ಚೋಕಿನ ಕೆತ್ತನೆ

May 6, 2011 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲೊರಿಂಗೂ ನಮಸ್ಕಾರ.
ನಮ್ಮ ಈ ಬೈಲಿಲಿ ಸಂಸ್ಕೃತಿಯ ಬಿಂಬಂಗೊ, ಆಚರಣೆಗಳ ವಿವರಣೆಗೊ, ಅನುಭವ ಕಥನಂಗೊ, ಚೆಂದ ಚೆಂದದ ಪದ್ಯಂಗೊ, ಲಘುಬರಹಂಗೊ, ವೈಚಾರಿಕ ಬರಹಂಗೊ ಹೀಂಗೆ ಸುಮಾರು ನಮುನೆಯ ಶುದ್ದಿಗೊ ಬತ್ತಾ ಇದ್ದು. ಇದರೊಟ್ಟಿಂಗೆ ಕೆಲವು ಕಲಾತ್ಮಕ ಹವ್ಯಾಸಂಗಳ ಬಗ್ಗೆಯೂ ಬಂದರೆ ಎಂತ ಹೇಳಿ ಕಂಡತ್ತು. ಹಾಂಗೆ ಆ ಬಗ್ಗೆ ರಜ್ಜ ಬರವ ಹೇಳಿ ಹೆರಟಿದೆ. ಚೂರಿಬೈಲು ದೀಪಕ್ಕ, ಶ್ರೀ ಅಕ್ಕ ಎಲ್ಲೊರೂದೇ ಬಂದು ಕೈಜೋಡ್ಸುಗು ನಮ್ಮೊಟ್ಟಿಂಗೆ.

~

ಮಾಷ್ಟ್ರುಮಾವನ ಚೋಕಿನ ಆರಿಂಗೆ ಗುರ್ತ ಇಲ್ಲೆ ಹೇಳಿ? ಸಣ್ಣಾದಿಪ್ಪಾಗ ಆ ಚೋಕು ಹೇಳಿರೆ ಅದೊಂದು ಅಮೂಲ್ಯ ವಸ್ತುವೇ ಆಗಿತ್ತು. ಮಾಷ್ಟ್ರ ಪಾಟ ಮಾಡಿಕ್ಕಿ ಹೆರ ಹೋದ ಕೂಡ್ಳೆ ಬೋರ್ಡಿನ ಹತ್ತರೆ ಬಿದ್ದ ಚೋಕಿನ ತುಂಡುಗಳ ಮೆಲ್ಲಂಗೆ ಹೆರುಕ್ಕಿ ಮಡಿಕ್ಕೊಂಬದು. ಮನೆಲಿ ಬಂದು ತಂಗೆಯೋ, ತಮ್ಮನೋ ಸ್ಲೇಟಿಲಿ ಬರದ್ದದಕ್ಕೆ ದೊಡ್ಡಜನರ ಹಾಂಗೆ ಚೋಕಿಲಿ ರೈಟಾಕಿ ಮಾರ್ಕು ಕೊಡುದು. ಆಹಾ ಆ ಗೌಜಿಯೇ ಬೇರೆ! ಚಿತ್ರ ಕಲಿಶುವ ಮಾಷ್ಟ್ರ ಬಣ್ಣದ ಚೋಕು ತಂದರಂತೂ ಕೇಳುದೇ ಬೇಡ. ಅವು ಅತ್ಲಾಗಿ ಹೋದ ಮೇಲೆ ಚೋಕಿನ ತುಂಡುಗಳ ತೆಕ್ಕೊಂಬಲೆ ಜಗಳವೇ ಜಗಳ. ಕ್ಲಾಸು ಲೀಡರಿನತ್ರ ಚೋಕು ತಪ್ಪಲೆ ಹೇಳಿದರೆ, ಅದು ಮೆಲ್ಲಂಗೆ ಒಂದು ಚೋಕು ಕಿಸಿಗೆ ಇಳಿಶಿಯೊಂಡೇ ಬಕ್ಕು. ಇರಳಿ, ಚೋಕಿನೊಟ್ಟಿಂಗಿಪ್ಪ ನೆಂಪುಗೊ ನೂರಾರು. ದೊಡ್ಡಾದ ಮತ್ತೆ ಚೋಕಿನ ವ್ಯಾಮೋಹ ರಜ ಕಮ್ಮಿಯೇ. ಹಲವರ ಕಣ್ಣಿಂಗೆ ಅದು ಬರೇ ‘ಸೀಮೆಸುಣ್ಣ’. ಆದರೆ ಈ ಚೋಕಿಲೂ ಚೆಂದದ ಕೆತ್ತನೆ ಮಾಡುಲಾವುತ್ತು. ಅದು ಹೇಂಗೆ ಹೇಳಿ ತಿಳುಕ್ಕೊಂಬ.

ಬೇಕಪ್ಪ ವಸ್ತುಗೊ..

ಇದಕ್ಕೆ ಬೇಕಪ್ಪದು:
ಚೋಕುಗೊ (ಮಾಷ್ಟ್ರುಮಾವನತ್ತರೆ ಕೇಳಿಕ್ಕಿಯೇ ತೆಕ್ಕೊಳಿ :-) ),
ಕುಂಞಿ ಪೀಶಕತ್ತಿ -ಬ್ಲೇಡಿನ ನಮುನೆದು,
ಸೂಜಿ ಅಥವಾ ಗುಂಡುಸೂಜಿ,
ಪೆನ್ಸಿಲು,
ಮತ್ತೆ ನಿಂಗಳ ಚೆಂದದ ಕಲ್ಪನೆ.

ಹೀಂಗೆ ಮಾಡಿ:
ಚೋಕಿಲಿ ಕೆತ್ತನೆ ಮಾಡುವಾಗ ತುಂಬಾ ಜಾಗ್ರತೆ ಬೇಕು. ಅದು ಭಾರೀ ಮೆದು ಅಲ್ದಾ, ಬೇಗ ತುಂಡಾವುತ್ತು. ತಾಳ್ಮೆಯೂ ಬೇಕು ಮಾಡ್ಳೆ. ಶುರೂವಿಂಗೆ ನಿಂಗಳ ಕಲ್ಪನೆಯ ಚಿತ್ರವ ಚೋಕಿನ ಮೇಲೆ ಪೆನ್ಸಿಲಿನ ಸಹಾಯಂದ ಬಿಡ್ಸಿ. ಯಾವ ಭಾಗವ ಕೆತ್ತಿ ತೆಗೆಯೆಕ್ಕು, ಯಾವ ಭಾಗವ ಒಳಿಶಿಗೊಳೆಕ್ಕು ಹೇಳ್ತದರ ಮೊದಲೇ ಆಲೋಚನೆ ಮಾಡಿಗೊಳ್ಳೆಕ್ಕು. ಮತ್ತೆ ಆ ಆಲೋಚನೆಗೆ ಅನುಗುಣವಾಗಿ ಬ್ಲೇಡಿಲಿ ಕೆತ್ತಿಗೊಂಡು ಹೋಗಿ. ಬೇಡದ್ದ ಭಾಗವ ಜಾಗ್ರತೆಲಿ ಕೆತ್ತಿ ತೆಗೆರಿ. ಸಣ್ಣ ಸಣ್ಣ ಭಾಗ ತೆಗವದಾದರೆ ಸೂಜಿಯನ್ನೊ, ಗುಂಡುಸೂಜಿಯನ್ನೊ ಉಪಯೋಗ್ಸುಲಕ್ಕು. ಚೋಕಿಲಿ ಒಳ್ಳೊಳ್ಳೆ ಕೆತ್ತನೆ ಮಾಡಿದವ್ವು ಇದ್ದವು. ಆನು ಅಂತೇ ಪ್ರಯೋಗ ಮಾಡ್ಳೆ ಹೆರಟದು. ಈಗ ರಜ್ಜ ಅಭ್ಯಾಸ ಆತು. ಅದರ ಮೇಲೆ ನಿಂಗಳ ಹೆಸರಿನ ಕೆತ್ತನೆಯನ್ನೂ ಮಾಡ್ಳಕ್ಕು. ಕನ್ನಡ ಅಕ್ಷರಂಗಳ ಬರವಲೆ ರಜ ಕಷ್ಟ ಅಪ್ಪಲೂ ಸಾಕು. ಪ್ರಯತ್ನ ಮಾಡಿದರೆ ಅದೂ ಎಡಿಗು ಹೇಳುವ. ಪುರುಸೊತ್ತಿನ ಹೊತ್ತಿಲಿ ನಿಂಗಳೂ ಮಾಡಿನೋಡಿ. ಮಾಡಿದ್ದರ ಬೈಲಿಂಗೆ ತೋರ್ಸಿ. ಇದರಲ್ಲಿ ಹೊಸಾ ಪ್ರಯೋಗಂಗೊ ಗೊಂತಿದ್ದರೆ ಖಂಡಿತಾ ತಿಳುಶಿ.

ಎನ್ನ ಕೆಲವು ಪ್ರಯೋಗಂಗೊ ಇಲ್ಲಿದ್ದು:

ಚೋಕಿನ ಕೆತ್ತನೆ, 4.9 out of 10 based on 7 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಬೋಸ ಬಾವ
  ಬೋಸ ಬಾವ

  ಹಾ ಹಾ ಹಾ..!! ಚೆ೦ದ ಚೆ೦ದ ಕೆತ್ತನೆ ಮಾಡಿದ್ದಿ.. ಲಾಯಕೆ ಆಯಿದು ಆತೊ.. :)
  ಆದರೆ ಈ ಕೆತ್ತನೆಗೆ ಬೇಕಪ್ಪ ವಸ್ತುಗೊಳಲ್ಲಿ ಸುತ್ತಿಗೆ ಬೇಡದೊ?? 😉
  ನಾವು ಕೆತ್ತನೆ ಎಲ್ಲಾ ಮಾಡುಸ್ಸು ಸುತ್ತಿಗೆ ಮತ್ತೆ ಒ೦ದು ಚೂಪಿನ ಕಬ್ಬಿಣ ತು೦ಡಿಲ್ಲಿ ಅಲ್ಲದೋ?? 😛
  ಅ೦ಬಗ ನಿ೦ಗೊ ಹೇಳಿದಾ೦ಗೆ ಆಣಿ ಸಾಕಕ್ಕೊ?? ಏ? 😀

  [Reply]

  ಸುಭಗ

  ಸುಭಗ Reply:

  ಈ ಪಟಂಗಳ ದೊಡ್ಡಮಾಡಿ ನೋಡ್ಲೆ ಎಡಿತ್ತಿಲ್ಲೆನ್ನೇ..? ಎಂತ ಕತೆ..?! ‘fatal error’ ಹೇಳಿ ಬತ್ತಾ ಇದ್ದು. :(

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಸುಭಗ ಭಾವ.ದೊಡ್ಡ ಮಾಡುಲೆ ಹೆರಟರೆ ಮಾಷ್ಟ್ರು ಚೋಕು ತಲಗೇ ಇಡ್ಕುಗು,ಬಿದ್ದರೆ ನಿ೦ಗೊ ಹೇಳಿದ ತೊ೦ದರೆ ಅಕ್ಕು ಹೇಳಿ ಜಾಗ್ರತೆ ಹೇಳೊದೊ?
  ಏನೇ ಆದರೂ ಬಳಪದ ಕಲ್ಲಿಲಿ ( ಸ್ಲೇಟು) ವಿಗ್ರಹ ಕೆತ್ತನೆ ಮಾಡಿದ ಇತಿಹಾಸ ಗೊ೦ತಿತ್ತು.ಅವರ ಸಾಲಿ೦ಗೆ ಈ ಕೆತ್ತನೆಗಳೂ ಬಕ್ಕು,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  @ ಸುಭಗ
  ಸರಿ ಆತು ಬಾವ.. ಗುರುಕ್ಕಾರ್ರು ಹೇಳ್ಳೆ ಹೇಳಿದವು..

  [Reply]

  VN:F [1.9.22_1171]
  Rating: 0 (from 0 votes)
  ಬೋಸ ಬಾವ

  ಬೋಸ ಬಾವ Reply:

  ಯಬೋ..!! “‘fatal error” ರೋ?? :-O
  ಈ ಇ೦ಗ್ಳೀಶು ಎಲ್ಲಾ ನವಗರಡ್ಯಾ.. ಇದರ ನಮ್ಮ ಕೇಳಿರೆ ಅಕ್ಕೊ ಭಾವ.. 😉
  ಹೀಗಿಪ್ಪದು ನಮ್ಮ ಗುರುಕ್ಕಾರ್ರು ನೋಡಿ ಸರಿ ಮಾಡಿದ್ದು ಒಳ್ಳೆದಾತುಳಿ.. :)
  ಅಲ್ಲದ್ರೆ ನಾವಗೆ ಕೈ-ಕಾಲು ಬಿಟ್ಟೋಕಿದಾ.. ಇದರ ಅರ್ಥ ಮಾಡಿಗೊ೦ಬಲೆ.. 😀

  [Reply]

  VN:F [1.9.22_1171]
  Rating: +1 (from 1 vote)
 2. vidya

  ಚೋಕಿನ ಕೆತ್ತನೆಗೊ ಭಾರೀ ಚೆನ್ದ ಅಯಿದು……..ತಾಳ್ಮೆ ಎಸಶ್ತಿದ್ದರೂ ಕಮ್ಮಿಯೆ ಇದಕ್ಕೆ…………………..

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಚೋಕಿನ ಕೆತ್ತಿ ಕಲೆಯ ಚೆಂದಕೆ ಅರಳುಸಿದ್ದೆ ಅನುಶ್ರೀ. ಒಳ್ಳೆ ಮಾಹಿತಿಯನ್ನುದೆ ಕೊಟ್ಟಿದೆ. ಚೋಕಿನ ಉಪಯೋಗ ಇನ್ನುದೆ ಇದ್ದು. ತರಗತಿಲಿ ಕೂದು ಆಕಳಿಸಿದವನ ಬಾಯಿಗೆ ನೇರವಾಗಿ ಮಾಸ್ತ್ರ ಚೋಕಿನ ಬಾಣ ಬಂದು ಬೀಳುತ್ತು. ಲೂಟಿ ಮಾಡಿದ ಮಾಣ್ಯಂಗಳ ( ಕೂಸುಗಳ ಅಲ್ಲ!) ಕೆಮಿ ಹಿಡುದು ತಿರ್ಪಲೆ, ಚೋಕಿನ ಉಪಯೋಗ ಆವುತ್ತು. ಲೆಕ್ಕ ತಪ್ಪು ಮಾಡಿದ ಮಕ್ಕಳ ತಲಗೆ ಕುಟ್ಟಿ ಹೊಡವಲುದೆ ಚೋಕು ಬೇಕಾವುತ್ತು. ಹಳೆ ನೆನಪುಗಳ ಕೆಣಕಿದ ಬಂಡಾಡಿ ಪುಳ್ಳಿಗೆ ಧನ್ಯವಾದ.

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಧನ್ಯವಾದಂಗೊ ಮಾವ. :)

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅನುಶ್ರೀ, ನಿನ್ನ ಕೈ ಚಳಕ ಲಾಯಿಕ ಆಯಿದು. ಅಭ್ಯಾಸ ಮುಂದುವರುಸು.
  [ಕ್ಲಾಸು ಲೀಡರಿನತ್ರ ಚೋಕು ತಪ್ಪಲೆ ಹೇಳಿದರೆ, ಅದು ಮೆಲ್ಲಂಗೆ ಒಂದು ಚೋಕು ಕಿಸಿಗೆ ಇಳಿಶಿಯೊಂಡೇ ಬಕ್ಕು.] ಒಂದು ಸಣ್ಣ ಸಂಶಯ. ನೀನು ಕ್ಲಾಸ್ ಲೀಡರ್ ಆಗಿ ಇತ್ತಿದ್ದೆಯಾ?

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಧನ್ಯವಾದಂಗೊ ಅಪ್ಪಚ್ಚಿ.
  ಕ್ಲಾಸ್ ಲೀಡರ್ ಆಗಿತ್ತಿದ್ದೆ. ಆದರೆ ಚೋಕು ಮಡಿಕ್ಕೊಂಬಲೆ ಕಿಸೆ ಇತ್ತಿಲ್ಲೆನ್ನೆ. ಮಾಣ್ಯಂಗೊ ಹಾಂಗೆ ಮಾಡಿಗೊಂಡಿತಿದ್ದವು. :)

  [Reply]

  VA:F [1.9.22_1171]
  Rating: 0 (from 0 votes)
 5. ಮಂಗ್ಳೂರ ಮಾಣಿ

  ವಾಹ್…!!!
  ತುಂಬಾ ಚೆಂದ ಆಯಿದು ಅಕ್ಕಾ…

  ಆನು ಮತ್ತೆ ಸಿದ್ದಾರ್ಥ ಹೇಳುವ ಒಬ್ಬ ಎನ್ನ ದೋಸ್ತಿ ಸೇರಿಯೊಂಡು, ಈ ಪ್ರಯೋಗ ಮಾಡಿತ್ತಿದ್ದೆಯ.
  ಎನಗೆ ಎಡಿಗಾಯಿದಿಲ್ಲೆ ಪೂರ್ತಿಮಾಡ್ಲೆ (ಸುವರೂವಾಣ ಬೆಂಚಿಲಿ ಕೂದಿತ್ತಿದ್ದೆ – ಮತ್ತೆ ಮಾಷ್ಟ್ರಂಗೆ ಕಂಡರೆ???)
  ಅವ ಎನ್ನ ಹಿಂದೆ ಕೂದೊಂಡು ಲೆಡ್ಡ್ ಹಾಕುವ ಪೆನ್ಸಿಲು ಉಪಯೋಗಿಸಿ ಅದರಲ್ಲಿ ಲಾದನ್ನಿನ ಮೋರೆ ಮಾಡಿತ್ತಿದ್ದ. ಸುಮಾರೊ ೮೦% ಹಾಂಗೇ ಬಂದಿತ್ತು.
  ಆವಗ ಅದರ ಫಟ ತೆಗದು ಮಡಿಕ್ಕೊಂಬಲೆ ಆಯಿದಿಲ್ಲೆ.

  ಧನ್ಯವಾದ ಅಕ್ಕೋ. ನಿನ್ನ ಲೇಖನಂದಾಗಿ ಮತ್ತೆ ಹಳತ್ತೆಲ್ಲ ನೆಂಪಾತು…

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಅಪ್ಪಾ..!! ಚೆ ಅದರ ತೆಗದು ಮಡುಗುಲಾವ್ತಿತು.. ಚೋಕಿಲಿ ಮೋರೆ ಮಾಡುದು ಕಷ್ಟದ ಕೆಲಸವೇ…

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  :(

  [Reply]

  VA:F [1.9.22_1171]
  Rating: 0 (from 0 votes)
 6. ದೀಪಿಕಾ
  ದೀಪಿಕಾ

  ಭಾರೀ ಚೆ೦ದ ಆಯಿದು ಎಲ್ಲಾ ಕೆತ್ತನೆಗೊ. ಎನಗುದೆ ಒ೦ದರಿ ಮಾಡಿ ನೊಡುವೊ ಹೆಳಿ ಅ೦ಸಿತ್ತು :-)

  [Reply]

  VA:F [1.9.22_1171]
  Rating: 0 (from 0 votes)
 7. vaishali avinash
  ವೈಶಾಲಿ ಬೆದ್ರಡಿ

  ಕೆತ್ತನೆಗೋ ಭಾರಿ ಲಾಯಿಕ ಇದ್ದು. ಆನುದೆ ಮನೆಲಿ ಪುರುಸೊತ್ತು ಸಿಕ್ಕುವಾಗ ಮಾಡಿ ನೋಡ್ತೆ. ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೊ ಅನುಶ್ರೀ… :)

  [Reply]

  VA:F [1.9.22_1171]
  Rating: 0 (from 0 votes)
 8. ಪುಚ್ಚಪ್ಪಾಡಿ ಮಹೇಶ

  ಲಾಯ್ಕಿ ಇದ್ದು ..
  ಇದರ ಎಂಗಳುದೇ ಟ್ರೈ ಮಾಡಿರೆ ಹೇಂಗೆ ?.
  ಅಂತೂ ಕೆಲಸ ಸೂಪರ್, ತಾಳ್ಮೆ ಬೇಕಲ್ಲ ..

  [Reply]

  VN:F [1.9.22_1171]
  Rating: 0 (from 0 votes)
 9. soumya bhat
  soumya bhat

  ಲಾಯ್ಕ ಅಯಿದು ಅನುಶ್ರಿ
  ನಿನ್ನ ತಾಲ್ಮೆಗೆ ಮೆಚೆಕು……………

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಕಾವಿನಮೂಲೆ ಮಾಣಿಅನು ಉಡುಪುಮೂಲೆಚುಬ್ಬಣ್ಣದೇವಸ್ಯ ಮಾಣಿಶರ್ಮಪ್ಪಚ್ಚಿಪವನಜಮಾವಸುಭಗವಾಣಿ ಚಿಕ್ಕಮ್ಮಬಟ್ಟಮಾವ°ಸುವರ್ಣಿನೀ ಕೊಣಲೆಮುಳಿಯ ಭಾವದೊಡ್ಡಭಾವಅನಿತಾ ನರೇಶ್, ಮಂಚಿಅನುಶ್ರೀ ಬಂಡಾಡಿಬಂಡಾಡಿ ಅಜ್ಜಿನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿಶಾಂತತ್ತೆರಾಜಣ್ಣಚೂರಿಬೈಲು ದೀಪಕ್ಕಪ್ರಕಾಶಪ್ಪಚ್ಚಿಅಕ್ಷರದಣ್ಣವಸಂತರಾಜ್ ಹಳೆಮನೆಮಂಗ್ಳೂರ ಮಾಣಿಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ