನಗೆ ಹೇಳೀ ಹಠ ಸುರು ಮಾಡಿ ಕೂಗುಲೆ ಸುರು ಮಾಡಿದವು. “ಇದ ನಾವು ಒಂದರಿ ಹೋಪ”, ಹೇಳಿ ಶಾಂತಕ್ಕೆ ಸುಬ್ಬಪ್ಪಣ್ಣಂಗೆ ಹೇಳಿತ್ತು , “ಇದ ದೇವರು ರಥಕ್ಕೆ ಈಗ ಬತ್ತವಡ ನೋಡಿ ಹೋಪದ ಹೇಂಗೆ ?”. ಹೇಳಿ ಕೇಳಿದ ಸುಬ್ಬಪ್ಪಣ್ಣ , “ಇದ ಎನ್ನಂದ ಆಗಲೇ ಆಗ ಇಬ್ರುದೇ ಹಠ ಮಾಡ್ತಾ ಇದ್ದವು , ಚಳಿದೇ ಬೇರೆ ಇದ್ದು ಹೋಪ ಹೋಪ” ಹೇಳಿತ್ತು ಶಾಂತಕ್ಕ.

ಆತು ಹಾಂಗರೆ ಹೋಪ . . ಹೆರಟವು ಎಲ್ಲರುದೇ. ಮಕ್ಕೋ ಅವಗಳುದೇ ಕೂಗ್ಯೊಂಡೇ ಇತ್ತಿದ್ದವು. ಕಾರಿನ ಹತ್ತರ ಹೋಪಗ ಅಲ್ಲಿ ಮೂರ್‍ನಾಕು ಕಾರು  ಅಡ್ಡ ಇತ್ತಿದ್ದು. ಛೇ ಎಂತ ಮಾಡುದು ಈಗ ಹೇಳಿ ಸುಬ್ಬಪ್ಪಣ್ಣ ಯೋಚನೆ ಮಾಡಿದ. “ಆನು ಆಗಳೇ ನಿಂಗಳ ಹತ್ತರ ಹೇಳಿದ್ದೆ ಹೋಪಲೆ ಸುಲಭ ಅಪ್ಪಾಂಗೇ ಕಾರು ಪಾರ್ಕ್ ಮಾಡಿ ಹೇಳಿ. ಈಗ ನೋಡಿ ಹೇಂಗೆ ಹೋಪದು , ಮಕ್ಕಳುದೇ ಕೂಗುತ್ತವು”. “ನಿಲ್ಲು ಮಾರಾಯ್ತಿ ಕಾರು ತೆಗವ ಗಡಿಬಿಡಿ ಮಾಡೆಡ” ಹೇಳಿದ ಸುಬ್ಬಪ್ಪಣ್ಣ. ಅಂತೂ ಕಾರಿನ ಹಿಂದೆ ಮುಂದೆ ಮಾಡಿ ಕಾರು ತೆಗದು ಮನೆಗೆ ಬಂದ.

ಇಷ್ಟಪ್ಪಗ ಸುಬ್ಬಪ್ಪಣ್ಣಂಗೆ ಸಾಕೋ ಸಾಕಾತು.
ಚಳಿ ಎಲ್ಲಾ ಗುಡ್ಡೆ ಹತ್ತಿತ್ತು. ಅಂತೂ ಜಾತ್ರಗೆ ಹೋಗಿ ಬಂದವದ.

ಚಳಿಯೂ . . ಜಾತ್ರೆಯೂ. . ಮಕ್ಕಳೂ. ., 5.0 out of 10 based on 1 rating
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 37 ಒಪ್ಪಂಗೊ

  1. ಗಣೇಶ ಮಾವ°

    ನಾವು ಬೆಳದು ಬದಲಾವಣೆ ಆದ ಹಾಂಗೆ ನಮ್ಮ ಊರಿಲಿ ನೆಡಕ್ಕೊಂಡು ಇದ್ದ ಪದ್ಧತಿಗ ಬದಲಾವಣೆ ಆಗ.ಅವರವರ ಊರಿನ ಜಾತ್ರೆ ನೆಂಪು ಅವರ ಬಾಲ್ಯಕ್ಕೆ ಕೊಂಡು ಹೋವ್ತು.ನಿಂಗಳ ಶುದ್ದಿ ಓದಿಯಪ್ಪಗ ಎನಗೆ ಒಂದರಿ ಹಾಂಗೆ ಆತು.ನೈಜ ಶುದ್ಧಿಯ ಚೆಂದಕೆ ಹೇಳಿದ್ದಕ್ಕೆ ಧನ್ಯವಾದಂಗೋ ಮಹೇಶಣ್ಣ….

    [Reply]

    ಪುಚ್ಚಪ್ಪಾಡಿ ಮಹೇಶ

    ಪುಚ್ಚಪ್ಪಾಡಿ ಮಹೇಶ Reply:

    ಗಣೇಶ ಮಾವ , ಅದಪ್ಪು , ಧನ್ಯವಾದಗೋ.

    [Reply]

    VN:F [1.9.22_1171]
    Rating: 0 (from 0 votes)
  2. ಅಡ್ಕತ್ತಿಮಾರುಮಾವ°

    ತುಂಬಾ ನೈಜವಾಗಿ ಬಯಿಂದು ಮಹೇಶಣ್ಣೊ ಇದು ಸಾಮಾನ್ಯ ಸಣ್ಣ ಮಕ್ಕಳ ಜಾತ್ರಗೆ ಕರಕ್ಕೊಂಡು ಹೋದ ಅಪ್ಪಂದಿರು ಅನುಭವಿಸುವ ಕಸ್ಸ್ಟಂಗ ಅದರ ಬಾರೀ ಲಾಯಿಕಲ್ಲಿ ಕಣ್ಣಿಂಗೆ ಕಾಂಬ ಹಾಂಗೆ ಬರದ್ದಕ್ಕೆ ಧನ್ಯವಾದಂಗ…ಒಂದು ಒಪ್ಪ..

    [Reply]

    VN:F [1.9.22_1171]
    Rating: 0 (from 0 votes)
  3. ವೆಂಕಟೇಶ

    ಕಥೆ ಲಾಯಿಕ್ಕಾಯಿದು ಮಹೇಶಣ್ಣ…..ಸುಮಾರು ಜಾತ್ರೆಲಿ ತಿರುಗಿದ ಅನುಬವ ಹೇಳಿ ಕಾಣುತ್ತು …

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಅಕ್ಷರ°ಶೇಡಿಗುಮ್ಮೆ ಪುಳ್ಳಿಸಂಪಾದಕ°ಕೇಜಿಮಾವ°ಡಾಮಹೇಶಣ್ಣಮಾಷ್ಟ್ರುಮಾವ°ಒಪ್ಪಕ್ಕಹಳೆಮನೆ ಅಣ್ಣಸುವರ್ಣಿನೀ ಕೊಣಲೆಬಟ್ಟಮಾವ°ಶ್ರೀಅಕ್ಕ°ಸರ್ಪಮಲೆ ಮಾವ°ನೆಗೆಗಾರ°ಬೋಸ ಬಾವಪವನಜಮಾವವೇಣಿಯಕ್ಕ°ಪುತ್ತೂರಿನ ಪುಟ್ಟಕ್ಕಚುಬ್ಬಣ್ಣಶೀಲಾಲಕ್ಷ್ಮೀ ಕಾಸರಗೋಡುವಿದ್ವಾನಣ್ಣಪೆರ್ಲದಣ್ಣಬಂಡಾಡಿ ಅಜ್ಜಿಚೆನ್ನಬೆಟ್ಟಣ್ಣಕಜೆವಸಂತ°ಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ