Oppanna.com

ವಿಕ್ಟೋರಿಯಾ ಗೌರಮ್ಮನ ಕತೆ

ಬರದೋರು :   ಕೊಳಚ್ಚಿಪ್ಪು ಬಾವ    on   09/03/2010    9 ಒಪ್ಪಂಗೊ

ಕೊಳಚ್ಚಿಪ್ಪು ಬಾವ

‘ಮಡಿಕೇರಿಲಿ ಇಪ್ಪ ಓಂಕಾರೇಶ್ವರ ದೇವಸ್ಥಾನವ ಕಟ್ಟಿಸಿದ ರಾಜ ಮನೆತನದವು ಎಂತಾದವು ಹೇಳ್ತ ಸುದ್ದಿ ಗೊಂತಿಲ್ಲೆ’  ಹೇಳಿ ಒಪ್ಪಣ್ಣ ಫೋನಿಲಿ ಮಾತಾಡುವಾಗ ಹೇಳಿದ..
ಆಗ ಎನಗೆ ನೆಂಪಾದ್ದು ಎರಡು ವಾರದ ಮೊದಲು ಪುಸ್ತಕದಂಗಡಿಲಿ ನೋಡಿದ ಸಿ.ಪಿ.ಬೆಳ್ಳಿಯಪ್ಪ ಬರೆದ “Victoria Gowramma, the Lost Princess of Coorg” (ವಿಕ್ಟೋರಿಯಾ ಗೌರಮ್ಮ – ಕೊಡಗಿನ ಕಳೆದುಹೋದ ರಾಜಕುಮಾರಿ ) ಪುಸ್ತಕ.
ಮಾರನೇ ದಿನವೇ ಹೋಗಿ ಆ ಪುಸ್ತಕ ತಂದೆ.
1600 ರಿಂದ ಕೊಡಗಿನ ಆಳ್ತಾ ಇದ್ದ ಇಕ್ಕೇರಿ ರಾಜಮನೆತನದ ರಾಜ ಚಿಕ್ಕವೀರರಾಜೇಂದ್ರ ಓಡೆಯರ್ ನ 1834ರಲ್ಲಿ ಬ್ರಿಟಿಷ್ ಕಂಪನಿ ದುರಾಡಳಿತದ (ನಿಜವಾಗಿಯು ದುರಾಡಳಿತ ಮಾಡಿಯೊಂಡು ಇತ್ತಿದ್ದಡ.) ಕಾರಣ ಕೊಟ್ಟು ಅವನ ರಾಜ್ಯಂದ ಹೆರ ಗಡಿಪಾರು ಮಾಡಿಕಳ್ಸುತ್ತು.
ಮೊದಲು ವೆಲ್ಲೂರಿಲಿ ಒಂದು ವರ್ಷ ಇದ್ದು ಮತ್ತೆ ಬನಾರಸ್ (ಕಾಶಿ) ಗೆ ರಾಜಕುಟುಂಬ ಹೋವುತ್ತು. ಕಾಶಿಲಿ 1841 ಜುಲಾಯಿ 4 ಕ್ಕೆ ಚಿಕ್ಕವೀರರಾಜೇಂದ್ರನ ಹೆಂಡತಿಯರು ಗಂಗಮ್ಮ ಮತ್ತೆ ಗೌರಮ್ಮ ಹೇಳ್ತ ರಾಜಕುಮಾರಿಯರ ಹೆರ್ತವು.
ಗೌರಮ್ಮನ ಅಬ್ಬೆ ಹೆರಿಗೆ ಹೊತ್ತಿಲಿ ಸತ್ತು, ಇನ್ನೊಂದು ರಾಣಿ ಸುಭದ್ರಮ್ಮ (ಗಂಗಮ್ಮನ ಅಬ್ಬೆ) ಅದರ ನೋಡಿಕೊಂಬಲೆ ಶುರುಮಾಡ್ತು.
ವೀರರಾಜ ನ ದೊಡ್ಡಪ್ಪ ದೊಡ್ಡವೀರರಾಜೇಂದ್ರನ ಕಾಲಲ್ಲಿ ಅವ ಕಂಪನಿಗೆ 8ಲಕ್ಷ ಕೊಟ್ತಿರ್ತ. ಅದರ ಬಡ್ಡಿಯ ಕಂಪನಿ 1833ರಿಂದ ಕೊಟ್ಟಿದಿಲ್ಲೆ, ಅಸಲು-ಬಡ್ಡಿ ಎಲ್ಲ ಸೇರಿ 12 ಲಕ್ಷ ಅವಂಗೆ ಸಿಕ್ಕೆಕ್ಕು ಹೇಳಿ ವೀರರಾಜ ಕಂಪನಿಯ ಎಲ್ಲಾ ಗವರ್ನರ್ ಜನರಲ್ ಗೊಕ್ಕೆ ಪತ್ರ ಬರೆತ್ತ.
ಸುಮಾರು ವರ್ಷ ಪತ್ರ ಬರೆದರೂ ಉತ್ತರ ಸಿಕ್ಕುತ್ತಿಲ್ಲೆ. 1848ರಲ್ಲಿ ವೀರರಾಜಂಗೆ ಜೆಫರಸನ್ ಹೇಳ್ತ ಬ್ರಿಟಿಷ್ ಡಾಕ್ತರ್ ಲಂಡನಿಗೆ ಹೋಗಿ ಚಾನ್ಸಿಲರಿ ಕೋರ್ಟಿಲಿ ನಂಬ್ರ ಬರಶಿರೆ (ಕೇಸ್ ಹಾಕಿರೆ) ಪೈಸೆ ಸಿಕ್ಕುಗು ಆದರೆ ಅಲ್ಲಿ ನಂಬ್ರ ಬರಶುಲೆ ಸ್ವತ: ಫಿರ್ಯಾದಿದಾರ ಇರೆಕ್ಕು ಹೇಳ್ತ.
ವೀರರಾಜ ಪಾಪ ‘ಬ್ರಿಟಿಷ್ ಒಪ್ಪಿಗೆ ಇಲ್ಲದ್ದೆ ಅವನ ಅರಮನೆಯಿಂದ ಹೆರ ಹೋಪಲೆ ಆಗ’ ಹೇಳ್ತ ಸಮಯಲ್ಲಿ ‘ಆನು ನಿಂಗಳ ವಿರುದ್ದ ನಂಬ್ರ ಬರಷುತ್ತೆ’ ಹೇಳಿರೆ ಯಾರಾರು ಅವನ ಹೋಪಲೆ ಬಿಡುಗಾ?
ಆಗ ಅವಂಗೆ ಅದೇ ಡಾಕ್ಟ್ರು ಜೆಫರಸನ್ ನಿನ್ನ ಮಗಳು ಈಗಲೇ ಇಂಗ್ಲೀಷು ಕಲ್ಥಿದು ಅದಕ್ಕೆ ಕ್ರಿಶ್ಚಿಯನ್ ವಿದ್ಯಾಭ್ಯಾಸ ಕೊಡೆಕ್ಕು. ಅದಕ್ಕೆ ಅದರ ಲಂಡನಿಗೆ ಕರಕ್ಕೊಂಡು ಹೋವುತ್ತೆ ಹೇಳು, ಯಾರು ಬೇಡ ಹೇಳಿ ಹೇಳವು ಹೇಳಿ ಕೆಣಿ ಹೇಳ್ತ.
ಅದನ್ನೆ ವೀರರಾಜ ಗವರ್ನರ್ ಜನರಲ್ ಡಾಲ್ ಹೌಸಿಗೆ ಬರೆತ್ತ. ಇದೇ ಹೊತ್ತಿಂಗೆ ಪಂಜಾಬಿನ ರಾಜಕುಮಾರ ದುಲೀಪ ಸಿಂಹನ 5 ವರ್ಷ ಪ್ರಾಯಕ್ಕೆ ಅವನ ಅಬ್ಬೆಂದ ಬೇರೆ ಮಾಡಿ ಅವಂಗೆ ಇಂಗ್ಲೀಷು ವಿದ್ಯಾಭ್ಯಾಸ ಕೊಡ್ಲೆ ಶುರುಮಾಡ್ತವು.
ಆ ದುಲೀಪ ಸಿಂಹ ಆನು ಕ್ರಿಶ್ಚಿಯನ್ ಆವುತ್ತೆ ಹೇಳ್ತ.ಬ್ರಿಟಿಷರ ತೆಲೆಲಿ ಒಂದು ಕೆಣಿ ಬತ್ತು. ಪಂಜಾಬದ ರಾಜಕುಮಾರ ದುಲೀಪ ಸಿಂಹ ಮತ್ತೆ ಕೊಡಗಿನ ರಾಜಕುಮಾರಿ ಗೌರಮ್ಮ ಕ್ರಿಶ್ಚಿಯನ್ ಆದಮೇಲೆ ಅವರ ಮದುವೆ ಮಾಡ್ಸಿರೆ, ಅದು ಬೇರೆ ರಾಜರು ಕ್ರಿಶ್ಚಿಯನ್ ಆಗಿ ಮತಾಂತರ ಅಪ್ಪಲೆ ಸಹಾಯ ಅಕ್ಕು,ಅವರೊಟ್ಟಿಂಗೆ ರಾಜ್ಯದ ಜೆನಂಗೊದೆ ಕ್ರಿಶ್ಚಿಯನ್ ಆಗಿ ಮತಾಂತರ ಅಕ್ಕು.ಭಾರತದ ಕ್ರಿಶ್ಚಿಯನೀಕರಣ ಆದರೆ ಆಡಳಿತ ಸುಲಭ ಆವ್ತು.
1852 ರಲ್ಲಿ ವೀರರಾಜ ಅವನ ಎರಡು ರಾಣಿಯರು,ಮಗಳು ಗೌರಮ್ಮನ ಕಟ್ಟಿಯೊಂಡು ಲಂಡನಿಗೆ ಹೆರಡ್ತ. ಲಂಡನಿಗೆ ಹೋದ ಮತ್ತೆ ವೀರರಾಜ , ಗೌರಮ್ಮ ಇಂಗ್ಲೆಂಡಿನ ರಾಣಿ ವಿಕ್ಟೋರಿಯಾನ ಭೇಟಿ ಮಾಡ್ತವು.
ಗೌರಮ್ಮನ ಕಂಡ ಕೂಡಲೇ ರಾಣಿಗೆ ಇಷ್ಟ ಆವುತ್ತು. ಅದರ ಕ್ರಿಶ್ಚಿಯನ್ ಅಪ್ಪ ಬಾಪ್ಟಿಸಮ್ ಜೆಂಬರಕ್ಕೆ ಸ್ವತಃ ರಾಣಿಯೇ ಬತ್ತು. ಬಂದು ಅದಕ್ಕೆ ವಿಕ್ಟೋರಿಯಾ ಗೌರಮ್ಮ ಹೇಳಿ ನಾಮಕರಣ ಮಾಡಿ ಬಂಗಾರದ ಪಟ್ತಿ ಇಪ್ಪ ಬೈಬಲಿನ ಒಲಿಪ್ಪೆ(ಉಡುಗೊರೆ) ಕೊಡ್ತು..
ಹೀಂಗೆ ವಿಕ್ಟೋರಿಯಾ ಗೌರಮ್ಮ ಭಾರತಂದ ಇಂಗ್ಲೆಂಡಿಂಗೆ ಬಂದ ಮೊದಲ ರಾಜಕುಮಾರಿ, ಸ್ವ ಇಚ್ಚೆಂದ ಕ್ರಿಶ್ಚಿಯನ್ ಆದ ಮೊದಲ ಭಾರತೀಯ ರಾಜಕುಮಾರಿ ಆವ್ತು.
ವಿಶೇಷ ಹೇಳಿರೆ ವೀರರಾಜನ 6 ಗಂಡು 4ಹೆಣ್ಣು ಮಕ್ಕಳಲ್ಲಿ ಗೌರಮ್ಮ ಮಾತ್ರ ಕ್ರಿಶ್ಚಿಯನ್ ಆಗಿ ಮತಾಂತರ ಆವ್ತು, ಬೇರೆಯವೆಲ್ಲ ಹಿಂದುಗಳೇ ಆಗಿರ್ತವು.

ವಿಕ್ಟೋರಿಯಾ ಗೌರಮ್ಮ - ಕಳದು ಹೋದ ಕೊಡಗಿನ ರಾಜಕುಮಾರಿ
ವಿಕ್ಟೋರಿಯಾ ಗೌರಮ್ಮ - ಕಳದು ಹೋದ ಕೊಡಗಿನ ರಾಜಕುಮಾರಿ

ಗೌರಮ್ಮ ಕ್ರಿಶ್ಚಿಯನ್ ಆದಮೇಲೆ ಅದರ ಬ್ರಿಟಿಷ್ ದಂಪತಿಗೊಕ್ಕೆ ನೋಡಿಯೊಂಡು ಅದಕ್ಕೆ ಕ್ರಿಶ್ಚಿಯನ್ ವಿದ್ಯಾಬ್ಯಾಸ ಕೊಡ್ಸಲೆ ರಾಣಿಯ ಅಪ್ಪಣೆ ಆವುತ್ತು.
ಅದರ ಸ್ಕಾಟ್ ಲ್ಯಾಂಡಿಂಗೆ ಕರಕ್ಕೋಂಡು ಹೋಗಿ ಅದರ ಕ್ರಿಶ್ಚಿಯನ್ ವಿದ್ಯಾಬ್ಯಾಸ ಶುರು ಆವುತ್ತು. ವೀರರಾಜ ಚಾನ್ಸಿಲರಿ ಕೋರ್ಟಿಲಿ ನಂಬ್ರ ಬರಶುತ್ತ.
ಈ ಮಧ್ಯೆ ದುಲೀಪ ಸಿಂಹ ಗೌರಮ್ಮನ ಮಾತಾಡುಸುತ್ತ, ಪರಸ್ಪರ ಪರಿಚಯವೂ ಅವುತ್ತು.
ಆದರೆ ದುಲೀಪ ಸಿಂಹ ‘ಆನು ಮದುವೆ ಆದರೆ ಬೆಳಿ ಕೂಸಿನನ್ನೆ ಅಪ್ಪದು, ಭಾರತದ ಕೂಸಿನ ಆಗೆ’ ಹೇಳ್ತ. ಅಲ್ಲಿಗೆ ಬ್ರಿಟೀಷರ ರಾಜಮನೆತನಂಗಳ ಮತಾಂತರದ ಕೆಣಿ ಮುರುದು ಬೀಳ್ತು.
ರಾಣಿ ವಿಕ್ಟೋರಿಯಾ ‘ಹಾಂಗಾರೆ ಗೌರಮ್ಮನ ಮದುವೆ ಯಾರಾದ್ರು ಬ್ರಿಟಿಷ್ ಮಾಣಿಯೊಟ್ಟಿಂಗೆ ಮಾಡ್ಸಿ’ ಹೇಳ್ತು.
1859ಕ್ಕೆ ವೀರರಾಜನ ಆರೋಗ್ಯ ಕೆಡ್ತು. ಅವ ಮಗಳ ನೋಡೆಕ್ಕು ಹೇಳಿ ಮಗಳ ಅವನ ಲಂಡನಿನ ಮನೆಗೆ ಕರುಶುತ್ತ.
ಆ ದಿನ ಮಾತಾಡ್ಸಲೆ ಹೆರಟಾಗ ಅವಂಗೆ ಗೊಂತಾವುತ್ತು, ಈ ಕ್ರಿಶ್ಚಿಯನ್ ವಿದ್ಯಾಬ್ಯಾಸದ ಕಾರಣ ಗೌರಮ್ಮಂಗೆ ಕನ್ನಡ ಮರತ್ತೋಯಿದು, ಅದು ಈಗ ಬರೆ ರೂಪಲ್ಲಿ ಭಾರತೀಯ, ಬೇರೆ ಎಲ್ಲಾದ್ರಲ್ಲು ಬ್ರಿಟೀಷ್ ಹೇಳಿ.
ಅವನ ಕೋರ್ಟಿನ ನಂಬ್ರದ ಇತ್ಯರ್ಥ್ಸದ ಮೊದಲೇ ವೀರರಾಜ 1859ಕ್ಕೆ ಲಂಡನಿಲಿ ಪ್ರಾಣ ಬಿಡ್ತ. ಅದಕ್ಕೆ ಮೊದಲು ಗೌರಮ್ಮಂಗೆ ಚೀಲಲ್ಲಿ ತುಂಬ್ಸಿ ಲಕ್ಷಾಂತರ ಬೆಲೆಬಾಳುವ ಆಭರಣಗಳ ಕೊಡ್ತ.
ಗೌರಮ್ಮ ಕರ್ನಲ್ ಕ್ಯಾಂಪಬೆಲ್ ಹೇಳ್ತ ಬ್ರಿಟೀಷ್ ಸೈನ್ಯಾಧಿಕಾರಿಯ ಮದುವೆ ಆವುತ್ತು. ಅವಕ್ಕೆ ಎಡಿತ್ ವಿಕ್ಟೋರಿಯಾ ಗೌರಮ್ಮ ಕ್ಯಾಂಪಬೆಲ್ ಹೇಳ್ತ ಮಗಳು ಹುಟ್ಟುತ್ತು.
ವೀರರಾಜನ ಕೋರ್ಟಿನ ನಂಬ್ರದ ಇತ್ಯರ್ಥ್ಸ ಆಗಿ, ಆ ಪೈಸೆ ಕೊಡಗಿನ ಜೆನಕ್ಕೆಸೇರಿದ್ದು ಹೇಳಿ ತೀರ್ಪು ಬತ್ತು. ಇದು ಆದ ಮೇಲೆ ಕರ್ನಲ್ ಕ್ಯಾಂಪಬೆಲ್ ಗೆ ಗೌರಮ್ಮನ ಬಗ್ಗೆ ಆಸಕ್ತಿ ಕಳಕೊಳ್ತ.
ಅವ ಕೆಟ್ಟ ಅಭ್ಯಾಸಲ್ಲಿ ಪೈಸೆ ಕಳವಲೆ ಶುರುಮಾಡ್ತ. 1864ರಲ್ಲಿ ಅದರ 22ರ ಪ್ರಾಯಲ್ಲಿ ವಿಕ್ಟೋರಿಯಾ ಗೌರಮ್ಮ ಕ್ಷಯರೋಗಕ್ಕೆ ಬಲಿಯಾವುತ್ತು.
1867ರಲ್ಲಿ ಕರ್ನಲ್ ಕ್ಯಾಂಪಬೆಲ್ ನಿಗೂಢ ರೀತಿಲಿ ಕಾಣೆಆವುತ್ತ.
ಅವನೊಟ್ಟಿಂಗೆ ಕೊಡಗಿನ ರಾಜಮನೆತನದ ಬೆಲೆಬಾಳುವ ಆಭರಣಂಗೋದೆ!!
ಇಗಳುದೇ ಆ ಆಭರಣಂಗೋ ಎಲ್ಲಿ ಕಣ್ಮರೆ ಆತು ಹೇಳುದು ರಹಸ್ಯ ಆಗಿಯೇ ಇದ್ದು.
ಈ ರೀತಿ ಜೀವಮಾನಲ್ಲಿ ಕೊಡಗು ನೋಡದ್ದ ಕೊಡಗಿನ ರಾಜಕುಮಾರಿಯ ಕತೆ ಮುಗಿತ್ತು,
ಸಿ.ಪಿ.ಬೆಳ್ಳಿಯಪ್ಪ ಈ ಪುಸ್ತಕವ ಕತೆ ಪುಸ್ತಕದ ಹಾಂಗೆ ಓದಿಸಿಕೊಂಡು ಹೋಪ ರೀತಿಲಿ ಬರದ್ದ.
ಎಲ್ಲಿಯೂ ಸತ್ಯವಸ್ತುವಿಂಗೆ ಧಕ್ಕೆ ಬಾರದ್ದ ಹಾಂಗೆ.  ಇಲ್ಲಿ ಅವರ ಹೊಗಳೆಕ್ಕಾದ್ದು ಈ ಪುಸ್ತಕಲ್ಲಿ ಇಪ್ಪ ವಿಷಯಂಗಳ ಸಂಗ್ರಹಕ್ಕೆ.
ಎಲ್ಲಾ ಮುಖ್ಯ ಪತ್ರ ವ್ಯವಹಾರದ ಪತ್ರಂಗೋ, ಅಪರೂಪದ ಪಟಂಗೋ. ಸುಮಾರೆಲ್ಲ ನಾವು ಇಷ್ಟರ ವರೆಗೆ ನೋಡದ್ದು. ಈ ವಿಷಯದ ಬಗ್ಗೆ ಇಷ್ಟು ತುಂಬಾ ಮಾಹಿತಿ ಸಂಗ್ರಹಣೆ ಮಾಡುದು ಸಾಮಾನ್ಯ ಕೆಲಸ ಅಲ್ಲ ಅದರ ಮೆಚ್ಚೆಕ್ಕು.
ಎಲ್ಲಿಯಾದ್ರು ಈ ಪುಸ್ತಕ ಸಿಕ್ಕಿರೆ ಓದಿ. ನಮ್ಮ ಇತಿಹಾಸಲ್ಲಿ ನವಗೆ ಈ ವರೆಗೆ ಗೊಂತ್ತಿಲ್ಲದ್ದ ವಿಷಯದ ಬಗ್ಗೆ ಬರೆದ ಅಪರೂಪದ ಪುಸ್ತಕ.
ಈ ಪುಸ್ತಕಕ್ಕಾಗಿ ಸಿ.ಪಿ.ಬೆಳ್ಳಿಯಪ್ಪಂಗೆ ಒಂದು ಧನ್ಯವಾದ ಹೇಳೆಕ್ಕಾದ್ದೆ.
ಗೌರಮ್ಮನ ದೇಹ ಹೂತ ಜಾಗೆಲಿ ಸ್ಮಾರಕಕ್ಕೆ ವಿಕ್ಟೋರಿಯಾ ರಾಣಿಯೇ ಸ್ವತಃ ಬರೆಯಕ್ಕಾದ ವಾಕ್ಯಂಗಳ ನೋಡಿ ಒಪ್ಪಿಗೆ ಕೊಡ್ತು.
ಆ ವಾಕ್ಯಂಗೋ ಮುಗಿವದು ಹೀಂಗೆ : other sheep I have, which are not of this fold: (John 10:16). (ಇಷ್ಟು ಒಳ್ಳೆಯವು ಯಾರು ಇನ್ನು ಯಾರು ಎನ್ನ ಹತ್ರ ಇಲ್ಲೆ).
ಇದು ರಾಣಿಗೆ ಗೌರಮ್ಮನ ಮೇಲೆ ಇದ್ದ ಪ್ರೀತಿಯ ತೋರ್ಸುತ್ತೋ ಅಥವಾ ವಿಕ್ಟೋರಿಯಾ ಗೌರಮ್ಮನ ಮತ್ತೆ ಬೇರೇ ಯಾರೂ ರಾಜ ಮನೆತನದವು ಆ ದಾರಿ ಹಿಡಿದಿಲ್ಲೇ ಹೇಳುದರ ಸೂಚ್ಯವಾಗಿ ತೋರ್ಸುತ್ತೋ ಹೇಳುವುದು ನಮ್ಮ ನಮ್ಮ ಯೋಚನೆಗೆ ಬಿಟ್ಟದ್ದು.

9 thoughts on “ವಿಕ್ಟೋರಿಯಾ ಗೌರಮ್ಮನ ಕತೆ

  1. ಈ ಕತೆ೦ದ ಆಗಿ ಒ೦ದಾರಿ ಮಡಿಕೇರಿ ಭಾವನ ಕಾಣೇಕು ಹೇಳಿ ಆವುತ್ತಾ ಇದ್ದು.ಅವರತ್ರೆ ಹಿ೦ಗಿರ್ತ ವಿಷಯದ ಸ೦ಗ್ರಹವೇ ಇದ್ದು.ಅವ್ವು ಬೆರೆ ಆರೂ ಅಲ್ಲ ಜಿ.ಟಿ.ನಾರಾಯಣ ರಾಯರ ತಮ್ಮ ರಾಘವೇ೦ದ್ರ.ವಿಶೇಷ ವಿಷಯ ಗೊ೦ತಾದರೆ ಬಯಲಿ೦ಗೆ ತಿಳುಸುತ್ತೆ.ಒಪ್ಪ೦ಗಳೊಟ್ಟಿ೦ಗೆ

  2. ದಿ. ಜಿ ಟಿ ನಾರಾಯಣ ರಾವ್ ಬರೆದ ‘ಕೊಡಗಿನ ಕಥೆಗಳು’/ವನಸುಮ’ ದಲ್ಲಿ ಈ ಗೌರಮ್ಮನ ಕುರಿತಾಶದ ಸುಂದರ ಕಥೆ ಇದೆ. ಅತ್ರಿ ಬುಕ್ ಹೌಸ್, ಮಂಗಳೂರಿನ ಮಾಲೀಕ ಅಶೋಕವರ್ಧನನ ಹತ್ತಿರ ವಿಚಾರಿಸಿದರೆ ಪುಸ್ತಕದ ಲಭ್ಯತೆಯ ಕುರಿತಾದ ಮಾಹಿತಿ ದೊರೆಯಬಹುದು. ವನಸುಮ ನನಗೆ ಪ್ರೌಢಶಾಲೆಯ ಮೊದಲನೇ ವರ್ಷ ಪಠ್ಯಪುಸ್ತಕವಾಗಿತ್ತು. ಈಕೆ ನಮ್ಮ ಕುಟುಂಬದವಳು.

    1. ಮಾಹಿತಿಗಾಗಿ ಧನ್ಯವಾದಗಳು.
      ಈ ಪುಸ್ತಕದ ಬಗ್ಗೆ ಅಶೋಕವರ್ಧನರ ಬಳಿ ಖಂಡಿತಾ ವಿಚಾರಿಸುತ್ತೇನೆ.

  3. ಲೇಖನ ಲಾಯ್ಕ ಇದ್ದು, ಹೀಂಗೇ ನವಗೆ ಗೊಂತಿಲ್ಲದ್ದ ಸಾವಿರಾರು ಕಥೆಗೊ(ಇತಿಹಾಸ) ಇದ್ದು… ಅದರ ಎಲ್ಲ ನವಗೆ ತಿಳ್ಕೊಂಬಲೆ ಎಡಿಗಾರೆ ತುಂಬಾ ಒಳ್ಳೆದು.

  4. ಏ ಕೊಳಚ್ಚಿಪ್ಪು ಬಾವ,
    ಎನಗೆ ಮಡಿಕೇರಿ ನಡುಕೆರೆಯ ದೇವಸ್ಥಾನಲ್ಲಿ “ಬರ್ಲಾಯಬೆಟ್ಟು ಮಾವ” ಇಪ್ಪದೊಂದು ಗೊಂತಿತ್ತು.
    ಈ ಶುದ್ದಿ ಎಲ್ಲ ಗೊಂತೇ ಇತ್ತಿಲ್ಲೆ! ಈಗ ಗೊಂತಾತು ಇದಾ,ನಿನ್ನ ಶುದ್ದಿ ಕೇಳಿ..!
    ಒಳ್ಳೆದಾತು ಬರದ್ದು. ನಮ್ಮ ಬೈಲಿಂಗೂ ರಜ್ಜ ಹೊಸ ಮಾಹಿತಿಗೊ ಸಿಕ್ಕಿದ ಹಾಂಗಾತಿದಾ..!
    ಒಳ್ಳೆದಾಯಿದು. ಇನ್ನುದೇ ಬೇರೆ ಹೊಸ ಹೊಸ ಶುದ್ದಿಗಳ ಹೇಳು.
    ಕಾದೊಂಡಿದ್ದೆಯೊ°..

  5. ಸನತ್ತಣ್ಣ ಲಾಯಿಕಾಯಿದು ಬರದ್ದದು…
    ಇದು.. ಲೈಕ್ ಪಾರ್ಟ್ ಆಫ್ “ಮಾಸ್ತಿ”ಅವರ “ಚಿಕ್ಕವೀರ ರಾಜೇಂದ್ರ”.. ಆಗಿಪ್ಪಾಂಗೆ ಇದ್ದು…
    ಅದರಲ್ಲಿ ಎಲ್ಲಾ ಪೂರ್ತಿ ವಿವರವಾಗಿದ್ದು..

  6. ಅವರ ಕಥೆ ಎಂತಾತು ಹೇಳಿ ಯಾರಿಂಗೂ ಗೊಂತಿಲ್ಲೆ. ಕೊಡಗಿನ ರಾಜನ ವಾರಸುದಾರರು ಯಾರು ಹೇಳಿ ಕೊಂಡ ಸುದ್ದಿಯು ಇಲ್ಲೆ.
    ಅವು ಕಾಶಿಲೆ ಇದ್ದು ,ಆಲಿಯವೇ ಆಗಿ ಮರೆ ಆದವು ಹೇಳಿ ಪುಸ್ತಕಲ್ಲಿ ಬರದ್ದು.

  7. ಗೊಂತಿಲ್ಲದ್ದ ಕಥೆ ಒಂದು ಗೊಂತಾತು.
    ಅಂಬಗ, ಆ ರಾಜಮನೆತನದವು ಕಾಶಿಲ್ಲಿ ಬೆಳದವೋ? ಅವರ ಕಥೆ ಮತ್ತೆ ಎಂತಾತು?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×