ಹೃದಯ ವೈದ್ಯನ ಕಂಪೂಟರಿನ ಹೃದಯ ಬಡಿತ ನಿಲ್ಸುಲುದೇ ಫೀಸೇ…..!!!!

ಅವನ ಹೆಸರು. . .  ಬಿಡಿ ಹೆಸರಿಲೆಂತರ ಇದ್ದು!
ಸದ್ಯಕ್ಕೆ ಲೆಕ್ಕದ ಮಾಷ್ಟ್ರಕ್ಕ ಹೇಳುವ ಹಾಂಗೆ “Mr.X” ಹೇಳಿ ಮಡುಗುವ..

ಅವ ಒಬ್ಬ ಪ್ರಖ್ಯಾತ ಹೃದಯ ವೈದ್ಯ(?). ಅದಲ್ಲದ್ದೇ ಎಂಗಳ ಆಫೀಸಿನ ಕಾಯಂ ಗಿರಾಕಿ.
ಅವನತ್ರುದೆ ಒಂದು ಕಂಪ್ಯೂಟರ್ ಇತ್ತು. ಆ ಕಂಪ್ಯೂಟರಿಂಗುದೇ ಅವನಷ್ಟೇ ಪ್ರಾಯ ಆದಿಕ್ಕು!
ಆ ಕಂಪ್ಯೂಟರ್ ನ ಉಪಯೋಗಿಸಿ ಅವ ತುಂಬಾ ಜನಂಗಳ ಹೃದಯ ಸರಿ(?) ಮಾಡಿತ್ತಿದಾಡ. ಕೆಲವು ಸರ್ತಿ ಆ ಕಂಪೂಟರಿಂಗುದೇ ದಮ್ಮು-ಕೆಮ್ಮು ಬಂದುಗೊಂಡಿತ್ತು.
ಕೆಲವೊಂದು ಸರ್ತಿ ಹೇಳುದರಿಂದಲೂ ತಿಂಗಳಿಂಗೆ ಸುಮಾರೂ 3-4 ಸರ್ತಿ ಹೇಳಿ ಹೇಳುಲಕ್ಕು.ಅಷ್ಟಪ್ಪಗ ಎಲ್ಲ ಎಂಗ  ಅವರಲ್ಲಿಂಗೆ ಹೋಗಿ ಅದರ ಎಂಗಳ ಆಫೀಸಿಂಗೆ ತಂದು ತುರ್ತು ಚಿಕಿತ್ಸೆ ಮಾಡಿ ವಾಪಸ್ ಕೊಡ್ತಾ ಇತ್ತಿದೆಯ.

ಹೀಂಗೆ ಪ್ರತಿ ಸರ್ತಿ ಮಾಡಿಯಪ್ಪಗಲೂ ಎಂಗ ಆ  ವೈದ್ಯನತ್ರೆ ಆ ಕಂಪೂಟರಿಂಗೆ ಅದರ ಕೆಲಸ೦ದ ನಿವೃತ್ತಿ ಕೊಡೆಕ್ಕು ಹೇಳಿ ಸಲಹೆ ಕೊಟ್ಟುಗೊಂಡಿತ್ತೆಯ.
ಆ ಮನುಷ್ಯನೋ ಎಂಗಳ ಮಾತಿನ ಕ್ಯಾರೇ ಮಾಡಿಗೊಂಡಿತ್ತಿದಾಯಿಲ್ಲೆ. ಯಥಾಪ್ರಕಾರ ಕಂಪೂಟರಿಂಗೆ  ಅಹೋರಾತ್ರಿ ದುಡಿತ.
ಅದಲ್ಲದೆ ಆ ವೈದ್ಯ ಎಂಗ ಅವನಲ್ಲಿಗೆ ಹೋಗಿ ಅವನ ಕಂಪೂಟರಿಂಗೆ ಮಾಡಿದ ಚಿಕಿತ್ಸೆಗೆ ಫೀಸೂ ಕೊಡುವ ಮನಸ್ಸೇ ಮಾಡಿಗೊಂಡಿತ್ತಿದಾಯಿಲ್ಲೆ.

ಫೀಸ್ ಕೇಳಿದರೆ ನೂರೆ೦ಟು ನೆವನ ಬೇರೆ.. ” ನಿಂಗ ಕಂಪೂಟರಿನ ಸರಿಯಾಗಿ ರಿಪೇರಿ ಮಾಡಿದ್ದಿಲ್ಲೆ…ತಿ೦ಗಳಿಲಿ ಮೂರು ನಾಲ್ಕು ಸರ್ತಿ ನಿಂಗಳ ದೆನಿಗೇಳುದೇ ಆವುತ್ತು. ಇದ೦ದ ಎನ್ನ ವೃತ್ತಿಗೆ ಎಷ್ಟು ನಷ್ಟ ಹೇಳಿ ನಿಂಗಗೆ ಗೊಂತಿದ್ದಾ…” ಹೇಳಿ ಒಂದರೆ ಹೋದಪ್ಪಗ ಹೇಳಿರೆ,
ಇನ್ನೊಂದರಿ ಹೋದಪ್ಪಗ: “ನೋಡಿ ನೋಡಿ ನನ್ನ ಕಂಪೂಟರಿಂಗೆ  ದಮ್ಮು ಕಟ್ಟುದು(Struck ಆಪ್ಪದು). ನಿಂಗ ಈತರ ಮಾಡಿದ ರಿಪೇರಿಗೆ ಚಾರ್ಜ ಎಂತಕೆ ಕೊಡೆಕ್ಕು.???..”
ಅ೦ತೂ ಪ್ರತೀ ಸರ್ತಿ ಅವನಲ್ಲಿಗೆ ಫೀಸ್ ಕೇಳುಲೆ ಹೋಗಿ “ಇಂಗು ತಿಂದ ಮಂಗನ ಮೋರೆಯ ಹಾಂಗೆ” ಮೋರೆ ಮಾಡಿಗೊಂಡು ವಾಪಸ್ ಬಪ್ಪದೇ ಆಗಿತ್ತು ಎಂಗಳ ಪರಿಸ್ಥಿತಿ.
ಈ ಬಗ್ಗೆ ಎಂಗಳ ದನಿಗಳಿಂಗೆ(Boss) ಹೇಳಿರೆ ಅವುವೋ ಈಗಾಣ ರಾಜಕಾರಣಿಗಳ ಹಾ೦ಗೆ “ಸ್ವಲ್ಪ ದಿನ ಕಾಯುವ..ಅವು ಕೊಡುಗು” ಹೇಳಿ ಕಾದುನೋಡುವ ನೀತಿ ಅನುಸರಿಸಲೆ ಹೇಳ್ತಾ ಇತ್ತವು.

ಈ ನಡುವೆ ಅವ ಎನಗೆ ಅವನ ಕಂಪೂಟರಿನ ಅವ ಹೇಳಿಯಪ್ಪಗ ಬ೦ದು ಕೂಡಲೇ ಸರಿಮಾಡಿಕೊಟ್ಟರೆ,ಎನಗೆ ಯಾವುದಾರು ಖಾಯಿಲೆ ಬ೦ದಪ್ಪಗ ಕಡಿಮೆ ಖರ್ಚ್ ಲಿ ಖಾಯಿಲೆಗೆ ಚಿಕಿತ್ಸೆ ಮಾಡಿಗುಣಪಡಿಸುವ ಆಸೆ ತೋರ್ಸಿತ್ತ .
ಕಡೆಂಗೆ ಆನುದೆ ಇನ್ನಾಣ ಸರ್ತಿ ಅವ ದೆನಿಗೇಳಿಯಪ್ಪಗ ಅವನಲ್ಲಿಂಗೆ ಹೋಗದ್ದೆ ಅವನ ಬೊಡಿಶಿ ಫೀಸ್ ವಸೂಲ್ ಮಾಡಲೆ ತೀರ್ಮಾನಮಾಡಿತ್ತೆ..
ಅ೦ತೂ ಆನು ನಿರೀಕ್ಷಿಸಿದ್ದ ದಿನಕಡೆಂಗುದೇ ಬ೦ತು..ಆ ದಿನ ಅವ ಫೋನ್ ಮಾಡಿಯಪ್ಪಗ ಎಂಗಳ ಬಾಕಿ ಇಪ್ಪ ಫೀಸ್ ಕೊಡದ್ರೆ ಆನು ರಿಪೇರಿ ಮಾಡ್ಲೆ ಬತ್ತಿಲೆ ಹೇಳಿ ರಜಾ ಜೋರಿಲೇ ಹೇಳಿದೆ.
ಹೀಂಗೆ ಸುಮಾರು 3-4 ಸರ್ತಿ ಫೋನ್ ಮಾಡಿಯಪ್ಪಗಲುದೇ ಆನು ಅವನಲ್ಲಿಂಗೆ ಹೋಯಿದಿಲ್ಲೆ.
ಕಡೆಂಗೆ ಅವನೇ ಬೇರೆದಾರಿ ಇಲ್ಲದ್ದೇ ಇನ್ನೊಬ್ಬ ಕಂಪೂಟರ್ ಚಿಕಿತ್ಸಾಲಯವ ಸ೦ಪರ್ಕ ಮಾಡಿದ.

ಅವ್ವೋ – ಎನ್ನಂದಲುದೇ ಚಾಲೂ.
ಕಂಪೂಟರಿಂನ ಯಾವದೋ ಬಿಡಿಭಾಗಂಗಳ ಬದಲಿಸಿದ್ದೆಯಾ ಹೇಳಿ ಹೇಳಿಗೊಂಡು ಎಂಗಳ ಅಷ್ಟೂ ದಿನದ ಚಾರ್ಜ್ ನಷ್ಟು ಒಂದರಿಯೇ ವಸೂಲ್ ಮಾಡಿತ್ತಿದವು.
ಇಷ್ಟೆಲಾ ಮಾಡಿಕ್ಕಿದೆ ಮತ್ತೆರಡು ದಿನಲ್ಲಿ ಪುನಃ ಕಂಪೂಟರಿಂಗೆ  ದಮ್ಮು-ಕೆಮ್ಮು ಶುರುವಾತದ.
ಅವರ ದೆನಿಗೇಳಿದರೆ ಅವು ಎಂಗಗೆ ಇಂದು ಪುರುಸೊತ್ತಿಲ್ಲೆ ಬೇಕಾರೆ ನಾಳೆ ಬತ್ತೆಯಾ ಹೇಳಿ ಹೇಳಿದವಡ. ಅಲ್ಲದ್ದೆ ಕಂಪೂಟರಿನ ಇನ್ನೂ ಒ೦ದು ಭಾಗ ಹಾಳಾಯಿದು ಅದನ್ನುದೇ ಬದಲಾಯಿಸಿದರಷ್ಟೇ ಸರಿಯಕ್ಕು ಹೇಳಿ ಹೇಳಿದವಡ.
ಕಡೆಗೆ ಇವಂಗೆ “ಹಳೆಯ ಗೆ೦ಡನ ಪಾದವೇ ಗತಿ” ಹೇಳುವ ಹಾಂಗೆ ಮತ್ತೆ ಎಂಗಳಲ್ಲಿಂಗೇ ಕರೆಮಾಡಿದ.

ಆನೋ ಹಳೆಯ ಬಾಕಿ ತೀರಿಸದ್ದೆ ಸುತರಾ೦ ಬತ್ತಿಲ್ಲೆ ಹೇಳಿ ಹೇಳಿದೆ…ಕಡೆಂಗೆ  “ನಿಂಗ ಬನ್ನಿ..ಬಾಕಿ ತೀರ್ಸುತ್ತೆ” ಹೇಳಿ ಹೇಳಿದ.
ಅ೦ತೂ ಇಂತೂ ಬಾಕಿ ತೀರ್ಸಿದ ಮೇಲೆ ಕಂಪೂಟರಿನ ರಿಪೇರಿಗೆ ತೆಕ್ಕೊಂಡು ಬಂದೆ. ಅಲ್ಲದೇ ಈ ಸರ್ತಿ ಆ ಪಾಪದ ಕಂಪೂಟರಿಂಗೆ ಒಂದು ಗತಿ ಕಾಣ್ಸಿಕ್ಕಿ ಅದಕ್ಕೇ ವಿಶ್ರಾ೦ತ ಜೀವನ ಕೊಡ್ಲುದೇ ನಿರ್ಧಾರ ಮಾಡಿದೆ.
ಕಡೆಂಗೆ ಆನು ಕಂಪೂಟರಿನ ಪರೀಕ್ಷೆ ಮಾಡಿಕ್ಕಿ “ಈ ಕಂಪೂಟರಿಂನ ಕೆಲವು ಭಾಗಂಗ ಸರಿಯಿಲ್ಲ..ಬೇರೆ ಆರೋ ಇದರ ಏನೇನೋ ಮಾಡಿದ್ದವು..ಇದರ ರಿಪೇರಿ ಮಾಡಿ ಪ್ರಯೋಜನ ಇಲ್ಲೆ,ಇದಕ್ಕೆ ವಿಶ್ರಾಂತಿ ಕೊಡುದು ಸರಿ “ಹೇಳಿ ಹೇಳಿದೆ.

ಆದರುದೆ ಅವ ಇದೊ೦ದು ಸರ್ತಿ ರಿಪೇರಿ ಮಾಡಿಕೊಡಿ.
ಈ ಸರ್ತಿ ನಿಂಗಳ ಚಾರ್ಜ್ ಕೂಡಲೇ ಕೊಡ್ತೆ” ಹೇಳಿ ಹೇಳಿದ..ಕಂಪೂಟರಿನ ರಿಪೇರಿ ಮಾಡಿದ್ದಷ್ಟೇ ಅಲ್ಲದೇ ಆನು ಅದರ ಉಸುಲು ಯ೦ತ್ರದ (processor fan connection) ಸ೦ಪರ್ಕವ ತೆಗದು ಹಾಕಿದೆ.
ಈ ಹಳೆಯ ಕಂಪೂಟರ್ ಗ ಈಗಾಣ ಕಂಪೂಟರ್ ಗಳ ಹಾಂಗೆ ಅಲ್ಲ..ಅದು ಉಸುಲು ಯ೦ತ್ರದ ಸ೦ಪರ್ಕವನ್ನು ತೆಗದ ಮತ್ತೆದೇ 3-4 ಗ೦ಟೆಗಳವರೆಗೆ ಕೆಲಸಮಾಡುವ ಸಾಮರ್ಥ್ಯವನ್ನು ಹೊ೦ದಿರ್ತು..
ಅದರ ನಂತ್ರ ಅದರ ಹೃದಯ ಬಡಿತ(processor ಕೆಟ್ಟುಹೋಗಿ) ನಿ೦ದು ಅದು ಸಾಯಿತ್ತು
(ಈಗಿನ ಕಂಪೂಟರ್ ಗ ಉಸುಲು ಯ೦ತ್ರದ ಸ೦ಪರ್ಕವನ್ನು ತೆಗದ ಒ೦ದೆರಡು ಗಂಟೆಲಿ ಮೂರ್ಚಾವಸ್ಥೆಗೆ ಹೋವುತ್ತಷ್ಟೆ ಆದರೆ ಸಾಯಿತ್ತಿಲ್ಲೆ-ಕೆಲವು ಹೇಳುಲೆ ಎಡಿಯ).

ಸ೦ಪರ್ಕ ತೆಗದ ನ೦ತ್ರ ಅವರಲ್ಲಿಂಗೆ ಕೊಟ್ಟಿಕ್ಕಿ ಬ೦ದೆ.
ಕೊನೆಯ ಸರ್ತಿಳಿ ಮಾಮೂಲಿಂದ ರಜಾ ಜಾಸ್ತಿಯೇ ಚಾರ್ಜ್ ತೆಕ್ಕೋಂಡೆ.
ಆ ದಿನ ಪೂರ್ತಿ ಸರೀ ಕೆಲಸಮಾಡಿದ ಆ ಕಂಪೂಟರ್  ಮರದಿನ ಮಧ್ಯಾಹ್ನನಪ್ಪಾಣ ಹೊತ್ತಿಂಗೆ ಹೃದಯ ಬಡಿತ ನಿ೦ದು ಸತ್ತತ್ತು.

ಅ೦ತೂ ಆನು ಹೃದಯ ವೈದ್ಯನ ಕಂಪೂಟರಿಂಗೆ ಹೃದಯ ಬಡಿತ ನಿಲ್ಸುಲುದೇ ಫೀಸ್ ತೆಕ್ಕೊಂಡದಂತೂ ಸತ್ಯ…!!! 🙂

ಎರುಂಬು ಅಪ್ಪಚ್ಚಿ

   

You may also like...

20 Responses

 1. ವಸಂತರಾಜ್ ಹಳೆಮನೆ says:

  ಹೀಂಗೇ ಇಪ್ಪ ಅನುಭವ ಎನಗೂ ಆಯಿದು. ಎನ್ನ ಹತ್ರಾಣ ನೆಂಟ° ಒಬ್ಬಂಗೆ ಸ್ಟುಡಿಯೋ ಇದ್ದು. ಅಲ್ಲಿ ಯಾವಾಗ ನೋಡಿರೂ ವೈರಸ್ ಉಪದ್ರ. ಆನು ಕಂಪ್ಯೂಟರ್ ರಿಪೇರಿ ಕಲ್ತ ಕಾರಣ ಎನ್ನತ್ರೆ ರಿಪೇರಿಗೆ ಹೇಳುಗು. ಶುರು ಶುರುವಿಂಗೆ ಹೋಗಿ ರಿಪೇರಿ ಮಾಡಿ ಕೊಟ್ಟುಗೊಂಡಿತ್ತಿದ್ದೆ. ಅವನ ಮನೆಲಿ ವಿಡಿಯೋ ಎಡಿಟಿಂಗ್ ಮಾಡುವ ಕಂಪ್ಯೂಟರ್. ಕೆಲಾವು ಸರ್ತಿ ಸ್ಟುಡಿಯೋಂದ ಮನೆಗೂ ಪಗರುಗು ವೈರಸ್. ಅಷ್ಟಪ್ಪಗ ಮಧ್ಯರಾತ್ರಿಲಿ ಕೂಡ ಫೋನ್ ಮಾಡುಗು. ಆದರೆ ರಿಪೇರಿ ಮಾಡಿದ್ದಕ್ಕೆ ಪೈಸೆ ಮಾಂತ್ರ ಸಿಕ್ಕ. ಒಂದಾರಿ ಕೇಳಿದ್ದಕ್ಕೆ “ನೀನು ರಿಪೇರಿ ಅಂಗಡಿ ಮಡುಗು. ಮತ್ತೆ ಪೈಸೆ ಕೊಡ್ತೆ” ಹೇಳಿದ°. ಹಾಂಗೆ ಹೇಳಿದ ಮತ್ತೆ ಆನು ರಿಪೇರಿಗೆ ಹೋಯಿದಿಲ್ಲೆ. ನಾಲ್ಕೈದು ಸರ್ತಿ ಫೋನ್ ಮಾಡಿರೂ ಆನು ಹೋಯಿದಿಲ್ಲೆ. ಮತ್ತೊಂದೆರಡು ಸರ್ತಿ ಕೊಡೆಯಾಲಂದ ಜನ ಬರುಸಿ ರಿಪೇರಿ ಮಾಡುಸಿದ°. ಮತ್ತೆ ಅದು ಅಸಲಾಗ ಹೇಳಿ ತೋರಿತ್ತು ಕಾಣ್ತು. ಅದೇ ಸಮಯಕ್ಕೆ ಒಬ್ಬ° ಅವನ ಸ್ಟುಡಿಯೋ ಇಪ್ಪ ಪೇಟೆಲಿಯೇ ರಿಪೇರಿ ಅಂಗಡಿ ಮಡುಗಿದ°. ಅಷ್ಟಪ್ಪಗ ಅವನ ಹಿಡ್ಕೊಂಡ°. ಆ ಮಾಣಿ ಕೂಡ ಗುರ್ತದವನೇ. ರಜ್ಜ ದೂರಲ್ಲಿ ನೆಂಟ° ಕೂಡ. ಈಗ ಅವನ ಬೊಡುಶುತ್ತಾ ಇದ್ದ°. ಅವಂಗೆ ಕೂಡ ಪೈಸೆ ಕೊಡ್ಲಿಲ್ಲೆ ಅಡ.
  ಹೀಂಗೆ ಆರಾರ ಶೋಷಣೆ ಮಾಡಿ ರೈಸುತ್ತ ಸುಮಾರು ಮನುಷ್ಯರು ಸಮಾಜಲ್ಲಿ ಇದ್ದವು. ಕೊಡೆಕಾದಲ್ಲಿ ಕೊಡ್ಲೆ ಮಾಂತ್ರ ಕೈ ಹಿಂದೆ. ಬೇಡದ್ದಕ್ಕೆ ಖರ್ಚು ಮಾಡ್ಲೆ ಹಿಂದೆ ಮುಂದೆ ನೋಡವು. ಖಡಕ್ ಆಗಿ ಮಾತಾಡ್ಲೆ ಅರಡಿಯದ್ದೆ, ದಾಕ್ಷಿಣ್ಯ ಮಾಡಿಯೊಂಡು ಕೂಪವು ಹೀಂಗಿಪ್ಪಲ್ಲಿ ಸೋತು ಬೀಳುದೇ.

  • ಎರುಂಬು ಅಪ್ಪಚ್ಚಿ says:

   ಅದಪ್ಪು ವಸಂತಣ್ಣ … ಆದರೆ ನಾವು ಇಲ್ಲ ಬರದಪ್ಪಗ ಕೆಲವು ಜನಂಗಕ್ಕೆ ಬೇಜಾರಕ್ಕು … ಆದರೆ ಇದಂದ ಅವು ಸುದರ್ಸಿದರೆ … ನಮ್ಮಂತ ಜನಂಗ ಬದುಕಿಗೊಂಗು … ಅಲ್ಲದಾ ..

 2. Sumana Bhat Sankahithlu says:

  ಖಡಾಖಡಿ ಹೇಳುಲೆ ಎಡಿಯದ್ದ ದಾಕ್ಶಿಣ್ಯ ಇಪ್ಪಂತ ಬುದ್ಧಿಯವರ ಬೊಡುಶುವವು ಈ ಲೇಖನ ಓದಿ ಬುದ್ದಿ ಕಲಿಯೆಕು, ಪಾಪದವರ ಬೊಡುಶುಲಾಗ ಹೇಳಿ. ಲಾಯಿಕಾಯಿದು ಬರದ್ದು.
  ~ಸುಮನ ಮಾಡವು ಸಂಕಹಿತ್ಲು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *