ಚಿಪ್ಪಿನ ಒಳಾಣ ಮುತ್ತುಗೊ – ಕೊಳಚ್ಚಿಪ್ಪು ಬಾವನ ಶುದ್ದಿಗೊ!

ಅದಪ್ಪು, ನಾವು ಇಷ್ಟು ಸಮೆಯ ಆದರೂ ನಮ್ಮ ಕೊಳಚ್ಚಿಪ್ಪು ಬಾವನ ಬಗ್ಗೆ ಮಾತಾಡಿದ್ದೇ ಇಲ್ಲೆ!
ನಮ್ಮ ಬೈಲಿನ ಆಚ ಕೊಡೀಲಿ ಇಪ್ಪದು ಅವರ ಮನೆ.
ಅವು ಮನೆಲಿಪ್ಪದು ಕಮ್ಮಿ ಇದಾ, ಇಂದು ಪುತ್ತೂರಾದರೆ ನಾಳೆ ಮಯಿಸೂರು, ನಾಳ್ತು ಬೆಂಗ್ಳೂರು – ಅವನ ಬಾವನ ಮನಗೆ, ಆಚ ನಾಳ್ತು ಡೆಳ್ಳಿ!!
ಮತ್ತೊಂದರಿ ಸಾಗರ, ಶಿರಸಿ! ಬಪ್ಪವಾರ ಪುಣೆ!! ಒಂದೊಂದಿನ ಪೋನು ಮಾಡಿರೆ ಒಂದೊಂದು ಊರಿನ ಹೆಸರು ಹೇಳ್ತವು.
ಹಾಂಗಾಗಿ ನಮ್ಮ ಬೈಲಿಂಗೆ ಮಾತಾಡುಸುಲೆ ಸಿಕ್ಕುದೇ ಅಪುರೂಪ!

ಪ್ರಯಾಣದ ಬಗೆಗೆ ತುಂಬಾ ಒಲವು. ಅದು ಎಡಕುಮೇರಿಗೆ ಹೋವುತ್ತದು ಆಯಿಕ್ಕು, ಕುಮಾರಪರುವತ ಹತ್ತುದಾಯಿಕ್ಕು – ಎಂತಾರು ಹೀಂಗೇ!
ಪ್ರಯಾಣಲ್ಲಿ ಏಕಾಂತತೆ ಇರ್ತು. ಏಕಾಂತತೆಲಿ ಚಿಂತನೆ ಇರ್ತು. ಚಿಂತನೆಲಿ ಸತ್ವ ಇರ್ತು! – ಹೇಳುಗು ಅವು!!
ಅವರ ಚಿಂತನೆಗಳ ಬರೆತ್ತ ಗುಣ ಅಂದೇ ಇದ್ದು ಅವಕ್ಕೆ. ಮೂರು ನಾಲ್ಕೊರಿಶ ಮದಲಿಂಗೇ ಅವು ಅದೆಂತದೋ – ಬ್ಲೋಗು (sanathk.blogspot.com) ಸುರುಮಾಡಿದ್ದವಡ.
ಇಂಟರುನೆಟ್ಟಿಲಿ ಕಾಣ್ತ ನಮುನೆದು!
ಶಾಲಗೆ ಹೋಪಗಳೇ ಬರಗಡ, ಶುಬತ್ತೆಯ ಮಗನಹಾಂಗೆ ಏಬೀಸೀಡಿ ಮಾಂತ್ರ ಅಲ್ಲ, ಬೇರೆಂತಾರು!
ಈಗಳೂ ಅದೇ ಗುಣ ಇದ್ದು, ಹೋದಲ್ಲೆಲ್ಲ ಎಂತಾರು ಬರೆತ್ತವು.

ಅವು ಮಾತಾಡುದುದೇ ಹಾಂಗೇ, ಯೇವದೇ ವಿಶ್ಯ ಇರಳಿ – ಅವಕ್ಕೆ ಅರಡಿಗು.
ಇಪ್ಪತ್ತು ರುಪಾಯಿಯ ಮಸಾಲೆದೋಸೆಂದ ಹಿಡುದು, ಅಮೇರಿಕಲ್ಲಿಪ್ಪ – ಮಾಷ್ಟ್ರುಮಾವನ ಮಗನ ಇನ್ನೂರು ಡೋಲರಿನ ಕೆಮರದ ಒರೆಂಗೆ – ಎಲ್ಲವುದೇ ಅರಡಿಗು!

ಒಳ್ಳೆತು ಕುಶಾಲುದೇ ಇದ್ದು ಅವಕ್ಕೆ.
ಕುಶಾಲಿನವು ಸಿಕ್ಕಿರೆ ಒಳ್ಳೆತ ಬಿಂಗಿಯುದೇ ಮಾತಾಡುಗು, ಒಪ್ಪಕ್ಕನ ಕೈಂದ ಯೇವತ್ತುದೇ ಬೈಗಳು ತಿಂದೋಂಡೇ ಇಪ್ಪದು ಕೊಶಿ ಅವಕ್ಕೆ!

ಇರಳಿ, ನಮ್ಮ ಬೈಲಿಂಗೆ ಬಯಿಂದವು. ನಮ್ಮ ಬಾಶೆಲಿ ಶುದ್ದಿ ಹೇಳ್ತವಡ.
ಅವು ತುಂಬ ಪುಸ್ತಕ ಓದಿದ್ದವಲ್ಲದೋ – ಅದರ ಬಗೆಗೆ ಹೇಳ್ತವಡ, ನಮ್ಮ ಬೈಲಿನ – ಎಂತಾ ಸಂಣ ಮಕ್ಕೊಗೂ ಅರ್ತ ಅಪ್ಪ ಹಾಂಗೆ!
ಚಿಪ್ಪಿನ ಒಳಾಣ ಮುತ್ತಿನ ಹಾಂಗೆ ಇಕ್ಕು ಅವರ ಒಂದೊಂದು ಶುದ್ದಿಗಳುದೇ!
ಕೊಳಚ್ಚಿಪ್ಪು ಬಾವನ ಶುದ್ದಿಗಳ ಕೇಳುವೊ°.
ಕೊಶಿ ಆದರೆ ಒಪ್ಪ ಕೊಡುವೊ°..
ಆಗದೋ? ಏ°?
~
ಒಪ್ಪಣ್ಣ

ಕೊಳಚ್ಚಿಪ್ಪು ಬಾವನ ಶುದ್ದಿಗೊ, ಸದ್ಯಲ್ಲೇ ಈ ಅಂಕಣಲ್ಲಿ ಸುರು ಆವುತ್ತು!

Admin | ಗುರಿಕ್ಕಾರ°

   

You may also like...

2 Responses

 1. ದಾರಿ ನೋಡ್ತಾ ಇದ್ಯಾ….

  • ಗುರಿಕ್ಕಾರ° says:

   ಓ! ಮಾತಾಡ್ತ ದಿವ್ಯಕ್ಕಾ..!!
   ಕೊಳಚ್ಚಿಪ್ಪು ಬಾವ ಬಯಂಕರ ಪಾಷ್ಟಲ್ಲದೋ – ಅವು ಅದಾಗಲೇ ಶುದ್ದಿ ಹೇಳುಲೆ ಸುರು ಮಾಡಿ ಆಯಿದನ್ನೇ!!
   ನಿಂಗೊ ನೋಡೆಕ್ಕಷ್ಟೆಯೋ ಅಂಬಗ?
   ಇದಾ: ಇಲ್ಲಿದ್ದು –

   http://oppanna.com/lekhana/chippu-muttu

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *