ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ

April 2, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲೋರಿಂಗೂ ನಮಸ್ಕಾರ,
ಎಂತ ಆರನ್ನೂ ಕಾಣ್ತಿಲ್ಲೆ?

ಓ!!ಮಾಷ್ಟ್ರು ಮಾವನೂ ದೊಡ್ಡ ಭಾವನೂ ಮಕ್ಕಳ ಪರೀಕ್ಷೆ ಪೇಪರು ತಿದ್ದುತ್ತಾ ಇದ್ದವು.
ಜೋಯಿಷ ಅಪ್ಪಚ್ಚಿ ಯುಗಾದಿ ದಿನ ಪಂಚಾಗ ಓದುಲೆ ಗ್ರಹಗತಿ ಲೆಕ್ಕ ಹಾಕುತ್ತಾ ಇದ್ದವು.
ಅಜ್ಜಕಾನ ಭಾವನುದೆ ಮಾಷ್ಟ್ರು ಮಾವನ ಮಗನೂ ಗೋಕರ್ಣದ ವಿರಾಟ್-ಪೂಜೆಯ ಕ್ಯಾಸೆಟ್ಟು ತಯಾರು ಮಾಡ್ಲೆ ಕಂಪ್ಯೂಟರ್ ನ ಎದುರೆ ಕೂಯಿದವು
ಶ್ರೀ ಅಕ್ಕನೂ ಬಂಡಾಡಿ ಅಜ್ಜಿಯೂ ಉಪ್ಪಿನಕಾಯಿ ಭರಣಿಲಿ ತುಂಬುಸಿ ಜೆಂಗಲ್ಲಿ ಮಡುಗುತ್ತಾ ಇದ್ದವು.
ಸೌಮ್ಯಕ್ಕನೂ ಸುವರ್ಣಿನಿ ಅಕ್ಕನೂ ಮಳೆಗಾಲಕ್ಕೆ ಮದ್ದಿನ ತಯಾರು ಮಾಡ್ತಾ ಇದ್ದವು.
ಯೇನಂಕೂದ್ಳು ಅಣ್ಣ ಮದುವೆ ಜೆಂಬಾರದ ಪಟಂಗಳ ಪ್ರಿಂಟು ಮಾಡ್ತಾ ಇದ್ದವು.
ಒಪ್ಪಕ್ಕ ಪರೀಕ್ಷೆಗೆ ಓದುತ್ತಾ ಇದ್ದು.
ಶಾಂತತ್ತೆಯೂ ದೀಪಕ್ಕನೂ ಹಲಸಿನ ಕಾಯಿ ಹಪ್ಪಳ ಮಾಡ್ತಾ ಇದ್ದವು.
ಅದಾ!!ಶರ್ಮಪ್ಪಚ್ಚಿ, ರಘುಮಾವ ಕಂಡತ್ತು ಅವುದೇ ಎಂತದೂ ಫೈಲು ಹಿಡ್ಕೊಂಡು ಇಯರೆಂಡು ಹೇಳಿ ಯಾವ್ದೋ ಲೆಕ್ಕಾಚಾರ ಹಾಯಿಕೊಂಡು ಇದ್ದವು..
ಛೇಛೇ!!!ಎಲ್ಲೋರು ಅರ್ಜೆಂಟಿನ ಕೆಲಸಲ್ಲಿ ಇದ್ದವು.

ಯುಗಾದಿಯ ಕಹಿಬೇವು-ಚೀಪೆಬೆಲ್ಲ

ಅದಾ!!
ರಜಾ ಹೊತ್ತು ಕಳಿವಗ ಮಾಷ್ಟ್ರುಮಾವ, ಚೌಕ್ಕಾರುಮಾವ, ಜೋಯಿಶಪ್ಪಚ್ಚಿ ಹೆರ ಜೆಗಿಲಿಲಿ ಕೂದೊಂಡು ಕಂಡತ್ತು.
ಅವು ಮೂರು ಜೆನ ಒಟ್ಟು ಸೇರಿರೆ ಕೇಳೆಕ್ಕಾ!! ಎಂತದೂ ವಿಷಯ ಇಕ್ಕು.
ಹೇಳಿ ಆತು. ದೂರ ಕೂದೆ. ಅವು ಮಾತಾದುಡರ ಕೇಳಿಗೊಂಡು ಅವು ಹೇಳಿದ ಶುದ್ದಿಯ ವಿವರ ರಜ ಆನು ಬೈಲಿಲಿ ಶುದ್ಧಿ ಹೇಳ್ತೆ .
ಈ ಸರ್ತಿ ಯುಗಾದಿ ಆಚರಣೆ ಮಾಡೆಡದೋ?? ಚೌಕ್ಕಾರು ಮಾವ, ಜೋಯಿಷಪ್ಪಚ್ಚಿ, ಮಾಷ್ಟ್ರು ಮಾವ ಓ ಮೊನ್ನೆ ಯುಗಾದಿಯ ವಿಷಯ ಕೂದುಗೊಂಡು ಮಾತಾಡಿಯೊಂಡು ಇತ್ತವು.
ಹಾಂಗೆ ಅವು ಹೇಳಿದ ರಜಾ ವಿಷಯಂಗೋ ಈ ಸರ್ತಿಲಿ ಶುದ್ಧಿಲಿ ಹೇಳ್ತೆ.

ಚೈತ್ರ ಮಾಸದ ಮೊದಲ ದಿನ.
ನಮ್ಮ ಹಿಂದೂ ಸಂಪ್ರದಾಯ ಪ್ರಕಾರ ಹೊಸ ವರ್ಷದ ಮೊದಲ ದಿನ. ಧಾರ್ಮಿಕ ರೀತಿಲಿ ಹೊಸ ವರ್ಷದ ಹಬ್ಬ ಹೇಳಿಯೇ ನಾವು ಆಚರಣೆ ಮಾಡ್ತು.
ಯುಗಾದಿ ಹೇಳಿರೆ ಹೊಸ ವರ್ಷದ ಆರಂಭ ದಿನ ಆದರೂ ನಮ್ಮ ದೇಶಲ್ಲಿ ಕೆಲವು ದಿಕ್ಕೆ ಬೇರೆ ಬೇರೆ ದಿನ ಆಚರಣೆ ಮಾಡ್ತವು.
ಮುಖ್ಯವಾಗಿ ಚಾಂದ್ರಮಾನ ಮತ್ತೆ ಸೌರಮಾನ ಹೇಳುವ ಎರಡು ಪ್ರಭೇದಂಗ,ವೇದಾಂಗ ಜ್ಯೋತಿಷ ಶಾಸ್ತ್ರಂದ ಈ ಹಬ್ಬ ಏವತ್ತು ಹೇಳುದು ನಿರ್ಣಯ ಆವ್ತು.
ಚಂದ್ರನ ಚಲನೆಯ ಆಧರುಸಿ ದಿನಗಣನೆ ಮಾಡುದರ ಚಾಂದ್ರಮಾನ ಹಾಂಗೆಯೇ ಸೂರ್ಯನ ಗತಿಂದ ಲೆಕ್ಖ ಹಾಕಿ ಸೌರಮಾನ ಯುಗಾದಿ ಹೇಳಿ ಆಚರಣೆ ಮಾಡುವ ಪ್ರಭೇದ ನಮ್ಮ ಊರಿಲಿ ನೆಡತ್ತಾ ಇದ್ದು.
ಅದರ್ಲಿಯೂ ನಮ್ಮ ದಕ್ಷಿಣ ಭಾಗಲ್ಲಿ ಚಾಂದ್ರಮಾನ ಯುಗಾದಿಯೇ ಹೆಚ್ಚಿಗೆ ಬಳಕೆಲಿ ಇದ್ದು.

ಖಗೋಳ ಶಾಸ್ತ್ರದ ಪ್ರಕಾರ ಭೂಮಿಂದ ನೋಡಿಯಪ್ಪಗ ಸೂರ್ಯ, ಚಂದ್ರ, ಗ್ರಹಂಗ ನಕ್ಷತ್ರ ಮಂಡಲಂದಾಗಿ ಉಂಟಪ್ಪ ರಾಶಿ ಚಕ್ರಲ್ಲಿ ದಿನಂದ ದಿನಕ್ಕೆ ರಜ್ಜ ರಜ್ಜ ಸಂಚರ್ಸಿದ ಹಾಂಗೆ ಕಾಣ್ತು.
ಮೊದಲ ನಕ್ಷತ್ರ ಅಶ್ವಿನಿ-ಮೇಷ ರಾಶಿಯ ೦-೧೩.೨೦ಭಾಗ(ಡಿಗ್ರಿ). ಅಲ್ಲಿ ಸೂರ್ಯ ಇಪ್ಪಗ ಭೂಮಿಯ ಉತ್ತರಾರ್ಧ ಗೋಳಲ್ಲಿ ಮರ ಗೆಡುಗಳಲ್ಲಿ ಹೊಸ ಚೆಗುರು ಕಾಣ್ತು.
ಹೇಳಿರೆ ಪ್ರಕೃತಿಲಿ ಒಂದು ಹೊಸ ಚೈತನ್ಯ. ಜ್ಯೋತಿಷ್ಯ ಪ್ರಕಾರ ಅಶ್ವಿನೀ ನಕ್ಷತ್ರಕ್ಕೆ ರವಿ ಪ್ರವೇಶ ಅಪ್ಪ ಕಾಲ ಹೊಸ ವರ್ಷ.
ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಇದು ಎಪ್ರಿಲ್ ತಿಂಗಳ ೧೪,೧೫ ಆಗಿ ಬತ್ತು. ಇದರ ನಾವು ವಿಷು ಹೇಳಿ ಆಚರಣೆ ಮಾಡ್ತು. ಹೇಳಿರೆ ಒಂದು ಪಕ್ಷ ವೆತ್ಯಾಸ.

ಆದರೆ ಖಗೋಳಲ್ಲಿ ಚಂದ್ರನ ಗತಿಯ ನಿರ್ಣಯ ಮಾಡಿಯೊಂಡು ಹುಣ್ಣಮೆ,ಅಮಾವಾಸ್ಯೆಗೆ ಒಂದು ಚಾಂದ್ರಮಾನ ಯುಗಾದಿ ಆವ್ತು.
ಈ ವೈಜ್ಞಾನಿಕವಾದ ಪ್ರಕೃತಿಲಿ ನವಗೆ ಸ್ಪಷ್ಟ ಕಾಂಬ ಆಚರಣೆಗಳ ನೋಡಿಯಪ್ಪಗ ನಮ್ಮ ಪೂರ್ವಿಕರ ಅಪಾರಜ್ಞಾನ ಎಷ್ಟರವರೆಗೆ ಇತ್ತು ಹೇಳುದು ನವಗೆ ಗೊಂತಾವ್ತು.
ಒಂದು ರೀತಿಲಿ ನಾವು ಈ ಹಬ್ಬಂಗಳ ಆಚರಣೆ ಮಾಡಿರೆ ಹಬ್ಬದ ಎಡಕ್ಕಿಲಿ ಆ ಹಿರಿಯರಿಂಗೂ ಗೌರವ ಕೊಟ್ಟ ಹಾಂಗೆ ಹೇಳಿ ಹೇಳ್ತವು ಜೋಯಿಶಪ್ಪಚ್ಚಿ.
ಅಷ್ಟೊತ್ತಿಂಗೆ ಮಾಷ್ಟ್ರು ಮಾವ ಹಿಂದೆ ರಾಜಶ್ರಯಲ್ಲಿ ಇದ್ದ ಜೋಯಿಶಕ್ಕೋ ಭೂಮಿ,ಚಂದ್ರ,ಸೂರ್ಯ,ರಾಶಿ,ನಕ್ಷತ್ರಂಗಳ ಚಲನೆಯ ಗಮನ್ಸಿಗೊಂಡು ಆ ವರ್ಷದ ತಿಥಿ,ವಾರ,ನಕ್ಷತ್ರ,ಯೋಗ,ಕರಣ ಹೇಳಿ ಪಂಚಾಗ ಪೂಜೆ ಮಾಡಿ ರಾಜನ ಎದುರು ಓದೆಕ್ಕಡ.
ಇದರ ಫಲಂಗಳ ಆ ರಾಜಾಶ್ರಯದ ಕಾಲಲ್ಲಿ ವಿಮರ್ಶೆ ಮಾಡಿಗೊಂಡು ರಾಜ್ಯ ವಿಸ್ತಾರಕ್ಕೆ ಯುದ್ಧಕ್ಕೆ ಹೆರಟುಗೊಂಡು ಇತ್ತವು.

ದೇವೀ ಪುರಾಣದ ಪ್ರಕಾರ ಸೃಷ್ಟಿ ರಚನೆಗೆ ಮೊದಲು ಪ್ರಕೃತಿಲಿ ಓಂಕಾರದ ನಾದವೇ ತುಂಬಿಗೊಂಡಿತ್ತು.
ಓಂಕಾರವೇ ಬ್ರಹ್ಮಾಂಡ,ಬ್ರಹ್ಮಾಂಡವೇ ಓಂಕಾರ ಹೇಳಿ ಆಗಿತ್ತು.ಹಾಂಗಿಪ್ಪ ನಾದಮಯ ಪ್ರಕೃತಿ ಅಂಬಗ ಇತ್ತಡ!!
ಓಂಕಾರಂದಲೇ ಆದಿಶಕ್ತಿಯ ಆವಿರ್ಭಾವ ಆತದ!!ಆದಿಶಕ್ತಿಯಾಗಿ ಅವತರ್ಸಿದ ಸತ್ವ-ರಜ-ತಮೋ ಗುಣಂಗ ಬ್ರಹ್ಮ-ವಿಷ್ಣು-ಮಹೇಶ್ವರ ಆದವಡ.ಹೇಳಿರೆ ಸೃಷ್ಟಿ-ಸ್ಥಿತಿ-ಲಯ.ಈ ತತ್ವದ ಆಧಾರಂದ ಮೋಹಮಾಯೆಯ ಬಲೆ ಈ ತ್ರಿಮೂರ್ತಿಗಳ ಒಳದಿಕೆ ಆವರ್ಸಿತ್ತು..
ಅಷ್ಟೊತ್ತಿಂಗೆ ಆರು ಶ್ರೇಷ್ಠರು ಹೇಳುವ ಪ್ರಶ್ನೆ ಅವರ ಒಳದಿಕೆ ಎದ್ದತ್ತು..
ಈ ಯುದ್ಧಲ್ಲಿ ಆದಿ ಮಾಯೆಯ ಅವತಾರ ಆಗಿ ಅವಕ್ಕವಕ್ಕೆ ಅವ್ವವ್ವು ಶ್ರೇಷ್ಠರು,ಈ ಕಾರ್ಯಕ್ಕೆ ಸೂರ್ಯನೇ ಸಾಕ್ಷಿ ಹೇಳಿ ಅವಕ್ಕೆ ಆಜ್ಞೆ ಆತು.
ಅಷ್ಟಪ್ಪಗ ಆ ತ್ರಿಮೂರ್ತಿಗ ಆ ಆದಿಮಾಯೆಯ ಜಗನ್ಮಾತೆ ಹೇಳಿ ಕೊಂಡಾಡಿದವು.ಇದರಿಂದ ಶ್ರದ್ಧೆಯ ಸ್ಥಾಪನೆ ಆತು.ಸೂರ್ಯನೇ ಸಕಲ ಜೀವಾತ್ಮಂಗಳ ಯುಗಪುರುಷ ಆದ!!
ಆ ಯುಗದ ದಿನವೇ ಯುಗಾದಿ.
ಸೂರ್ಯನ ಚೈತನ್ಯಡ ಪ್ರಭಾವಂದ ಪ್ರಕೃತಿಲಿ ಎಲ್ಲೆಲ್ಲೂ ನವ ಚೈತನ್ಯ,ಹೊಸ ಹೂಗು ,ಹೊಸ ಫಲ ಈ ಮೂಲಕ ಹೊಸ ವರ್ಷದ ಸಂಭ್ರಮ.

ಯುಗಾದಿಯಂದೇ ಪಂಚಾಗ ಶ್ರವಣ,ಪಂಚಾಗ ಪೂಜೆ,ಪಠಣ ಪರಂಪರಾಗತ ರೂಢಿ.
ಸಂವತ್ಸರದ ಫಲಾಫಲ-ಆದಾಯ,ವ್ಯಯ,ಮಳೆ,ಕೃಷಿ ಇತ್ಯಾದಿ ವಿಷಯಂಗಳ ವಿಚಾರ ವಿಮರ್ಶೆಯ ದಿನವಾಗಿ ಈ ಕಂಪ್ಯೂಟರ್ ದಿನಲ್ಲಿಯೂ ತನ್ನತನವ ಕಾಲಗಣನೆಗೆ ಸಾಕಷ್ಟು ಇದ್ದರೂ ಶಾಸ್ತ್ರೋಕ್ತ ವಿಧಿಲಿ ಪಂಚಾಗ ಮೇರು ಸ್ಥಾನಲ್ಲಿ ಇದ್ದು.
ಪಂಚಾಂಗಕ್ಕೆ ಆದ್ಯತೆ.ಈ ದಿನಲ್ಲಿ ಫಲಾಫಲ ತಿಳಿವ ವಾಡಿಕೆ ಯುಗಯುಗಕ್ಕೂ ಬೆಳತ್ತಾ ಇರ್ತು.

ಕೈ(ಕಹಿ)ಬೇವು-ಬೆಲ್ಲ ಈ ದಿನ ಹೆರಿಯೋರ ಆಶೀರ್ವಾದ ಪಡದು ಸ್ವೀಕರಿಸುದು ನಮ್ಮ ಪದ್ಧತಿ.
ಸುಖದ ಸಂಕೇತವಾದ ಬೆಲ್ಲವನ್ನೂ,ಕಷ್ಟದ ಸಂಕೇತವಾದ ಬೆಲ್ಲವನ್ನೂ ಸಮಾನವಾಗಿ ಸ್ವೀಕರಿಸುದು.
ಈ ಮಿಶ್ರಣವ ಒಟ್ಟಿoಗೆ ತಿಂದರೆ ಹೊಟ್ಟೆಯ ಒಳಾಣ ಉರಿ,ಪಿತ್ತದ ಅಂಶವ ಶರೀರಂದ ಹೆರ ಹಾಕುತ್ತು ಹೇಳಿ ಚೌಕ್ಕಾರು ಮಾವನ ಅಭಿಪ್ರಾಯ.

ಬೇವು ಬೆಲ್ಲ ಸ್ವೀಕಾರ ಮಾಡುವ ಶ್ಲೋಕ:

ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಮ್ ||

ಅರ್ಥ:
ನೂರು ವರ್ಷಂಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ, ಸಕಲ ಅರಿಷ್ಟ(ಕಷ್ಟ)ನಿವಾರಣೆ ಅಪ್ಪಲೆ ಈ ಬೇವು – ಬೆಲ್ಲ ಸೇವನೆ ಮಾಡ್ತೆ.

ಎಲ್ಲೋರಿಂಗೂ ಯುಗಾದಿ ಹಬ್ಬದ ಶುಭಾಶಯಂಗೋ!!

ಸೂ: ಪಟ ಇಂಟರ್ನೆಟ್ಟಿಂದ

ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಯುಗಾದಿ ಬಗ್ಗೆ ತುಂಬಾ ಮಾಹಿತಿ ಕೊಟ್ಟ ಒಳ್ಳೆ ಲೇಖನ.
  ಯುಗಾದಿಯ ಈ ಶುಭ ಸಂದರ್ಭಲ್ಲಿ, ದೇವರು ಎಲ್ಲರಿಂಗೂ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಹೇಳಿ ಬೇಡಿಗೊಂಬೊ. ಗುರು ಹಿರಿಯರ ಆಶೀರ್ವಾದ ನಮ್ಮ ಮೇಲೆ ಸದಾ ಇರಳಿ.

  [Reply]

  ಗಣೇಶ ಮಾವ°

  ಗಣೇಶ ಮಾವ° Reply:

  ಧನ್ಯವಾದ ಶರ್ಮಪ್ಪಚ್ಚಿ,,,,

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಸಕಾಲಿಕ, ಅರ್ಥಪೂರ್ಣ , ಮಾಹಿತಿಯುಕ್ತ.
  ಧನ್ಯವಾದಂಗಳೊಂದಿಗೆ ಉಗಾದಿ ಶುಭಾಶಯ ಸೇರ್ಸಿ ಒಪ್ಪ.

  [Reply]

  ಗಣೇಶ ಮಾವ°

  ಗಣೇಶ ಮಾವ° Reply:

  ಧನ್ಯವಾದ ಚೆನ್ನೈ ಭಾವ,,,

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಯುಗಾದಿ ಹಬ್ಬದ ಸಂದರ್ಭಲ್ಲಿ ಯುಗಾದಿ ಬಗ್ಗೆ ಸವಿವರ ಲೇಖನ ಲಾಯಕಾಯಿದು. ಎಲ್ಲೋರಿಂಗು ಯುಗಾದಿ ಹಬ್ಬದ ಶುಭಾಶಯಂಗೊ. ಹೊಸ ವರ್ಷ ಶುಭವನ್ನೇ ತರಲಿ.

  [Reply]

  VA:F [1.9.22_1171]
  Rating: 0 (from 0 votes)
 4. ಜಯಶ್ರೀ ನೀರಮೂಲೆ
  jayashree.neeramoole

  ಯುಗಾದಿಯ ಬಗ್ಗೆ ಉತ್ತಮ ಮಾಹಿತಿ ಒಳಗೊಂಡಂತಹ ಲೇಖನ…. ಎಲ್ಲರಿಂಗೂ ಯುಗಾದಿ ಹಬ್ಬದ ಶುಭಾಶಯ….

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ

  ಯುಗಾದಿಯ ಶುಭಾಶಯ೦ಗೊ

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘುಮುಳಿಯ

  ಧನ್ಯವಾದ ಗಣೇಶ ಮಾವಾ,
  ಯುಗಾದಿ ಹಬ್ಬದ ಶುಭ ಸ೦ದರ್ಭಲ್ಲಿ ಮಾಹಿತಿಯುಕ್ತ ಲೇಖನ.ಬೈಲಿನ ನೆ೦ಟ್ರಿ೦ಗೆಲ್ಲ ಶುಭ ಆಗಲಿ.

  [Reply]

  VA:F [1.9.22_1171]
  Rating: 0 (from 0 votes)
 7. ಶ್ಯಾಮ

  ನಾವು ಹವ್ಯಕರು ‘ಚಾ೦ದ್ರಮಾನ’ ಯುಗಾದಿಯ ಆಚರಣೆ ಮಾಡೆಕ್ಕಾದ್ದದೋ ಅಲ್ಲಾ ಸೌರಮಾನ ವೋ!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ವಿದ್ವಾನಣ್ಣಸಂಪಾದಕ°ಪೆರ್ಲದಣ್ಣತೆಕ್ಕುಂಜ ಕುಮಾರ ಮಾವ°ರಾಜಣ್ಣಪೆಂಗಣ್ಣ°vreddhiಡಾಗುಟ್ರಕ್ಕ°ವಿಜಯತ್ತೆಅಜ್ಜಕಾನ ಭಾವಮುಳಿಯ ಭಾವಕಳಾಯಿ ಗೀತತ್ತೆಚುಬ್ಬಣ್ಣವಸಂತರಾಜ್ ಹಳೆಮನೆಪಟಿಕಲ್ಲಪ್ಪಚ್ಚಿದೊಡ್ಡಮಾವ°ಗೋಪಾಲಣ್ಣಕೆದೂರು ಡಾಕ್ಟ್ರುಬಾವ°ಪುಣಚ ಡಾಕ್ಟ್ರುಚೆನ್ನೈ ಬಾವ°ವಾಣಿ ಚಿಕ್ಕಮ್ಮದೀಪಿಕಾದೇವಸ್ಯ ಮಾಣಿಸರ್ಪಮಲೆ ಮಾವ°ಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ