CA ಬಗ್ಗೆ ಕಿರು ಮಾಹಿತಿ

May 30, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿಂಗೊಗೆ ಆಚಮನೆ ದೊಡ್ಡಮ್ಮನ ಅಕ್ಕನ ಮನೆ ಓಣಿಯಡ್ಕ ಗೊಂತಿದ್ದಲ್ಲದೋ?
ಅಲ್ಯಾಣ ಪುಳ್ಳಿಮಾಣಿ “ಓಣಿಯಡ್ಕ ಕಿಟ್ಟಣ್ಣ” ಬೆಂಗುಳೂರಿಲಿ ಇರ್ತದೂ ಗೊಂತಿಕ್ಕು, ಅಲ್ಲದೋ?
ಸತತ ಪರಿಶ್ರಮಂದ ಈ ಒರಿಶದ ಪರೀಕ್ಷೆಲಿ ಸಿ.ಎ ಪಾಸುಮಾಡಿಗೊಂಡ ಮಾಣಿ. ಬೈಲಿನ ಎಲ್ಲೋರ ಪರವಾಗಿ ಅವಂಗೆ ಅಭಿನಂದನೆಗೊ.
ಓಣಿಯಡ್ಕ ಕಿಟ್ಟಣ್ಣ ಬೈಲಿಂಗೆ ಬಂದು ಶುದ್ದಿ ಹೇಳುಲೆ ಸುರುಮಾಡ್ತನಡ. ಎಲ್ಲೋರುದೇ ಅವನ ಬೆನ್ನುತಟ್ಟಿ, ಸ್ವಾಗತ ಮಾಡುವೊ°.
ಸೀಯೇ ಮಾಡ್ತದರ ಬಗ್ಗೆಯೇ ಹೇಳುವ ಈ ಶುದ್ದಿಗಳ ಇನ್ನಷ್ಟು ಮಕ್ಕೊಗೆ ಎತ್ತುಸಿ ಉಪಕಾರ ಮಾಡುವೊ°..

ಬೈಲಿನ ಪುಟ: ಸಂಕೊಲೆ
ಮೋರೆಪುಟ:
ಸಂಕೊಲೆ
ಓರುಕುಟ್ಟುತ್ತಪುಟ:
ಸಂಕೊಲೆ
~
ಗುರಿಕ್ಕಾರ°.

ಎಲ್ಲರಿಗೂ ನಮಸ್ಕಾರ. ಇದು ಎನ್ನ ಮೊದಲ ಶುದ್ದಿ.
ಮೊದಲಿಗೆ ಎನ್ನ ಕಿರು ಪರಿಚಯ ಮಾಡಿಕೊತ್ತೆ.
ಆನು ಹುಟ್ಟಿದ್ದು ಬೆಳುದ್ದು ಎಲ್ಲ ಪುತ್ತೂರಿಲಿ. ಆದರೆ ಮೂಲ ಮನೆ ಸುಳ್ಯ ತಾಲ್ಲೂಕಿನ ಕಲ್ಮಡ್ಕದ ಓಣಿಯಡ್ಕ.
ಅಜ್ಜನಮನೆ ಪೆರುವಾಯಿಯ ಹತ್ರ ಇಪ್ಪ ಕಡೆಂಗೋಡ್ಲು. ಹೀಂಗಾಗಿ ಆನು ಬರಿವ ಭಾಷೇಲಿ ಮೂಡ್ಲಾಗಿ ಮತ್ತು ಪಡ್ಲಾಗಿ ಎರಡೂ ಬೆರಕೆ ಅಕ್ಕು. ಹಾಂಗಾಗಿ ಎನ್ನ ಮನ್ನಿಸೆಕ್ಕು ಹೇಳಿ ಕೇಳಿಕೊತ್ತಾ ಇದ್ದೆ.
ಆನು ಮಂಗಳೂರಿನ ಕೆನರಾ ಕಾಲೇಜಿಲಿ ವಾಣಿಜ್ಯ(B .Com ) ಪದವಿ ಮುಗುಸಿ ಬೆಂಗಳೂರಿಲಿ CA(Chartered Accountancy) ಇತ್ತೀಚಿಗೆ ಮುಗುಸಿದೆ.

ಪುತ್ತೂರಿನ ಸುದ್ದಿಬಿಡುಗಡೆಲಿ ಬಂದ ಶುದ್ದಿ (ಕಿಟ್ಟಣ್ಣಂಗೆ ಅಭಿನಂದನೆಗೊ)

ತುಂಬಾ ಜನಂಗೊಕ್ಕೆ CA ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದ್ದರಿಂದ, ಎನಿಗೆ ಗೊತ್ತಿಪ್ಪಷ್ಟು ಹೇಳುವ ಹೇಳಿ ಕಂಡತ್ತು.
ಪ್ರಸಕ್ತ ಅತಿ ಹೆಚ್ಚು ಬೇಡಿಕೆ ಇಪ್ಪಂತಹ ಕೋರ್ಸ್ ಗಳಲ್ಲಿ CA ಕೂಡಾ ಒಂದು. ಆದರೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಡೆಗೆ ಆಸಕ್ತಿ ತೋರುಸುವಸ್ಟು ಜನ CA ಕಡೆಗೆ ಆಸಕ್ತಿ ತೋರುಸುತ್ತವಿಲ್ಲೆ.
ಇದಕ್ಕೆ ಮುಖ್ಯ ಕಾರಣ CA ಪಾಸು ಮಾಡುದು ಕಷ್ಟ/ಅಸಾಧ್ಯ ಹೇಳುವ ನಂಬಿಕೆ/ಅಪನಂಬಿಕೆ. ಇದು ಸ್ವಲ್ಪ ಮಟ್ಟಿಗೆ ನಿಜವಾದರೂ, ಪ್ರಯತ್ನ ಮತ್ತು ಪರಿಶ್ರಮ ಇದ್ದರೆ ಪ್ರತಿಫಲ ಸಿಕ್ಕುತ್ತು.
ಇತ್ತೀಚಿಗೆ ಮಂಗಳೂರಿಲಿ ಕೂಡ CA ಪರೀಕ್ಷೆಗೆ ಹೇಳಿಕೊಡುವ ಕೆಂದ್ರಗೊ (coaching centre) ಹಲವಾರು ಸುರು ಆಯ್ದು.
ಖರ್ಚಿನ ಮಟ್ಟಿಗೆ ಹೇಳುದಾದರೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಗೆ ಹೋಲಿಸಿ ಅಪ್ಪಗ CA ತುಂಬಾ ಕಡಿಮೆ ಖರ್ಚಿನ ಕೋರ್ಸ್.

CA ಹೇಳುದು ICAI (Institute of Chartered Accountants of India) ನಡೆಸುವ ಒಂದು ಪರೀಕ್ಷೆ. ಇದ್ರಲ್ಲಿ ಒಟ್ಟು ಮೂರು ಹಂತ ಇದ್ದು.

 1. CPT (Common Proficiency Test)
 2. IPCC (Integrated Professional Competence Course
 3. Final

ಈ ಮೂರು ಹಂತದ ಬಗ್ಗೆ ವಿಸ್ತಾರವಾಗಿ ಮುಂದಿನ ಬರಹಲ್ಲಿ ವಿವರಿಸುತ್ತೆ.

ಯಾರಿಗೆ ಆದರೂ ಇದರ ಬಗ್ಗೆ ತುರ್ತಾಗಿ ಮಾಹಿತಿ ಬೇಕಾದಲ್ಲಿ www.icai.org ಗೆ ಭೇಟಿ ಕೊಡಿ.

ICAI ಮಂಗಳೂರು ಶಾಖೆ ವಿಳಾಸ:

Mangalore Branch of SIRC of ICAI,
ICAI BHAWAN, II Floor, Mahendra Arcade, Karangalpady,
Mangalore – 575003.
Phone: 91-824-2495722, 4279104
EMail: info@icaimangalore.org

ICAI ಬೆಂಗಳೂರು ಶಾಖೆ ವಿಳಾಸ:

Bangalore Branch of SIRC of ICAI,
ICAI BHAWAN, 16/0, Millers Tank Bed Area, Vasanthnagar
Bangalore – 570052.
Phone: 080-30563500/541/542/543/545
Email: bangalore@icai.org

ಆರಿಂಗಾರು ವಿವರವಾದ ಮಾಹಿತಿ ಬೇಕಾರೆ ಎನ್ನ ಸಂಪರ್ಕಿಸಲಕ್ಕು.
ಎನ್ನ ಮಿಂಚಂಚೆ ವಿಳಾಸ : cashrikrishnav@gmail.com

ಮತ್ತೆ ಕಾಂಬ.


ಓಣಿಯಡ್ಕ ಕಿಟ್ಟಣ್ಣ

CA ಬಗ್ಗೆ ಕಿರು ಮಾಹಿತಿ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪ್ರಪ್ರಥಮವಾಗಿ CA final ಆದದ್ದಕ್ಕೆ ಅಭಿನಂದನೆಗೊ. ಬೈಲಿಂಗೆ ಆತ್ಮೀಯ ಸ್ವಾಗತ.
  ಈ ನಿನ್ನ ಸಾಧನೆ, ನಮ್ಮ ಮಕ್ಕೊಗೆ ಸ್ಪೂರ್ತಿ ಕೊಡುಗು ಹೇಳುವದರಲ್ಲಿ ಯಾವ ಸಂಶಯವೂ ಇಲ್ಲೆ.
  ವಿವರವಾದ ಮಾಹಿತಿ ಕೊಡ್ತೆ ಹೇಳಿದ್ದು ತುಂಬಾ ಸಂತೋಷ. ಧನ್ಯವಾದಂಗೊ

  [Reply]

  VA:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಓಣಿಯಡ್ಕ ಕಿಟ್ಟಣ್ಣ – ಸ್ವಾಗತ.

  ಬೈಲಿಲಿ ನಾವೂ ಇದ್ದು. ನಮ್ಮದು ಬೈಲು ಹೇಳಿ ಅಭಿಮಾನಂದ ಬರದ್ದಕ್ಕೆ ಪ್ರಶಂಸೆ.

  ಪ್ರತಿಯೊಬ್ಬನತ್ರೂ ಒಂದೊಂದು ಪ್ರತಿಭೆ ಇರ್ತು. ವಿಷಯ ಇರ್ತು. ವಿಚಾರ ಇರ್ತು. ನಾಕು ಜೆನ್ರೊಟ್ಟಿಂಗೆ ಹಂಚಿಗೊಂಬ್ಗ ಒಂದು ತ್ರುಪ್ತಿಯೂ ಇರ್ತು ನೋಡಿ . ಅದು ನಮ್ಮ ಒಪ್ಪಣ್ಣ ಸ್ವಾಗತುಸುತ್ತು. ಬರೀತಾ ಇರಿ ಹೇಳಿ ನಮ್ಮ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 3. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಎಲ್ಲರಿಂಗೂ ಧನ್ಯವಾದ. ನಿಂಗಳ ಆಶೀರ್ವಾದ ಮತ್ತು ಹಾರೈಕೆ ಹೀಂಗೇ ಇರಲಿ ಹೇಳಿ ಆಶಿಸುತ್ತೆ.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಓಣಿಯಡ್ಕ ಕಿಟ್ಟಣ್ಣ೦ಗೆ ಸ್ವಾಗತ.
  ವೈದ್ಯಕೀಯ,ತಾ೦ತ್ರಿಕ ಶಿಕ್ಷಣದ ಒಟ್ಟಿ೦ಗೆ ಲೆಕ್ಕಾಚಾರದ ಈ ದಾರಿಯೂ ಇದ್ದು ಹೇಳಿ ನಿ೦ಗೊ ಕೊಟ್ಟ ಈ ಮಾಹಿತಿ ನಮ್ಮ ಬೈಲಿನ ವಿದ್ಯಾರ್ಥಿ ಬ೦ಧುಗೊಕ್ಕೆ ಮಾರ್ಗದರ್ಶನ ನೀಡಲಿ ಹೇಳಿ ಹಾರೈಕೆ.

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  Gopalakrishna BHAT S.K.

  ಅಭಿನಂದನೆಗೊ.
  ಚಾರ್ಟೆರ್ಡ್ ಅಕೌಂಟೆಂಟ್ ಪರೀಕ್ಷೆ ಬಗ್ಗೆ ಮಾಹಿತಿ ಬರೆದ್ದು ಲಾಯ್ಕ ಆತು.
  ನಮ್ಮವು ಹೆಚ್ಚಿಗೆ ಪ್ರಯತ್ನ ಮಾಡದ್ದ ಕ್ಷೇತ್ರಲ್ಲಿ ಇನ್ನೂ ಹೆಚ್ಚು ಜನ ಮಕ್ಕೊ ಪ್ರಯತ್ನ ಮಾಡೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 6. ಜಯದೇವ ಪ್ರಸಾದ

  ಕೃಷ್ಣ,

  ಬಹಳ ಒಳ್ಳೆಯ ಕೆಲಸ. ಈಗ ಮಾಹಿತಿಯ ಅಗತ್ಯ ಜನರ ಅತ್ಯಂತ ತೀವ್ರವಾಗಿ ಕಾಡುತ್ತು. ಸರಿಯಾದ ಮಾಹಿತಿ ಸಿಕ್ಕುವುದೇ ಕಷ್ಟ. ಇದು ಉತ್ತಮ ಪ್ರಯತ್ನ. ಮುಂದುವರಿಶು..

  [Reply]

  VA:F [1.9.22_1171]
  Rating: 0 (from 0 votes)
 7. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಎಲ್ಲರಿಂಗೂ ಧನ್ಯವಾದ.. ಎನ್ನ ಕೈಲಾದಷ್ಟು ಮಾಹಿತಿ ಕೊಡ್ಲೆ ಪ್ರಯತ್ನ ಮಾಡ್ತೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಶೇಡಿಗುಮ್ಮೆ ಪುಳ್ಳಿಒಪ್ಪಕ್ಕಜಯಶ್ರೀ ನೀರಮೂಲೆಅಜ್ಜಕಾನ ಭಾವಶೀಲಾಲಕ್ಷ್ಮೀ ಕಾಸರಗೋಡುಬಂಡಾಡಿ ಅಜ್ಜಿಬೋಸ ಬಾವಗಣೇಶ ಮಾವ°ದೊಡ್ಡಮಾವ°ಗೋಪಾಲಣ್ಣಮಾಷ್ಟ್ರುಮಾವ°ಬಟ್ಟಮಾವ°ಚೆನ್ನಬೆಟ್ಟಣ್ಣಪೆರ್ಲದಣ್ಣಅಡ್ಕತ್ತಿಮಾರುಮಾವ°ವಸಂತರಾಜ್ ಹಳೆಮನೆದೊಡ್ಡಭಾವಎರುಂಬು ಅಪ್ಪಚ್ಚಿಕೊಳಚ್ಚಿಪ್ಪು ಬಾವಸರ್ಪಮಲೆ ಮಾವ°ವೆಂಕಟ್ ಕೋಟೂರುಬೊಳುಂಬು ಮಾವ°ಪುತ್ತೂರಿನ ಪುಟ್ಟಕ್ಕಕಳಾಯಿ ಗೀತತ್ತೆರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ