ಧೂಮ ಲೀಲೆ – ಹೊಗೆಲಿ ಕಂಡ ಆಕೃತಿಗೊ

June 29, 2011 ರ 10:30 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿ೦ಗೆ ನಿಯಮಿತವಾಗಿ ಭೇಟಿ ಕೊಟ್ಟು ಪ್ರೋತ್ಸಾಹಿಸಿಗೊ೦ಡಿಪ್ಪ ಶ್ರೀ ಕೇಶವ ಕುಡ್ಲರು ಪ್ರೀತಿಲಿ,ಬೈಲಿಲಿ ಶುದ್ದಿ ಬರದ್ದವು.ಬೇಲೂರಿಲಿ ಹುಟ್ಟಿ ಇಪ್ಪತ್ತಮೂರು ವರುಷ ಹಿ೦ದೆ ಮ೦ಗಳೂರಿ೦ಗೆ ಬ೦ದು ಈಗ “ಕುಡ್ಲ”ದವರಾದ ಕೇಶವಣ್ಣ ಮ೦ಗಳೂರಿಲಿ ಜೀವನ ವಿಮಾ ನಿಗಮಲ್ಲಿ (New India  Assurance) ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಇದ್ದವು.ತುಳು ಭಾಷೆಯ ಕಲ್ತು, ತುಳು ಭಾಷೆಯ ಪುಸ್ತಕವ ಕನ್ನಡಕ್ಕೆ ಭಾಷಾ೦ತರ ಮಾಡಿ ತುಳು ಅಕಾಡಮಿಯ ಪುಸ್ತಕ ಪ್ರಶಸ್ತಿಗೂ ಪಾತ್ರರಾಯಿದವು.ಸುಮಾರು ಪುಸ್ತಕ೦ಗಳ ಬರದು ಪ್ರಕಾಶನ ಮಾಡಿದ್ದವು.ಇವು ಬರದ ೫೫ ಕತೆಗೊ ಮಾಸಪತ್ರಿಕೆಗಳಲ್ಲಿ ಪ್ರಕಟ ಆಯಿದು.ಲೇಖನ,ಛಾಯಾಗ್ರಹಣ,ಚಾರಣ ಹೀ೦ಗೆ ಹಲವು ಹವ್ಯಾಸ೦ಗಳಲ್ಲಿ ತೊಡಗಿಸಿಗೊ೦ಡ ಕೇಶವಣ್ಣ ಸದ್ಯ ಕನ್ನಡಲ್ಲಿ  ಬರದ ಶುದ್ದಿಯ ಭಾಷಾ೦ತರ ಮಾಡಿದ್ದು.ಹವ್ಯಕ ಭಾಷೆಯ ಅತೀವ ಆಸಕ್ತಿಲಿ ಕಲಿತ್ತಾ ಇದ್ದು  ಕ್ರಮೇಣ ಹವ್ಯಕಲ್ಲಿಯೇ ಬರವೆ ಹೇಳುವ ವಿಶ್ವಾಸ ಹೊ೦ದಿದ್ದವು. ಬನ್ನಿ,ಶ್ರೀ ಕೇಶವ ಕುಡ್ಲರ ಶುದ್ದಿ ಓದಿ,ಪ್ರೋತ್ಸಾಹಿಸುವೊ°.

ಹೀ೦ಗೇ ಒ೦ದು ದಿನ ಮನೆಲಿ ದೇವರ ಪೂಜೆ ಆಗಿಗೊ೦ಡಿಪ್ಪಗ ದೇವರ ಮಂಟಪದ ಮುಂದೆ ಮಡಗಿದ ಊದುಬತ್ತಿ೦ದ ಹೆರಟ ಹೊಗೆಯನ್ನೇ ನೋಡಿಂಡು ಇತ್ತಿದ್ದೆ. ಸೀದಾ ಮೇಗ೦ತಾಗಿ ಹೋಪ ಹೊಗೆ, ಪುರೋಹಿತರು ಮಂತ್ರೋಚ್ಛಾರಣೆ ಸುರು ಮಾಡಿದ ಕೂಡಲೇ ಮೆಲುವಾದ ಗಾಳಿಯ ತಾಡನಕ್ಕೆ ಕೊಣಿವಲೆ ಸುರುವಾತು. ಹಾ೦ಗೆ ನೋಡಿಗೊ೦ಡಿಪ್ಪ ಹಾ೦ಗೆಯೇ ಅದರ್ಲಿ ನಾನಾ ನಮೂನೆಯ ಆಕಾರ೦ಗೊ ಕಂಡೂ ಕಾಣದ್ದ ಹಾ೦ಗೆ ಮಾಯವಾಗಿ ಹೋಪ ದೃಶ್ಯ ! ಬೇರೆ ಬೇರೆ  ಆಕಾರ೦ಗೊ…. ಒ೦ದರಿ ಪ್ರಾಣಿಯ ಹಾ೦ಗೆ, ಪಕ್ಷಿಯ ಹಾ೦ಗೆ ಒ೦ದರಿ ಸಾಕ್ಷಾತ್ ಸುಂದರ ಕೂಸಿನ ಹಾ೦ಗೆ…. ಅರೆರೆ ದಿನವೂ ನೋಡುವ ಹೊಗೆಲಿ ಇಷ್ಟೆಲ್ಲಾ ಆಕಾರ೦ಗೊ ಮೂಡುತ್ತನ್ನೇ ಹೇಳಿ ಆಶ್ಚರ್ಯ ಆತು .ಕುತೂಹಲಲ್ಲಿ ಅದರ ಕ್ಯಾಮೆರಾಲ್ಲಿ ಸೆರೆ ಹಿಡಿವಲೆ ಯತ್ನಿಸಿದರೆ ಹೊಗೆಯ ಬದಲು ಇನ್ನೆಲ್ಲಾ ವಸ್ತು ಹಾಗೂ ಪೂಜಾ ಪರಿಕರ೦ಗೊ ಕಾಣುತ್ತಾ ಇತ್ತಿದ್ದವು. ಹೊಗೆ, ತುಂಬಾ ತೆಳುವಾದ ಕಾರಣ ಕ್ಯಾಮೆರ ಕಣ್ಣಿಲಿ ಫೋಕಸ್ ಆಪ್ಪದು ಕಷ್ಟ. ಆದರೆ ಎನ್ನ ಕುತೂಹಲವನ್ನೂ ತಾಳದ್ದೆ ಹಲವಾರು ಪ್ರಯತ್ನಗಳ ನೆಡೆಶಿದರೂ… ಊಹೂಂ ಪರಿಣಾಮ ಶೂನ್ಯ. ಛಲ ಬಿಡದ ತ್ರಿವಿಕ್ರಮನ ಹಾ೦ಗೆ ಮತ್ತೆಮತ್ತೆ ಪ್ರಯೋಗ ನಡೆಸಿದೆ. ಹಿನ್ನೆಲೆಲಿ ಕಪ್ಪು ಇದ್ದರೆ ಹೊಗೆಯ ಫೋಕಸ್ ಮಾಡುಲೆ ಎಡಿಗು ಹೇಳಿ ಗ್ರೇಶಿ ಎಲ್ಲ ಪರಿಕರ೦ಗಳ ತೆಗೆದು ಕಪ್ಪು ಬಟ್ಟೆ ಕಟ್ಟೆ೦ಡು ನೋಡಿದೆ. ಪ್ರಯೋಜನ ಇಲ್ಲೆ ! ಸಾವಿರಾರು ಫೋಟೋ ತೆಗದು ಕಡೇ೦ಗೆ ಹೊಗೆಯ ಸೆರೆ ಹಿಡಿವದರ್ಲಿ ಯಶಸ್ವಿಯಾದೆ. ಆದರೆ… ಎಲ್ಲ ಮಸ್ಕು ಮಸ್ಕು… ಪೂಜಾ ಸಮಯಲ್ಲಿ ಕಂಡ ಒಂದೇ ಒಂದು ಆಕಾರ ಕ೦ಡಿದಿಲ್ಲೆ ಈ ಪಟಲ್ಲಿ.

ಎನಗೆ ಬಂದ ಆಲೋಚನೆಗೊ ಬೇರೆ ಛಾಯಾಗ್ರಾಹಕರಿ೦ಗೂ ಬಂದಿಕ್ಕು, ಆರಾರು ಪ್ರಯತ್ನ ಮಾಡಿದ್ದವೋ ನೋಡುವೊ° ಹೇಳಿ ಒಂದಷ್ಟು ಫೋಟೋ ಜರ್ನಲ್ ಹುಡುಕ್ಕಿದೆ. ಅಂತರ್ಜಾಲಲ್ಲಿಯೂ ಹುಡುಕ್ಕಿದೆ. ನಮ್ಮಲ್ಲಿ ಆರೂ ಈ ಬಗ್ಗೆ ಪ್ರಯೋಗ ನಡೆಶಿದ್ದು, ಮಾಹಿತಿ ಹ೦ಚಿದ್ದು ಕ೦ಡತ್ತಿಲ್ಲೆ. ವಿದೇಶಿ ಛಾಯಾಗ್ರಾಹಕ೦ಗೊ ಕ್ರಿಯಾಶಾಲಿಗೊ, ಅವರ ಪ್ರಯತ್ನ ನೋಡುವ ಹೇಳಿ ಹುಡುಕ್ಕಿಯಪ್ಪಗ ಹಲವಾರು ವಿದೇಶೀ ಛಾಯಾಗ್ರಾಹಕ೦ಗೊ ಹೊಗೆಯ ಚಿತ್ರಣಲ್ಲಿ ಯಶ ಸಾಧಿಸಿದ್ದು ಕ೦ಡತ್ತು. ಅದಕ್ಕಾಗಿ ಅವ್ವು ಎ೦ತ ಮಾಡಿದ್ದವೋ ನೋಡಿರೆ ಅದು ಎನ್ನ೦ದ ಎಡಿಗಪ್ಪದಲ್ಲ. ಶ್ರೀಮಂತ ಹಾಗೂ ಅತ್ಯಾಧುನಿಕ ಸ್ಟುಡಿಯೋ ಇಪ್ಪ ಅವ್ವೆಲ್ಲಾ  ಅವರ ಸ್ಟುಡಿಯೋದ ಒಳದಿಕ್ಕೆ ಬೇಕಾದ ವಾತಾವರಣ ನಿರ್ಮಿಸಿಗೊ೦ಡು ಲಕ್ಷಾಂತರ ಬೆಲೆ ಬಾಳುವ ಕ್ಯಾಮೆರಾಲ್ಲಿ ಫಲಿತಾಂಶ ಕಂಡಿದವು. ಎನ್ನ ‘ನಿಕಾನ್ D-40’ ಕ್ಯಾಮೆರಾಲ್ಲಿ ಆನೇನಾದರೂ ಸಾಧನೆ ಮಾಡೆಕ್ಕಾದ್ದದು. ಇದೆಲ್ಲ ನನಗೆ ಕೈಗೆ ಎಕ್ಕುವ ಬಾಬತ್ತಲ್ಲ ಹೇಳಿ ಗ್ರೇಶ್ಯ೦ಡು ಎನ್ನದೇ ಪ್ರಯೋಗ ನಡೆಸಲೆ ತಯಾರಾದೆ. ಕಪ್ಪು ಕಸ್ತಲೆಲಿ ಮತ್ತೆ ಸಾವಿರಾರು ಕ್ಲಿಕ್ ಮಾಡುತ್ತಾ ಕಡೇ೦ಗೆ ಹೊಗೆಯ ಸ್ಪಷ್ಟ ಚಿತ್ರ ತೆಗವಲೆ ಯಶಸ್ವಿಯಾದೆ. ಅಲ್ಲಿಂದ ಮುಂದೆ ಯಶಸ್ಸು ಎನ್ನ ಕೈ ಬಿಟ್ಟಿದಿಲ್ಲೆ. ಆನು ಗ್ರೇಶಿದ್ದರಿ೦ದಲೂ ಚೆ೦ದದ ಚಿತ್ರ೦ಗೊ ಎನಗೆ ಸಿಕ್ಕಿದವು.

ಹಾ೦ಗೆ ಸಿಕ್ಕಿದ ಚಿತ್ರ೦ಗಳ ಹಾ೦ಗೇ ಬಿಟ್ಟರೆ ಏನೂ ಅರ್ಥ ಆಗ. ಅದರ ಎಲ್ಲಾ ಕಂಪ್ಯೂಟರಿನೊಳ ತುಂಬುಸಿ ಒಂದೊಂದನ್ನೇ ನೋಡುತ್ತಾ ಎಲ್ಲಿ ಅಪರೂಪದ ಚಿತ್ರ ಕ೦ಡತ್ತೋ ಅಲ್ಲಿ ಫೋಟೋ ಶಾಪಿನ ಟೂಲ್ ಗಳನ್ನೂ ಉಪಯೋಗ ಮಾಡಿ ಅನಗತ್ಯ ಹೊಗೆಯ ನಿವಾರಿಸಿಗೊಂಡು ಬೇಕಾದಷ್ಟನ್ನೇ ಒಳುಶಿಯಪ್ಪಗ ಇಲ್ಲಿ ಕೊಟ್ಟ ಹಲವಾರು ಚಿತ್ರ೦ಗೊ ಸಿಕ್ಕಿದವು. ಹಲವನ್ನು ಅಂತರ್ಜಾಲಲ್ಲಿ ಲೋಡ್ ಮಾಡಿಯಪ್ಪಗ ದೇಶ ವಿದೇಶಗಳ ಛಾಯಾಗ್ರಾಹಕ೦ಗೊ ಅಭಿನಂದಿಸಿದವು. ಫೋಟೋಗ್ರಫಿಗಾಗೆ ಇಪ್ಪ ಪತ್ರಿಕೆಯೊಂದು ಸವಿವರ ಲೇಖನ ಪ್ರಕಟಿಸಿತ್ತು. ಅದರ ನೋಡಿದ ಎನ್ನ ಆತ್ಮೀಯರೊಬ್ಬರು ಈ  ಪಟ೦ಗಳದ್ದೇ ಒ೦ದು ಪ್ರದರ್ಶನ ನಡೆಶುವ ಪ್ರಸ್ತಾಪ ಮಡುಗಿದವು. ‘ಧೂಮ ಲೀಲೆ’ ಹೇಳ್ತ ಹೆಸರಿನ ಚಿತ್ರಪ್ರದರ್ಶನ ನಡೆದಪ್ಪಗ ನೋಡುಲೆ ಬ೦ದ ಜೆನರ ಮೆಚ್ಚುಗೆಯ ನುಡಿಗೊ ಎನ್ನ ಹಲವಾರು ತಿಂಗಳುಗಳ ಶ್ರಮವ ಮರೆಶಿತ್ತು. ಇದುವರೆಗೂ ತಾಳ್ಮೆ೦ದ ಅಂದಾಜು ಏಳು ಸಾವಿರದಷ್ಟಾದರೂ ಎಕ್ಸ್ ಪೋಸ್ ಮಾಡಿದ್ದೆ. ಆದರೆ ಸಿಕ್ಕಿದ್ದು  ಹಲವು ಚಿತ್ರ೦ಗೊ ಮಾ೦ತ್ರ. ಆದರೂ ಇದೆಲ್ಲವನ್ನೂ ಆನೇ ಸಾಧಿಸಿದ್ದದ್ದು ಹೇಳುವ ಮನ ತೃಪ್ತಿ ಸ೦ಪೂರ್ಣ ಇದ್ದು. ಇಲ್ಲಿ ಹಾಂಗಿಪ್ಪ ಕೆಲವು ಹೊಗೆಯ ಚಿತ್ರಗಳನ್ನೂ ಕೊಟ್ಟಿದೆ. ನಿ೦ಗೊಗೆ ಹೇ೦ಗೆ ಅನಿಸಿತ್ತು? ತಿಳಿಸಿ.

ಧೂಮ ಲೀಲೆ - ಹೊಗೆಲಿ ಕಂಡ ಆಕೃತಿಗೊ , 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಕೇಶವ ಕುಡ್ಲ
  keshava kudla

  ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಕೇಶವ ಕುಡ್ಲರಿ೦ಗೆ ಆತ್ಮೀಯ ಸ್ವಾಗತ.
  ಆಕಾಶಲ್ಲಿ ಮುಗಿಲುಗಳ ಕ೦ಡು ಬೇರೆ ಬೇರೆ ವಸ್ತುಗಳ ಹೋಲುಸಿಗೊ೦ಡಿದ್ದ ಬಾಲ್ಯದ ದಿನ೦ಗಳ ನೆನಪ್ಪು ಮಾಡಿಸಿದ ಈ ‘ಧೂಮಲೀಲೆ’ ನಮ್ಮಲ್ಲಿಯೂ ಹೊಸ ಕಲ್ಪನೆಗೊ ಮೂಡುಲೆ ಸಹಕಾರಿ ಅಕ್ಕು.
  ಕಲ್ಪನೆಗೆ ರೂಪ ಕೊಟ್ಟರೆ ಸೃಷ್ಟಿ ಅಪ್ಪ ಆಕೃತಿಯ ಹಾ೦ಗೆ, ಕಿಚ್ಚಿ೦ದ ಹುಟ್ಟಿ ಗಾಳಿಯೊಟ್ಟಿ೦ಗೆ ಸೇರಿಗೊ೦ಬ ಹೊಗೆಯ, ಮಾಯ ಅಪ್ಪದರ ಮದಲು ನಾನಾ ರೂಪಲ್ಲಿ ಕಾ೦ಬಲೆ ಸಾಧ್ಯ ಇದ್ದು ಹೇಳಿ ತೋರುಸಿಕೊಟ್ಟ ಕೇಶವ ಕುಡ್ಲರಿ೦ಗೆ ಅಭಿನ೦ದನೆಗೊ.

  [Reply]

  ಕೇಶವ ಕುಡ್ಲ

  keshava kudla Reply:

  ನೀವೆಲ್ಲ ಇಷ್ಟೊಂದು ಜನ ನನಗೆ ಸ್ವಾಗತ ಕೋರಿದ್ದು, ಪ್ರತಿಕ್ರಿಯಿಸಿದ್ದು ಖುಷಿ ಕೊಟ್ಟಿದೆ. ಎಲ್ಲರಿಗೂ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಅನುಶ್ರೀ ಬಂಡಾಡಿ

  ನಿಂಗಳ ‘ಧೂಮ ಲೀಲೆ’ ಚಿತ್ರಪ್ರದರ್ಶನದ ಬಗ್ಗೆ ಪೇಪರಿಲಿ ಓದಿತ್ತಿದ್ದೆ. ಆವ್ಗಳೇ ಆಶ್ಚರ್ಯ ಆಗಿತ್ತಿದ್ದು.
  ನಮ್ಮ ಬೈಲಿಲೂ ಅದರ ಕಂಡು ಸಂತೋಷ ಆತು. ಅದರ ಹಿಂದಾಣ ಪರಿಶ್ರಮ, ತಾಳ್ಮೆ ಮೆಚ್ಚೆಕ್ಕಾದ್ದೆಪ್ಪ.

  [Reply]

  VN:F [1.9.22_1171]
  Rating: 0 (from 0 votes)
 4. ದೀಪಿಕಾ
  ದೀಪಿಕಾ

  ಚಿತ್ರ೦ಗ ಎಲ್ಲವೂ ಭಾರೀ ಲಾಯ್ಕಿದ್ದು!!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣನೀರ್ಕಜೆ ಮಹೇಶದೊಡ್ಮನೆ ಭಾವಪೆರ್ಲದಣ್ಣಕಜೆವಸಂತ°ಶೇಡಿಗುಮ್ಮೆ ಪುಳ್ಳಿರಾಜಣ್ಣಶೀಲಾಲಕ್ಷ್ಮೀ ಕಾಸರಗೋಡುಅಕ್ಷರದಣ್ಣಸುಭಗಪೆಂಗಣ್ಣ°ಶ್ರೀಅಕ್ಕ°ವೆಂಕಟ್ ಕೋಟೂರುವೇಣೂರಣ್ಣಕೊಳಚ್ಚಿಪ್ಪು ಬಾವಯೇನಂಕೂಡ್ಳು ಅಣ್ಣಪುತ್ತೂರಿನ ಪುಟ್ಟಕ್ಕಡೈಮಂಡು ಭಾವಕಳಾಯಿ ಗೀತತ್ತೆಡಾಗುಟ್ರಕ್ಕ°ಕೇಜಿಮಾವ°ಎರುಂಬು ಅಪ್ಪಚ್ಚಿಶಾಂತತ್ತೆಬೊಳುಂಬು ಮಾವ°ಮುಳಿಯ ಭಾವಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ