Oppanna.com

ದಾಸನ ರೈಸಿತ್ತು

ಬರದೋರು :   ಶೇಡಿಗುಮ್ಮೆ ಪುಳ್ಳಿ    on   06/03/2012    16 ಒಪ್ಪಂಗೊ

ಸಾರಡಿತೋಡಿನ ಕರೆಲಿಪ್ಪ ಬೇಲಿಲಿ ಹೂಗೊಂದರಳಿತ್ತು
ಹಸಿರು ಹಸಿರು ಬಣ್ಣದ ಗಿಡದಾ ಮದ್ಯಲ್ಲಿ ಹೂಗೊಂದರಳಿತ್ತು
ಅದುವೇ ದಾಸನವಾಗಿತ್ತೂ ಅದುವೇ ಕೆಂಪು ದಾಸನವಾಗಿತ್ತು

ದಾರಿಲಿ ಹೋವುತ್ತ ಮಾಮಸಮನಾ ಕಣ್ಣಿಂಗೆ ದಾಸನ ಬಿದ್ದತ್ತು
ಸಣ್ಣಾಗಿಪ್ಪಗ ಅದರ ಅಡರಿಲಿ ತಿಂದದು ನೆಂಪಾತು
ಆ ನೆಂಪಿಲಿ ಕೈ ಒಂದರಿ ಬೆನ್ನಿನ ಮುಟ್ಟಿತ್ತು ಆದರು ದಾಸನ ರೈಸಿತ್ತು

ಗೊಂಪಾದರು ಅದರ ಎಲೆಯ ಚೂಂಟಿ ಬಾಯಿಗೆ ಹಾಕಿತ್ತು
ಅಗುದು ತುಪ್ಪಿ ದಿನ ಎರಡು ಕಳಿವಗ ಬಾಯಿ ಹುಣ್ಣು ಮಾಸಿತ್ತು
ಅದುವೇ ಬಾಯಿ ಹುಣ್ಣಿಂಗೆ ಮದ್ದಾತು ನಮ್ಮ ದಾಸನ ರೈಸಿತ್ತು

ಕುಂಞಕ್ಕ ಅದರ ಎಲೆಗಳ ಚೂಂಟಿ ಸಣ್ಣಕೆ ಗುದ್ದಿತ್ತು
ಗುದ್ದಿದ ಗೊಂಪಿನ ತಲಗೆ ಮೆತ್ತಿ ಬೆಶಿ ನೀರಿಲಿ ಮಿಂದತ್ತು
ಅದರ ಕೂದಲು ನೈಸಾತು ಗೊಂಪು ಶೇಂಪಿನ ಸೋಲ್ಸಿತ್ತು ಇಲ್ಲೂ ದಾಸನ ರೈಸಿತ್ತು

ಹೊಕ್ಕುಳು ಹುಣ್ಣಿಂಗೆ ಮಕ್ಕೊಗೆ ಬೆಳಿಯ ದಾಸನ ತಿನುಸಿತ್ತು
ರಪರಪ ತೊರುಸಿದ ತಲೆಯ ಹುಣ್ಣಿಂಗೂ ಗೊಂಪಾಕಿ ಮೀಶಿತ್ತು
ಅದಕ್ಕೂ ದಾಸನ ಮದ್ದಾತು ನಮ್ಮ ದಾಸನ ರೈಸಿತ್ತು

ಬೆಳಿದಾಸನದಾ ಬೇರಿನ ಪೊರ್ಪಿ ಎಣ್ಣೆಯ ಕಾಸಿತ್ತು
ಅದಕ್ಕೆ ಕಾಟುಕಂಚಿನ ಸೊಪ್ಪಿನ ಒಟ್ಟಿಂಗೆ ಜೀರಿಗೆ ಸೇರ್ಸಿತ್ತು
ಎಣ್ಣೆಯ ಹಾಕಿದ ಮಕ್ಕಳ ತಲೆಯ ಕೂದಲು ಕಪ್ಪಾತು ಅಲ್ಲೂ ದಾಸನ ರೈಸಿತ್ತು

ಅರಳಿದ ಚೆಂದದ ಹೂಗಿನ ಕೊಯಿದು ಪೂಜಗೆ ಮಡಗಿತ್ತು
ವಿಧವಿಧ ಬಣ್ಣದ ದಾಸನದಲಂಕಾರ ಚಾಮಿಗೆ ಮಾಡಿತ್ತು
ಅಲ್ಲಿ ಪೂಜೆಯೂ ರೈಸಿತ್ತು ,ಇಲ್ಲಿ – ನಮ್ಮ ದಾಸನ ರೈಸಿತ್ತು

ಪಟಂಗೊ:

16 thoughts on “ದಾಸನ ರೈಸಿತ್ತು

  1. ಚೆಲ, ತೋಡಕರೆಲಿ ಆರಿಂಗೂ ಬೇಡದ್ದ ದಾಸನಕ್ಕೂ ನಮ್ಮ ಬೈಲಿಲಿ ಒಳ್ಳೆ ಡಿಮಾಂಡು ಅಪ್ಪೋ!
    ಅಡ್ರು ಕಾಂಬಗ ಬೆನ್ನು ನೆಂಪಾದ್ದು ಪಷ್ಟಾಯಿದಿದ.

    ಸಾರಡಿ ತೋಡಿನ ಪದಕ್ಕೆ ಸಾರಡಿಯ ತೋಡಿಂದಲೇ ತೆಗದ ದಾಸನದ ಪಟ ಹಾಕಿದ್ದು ಇನ್ನೂ ಕೊಶಿ ಆತು. 🙂

  2. ಪದ್ಯ ರೈಸಿತ್ತೂ…
    ಈ ಪದ್ಯ ರೈಸಿತ್ತು
    ದಾಸನ ಹೂಗಿನ ಗುಣಗಳ ತಿಳುಶುವ
    ಪದ್ಯ ರೈಸಿತ್ತು…

    ಪದ್ಯ ರೈಸಿತ್ತೂ….
    ಈ ಪದ್ಯ ರೈಸಿತ್ತು
    ಅರಳಿದ ಹೂಗಿನ ಪಟವುದೆ ಹಾಕಿ
    ಪದ್ಯ ರೈಸಿತ್ತು…..

    ಪದ್ಯ ರೈಸಿತ್ತೂ…
    ಈ ಪದ್ಯ ರೈಸಿತ್ತು
    ಶೇಡಿಗುಮ್ಮೆ ಪುಳ್ಳಿ ಕೊಶೀಲಿ ಬರದ
    ಪದ್ಯ ರೈಸಿತ್ತು….

  3. ಏ ಶೇಡಿಗುಮ್ಮೆ ಪುಳ್ಳಿ…ನಿನ್ನ ಕವಿತೆ ಭಾರಿ ರೈಸಿದ್ದು… 🙂 ಧಾಸನದ ಮಹಿಮೆಯೊಟ್ಟಿ೦ಗೆ, ಕುಶಾಲು ಲಾಯಕೆ ಹೊ೦ದಿ ಬೈ೦ದು..
    ದಾಸನದ ಗುಣ ವರ್ಣನೆ ಲಾಯಕೆ ಆಯಿದು ಭಾವ.. ಕೊಶಿಯಾತು ಓದಿ.. 🙂

  4. ದಾಸನದ ಮದ್ದಿನ ಗುಣ೦ಗಳ ಹೇಳುವ ಪದ್ಯ ನಿಜವಾಗಿಯೂ ಭಾರಿ ರೈಸಿದ್ದು….

  5. ಪುಳ್ಳಿಯ ದಾಸನದ ಪದ್ಯ ಎನ್ನ ಉದಾಸನವ ಓಡುಸಿದ್ದಂತೂ ನಿಜ. ಪದ್ಯದ ಮೂಲಕ ದಾಸನದ ಮಹಾತ್ಮೆಯ ತಿಳುಸಿಕೊಟ್ಟದು ಏವ ಬೇರೆ ದಾಸರಿಂಗೂ ಕಡಮ್ಮೆ ಇಲ್ಲೆ. ಪದ್ಯದ ರಾಗವುದೆ ಕೊಶಿ ಆತು. ಸಸ್ಯ ಶಾಸ್ತ್ರ ಕಲಿತ್ತವಕ್ಕೆ ಹೈಬಿಸ್ಕಸ್ ಹೇಳಿ ದಾಸನ ಬೇಕೇ ಬೇಕು.

    ಮುಳಿಯದ ಭಾವಯ್ಯ ಹೇಳಿದ ಹಾಂಗೆ ಸಂಪಿಗೆ ಮರದ ಪದ್ಯ ಹೊಂದುಸಿ ನೋಡಿದೆ. ಓಕೆ, ಆದರೆ, ರಾಯರು ಬಂದರು ಮಾವನ ಮನೆಗೆ ಟ್ಯೂನು ಇನ್ನುದೆ ಲಾಯಕಾವುತ್ತೋ ಹೇಳಿ !!

    ಶೇಗುಪುಳ್ಳಿ, ಇನ್ನಾಣ ಹವ್ಯಕ ವಾರ್ಷಿಕೋತ್ಸವಕ್ಕೆ . . . . ಹೇಂಗೆ ? ರೆಡೀ ಅಲ್ಲದೊ ?!!

  6. ಒಪ್ಪಣ್ಣನ ಕಾಣದ್ದೆ ಉ ದಾಸನ ಆವುತ್ತು,
    ಎನಗೆ ಉ ದಾಸನ ಆವುತ್ತು

  7. ದಾಸನ ಸೆಸಿಲಿ ಅರಳಿದ ಹೂಗು
    ದಿನವೊಂದರಲ್ಲಿ ಬಾಡಿಯೆ ಹೋವುತಿತ್ತು
    ಚಾಮಿ ಪಾದವ ಸೇರಿ ಧನ್ಯತೆ ಪಡದತ್ತು
    ಬೈಲಿಂಗೆ ಕೃತಜ್ಹ್ನತೆ ಸಲ್ಲಿಸಿತ್ತು

    ಹೂಗಿನ ಜೊತೆಗೆ ಸೆಸಿಯ ಗುಣವೂ
    ಹಸುರು ಹಸುರಾದ ತೋಡಿನ ಪಟವೂ
    ಬೈಲಿನ ಕಣ್ಮನ ಸೆಳದತ್ತು
    ದಾಸನ ರೈಸಿತ್ತು – ಪದ್ಯವೂ ರೈಸಿತ್ತು

  8. ನಿಜವಾಗಿಯೂ ರೈಸಿದ್ದು ಶೇ. ಪು. ಬಾವಾ..

  9. ಸ೦ಪಿಗೆ ಮರದಾ..ಪದ ನೆ೦ಪಾತಯ್ಯ.
    ತಲಗೆ ತಿರ್ಪಲೆ ಹಾಕುತ್ತ ಕ್ರಮವೂ ಇತ್ತನ್ನೆ ದಾಸನದ ಎಲೆಯ ಕಡದು..
    ಏನೇ ಆಗಲಿ, ಈ ದಾಸನ ಪದ್ಯ ಜೇಸುದಾಸನ ಕೈಗೆ ಸಿಕ್ಕೆಕ್ಕಾತು..

  10. Aanu sarady thodina pakkalli hutti beladava. Malekalalli bale dandu matte gootu tenginakayi kattigondu eejule kaltadu ide todilli. Sarady thodinge ashtu pramukhyate sikkutta ippadu keli khushi aatu.

  11. ಇಷ್ಟೆಲ್ಲ ಗುಣ ವಿಷೇಶಂಗೊ ಇಪ್ಪ ದಾಸನವ ತಾಪು ಮಾಡ್ಲೆ ಯೆಡಿಯ ಹೇಳಿ ಆತು( ಕೆಮಿಲಿ ಮಡಗಿಗೊಂಡು ಕೆಲವು ಜೆನ ಫಟ ತೆಗದು ಹಾಂಗೆ ಮಾಡ್ತವು ಅಪ್ಪೋ…).
    ದಾಸನ ರೈಸಿದ್ದದೇ. !

  12. ದಾಸನ ಪದ ರೈಸಿತ್ತು,
    ನವಗೇ ನೆಂಪಿಲ್ಲದ್ದದ್ದೆ ಇದ್ದ ದಾಸನದ ಮದ್ದಿನ ಗುಣಂಗಳನ್ನೂ ನೆಂಪು ಮಾಡಿ ಕೊಟ್ಟತ್ತು.
    ಚೆಂದ ಆತು ಶೇಪು ಭಾವಾ…

  13. ರೈಸಿದ್ದಯ್ಯಾ ರೈಸಿದ್ದು. ಸಂಶಯವೇ ಇಲ್ಲೆ. ಏನೇ ಆದರು ದಾಸನ ರೈಸಿದ್ದು.

    [ಬೆನ್ನಿನ ಮುಟ್ಟಿತ್ತು] [ಶೇಂಪಿನ ಸೋಲ್ಸಿತ್ತು ] [ಕೂದಲು ಕಪ್ಪಾತು] – ಇದು ರೈಸಿದ್ದು , ಅಂದರೂ ದಾಸನ ರೈಸಿದ್ದು ಹೇಳಿತ್ತು – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×