ಬೆಂಗಳೂರಿಂದ ಮಂಚನಬೆಲೆಗೆ…

October 9, 2011 ರ 7:40 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಮಾರು ಸಮಯ ಆತು ಬೈಲಿಲಿ ಶುದ್ದಿ ಹೇಳದ್ದೆ. ಹಾಂಗೆ ಪುರ್ಸೊತ್ತು ಮಾಡಿ ಕಳುದ ತಿಂಗಳು 30ನೇ ತಾರೀಕಿಂಗೆ ಆಪೀಸಿಂದ ಪಿಕ್ನಿಕ್ ಹೊದ್ದದರ ಶುದ್ದಿ ಹೇಳ್ತೆ.
ಪಟಂಗಳೂ ಹಾಕಿದ್ದೆ.

ಎಂಗೊ ಹೋದ್ದು ಮಂಚನಬೆಲೆ ಜಲಾಶಯಕ್ಕೆ.
ಮಾಗಡಿಗೆ ಹೋಪ ಮಾರ್ಗಲ್ಲಿ ಇದ್ದು ಈ ಜಾಗೆ. ಬೆಂಗಳೂರಿನ ಹೆಬ್ಬಾಳಂದ ದೂರ ಸುಮಾರು 50 ಕಿಲೋಮೀಟರು ಅಕ್ಕು.
ಮಾರ್ಗಂದ ಒಳದಿಕ್ಕೆ ಒಂದೈದು ಕಿಲೋಮೀಟರು ಹಳ್ಳಿಯ ಮಣ್ಣು ಮಾರ್ಗಲ್ಲಿ ಹೋಗಿ, ಅಲ್ಲಿಂದ ಗುಡ್ಡಗಾಡು ಪ್ರದೇಶಲ್ಲಿ ಕಲ್ಲು ಮುಳ್ಳಿನ ನಡುಗೆ ಹತ್ತಿ ಇಳುದು ನಡಕ್ಕೊಂಡು ಹೋದರೆ ಈ ಜಾಗೆ ಸಿಕ್ಕುತ್ತು.
ಹಳ್ಳಿಯ ನೀರು, ಕಾಡು ನೋಡದ್ದ ಪೇಟೆಯ ಜನಂಗೊಕ್ಕೆ ಇದು ಒಂದು ಅದ್ಭುತ ಜಾಗೆ.
ಬಂಡೆಕಲ್ಲು, ಹಸಿರಿನ ರಾಶಿಯ ನಡುಗೆ ನೀರಿನ ರಾಶಿ. ಮಂಚನಬೆಲೆ ಅಣೆಕಟ್ಟಿನ ನೀರು ನಿಂಬ ಜಾಗೆ ಇದು, ಹಾಂಗೆ ಇಲ್ಯಾಣ ನೀರಿಂಗೆ ಚಲನೆ ಇಲ್ಲೆ. ಗುಂಡಿ ಬರೀ 30 ಫೀಟು. ಇಲ್ಲಿಂದ ಸಾವನೂರು ದುರ್ಗ ಭಾರೀ ಚೆಂದಕ್ಕೆ ಕಾಣ್ತು. ಜಾರು ಬಂಡಿಯ ಹಾಂಗೆ !

ಉದೆಗಾಲಕ್ಕೆ ಮನೆಂದ ಹೆರಟು ಎಲ್ಲರ ಒಟ್ಟು ಸೇರ್ಸಿ ತಲ್ಪುವಾಗ ಘಂಟೆ ಹತ್ತು ಕಳ್ದು.
ಅಲ್ಲಿ ಎಂಗಳ ನೋಡಿಗೊಂಬಲೆ ಅದೇ ಹಳ್ಳಿಯ ಕೆಲವು ಜವ್ವನಿಗರ ಸೇರ್ಸಿಗೊಂಡು ಪೇಟೆಂದ ಒಂದಿಬ್ರು ಬೈಂದವು.
ನಮ್ಮೊರಲ್ಲಿ ಒಬ್ಬಂಗೂ ಸರಿಗಟ್ಟು ಈಜುಲೆ ಬತ್ತಿಲ್ಲೆ ಹೇಳಿ ಮೊದಲೇ ಹೇಳಿ ಮಡಿಗಿದ ಕಾರಣ ಜೀವರಕ್ಷಕ ಕವಚಂಗಳ ವ್ಯವಸ್ಥೆ ಮಾಡಿತ್ತಿದ್ದವು. ಕೆಲವು ಮುಖ್ಯ ಸೂಚನೆಗಳ ತಿಳ್ಕೊಂಡ ಮೇಲೆ ನೀರಿಂಗೆ ಹಾರಿದೆಯೋ.
ಈಜಲೆ ಬಾರದ್ದೋರ ಮೋರೆ ಜೀವರಕ್ಷಕ ಕವಚ ಹಾಕಿಯೂ ನೋಡಲೇ ಎಡಿಯ.
ಎನ್ನ ಮೋರೆ ಎನಗೆ ನೋಡಲೇ ಎಡಿಗಾಯ್ದಿಲ್ಲೇ ಹೇಳಿ ಬೇಜಾರ ಇದ್ದು. ಹೊಂಡ ಬರೀ 30 ಫೀಟು ಇಪ್ಪದು ಹೇಳಿಯಪ್ಪಗ ಹೃದಯ ಬಡಿತ ಜೋರಾತು.

ಆನಂತೂ ಧೈರ್ಯಲ್ಲಿ ಇಳುದೆ (ಒಳ ಪುಕು ಪುಕು ಆಯ್ಕೊಂಡಿತ್ತು). ಎಂತ ಮಾಡಿರೂ ಮುಳುಗ ಹೇಳ್ತ ಧೈರ್ಯ ಬಂದಪ್ಪಗ ಒಬ್ಬೊಬ್ಬನೇ ಇಳುದವು.
ಒಬ್ಬನೇ ಹೋಪ ದೋಣಿಯೂ ಇತ್ತಲ್ಲಿ. ಒಚ್ಚಿಗೊಂಡು ಬ್ಯಾಲೆನ್ಸು ಮಾಡಿಗೊಂಡು ಹೋದರಾತು ಅಷ್ಟೇ. ತಪ್ಪಿರೆ ಪಲ್ಟಿಯಾಗಿ ತುಳುಂಕ ನೀರಿಂಗೆ !.
ಎಲ್ಲರೂ ನೀರಿಲಿ ಹಾರಿದ್ದೇ ಹಾರಿದ್ದು. ಅಕೇರಿಗೆ ಎಂತ ಮಾಡಿರೂ ಮೇಲೆ ಬಾರ ಒಬ್ಬನೂ.
ಊಟ ತಯಾರಿದ್ದು ಹೇಳಿದ ಮತ್ತೆಯೇ ಮೇಲೆ ಹೋದ್ದು ಉಣ್ಣೆಕ್ಕನ್ನೇ ಹೇಳಿ.
ಚೆಂಡಿ ಉದ್ದಿ ಮೇಲೆ ಬಂದು ಉಂಬಲೆ ಪ್ಲೇಟು ಹಿಡ್ಕೊಂಡೆ. ಬೋಚಭಾವನ ಮನಸಾ ಧ್ಯಾನಿಸಿ ಸರೀ ಉಂಡೆ.

ಅಲ್ಲಿಂದ ಮತ್ತೆ ಎಲ್ಲರೂ ಸಣ್ಣಕ್ಕೆ ವಿರಾಮ ತೆಕ್ಕೊಂಡು ಬಂಡೆ ಕಲ್ಲಿಂದ ಬಳ್ಳಿ ಹಿಡ್ಕೊಂಡು ಇಳಿವ ಸಾಹಸಕ್ಕೆ ಮನಸು ಗಟ್ಟಿ ಮಾಡಿಗೊಂಡೆಯೋ.
ಎಷ್ಟು ಗಟ್ಟಿ ಮಾಡಿರೂ ಎಲ್ಲಿ ಬಳ್ಳಿ ತುಂಡಾಗಿ ಪಾತಾಳಕ್ಕೆ ಬೀಳುಗೋ ಹೇಳ್ತ ಹೆದರಿಕೆ.
ಅಂತೂ ನಾವು ಗಟ್ಟಿ ಮಾಡಿಗೊಂಡೇ ಬಳ್ಳಿ ತೆಕ್ಕೊಂಡೂ ಆತು ಇಳುದೂ ಆತು. ಇಳುದಪ್ಪಗ ಯೆಬೀ ಇಷ್ಟೇಯೂ ಹೇಳಿ ಆದರೂ ಒಂದು ದೊಡ್ಡ ಸಾಧನೆ ಮಾಡಿದ ಹುಳಿನೆಗೆ ಮೋರೆಲಿ.

ಅಕೇರಿಗೆ ದೇವರಿಂಗೂ, ವ್ಯವಸ್ಥಾಪಕರಿಂಗೂ, ಊರಿನೋರಿಂಗೂ ಚೆಂದಲ್ಲಿ ಸುರಕ್ಷಿತವಾಗಿ ಮುಗಿಶಿಕೊಟ್ಟದಕ್ಕೆ ಧನ್ಯವಾದ ಹೇಳಿತ್ತು.
ಎಡಿಗಾರೆ ಬೈಲಿನೋರೆಲ್ಲ ಸೇರಿ ಹೋಪ ಹೇಳ್ತ ಆಲೋಚನೆಲಿ ಬೆಂಗಳೂರಿಂಗೆ ಗಾಡಿ ಹೆರಡ್ಸಿತ್ತು.

ಬೆಂಗಳೂರಿಂದ ಮಂಚನಬೆಲೆಗೆ…, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

  1. ಚೆನ್ನೈ ಬಾವ°

    ಯೇ ಭಾವ., ನಿಂಗೊ ಹೇಳಿದಾಂಗೆ ಜಾಗೆ ಲಾಯಕ ಇದ್ದು ಮಿನಿಯಾ°
    ಮಂಚನಬೆಲಗೆ ಹೋದ್ದು ಹೇಳಿದ ಕಾರಣ ಫಟ ಎಲ್ಲಿಯಾಣದ್ದು ಹೇಳಿ ಕೇಳ್ಳೆ ಇಲ್ಲೆ. ಫಟವೂ ಲಾಯಕ ಬೈಂದು. ಸುಂದರ ಮನೋಹರ ರಮ್ಯ ದೃಶ್ಯಾವಳಿ. ‘ಮಾಮರವು ಪೂತಿದೇ…..’ ಹೇಳಿ ನೆಂಪಾತೋ ಅಲ್ಲೇ ಹೋಪಗ! ತುಳುಂಕನೆ ಹಾರುವಾಗ ಅಡಿಲಿ ಕಲ್ಲು ಇರ್ತಿದ್ದ್ರೆ?!! ನಿಂಗೊ ಬತ್ತಿ ಹೇಳಿ ಮದಲೇ ತೆಗದು ಮಡಿಗಿತ್ತವೋ?! ಪಾಂಟು ಅಂಗಿ ಹಾಕಿ ನಿಂಗೊ ಮೇಗಂದ ಲಾಗ ಹಾಕುತ್ತ ಫಟ ಎಲ್ಲಿದ್ದು??

    ಶುದ್ದಿ ಪಷ್ಟಾಯಿದು ಭಾವ.

    [Reply]

    VN:F [1.9.22_1171]
    Rating: +1 (from 1 vote)
  2. ಮುಳಿಯ ಭಾವ
    ರಘು ಮುಳಿಯ

    {ಹಳ್ಳಿಯ ನೀರು, ಕಾಡು ನೋಡದ್ದ ಪೇಟೆಯ ಜನಂಗೊಕ್ಕೆ ಇದು ಒಂದು ಅದ್ಭುತ ಜಾಗೆ.} ಏ ಚೆನ್ನಬೆಟ್ಟಣ್ಣಾ ,ರೂಪಾಯಿಗೆ ಹದಿನಾರಾಣೆ ಸತ್ಯ.
    ನೀರಾಟ ಆಡೊಗ ಆಟದ ಪದ ಯೇವದಾರೂ ನೆನಪ್ಪಾತೋ?
    ಪಟ ಲಾಯ್ಕ ಬಯಿ೦ದು.

    [Reply]

    VA:F [1.9.22_1171]
    Rating: +1 (from 1 vote)
  3. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ

    ಜಾಗೆ ಸೂಪರ್ ಇದ್ದು. ಬರದ್ದೂ ಲಾಯ್ಕಾಯ್ದು ಚೆನ್ನಬೆಟ್ಟಣ್ಣ.

    [Reply]

    VA:F [1.9.22_1171]
    Rating: +1 (from 1 vote)
  4. ಬೊಳುಂಬು ಕೃಷ್ಣಭಾವ°
    ಬೊಳುಂಬು ಕೃಷ್ಣಭಾವ°

    ಚೆನ್ನಬೆಟ್ಟಣ್ಣ ಪಟ ತೆಗೆತ್ತ ಚೆಂದ ಹತ್ತರಂದ ನೋಡಿರೆ ಮಾಂತ್ರ ಗೊಂತಕ್ಕಷ್ಟೆ. ಆನು ಒಂದರಿ ರಂಗನತಿಟ್ಟಿಂಗೆ ಹೋದಿಪ್ಪಗ ನೋಡಿದ್ದು ನೆಂಪಿದ್ದು.
    ಎಡಿಗಾರೆ ಬೈಲಿನೋರೆಲ್ಲ ಸೇರಿ ಹೋಪ ಹೇಳ್ತ ಆಲೋಚನೆ ಆಗದ್ದೆ ಇಲ್ಲೆ.

    [Reply]

    VN:F [1.9.22_1171]
    Rating: +1 (from 1 vote)
  5. ಪೆರ್ಮುಖ ಈಶ್ವರ ಭಟ್ಟ.

    ಲೇಖನ ಓದಿ ಪ್ರವಾಸ ಹೋದ ಹಾಂಗೆ ಆತು.

    [Reply]

    VA:F [1.9.22_1171]
    Rating: +1 (from 1 vote)
  6. ಬೊಳುಂಬು ಮಾವ°
    ಬೊಳುಂಬು ಮಾವ

    ಚೆಂದದ ಜಾಗೆ. ಚೆಂದದ ಫೊಟೊಂಗೊ. ಚೆಂದದ ಲೇಖನ. ಮಂಚನಬೆಲೆಯ ಚಿತ್ರಂಗೊ, ಕುಂಚಲ್ಲಿ ಬಿಡುಸಿದ ಹಾಂಗಿದ್ದು. ಪ್ರವಾಸ ಕಥನ ಒದಗುಸಿದ ಚೆನ್ನ ಬೆಟ್ಟಣ್ಣಂಗೆ ಧನ್ಯವಾದ.

    [Reply]

    VA:F [1.9.22_1171]
    Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಸರ್ಪಮಲೆ ಮಾವ°ಸುಭಗಬಟ್ಟಮಾವ°ಗಣೇಶ ಮಾವ°ಪೆರ್ಲದಣ್ಣಕಜೆವಸಂತ°ಅಜ್ಜಕಾನ ಭಾವನೆಗೆಗಾರ°ತೆಕ್ಕುಂಜ ಕುಮಾರ ಮಾವ°ಕಾವಿನಮೂಲೆ ಮಾಣಿವಿನಯ ಶಂಕರ, ಚೆಕ್ಕೆಮನೆಬೋಸ ಬಾವದೊಡ್ಡಮಾವ°ವಾಣಿ ಚಿಕ್ಕಮ್ಮಕಳಾಯಿ ಗೀತತ್ತೆಜಯಗೌರಿ ಅಕ್ಕ°ವಸಂತರಾಜ್ ಹಳೆಮನೆವಿಜಯತ್ತೆಶ್ರೀಅಕ್ಕ°ಜಯಶ್ರೀ ನೀರಮೂಲೆಅಕ್ಷರ°ಚುಬ್ಬಣ್ಣಕೆದೂರು ಡಾಕ್ಟ್ರುಬಾವ°ಅಕ್ಷರದಣ್ಣದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ