ದಾಸನ ರೈಸಿತ್ತು

March 6, 2012 ರ 11:11 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಾರಡಿತೋಡಿನ ಕರೆಲಿಪ್ಪ ಬೇಲಿಲಿ ಹೂಗೊಂದರಳಿತ್ತು
ಹಸಿರು ಹಸಿರು ಬಣ್ಣದ ಗಿಡದಾ ಮದ್ಯಲ್ಲಿ ಹೂಗೊಂದರಳಿತ್ತು
ಅದುವೇ ದಾಸನವಾಗಿತ್ತೂ ಅದುವೇ ಕೆಂಪು ದಾಸನವಾಗಿತ್ತು

ದಾರಿಲಿ ಹೋವುತ್ತ ಮಾಮಸಮನಾ ಕಣ್ಣಿಂಗೆ ದಾಸನ ಬಿದ್ದತ್ತು
ಸಣ್ಣಾಗಿಪ್ಪಗ ಅದರ ಅಡರಿಲಿ ತಿಂದದು ನೆಂಪಾತು
ಆ ನೆಂಪಿಲಿ ಕೈ ಒಂದರಿ ಬೆನ್ನಿನ ಮುಟ್ಟಿತ್ತು ಆದರು ದಾಸನ ರೈಸಿತ್ತು

ಗೊಂಪಾದರು ಅದರ ಎಲೆಯ ಚೂಂಟಿ ಬಾಯಿಗೆ ಹಾಕಿತ್ತು
ಅಗುದು ತುಪ್ಪಿ ದಿನ ಎರಡು ಕಳಿವಗ ಬಾಯಿ ಹುಣ್ಣು ಮಾಸಿತ್ತು
ಅದುವೇ ಬಾಯಿ ಹುಣ್ಣಿಂಗೆ ಮದ್ದಾತು ನಮ್ಮ ದಾಸನ ರೈಸಿತ್ತು

ಕುಂಞಕ್ಕ ಅದರ ಎಲೆಗಳ ಚೂಂಟಿ ಸಣ್ಣಕೆ ಗುದ್ದಿತ್ತು
ಗುದ್ದಿದ ಗೊಂಪಿನ ತಲಗೆ ಮೆತ್ತಿ ಬೆಶಿ ನೀರಿಲಿ ಮಿಂದತ್ತು
ಅದರ ಕೂದಲು ನೈಸಾತು ಗೊಂಪು ಶೇಂಪಿನ ಸೋಲ್ಸಿತ್ತು ಇಲ್ಲೂ ದಾಸನ ರೈಸಿತ್ತು

ಹೊಕ್ಕುಳು ಹುಣ್ಣಿಂಗೆ ಮಕ್ಕೊಗೆ ಬೆಳಿಯ ದಾಸನ ತಿನುಸಿತ್ತು
ರಪರಪ ತೊರುಸಿದ ತಲೆಯ ಹುಣ್ಣಿಂಗೂ ಗೊಂಪಾಕಿ ಮೀಶಿತ್ತು
ಅದಕ್ಕೂ ದಾಸನ ಮದ್ದಾತು ನಮ್ಮ ದಾಸನ ರೈಸಿತ್ತು

ಬೆಳಿದಾಸನದಾ ಬೇರಿನ ಪೊರ್ಪಿ ಎಣ್ಣೆಯ ಕಾಸಿತ್ತು
ಅದಕ್ಕೆ ಕಾಟುಕಂಚಿನ ಸೊಪ್ಪಿನ ಒಟ್ಟಿಂಗೆ ಜೀರಿಗೆ ಸೇರ್ಸಿತ್ತು
ಎಣ್ಣೆಯ ಹಾಕಿದ ಮಕ್ಕಳ ತಲೆಯ ಕೂದಲು ಕಪ್ಪಾತು ಅಲ್ಲೂ ದಾಸನ ರೈಸಿತ್ತು

ಅರಳಿದ ಚೆಂದದ ಹೂಗಿನ ಕೊಯಿದು ಪೂಜಗೆ ಮಡಗಿತ್ತು
ವಿಧವಿಧ ಬಣ್ಣದ ದಾಸನದಲಂಕಾರ ಚಾಮಿಗೆ ಮಾಡಿತ್ತು
ಅಲ್ಲಿ ಪೂಜೆಯೂ ರೈಸಿತ್ತು ,ಇಲ್ಲಿ – ನಮ್ಮ ದಾಸನ ರೈಸಿತ್ತು

ಪಟಂಗೊ:

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಬೊಳುಂಬು ಮಾವ°

  ಪುಳ್ಳಿಯ ದಾಸನದ ಪದ್ಯ ಎನ್ನ ಉದಾಸನವ ಓಡುಸಿದ್ದಂತೂ ನಿಜ. ಪದ್ಯದ ಮೂಲಕ ದಾಸನದ ಮಹಾತ್ಮೆಯ ತಿಳುಸಿಕೊಟ್ಟದು ಏವ ಬೇರೆ ದಾಸರಿಂಗೂ ಕಡಮ್ಮೆ ಇಲ್ಲೆ. ಪದ್ಯದ ರಾಗವುದೆ ಕೊಶಿ ಆತು. ಸಸ್ಯ ಶಾಸ್ತ್ರ ಕಲಿತ್ತವಕ್ಕೆ ಹೈಬಿಸ್ಕಸ್ ಹೇಳಿ ದಾಸನ ಬೇಕೇ ಬೇಕು.

  ಮುಳಿಯದ ಭಾವಯ್ಯ ಹೇಳಿದ ಹಾಂಗೆ ಸಂಪಿಗೆ ಮರದ ಪದ್ಯ ಹೊಂದುಸಿ ನೋಡಿದೆ. ಓಕೆ, ಆದರೆ, ರಾಯರು ಬಂದರು ಮಾವನ ಮನೆಗೆ ಟ್ಯೂನು ಇನ್ನುದೆ ಲಾಯಕಾವುತ್ತೋ ಹೇಳಿ !!

  ಶೇಗುಪುಳ್ಳಿ, ಇನ್ನಾಣ ಹವ್ಯಕ ವಾರ್ಷಿಕೋತ್ಸವಕ್ಕೆ . . . . ಹೇಂಗೆ ? ರೆಡೀ ಅಲ್ಲದೊ ?!!

  [Reply]

  VA:F [1.9.22_1171]
  Rating: +2 (from 2 votes)
 2. ವಿನಯಾ

  ದಾಸನದ ಮದ್ದಿನ ಗುಣ೦ಗಳ ಹೇಳುವ ಪದ್ಯ ನಿಜವಾಗಿಯೂ ಭಾರಿ ರೈಸಿದ್ದು….

  [Reply]

  VA:F [1.9.22_1171]
  Rating: 0 (from 0 votes)
 3. ಚುಬ್ಬಣ್ಣ
  ಚುಬ್ಬಣ್ಣ

  ಏ ಶೇಡಿಗುಮ್ಮೆ ಪುಳ್ಳಿ…ನಿನ್ನ ಕವಿತೆ ಭಾರಿ ರೈಸಿದ್ದು… :) ಧಾಸನದ ಮಹಿಮೆಯೊಟ್ಟಿ೦ಗೆ, ಕುಶಾಲು ಲಾಯಕೆ ಹೊ೦ದಿ ಬೈ೦ದು..
  ದಾಸನದ ಗುಣ ವರ್ಣನೆ ಲಾಯಕೆ ಆಯಿದು ಭಾವ.. ಕೊಶಿಯಾತು ಓದಿ.. :)

  [Reply]

  VN:F [1.9.22_1171]
  Rating: 0 (from 0 votes)
 4. ಅನು ಉಡುಪುಮೂಲೆ

  ಪದ್ಯ ರೈಸಿತ್ತೂ…
  ಈ ಪದ್ಯ ರೈಸಿತ್ತು
  ದಾಸನ ಹೂಗಿನ ಗುಣಗಳ ತಿಳುಶುವ
  ಪದ್ಯ ರೈಸಿತ್ತು…

  ಪದ್ಯ ರೈಸಿತ್ತೂ….
  ಈ ಪದ್ಯ ರೈಸಿತ್ತು
  ಅರಳಿದ ಹೂಗಿನ ಪಟವುದೆ ಹಾಕಿ
  ಪದ್ಯ ರೈಸಿತ್ತು…..

  ಪದ್ಯ ರೈಸಿತ್ತೂ…
  ಈ ಪದ್ಯ ರೈಸಿತ್ತು
  ಶೇಡಿಗುಮ್ಮೆ ಪುಳ್ಳಿ ಕೊಶೀಲಿ ಬರದ
  ಪದ್ಯ ರೈಸಿತ್ತು….

  [Reply]

  VN:F [1.9.22_1171]
  Rating: +1 (from 1 vote)
 5. ಒಪ್ಪಣ್ಣ

  ಚೆಲ, ತೋಡಕರೆಲಿ ಆರಿಂಗೂ ಬೇಡದ್ದ ದಾಸನಕ್ಕೂ ನಮ್ಮ ಬೈಲಿಲಿ ಒಳ್ಳೆ ಡಿಮಾಂಡು ಅಪ್ಪೋ!
  ಅಡ್ರು ಕಾಂಬಗ ಬೆನ್ನು ನೆಂಪಾದ್ದು ಪಷ್ಟಾಯಿದಿದ.

  ಸಾರಡಿ ತೋಡಿನ ಪದಕ್ಕೆ ಸಾರಡಿಯ ತೋಡಿಂದಲೇ ತೆಗದ ದಾಸನದ ಪಟ ಹಾಕಿದ್ದು ಇನ್ನೂ ಕೊಶಿ ಆತು. :-)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣವಸಂತರಾಜ್ ಹಳೆಮನೆಮಾಷ್ಟ್ರುಮಾವ°ಒಪ್ಪಕ್ಕಪುತ್ತೂರಿನ ಪುಟ್ಟಕ್ಕಶಾಂತತ್ತೆವೇಣಿಯಕ್ಕ°ಪವನಜಮಾವಚೆನ್ನಬೆಟ್ಟಣ್ಣಕಳಾಯಿ ಗೀತತ್ತೆಎರುಂಬು ಅಪ್ಪಚ್ಚಿಅಡ್ಕತ್ತಿಮಾರುಮಾವ°ಡಾಮಹೇಶಣ್ಣಮಂಗ್ಳೂರ ಮಾಣಿಅಕ್ಷರ°ಚೂರಿಬೈಲು ದೀಪಕ್ಕವೇಣೂರಣ್ಣಕಜೆವಸಂತ°ಪುತ್ತೂರುಬಾವದೊಡ್ಡಮಾವ°ಕಾವಿನಮೂಲೆ ಮಾಣಿಶುದ್ದಿಕ್ಕಾರ°ಚೆನ್ನೈ ಬಾವ°ಹಳೆಮನೆ ಅಣ್ಣಸುಭಗದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ