Category: ದೊಡ್ಡಮಾತು

ದೊಡ್ಡಮಾವನ ದೊಡ್ಡಮಾತುಗೊ

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3 21

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3

ಎ೦ಗಳ ಊರ ಪ್ರೈಮರಿ ಶಾಲೆ ಅ೦ದ್ರೆ ಅಲ್ಲಿ ಒ೦ದ್ರಿ೦ದ ನಾಲ್ಕನೇ ಕ್ಲಾಸ್ ವರೆಗೆ ಕಲಿಸ್ತೊ. ಇಪ್ಪುದು ಎರೆಡು ರೂಮು, 1-2 ಕ್ಲಾಸು ಒ೦ದ್ರಲ್ಲಿ, 3-4 ಇನ್ನೊ೦ದ್ರಲ್ಲಿ. ಬ್ಯಾರೆ ಬ್ಯಾರೆ ರೂಮು ಅ೦ತ ಹೆಸರಿಗೆ ಅಷ್ಟೇ, ಎರೆಡೂ ಕಡೆ ಪಾಠ ಮಾಡ್ತಿದ್ದೊ.ಮಕ್ಕೊ ಗಲಾಟೆ...

ಒಂದು ಕೋಳಿಯ ಕಥೆ.. 14

ಒಂದು ಕೋಳಿಯ ಕಥೆ..

ನೆಂಟ್ರು ಬಂದರೆ ಬೆಂದಿಗೆ ಕೋಳಿ ಪೊಜಕ್ಕುತ್ತವು. ತೊಂಡಾಗಿ ಸಾವಲೆ ಕಾಯ್ತವಿಲ್ಲೆ. ಅದರಿಂದ ಮದಲೆ ಅದರ ಪೊಜಕ್ಕಿ ಮುಗುಶುತ್ತವು, ಅಲ್ದೋ…?

ಕಾಟು ಹರಟೆ:  ‘ಹಣೆವಾರ’- ಗೆಡ್ಡ 22

ಕಾಟು ಹರಟೆ: ‘ಹಣೆವಾರ’- ಗೆಡ್ಡ

ಮಾ ಬುದ್ದಿವಂತನ ಹಾಂಗೆ ವಿಶ್ವೇಶ್ವರ ಭಟ್ಟ ಹೇಳ್ತ°, ಬಹುಜನರ ಎದುರು ತಲೆ ತೊರುಸೆಡಿ. ಅದು ಅಸಭ್ಯ.
ಪ್ರಶ್ನೆಗೆ ಉತ್ತರ ಹೊಳೆಕಾರೆ ತಲೆ ತೊರುಸೇಕು, ಉಗುರು ಕಚ್ಚೇಕು,ಅಲ್ದೋ..?

ಕಣ್ಣಾ ಮುಚ್ಚೇ ಕಾಡೇ ಗೂಡೇ… 13

ಕಣ್ಣಾ ಮುಚ್ಚೇ ಕಾಡೇ ಗೂಡೇ…

ಕಣ್ಣಾ ಮುಚ್ಚೇ ಕಾಡೇ ಗೂಡೇ
ಉದ್ದಿನಾ ಮೂಡೇ ಉರುಳೇ ಹೋಯ್ತು
ನನ್ನಯ ಆಕಿ ಬಿಟ್ಟೇ ಬಿಟ್ಟೇ
ನಿಮ್ಮಯ ಆಕಿ ಹಿಡಿದುಕೊಳ್ಳಿ..

ಮಕ್ಕೊಗೆಲ್ಲ ಭಾರೀ ಖೊಷಿ…

ಮದುವೆಯ ಕಾಕತ 23

ಮದುವೆಯ ಕಾಕತ

ಹರೇ ರಾಮ,
ಮೊನ್ನೆ ಅಟ್ಟಲ್ಲಿ ಪರಡಿಗೊಂಡಿಪ್ಪಗ ಸಿಕ್ಕಿತ್ತು ಎನ್ನ ಅಪ್ಪಚ್ಚಿಯ ಮದುವೆ ಕಾಕತ, ಖುಷಿ ಆತು.
ಅದರ ತೆಗದು ಮಡಗಿ, ಸ್ಕ್ಯಾನರ್ ಮುಚ್ಚಲು ತೆಗದು ಒಂದು ಪ್ರತಿ ತೆಗದು ಇಲ್ಲಿ ತಂದು ನೇಲುಸಿರೆ ನಾಕು ಜೆನ ನೋಡುಗಾನೆ ತೋರಿತ್ತು.
೧೯೭೦ ರ ಕಾಕತ ಅದು. ಅಂಬಗ ಆನು ಹುಟ್ಟಿದ್ದೇ ಇಲ್ಲೆ. ಆ ಮದುವೆ ಇರುಳು…!

ತಾಳಮದ್ದಳೆ, ಮತ್ತೆ ಬೇರೆ ಶುದ್ದಿಗೊ.. 13

ತಾಳಮದ್ದಳೆ, ಮತ್ತೆ ಬೇರೆ ಶುದ್ದಿಗೊ..

ನವರಾತ್ರಿ ಸಮೇಲಿ ಒರಿಷಕ್ಕೂ ಆವ್ತ ಕ್ರಮ – ನೆರೆಕರೆವು, ನಂಟ್ರು ಸೇರಿ ತಾಳಮದ್ದಳೆ; ಇರುಳಿಂಗೆ – ಬೇಳ ಗ್ರಾಮದ ಕುಂಜಾರು ಹತ್ರಾಣ ಒಂದು ಮನೇಲಿ.
ಸ್ವತಃ ಆ ಮನೆವೇ ಎರಡು ಮೂರು ಜೆನ ಹವ್ಯಾಸಿಗೊ ಇದ್ದವು.
ದೊಡ್ಡಜ್ಜ ಪದ ಹೇಳ್ತವು. ದೊಡ್ಡಮಾವನದ್ದು ಚೆಂಡಗೆ ಎತ್ತಿದ ಕೈ. ಒಪ್ಪಕುಂಞಿ ಮಾವ ಚೆಂಡೆಮದ್ದಳೆ ಪೆಟ್ಟು ಎಲ್ಲ ಅಂತೆ ಇಪ್ಪಗ ಬಾರುಸುಗು – ತಾಳಮದ್ದಳೆಗೆ ಬಾರುಸ. ರಾಮಜ್ಜ ಚೆಂಡೆ ಮುಚ್ಚುಗು. (ಚೆಂಡೆ ಮುಚ್ಚುಸ್ಸು ಹೇಂಗೆ ಹೇದು ಮತ್ತೆ ಹೇಳ್ತೆ)
ಒಪ್ಪಕುಂಞಿಮಾವ ಚೆಂಡೆ ಕೋಲು ಚೆಂದಕ್ಕೆ ಕೆತ್ತಿ ಮಡಗಿದ್ದು ಇದ್ದು, ಎರಡು ಪ್ರತಿ. ವಿರಾಮಲ್ಲಿಪ್ಪಗ ಬಾಜಿರದ ಹಲಗೆಲಿ ಕೂದಂಡು ಬಾರುಸುಗು. ಹಲಗ್ಗೇ ಕುಟ್ಟಿಂಡು.
ಒಂದೊಂದಾರಿ ಮೂರು ಸಂದಿ ಹೊತ್ತಿಂಗೂ ಮಜ್ಜಾನಪ್ಪಗ ಉಂಡಿಕ್ಕಿಯೋ, ಧೀಂಗಿಣ ಹಾಕುತ್ತ ಕ್ರಮ ಇದ್ದು. ಒಬ್ಬ ಪದ ಹೇಳುಸ್ಸು, ಮದ್ದಳೆ ಚಕ್ರತಾಳ, ತೆಂಡೆ ತಾಳ ಬಾರುಸುಸ್ಸು.
ಹಾಂ, ಹೇದಾಂಗೆ ಕೇಳಿಬಡಿಸ್ಸು – ಪೀಠಿಕೆ ಅದರ ಬಾರುಸಾಣ ಎಲ್ಲ ಆದ ಮತ್ತೆ.
ಅರ್ಥ ಹೇಳ್ಳೆಯಿಲ್ಲೆ ಅಂಬಗ ಹೇಳ್ತ ಜೆನಂಗಳೂ ಇರ್ತವಿಲ್ಲೆ. ಕೇಳ್ತವೂ ಇರ್ತವಿಲ್ಲೆ.
ಇದು ಇಂದು ನೇರಂಪೋಕು – ಹೊತ್ತೋಪಲೆಯಿದ್ದ ಮೋಜು.

ಕುಟುಂಬ – ನಂಬಿಕೆ 3

ಕುಟುಂಬ – ನಂಬಿಕೆ

ಕಟ್ಟಿಗುದ್ದಿರೂ, ಗುದ್ದಿ ಕಟ್ಟಿರೂ ಒಂದೇ ಅಲ್ಲದೋ ಹೇಳ್ತ ಗಾದೆ ಇದ್ದು.
ಇದು ಮುಡಿಕಟ್ಟುವಾಗಣ ಕ್ರಿಯೆಗೆ ಸಂಬಂಧಿಸಿ ಹೇದ್ಸೋ, ಅಲ್ಲ ಕಳ್ಳ ಸಿಕ್ಕಿಬಿದ್ದ ಸಂದರ್ಭವನ್ನೋ!
ಹೇಂಗಾರು ಇರಳಿ – ಗಾದೆ ಗಾದೆಯೇ. ಸಾರ್ವಕಾಲಿಕ ಸತ್ಯ.
ಎಂತ್ಸಕೆ ಹೇದ್ಸು ಹೇದರೆ, ಈ ಬರಹಕ್ಕೆ ಒಂದು ತಲೆಬರಹ ಬೇಕಾನೆ!
ಹಾಂಗೆ ತಲೆ ಆಗಿಕ್ಕಿ ಶರೀರವೋ, ಅಲ್ಲ ಶರೀರ ಆಗಿ ಅದರ ರೂಪ ಸೌಂದರ್ಯಕ್ಕೆ ಹೋಂದುತ್ತ ಹೆಸರು ಕೊಡೆಕೋ?
ಏಕೆ ಹೇದರೆ, ಜಾನುಸುಸ್ಸು ಒಂದು, ಆವುತ್ಸು ಮತ್ತೊಂದು ಕೆಲವು ಸರ್ತಿ.
’ವಿನಾಯಕಂ ಪ್ರಕುರ್ವಾಣ ರಚಯಾಮಾಸ ವಾನರಃ’ – ಹುಟ್ಟುತ್ತ ಹಿಳ್ಳಗೆ ಹೆಸರು ನಿಜಮಾಡಿಕ್ಕಿ ಮಕ್ಕಳ ಮಾಡ್ತ ಕ್ರಮ ಇದ್ದೋ?
ಹಾಂಗಾಗಿ ನೋಡೆಂಡು ಹೆಸರು ಹಾಕುವೊ°. ಅಂಬಗಳೂ ನಿಜ ಆಗದ್ರೆ ಒಂದು ೬ ತಿಂಗಳು ಕಾಯಿವೊ°.
ಅಷ್ಟರಲ್ಲಿ ಇದು ಬದ್ಕಿ ಒಳುದರಲ್ಲದೋ ಬೇಕಾದ್ಸು?
ತಲೆಬೆಶಿ ಬೇಡ – ಮುಂದೆ ಹೋಪೊ°.

ದೊಡ್ಡಮಾವನ ದೊಡ್ಡಮಾತುಗೊ 0

ದೊಡ್ಡಮಾವನ ದೊಡ್ಡಮಾತುಗೊ

ದೊಡ್ಡಮಾವ ಹೇದರೆ ನಮ್ಮ ನೆರೆಕರೆಯ ಹಿರಿಯರು. ಒರಿಶಲ್ಲಿ ಮಾಶ್ಟ್ರುಮಾವನಿಂದಲೂ ದೊಡ್ಡ. ಕಾಂಬಲೂ ಹಾಂಗೇ. ಅವರ ಮನೆಲಿ ಅಣ್ಣ ತಮ್ಮಂದ್ರ ಪೈಕಿ ಅವು ದೊಡ್ಡ ಆದ ಕಾರಣ ಅವಕ್ಕ ದೊಡ್ಡಣ್ಣ / ದೊಡ್ಡ ಬಾವ ಹೇಳಿಯೇ ಹೆಸರು ಬಂತು. ಅವರ ನಿಜವಾದ ಹೆಸರು...